The book ‘Osteosarcoma that changed my life’ is Shruthi's story of surviving cancer. At the age of eighteen she gets diagnosed with Osteosarcoma, a type of bone cancer. Shruthi, in her book narrates her pain, suffering, struggle and hope which kept her positive throughout the journey. Her journey was full of lessons. It taught her about life, death, fear, hunger and helplessness which are perfectly elaborated in the book. The book throws light on cancer, biopsy and chemotherapy. It gives a detailed account of how some other survivors influenced her life. All in all, the book depicts how Shruthi's life transformed after cancer!
' ಕ್ಯಾನ್ಸರ್' ಎಂಬ ಪದ ಕಿವಿಗೆ ಬಿದ್ದರೆ ಮನಸಿಗೇನೋ ಕಸಿವಿಸಿ. ನೋಡಿದ,ಕೇಳಿದ ಮಿತ್ರರ ,ಸಂಬಂಧಿಕರ ಕಥೆಗಳೆಲ್ಲ ಕಣ್ಣೆದುರು ಬಂದು ವಿಷಾದವೊಂದು ಕವಿದು ಬಿಡುತ್ತದೆ. ಇದಕ್ಕೆ ನಮ್ಮ ಅಜ್ಞಾನವೂ ಕಾರಣ. ಅದು ಬಂದರೆ ಬದುಕೇ ಮುಗಿದಂತೆ ಅಂತಲೋ, ಅದರ ಕುರಿತಾದ ಕಥೆಗಳೋ ಇವೆಲ್ಲವೂ ಇದಕ್ಕೆ ಪುಷ್ಟಿ ಕೊಡುತ್ತದೆ. ಹಾಗಾಗಿಯೇ ಶ್ರುತಿ ಅವರ ಪುಸ್ತಕ ಎಲ್ಲರೂ ಓದಬೇಕಾದದ್ದು. ನಾವು ಊಹಿಸಿದಂತೆ ಇದು ಗೋಳಿನ ಕಥೆಯಲ್ಲ. ಹೋರಾಟದ ಕಥೆ. ಬರೀ ಅವರಷ್ಟೇ ಅಲ್ಲ ಆ ಸಮಯದಲ್ಲಿ ಬೆನ್ನಿಗೆ ನಿಂತ ಕುಟುಂಬದ ಬೆಂಬಲ, ನೆರವಾದವರ ಹಾರೈಕೆ, ಡಾಕ್ಟರ್‌ಗಳ ಚಿಕಿತ್ಸೆ ಇವೆಲ್ಲವನ್ನೂ ಶ್ರುತಿ ಸರಳವಾಗಿ ಆದರೆ ಪರಿಣಾಮಕಾರಿಯಾಗಿ ಬಿಡಿಸಿಟ್ಟಿದ್ದಾರೆ. ನನಗೆ ಬಹಳ ಮೆಚ್ಚುಗೆಯಾದ ಎರಡು ಅಂಶಗಳು ಎಂತಹ ಸಂದರ್ಭದಲ್ಲೂ ಶ್ರುತಿ ತನ್ನ ಲವಲವಿಕೆ ಕಾಪಿಟ್ಟುಕೊಂಡದ್ದು ಮತ್ತು ನಂಬಿಕೆಯ,ಸ್ಪೂರ್ತಿ ಉಕ್ಕಿಸುವ ಶೈಲಿಯಲ್ಲಿ ಬರೆದದ್ದು. ಈ ಸಾಲುಗಳ ಗಮನಿಸಿ
"ಬೇರೆಯವರು ಹೇಗೆ ಬದುಕುತ್ತಾರೆ ಎಂಬುದು ಮುಖ್ಯವಲ್ಲ.ನಾವು ನಮಗಾಗಿ ಹೇಗೆ ಬದುಕುತ್ತೇವೆ ಎಂಬುದು ಮುಖ್ಯ. ನಮಗೆ ಯಾವುದರಲ್ಲಿ ಸಂತೋಷವಿದೆಯೋ,ನಮ್ಮ ಹೃದಯ ಯಾವುದು ಸರಿ ಎಂದು ಹೇಳುತ್ತದೆಯೋ ಅದನ್ನು ಮಾಡಿಬಿಡಬೇಕು.ಹೃದಯ ಯಾವತ್ತೂ ಕೆಟ್ಟದ್ದನ್ನು ಮಾಡಲು ಹೇಳುವುದಿಲ್ಲ.ಕೆಟ್ಟದ್ದು ನಮ್ಮ ಬುದ್ಧಿಯಲ್ಲಿ ಮಾತ್ರವಿರುತ್ತದೆ"
Uff!!!!! ಕ್ಯಾನ್ಸರ್ ಎಂಬ ಪದಕ್ಕಿರುವ ಭೀಕರತೆ ಸ್ವತಃ ಸಾವಿಗೂ ಇಲ್ಲವೇನೋ. ನನ್ನ ಖಾಸಗೀ ವಲಯದಲ್ಲಿ ಕ್ಯಾನ್ಸರ್ನೊಂದಿಗೆ ಸೆಣಸಿ ಸೋತು ಮರೆಯಾದವರೂ, ಗೆದ್ದು ಆರೋಗ್ಯವಾಗಿ ಬದುಕುತ್ತಿರುವವರದ್ದೂ ದೊಡ್ಡ ದಂಡೇಯಿದೆ. ಅದನ್ನೆಲ್ಲ ನೆನೆದರೆ ಹಿಂದೆಂದೋ ಕ್ಯಾನ್ಸರ್ ಕೇವಲ ಕಥೆ, ಕಾದಂಬರಿ, ಸಿನಿಮಾಗಳ ದುರಂತ ನಾಯಕ ನಾಯಕಿಯರಿಗೆ ಮಾತ್ರ ಬರುತ್ತಿದ್ದ ಒಂದು ಪ್ಲಾಟ್ ಟ್ವಿಸ್ಟ್ ಮಾತ್ರವೇ ಆಗಿದ್ದ ಕಾಲ ಚೆನ್ನಾಗಿತ್ತು ಎನಿಸುತ್ತದೆ.
ಶೃತಿಯವರ ಈ ಪುಸ್ತಕ ಅನೇಕ ವಿಷಯಗಳಿಗೆ ನನಗೆ ಇಷ್ಟವಾಯ್ತು. ಮುಖ್ಯವಾಗಿ ಆಕೆಯ ಮುಗ್ಧ, ಸರಳ ನಿರೂಪಣಾ ಶೈಲಿ.. "ಆಪರೇಷನ್ ಥಿಯೇಟರ್ ನೋಡಿ ಮನಸ್ಸು "ವಾವ್" ಎನ್ನುತ್ತಿತ್ತು. ಇದನ್ನೆಲ್ಲಾ ಕೇವಲ ಫಿಲ್ಮ್ ಗಳಲ್ಲಿ ನೋಡಿದ್ದೆ ಅಷ್ಟೇ. ಈಗ ನಿಜವಾಗಿ ನೋಡುತ್ತಿದ್ದೇನೆ" ಎನ್ನುವ ಮೊದಲ ಬಾರಿ ಆಪರೇಷನ್ ಥಿಯೆಟರ್ ಹೊಕ್ಕುವಾಗಿನ ಆಕೆಯ ಅಚ್ಚರಿ, ಮಗುವಿನಂತೆ ಸಂಭ್ರಮಿಸುವ ಪರಿ ಯಾರನ್ನಾದರೂ ತಾಕದೇಯಿರದು. "ಮನುಷ್ಯ ಕಷ್ಟ ಬಂದಾಹ ದೇವರ ಮೊರೆ ಇಡುತ್ತಾನೆ. ಅವನು ಆ ಸಂಕಷ್ಟವನ್ನು ಪರಿಹರಿಸಬಲ್ಲ ಎಂಬುದಕ್ಕೆ, ಕೆಲವೊಮ್ಮೆ ಹಿರಿಯರ ಬಳಿ ಮೊರೆ ಇಡುತ್ತೇವೆ. ಅವರ ಅನುಭವ ನಮ್ಮ ಕಷ್ಟವನ್ನು ಪರಿಹರಿಸಬಲ್ಲದೇನೋ ಎಂಬ ಕಾರಣಕ್ಕೆ. ಕೆಲವೊಮ್ಮೆ ಉತ್ತಮ ವ್ಯಕ್ತಿಗಳ ಬಳಿ ಮೊರೆ ಹೋಗುತ್ತೇವೆ. ಧೈರ್ಯ ಹಾಗೂ ಹಿತನುಡಿಗಳಿಗಾಗಿ. ಅವೇ ತಾನೇ ಕಷ್ಟವನ್ನು ಎದುರಿಸುವ ಶಕ್ತಿಯನ್ನು ಕೊಡುವುದು" ಎನ್ನುತ್ತಾ ಬೆಟ್ಟದಂತಾ ಸಮಸ್ಯೆಯನ್ನು ಕೂಡ ಹಗುರವಾಗಿ ನೋಡುತ್ತಾ ಧೈರ್ಯವಾಗಿ ಎದುರಿಸಿದ ಆ ದೃಷ್ಟಿಕೋನ, ದಣಿದು ಮುದುಡಿದ ಮನಸ್ಥಿತಿಯಲ್ಲೂ ತನ್ನ ತಾನೇ ಸಮಾಧಾನಿಸುತ್ತಾ ಕಡೆಗೂ ಕ್ಯಾನ್ಸರ್ ಗೆದ್ದ ಅನುಭವ ಪ್ರತಿಯೊಬ್ಬರಿಗೂ ಮಾದರಿ.
ಡಯಾಗ್ನೋಸಿಸ್, ಕಿಮೋಥೆರಪಿ ಇವುಗಳ ಬಗ್ಗೆ ತಮ್ಮ ಅನುಭವ ಧಾಖಲಿಸುವುದು ಮಾತ್ರವಲ್ಲದೇ ಆಸ್ಟಿಯೋ ಸರ್ಕೋಮಾದ ಸ್ವರೂಪ, ಆಪರೇಷನ್ ಮತ್ತು ಚಿಕಿತ್ಸಾ ವಿಧಾನಗಳು, ಕಿಮೋನ ಅಡ್ಡಪರಿಣಾಮಗಳು ಎಲ್ಲವನ್ನೂ ಚಿಕ್ಕದಾಗಿ ವಿವರಿಸಿರುವುದು, ಇದೇ ಸಮಸ್ಯೆ ದಾಟಿ ಬಂದ ಬೇರೆ ಕ್ಯಾನ್ಸರ್ ಸರ್ವೈವರ್ಸ್ ಗಳ ಜೀವನಾನುಭವ, ಆಸ್ಪತ್ರೆ ವಾತಾವರಣ, ಅಲ್ಲಿನ ಸಹವರ್ತಿಗಳು, ಡಾಕ್ಟರ್ಗಳು, ಕುಟುಂಬದ ಸಹಕಾರ, ಕ್ಯಾನ್ಸರ್ ನಂತರದ ಆರೋಗ್ಯ ಕಾಳಜಿ, ಆಹಾರ, ಅಭ್ಯಾಸ, pause ಮಾಡಲ್ಪಟ್ಟ ಬದುಕಿಗೆ ಮತ್ತೆ ಮರಳಿದ ರೀತಿ ಎಲ್ಲವನ್ನೂ ಲೆಖಕಿ ಎಲ್ಲಿಯೂ ಕನಿಕರ ಬೇಡದ, ಗೋಳುಕರೆಯದ ನೇರ ಸ್ಪಷ್ಟ ಧ್ವನಿಯಲ್ಲಿ ನಿರೂಪಿಸಿದ್ದಾರೆ. ದುಃಖದ ಕ್ಷಣಗಳೂ ಕೂಡ ಪುಟ್ಟ ಗೆಳತಿಯೊಬ್ಬಳು ತನ್ನ ನೋವುಗಳನ್ನು ಹಂಚಿಕೊಂಡಂತಿವೆಯೇ ಹೊರತು ಎಲ್ಲಿಯೂ ಓದುಗರ ಧೈರ್ಯ ಕುಗ್ಗಿಸುವ, ಕಂಗೆಡಿಸುವ ರೀತಿಯಲ್ಲಿಲ್ಲ.
ಕ್ಯಾನ್ಸರ್/ ನೋ ಕ್ಯಾನ್ಸರ್ ಇದು ಪ್ರತಿಯೊಬ್ಬರೂ ಓದಲೇಬೇಕಾದ ಒಂದು ಅತ್ಯುತ್ತಮ ಸ್ಪೂರ್ತಿದಾಯಕ ಪುಸ್ತಕ. ನನ್ನಮಟ್ಟಿಗೆ ಈ ವರ್ಷದ ಅತ್ಯುತ್ತಮ ಓದುಗಳಲ್ಲಿ ಖಂಡಿತವಾಗಿಯೂ ಇದೂ ಒಂದು.
'ಕ್ಯಾನ್ಸರ್' ಎನ್ನುವ ಒಂದು ಪದ ಸಾಕು ಎಂಥವರ ಎದೆಯಲ್ಲಾದರೂ ಭಯ ಹುಟ್ಟಿಸಲು. ಅಂತಹ ಒಂದು ಖಾಯಿಲೆಯ ವಿರುದ್ಧ ತನ್ನ 18ನೇ ವಯಸ್ಸಿಗೆ ಹೋರಾಡಿ ಗೆದ್ದು ಬಂದ ಕಥೆಯಿದು. ಲೇಖಕಿ ಶ್ರುತಿಯವರ ಆತ್ಮಕಥೆಯಿದು. ಆಗಿನ್ನೂ ಪ್ರಪಂಚವನ್ನು ಅರಿಯುವ, ಕನಸುಗಳನ್ನು ಕಟ್ಟುವ, ರೆಕ್ಕೆ ಬಿಚ್ಚಿ ಹಾರಾಡುವ ಸಮಯವದು. ಅಂತಹ ವೇಳೆಯಲ್ಲಿ ತನಗೆ 'ಕ್ಯಾನ್ಸರ್' ಎಂಬ ಖಾಯಿಲೆಯಿದೆ ಎಂದು ತಿಳಿದರೆ ಹೇಗಾಗಬೇಡ!! ಲೇಖಕಿ ಇದರಲ್ಲಿ ತಾನು ಅನುಭವಿಸಿದ ಒಂದೊಂದು ಘಟನೆಯನ್ನು ಮನಕರಗುವಂತೆ ಬರೆದಿದ್ದಾರೆ. ಓದುತ್ತಾ ಹೋದಂತೆ ಕಣ್ಣೀರು ತಾನಾಗಿಯೇ ಇಳಿಯುತ್ತದೆ. 6 ಕಿಮೋಥೆರಪಿಗಳನ್ನು ಮಾಡಿಸಿಕೊಂಡು ಅದರ ನೋವನ್ನು ಸಹಿಸಿಕೊಳ್ಳೋದು ಸುಲಭವಲ್ಲ. ಆದರೆ ಅವರ ಜೀವನದೆಡೆಗಿನ ಆಶಾವಾದ, ಮನೋಸ್ಥೈರ್ಯ, ಸರಿಯಾದ ಸಮಯಕ್ಕೆ ಸಿಕ್ಕ ಚಿಕಿತ್ಸೆ ಮತ್ತು ಆತ್ಮೀಯರ ಸಹಕಾರ ಇದೆಲ್ಲವನ್ನೂ ಮೆಟ್ಟಿ ನಿಂತು ತನ್ನ ಜೀವನವನ್ನು ಇನ್ನೊಮ್ಮೆ ಕಟ್ಟಿಕೊಳ್ಳಲು ನೆರವಾಯಿತು.
'ಕರ್ತೃ'ವಿನ ಬಳಿಕ ಶ್ರುತಿ ಅಕ್ಕನ ಪುಸ್ತಕಗಳಲ್ಲಿ ಇದು ನಾನು ಓದುತ್ತಿರುವ ಎರಡನೇ ಪುಸ್ತಕ. ಅವರ ಬರವಣಿಗೆಯ ಬಗ್ಗೆ ಎರಡು ಮಾತಿಲ್ಲ. ಇದು ಅವರ ಮೊದಲ ಪುಸ್ತಕವೆಂದರೆ ನಂಬಲು ಅಸಾಧ್ಯ. ಜೊತೆಗೆ ಇದರಲ್ಲಿ ಅವರು ಪರಿಚಯಿಸಿರುವ ಹಲವು ವ್ಯಕ್ತಿಗಳು ಜೀವನದಲ್ಲಿ ನಮಗೆ ಮಾದರಿಯಾಗುವುದರಲ್ಲಿ ಸಂದೇಹವಿಲ್ಲ. ಜೊತೆಗೆ ಈ ಪುಸ್ತಕವೂ ಕೂಡ.
ಎಲ್ಲರೂ ಒಮ್ಮೆ ಓದಲೇಬೇಕಾದ ಪುಸ್ತಕ... ಆಸಕ್ತರಿಗೆ ಇದು ಮೈಲ್ಯಾನ್ಗ್ ಬುಕ್ಸ್ ಅಲ್ಲಿ ಲಭ್ಯವಿದೆ. English version ಓದಲು ಬಯಸುವವರಾದರೆ kindle ಅಲ್ಲಿಯೂ ಲಭ್ಯವಿದೆ.
ಅವರ tagline ಹೇಳಿದಂತೆ ವಿಧಿಯ ಕೈಯೊಳಗೆ ಆಡೋ ಗೊಂಬೆ ನಾವು. ನಾವು ಜೀವನದಲ್ಲಿ ಏನನ್ನ ಅನುಭವಿಸಬೇಕು ಅಂತಿದೆಯೋ ಅದನ್ನ ಅನುಭವಿಸಲೇ ಬೇಕು. ಇದರಲ್ಲಿ ಶ್ರುತಿ ಯವರು ಹೇಗೆ ಕ್ಯಾನ್ಸರ್ ಗೆದ್ದು ಬಂದರು ಅನ್ನೋದನ್ನ ಹೇಳಿದ್ದಾರೆ.
ಅವರು ಪಟ್ಟ ಕಷ್ಟ ನೋವು ಹತಾಶೆ ದುಃಖ ಭಯ ಇವುಗಳ ನಡುವೆ ಬದುಕನ್ನ ಹೇಗೆ ಅನುಭವಿಸಬೇಕು, ಬದುಕಿನ ಮೌಲ್ಯ ಎಷ್ಟು ಅನ್ನೋದನ್ನ ಅದ್ಭುತ ವಾಗಿ ತಿಳಿಸಿದ್ದಾರೆ
ಬದುಕಿನಲ್ಲಿ ಭರವಸೆ ಇಲ್ಲದವರು, ಆತ್ಮವಿಶ್ವಾಸದ ಕೊರತೆ ಇದ್ದವರು ಎಲ್ಲರೂ ಓದಲೇಬೇಕಾದ ಪುಸ್ತಕ ❤️
ಆಸ್ಟಿಯೋ ಸರ್ಕೋಮಾ (osteosarcoma) ಎಂದರೆ ಒಂದು ರೀತಿಯ ಕ್ಯಾನ್ಸರಸ್ ಟ್ಯೂಮರ್, ಸಾಮಾನ್ಯವಾಗಿ ದೇಹದ ಮೂಳೆಗಳಲ್ಲಿ ಕಂಡುಬರುವಂತದ್ದು. ಅದು ಯಾವುದೇ ರೀತಿಯದ್ದಾಗಿರಲಿ, ಈ ಕ್ಯಾನ್ಸರ್ ಎನ್ನುವ ಮೂರಕ್ಷರ ಎಲ್ಲರ ಹೃದಯದ ತಿಳಿಯನ್ನು ಕಲಕಿ ರಾಡಿ ಮಾಡುವಂತದ್ದು. ತಮ್ಮ ಹದಿನೆಂಟನೇ ವಯಸ್ಸಿಗೆ ಅಂತಹದ್ದೊಂದು ಕ್ಯಾನ್ಸರ್ಗೆ ತುತ್ತಾಗಿ, ನಂತರ ಎರಡು ವರ್ಷಗಳು ಬಂದೊದಗಿದ ಮಾನಸಿಕ ಮತ್ತು ದೈಹಿಕ ನೋವುಗಳನ್ನೆಲ್ಲಾ ಎದುರಿಸಿದ ಹೋರಾಟದ ನೈಜ ಚಿತ್ರಣವೇ ಶ್ರುತಿ ಬಿ. ಎಸ್ ಅವರ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ”.
ನೂರು ಪುಟಗಳ ಈ ಪುಸ್ತಕದಲ್ಲಿ ಬರೀ ನೋವಿರಲಿಲ್ಲ, ನಮ್ಮೆಲ್ಲರಲ್ಲೂ ಭರವಸೆ ಮೂಡಿಸುವ ಬೆಳಕಿತ್ತು. ಶ್ರುತಿಯವರ ��ರವಣಿಗೆಯಲ್ಲಿ ಮುಗ್ಧತೆಯಿತ್ತು, ಆಪ್ತತೆಯಿತ್ತು. ಪುಸ್ತಕ ಇಷ್ಟವಾಯ್ತು.
ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೊಮಾ - ಶೃತಿ ಬಿ ಎಸ್ ಅವರ ಕೃತಿಯ ಕುರಿತು
ಕೆಲವು ಅನುಭವಗಳನ್ನ ಮಾತಲ್ಲಿ, ಪದಗಳಲ್ಲಿ ವಿವರಿಸಿದರೂ ಅರಿಯಲಾಗದು. ಅನುಭವಿಸಿಯೇ ತಿಳಿಯಬೇಕು. ಈ ಕೃತಿಯಲ್ಲಿರುವ ಸ್ಫೂರ್ತಿ, ದೃಷ್ಟಿಕೋನ, ಅರಿವನ್ನು ಓದಿಯೇ ಪಡೆದುಕೊಳ್ಳಬೇಕು.
ಮತ್ತೆ ಮತ್ತೆ ಮೆಲುಕು ಹಾಕಬೇಕಾದ, ನಮ್ಮದಾಗಿಸಿಕೊಳ್ಳಬೇಕಾದ ಅವರದೇ quotes, ನಾವು ಬರೆದಿಟ್ಟುಕೊಳ್ಳಲಾರದಷ್ಟಿವೆ.
ಸ್ಪೂರ್ತಿಯುತವಾದ ಈ ಕೃತಿ, ಜೀವನದಲ್ಲಿ ಎದುರಾಗುವ ಅತ್ಯಂತ ಕಠಿಣ ಸವಾಲುಗಳ ಎದುರಿಸಲು ಇರಬೇಕಿರುವ ಮನಸ್ಥಿತಿ, ಇಂಥ ಪರಿಸ್ಥಿತಿಯಲ್ಲಿ ಬೇಕಿರುವ ವಿನೋದದ ಮನಸ್ಥಿತಿಯ ಅಗತ್ಯಗಳನ್ನು ಮನಗಾಣಿಸುತ್ತದೆ.
ತಾನು ಧೈರ್ಯದಿಂದಿರುವ ಮೂಲಕ ಮನೆಯವರಿಗೂ ಧೈರ್ಯ ನೀಡುವ, ಮನೆಯವರು ಧೈರ್ಯವಾಗಿದ್ದು ಮಕ್ಕಳಿಗೆ ಧೈರ್ಯ ತುಂಬುವ ಅಗತ್ಯ ಎಷ್ಟು ಅತ್ಯಗತ್ಯ ಎಂದು ತೋರಿಸಿಕೊಡುತ್ತದೆ.
ತಡೆದುಕೊಳ್ಳಲಾರರೆಂದು, ಆತ್ಮೀಯರೊಂದಿಗೇ ಕೆಲವೊಂದು ಸಂಗತಿಗಳನ್ನು ಹೇಳಿಕೊಳ್ಳಲಾಗದ, ಮುಚ್ಚಿಡಬೇಕಾದ ಅಸಹಾಯಕ ಸ್ಥಿತಿ ಒಂದು ಕಡೆ, ಇನ್ನು ಕೆಲ ಆತ್ಮೀಯರು, ಪ್ರೀತಿಸುವ ಜೀವದ ರಕ್ಷೆಗಾಗಿ ಭಯ, ಚಿಂತೆ, ದುಗುಡ ದುಮ್ಮಾನಗಳನ್ನು ಮೀರುವ ಪರಿ, ಅದು ಪ್ರೀತಿಯ ಪರಿ, ಅದು ಇನ್ನೊಂದು ಕಡೆ.
ಯಾವುದೇ ಕಷ್ಟ ಬಂದಾಗ ಮನೆಯವರೆಲ್ಲರೂ ಒಗ್ಗಟ್ಟಾಗಿ ಎದುರಿಸಿದರೆ ಯಾವ ಕಷ್ಟವೂ ದೊಡ್ಡದಲ್ಲ ಎಂಬ ಅಮೂಲ್ಯ ಅರಿವು, ಒಬ್ಬರಿಗೊಬ್ಬರು ಧೈರ್ಯ ತುಂಬುವ, ಚೈತನ್ಯ, ಸಹಕಾರ ನೀಡುವ ಅವಶ್ಯಕತೆ!
ಖಾಯಿಲೆಗಳ ಕುರಿತಾದ ಪುಸ್ತಕಗಳ ಓದಲು ಹಿಂದೆ ಮುಂದೆ ನೋಡುವವರಿಗೆ, ಭಯ ಪಡುವವವರಿಗೆ ಈ ಕೃತಿ ಕಂಗೆಡಿಸದೆ, ಧೈರ್ಯ ತುಂಬುವ ಕೆಲಸ ಮಾಡುತ್ತದೆ. ಆ ಮೂಲಕ ಈ ಮೊದಲಿಂದಲೂ ಅವರಲ್ಲಿದ್ದಿರಬಹುದಾದ ಪೂರ್ವಾಗ್ರಹ, ಗೊಂದಲ, ಭಯಗಳನ್ನ ನಿವಾರಿಸುತ್ತದೆ.
ಸಾವು ಬದುಕಿನ ಹೋರಾಟದಲ್ಲಿ, ಪ್ರಯತ್ನ, ಹೋರಾಟಗಳ ಯಾವೆಲ್ಲ ಅಂಶಗಳು ಬದುಕಿಸುತ್ತವೋ ಕರಾರುವಾಕ್ಕಾಗಿ ಹೇಳಲು ಸಾಧ್ಯವಿಲ್ಲ. ಆದರೆ ಈ ಮೇಲೆ ಪ್ರಸ್ತಾಪಿಸಿರುವ, ಹಾಗೂ ಕೃತಿಯಲ್ಲಿರುವ ಧನಾತ್ಮಕ ನೋಟ, ಮನಸ್ಥಿತಿ, ಪ್ರಯತ್ನಗಳು ಬದುಕು ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದೇ ಅನಿಸುತ್ತದೆ.
ಪ್ರತಿಯೊಬ್ಬರೂ ಓದಬೇಕಾದ ಈ ಕೃತಿಯನ್ನು ಓದಿ ಹಾಗೂ ಇತರರಿಗೂ ಓದಿಸಿ.
ಅಕ್ಷರಕ್ಕೆ ಮಹತ್ತರ ಶಕ್ತಿಯೊಂದಿದೆ, ಜಡ ಮನವನ್ನು ಅಳಿಸಿಯೋ ನಗಿಸಿಯೋ ತಿಳಿ ಮಾಡುವ ವಿಶಿಷ್ಟ ಶಕ್ತಿಯದು. ಆ ಶಕ್ತಿಯ ಪ್ರಯೋಗ ಲೇಖಕರು ಸರಿಯಾಗಿ ಮಾಡಿದ್ದೆ ಆದರೆ ಅವರು ಓದುಗರ ಹೃದಯಾಸನದಲ್ಲಿ ಚಿರಸ್ಥಾಯಿಯಾಗಿ ನೆಲೆಸುತ್ತಾರೆ, ಹೀಗೆ ನೆಲೆಸುವ ಪೂರ್ಣ ಅರ್ಹತೆ ಶೃತಿ ಅವರಲ್ಲಿ ಇದೆ..
ತಮ್ಮ ಆತ್ಮಕಥೆಯ ಬಹು ಮುಖ್ಯ ಗೆಲುವನ್ನು ಕಣ್ಣಿಗೆ ಕಟ್ಟುವಷ್ಟು, ಬೇಸರ ಪಡಿಸದೆ, ಅತಿ ಭಾವುಕರಾಗದೆ ಹೇಳುವ ಕಾರ್ಯ ಅಷ್ಟು ಸುಲಭದ್ದಲ್ಲ. ಇಂತಹ ಕಷ್ಟದ ಕೆಲಸವನ್ನು ತಮ್ಮ ಮೊದಲ ಕೃತಿಯಲ್ಲೇ ಲೀಲಾಜಾಲವಾಗಿ ಮಾಡಿ ಗೆದ್ದಿದ್ದಾರೆ ಲೇಖಕರು. ಎಷ್ಟರ ಮಟ್ಟಿಗೆ ಎಂದರೆ ಅವರ ಪಕ್ಕದಲ್ಲಿ ಕೂತು ಅವರ ಕೈ ಹಿಡಿದು ಸಮಾಧಾನ ಮಾಡಿ ಬರುವಷ್ಟು ಹೃದಯ ಭಾರವಾಗಿಸುತ್ತದೆ.
ಹೆಣ್ಣೆಂದರೆ ಕೇವಲ ಮಾನುಷಿಯಲ್ಲ, ಅಬಲೆಯೂ ಅಲ್ಲ. ಅವಳೊಂದು ಮಹಾಶಕ್ತಿ ಎಂಬ ಕುವೆಂಪುರವರ ಸಾಲಿನ, ಬದುಕಿರುವ ನೈಜ ಉದಾಹರಣೆಯಲ್ಲೊಬ್ಬರು ಶೃತಿ... ನನಗಂತೂ ಪುಸ್ತಕ ಬಹಳ ಹಿಡಿಸಿತು... ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಓದಿ ಮತ್ತು ಇತರರಿಂದ ಓದಿಸಿ...
This book instills bravery, courage and resilience in you. Author's fight to come back after diagnosing with osteosarcoma shows the real power of human mind.
𝗗𝗶𝘀𝗲𝗮𝘀𝗲; a powerful word aka situation which can deteriorate not only your physical well being but your mental and "emotional" stability too. Diseases doesn't "take on" the factor whether you are rich or poor, a new born baby or an adult and mostly, especially nowadays, they don't even consider the factor that one is perfectly healthy until he is diagnosed. . A book that changed my perspective towards cancer, which we humans commonly refer to as the most deadly disease. . A happy cheerful girl hits by the harsh reality of osteosarcoma, a malignant type of tumor affecting bones. Like every human being she too was devastated with this sudden fate, she was broken, she was continuously triggered by the thought of "why me?!" but what made her unique from us is that she was able to cope up with the situation quickly and she accepted the reality, worked towards fighting it at the same time embracing each moment wholeheartedly. And people !! Are you curious to know the end result??!! . Ladies and gentlemen!! she is a winner!! She fought it with immense courage and got back to her normal routine with positive thoughts throughout. . This autobiography of Shruthi will get us to know about the bitter truths of cancer and how one can overcome it. Positive thoughts and positive people can make wonders, this was really showcased with her life. . A perfect simple book to remind all of us the importance of not giving up in any situations and to have a fully rich life without caring what will happen "tomorrow".