Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.
ಸಿಧ್ಧಾರ್ಥ್ ಜೀವನದ ಬಗ್ಗೆ ಆಳವಾಗಿ ತಿಳಿಯುವ ಆಸಕ್ತಿಯಿಂದ ಪುಸ್ತಕವನ್ನು ಖರೀದಿ ಮಾಡಿದೆ. ಆದರೆ ಓದಿದ ಮೇಲೆ ನನಗೆ ಬಹಳ ನಿರಾಸೆಯಾಯಿತು. ಸಿಧ್ಧಾರ್ಥ್ ಬಾಲ್ಯದ ಬಗ್ಗೆ ಒಂದು ಚೂರು ರಿಸರ್ಚ್ ನಡೆದಿಲ್ಲ. ಹೋಗಲಿ ಅವರ ವ್ಯಾಪಾರದ ಬಗ್ಗೆ ಕೂಡ ಆಳವಾದ ಅದ್ಯಯನ ರವಿ ಬಳೆಗೆರೆಯವರು ಮಾಡಿಯೆಇಲ್ಲ. ಪುಸ್ತಕದಲ್ಲಿ ಯಾರ ಸಾವನ್ನು ವಿಜೃಂಭಿಸಾಬಾಅರದು ಅಂತ ಬರೆದು ಖುದ್ದು ಅವರೇ ಸಿದ್ದಾರ್ಥ ರವರ ಸಾವನ್ನು ಇಟ್ಟುಕೊಂಡು ಕೇವಲ ದುಡ್ಡು ಮಾಡೋಕೆ ಸ್ವಲ್ಪವೂ ಕಷ್ಟ ಪಡದೆ ಬರೆದ ಪುಸ್ತಕ ರವಿ ಬಳೆಗೆರೆಯವರ ಮೇಲೆ ಇದ್ದ ಅಭಿಪ್ರಾಯವನ್ನು ಕೊಂಚ ಕಡಿಮೆ ಮಾಡಿದ್ದಂತೂ ನಿಜ. ಅವರು ಹೇಳಿದ ವಿಚಾರಗಳನ್ನೇ ಅವರ ಮಗಳು ಲಕ್ಷ್ಮಿ ಬಳೆಗೆರೆ ಮತ್ತೆ ಬರೆಯುತ್ತಾರೆ. ಹೊಸ ದೃಷ್ಟಿಕೋಣ ಕೊಡುವುದೇ ಇಲ್ಲ. ಮಗಳ ಅಡ್ವರ್ಟೈಸ್ಮೆಂಟ್ ನಂತೆ ಇತ್ತು. ಪ್ಲೇ ವಿನ್ ಲಾಟರೀ ನಲ್ಲಿ ಮೋಸ ನಡೆಯುವ ಸಂಗತಿ ಬರೆದಿದ್ದರು ಅದು ಯಾಕೋ ಸಿಧ್ಧಾರ್ಥ್ ವಿಷಯದಿಂದ ಬಹಳಾನೇ ಡೀವಿಯೇಟ್ ಆದಂತಿತ್ತು. ಬಹಳಷ್ಟು ಅಂತೇ ಕಾಂತೆಗಳನ್ನಿಟ್ಟುಕೊಂಡು ಒಂದು ಪುಸ್ತಕ ಬರೆದಂತಿದೆ.ಅವರ ಕಾಲೇಜ್ ಗೆಳೆಯನು ಜಾಸ್ತಿ ಏನು ಹಂಸಿಕೊಂಡಿಲ್ಲ. ಈ ಎಲ್ಲ ಮಾಹಿತಿಯು ಟೀವೀ ನಲ್ಲಿ ಆಗಲೇ ನಾವು ಕೇಳಿದ್ದಾಗಿದೆ. 100 ರೂಪಾಯಿ ಕೊಟ್ಟು ಮತ್ತೆ ಅದನ್ನೇ ಓದ ಮಾಡಿದ ರವಿ ಬಳೆಗೆರೆ ಓದುವ ಸಮುದಾಯಕ್ಕೆ ನ್ಯಾಯ ದೊರೆಕಿಸಿಲ್ಲ ಎನ್ನುವುದು ನನ್ನ ಅಭಿಪ್ರಾಯ.