Jump to ratings and reviews

ಮೃಗಶಿರ

152 pages, Unknown Binding

Published January 1, 2019

Loading...
Loading...

About the author

Sridhara Balagara

10 books1 follower
ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್. ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ. ಬೇಂದ್ರೆ ಸ್ಮಾರಕ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಸಂಸ್ಕರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ ಮತ್ತು 'ಅಮ್ಮ' ಪ್ರಶಸ್ತಿ ಸೇರಿದಂತೆ ಹಲವು ಗೌರನ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

Ratings & Reviews

What do you think?

Friends & Following

Create a free account to discover what your friends think of this book!

Community Reviews

5 stars
1 (20%)
4 stars
3 (60%)
3 stars
1 (20%)
2 stars
0 (0%)
1 star
0 (0%)
Displaying 1 - 1 of 1 review
Profile Image for Prashanth Bhat.
2,325 reviews147 followers
February 7, 2020
ಮೃಗಶಿರ - ಶ್ರೀಧರ ಬಳಗಾರ
ಅಭಿನವ ಪ್ರಕಾಶನ.

ಬಳಗಾರರ ಕಥೆಗಳು ನನಗಿಷ್ಟ. ಅವರ ಕಾದಂಬರಿ ಕೇತಕಿಯ ಬನ ಸಣ್ಣ ಕಥೆಯನ್ನೇ ಹಿಂಜಿದಂತೆ ಭಾಸವಾಗಿ ಅಷ್ಟಾಗಿ ಮೆಚ್ಚುಗೆ ಉಂಟಾಗಿರಲಿಲ್ಲ.
ಕಥೆಗಳ ವಿಷಯದಲ್ಲಿ ಅವರು ದ್ವೀಪ. ಈ ಕಾದಂಬರಿಯೂ ಹಾಗೆಯೇ.
ಪಕ್ಕನೇ ಓದಿನ ನಡುವೆ ಬ್ರೇಕ್ ಕೊಟ್ಟು ವಾಪಸ್ ಬಂದರೆ ಶಿವರಾಮ ಕಾರಂತರ ಕಾದಂಬರಿ ಓದ್ತಾ ಇದ್ದೇವೋ ಅನಿಸುವಷ್ಟು ಛಾಪು.
ಸ್ವಾತಂತ್ರ್ಯ ಹೋರಾಟಗಾರನ ಬದುಕನ್ನು ಕುರಿತು ಪುಸ್ತಕ ಬರೆಯಹೊರಡುವ ನಿರೂಪಕ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಪರ ಹೋರಾಡಿ ಜೈಲುವಾಸ ಅನುಭವಿಸಿದರೂ ವೈಯಕ್ತಿಕ ಜೀವನದಲ್ಲಿ ಅವರೇನು ಎಂದೂ, ಅವರ ಪತ್ನಿಯ ಗೆಯ್ವ ಜೀವನದ ಬವಣೆಗಳನ್ನು, ಯಾರದು ಸರಿ ಯಾರದು ತಪ್ಪು ಎಂದು ಬೆರಳು ಚಾಚಿ ತೋರಿಸಲಾಗದ ಒಂದು ಘಟನೆಯನ್ನೂ ಸುತ್ತಿ ಕಥೆ ಹಬ್ಬುತ್ತದೆ. ಎಲ್ಲಕ್ಕಿಂತ ಮುಖ್ಯ ಮನುಷ್ಯ ಸಂಬಂಧ ಎಂಬ ಹೇಳದೇ ತೋರುವ ಗುಣವೂ ಈ ಕಥನಕ್ಕಿದೆ.
ಕಥೆಗಳ ವಿಷಯಕ್ಕೆ ಬರುವಾಗ ಸಮೃದ್ಧವೆನಿಸುವ ಶ್ರೀಧರ ಬಳಗಾರರು ಕಾದಂಬರಿ ವಿಷಯಕ್ಕೆ ಬಂದಾಗ ಲಂಬಿಸಿದರು ಅನಿಸುತ್ತಾರೆ.
ಅವರ ಕಥೆಯ ಜಗತ್ತಿನೊಳಗೆ ಕಾಲಿಟ್ಟವರು ನೀವಾಗಿದ್ದರೆ ,ಅವರ ಬರವಣಿಗೆ ನಿಮಗೆ ಇಷ್ಟವಾಗಿದ್ದರೆ ಈ ಬೀದಿಯ ಕಡೆಗೂ ಒಂದು ಸಲ ಅಡ್ಡಾಡಿ ಬರಬಹುದು.
Displaying 1 - 1 of 1 review