A Must Read book period!!.collective articles of bravery by our soldiers.which media ignored or never heard Of such heart wrenching & chest thumping stories. Book contains ultimate sacrifice of Sikhs and other religious community soldiers who got martyred for the sake of this great nation. It's unfortunate time how some people of the same(sikh) community is tarnishing their image in national capital! ..
ಕೆಲವೊಂದು ಪುಸ್ತಕಗಳು ಹೇಗೆ ಅಂದ್ರೆ, ಓದಿದ ನಂತರ ಕಾಡುತ್ತಲೇ ಇರುತ್ತವೆ. ಕೆಲವು ಸ್ವಲ್ಪ ದಿನ ಕಾಡಿ ಸುಮ್ಮನಾದರೆ ಕೆಲವು ಪುಸ್ತಕಗಳು ಅದರ ಒಂದು ನೆನಪನ್ನು ಅಥ್ವಾ ಅದರ ಒಂದು ಸಣ್ಣ ಎಳೆಯನ್ನು ಮನಸಿನಲ್ಲಿ ಅಚ್ಚು ಹೊತ್ತಿ ಹೋಗಿರುತ್ತವೆ. ಆಗಾಗ ಆ ಅಚ್ಚಿತ್ತಿರುವ ನೆನಪು ನಮ್ಮನ್ನು ಕಾಡುತ್ತಲೇ ಇರುತ್ತದೆ ಅಂತಹ ಸಾಲಿಗೆ ಸೇರುವುದು ಈ ಪುಸ್ತಕ. ತುಂಬಾ ದಿನಗಳ ನಂತರ ಒಂದು ಸೀರಿಯಸ್ ನೋಟ್ ಓದಬೇಕು ಅನಿಸಿ ಕೈಗೆ ಎತ್ತಿಕೊಂಡೆ, ಕೆಲಸದ ಒತ್ತಡಗಳ ನಡುವೆ ಹಿಡಿದ ಪುಸ್ತಕ ಬಿಟ್ಟು ಹೋಗಲೇ ಬೇಕಾಗಿತ್ತು ಆದರೆ ಇವತ್ತು ಸಂಜೆಯಿಂದ ಪಟ್ಟು ಹಿಡಿದು ಕುಳಿತು ಮುಗಿಸಿ ಈಗ ಯೋಚನೆ ಹತ್ತಿಸಿಕೊಂಡು ಕುಳಿತಿರುವೆ. ಹೆಸರೇ ಹೇಳುವಂತೆ ಯುದ್ಧ ಭೂಮಿಯ ಅನೇಕ ರೋಚಕತೆಗಳು ನಮಗೆ ಈ ಸಮರ ಭೈರವಿ ತಿಳಿಸುತ್ತಾ ಹೋಗುತ್ತಾಳೆ. ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರಿಗೂ ಕೂಡ ಸೈನ್ಯದ ಆಗು ಹೋಗುಗಳ ಬಗ್ಗೆ ಸ್ವಲ್ಪ ಮಾಹಿತಿ ಸಿಗುತ್ತಿರುವ ಕಾರಣ, ಪುಸ್ತಕ ಓದೋಕೆ ಕಷ್ಟ ಅನಿಸುವುದಿಲ್ಲ. ಅದರಲ್ಲೂ ಪುಲ್ವಾಮಾ ದಾಳಿ, ಉರಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ತಿಳಿಸಿರುವ ಎಲ್ಲಾ ಭಾರತೀಯರು ಅದರ ಹಿಂದಿನ ಆಗು ಹೋಗುಗಳ ಬಗ್ಗೆ ತಿಳಿಯ ಬಯಸಿದರೆ ಈ ಪುಸ್ತಕ ಓದಿ. ಆಲೀವ್ ಗ್ರೀನ್ ಬಟ್ಟೆಯ ಹಿಂದಿನ ಕಥೆಗಳು ಕಣ್ಣಲ್ಲಿ ನೀರು ತರಿಸುತ್ತವೆ.
ಪ್ರತಿಯೊಬ್ಬ ಭಾರತೀಯ ಓದಲೇ ಬೇಕಾದ ಪುಸ್ತಕವಿದು. ಪುಸ್ತಕ ಓದಿದ ನಂತರ ದಕ್ಷಿಣ ಭಾರತದಲ್ಲಿ ಬೆಚ್ಚಗೆ ಕುಳಿತಿರುವ ನಾವು ಉತ್ತರ ಭಾರತದ ಅದರಲ್ಲೂ ಗಡಿ ಪ್ರದೇಶಗಳ ಸ್ಥಿತಿಯನ್ನು ಅರಿಯುವ ಅವಶ್ಯಕತೆ ತುಂಬಾ ಇದೆ ಅನಿಸಿಬಿಟ್ಟಿದೆ.