Vasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.
ವಸುಧೇಂದ್ರ ಅವರ ಬರವಣಿಗೆಯ ಶಕ್ತಿಯನ್ನು ನಿರೂಪಿಸುವ ಪುಸ್ತಕ. ಬಹಳ ಸೊಗಸಾದ, ನಮ್ಮನ್ನು ಯೋಚನೆಗೆ ದೂಡುವ ಪ್ರಬಂಧಗಳು. ಲೇಖಕರ ಜೀವನಾನುಭವ, ಅವರ ಸುತ್ತಲಿನ ಪ್ರಪಂಚ, ಅವರ ದೃಷ್ಟಿಕೋನ ನನ್ನಂತ ಓದುಗರು ಸಲೀಸಾಗಿ ಓದಿ ಇಷ್ಟ ಪಡುತ್ತಾರೆ. ವಿರಾಟ ಪರ್ವದ ಮೇಲಿನ ಪ್ರಬಂಧ ನನಗೆ ಹಿಡಿಸಿತು. ಪಾಂಡವರ ಹಾಗು ದ್ರೌಪದಿಯ ಮನಶ್ಚಿಂತನೆಗಳು ಹೇಗಿರಬಹುದು, ಅವರ ಪರಿಸ್ಥಿತಿ ಹಾಗಿದ್ದಿದ್ದರಿಂದ ಅವರು ಈ ರೀತಿ ನಿರ್ಧಾರ ತೆಗೆದುಕೊಂಡಿರಬಹದು ಎನ್ನುವ ಲೇಖಕರ logicಗೆ 💯. ಪುರಂದರ ದಾಸರ ಶ್ರೇಷ್ಠತೆಯನ್ನು ವರ್ಣಿಸಿರುವ ಪ್ರಬಂಧ ಕೂಡ ಬಹಳ ಇಷ್ಟ ಆಯಿತು, ಹಾಗು ಇಂತಹ ದಾಸ ಶ್ರೇಷ್ಠರನ್ನು ನಾವು ಮರೆತೇ ಬಿಟ್ಟಿದ್ದೇವಾ ಎನಿಸಿತು... ಅಂತಹ ಮಹಾನ್ ಕನ್ನಡಿಗನನ್ನು ಓದುಗರಿಗೆ ಮತ್ತೊಮ್ಮೆ ನೆನಪಿಸುವುದಕ್ಕೆ ವಸುಧೇಂದ್ರ ಅವರಿಗೆ ಧನ್ಯವಾದ. ಒಟ್ಟಿನಲ್ಲಿ ಆರಾಮಾಗಿ ಓದಿ ಮುಗಿಸಿ, ಒಳ್ಳೆಯ ಪುಸ್ತಕ ಓದಿದೆ ಅನ್ನಿಸುವ ಒಂದು feel good ಪುಸ್ತಕ.
#ಅಕ್ಷರವಿಹಾರ_೨೦೨೨ ಕೃತಿ: 5 ಪೈಸೆ ವರದಕ್ಷಿಣೆ ಲೇಖಕರು: ವಸುಧೇಂದ್ರ ಪ್ರಕಾಶಕರು: ಛಂದ ಪುಸ್ತಕ ಬೆಂಗಳೂರು
ಸಾಮಾನ್ಯವಾಗಿ ಯಾವುದೇ ಪ್ರಕಾರದ ಒಂದು ಪುಸ್ತಕವನ್ನು ಓದುವಾಗ ಅದರಲ್ಲಿನ ಕೆಲವೊಂದು ಭಾಗಗಳು,ಅಧ್ಯಾಯಗಳು, ಕತೆಗಳು ಇಷ್ಟವಾಗದೇ ಇರಬಹುದು. ಆದರೆ ಈ ಪುಸ್ತಕದಲ್ಲಿನ ಅಷ್ಟೂ ಪ್ರಬಂಧಗಳು ನನಗೆ ಇಷ್ಟವಾದವು. ಈ ತರಹ ಒಂದಿಡೀ ಪುಸ್ತಕವನ್ನು ಸಮಗ್ರವಾಗಿ ಹಚ್ಚಿಕೊಂಡಿರುವುದು ಇದೇ ಮೊದಲು. ಇಲ್ಲಿನ ಪ್ರಬಂಧಗಳಲ್ಲಿ ಕೆಲವು ಕನ್ನಡದ ಅತೀ ಶ್ರೇಷ್ಠ ಪ್ರಬಂಧಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿರುವ ಲಾಲಿತ್ಯ, ನೋವು-ನಲಿವುಗಳು, ಕಷ್ಟ-ಸುಖಗಳು, ವಿನೋದ-ವಿಷಾದಗಳು ಆಳವಾಗಿ ತನ್ನೊಳಗೆ ಸೆಳೆದುಕೊಳ್ಳುವ ಗುಣವನ್ನು ಹೊಂದಿವೆ.
ಲೇಖಕರ ಬಾಲ್ಯದ ಅನುಭವಗಳು, ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಸವಾಲುಗಳು, ವೃತ್ತಿ ಜೀವನದಲ್ಲಿನ ಅನುಭವಗಳು, ಭಾರತದಲ್ಲಿ ಭಿನ್ನ ಲೈಂಗಿಕತೆಯಲ್ಲಿ ಆಸಕ್ತಿ ಹೊಂದಿರುವ ಸಮುದಾಯಗಳು ಅನುಭವಿಸುವ ಅಸಹಾಯಕತೆ, ಇಂಗ್ಲೀಷ್ ಭಾಷೆಯೇ ಶ್ರೇಷ್ಠವೆಂಬ ಮನೋಭಾವವಿರುವ ಭಾರತೀಯರ ಭ್ರಮೆ, ಕನ್ನಡ ಭಾಷೆ, ಡಿಜಿಟಲ್ ಕ್ರಾಂತಿಯಿಂದಾದ ಲಾಭ ನಷ್ಟಗಳನ್ನು ಸಾಣೆ ಹಿಡಿದು ಪ್ರಸ್ತುತ ಪಡಿಸಿದ ರೀತಿ ನಿಜಕ್ಕೂ ಅದ್ಭುತ. "ಮಣಿಕರ್ಣಿಕಾ", "ನಿದ್ದೆಗೊಮ್ಮೆ ನಿತ್ಯ ಮರಣ", "ಸಾವಿನ ನೆರಳು","ಭಗವಂತನ ಸೃಷ್ಟಿಯಲ್ಲಿ ಸೀಮೆಗಳಿಲ್ಲ" ಮತ್ತೆ ಮತ್ತೆ ಓದಿಸಿಕೊಂಡು ಹೋಯಿತು. ಇವುಗಳಲ್ಲಿ ಕಂಡು ಬರುವ ಹೊಸ ದೃಷ್ಟಿಕೋನಗಳು, ಲೋಕಾನುಭವಗಳು ಸಂಕುಚಿತ ಮನೋಭಾವವನ್ನು ಕಳೆದುಕೊಂಡು ಉದಾರ ಉದಾತ್ತ ವಿಚಾರಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಬದುಕಿನಲ್ಲಿ ಸೋತು ಸುಣ್ಣವಾದವರಿಗೆ ಒಂದು ತರಹದ ಹುರುಪನ್ನು, ಹೊಸ ಆಶಾ ಮನೋಭಾವನೆಯನ್ನು ಮತ್ತು ಏನೋ ಅಲ್ಪವನ್ನು ಸಾಧಿಸಿದವರಿಗೆ ವಿನಯವನ್ನು ಮೈಗೂಡಿಸಿಕೊಳ್ಳುವ ಪಾಠವನ್ನು ಹೇಳುತ್ತವೆ ಈ ಪ್ರಬಂಧಗಳು.
ಇಲ್ಲಿನ ಯಾವ ಪ್ರಬಂಧಗಳಲ್ಲಿಯೂ ಇದೇ ಸರಿ ಇದು ತಪ್ಪು ಎನ್ನುವ ನಿಬಂಧನೆಗಳಿಲ್ಲ. ತಮ್ಮ ಸೃಜನಶೀಲತೆಯನ್ನು ಯಾವುದೇ ಒಂದು ವಿಚಾರದ ಪರವಾಗಿ ಮಂಡಿಸದೆ ಹಲವು ಆಯಾಮಗಳಲ್ಲಿ ಹೇಳುವುದರ ಮೂಲಕ ಓದುಗರನ್ನು ಸಹ ಚಿಂತನೆಗೆ,ಆತ್ಮಾವಲೋಕನಕ್ಕೆ ನೂಕುತ್ತಾರೆ ಲೇಖಕರು. ಒಬ್ಬ ವ್ಯಕ್ತಿಯಿರಲಿ,ವಸ್ತುವಿರಲಿ ಅಥವಾ ವಿಚಾರವಿರಲಿ ಸಂಪೂರ್ಣವಾಗಿ ಒಳ್ಳೆಯದು ಎಂದು ಅಪ್ಪಿಕೊಳ್ಳುವ ಹಾಗೂ ಕೆಟ್ಟದ್ದು ಎಂದು ದೂರ ತಳ್ಳುವ ಮೊದಲು, ಅವುಗಳ ಸಾಧಕ ಬಾಧಕಗಳನ್ನು ಅರಿತುಕೊಂಡು ನಮಗೆ ಬೇಕಾದದ್ದನ್ನು ಅಳವಡಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬ ಸದಾಶಯವು ಪ್ರತಿಯೊಂದು ಬರಹದಲ್ಲಿ ಸಹ ಎದ್ದು ತೋರುತ್ತದೆ.
ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳಬೇಕಾದ ಬರಹಗಳಿವು. ರಸವತ್ತಾಗಿ ಮೂಡಿಬಂದಿರುವ ಈ ಕೃತಿಯು ಓದಲೇಬೇಕಾದ ಕೃತಿಗಳಲ್ಲೊಂದು. ನಮ್ಮಲ್ಲಿರುವ ಅಜ್ಞಾನ, ಅಹಂಕಾರವನ್ನು ಕರಗಿಸುವಷ್ಟು ಶಕ್ತಿಯುತವಾಗಿದೆ ಈ ಕೃತಿ. ತಪ್ಪದೇ ಓದಿ….. ಇಲ್ಲದಿದ್ದರೆ ಏನನ್ನೋ ಕಳೆದುಕೊಂಡಂತೆ…
ವಸುಧೇಂದ್ರ ಮಿನಿಮಮ್ ಗ್ಯಾರಂಟಿಯ ಹೀರೋ ತರಾ. ಅವರ ಪುಸ್ತಕಗಳು ನಿರಾಸೆ ಗೊಳಿಸುವ ಹಣ ಇಲ್ಲ. kindle ಅಲ್ಲಿ ಓದಿದ ಮೊದಲ ಕನ್ನಡ ಪುಸ್ತಕ ಎಂಬ ಕಾರಣಕ್ಕೂ ,ಮತ್ತು ಯಾವತ್ತಿನ ವಸುಧೇಂದ್ರ ಶೈಲಿಯೂ ಇದು ಇಷ್ಟವಾಯಿತು
ಈ ಪುಸ್ತಕ ಕೊಂಡದಿನದಿಂದಲೇ ನನ್ನ ಅಮ್ಮ ಹಾಗೂ ಪತ್ನಿ ಒಂದೇ ಗುಕ್ಕಿಗೆ ಓದಿ ಮುಗಿಸಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದರು, ಸಾಮಾನ್ಯವಾಗಿ ನನಗೆ ಕಾದಂಬರಿಗಳೆಂದರೆ ಇಷ್ಟ ಆದರೆ ಸಣ್ಣ ಕಥೆಗಳೆಂದರೆ ಅಷ್ಟಕಷ್ಟೆ. ಅಮ್ಮ ಈ ಪುಸ್ತಕ ಓದುವಾಗಲೇ ವಸುಧೇಂದ್ರ ರನ್ನ ಬಹಳ ಮೆಚ್ಚಿಕೊಂಡು ಅವರ ಇತರ ಪುಸ್ತಕದ ಬಗ್ಗೆ ವಿಚಾರಿಸುತ್ತಿದ್ಡನ್ನು ಕಂಡು ಹಾಗು ಓದಿದ ಪ್ರತಿಯೊಂದು ಪ್ರಬಂಧದ ಬಗ್ಗೆ ಅವರ ವಿಮರ್ಶೆ ನನಗೆ ಓದಲು ಪ್ರೇರೇಪಿಸಿತು, ಪುಸ್ತಕ ಓದಿ ಮುಗಿಸಿದ ಅಮ್ಮ ನನಗೆ .ವಸುಧೇಂದ್ರರಿಗೆ ಮಿಂಚಚೆಯಲ್ಲೊ ಅಥವ ಫೇಸ್ಬುಕ್ನಲ್ಲೊ ಪ್ರಶಂಸೆ ತಿಳಿಸಲು ಕೋರಿದರು. ಇಷ್ಟೆಲ್ಲ ಪೀಠಿಕೆಗೆ ಪಾತ್ರವಾದ ಪುಸ್ತಕವನ್ನು ಓದಲೇ ಬೇಕು ಎಂದು ಓದಲು ಶುರುಮಾಡಿದ್ದೆ ತಡ ಈ ಪುಸ್ತಕ ನನ್ನನು ಆವರಿಸಿಕೊಂಡಿತು,ಪುಸ್ತಕದಲ್ಲಿರುವ ಪ್ರತಿಯೊಂದು ವಿಷಯ ಎಷ್ಟು ಚಂದವಾಗಿ, ಸುಲಲಿತವಾಗಿ ಅರ್ಥವಾಗೋಥರ ಬರೆದಿದ್ದಾರೆ, ತಮ್ಮ ಅನಿಸಿಕೆಗಳನ್ನು ಎಲ್ಲೂ ಓದುಗರಮೇಲೆ ಹೇರದೆ ವಿಷಯದ ಸೂಕ್ಷ್ಮತೆ ಬಗ್ಗೆ ಬೆಳಕು ಚೆಲ್ಲುವುದರಲ್ಲಿ ವಸುಧೇಂದ್ರರ ಬರೆವಣಿಗೆಯ ಶಕ್ತಿ ಪ್ರಶಂಸನಿಯ. ಹದಿಹರೆಯರಿಂದ ವಯಸ್ಕರು ಓದಬೇಕಾದ ಪುಸ್ತಕ. ಕೊನೆಯದಾಗಿ ಈ ಪುಸ್ತಕ ಹಾಗು ಲೇಖಕರ ಬಗ್ಗೆ ಪರಿಚಯಿಸಿದ ಅಮರ್ ಗೆ ಧನ್ಯವಾದಗಳು _/\_
ವಸುದೇಂದ್ರರ ಎಲ್ಲಾ ಕೃತಿಗಳ ಹಾಗೆ ಇದೂ ಸುಲಲಿತವಾಗಿ ಸುಲಿದ ಬಾಳೆ ಹಣ್ಣಿನ ಹಾಗೆ ಓದಿಸಿಕೊಂಡು ಹೋಗುತ್ತದೆ. ಎಲ್ಲಾ ವಿಷಯಗಳನ್ನೂ ಸೂಕ್ಷ್ಮವಾಗಿ ಗಮನಿಸುವ ಮತ್ತು ಅದನ್ನು ಮನಸ್ಸಿಗೆ ನಾಟುವ ಹಾಗೆ ಹೇಳುವ ಕಲೆ ಅವರಿಗೆ ಚೆನ್ನಾಗಿ ಸಿದ್ದಿಸಿದೆ. ವಿಶೇಷವಾಗಿ ಮಹಾಭಾರತ ಕುರಿತ ಅವರ ಲೇಖನಗಳು ಬಹಳ ಅರ್ಥಪೂರ್ಣವಾಗಿವೆ. ಸೂಕ್ಷ್ಮವಾಗಿ ಗಮನಿಸುವ ದೃಷ್ಠಿ ಇದ್ದಲ್ಲಿ ನಮ್ಮ ಮನಸ್ಸಿಗೆ ಗೋಚರಿಸುವ ಅಂಶಗಳು ಬಹಳಷ್ಟು ಇರುತ್ತವೆ.