ಎಂ ಚಿದಾನಂದ ಮೂರ್ತಿಯವರ ಬಸವಣ್ಣನವರು, ಇಂಗ್ಲಿಷ್'ನಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿ. ಬಸವಣ್ಣನವರ ಬಗ್ಗೆ ಸಾಮಾನ್ಯವಾಗಿ ಕೇಳಲ್ಪಟ್ಟಿರುವ, ಓದಿರುವ ಸಂಗತಿಗಳಿಗಿಂತ ವಿಭಿನ್ನವಾಗಿದೆ.
ನೂರೇ ಪುಟದ ಈ ಚಿಕ್ಕ ಪುಸ್ತಕದಲ್ಲಿ ಇರುವ ವಿಷಯ, ನೋಟ, ಗ್ರಹಿಕೆ, ಹೊಳಹು ಅಗಾಧ! ಅನುವಾದವೇ ಉತ್ತಮವಾಗಿ ಮೂಡಿ ಬಂದಿರುವಾಗ ಮೂಲ ಕೃತಿ ಇನ್ನೆಷ್ಟು ಅಮೋಘವಾಗಿರಬಹುದು ಎಂದು ಯೋಚನೆಯಾಗುತ್ತದೆ 😛 ಇದೇ ಕಾರಣಕ್ಕೆ ಅನುವಾದಕರ (ಶಂಸ ಐತಾಳ) ಕುರಿತು ಬೆರಗು ಮೂಡುತ್ತದೆ 🤔
ಆಧ್ಯಾತ್ಮದ ಹಾದಿಯಲ್ಲಿರುವವರು, ಕ್ರಾಂತಿ ಮನೋಭಾವದವರು, ನಾಯಕರಾಗಬೇಕೆಂದಿರುವವರು ಓದಲೇಬೇಕಾದ ಕೃತಿ.
ಒಂದು ಉದಾಹರಣೆ: ಕಿತ್ತುಕೊಂಡು ಹೋಗುವವರು, ಕಳ್ಳತನ ಮಾಡುವವರಿಗೇ ಆ ವಸ್ತುಗಳ ಅವಶ್ಯಕತೆ ಹೆಚ್ಚಿರುವುದು ಎಂದು ಅರಿವು ಮೂಡಿಸುವ ಮೂಲಕ ಓದುಗರ ಹೃದಯದಲ್ಲಿ ವಿವೇಕದ ಬೀಜ ಬಿತ್ತುತ್ತಾರೆ, ವಿಶಾಲ ಮನೋಭಾವವನ್ನು ವಿಸ್ತರಿಸುತ್ತಾರೆ ❤️ ಬಸವಣ್ಣನವರನ್ನು ಚೆನ್ನಾಗಿ ಅರ್ಥ ಮಾಡಿಸುವ ಕೃತಿ ಇದು 🙂 ಈಗ, ಚಿದಾನಂದ ಮೂರ್ತಿಯವರ ಮಿಕ್ಕ ಪುಸ್ತಕಗಳ ಬಗ್ಗೆ ಕುತೂಹಲ ಬಹಳವಾಗಿದೆ 😀