ON THE ONE HAND, THE INFAMOUS REALITY OF KAMATHIPURA, ON THE OTHER HAND, THE DEVOTION OF VITHOBA. UDYAST HAS THIS POWERFUL COMBINATION OF THE TWO. THIS IS THE STORY OF THE BOY BORN OF A PROSTITUTE IN KAMATHIPURA. SATYA WAS SENT TO AN ASHRAM FROM KAMATHIPURA TO HAVE A BRIGHT FUTURE. THERE NEW RITES TAKE ROOT IN HIM. THE LIFE OF SATYA TAKES ON NEW HEIGHTS. BUT EVEN HIS FATE DOES NOT GIVE HIM A HAPPY LIFE. THE OWNER OF THE FACTORY WHERE HE WAS WORKING DIES AND A NEW STORM COMES IN HIS LIFE. THIS IS A UNIQUE STORY OF A LIFE FILLED WITH THE INTRICACIES OF HUMAN RELATIONSHIPS AND THE CONCEPTS OF MORALITY AND IMMORALITY.
एकीकडे कामाठीपुऱ्यातलं बदनाम वास्तव, तर दुसरीकडं विठोबाची भक्ती. या दोन्हीचा अनोखा संगम साधत रचलेलं दमदार कथानक म्हणजे, उद्यास्त (अवसान) ही कादंबरी. कामाठीपुऱ्यातल्या वेश्येच्या पोटी जन्मलेल्या सत्याची ही कहाणी. सत्याचं भविष्य उज्वल असावं म्हणून त्याची कामाठीपुऱ्यातून एका आश्रमात रवानगी होते. तिथं त्याच्यात विठुभक्तीचे नवे संस्कार रुजतात. सत्याचं आयुष्य नवी उभारी घेतं. पण त्याचं भागदेय तरीही त्याला सुखासीन आयुष्य बहाल करत नाही. तो नोकरी करत असलेल्या कारखान्याच्या मालकाचा मृत्यू होतो आणि त्याच्या आयुष्यात नवं वादळ येतं. मानवी नात्यातली गुंतागुंत आणि नैतिक-अनैतिकाच्या संकल्पनांमध्ये भरडल्या जाणाऱ्या आयुष्यांची ही आगळीवेगळी कहाणी.
ಒಂದು ಪುಸ್ತಕ, ಒಂದು ಸಿನಿಮಾ ಅಥವಾ ಒಂದು ಕವನ ಒಡಲು ಹೀಗೆ ಇಷ್ಟು ಎಂದು ಸುಲಭವಾಗಿ ಬರೆಯಬಹುದು. ಹೇಳಲೂಬಹುದು ಒಟ್ಟು ಆಶಯ ಹೀಗಿದೆ ಎಂದು. ಅದು ಸರ್ವೇ ಸಾಮಾನ್ಯ!! ಆದರೆ ಈ ರೀತಿಯ "ಒಂದು ಆಶಯದ ಪರಿಧಿಗೆ" ಸಿಗದೇ ಓದುಗನಿಗೆ ಹಲವಾರು ರೀತಿಯ ಅನುಭವಗಳನ್ನು ಅವಸಾನ ಪುಸ್ತಕ ನೀಡುತ್ತದೆ ಹಾಗೂ ಈ ಪುಸ್ತಕ ವಿಶೇಷವೆನಿಸುವುದು ಅದೇ ಕಾರಣಕ್ಕೆ. ಇಲ್ಲಿ ಹೊಸತನವಿದೆ, ಆಧುನಿಕತೆಯಿದೆ, ಆಧುನಿಕ ಜೀವನ ಶೈಲಿಯ ಜಂಜಾಟಗಳಿವೆ. ಹೀಗೆ ಬರೆಯುತ್ತಾ ಹೋದರೆ ನೂರು ವಿಷಯಗಳಾದರೂ ಅಚ್ಚರಿಯಿಲ್ಲ.
ಸೊಲ್ಲಾಪುರದ ಮೇಲ್ಮಧ್ಯವರ್ಗದ ಕುಟುಂಬವೊಂದರ ಕಥೆಯಿದು ಎಂದು ಶುರುವಾತಿನಲ್ಲಿ ಅನಿಸಿದರೂ ಕಾದಂಬರಿ ಮುಂದೆ ಸಾಗಿದಂತೆ ನಮ್ಮ ಕಲ್ಪನೆಗೆ ನಿಲುಕದಷ್ಟು ತೆರೆದುಕೊಳ್ಳುತ್ತದೆ. ಮೊದಲ ಎರಡು ಮೂರು ಅಧ್ಯಾಯದಲ್ಲಿ ಆ ಕುಟುಂಬ ಮತ್ತು ಅವರ ವ್ಯಾಪಾರ ವಹಿವಾಟಿನ ಸುತ್ತಲೂ ನಡೆಯುವ ಕಾದಂಬರಿಯಲ್ಲಿ ಬರುವ ತಿರುವು ಪುಸ್ತಕದ ತೀವ್ರತೆಯನ್ನು ಮತ್ತು ಓಘವನ್ನು ನೂರ್ಮಡಿಗೊಳಿಸಿದೆ ಎಂಬುದು ಅತಿಶಯೋಕ್ತಿ ಅಲ್ಲವೇ ಅಲ್ಲ.
ಆರೇಳು ಪಾತ್ರಗಳು ಮುಖ್ಯ ಭೂಮಿಕೆಯಲ್ಲಿವೆ. ಒಂದೊಂದು ಪಾತ್ರದ್ದು ಒಂದೊಂದು ಕಥೆ. ತಮ್ಮವೇ ಆದ ವಿವರಣೆಗಳೊಂದಿಗೆ ತಮ್ಮನ್ನು ರೂಪಿಸಿಕೊಂಡಿವೆ. ಅವು ಕಾದಂಬರಿಯೊಂದಿಗೆ ಮಿಳಿತಗೊಂಡು ಓದುಗನನ್ನು ಎಡಬಿಡದೆ ಕಾಡುತ್ತವೆ!!!
೩೫೨ ಪುಟಗಳ ಅತ್ಯುತ್ಕೃಷ್ಟ ಓದಿನ ನಂತರ ವೈಯಕ್ತಿಕವಾಗಿ ಕಾಡಿದ ವಿಷಯಗಳೆಂದರೆ - ವ್ಯಕ್ತಿತ್ವ, ಕುಟುಂಬ, ಕಾನೂನು ಮತ್ತು ಭಾವನೆ, ಸಂಸ್ಕಾರ.
ನಮ್ಮ ವ್ಯಕ್ತಿತ್ವ ರೂಪವಾಗುವುದು ನಮ್ಮ ಪರಿಸರದ ಮೂಲಕ ಎನ್ನುತ್ತಾರೆ. ನಾನು ಅದನ್ನು ನಂಬಿದವನಲ್ಲ. ಅದೇ ರೀತಿಯ ಎರಡು ಪಾತ್ರಗಳು ಬೆಳೆದಿವೆ ಅವಸಾನ ಪುಸ್ತಕದಲ್ಲಿ. ತಾವು ಬೆಳೆದುಬಂದ ಪರಿಸರಕ್ಕೂ ತಮ್ಮ ವ್ಯಕ್ತಿತ್ವಕ್ಕೂ ಹೊಂದಿಕೆಯಾಗದೇ ತಮ್ಮ ಆಲೋಚನೆಗಳನ್ನು ಆಂದೋಲನಗಳನ್ನು ಬೆಳೆಸಿಕೊಂಡಿವೆ.
ಕುಟುಂಬ ಬೇಕು! ಅದಕ್ಕೊಂದು ಚಿತ್ರ ಮೂಡಬೇಕು. ಹೆತ್ತವರು ಹಡೆದವರೇ ಆಗಬೇಕಂತಿಲ್ಲ. ವಿಠ್ಠಲ ಹೇಳುವಂತೆ ಯಾರಿಗಾದರೂ ಸೇವೆ ಮಾಡಬಹುದು. ಅವರೇ ನಮ್ಮ ಕುಟುಂಬವೆಂದುಕೊಳ್ಳಬಹುದು. ಇರುವವರಿಗೆ ಅದರ ಮಹತ್ವ ತಿಳಿದಿರುವುದಿಲ್ಲ. ಇಷ್ಟೆಂದ ಮಾತ್ರಕ್ಕೆ ನಿಮ್ಮೊಳಗಿನ ಓದುಗ ಇದು ಅನಾಥನೊಬ್ಬನ ಕಥೆಯೆಂದುಕೊಂಡರೇ ನೀವು ಅಕ್ಷರಶಃ ತಪ್ಪಾಗಿ ಎಣಿಸುತ್ತಿದ್ದೀರಿ.
ಕಾನೂನು ಮತ್ತು ಭಾವನೆ - ಎಷ್ಟೋ ಬಾರಿ ಕೆಲವು ಪ್ರಕರಣಗಳಿಗೆ ಕಾನೂನಿನಲ್ಲಿ ಉತ್ತರವೇ ಇರುವುದಿಲ್ಲ. ಉದಾಹರಣೆಗೆ ತಾಯಿಯೊಬ್ಬಳು ಮಗಳನ್ನು ದೈಹಿಕವಾಗಿ ಹಿಂಸಿಸುತ್ತಿದ್ದ ತಂದೆಯ ಕೊಂದರೆ ಅವಳನ್ನು ಶಿಕ್ಷಿಸಬಹುದಾ? ಕಾನೂನಿನ ಪ್ರಕಾರ ಹೌದು, ಭಾವನೆಗಳ ಪ್ರಕಾರ ಇಲ್ಲ!!! ನ್ಯಾಯವೆಂಬುದು ಶುದ್ದವಾಗಿ ಭಾವನೆಗಳನ್ನು ಅವಲಂಬಿಸಿರಬೇಕೆ ಹೊರತು ಕಾನೂನನ್ನಲ್ಲ.
ಸಂಸ್ಕಾರ - ಪೋಷಕರನ್ನು ನೋಡಿ ಮಕ್ಕಳ ಸಂಸ್ಕಾರವನ್ನು ಎಣಿಸುವುದು ಎಂಥ ಮೂರ್ಖತನ. ಬಾಹ್ಯವಾಗಿ ಬರುವ ಹೋಲಿಕೆಗಳಷ್ಟೇ ಹೆತ್ತವರಿಂದ ಬರುವುದು. ಅಂತರಂಗದಲ್ಲಿ ಪ್ರತಿಯೊಬ್ಬರಿಗೂ ಹೇಗೆ ರೂಪುಗೊಳ್ಳಬೇಕು ಎಂಬುದರ ಆಯ್ಕೆಗಳಿರುತ್ತವೆ.
ಈ ನಾಲ್ಕು ಪ್ಯಾರಾಗಳು ಅಸಂಬದ್ಧವೆನಿಸಬಹುದು. ಆದರೆ, ಪುಸ್ತಕ ಓದಿದ ನಂತರ ಈ ವಿಷಯಗಳು ನಿಮ್ಮನ್ನು ಕೆದಕಲಿವೆ. ಮತ್ತಷ್ಟು ವಿಷಯಗಳನ್ನು ಬೆದಕುವಂತೆ ಮಾಡಲಿವೆ.
ಇಷ್ಟಲ್ಲದೇ, ಕಾಮಾಠಿಪುರ ಮತ್ತು ಅಲ್ಲಿನವರ ಬದುಕನ್ನು ಬಿಚ್ಟಿಡುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಅಲ್ಲಿಯವರಿಗೆ ಹುಟ್ಟಿದ ಮಕ್ಕಳಿಗೆ "ಸೂಳೆಯ ಮಗ" ಎಂದು ಕರೆಯುತ್ತಾರೆ. ಆ ಪರಿಸರದಿಂದಾಚೆ ಹುಟ್ಟಿದ ಮಕ್ಕಳಿಗೆ ಅಪ್ಪನ ಹೆಸರು ಸಿಗುತ್ತದೆ. ಕಾಮಾಠಿಪುರದಲ್ಲಿ ಹುಟ್ಟಿದ ಮಗುವಿಗೂ ಅಂಥ ಗಂಡಸೇ ಕಾರಣವಲ್ಲವೇ? ಆ ವೃತ್ತಿಯಲ್ಲಿನ ಹೆಣ್ಣೊಬ್ಬಳನ್ನು ದೂರವಿರಿಸುವ ನಾವು, ಅವರ ಸಹವಾಸ ಮಾಡಿದ ಗಂಡಿನೆಡೆಗೆ ತೋರುವ ತಾರತಮ್ಯ ಅಸಹನೀಯ. ಆ ಪರಿಸರದ ಹೆಣ್ಣುಮಕ್ಕಳನ್ನು ಉಳಿಸುವುದು, ಅವರ ಸೇವೆ ಮಾಡುವುದು ಈಗ ರಾಜಕೀಯದ ಮಾರ್ಕೆಟಿಂಗ್ ಆಗುತ್ತಿರುವುದು ಅಂತ್ಯದ ಆರಂಭ. ಪುನಶ್ಚೇತನ ಕೇಂದ್ರ ಸ್ಥಾಪಿಸಿ ಅಲ್ಲಿನ ಮುಖ್ಯಸ್ಥನೇ ಅವಳನ್ನು ಬಳಸಿಕೊಂಡದ್ದನ್ನು ನಾವು ಕೇಳಿದ್ದೇವೆ.
ನಾಲ್ಕೈದು ವರ್ಷಗಳ ಹಿಂದೆ ಮೆಜೆಸ್ಟಿಕ್ ಬಸ್‌ಸ್ಟಾಪಿನಲ್ಲಿ ತಮ್ಮನಂತೆ ಕಂಡು ತನ್ನ ಅಂತರಾಳವನ್ನು ತೆರೆದು ಮಾತನಾಡಿದ್ದ ಒಬ್ಬ ಸೆಕ್ಸ್ ವರ್ಕರ್‌ನ ಅಷ್ಟೂ ಮಾತುಗಳೂ ಇಲ್ಲಿ ಪುನರ್ಮನನ ಮಾಡಿಕೊಂಡೆ. ಅವರ ನೋವುಗಳನ್ನು ಶಮನ ಮಾಡಲು ಗುಳಿಗೆ, ನಿರೋಧಕಗಳು, ಆಯಿಂಟ್‌ಮೆಂಟುಗಳಷ್ಟೇ ಸಾಲುವುದಿಲ್ಲ. ಬದಲಾಗಬೇಕಿರುವುದು ಸಮಾಜ!!! ಇರಲಿ :)
ಲೇಖಕಿಯವರಿಗೆ ಇಂಥದೊಂದು ಅದ್ಬುತ ಕಾದಂಬರಿ ಬರೆದದ್ದಕ್ಕೆ ಅಭಿನಂದನೆಗೆಳು.
ಸಮಾಜದಲ್ಲಿನ ಓರೆಕೋರೆಗಳನ್ನು ಮುಕ್ತವಾಗಿ ಲೇಖಕಿ ಸಹನಾ ವಿಜಯಕುಮಾರ್ ಬರೆದಿದ್ದಾರೆ. "ಅಪ್ಪ ಒಬ್ಬ ನೆಟ್ಟಗಿದ್ದಿದ್ರೆ ನಾವ್ ಯಾಕ್ ಹೀಗಾಗ್ತಿದ್ವಿ" ಎನ್ನುವ ಮಕ್ಕಳು ಈ ಪುಸ್ತಕ ಓದಬೇಕು. "ಅಮ್ಮ ಸರಿ ಇರ್ಲಿಲ್ಲ" ಎನ್ನುವವರು ಓದಬೇಕು. ಅವರನ್ನು ದೇವರಂತೆ ಪೂಜಿಸುವವರು ಓದಬೇಕು. ಈ ಪುಸ್ತಕ ಕೇವಲ ಪುಸ್ತಕವಾಗಿರದೇ ನಮ್ಮದೇ ಬದುಕಿನ ಚಿತ್ರಣ ಎನಿಸಿಬಿಡುತ್ತದೆ.
ಬರೆಯುತ್ತಾ ಹೋದರೆ, ಪುಟಗಳಷ್ಟು ಬರೆಯಬಹುದು. ಆದರೆ ಇಲ್ಲಿಗೆ ನಿಲ್ಲಿಸುತ್ತೇನೆ!! ಈ ವ್ಯಕ್ತಿತ್ವ, ಕಾನೂನು, ಭಾವನೆ, ತಂದೆ ತಾಯಿ, ಕುಟುಂಬ ಸತ್ಯ ಸಂಸ್ಕಾರ ಎಲ್ಲದರ ನಡುವೆ ಸೊಲ್ಲಾಪುರದಿಂದ ಕಾಮಾಠಿಪುರದ ಸುಕಲಾಜಿಗಲ್ಲಿಗೆ ಕಾದಂಬರಿ ಹೇಗೆ ಸಾಗಿತು. ಉತ್ತರ ಪುಸ್ತಕದಲ್ಲಿ!! ಓದಿ
Very good book. Provides food for thought into various aspects of relationship. Everything is right or wrong depending upon one's perspective. An action or behavior when seen from one person's perspective will make it acceptable while another person may not be able to perceive it in the same sense. Revolving around a family and the nuances of the family relations also weaves into it the details of lives of Kamathipura in a very natural businesslike way. It is in par with S.L Bhairappa's books. Can't say more.
ಜನವರಿಯ ಮೊದಲ ಹದಿನೈದು ದಿನಗಳಲ್ಲೇ ರಪ ರಪ ಅಂತಾ ಏಳು ಪುಸ್ತಕಗಳನ್ನ ಓದಿ ಟಾಪ್ ಗೇರ್ನಲ್ಲಿ ಹೋಗುತ್ತಿದ್ದವನನ್ನ ಮೂಗುದಾರ ಹಾಕಿ ಎಳೆದು ನಿಲ್ಲಿಸಿ ತನ್ನ ವೇಗಕ್ಕೆ ಹೊಂದಿಸಿಕೊಂಡಿದ್ದು ಸಹನಾ ವಿಜಯಕುಮಾರ್ ಅವರ “ಅವಸಾನ” ಕಾದಂಬರಿ. ಇದು ಬಹಳ ನಿಧಾನವಾಗಿ ಸಾಗುವ, ತಾಳ್ಮೆಯನ್ನ ಬೇಡುವ ಕಥಾವಸ್ತು ಮತ್ತು ನಿರೂಪಣೆಯನ್ನ ಹೊಂದಿರುವ ೩೫೨ ಪುಟಗಳ ಕಾದಂಬರಿ.
“ಅವಸಾನ”ವು ಒಂದು ವೃತ್ತಾಂತದಲ್ಲಿ ಕೇಂದ್ರ ಬಿಂದುವಿನಿಂದ ಭೂತ ಮತ್ತು ಭವಿಷ್ಯಗಳ ಘಟನೆಗಳು ಕೆಲವು ಮುಖ್ಯ ಪಾತ್ರಗಳೊಂದಿಗೆ ಸಾಗುವ ಒಟ್ಟು ಸಂಗ್ರಹದಂತೆ ನನಗೆ ಗೋಚರಿಸಿತು, ಕಥೆ ವೇಗವಾಗಿ ಮುಂದೆ ಸಾಗದೆ ಪಾತ್ರಗಳ ದೈನಂದಿನ ಚಟುವಟಿಕೆಗಳಿಗೂ ಅವು ಚಲಿಸುವ ಯೋಚಿಸುವ ನಿರ್ಧರಿಸುವ ರೀತಿಗೂ ನಾವು ಹೊಂದಿಕೊಳ್ಳುವ ಮಟ್ಟಿಗೆ. ಉದಾಹರಣೆಗೆ ಸತ್ಯ ಎನ್ನುವ ಪಾತ್ರ, ಮೊದಲ ಪುಟದಿಂದ ಕೊನೆಯ ಪುಟದವೆರೆಗೂ ಹರಡಿಕೊಂಡಿರುವ ಇವನು ಆದರ್ಶ ವ್ಯಕ್ತಿಯಾಗೆ ಉಳಿಯುತ್ತಾನೆ.
ಕಾದಂಬರಿ ಬಹಳ ಸೂಕ್ಷ್ಮ ಮತ್ತು ಅಪರೂಪದ ವಿಷಯಗಳ ಬಗ್ಗೆ ಕುರಿತದ್ದು. ಕಾಮಾಠಿಪುರದ ಅಂತರಂಗವನ್ನ ಬಹಳ ಪರಿಣಾಮಕಾರಾಗಿ ಸೃಜನಶೀಲವಾಗಿ ಸೃಷ್ಟಿಸಿದ್ದಾರೆ. ಇನ್ನೊಂದು ಕಡೆ ಎಲ್ಲವೂ ಇರುವ ಒಂದೊಳ್ಳೆ ಕುಟುಂಬದ ಮತ್ತು ಆ ಕುಟುಂಬದ ಸದಸ್ಯರ ಅದರಲ್ಲೂ ಅಪ್ಪ ಮಗನ ಸಂಬಂಧದ ಸಂಕೀರ್ಣತೆಯನ್ನೂ ಕಾಣಬಹುದು. ಅಲ್ಲಲ್ಲಿ ಕಂಡ ದೇವರು ಭಕ್ತಿ ಆಧ್ಯಾತ್ಮ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ ಕತೆಗೂ ಪೂರಕವಾಗಿರಲ್ಲಿಲ್ಲ ಎನ್ನುವುದು ನನ್ನ ಅಭಿಪ್ರಾಯ.
ವಿಶಾಲ್ ಎನ್ನುವ ಮತ್ತೊಂದು ಮುಖ್ಯ ಪಾತ್ರವಿದೆ, ಸತ್ಯನ ಪಾತ್ರಕ್ಕಿಂತ “ವಿಶಾಲ”ನಲ್ಲಿ ನನ್ನನ್ನ ನಾನು ಕಂಡುಕೊಂಡೆ. ಮೇಲ್ನೋಟಕ್ಕೆ ಕೋಪಿಷ್ಠ ಅಂತಃಕರಣವಿಲ್ಲದವನಂತೆ ಭಾಸವಾದರೂ ವಾಸ್ತವಕ್ಕೆ ಬಹಳ ಹತ್ತಿರವಿದ್ದವನು ಅವನು ಅನ್ನಿಸಿತು. ಎಲ್ಲವೂ ಮಾಡಿ ಸಹಿಸಿ ಕೊನೆಗೂ ಅವನು ವಿಲನ್ ರೀತಿ ಉಳಿದುಹೋಗಿದ್ದು ಬೇಸರ ತರಿಸಿತು. ಪುಸ್ತಕ ಪರಿಚಯಿಸುವಾಗ ರ್ಯಾಂಡಮ್ ಆಗಿ ಈ ಪಾತ್ರಗಳ ಹೆಸರು ಹೇಳಿ ಏನೇನೋ ಹೇಳಿದಾಗ ಪುಸ್ತಕ ಓದದವರಿಗೆ ಗೊಂದಲವಾಗುತ್ತೆ ಗೊತ್ತು, ಸಾಮಾನ್ಯವಾಗಿ ಇದು ನಾನು ಮಾಡೋಲ್ಲ. ಬಹುಶಃ ಈ ಪುಸ್ತಕವನ್ನ ಓದಿರುವವರು ನಾನು ಹೇಳುತ್ತಿರುವುದನ್ನ ರಿಲೇಟ್ ಮಾಡಿಕೊಳ್ಳಬಹುದು ಅನ್ನಿಸುತ್ತೆ.
ಕೊನೆಯದಾಗಿ, ಇಲ್ಲಿನ ಬರವಣಿಗೆ ಓದೋಕೆ ತುಸು ಕಷ್ಟವಾಗಿತ್ತು. ತುಂಡು ತುಂಡು ವಾಕ್ಯಗಳು. ಪೂರ್ತಿ ವಾಕ್ಯವೇ ಹಿಂದು ಮುಂದು. ಬಹಳ ಬಾರಿ ಸುಲಭ ಅರ್ಥ ನೀಡುವ ವಾಕ್ಯವನ್ನೇ ಎರಡು ಸಲ ಓದಿದ್ದೇನೆ. ಪೂರ್ತಿ ಕಾದಂಬರಿಯೇ ಹೀಗಿದ್ದಾಗ ಓದಿನ ವೇಗ ಕುಂಠಿತವಾಗುತ್ತೆ, ನನಗೆ ಆಗಿದ್ದೂ ಅದೇ ಇರಬೇಕು.
ಒಂದು ಪುಸ್ತಕದಲ್ಲಿ ಎಷ್ಟೆಲ್ಲ ವಿಷಯವನ್ನ ಎಷ್ಟೊಂದು ವಿಸ್ತಾರವಾಗಿ ಹೇಳಬಹುದು ಅನ್ನೋದಕ್ಕೆ ಈ ಪುಸ್ತಕ example.
ಮನುಷ್ಯ ಸಂಬಂಧ, ಜೀವನ, ಭಕ್ತಿ, ಕರ್ಮ, ಜ್ಞಾನ, ಸೇವೆ, ವ್ಯಕ್ತಿತ್ವ, ಸಂಸ್ಕಾರ ಈ ರೀತಿಯ ಎಷ್ಟೋ ವಿಚಾರಗಳನ್ನ ಬರುವ ಪ್ರತಿಯೊಂದು ಪಾತ್ರಗಳಲ್ಲಿ ಬೇರೆ ಬೇರೆ ಕೋನಗಳಲ್ಲಿ ನೋಡಬಹುದು. ವೇಶ್ಯಾವೃತ್ತಿಯ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ.
ಪ್ರತಿ ಪುಟ ಓದುವಾಗ ತಲೆಯಲ್ಲಿ ಏನೋ ಓಡುತ್ತಾ ಇರುವಂತೆ ಮಾಡುವ ಪುಸ್ತಕ. ಚೆನ್ನಾಗಿದೆ.
ಒಂದು ಪುಸ್ತಕದಲ್ಲಿ ಎಷ್ಟೆಲ್ಲ ವಿಷಯವನ್ನ ಎಷ್ಟೊಂದು ವಿಸ್ತಾರವಾಗಿ ಹೇಳಬಹುದು ಅನ್ನೋದಕ್ಕೆ ಈ ಪುಸ್ತಕ example.
ಮನುಷ್ಯ ಸಂಬಂಧ, ಜೀವನ, ಭಕ್ತಿ, ಕರ್ಮ, ಜ್ಞಾನ, ಸೇವೆ, ವ್ಯಕ್ತಿತ್ವ, ಸಂಸ್ಕಾರ ಈ ರೀತಿಯ ಎಷ್ಟೋ ವಿಚಾರಗಳನ್ನ ಬರುವ ಪ್ರತಿಯೊಂದು ಪಾತ್ರಗಳಲ್ಲಿ ಬೇರೆ ಬೇರೆ ಕೋನಗಳಲ್ಲಿ ನೋಡಬಹುದು. ವೇಶ್ಯಾವೃತ್ತಿಯ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ.
ಪ್ರತಿ ಪುಟ ಓದುವಾಗ ತಲೆಯಲ್ಲಿ ಏನೋ ಓಡುತ್ತಾ ಇರುವಂತೆ ಮಾಡುವ ಪುಸ್ತಕ. ಚೆನ್ನಾಗಿದೆ.
ಇತ್ತೀಚಿನವರೆಗೂ ಪುಸ್ತಕ ಓದಿನ ವಿಷಯದಲ್ಲಿ ಕಥಾಸಂಕಲನ ನನ್ನ ನೆಚ್ಚಿನ ಪ್ರಕಾರವಾಗಿತ್ತು. ಸಿಗುವ ಅಷ್ಟಷ್ಟೇ ಬಿಡುವಿನಲ್ಲಿ ಒಂದೊಂದಾಗಿ ಓದಿ ಮುಗಿಸಬಹುದಾದ ಕಥೆಗಳ ಸಂಗ್ರಹವೆಂದರೆ ಖುಷಿಯಾಗಿ ಎತ್ತಿಕೊಳ್ಳುತ್ತಿದ್ದೆ. ಅದು ಯಾವಾಗಲೋ ನನಗೇ ತಿಳಿಯದಂತೆ; ತುಸು ಹೆಚ್ಚು ಸಮಯ ಬೇಡುವ, ವಿಸ್ತಾರ ಹರವಿನ ಕಾದಂಬರಿಗಳು.. ಅದರಲ್ಲೂ 250+ ಪುಟಗಳ ಕಾದಂಬರಿಗಳು ಹೆಚ್ಚು ಆಪ್ತವಾಗುತ್ತಿವೆ. ರಂಗ ಸಿದ್ಧತೆಗೆ, ಪಾತ್ರಗಳ ಬೆಳವಣಿಗೆಗೆ, ಸಾವಕಾಶವಾಗಿ ಕಥೆಯೊಂದು ಬಿಚ್ಚಿಕೊಳ್ಳಲು, ಓದುವ ನಮ್ಮನ್ನು ಆವರಿಸಿಕೊಳ್ಳಲು ಅನುವು ಮಾಡಿಕೊಡುವ big size ಕಾದಂಬರಿಯೊಂದರೊಳಗೆ ಮೊದಲ ಪ್ರವೇಶವೊಂದು ದೊರೆತರೆ ಮತ್ತೆಲ್ಲಾ ಸುಲಭ ಪ್ರಯಾಣ.
'ಸಹನಾ ವಿಜಯಕುಮಾರ'ರ ಅವಸಾನ ಕಾದಂಬರಿ ಓದಲು ಕೈಗೆತ್ತಿಕೊಂಡದ್ದೂ ಇದೇ ಕಾರಣದಿಂದಲೇ. ಬಹು ಹಿಂದೆ ಲೇಖಕಿಯ 'ಕ್ಷಮೆ' ಕಾದಂಬರಿ ಓದಿ, ಆಗಿನ ನನ್ನ ಮನೋಭಾವಕ್ಕೆ ಅದನ್ನು ಸ್ವೀಕರಿಸುವ ಬಗೆ ತಿಳಿಯದೇ ಗೊಂದಲವಾಗಿತ್ತು. ಈಗ ಅದೇ ಸಬ್ಜೆಕ್ಟಿನ ಸುಮಾರಷ್ಟು ಕಥೆ, ಕಾದಂಬರಿಗಳು ಬಂದಿವೆ (ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ, ಕಿಲಿಗ್ ಇತ್ಯಾದಿ).
ಪ್ರಸ್ತುತ ಕಾದಂಬರಿಯಲ್ಲಿ ವಿಠೂ ಮಾವುಲಿಯ ದರ್ಶನಕ್ಕಾಗಿ ವಾರಿ ಹೋಗುವುದು ಮತ್ತು ಭಕ್ತಿಯಲ್ಲಿ ಭವದ ದುಃಖಗಳನ್ನು ಕಳೆಯಲು ಯತ್ನಿಸುವ ಸತ್ಯನ ಅಧ್ಯಾಯಗಳು ಓದಲು ಹಿತವೆನಿಸುವಂತಿವೆ. ಭಕ್ತಿ ಎನ್ನುವುದು ಅಂತಃಶ್ಶಕ್ತಿಗೆ ಕೊಡುವ ಸಾಮರ್ಥ್ಯ ಎಂಥದೋ ತಿಳಿಯದೆ ನಾಸ್ತಿಕವಾದವನ್ನು ಫ್ಯಾಷನ್ನಿನಂತೆ ಅಳವಡಿಸಿಕೊಳ್ಳುತ್ತಿರುವವರ ಬಗ್ಗೆ ಕನಿಕರ ಮೂಡುತ್ತದೆ.
ಕಾಮಾಠಿಪುರದ ಕರ್ಮಚಾರಿಗಳ ಬಗ್ಗೆ ಬರೆಯುವಾಗ ಓದುಗರನ್ನು ರಂಜಿಸುವ, ಪ್ರಭಾವಿಸುವ ಯಾವ ಪ್ರಯತ್ನಗಳನ್ನೂ ಮಾಡದೇ ಮನಸು ಆರ್ದ್ರವಾಗುವಂತೆ ಬರೆದದ್ದು ಮೆಚ್ಚುಗೆಯಾದ ವಿಷಯ.
ಬಾಬುರಾಯರ ಕರ್ತವ್ಯ ವಿಮುಖತೆಯನ್ನು ಪತ್ನಿಯಾಗಿ ಗಂಗಾಬಾಯಿ ಭರಿಸಬಹುದು, ಮಗನಾಗಿ ವಿಶಾಲನೂ ಭರಿಸಲಿ ಎಂಬ ನಿರೀಕ್ಷೆ ಸಲ್ಲದಾದರೂ ಕೆಳಗೆ ಬಿದ್ದವರನ್ನು ಮತ್ತಷ್ಟು ತುಳಿಯುವುದು ಅವನ ವ್ಯಕ್ತಿತ್ವದ ಅವಸಾನ. ಸಮಾಜದ ಉದ್ಧಾರಕ್ಕಾಗಿ ತಾನು ಸಹಿಸಿದ ಅನ್ಯಾಯಗಳನ್ನು ನೇತ್ರಾಳೂ ಸಹಿಸಲಿ ಎಂದುಕೊಳ್ಳುವುದು ದೀದಿಯ ಅವಸಾನದ ಹಾದಿ. ಇದೇ ರೀತಿ ಇಲ್ಲಿನ ಪಾತ್ರಗಳೆಲ್ಲವೂ ಬಾಗಿಲು ತೆರೆದೇಯಿರುವ ಪಂಜರದಲ್ಲಿ ಸ್ವಯಂ ಬಂಧಿಗಳಂತೆ ಕಾಣುತ್ತಾರೆ. ಅದೇಕೋ ಲೇಖಕಿಯ ಅಷ್ಟೂ ಪ್ರಯತ್ನಗಳ ನಂತರವೂ ವಿಶಾಲ್ ಖಳನಂತೆ ಕಾಣದೆ ಪರಿಸ್ಥಿತಿಯ ಕೈಗೊಂಬೆಯೆನಿಸುತ್ತಾನೆ.
ಪುಸ್ತಕದ ಬಗ್ಗೆ ಇಷ್ಟು ಪಾಸಿಟಿವ್ ಅಂಶಗಳಿದ್ದೂ ಅಸಹನೆ ಹುಟ್ಟಿಸಿದ್ದು ಲೇಖಕಿಯ ವಾಕ್ಯರಚನಾ ಶೈಲಿ. ತುಂಡುತುಂಡಾದ ಚಕ್ಕುಲಿಯಂತಿರುವ ಅಪೂರ್ಣ ವಾಕ್ಯಗಳು. ಗಂಭೀರ ಕ್ಷಣಗಳನ್ನು, ತಳಮಳ ತುಂಬಿದ ಮನಸ್ಥಿತಿಯನ್ನು ಚಿತ್ರಿಸಲು ಈ ಪ್ರಕಾರದ ಬರವಣಿಗೆ ಪರಿಣಾಮಕಾರಿ ನಿಜ, ಇಡೀ ಪುಸ್ತಕವೇ ಹಾಗಿದ್ದರೆ ಓದಲು ಬಹಳ ಕಿರಿಕಿರಿ. ಅದೊಂದು ಕೊರೆಯ ಹೊರತಾಗಿ ಒಳ್ಳೆಯ ಓದು.
ಕಾಮಾಟಿಪುರದ ಚಿತ್ರಣ ಬಹಳ ಚೆನ್ನಾಗಿದೆ. ತಂದೆ ಮಗನ ಸಂಘರ್ಷ ಸಹಜವಾಗಿದೆ ಆದರೆ ಅದು ರಿಪಿಟೇಷನ್ ಅನಿಸುತ್ತದೆ. ವ್ಯಾಪಾರ ವಹಿವಾಟು ಮತ್ತು ಕೌಟುಂಬಿಕ ಸಂಬಂಧಗಳ ಚಿತ್ರಣ ಇಷ್ಟವಾಯಿತು. ಇಡೀ ಕಾದಂಬರಿಯ ಕಥಾ ವಸ್ತು ಚೆನ್ನಾಗಿದ್ದರೂ ಯಾಕೋ ಭೈರಪ್ಪರ ಶೈಲಿಯನ್ನೇ ಓದುವ ಹಾಗೆ ಅನಿಸಿತು.
ಸಹನಾ ಅವರ ಎರಡನೇ ಪುಸ್ತಕ ಇದು ನಾನು ಓದುತ್ತಿರುವುದು. ಈ ಮೊದಲೇ ಕಶೀರ ಓದಿದ್ದೆ. ಆ ಪುಸ್ತಕ ಓದಿಸಿಕೊಂಡ ಹಾಗೆ ಈ ಪುಸ್ತಕ ಹೋಗಲಿಲ್ಲ. ಆದರೆ ಈ ಪುಸ್ತಕದ ಕಥಾವಸ್ತು ಚೆನ್ನಾಗಿದೆ. ಇಂದಿನ ಕಾಲಘಟ್ಟದಲ್ಲಿ ಸರ್ವೇಸಾಮಾನ್ಯವಾಗಿರುವ ಘಟನೆಗಳು ಈ ಪುಸ್ತಕದಲ್ಲಿ ಮೂಡಿ ಬಂದಿವೆ. ಬಾಬುರಾಯರು ತಕ್ಕಮಟ್ಟಿನ ಉದ್ಯಮಿ. ಒಂದು ಕಾಲಕ್ಕೆ ಒಳ್ಳೆಯ ಲಾಭದಲ್ಲಿ ಓಡುತ್ತಿದ್ದ ಉದ್ಯಮ ಹಠಾತ್ತಾಗಿ ನೆಲಕ್ಕಚ್ಚಿತು. ಮುಂಚಿನಿಂದಲೂ ಅವರ ಮೇಲಿದ್ದ ಕುಟುಂಬದ ಜವಾಬ್ದಾರಿಯೆಲ್ಲವೂ ಒತ್ತಡಕರವಾಗುತ್ತದೆ. ಅವರ ಕುಟುಂಬದ ಸದಸ್ಯರೆಲ್ಲರೂ ಅವರನ್ನು ಒಂಟಿಮಾಡಿ ತಮ್ಮದೇ ದಾರಿಯನ್ನು ಹುಡುಕುತ್ತಾರೆ. ಇಂತಹ ಸಮಯದಲ್ಲಿ ಅವರ ಧರ್ಮಪತ್ನಿ ಗಂಗಾಬಾಯಿಯ ಸಹಾಯದಿಂದ ಹೇಗೋ ಸುಧಾರಿಸಿಕೊಂಡು ಜೀವನ ಸಾಗಿಸುತ್ತಾರೆ. ಅವರ ಏಕೈಕ ಮಗ ವಿಶಾಲನಿಗೆ ಆ ಸಂದರ್ಭದಲ್ಲಿ ತಂದೆಯ ಮೇಲೆ ರೋಷ ಉಕ್ಕೇರುತ್ತದೆ. ಕಾರಣ ದೊಡ್ಡ ಬದುಕನ್ನು ನಿರ್ಮಿಸುವ ಕನಸ್ಸನ್ನು ಹೊಂದಿದ್ದ ವಿಶಾಲನಿಗೆ ತಂದೆಯಿಂದ ಯಾವುದೇ ಸಹಾಯ ಸಿಗುವುದಿಲ್ಲ. ಅಂದಿನಿಂದ ಶುರುವಾಯಿತು ತಂದೆಯ ಮೇಲಿನ ತಿರಸ್ಕಾರ ಭಾವ ವಿಶಾಲನ ಬದುಕಿನಲ್ಲಿ. ಅವನ ಮಾಸ್ತರರ ಸಹಾಯದಿಂದ ವಿದ್ಯಾಭ್ಯಾಸ ಮುಂದುವರಿಸಿ ದೊಡ್ಡ ಉದ್ಯಮಿಯಾಗುತ್ತಾನೆ. ಸದಾ ಬೆನ್ನೆಲುಬಾಗಿ ನಿಲ್ಲುವ ಸುಲಭಾಳಂತಹ ಮುದ್ದಿನ ಹೆಂಡತಿ ಸಿಗುತ್ತಾಳೆ. ಅವನಿಗೆ ಉದ್ಯಮದ ಉತ್ತುಂಗಕ್ಕೇರುವ ಬಯಕೆ, ಆ ಸಮಯದಲ್ಲಿ ಅವನ ಸಹಾಯಕ್ಕೆ ಬಂದವನು ಸತ್ಯ. ಮುನ್ನಾ ಮುಂಬೈಯ ಸುಳಿಗೇರಿಯಲ್ಲಿ ಬೆಳೆದವನು. ಅವನ ತಾಯಿ ವ್ಯಭಿಚಾರಿಣಿಯಾದರು ಒಳ್ಳೆಯ ಹೃದಯದವಳು, ಅಂತೆಯೇ ಅಲ್ಲಿ ಒಳ್ಳೆಯ ಹೆಸರು ಮಾಡಿದವಳು. ಸತ್ಯ ದೊಡ್ಡವನಾಗುವ ಸಮಯದಲ್ಲೇ ಅನಾರೋಗ್ಯದಿಂದ ಕೊನೆಯುಸಿರೆಳೆಯುತ್ತಾಳೆ. ಅವಳ ನೆನಪನ್ನು ಹೊತ್ತು ಆಶ್ರಮವನ್ನು ಸೇರುತ್ತಾನೆ. ತಂದೆ ತಾಯಿ ಅನುಪಸ್ಥಿತಿಯಲ್ಲಿ ಬೆಳೆದ ಮುನ್ನಾ ಚೆನ್ನಾಗಿ ಕಲಿತು ಮುಂದೆ ಉದ್ಯಮದಲ್ಲಿ ಕೆಲಸಕ್ಕೆ ಸೇರುತ್ತಾನೆ. ಆಗ ಅವನ ಹೆಸರಾಗುತ್ತದೆ ಸತ್ಯ. ಸಂದರ್ಶನಕ್ಕೆ ಬಂದಾಗಲೇ ಬಂದಾಗಲೇ ಬಾಬುರಾಯರು ಅನಾರೋಗ್ಯಕ್ಕೆ ತುತ್ತಾಗಿ ನೆಲಕ್ಕುರುಳಿದಾಗ ಸತ್ಯ ಸಹಾಯಕ್ಕೆ ನಿಂತು ಮನೆಯವರಿಗೆ ಬೇಕಾಗುವವನಾಗುತ್ತಾನೆ. ಪ್ರತಿದಿನವೂ ಅವರನ್ನು ಮಾತಾಡಿಸಿ ಅವರ ಆಶೀರ್ವಾದ ತೆಗೆದುಕೊಂಡು ಕೆಲಸಕ್ಕೆ ಹೋಗುತ್ತಿರುತ್ತಾನೆ. ವಿಶಾಲನ ಆಫೀಸು ಪಕ್ಕದ ಕೋಣೆಯಲ್ಲೇ. ವಿಶಾಲವಾದ ಮನೆಯಲ್ಲಿ ಪಕ್ಕದಲ್ಲೊಂದು ದೊಡ್ಡ ಕೋಣೆಯನ್ನು ಮಾಡಿ ಅಲ್ಲೇ ಆಫೀಸು ಮಾಡಿಕೊಂಡಿರುತ್ತಾನೆ ವಿಶಾಲ್. ತುಂಬಾ ಹಠಮಾರಿ ಸ್ವಭಾವದ ವಿಶಾಲ್ ತನ್ನ ತಂದೆಯಿಂದಲೇ ಆ ಗುಣವನ್ನು ಪಡೆದಿದ್ದು. ತಂದೆಯನ್ನು ಕಂಡರೆ ಆಗುತ್ತಿರಲಿಲ್ಲ. ಬಾಬುರಾಯರು ಮಾತ್ರ ಸದಾ ಕಿರುಚುತ್ತಾ ತಮ್ಮ ಮಡದಿಯನ್ನು ಪಕ್ಕಕ್ಕೆ ಕೂಡುವಂತೆ ಮಾಡುತ್ತಿರುತ್ತಾರೆ. ಅದರಿಂದ ರೋಸಿಹೋಗಿದ್ದ ವಿಶಾಲ್ ತಂದೆಯನ್ನು ಹಲವು ಬಾರಿ ಮನಬಂದಂತೆ ಬೈದಿದ್ದ, ಹೊಡೆದಿದ್ದ ಕೂಡ ಅದಕ್ಕೆ ಮನೆಯಲ���ಲಿ ಅವನಿದ್ದರೆ ಮನೆಯೆಲ್ಲವೂ ಶಾಂತಮಯ. ವಿಶಾಲನ ಈ ಸ್ವಭಾವದಿಂದ ಬೇಸತ್ತಿದ್ದ ಗಂಗಾಬಾಯಿ ತನ್ನ ಕೆಲಸದಾಳು ಮೋಟಾರಾಮನ ಸಹಾಯದಿಂದ ಸಮೀಪದ ವೃದ್ಧಾಶ್ರಮದ ಮಾಹಿತಿಯನ್ನು ಕಲೆಹಾಕಿರುತ್ತಾಳೆ. ಯಾವಾಗ ವಿಶಾಲನ ತಂದೆಯ ಮೇಲಿನ ತಿರಸ್ಕಾರ ಭಾವ ವಿಕಾರಗೊಳ್ಳುತ್ತದೋ ಅಂದೆಯೇ ತಾವು ಗಂಡನ ಸಮೇತ ವೃದ್ಧಾಶ್ರಮ ಸೇರುವ ನಿರ್ಧಾರ ಮಾಡಿರುತ್ತಾರೆ. ಸತ್ಯನಿಗೆ ಬಾಬುರಾಯರು ಮತ್ತು ಗಂಗೂಬಾಯಿಯ ಮೇಲೆ ಅತೀವ ಪ್ರೀತಿ. ಚಿಕ್ಕಂದಿನಿಂದಲೂ ಅನಾಥವಾಗಿ ಬೆಳೆದ ಸತ್ಯನಿಗೆ ತಂದೆತಾಯಿಯ ಮಹತ್ವ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ವಿಶಾಲನಿಗೆ ತಾನು ಅವರನ್ನು ಕರೆದುಕೊಂಡು ಹೋಗುತ್ತೇನೆಂದು ಹೇಳಿರುತ್ತಾನೆ. ಆದಾಗ್ಯೂ ಅವರ ನಡುವೆ ಎಂದಿನಂತೆ ಕೆಲಸ ನಡೆಯುತ್ತಿರುತ್ತವೆ. ವಿಶಾಲನಿಗೆ ಗಂಡುಮಗುವಾದಾಗ ಬಾಬುರಾಯರ ಮರಣವಾಗುತ್ತದೆ ಆದರೆ ಅದು ತನ್ನ ಮಗನಿಂದಲೇ ಆಗಿರುತ್ತದೆ ಅಂತ ಗಂಗೂಬಾಯಿಯ ವಾದ, ಅಲ್ಲವೆಂದು ಅವರ ಮಗನ ವಾದ ಹೀಗೆ ನಡೆದು ಕೊನೆಗೆ ಗಂಗೂಬಾಯಿ ವೃದ್ಧಾಶ್ರಮ ಸೇರುತ್ತಾರೆ. ಈಗಿನ ದಿನಗಳಲ್ಲಿ ಈ ಘಟನೆಗಳು ಸರ್ವೇಸಾಮಾನ್ಯ. ದೊಡ್ಡ ಕೆನಸ್ಸಿನಬೆನ್ನೆತ್ತಿ ಮಗ ಹೋರಾಡುತ್ತಾನಾದರೂ ಕನಸ್ಸಿನ ಭರದಲ್ಲಿ ತಂದೆ ತಾಯಿಯ ಅರಿವೇ ಅವರಿಗಿರುವುದಿಲ್ಲ. ದಿನ ಕಳೆದಂತೆ ಕನಸು ನನಸಾಗುವ ದಿನಗಳು ಬಂದಾಗ ಅಪ್ಪಅಮ್ಮಂದಿರು ವೃದ್ಧರಾಗಿರುತ್ತಾರೆ. ಇನ್ನು ಕನಸನ್ನು ಮುಂದುವರೆಸಿವುದೋ ಅಥವಾ ಅಪ್ಪ ಅಮ್ಮನ ಜೊತೆ ಇರುವುದೋ ಅದೇ ದೊಡ್ಡ ಧರ್ಮಸಂಕಟ!
ಅವಸಾನ ಕಾದಂಬರಿಗೊಂದು ವಿಮರ್ಶಾ ಅವಲೋಕನ ಶ್ರೀಮತಿ ಸಹನಾ ವಿಜಯಕುಮಾರ್ ಅವರ ಕೃತಿಯ ಕುರಿತು
PART-1 If you have integrity, nothing else matters. If you don't have integrity, nothing else matters. — Alan K. Simpson ಉತ್ಥಾನ ಮತ್ತು ಅವಸಾನಗಳ ನಡುವಿನ ವ್ಯತ್ಯಾಸ ಇಷ್ಟೇ!
I. ಪ್ರಸ್ತಾವನೆ
ಶ್ರೀಮತಿ ಸಹನಾ ವಿಜಯಕುಮಾರ್ ಅವರ ಮೂರನೇ ಕೃತಿ 'ಅವಸಾನ'ವು ಒಂದು ಸಾಮಾಜಿಕ ಕಾದಂಬರಿಯಾಗಿದೆ. ಸಮಾಜವು ವ್ಯಕ್ತಿ - ಕುಟುಂಬ - ಸಂಸ್ಥೆಗಳೆಂಬ ವಿಭಿನ್ನ ಗಾತ್ರದ ಘಟಕಗಳಿಂದ ಕೂಡಿರುತ್ತದೆ. ಹಾಗೆ ನೋಡಿದರೆ ಇಡೀ ಸಮಾಜವು ನಮ್ಮ ದೇಹವನ್ನೇ ಪ್ರತಿನಿಧಿಸುತ್ತದೆ — ಪುರುಷಸೂಕ್ತದ ಹಾಗೆ. ದೇಹದ ಎಲ್ಲ ಅಂಗಗಳೂ ಒಟ್ಟಾಗಿ ಸರಿಯಾಗಿ ಕೆಲಸ ಮಾಡಿದರೆ ಮಾತ್ರವೇ ಸ್ವಾಸ್ಥ್ಯ ಇರುವಂತೆ, ಸಮಾಜದ ಈ ಘಟಕಗಳೂ ತಂತಮ್ಮ ನೆಲೆಯಲ್ಲಿ ಕರ್ತವ್ಯಪಾಲನೆಯನ್ನು ಮಾಡಿದಾಗಲೇ ಅದಕ್ಕೂ ಸ್ವಾಸ್ಥ್ಯ ಎಂಬುದಿರುತ್ತದೆ. ಆದರೆ, ಇದು ಕೇವಲ ಆಶಯವೇ ಅಥವಾ ಅದು ವಾಸ್ತವ ಸತ್ಯವೇ? ಕಾದಂಬರಿಯಲ್ಲಿ ಈ ಪ್ರಶ್ನೆಯನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ.
ಸಮಾಜವು ಒಂದು ಜೀವಂತ ಸಂರಚನೆಯಾಗಿದೆ. ಜೀವಪ್ರಭೇದಗಳಲ್ಲಿ ಸಸ್ಯ ಮತ್ತು ಪ್ರಾಣಿಸಂಕುಲಗಳಿವೆ. ಸಸ್ಯ ಸಂಕುಲದಲ್ಲಿ ಬೇರು [ಮೂಲ] ಜೀವನಾಡಿ. ಈ ಮೂಲ ಅಥವಾ ಬೇರು ಭದ್ರವಾಗಿದ್ದರೆ ಮಾತ್ರ ಕಾಂಡ, ಶಾಖಾ, ಪತ್ರ, ಪುಷ್ಪ ಮತ್ತು ಫಲಗಳು ಉಳಿದಿರುತ್ತವೆ, ಇಲ್ಲವಾದರೆ ಇಲ್ಲ — ಆಗ ಅದು ವೃಕ್ಷದ ಅವಸಾನ. ಮನುಷ್ಯಪ್ರಾಣಿಯ ಸಮಾಜದಲ್ಲಿ ಯಾವುದು ಅಂತಹ ಮೂಲ? ಹಿರಿಯ ತಲೆಮಾರುಗಳೊಡನೆಯ ಬಾಂಧವ್ಯವೋ ಅಥವಾ ತಲತಲಾಂತರದಿಂದ ಬಂದ ಮೌಲ್ಯಗಳೋ? ಬಾಂಧವ್ಯವನ್ನು ಬೆಸೆಯುವ ಸಂವೇದನೆಗಳು, ಅವು ನೀಡುವ ಸಂಸ್ಕಾರಗಳು, ಅದು ಬೆಳೆಸುವ ಚಿಂತನೆಗಳು, ಹಾಗೂ ಚಿಂತನೆಗಳಿಂದ ಉದಿಸುವ ಅನುಷ್ಠಾನಗಳಲ್ಲಿ ಅಂತರ್ವಿರೋಧ ಮೂಡಿದರೆ? ಅಂತರ್ವಿರೋಧವು ಸಂಘರ್ಷಕ್ಕೆ ಎಳೆಸಿದರೆ ಮೌಲ್ಯಗಳ ಗತಿ ಏನು?
ಇಲ್ಲಿ ಬೇರನ್ನು (ವಂಶದ ಹಿರಿಯರು) ಕಳೆದೂ ಸಂತಾನ ಉಳಿಯಬಹುದು; ಜೊತೆಗೆ ಮೌಲ್ಯವೇ ಕಳೆದುಹೋದರೆ ಏನಾಗಬಹುದು? ಅದು ವ್ಯಕ್ತಿಯಿಂದ ಮೊದಲಾಗಿ ರಾಷ್ಟ್ರದ ವರೆಗೆ ಎಲ್ಲದರ ಅವಸಾನ. ಕಾದಂಬರಿಯ ಪ್ರಮುಖ ಪಾತ್ರವಾದ ಗಂಗಾಬಾಯಿ ಎಂಬ ಸಾಧ್ವೀಮಣಿಯ ಪ್ರಶ್ನೆಯ ಮೂಲಕ ಪ್ರಮುಖವಾದ ಈ ತಾತ್ತ್ವಿಕ ವಿಚಾರವನ್ನು ಕಾದಂಬರಿಯ ವಸ್ತುವಿಗೆ ಬೆಸೆಯಲಾಗಿದೆ. ಈ ಮೌಲ್ಯಗಳನ್ನು ಪಾತ್ರಗಳು ಗ್ರಹಿಸುವ ವೈವಿಧ್ಯಗಳು ಅನಾವರಣಗೊಳ್ಳುತ್ತ ಕಾದಂಬರಿಯು ಬೆಳೆಯುತ್ತದೆ. ಹೇಗೆ ಎಂಬುದನ್ನು ನೋಡೋಣ.
II. ಕಥಾಸಾರ
ತಾತ್ತ್ವಿಕ ಚರ್ಚೆಗೆ ಇಳಿಯುವ ಮೊದಲು, ಕಾದಂಬರಿಯ ಕಥಾಹಂದರವನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದು ಸೂಕ್ತ. ಮುಂದಿನ ವಿಶ್ಲೇಷಣೆಯು ಕಾದಂಬರಿಯನ್ನು ಓದದ ವಾಚಕರಿಗೂ ಅರ್ಥವಾಗಲಿ ಎಂಬ ಉದ್ದೇಶದಿಂದ ಇದನ್ನು ಇಲ್ಲಿ ನೀಡಲಾಗುತ್ತಿದೆ.
ಸೊಲ್ಲಾಪುರ ಎಂಬ ಚಿಕ್ಕ ಪಟ್ಟಣದಲ್ಲಿ ಬಾಬುರಾವ್ ಮೋಹಿತೆ ಎಂಬ ಉದ್ಯಮಿಯ ಕುಟುಂಬದ ಕಥೆಯಾಗಿ ಆತನ ಹಠಮಾರಿತನ - ಕೀಳರಿಮೆ - ಉದ್ಯಮದ ನಷ್ಟ - ಕ್ರಿಯಾಹೀನತೆ - ತನ್ನವರ ಮೇಲೆ ತೋರುವ ದರ್ಪ ಮತ್ತು ಅಸಹಕಾರ - ತತ್ಕಾರಣವಾಗಿ ಮಗನಲ್ಲಿ ತಲೆಯೆತ್ತುವ ರೋಷ, ತಿರಸ್ಕಾರಗಳು - ಸಂಘರ್ಷ - ತಾಯಿ ಗಂಗಾಬಾಯಿಯ ಅಸಹಾಯಕತೆ - ಮಗ ವಿಶಾಲನ ಮಹತ್ವಾಕಾಂಕ್ಷೆ - ಆತನಿಗೆ ದೊರೆಯುವ ಸಹೃದಯಿ ಮಾಸ್ತರರ ಸಹಾಯ - ವಿಶಾಲನು ಸ್ಥಾಪಿಸಿ ನಡೆಸುವ ಸರ್ಕ್ಯೂಟ್ ಬೋರ್ಡ್ ವಿನ್ಯಾಸ ಮತ್ತು ಉತ್ಪಾದನಾ ಕಂಪನಿ - ಸೊಸೆ ಸುಲಭಾ ಹಾಗೂ ಆಕೆಯ ತವರಿನ ಚಿತ್ರಣ ಒಂದು ಕಡೆಯಿದೆ.
ಬೊಂಬಾಯಿಯ ಕಾಮಾಠಿಪುರ, ಅಲ್ಲಿನ ವೇಶ್ಯಾವಾಟಿಕೆ, ವೇಶ್ಯೆಯರ ಬದುಕಿನ ಅನಿವಾರ್ಯತೆಗಳು, ಭಾವಹೀನವಾದ ಅವರ ಬದುಕು, ಅವರುಗಳ ಶೋಷಣೆಯ ಮೂಲಕ ಹೊಟ್ಟೆಹೊರೆದುಕೊಳ್ಳುವ ಇಡೀ ಒಂದು ವ್ಯವಸ್ಥೆ, ದಿಕ್ಕು ದೆಸೆಯಿಲ್ಲದೆ ಬೆಳೆಯುವ ಅವರ ಮಕ್ಕಳ ಚಿತ್ರಣ ಮತ್ತೊಂದು ಕಡೆಯಿದೆ. ಇದರ ನಡುವೆ ಕಾಮಾಠಿಪುರದ ಸೇವಾಸಂಸ್ಥೆ, ವೃದ್ಧಾಶ್ರಮ, ಆತ್ಮಾರಾಮರ ಅನಾಥಾಶ್ರಮಗಳು ಬರುತ್ತವೆ. ಅನಾಥಾಶ್ರಮದಲ್ಲಿ ಪಾಂಡುರಂಗ ವಿಠ್ಠಲನೇ ತಾಯಿ-ತಂದೆಯಾಗಿ ಪೊರೆಯುತ್ತಾನೆಂದು ಪರಿಭಾವಿಸಿ ಬೆಳೆಯುವ ಮಕ್ಕಳು, ಆಶ್ರಮದ ಭಯಮುಕ್ತ ಬದುಕು, ಭಕ್ತಿಯ ಅಭಿವ್ಯಕ್ತಿ ಮತ್ತು ವಾರಿಕರಿ ಸಂಪ್ರದಾಯ, ಆ ಮೂಲಕವಾಗಿ ಅಂತರ್ಗತವಾಗಿಸಿಕೊಳ್ಳುವ ಸೇವಾಭಾವ ಮೊದಲಾದ ವಿಚಾರಗಳು ಕಾದಂಬರಿಯನ್ನು ಆವರಿಸಿಕೊಂಡಿವೆ.
ಕಾದಂಬರಿಯ ಆರಂಭವೂ ಸತ್ಯನ ಪ್ರವೇಶದಿಂದ ಆಗುತ್ತದೆ ಮತ್ತು ಮುಕ್ತಾಯವೂ ಅವನ ನಿರ್ಗಮನದಿಂದಲೇ ಆಗುತ್ತದೆ. ಸತ್ಯ ಎಂಬ ಯುವಕನ ಪಾತ್ರವು ಈ ಎರಡೂ ಪ್ರಪಂಚಗಳನ್ನು ಬಂಧಿಸುವ ಸಾಮಾನ್ಯ ಎಳೆಯಾಗಿ ಚಿತ್ರಿಸಲ್ಪಟ್ಟಿದೆ — ಅಸಭ್ಯ ಪ್ರಪಂಚವೆಂಬ ಕಾಮಾಠಿಪುರದ ಝೋಪಡಿಯಿಂದ, ದೀದಿ ಎಂಬ ಸಮಾಜಸೇವಕಿಯ ಸಂಸ್ಥೆಯ ಮೂಲಕ, ಆತ್ಮಾರಾಮರ ಅನಾಥಾಶ್ರಮಕ್ಕೆ, ಅಲ್ಲಿಂದ ಸಭ್ಯ ಸಮಾಜದ ವಿದ್ಯಮಾನಗಳಲ್ಲಿ ಸಕ್ರಿಯ ಪಾತ್ರವಾಗಿ ತೊಡಗಿಕೊಳ್ಳುವ ಆತನ ಯಾತ್ರೆ ಕಾದಂಬರಿಯ ಬೆನ್ನೆಲುಬು.
III. ಎರಡು ಧ್ರುವಗಳು — ಕಾದಂಬರಿಯ ರಚನಾ ವಿನ್ಯಾಸ
ಅವಸಾನವು ಸಮಕಾಲೀನ ಸಮಾಜದ ಪರೀಕ್ಷೆಗೆ ಎರಡು ಧ್ರುವಗಳನ್ನು ಆಯ್ದುಕೊಂಡಿದೆ. ಅದನ್ನು ನಾವು 'ಸಭ್ಯ' ಸಮಾಜ ಮತ್ತು 'ಅಸಭ್ಯ' ಸಮಾಜ ಎಂದು ಸ್ಥೂಲವಾಗಿ ಗುರುತಿಸಬಹುದು. ಸಮಾನಾಂತರವಾದ ಎರಡು ಸಮಾಜಗಳನ್ನು ಹಿಡಿದು ಒಂದನ್ನು ಮತ್ತೊಂದಕ್ಕೆ ಸಂವಾದಿಯಾಗಿ ತರಲಾಗಿದೆ ಮತ್ತು ಸಾಮಾನ್ಯ ಎಳೆಯೊಂದರ ಮೂಲಕ ಎರಡನ್ನೂ ಬಂಧಿಸಲಾಗಿದೆ. ಈ ಎಲ್ಲ ವಿದ್ಯಮಾನಗಳ ಪರಿಸರಗಳು ತಮ್ಮಿಂದ ತಾವೇ ಸ್ವತಂತ್ರ ಘಟಕಗಳೆನ್ನಿಸಿದ್ದಾಗ್ಯೂ Watertight compartments ಅಲ್ಲ; ಸಂವಹನವಿದೆ.
'ಸಭ್ಯ' ಸಮಾಜದ ಚಿತ್ರಣ ಈ 'ಸಭ್ಯ' ಸಮಾಜದಲ್ಲಿ ಕುಟುಂಬಗಳಿವೆ ಮತ್ತು ಅವುಗಳೊಳಗೆ ವ್ಯಕ್ತಿಗಳಿದ್ದಾರೆ. ಆ ವ್ಯಕ್ತಿಗಳ ವ್ಯಕ್ತಿತ್ವಗಳೇ ಪಾತ್ರಗಳಾಗಿವೆ. ಈ ಕುಟುಂಬಗಳಲ್ಲಿ ವಿವಿಧ ಬಗೆಗಳಿವೆ. ಅಂತರ್ವಿರೋಧ, ವಿರೋಧಾಭಾಸ ಮತ್ತು ಮೌಲ್ಯಸಂಘರ್ಷಗಳಿಂದ ಕೂಡಿದ ಕುಟುಂಬಗಳಿಗೆ ಬಾಬುರಾವ್ - ಗಂಗಾಬಾಯಿ, ಅವರ ಮಗ ವಿಶಾಲ್ ಹಾಗೂ ಆತನ ಪತ್ನಿ ಸುಲಭಾ ಪ್ರತಿನಿಧಿಯಾಗಿದ್ದಾರೆ. ಇದಕ್ಕೆ ಸಂವಾದಿಯಾಗಿ ಸುಹೃದಭಾವ ಹಾಗೂ ಮೌಲ್ಯಸಾಮ್ಯ-ಸ್ವೀಕೃತಿಗಳಿರುವ ಕುಟುಂಬಗಳಿಗೆ ಸುಲಭಾಳ ತವರಿನ ಸಮೀರ, ಅವನ ತಾಯಿ, ಅತ್ತಿಗೆ ಮತ್ತು ತಂದೆಯರಿದ್ದಾರೆ. ವಿಶಾಲನ ಬುದ್ಧಿಪ್ರಾಧಾನ್ಯದ ವ್ಯವಹಾರ ಪ್ರೇರಿತ ನೀತಿ ನಿರ್ಧಾರಗಳಿಗೆ ಸಂವಾದಿಯಾಗಿ ಭಾವಪ್ರಧಾನತೆಯೇ ದಿಗ್ದರ್ಶಿಯಾದ ಸಮೀರನ ಕುಟುಂಬವಿದೆ.
ಬಾಬುರಾಯರ ಮಲತಾಯಿ ಮತ್ತು ಮಲ ಸಹೋದರರ ಸ್ವಾರ್ಥಪರತೆ ಮತ್ತು ಶೋಷಣೆ-ದಬ್ಬಾಳಿಕೆಗಳ ಪಾತ್ರಗಳಿಗೆ ಸಂವಾದಿಯಾಗಿ ಕರ್ತವ್ಯಪರತೆ ಮತ್ತು ಪ್ರೀತ್ಯಾದರಗಳನ್ನು ಆಚರಿಸುವ ಗಂಗಾಬಾಯಿಯ ತವರಿನ ಸಹೋದರರಿದ್ದಾರೆ. ಸ್ವಾರ್ಥ ದಬ್ಬಾಳಿಕೆಗಳನ್ನು ಗುರುತಿಸಿಯೂ ಭಾವ ಮತ್ತು ಬುದ್ಧಿಗಳ ಸಮನ್ವಯವನ್ನು ಬಾಬೂರಾಯರ ಹಾಗೆ ಸಾಧಿಸದೇ ಹೋದರೆ ಏನಾಗಬಹುದು? ಈ ಅಸಂಬದ್ಧ ನಡೆಗೆ ಸಂವಾದಿಯಾಗಿ ಸುಲಭಾಳ ತಂದೆ, ವಿಶಾಲನ ಸ್ನೇಹಿತರಿಗಿರುವಂತೆ ಹೊಣೆ ಹೊತ್ತು ನಡೆಸುವ ತಂದೆಯರಿದ್ದಾರೆ.
ತಮ್ಮ ಆಂತರ್ಯದಲ್ಲಿ ಸೌಹಾರ್ದಭಾವದಿಂದ ಸಶಕ್ತವಾಗಿ ಅಥವಾ ಅಂತರ್ವಿರೋಧ-ಸಂಘರ್ಷಗಳಿಂದ ದುರ್ಬಲವಾಗಿ ಕೌಟುಂಬಿಕ ಸ್ವರೂಪವನ್ನು ತಕ್ಕಮಟ್ಟಿಗೆ ಉಳಿಸಿಕೊಂಡಿರುವ ಪೂರ್ಣ ಕುಟುಂಬಗಳ ಜತೆಗೇ, ಒಂದು ಕಾಲದಲ್ಲಿ ಸಭ್ಯ ಸಮಾಜದ ಭಾಗವಾಗಿದ್ದು ಈಗ ಒಡೆದು ಹೋದ ಕುಟುಂಬಗಳಿವೆ. ಭಾವವೇ ಪ್ರಧಾನವಾಗಿರಬೇಕಾದ ಕಡೆಯಲ್ಲಿ ವ್ಯವಹಾರ ಪ್ರಾಧಾನ್ಯತೆಯು ಇಣುಕಿದಾಗ ಪರಿಣಾಮ ಏನಾಗುತ್ತದೆ? ಅದು ಕುಟುಂಬ ವ್ಯವಸ್ಥೆಯ ಅವಸಾನ! ಈ Decline — ಕ್ಷೀಣಿಸುವ ಪ್ರಕ್ರಿಯೆಗೆ ಸಿಲುಕಿದ ಕುಟುಂಬಗಳ ಚಿತ್ರಣ ಕಾದಂಬರಿಯಲ್ಲಿದೆ.
ಒಂದು ಕಾಲದಲ್ಲಿ ಸಂಘಟಿತವಾಗಿದ್ದ ಕುಟುಂಬಗಳು ವಿಘಟಿತವಾಗಿ, ಇಲ್ಲಿ ಕುಟುಂಬ ಎನ್ನುವುದು ಕೇವಲ ಭೂತಕಾಲದ ಪ್ರೇತಛಾಯೆಯಾಗಿ ಕಾಣುತ್ತದೆ. ಅದೊಂದು ನೆನಪು ಮಾತ್ರ — ಬದುಕಿದ್ದೂ ಸತ್ತಂತಿರುವ ಹಲವಾರು ವೃದ್ಧರ ವೃದ್ಧಾಶ್ರಮದಲ್ಲಿ! ಒಬ್ಬೊಬ್ಬರದ್ದು ಒಂದೊಂದು ಬಗೆಯ ಕಥೆ-ಕಾರಣಗಳಿದ್ದರೂ ಕೂಡಾ ಪರಿಣಾಮ ಮಾತ್ರ ಏಕರೂಪವಾಗಿದೆ. ಎಲ್ಲರೂ ಪರಿತ್ಯಕ್ತರು — ಜೀವನ ಸಂಧ್ಯೆಯಲ್ಲಿ! ಇದು ಬದುಕಿನ ಧ್ಯೇಯವೇ (ಜಿಜೀವಿಷ) ಕಂಡಂಥ ಅವಸಾನವೇ? ತನ್ನವರೆಂದು ತಿಳಿದವರ ತಿರಸ್ಕಾರದ ನಡುವೆ ಸಂಬಂಧವೇ ಇಲ್ಲದವರು ಬಂದು ಅಕ್ಕರೆ ತೋರುವ ವಿರೋಧಾಭಾಸದಲ್ಲಿ ಇರುವ ಪ್ರಕ್ರಿಯೆಯನ್ನು ಕೂಡಾ ಸಾಂದರ್ಭಿಕವಾಗಿ ತರಲಾಗಿದೆ. ಇದು ಈ ಪ್ರಪಂಚದಲ್ಲಿರುವ ಜೀವಪ್ರೀತಿಯ ದರ್ಶನವೂ ಹೌದು.
ಸಭ್ಯ ಎಂಬ ಈ ಸಮಾಜದೊಳಗೆ ಅಸಭ್ಯತೆಯ ಮೃಗೀಯ ಕ್ರೌರ್ಯವೂ ಗೋಮುಖ ವ್ಯಾಘ್ರವಾಗಿ ಅಸ್ತಿತ್ವದಲ್ಲಿರುತ್ತದೆ. ಸೂಕ್ತ ಬಲಿ ಸಿಕ್ಕಿದಾಗ ಪ್ರಕಟವಾಗುತ್ತದೆ. ಅದು ನೇತ್ರಾಳಿಗೆ ಆದಂತೆ! ಅದು ಅಸಭ್ಯ ಜಗತ್ತಿನಿಂದ ಸಭ್ಯ ಜಗತ್ತಿಗೆ ಇರಬಹುದಾದ ಪರಿವರ್ತನೆಯ ಸಾಧ್ಯತೆಯೇ ಕಂಡ ಅವಸಾನ.
ಈ ಸಭ್ಯ ಸಮಾಜ ಎಂದು ಗುರುತಿಸಿಕೊಂಡಿರುವಲ್ಲಿ ಚಟುವಟಿಕೆಗಳು ಹಗಲಿನಲ್ಲಿ ನಡೆಯುತ್ತವೆ. ರಾತ್ರಿಗಳಲ್ಲಿ ನಿಯಮದಂತೆ ಸುಪ್ತಾವಸ್ಥೆಗೆ ಜಾರುವುದು ಇಲ್ಲಿನ ಲಕ್ಷಣವಾಗಿದೆ. ರುಖುಮಾಬಾಯಿ ಎಂಬ ಪಾತ್ರದ ಸಂಸಾರದ ಕಥೆಯಲ್ಲಿ ಬಡವರ ಮನೆಯ ಹೆಣ್ಣು ಸೊಸೆಯಾಗಿ ಹೊಂದಿಕೊಂಡು ಹೋಗಬಹುದೆಂಬ ವಿಶ್ವಾಸದ ಅವಸಾನವಿದೆ. ಗೋಗಟೆ ಸಾಹೇಬರ ಸಂಸಾರದ ತಲ್ಲಣವಿದೆ. ಈ ಬಗೆಯ ಸಂಘರ್ಷಗಳು ಏರ್ಪಡುವುದೇಕೆ ಎಂಬ ಪ್ರಶ್ನೆಗೆ ಉತ್ತರವು ವಿಶಾಲನ ಕಂಪನಿಯ ಸರ್ಕ್ಯೂಟ್ ಬೋರ್ಡ್ ವಿನ್ಯಾಸ ಮತ್ತು ಉತ್ಪಾದನೆಗಳ ವಿವರಗಳಲ್ಲಿವೆ. ಮೋಟಾರಾಮನೆಂಬ ಮನೆಯಾಳಿನ ಮುಗ್ಧವಾದರೂ ಗಹನವಾದ ಮಾತುಗಳಲ್ಲಿದೆ.
'ಅಸಭ್ಯ' ಸಮಾಜದ ಚಿತ್ರಣ 'ಸಭ್ಯ' ಸಮಾಜಕ್ಕೆ ಮತ್ತೊಂದು ಧ್ರುವದಲ್ಲಿ 'ಅಸಭ್ಯ' ಎಂದು ಸಭ್ಯರಿಂದ ಗುರುತಿಸಲ್ಪಟ್ಟಿರುವ ಮತ್ತು 'ಸಭ್ಯ'ರಿಂದಲೇ ಬಹುಮಟ್ಟಿಗೆ ತನ್ನ ಜೀವಮೂಲವನ್ನು ಪಡೆದುಕೊಳ್ಳುವ ಪ್ರಪಂಚವಿದೆ. ಸಭ್ಯ ಸಮಾಜದಲ್ಲಿ ಇರುವಂತೆ ಈ ಪ್ರಪಂಚದಲ್ಲಿ ಕುಟುಂಬಗಳಿಲ್ಲ; ಕೇವಲ ವ್ಯಕ್ತಿಗಳಿದ್ದಾರೆ. ಈ ವ್ಯಕ್ತಿಗಳು ಹೆಣ್ಣುಗಳು. ವೃದ್ಧಾಪ್ಯದ ಬದಲಿಗೆ ಇವರುಗಳು ಯೌವ್ವನದಲ್ಲಿಯೇ ತಮ್ಮವರಿಂದ ದೈಹಿಕ-ಮಾನಸಿಕವಾಗಿ ಪರಿತ್ಯಕ್ತರಾದವರು!
ಸಭ್ಯ ಸಮಾಜದ ತೆವಲುಗಳನ್ನು ತಣಿಸುವ ಸೂಳೆಯರೆಂಬ ಬೆಲೆವೆಣ್ಣುಗಳು ಮತ್ತು ಅವರಿಗೆ ಬೇಕಿದ್ದೋ ಬೇಡದ್ದೋ ಆಗಿ ಹುಟ್ಟಿದ ತಂದೆಯರೇ ಇಲ್ಲದ ಮಕ್ಕಳುಗಳು. ಸೂಳೆಯರನ್ನು ಬಳಸಿಕೊಂಡು ಹೊಟ್ಟೆ ಹೊರೆಯುವ ಉಪಜೀವಿಕೆಗಳು ಹಾಗೂ ಸೂಳೆಯರನ್ನು ಅನುಭವಿಸಿ ಕರಗಿ ಹೋಗುವ ವಿಟರ ಟೋಳಿ - ಎಲ್ಲವೂ ಈ ಪ್ರಪಂಚದ ಭಾಗಗಳು.ಇದು ಬೆಳಗಿನಲ್ಲಿ ಮಲಗಿ ಕತ್ತಲೆಯಲ್ಲಿ ಗರಿಗೆದರುವ ಜಗತ್ತು! ಇಲ್ಲಿ ವ್ಯವಹಾರವೇ ಪ್ರಧಾನ ಮತ್ತು ಭಾವವು ಗೌಣ ಅಥವಾ ಅನಪೇಕ್ಷಣೀಯ! ಒಂದು ವೇಳೆ ವ್ಯವಹಾರದ ಬದಲಿಗೆ ಭಾವಪ್ರಾಧಾನ್ಯತೆ ಮುನ್ನೆಲೆಗೆ ಬಂದರೆ ಇಲ್ಲಿ ಏನಾಗುತ್ತದೆ? ಆಗ ಜೀವಕ್ಕೂ, ವೃತ್ತಿಗೂ ಏಕ ಕಾಲದಲ್ಲಿ ಕುತ್ತು ಬರುತ್ತದೆ. ಚಂದ್ರಾ ಎಂಬ ವೇಶ್ಯೆಗೆ ಮತ್ತು ಕರಿ ಟೋಪಿಯ ಗಂಡಿಗೆ ಆದಂತೆ!
ಈ ಪ್ರಪಂಚದಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲ ಹಾಗೂ ಸಂತಾನಗಳನ್ನು ಕುರಿತಾಗಿ ವಿಶೇಷ ಆಶೋತ್ತರಗಳಿಲ್ಲ. ಇಲ್ಲಿ ಅಸ್ಮಿತೆ-ಅಸ್ತಿತ್ವ ಎಂಬುದಿಲ್ಲ; ಅವಸಾನವೇ ಸ್ವತಃ ಜನ್ಮತಾಳುತ್ತದೆ ಎಂದೆನಿಸುತ್ತದೆ. ಈ ಪರಿಸರದಲ್ಲಿ ಹುಟ್ಟಿಯೂ ಸಾಮಾನ್ಯ ವಿಧಿಯನ್ನು ಮೀರಲು ಸಾಧ್ಯವೇ? ಚಂದ್ರಾ ಎಂಬ ಹೆಸರಿನ ಸೂಳೆಯ ಮಗ, ಮುನ್ನಾ ಎಂಬ ಬಾಲಕನು 'ಸತ್ಯ' ಎಂಬ 'ಸತ್ಯಕಾಮನಾಗಿ' ಬೆಳೆಯುವ ಸಾಧ್ಯತೆಯಿದೆ — ಎಲ್ಲ ನಿಯಮಗಳಿಗೂ ಅಪವಾದವಿರುವಂತೆ! ಹಾಗೆ ಆದಾಗ, ಅದು ಅವಸಾನದ ಅವಸಾನ! ಅವಸಾನದ ಅವಸಾನದಲ್ಲಿ ಮರುಹುಟ್ಟಿದೆ! ಇಂತಹ ಪ್ರಕ್ರಿಯೆಯೇ ಪ್ರಪಂಚದ ವಿಸ್ಮಯ ಹಾಗೂ ಇಂತಹ ವ್ಯಕ್ತಿತ್ವಗಳೇ ಸಮಾಜದ ಅಮೃತ ಬಿಂದುಗಳು. ಅದರ ಸಮಗ್ರ ಚಿತ್ರಣವು ಕಾದಂಬರಿಯಲ್ಲಿದೆ.
ಹಾಗಾದರೆ ಈ ಪ್ರಪಂಚದಿಂದ ಬಿಡುಗಡೆ ಇದೆಯೇ? ಈ ಅವಸಾನವನ್ನು ಮೆಟ್ಟಿ ಉತ್ಥಾನದ ಮಾರ್ಗಕ್ಕೆ ಹೊರಳುವ ಬಗೆ ಹೇಗೆ? ಒಳಗಿನ ವ್ಯವಸ್ಥೆಯು ಸಹಕಾರಿ ಅಲ್ಲದ ಕಾರಣ ಹೊರಗಿನ ಒಂದು ಶಕ್ತಿ ಬೇಕು. ವಾಸ್ತವದ ನೆಲೆಯಿಂದ ನೋಡಿದಾಗ ಕಾದಂಬರಿಯಲ್ಲಿ ದೀದಿಯ ಸ್ವಯಂಸೇವಾ ಸಂಸ್ಥೆಯನ್ನು ಹಾಗೂ ಆತ್ಮಾರಾಮರ ಆಶ್ರಮಗಳನ್ನು ಪರಸ್ಪರ ಸಂವಾದಿಗಳಾಗಿ ತರಲಾಗಿದೆ. ಸ್ವಯಂಸೇವಾ ಸಂಸ್ಥೆಗೆ ಅದೊಂದು ವ್ಯಾವಹಾರಿಕ ಉದ್ಯೋಗ — ಹಾಗಾಗಿ ಸೇವೆಯಲ್ಲಿ ಸಮರ್ಪಣೆ ಇರಬೇಕೆಂದೇನೂ ಇಲ್ಲ. ಉದಾತ್ತ ಸೇವೆಯಲ್ಲಿ ತೊಡಗಿಕೊಂಡಾಗ್ಯೂ ಲೈಂಗಿಕ ಶೋಷಣೆಯು ತೋರಿಕೊಂಡು, ಅದಕ್ಕೆ ದೀದಿಯೇ ಬಲಿಯಾಗಿ, ದೀದಿಯ ಸೇವಾಸಂಸ್ಥೆಯು ಸೇವಾಧ್ಯೇಯದ ಅವಸಾನವನ್ನು ಪ್ರತಿನಿಧಿಸುತ್ತದೆ. ನಿರಪೇಕ್ಷ, ನಿಸ್ವಾರ್ಥ, ನಿರಹಂಕಾರ ಭಾವಗಳ ಆವಾಹನೆಯ ಮೂಲಕ, ಭಕ್ತಿ ಮಾರ್ಗದ ಸ್ವೀಕಾರದಿಂದ ಸೇವಾ ಸಮರ್ಪಣೆಗೆ ತೊಡಗಿಸುವ ಆತ್ಮಾರಾಮರ ಆಶ್ರಮವು ಉತ್ಥಾನದ ಮಾರ್ಗವನ್ನು ತೋರಿಸುತ್ತದೆ.
IV. ವಾರಿಕರಿ ಸಂಪ್ರದಾಯ — ಒಂದು ಪರಿಚಯ
ಕಾದಂಬರಿಯ ಆಧ್ಯಾತ್ಮಿಕ ಬೆನ್ನೆಲುಬಾಗಿ ನಿಲ್ಲುವ ವಾರಿಕರಿ ಸಂಪ್ರದಾಯದ ಸ್ವಲ್ಪ ಪರಿಚಯ ಇಲ್ಲಿ ಅವಶ್ಯಕ. ಮಹಾರಾಷ್ಟ್ರೇತರ ಓದುಗರಿಗೆ ಈ ಹಿನ್ನೆಲೆ ತಿಳಿಯದಿದ್ದರೆ ಕಾದಂಬರಿಯ ಅಂತ್ಯಭಾಗದ ಮಹತ್ತ್ವ ಅರ್ಥವಾಗಲಾರದು.
ವಾರಿಕರಿ ಸಂಪ್ರದಾಯವು ಮಹಾರಾಷ್ಟ್ರದ ಪಂಢರಾಪುರದ ವಿಠ್ಠಲ (ಪಾಂಡುರಂಗ, ವಿಠೋಬ) ದೇವರ ಭಕ್ತಿ ಪರಂಪರೆ. ೧೩ನೇ ಶತಮಾನದ ಜ್ಞಾನೇಶ್ವರ, ನಾಮದೇವ, ಏಕನಾಥ ಮತ್ತು ೧೭ನೇ ಶತಮಾನದ ತುಕಾರಾಮ ಮೊದಲಾದ ಸಂತ ಕವಿಗಳ ಅಭಂಗಗಳ ಮೂಲಕ ಈ ಪರಂಪರೆ ಮಹಾರಾಷ್ಟ್ರದ ಮನೆಮನೆಯಲ್ಲಿ ಬೇರೂರಿದೆ. 'ವಾರಿಕರಿ' ಎಂದರೆ ವರ್ಷಕ್ಕೆ ಎರಡು ಬಾರಿ ಪಂಢರಾಪುರಕ್ಕೆ ವಾರಿ (ಪಾದಯಾತ್ರೆ) ಹೋಗುವವರು.
ಈ ಸಂಪ್ರದಾಯದ ತಾತ್ತ್ವಿಕ ಮೂಲ ಜಾತಿ-ಲಿಂಗ-ಸ್ಥಾನಮಾನಗಳನ್ನು ಭಕ್ತಿಯ ಮೂಲಕ ಅತಿಕ್ರಮಿಸುವ ಸಮಾನತೆ. ಪಂಢರಾಪುರದ ವಿಠ್ಠಲನು ತನ್ನ ಸೊಂಟಕ್ಕೆ ಕೈ ಇಟ್ಟು ನಿಂತ ಭಂಗಿಯಲ್ಲಿ ಎಲ್ಲರನ್ನೂ ಸ್ವಾಗತಿಸುತ್ತಾನೆ — ಯಾರನ್ನೂ ತಿರಸ್ಕರಿಸದ ದೇವರ ಪ್ರತಿಮೆ. ಎಲ್ಲ ಜೀವಗಳಲ್ಲಿ ವಿಠ್ಠಲನನ್ನು ಕಾಣುವ ಸೇವಾಭಾವವೇ ಇಲ್ಲಿನ ಕೇಂದ್ರ ಬಿಂದು — ಇನ್ನೊಬ್ಬರ ಸೇವೆಯೇ ಭಗವಂತನ ಪೂಜೆ.
ಕಾದಂಬರಿಯಲ್ಲಿ ಆತ್ಮಾರಾಮರ ಆಶ್ರಮವು ಈ ಸಂಪ್ರದಾಯದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಬೆಳೆಯುವ ಮಕ್ಕಳು ಪಾಂಡುರಂಗ ವಿಠ್ಠಲನನ್ನೇ ತಾಯಿ-ತಂದೆಯಾಗಿ ಭಾವಿಸಿ ಬೆಳೆಯುತ್ತಾರೆ. ಪಂಢರಾಪುರದ ಯಾತ್ರೆಯು ಆಶ್ರಮದ ಮಕ್ಕಳಿಗೆ ಆತ್ಮಸಂಸ್ಕಾರದ ಶಾಲೆ. ಸತ್ಯನ ಆಂತರಿಕ ದೃಢತೆ, ಅವನ 'ಕಾಮನ್ ಗ್ರೌಂಡ್' — ಇದೇ ಆಶ್ರಮ ಮತ್ತು ವಾರಿಕರಿ ಸಂಸ್ಕಾರದ ಫಲ. ಮುನ್ನಾ ಎಂಬ ಬಾಲಕನಲ್ಲಿ ಆತನ ತಾಯಿಯಿಂದ ಬಿತ್ತಲ್ಪಟ್ಟ ಮೌಲ್ಯದ ಬೀಜವು ಅಂಕುರಿಸಿ ಬೆಳೆಯುತ್ತಾ 'ಸತ್ಯ'ನೆಂದಾಗುವ ಪ್ರಕ್ರಿಯೆಯಲ್ಲಿ ಅವನತ ಜೀವವೊಂದು ಉನ್ನತ ಧ್ಯೇಯಕ್ಕೆ ತೆತ್ತುಕೊಳ್ಳುವ ಪ್ರಕ್ರಿಯೆಯು ಆತ್ಮಾರಾಮರ ಆಶ್ರಮದಲ್ಲಿ ಸಾಕಾರವಾಗುತ್ತದೆ. ಪಂಢರಾಪುರದ ವಾರಿಕರಿ ಯಾತ್ರೆಯ ರೂಪದಲ್ಲಿ ಅದು ಅಭಿವ್ಯಕ್ತಿಗೊಂಡಿದೆ. ಇಲ್ಲಿ ಬಿಡುಗಡೆಯಿದೆ, ಅವಸಾನದ ಅವಸಾನವಿದೆ ಮತ್ತು ಉತ್ಥಾನದ ದಿಕ್ಸೂಚಿಯೂ ಇದೆ.
V. ಸರ್ಕ್ಯೂಟ್ ಬೋರ್ಡ್ — ಕಾದಂಬರಿಯ ಕೇಂದ್ರ ಪ್ರತಿಮೆ
ಅವಸಾನ ಕಾದಂಬರಿಯ ಅತ್ಯಂತ ವಿಶಿಷ್ಟ ಮತ್ತು ಬೌದ್ಧಿಕವಾಗಿ ಪ್ರಭಾವಶಾಲಿ ಲಕ್ಷಣವೆಂದರೆ ಅದು ಸರ್ಕ್ಯೂಟ್ ಬೋರ್ಡನ್ನು ಕೇವಲ ಒಂದು ವ್ಯಾವಹಾರಿಕ ಸಂಸ್ಥೆಯ ಭಾಗವಾಗಿ ಚಿತ್ರಿಸದೆ, ಅದನ್ನು ಕಾದಂಬರಿಯ ಸಮಾಜ ಮತ್ತು ತಾತ್ತ್ವಿಕ ಆಶಯಗಳ ಸಂಪೂರ್ಣ ರೂಪಕವನ್ನಾಗಿ ಪರಿವರ್ತಿಸಿರುವ ರೀತಿ. ಈ ಸರ್ಕ್ಯೂಟ್ ಬೋರ್ಡಿನ ಪ್ರತಿಮಾತ್ಮಕ ಅನ್ವಯವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನು ರಚಿಸಬಹುದು! ಸಾಹಿತ್ಯದ ಗೆಲುವಿರುವುದು ಇಂತಹ ಅಭಿವ್ಯಕ್ತಿಗಳಲ್ಲಿ. ಸಂಕ್ಷಿಪ್ತವಾಗಿ ಇಲ್ಲಿ ನೋಡೋಣ.
ಸರ್ಕ್ಯೂಟ್ ಬೋರ್ಡ್ ಎಂದರೇನು? ಸರ್ಕ್ಯೂಟ್ ಬೋರ್ಡ್ (Printed Circuit Board) ಎಂಬುದು ವಿದ್ಯುನ್ಮಾನ ಘಟಕಗಳನ್ನು ಅಳವಡಿಸಿ ಸಂಪರ್ಕಿಸುವ ತಳಹದಿ. ಇದರಲ್ಲಿ ಅನೇಕ ಪದರುಗಳು (Layers) ಇರುತ್ತವೆ — ಪ್ರತಿ ಪದರವೂ ತನ್ನದೇ ವಿದ್ಯುತ್ ಮಾರ್ಗಗಳನ್ನು ಒಳಗೊಂಡಿರುತ್ತದೆ. ಬೋರ್ಡಿನ ಮೇಲೆ ಕೂರುವ ಎಲೆಕ್ಟ್ರಾನಿಕ್ ಉಪಕರಣಗಳು ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುತ್ತಾ ಪರಸ್ಪರ ಸಂವಹಿಸುತ್ತವೆ.
ಇಲ್ಲಿ ಅತ್ಯಂತ ಪ್ರಮುಖವಾದ ಅಂಶವೆಂದರೆ Grounding (ಭೂ ಸಂಪರ್ಕ). ಗ್ರೌಂಡಿಂಗ್ ಎಂಬುದು ಸರ್ಕ್ಯೂಟಿನ ಎಲ್ಲ ಭಾಗಗಳನ್ನು ಒಂದೇ ಸಾಮಾನ್ಯ ಶೂನ್ಯ-ವೋಲ್ಟೇಜ್ ಆಧಾರಕ್ಕೆ ಜೋಡಿಸುವ ಪ್ರಕ್ರಿಯೆ. ಇದು ಅಪಾಯಕಾರಿ ವಿದ್ಯುತ್ ಉಲ್ಬಣಗಳಿಂದ (Power Surge) ಘಟಕಗಳನ್ನು ರಕ್ಷಿಸುತ್ತದೆ, ಸ್ಥಿರ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ. Common Ground ಇಲ್ಲದ ಸರ್ಕ್ಯೂಟ್ — Floating Circuit — ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು.
ಸಮಾಜ ಎಂಬ ಒಂದು ಸರ್ಕ್ಯೂಟ್ ಬೋರ್ಡ್ ವಿವಿಧ ಭಾಗಗಳು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ವ್ಯವಸ್ಥಿತರೂಪದಲ್ಲಿ ಆಯೋಜನೆಗೊಂಡು, ಒಂದರೊಡನೆ ಮತ್ತೊಂದು ಸೂಕ್ತ ರೀತಿಯಲ್ಲಿ ಸಂವಹಿಸುತ್ತ, ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಆಡುವ ರಂಗಸಜ್ಜಿಕೆಯೇ ಈ ಸರ್ಕ್ಯೂಟ್ ಬೋರ್ಡ್ ಎಂಬ ಚಿತ್ರಣವನ್ನು ಮೇಲೆ ನೋಡಿದೆವು. ಸಮಾಜದ ಪ್ರತಿಯೊಂದು ಘ���ಕವೂ ತನ್ನಿಂತಾನೇ ಒಂದು ಸರ್ಕ್ಯೂಟ್ ಬೋರ್ಡ್ ಆಗಿರುತ್ತದೆ. ಸಮಾಜವೇ ಒಂದು ಸಂಕೀರ್ಣ ರೀತಿಯ ಸರ್ಕ್ಯೂಟ್ ಬೋರ್ಡ್. ಕುಟುಂಬವೂ ಒಂದು ಸರ್ಕ್ಯೂಟ್ ಬೋರ್ಡ್.
ಅದರಲ್ಲಿ ಎಷ್ಟು ಪದರುಗಳು ಇರುತ್ತವೆ ಎಂಬುದು ಆಯಾ ಕುಟುಂಬದ, ಸಂಬಂಧ ಸಂಕೀರ್ಣದ ಸಂರಚನೆಯನ್ನು ಅನುಸರಿಸುತ್ತದೆ. ಒಂದೊಂದು ತಲೆಮಾರಿಗೆ ಒಂದೊಂದು ಪದರ. ಒಂದೊಂದು ಸಂಬಂಧದ ನೆಲೆಯೂ ಒಂದೊಂದು ಪದರವೇ. ಈ ಪದರಗಳ ನಡುವಿನ ಸಂವಹನದ ಸಂಪರ್ಕ ಸೇತುಗಳೇ Printed Wired Network. ಬೋರ್ಡಿನ ಮೇಲೆ ಕೂರುವ ಎಲೆಕ್ಟ್ರಾನಿಕ್ ಉಪಕರಣದ ಭಾಗಗಳೇ ವ್ಯಕ್ತಿತ್ವಗಳು-ಪಾತ್ರಗಳು.
ಯಾವ ಯಾವ ಪದರಗಳಲ್ಲಿ ಎಲ್ಲಿಂದ ಎಲ್ಲಿಗೆ ವಿದ್ಯುನ್ಮಾನ ಸಂದೇಶವನ್ನು ಹೊತ್ತ ವಿದ್ಯುತ್ ಹರಿವು ಆಗಬೇಕು? ಈ ವಿದ್ಯುತ್ ಶಕ್ತಿ ಎಂಬ ಭಾವದ ಕಣಗಳು ಸಂತೋಷ-ಸೌಹಾರ್ದದ ಪಾಸಿಟ್ರಾನ್ ಕಣಗಳೋ ಅಥವಾ ನಕಾರಾತ್ಮಕ-ಪ್ರತ್ಯಾತ್ಮಕ ನೆಗೆಟಿವ್ ಎಲೆಕ್ಟ್ರಾನುಗಳೋ? ಬೋರ್ಡುಗಳನ್ನು ಸುವ್ಯವಸ್ಥಿತವಾಗಿ ನಡೆಸುವ ಶಕ್ತಿ ಯಾವುದಿರಬೇಕು? ಎಲ್ಲದಕ್ಕೂ ಒಂದು ನಿರೋಧಕ (Resistor) ಮತ್ತು ಧಾರಕಗಳ (Capacitor) ನಿಯಂತ್ರಣ ಬೇಕಲ್ಲ! ಅವು ಸೌಜನ್ಯದ ಮಿತಿಯನ್ನು, ಶಿಸ್ತು-ಸಂಯಮ, ಶೀಲ-ಅಶ್ಲೀಲ, ಸ್ವೀಕೃತ ಮತ್ತು ಅಸ್ವೀಕೃತಗಳ ಎಲ್ಲೆಗಳನ್ನು ನಿರ್ಧರಿಸುವ ಪ್ರತಿನಿಧಿಗಳಲ್ಲವೇ?
ಲೇಖಕಿಯು ಬಹಳ ಎಚ್ಚರಿಕೆಯಿಂದ Grounding ಮಾಡುವ ಪ್ರಕ್ರಿಯೆಯನ್ನು ಉಲ್ಲೇಖಿಸಿದ್ದಾರೆ. Common Ground ಎಂದರೇನು? ಅದೇ ಸರ್ವಾಂಗೀಕೃತ ಮೌಲ್ಯ ಸಮುಚ್ಚಯ — ಧರ್ಮದ ನೆಲೆಯಲ್ಲಿ ಸ್ಥಿತವಾಗಿರತಕ್ಕದ್ದು. ಆಗ ಯಾವುದೇ ಭಾಗಕ್ಕೆ ಎಷ್ಟೇ ಪ್ರಖರ ವಿದ್ಯುತ್ ಹರಿದರೂ ಆ Ground ಅವನ್ನು ಸಮತುಲಿತಗೊಳಿಸಿ ಕಾರ್ಯವೈಖರಿಯಲ್ಲಿ ಸಮನ್ವಯ ಸಾಧಿಸುತ್ತದೆ. ಇಲ್ಲದೇ ಹೋದರೆ ಭಾಗಗಳು ಕೆಟ್ಟೂ ಹೋಗಬಹುದು, ಸುಟ್ಟೂ ಹೋಗಬಹುದು.
ಮೂರು ಸರ್ಕ್ಯೂಟ್ ಸಂರಚನೆಗಳು ಬಾಬುರಾಯರ ಅವಿಭಕ್ತ ಕುಟುಂಬದಲ್ಲಿ ಒಂದೊಂದು ಭಾಗಕ್ಕೆ ಒಂದೊಂದು ಮಟ್ಟದ Grounding — ಏಕರೂಪತೆಯಿಲ್ಲದ Split Grounding ಅಲ್ಲಿದೆ. ಅಂತೆಯೇ ಮೌಲ್ಯಗಳಲ್ಲಿ ಅಗಾಧವಾದ ವ್ಯತ್ಯಾಸ ಮತ್ತು ತತ್ಕಾರಣವಾಗಿ ಅಸಮತೋಲನವಿದೆ. ಧರ್ಮಪ್ರಜ್ಞೆಯ ಸಾಮಾನ್ಯ ಮೌಲ್ಯ ಎಂಬುದು ಕೇವಲ ಬಾಬೂರಾಯರ ಚಿಕ್ಕ ಭಾಗಕ್ಕೆ ಮೀಸಲು! ಅದನ್ನು ನಿರ್ವಹಿಸಲು ಹಿರಿಯನಾಗಿ ಬಾಬೂರಾಯರು ಸೋತದ್ದು 'ಅವಸಾನ'ದ ಬೀಜಾಂಕುರಕ್ಕೆ ಕಾರಣವಾಗುತ್ತದೆ. ಉದ್ಯಮ ಮುಚ್ಚಿದಾಗ ಉಳಿದದ್ದೇನು? ಬೋಳು ಬೋಳಾದ ಸರ್ಕ್ಯೂಟ್ ಬೋರ್ಡ್! ಅದು ಪುನಃ Split Grounding ನ ಪಾಲಾಯಿತು — ಮಗನದ್ದೇ ಬೇರೆ, ತಂದೆಯದ್ದೇ ಬೇರೆ. ಅದೇ ಮೌಲ್ಯ ಪಲ್ಲಟ; ಅದೇ ಅವಸಾನ.
ಸುಲಭಾಳ ತವರಿನ ಮನೆಯ ಸರ್ಕ್ಯೂಟ್ ಬೋರ್ಡ್ ಒಂದೇ ಮೌಲ್ಯದ Ground ಗೆ ಬೆಸುಗೆಯಾಗಿದೆ. ಅಲ್ಲಿಯೂ ಕ್ಯಾನ್ಸರ್ ಕಾಯಿಲೆಯಿಂದ ಅವರ ಮೌಲ್ಯ ಮತ್ತು ತಾಳ್ಮೆಗಳನ್ನು Power Surge ಮತ್ತು Outage ವಿಪರೀತಗಳಿಗೆ ಒಡ್ಡಲಾಗಿದೆ. ಆದರೆ ಅದು ನಲುಗುವುದಿಲ್ಲ. ಕಾರಣ? ಅಲ್ಲಿ ನಿರೀಕ್ಷೆಗಳಿಲ್ಲ; ಕೇವಲ ಕೈಂಕರ್ಯವಿದೆ — ಪ್ರೀತ್ಯಾದರಗಳ ಸೇವಾಭಾವ. ಸತ್ಯನ ರೀತಿಯಲ್ಲಿ ಇದು Common Ground ಸಾಧಿಸಿರುವ ವ್ಯವಸ್ಥೆ!
ಬೊಂಬಾಯಿಯ ವೇಶ್ಯಾವಾಟಿಕೆಯ ಕಾಮಾಠಿಪುರದಲ್ಲಿನ ನಿರಂತರ ಬದಲಾಗುವ ಭಾಗಗಳಿರುವ ಮುರುಕಲು ಸರ್ಕ್ಯೂಟ್ ಬೋರ್ಡಿಗೆ Grounding ಎಂಬುದೇ ಇಲ್ಲ. ಅದು ಒಂದು Floating Circuit — ಯಾವಾಗ ಬೇಕಾದರೂ ಸಿಡಿದು ಹೋಗಬಹುದು. Grounding ಇಲ್ಲದ ಈ ಭಾಗದಲ್ಲಿಯೂ ಕ್ಷೀಣ ದುರ್ಬಲ Grounding ಅನ್ನು ತಾಯಿಯಿಂದ ಪಡೆದು ಬಂದ ಸತ್ಯನು, ಆಶ್ರಮದಲ್ಲಿ ಅದನ್ನು ಪ್ರವರ್ಧಿಸಿಗೊಂಡು, ದೋಷಗ್ರಸ್ತ Grounding ಪರಿಸರಗಳಲ್ಲಿ ಹರಿದಾಡುತ್ತಾ ಅದನ್ನು ಸರಿಪಡಿಸುವ ಕರ್ಮದಲ್ಲಿ ತೊಡಗುವ ಚಿತ್ರಣ ಕಾದಂಬರಿಯಲ್ಲಿದೆ. ಮೌಲ್ಯಗಳ ಅವಸಾನವನ್ನು ತಡೆಯುವ ಪ್ರಯತ್ನವೊಂದನ್ನು ವೇಶ್ಯೆಯೆಂಬ ಅಸಹಾಯಕ ಹೆಣ್ಣು ತನ್ನ ಅಸ್ವಾಭಾವಿಕ ಪರಿಸರದಲ್ಲಿ ಸಾಕಾರ ಮಾಡಬಲ್ಲಳಾದರೆ “ಸಭ್ಯ“ ಜಗತ್ತಿನ ಚಚ್ಚೌಕ ಮೂಲೆಗಳ ಮನೆಯಲ್ಲಿರುವ ಕುಟುಂಬಗಳಿಗೇಕೆ ಸಾಧ್ಯವಾಗಬಾರದು? ಹಾಗಾಗದಿದ್ದರೆ ಪರಿಣಾಮ ಏನಾಗುತ್ತದೆ ಎಂಬುದನ್ನು ವಿವರಿಸಲು ವೃದ್ಧಾಶ್ರಮದ ಅಸಂಖ್ಯ ದೃಷ್ಟಾಂತಗಳಿವೆ.
ನಮ್ಮ ಜೀವನವೂ ಸಹಾ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಬೋರ್ಡಿನಂತೆ ಕೆಲಸ ಮಾಡಿದ್ದಾಗ್ಯೂ ಅಲ್ಲಿ ಒಂದು ವ್ಯತ್ಯಾಸವಿದೆ. ಬದುಕೆಂಬುದು ಚಲನಶೀಲತೆಯನ್ನೂ ಅವಾಹಿಸಿಕೊಂಡಿರುವ ಕಾರಣ ನಿರಂತರ ಬದಲಾವಣೆಯ Power Surge ಮತ್ತು Outage ಎದುರು ಮೌಲ್ಯಗಳ ಸ್ಥಿರತೆಯನ್ನು ಕಾಯ್ದುಕೊಂಡು ತನ್ನ ಕೆಲಸವನ್ನು ನಿರ್ವಹಿಸಬೇಕಾದ ವಿಶೇಷವಾದ ಸರ್ಕ್ಯೂಟ್ ಬೋರ್ಡ್ ನಮ್ಮ ಬದುಕು! ಅದರ ಜೊತೆಗೆ We don't choose our blood relations — ಹಾಗಾಗಿ ಬದುಕಿನಲ್ಲಿ Proto–Pilot–Production ಎಂಬ ಯೋಜನಾಬದ್ಧ ಹಂತಗಳಲ್ಲಿ ಕುಟುಂಬ ಸರ್ಕ್ಯೂಟ್ ಬೋರ್ಡ್ ಕಟ್ಟಲಾಗದು. ಅದರ ಸಾಧಕ ಬಾಧಕಗಳನ್ನು ಗ್ರಹಿಸಿ ಅಳವಡಿಸಿಕೊಳ್ಳುವುದು ಕ್ಷೇಮಕರವಾದ ನಡಿಗೆ. ಈ Dynamic Circuit board ವ್ಯವಸ್ಥೆಯಲ್ಲಿ ವಿಶಾಲನೂ ಸೇರಿ ಹಲವರ ಸಂಪೂರ್ಣ ವ್ಯಕ್ತಿತ್ವದ ವೈಶಾಲ್ಯ ಅನಾವರಣಗೊಳ್ಳುತ್ತದೆ.
VI. ಪಾತ್ರ ವಿಶ್ಲೇಷಣೆ ಎಷ್ಟೊಂದು ಪಾತ್ರಗಳು ಬರುತ್ತವೆಯಾದರೂ ಕೆಲವು ಮಾತ್ರವೇ ಪ್ರಮುಖ ಭೂಮಿಕೆಯನ್ನು ಪಡೆದಿವೆ. ಜಿಜ್ಞಾಸೆಯ ದೃಷ್ಟಿಯಿಂದ ಉದಾಹರಣೆಗಳನ್ನು ಗಮನಿಸೋಣ. ವಿಶಾಲ್ — ಸಂಕೀರ್ಣ ಪಾತ್ರ ವಿಶಾಲ್‌ನದ್ದು ಸಂಕೀರ್ಣವಾದ ಪಾತ್ರ. ಸರಿ-ತಪ್ಪುಗಳ ಜಿಜ್ಞಾಸೆಯನ್ನು ಹೊರತುಪಡಿಸಿ ನೋಡಿದರೆ ಪಾತ್ರವು ಅತ್ಯಂತ ವಾಸ್ತವಿಕ, ಸ್ವಾಭಾವಿಕ ಮತ್ತು ನೈಜತೆಯ ಚೌಕಟ್ಟಿನಲ್ಲಿ ಬಹಳ ಪ್ರಭಾವಶಾಲಿಯಾಗಿ ಮೂಡಿ ಬಂದಿದೆ. ನಮ್ಮೆಲ್ಲರೊಳಗೆ ವಿಶಾಲ್ ಇರುತ್ತಾನೆ; ಅವನಂತೆಯೇ ಧರ್ಮಸಂಕಟದ ಪರಿಸ್ಥಿತಿಗಳು ಬಂದಿರುತ್ತವೆ. ಆ ಒತ್ತಡದಲ್ಲಿ ಏನೋ ನಿರ್ಧಾರಗಳನ್ನು ಮಾಡಿರುತ್ತೇವೆ. ಆದಾಗ್ಯೂ ಕೊನೆಯಲ್ಲಿ ಅವನ ಮೇಲೆ ಬರುವ ಆರೋಪವು ಜಿಜ್ಞಾಸೆಯ ದೃಷ್ಟಿಯಿಂದ ಉತ್ಪ್ರೇಕ್ಷೆ ಎನಿಸಬಹುದಾದರೂ ಗಂಗಾಬಾಯಿಯಂಥ ಭಾವಜೀವಿಗಳಿಗೆ ಆ ಬಗೆಯ ಆಲೋಚನೆಯನ್ನು ಭರಿಸುವ ಶಕ್ತಿ ಇರುವುದಿಲ್ಲ ಎಂಬುದೂ ಅಷ್ಟೇ ಸತ್ಯ. ಹಾಗೇಕೆ ಎಂಬ ಪ್ರಶ್ನೆ ಮೂಡುತ್ತದೆ.
Overton Window ಎಂಬ ಪರಿಕಲ್ಪನೆಯಿದೆ — ಒಂದು ವಿಚಾರವು ಅಸ್ವೀಕೃತಿಯಿಂದ ಸ್ವೀಕೃತಿಯ ಕಡೆಗೆ ಕ್ರಮಿಸುವ ಹಂತಗಳನ್ನು ಅಲ್ಲಿ ಮಂಡಿಸಲಾಗಿದೆ. ಇಂದು ಅಸ್ವೀಕೃತವಾದದ್ದು ಮುಂದೆ ಅನಿವಾರ್ಯ ಎಂದೆನ್ನಿಸುವ ಬದಲಾವಣೆಯ ಪ್ರಕ್ರಿಯೆಯಲ್ಲಿ ವಿಶಾಲನ ಪ್ರಯತ್ನವು ಸೋಲನ್ನು ಕಂಡಿತು. ನಿರ್ದಿಷ್ಟ ಕ್ಷಮತೆಯ ಸರ್ಕ್ಯೂಟ್ ಬೋರ್ಡುಗಳ ವ್ಯವಹಾರದಲ್ಲಿ ನಿರಪೇಕ್ಷ ಮೌಲ್ಯಗಳ ಪ್ರತಿನಿಧಿಯಾದ ಸತ್ಯನ ಬೆಂಬಲದಿಂದ ಗೆಲ್ಲುವ ವಿಶಾಲ್, ಚಲನಶೀಲವಾದ ಬದುಕಿನ ಸರ್ಕ್ಯೂಟ್ ಬೋರ್ಡಿನಲ್ಲಿ ಸತ್ಯನೊಂದಿಗೆ Common Ground ಸಾಧಿಸಲಾರದೆ ಹತಪ್ರಭನಾಗುತ್ತಾನೆ.
ನಿರ್ಣಯವೊಂದರ ಸರಿ-ತಪ್ಪುಗಳ ಹಿಂದಿನ ವಿಶ್ಲೇಷಣೆಯಲ್ಲಿ ಸಮರ್ಥನೆಯು ಗೆಲ್ಲಬಹುದು ಅಥವಾ ಸೋಲಬಹುದು. ಆದರೆ, ಆಳದಲ್ಲಿ ಇಳಿದು ನೋಡಿದಾಗ ನಿರ್ಧಾರವೊಂದರ ಹಿಂದಿನ ಪ್ರೇರಣೆಯೊಂದೇ ನಿಜವಾದ ಸರಿ-ತಪ್ಪುಗಳ ಮಾನದಂಡವೇ ಹೊರತು ಬೌದ್ಧಿಕ ಚತುರತೆಯ ಸಮರ್ಥನೆಗಳಲ್ಲ ಎಂಬುದರ ಅರಿವು ನಮಗಿರಬೇಕು. ತಂದೆ ಬಾಬುರಾಯರ ಕುರಿತಾದ ವಿಶಾಲನ ಭವಿಷ್ಯದ ಯೋಜನೆಗಳು ಮತ್ತು ಅದನ್ನು ಪ್ರಭಾವಿಸಿದ ಮೂಲ ಪ್ರೇರಣೆಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ವಿಶ್ಲೇಷಿಸಿದಾಗ ವಿಭಿನ್ನವಾದ ಅಭಿಪ್ರಾಯ ಮೂಡುತ್ತದೆ. ಈ ಜಿಜ್ಞಾಸೆಯು ಕಾದಂಬರಿಯ ಪ್ರಮುಖ ವೈಶಿಷ್ಟ್ಯ.
ಸತ್ಯ — 'ನಿತ್ಯವೂ ಅವತರಿಪ ಸತ್ಯಾವತಾರ' ಸತ್ಯನದ್ದು ಆದರ್ಶವನ್ನು ಅದರ ಉತ್ಕೃಷ್ಟ ನೆಲೆಯಲ್ಲಿ ಪ್ರತಿನಿಧಿಸುವ ಪಾತ್ರ. ಅಯನ್ ರ್ಯಾಂಡ್‌ಳ Romantic Realism ಅನ್ನು ಬಿಂಬಿಸುವ ಪಾತ್ರ. ಕುವೆಂಪು ಅವರ ಕವಿತೆಯ 'ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲ್ಲಿ — ನಿತ್ಯವೂ ಅವತರಿಪ ಸತ್ಯಾವತಾರ' ಎಂಬ ಸಾಲು ಅವನ ಪಾತ್ರಕ್ಕೆ ಅನ್ವರ್ಥವಾಗಿ ಅನ್ವಯಿಸುತ್ತದೆ. 'ಮೂಡಿ ಬಂದೆನ್ನ ನರ ರೂಪ ಚೇತನದಿ — ನಾರಾಯಣತ್ವಕ್ಕೆ ದಾರಿ ತೋರಾ' — ಬಾಬುರಾಯರ ಮನೆಯಲ್ಲಿ ನಿತ್ಯ ಹಾಜರಾಗುವ ಸತ್ಯನ ಚರ್ಯಗಳು ನೀಡುವ ಸಂದೇಶ ಅಂತೆಯೇ ಇದೆ. ನರನ ಪ್ರತಿನಿಧಿಯಾಗಿ ವಿಶಾಲ್ ಮತ್ತು ಉಳಿದವರನ್ನು ಪರಿಗಣಿಸಿದರೆ ನರನಿಂದ ನಾರಾಯಣತ್ವಕ್ಕೆ ಏರಬೇಕಾದ ನಿರಪೇಕ್ಷ ಆದರ್ಶ ಸತ್ಯ ಎಂಬ ಪಾತ್ರವೇ ಆಗಿದೆ.
ವಿಠ್ಠಲನ ವಾರಿಕರಿ ಸಂಪ್ರದಾಯದಲ್ಲಿ ಬೆಳೆದೊಬ್ಬ ಕಿರಿಯ ವೈದ್ಯ ಸ್ನೇಹಿತನಿದ್ದಾನೆ — ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದಾನೆ. ಪ್ರತ್ಯಕ್ಷವಾಗಿ ಅವನ ಸೇವಾಮನೋಭಾವ, ನಿರ್ವ್ಯಾಜ ಪ್ರೀತಿ ಮತ್ತು ವಿಧೇಯ ನಡವಳಿಕೆಯನ್ನು ಕಂಡಿರುವ ನನಗೆ ಸತ್ಯನ ಪಾತ್ರವು ವಾರಿಕರಿ ಹಿನ್ನೆಲೆಯಿಂದ ಬಂದದ್ದು ಆಶ್ಚರ್ಯ ಎನಿಸಲಿಲ್ಲ. ಸತ್ಯನ ಹಾಗೇ ನನ್ನ ಗೆಳೆಯ ವಿಠ್ಠಲ್ ಸುಲಭವಾಗಿ ಬೇರೆಡೆ ತಿನ್ನುವುದಿಲ್ಲ.
ಗಂಗಾಬಾಯಿ — ಕಾದಂಬರಿಯ ನೈತಿಕ ಕೇಂದ್ರ ಗಂಗಾಬಾಯಿ ಕಾದಂಬರಿಯ ಸಾಧ್ವೀಮಣಿ. ಕಷ್ಟವನ್ನು ಕಹಿಯಾಗಿ ಅನುಭವಿಸದೆ, ಪ್ರತ್ಯರ್ಪಣೆ ಇಲ್ಲದ ಪ್ರೀತಿಯನ್ನು ಉಳಿಸಿಕೊಂಡ ಆಕೆಯ ಅಸ್ತಿತ್ವವೇ ಕಾದಂಬರಿಯ ನೈತಿಕ ಮಾನದಂಡ. ಆಕೆ ನಿಷ್ಕ್ರಿಯಳಾದ ಪಾತ್ರ ಅಲ್ಲ — ಆಕೆಯ ನೋವು, ಆಕೆಯ ಪ್ರಶ್ನೆಗಳು, ಆಕೆಯ ನಿರಾಕರಣೆಗಳು ಸಕ್ರಿಯ ನೈತಿಕ ನಿಲುವುಗಳು ಬಹಳ ಮಾರ್ಮಿಕವಾಗಿ ಬಿಂಬಿಸಲ್ಪಟ್ಟಿವೆ. ಆಕೆಯ ಮೂಲಕ ಕಾದಂಬರಿಯ ಮಹಾ ಪ್ರಶ್ನೆ ಏಳುತ್ತದೆ — ಎಲ್ಲರಿಗೂ ಪೋಷಣೆ ನೀಡಿದ ಬೇರು ತಾನೇ ಮಣ್ಣಿಲ್ಲದೆ ಉಳಿದಾಗ ಏನಾಗುತ್ತದೆ?
VII. ಪ್ರತಿಮೆಗಳು, ಅಭಿವ್ಯಕ್ತಿ ಮತ್ತು ನಿರೂಪಣಾ ಶಕ್ತಿ
ಅಭಿವ್ಯಕ್ತಿಯ ಭಾಗವಾಗಿ ಬಳಸಿಕೊಂಡಿರುವ ಪ್ರತಿಮೆಗಳು ಈ ಕಾದಂಬರಿಯ ಸಾಹಿತ್ಯಕ ಶಕ್ತಿ ಎನ್ನಬಹುದು. ಆರಂಭದಲ್ಲಿಯೇ ಬರುವ 'ಬಣ್ಣ ಹೊಡೆಸಿಕೊಂಡಿದ್ದರೂ ತನ್ನ ಶೈಥಿಲ್ಯವನ್ನು' ತೋರಿಸುವ ಕಟ್ಟಡವು ಅವಸಾನದ ಹಾದಿಯಲ್ಲಿರುವಂತೆ, ಒಳಗೂ-ಹೊರಗೂ! ತೋರಿಕೆ ಮತ್ತು ಆಂತರಿಕ ಸತ್ಯದ ನಡುವಿನ ಅಂತರವೇ ಕಾದಂಬರಿಯ ಕೇಂದ್ರ ಕಾಳಜಿ — ಈ ಚಿತ್ರದ ಮೂಲಕ ಅದು ಮೊದಲ ಪುಟದಲ್ಲೇ ಪ್ರಕಟವಾಗುತ್ತದೆ.
ಪ್ರಣವ ಸರ್ಕ್ಯೂಟ್ ಬೋರ್ಡ್ ಕಂಪನಿಯ ದೊಡ್ಡ ಎದ್ದು ಕಾಣುವ ಅಕ್ಷರಗಳು ಓರೆಕೋರೆಗಳಿಲ್ಲದಂತೆ ಬರೆಸಲ್ಪಟ್ಟಿರುವುದು ಅದರ ಒಡೆಯ ವಿಶಾಲನ ವ್ಯಕ್ತಿತ್ವವನ್ನು ಬಿಂಬಿಸುವ ಹಾಗೆ! ನೇರ-ನಿಷ್ಠುರ! ಕುಟುಂಬ ಇರುವ ಸಭ್ಯ ಸಮಾಜದಲ್ಲಿ taken for granted ಆಗಿರುವ ಆ ಕುಟುಂಬವನ್ನು ಪುಸ್ತಕದಲ್ಲಿ ಮಾತ್ರ ಕಾಣುತ್ತ, ಗೋಡೆಯ ಮೇಲೆ ಪ್ರಕ್ಷೇಪಿಸುತ್ತ ಕನಸು ಕಾಣುವ ಮುನ್ನಾ! ಕುಟುಂಬಗಳ ಸಂರಚನೆಯು ಅವನಿಗೆ ಕನಸಿನಲ್ಲಿ ಬದಲಾಗುತ್ತಿದ್ದರೆ ವೃದ್ಧಾಶ್ರಮದ ನಿವಾಸಿಗಳಿಗೆ ಪ್ರತ್ಯಕ್ಷ ಅನುಭವವೇ ಆಗಿರುತ್ತದೆ. ಈ ವ್ಯತ್ಯಾಸ ಎಷ್ಟು ಪ್ರಖರ!
ವಿಠ್ಠಲನ ವಾರಿಕರಿ ಯಾತ್ರೆ, ಆಶ್ರಮದ ಕಲಾಪಗಳು, ವೃದ್ಧಾಶ್ರಮದ ವಿವರ, ಎಲ್ಲವೂ ಆಪ್ತವಾಗುತ್ತವೆ. ಅದರೊಟ್ಟಿಗೆ ಬರುವ ಭಕ್ತಿ-ಆಧ್ಯಾತ್ಮ-ಶ್ರದ್ಧೆ ಮತ್ತು ಆ ಮೂಲಕ ಸರ್ವರಲ್ಲಿಯೂ ವಿಠ್ಠಲನ ಕಾಣುವ ಸೇವೆ ಮಾಡುವ ಮನೋಭೂಮಿಕೆಯನ್ನು ಬೆಳೆಸುವ ಪ್ರಕ್ರಿಯೆಗಳು ಮನಸ್ಸಿಗೆ ಮುದ ನೀಡುತ್ತವೆ. ಆಶ್ರಮ - ವಿಠ್ಠಲ - ಪೂಜೆ - ಅಲ್ಲಿನ ಬದುಕು - ಪಂಢರಾಪುರ ಪ್ರವಾಸ ಎಂಬ 'ಎಲ್ಲರೊಳಗೊಂದಾಗುವ' ಪ್ರಕ್ರಿಯೆಯು ಇಡೀ ಸಮಾಜವೆಂಬ ಸರ್ಕ್ಯೂಟ್ ಬೋರ್ಡಿನ Common Grounding ಆಗಿದೆ. ಮುನ್ನಾನ ಕೈಗಡಿಯಾರ — ಕಾಲ ಮತ್ತು ಮಾರ್ಗದರ್ಶನದ ಪ್ರತೀಕ ಮುನ್ನಾನಿಗೆ ಸಿಕ್ಕಿದ ಅವನ ತಾತ್ಕಾಲಿಕ ಬಾಬಾ ಮೊದಲಿಗೇ ಅವನಿಗೊಂದು ಕೈ ಗಡಿಯಾರ ತಂದು ಕೊಡುವುದು ಒಂದು ಪ್ರಭಾವಶಾಲಿ ಪ್ರತೀಕ. ಕಾಲನ ಪರಿಧಿಯಲ್ಲಿ ಆ ಬಾಬಾ (ತಂದೆಯು) ಮುನ್ನಾನನ್ನು ಪ್ರಪಂಚಕ್ಕೆ ತಂದದ್ದು ಮಾತ್ರ ಉಳಿಯುತ್ತದೆ. ಮುನ್ನಾ ಆ ಗಡಿಯಾರವನ್ನು ತಿರುಗಿಸಿ ಬಳಸಲು ಕಲಿತನಾದರೂ ಅದನ್ನು ತೋರಿಸಲು ಪುನಃ ಆತನಿಗೆ ಬಾಬಾ ಅವರ ಭೇಟಿಯಾಗಲೀ ಮಾರ್ಗದರ್ಶನವಾಗಲೀ ಸಿಗುವುದೇ ಇಲ್ಲ. ಅಲ್ಲಿ ಅವನು ತಬ್ಬಲಿ! ತನ್ನ ಕಾಲದ ಗತಿಯನ್ನು ತಾನೊಬ್ಬನೇ ನಿರ್ಧರಿಸುವ ಅನಿವಾರ್ಯತೆ ಅವನಿಗೊದಗುತ್ತದೆ.
It's a bitter pill to swallow, knowing you've read two bad books from an author you liked.
Kshame, the author's debut can be forgiven for not meeting expectations. However, Avasana, written after the famous Kasheera is a real disappointment. Lack of a strong premise (which the author had in Kasheera) really brings out some of the shortcomings in this character driven book.
There is no real story as such. Avasana follows the story of a small family and a flashback set in Kamathipura. This is not the most original storyline as dozens if not hundreds of movies and books have already covered this topic.
The characters are also less appealing than expected. While the character study starts well, without a strong story to back it up, things quickly turn into a bore. Satya's character comes off as unrealistic in his approach towards life. (Same issue was with Narendra in Kasheera) Gangubai's character draws sympathy but Baburao's character remains a mystery. Only character I liked was Vishal with his dilemma and complex personality.
The ending of the novel with its moral stand that the parents were somehow right and the kids were to blame was utterly disappointing. I felt no sympathy at all for Baburao or his wife by the end.