Jump to ratings and reviews
Rate this book

ಅಘೋರಿಗಳ ಲೋಕದಲ್ಲಿ

Rate this book
A Kannada Novel By Santhoshakumar Mehandale

328 pages, Paperback

Published January 1, 2019

14 people are currently reading
177 people want to read

About the author

ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು.
" ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ಎಲ್ಲಾ ಪತ್ರಿಕೆಗಳ ವಿಶೇಷಾಂಕಗಳನ್ನು ಬರೆಯುತ್ತಿರುತ್ಥಾರೆ. ಕನ್ನಡದ ಪ್ರಮುಖ ಅಕಾಡೆಮಿ ಹಾಗು ಸಾಹಿತ್ಯ ಪರಿಷತ್ತು ಪ್ರಕಟಿಸುವ ಸಂಪಾದನಾ ಕೃತಿಗಳಲ್ಲಿ ಲೇಖನ ಮತ್ತು ವೈಜ್ಞಾನಿಕ ಕಥೆಗಳು ಪ್ರಕಟವಾಗಿವೆ ದಿಬ್ಬದ ಬಂಗಲೆ, ಎರಡನೆಯ ಹೆಜ್ಜೆ, ಸೂರ್ಯ ಗರ್ಭ, ಮಹಾ ಯುದ್ಧ, ನಾನು ಅಘೋರಿಯಲ್ಲ, ಕಾಶ್ಮೀರದಲ್ಲೊಂದು ಸಂಜೆ, ಮಹಾ ಪತನ ಕೆಂಪು ಚಕ್ರಗಳು, ಹಸಿವು ಗೆದ್ದ ಹುಡುಗಿ ( ಹೋರಾಟ – ಇರೋಮ ಶರ್ಮಿಳಾ ಚಾನು – ಕಥಾನಕ), ಯಾವ ಪ್ರೀತಿಯೂ ಅನೈತಿಕವಲ್ಲ - ಮನೋ ವೈಜ್ಞಾನಿಕ, ಅವನು ಶಾಪಗ್ರಸ್ಥ ಗಂಧರ್ವ, ಕಾಶ್ಮೀರವೆಂಬ ಖಾಲಿ ಕಣಿವೆ ಇವರ ಹಲವು ಕಾದಂಬರಿಗಳು. ಮೂರನೆಯ ಆಯಾಮದಲ್ಲಿ, ತಡವಾಗಿ ಬಿದ್ದ ಮಳೆ (ಕಥಾ ಸಂಕಲನ)ಜನಪ್ರಿಯ, ಮೂರನೆಯ ಕಣ್ಣು (ಜನಪ್ರಿಯ ವಿಜ್ಞಾನ ಸಾಹಿತ್ಯ),. ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಮಾಧ್ಯಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜೀವ ಗಾಂಧಿ ಎಕ್ಸೆಲೆನ್ಸಿ ಗೋಲ್ಡ್ ನ್ಯಾಶನಲ್ ಅವಾರ್ಡ್, ಡಾ. ಶಿವರಾಮ್ ಕಾರಂತ ಪ್ರಶಸ್ತಿ, ಕರ್ನಾಟಕ ಭೂಷಣ ಮುಂತಾದ ಪ್ರಶಸ್ತಿಗಳು ಲಭಿಸಿವೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
15 (39%)
4 stars
14 (36%)
3 stars
5 (13%)
2 stars
3 (7%)
1 star
1 (2%)
Displaying 1 - 11 of 11 reviews
Profile Image for Prashanth Bhat.
2,155 reviews137 followers
Read
January 21, 2020
ಅಘೋರಿಗಳ ಲೋಕದಲ್ಲಿ- ಸಂತೋಷ್ ಕುಮಾರ್ ಮೆಹೆಂದಳೆ

ಪುಸ್ತಕ ಬಿಡುಗಡೆಯಾದಾಗಲೇ ಓದಬೇಕಿತ್ತು. ಸಮಾ ಬೋರ್ ಆದಾಗ ಓದುವ ಅಂತ ತಳ್ಳಿ ತಳ್ಳಿಕೊಂಡು ಬಂದವನಿಗೆ ನಾನೇನು ಅಮರನಾ? ಅಂತನ್ನಿಸಿ ಶುರು ಮಾಡಿದ್ದು.
ಹಿಂದೆ ಸುರೇಶ ಸೋಮಪುರ ಅವರ ಅಘೋರಿಗಳ ನಡುವೆ ಓದಿದ್ದೆ. ಅದು ಕಾದಂಬರಿ ಪ್ರಕಾರದ್ದು. ಅದಾದ ಬಳಿಕ ರಸಿಕ ಪುತ್ತಿಗೆ ಅವರ ಮಂತ್ರ ತಂತ್ರ ಯಂತ್ರ ಇತ್ಯಾದಿ ವಾಮಾಚಾರಕ್ಕೆ ಸಂಬಂಧಪಟ್ಟದ್ದು ಓದಿದ್ದೆ.ರಘು ವೆಂಕಟಾಚಲಯ್ಯ ಅವರ ಬಿದಿರಿನ ಗಳ ಕಾದಂಬರಿಯಲ್ಲಿ ಕೂಡ ನೈಜ ವಿವರಣೆಗಳು ಬರುತ್ತವೆ.ಅದೂ ಕಾದಂಬರಿ ಪ್ರಕಾರವೇ.
ಆದರೆ ಈ ಪುಸ್ತಕ ಅವೆಲ್ಲಕ್ಕಿಂತ ವಿಭಿನ್ನ. ಯಾಕೆಂದರೆ ಇದು ಫಸ್ಟ್ ಹ್ಯಾಂಡ್ ಮಾಹಿತಿ. ಲೇಖಕರೇ ಖುದ್ದಾಗಿ ಹೋಗಿ ಸಂಗ್ರಹಿಸಿದ ವಿವರಗಳು ,ಫೋಟೋ ಸಹಿತ. ರೋಚಕ ಅನ್ನುವುದಕ್ಕಿಂತ ನಮ್ಮ‌ಕಣ್ಣಿಗೆ ಕಾಣುವ ಆದರೆ ಅರಿವಿಗೆ ನಿಲುಕದ ಎಷ್ಟೋ ಇದೆ ಎಂಬುದನ್ನೂ, ಜನರ ಬಾಯಿಂದ ಬಾಯಿಗೆ ಹಬ್ಬಿ ದಂತಕಥೆಯ ರೂಪ ಪಡೆದ ಹಲವು ಪೊಳ್ಳು ನಂಬಿಕೆಗಳ ತಾನಾಗಿ‌ ಪರಿಶೀಲಿಸಿ ಒಡೆದು ಹಾಕಿದ ರೀತಿ ಇಷ್ಟವಾಯಿತು.
ರೋಚಕತೆ ಬೇಕಾದವರಿಗೆ ಇಲ್ಲಿನ ಹಲವಾರು ಘಟನೆಗಳಿವೆ.
ಆದರೆ ನನಗೆ ಅದಕ್ಕಿಂತ ಇಷ್ಟವಾಗಿದ್ದು ಪ್ರತಿಯೊಂದು ವಿಷಯವನ್ನೂ ಒಳ್ಳೆಯ ಚರ್ಚೆಯಾಗಿ ಪರಿವರ್ತಿಸಿ ಪರ ವಿರೋಧ ಎರಡನ್ನೂ ಬರೆದ ಶೈಲಿ. ಹಲವಾರು ಅಘೋರಿ ನಾಗಾ ಸಾಧುಗಳ ಸಂದರ್ಶನ‌‌ ಮಾಡುತ್ತಾ, ಅವರು ನಡೆಸುವ ಕ್ರಿಯೆಗಳಿಗೆ ಸಾಕ್ಷಿಯಾಗುತ್ತಾ, ಅವರ ಚಿಲುಮೆ,ಮದ್ಯದ‌ ಬಲಹೀನತೆ, ಕಾಮ, ಹಣಕ್ಕಾಗಿ ಅವರು ನಡೆಸುವ ಆಟಗಳ‌ ತೆರೆದಿಡುತ್ತಾ ಈ ಪುಸ್ತಕ ಒಂದೊಳ್ಳೆಯ ಅನುಭವ ಕೊಡುತ್ತದೆ.

ಇವೆಲ್ಲವನ್ನೂ‌ ಹೇಳಿ ಕೂಡ ಎಲ್ಲೂ ಸಂತೋಷರು ಇದಮಿತ್ಥಂ ಎಂದು ‌ತೀರ್ಪು ಕೊಡಲು‌ ಹೋಗುವುದಿಲ್ಲ. ಅದಕ್ಕೆ ಮೆಚ್ಚುಗೆ. ಅವರ ಶ್ರಮಕ್ಕೆ ನಮಸ್ಕಾರ.
ಆಸಕ್ತರಿಗೆ ಒಳ್ಳೆಯ ಓದು.
Profile Image for Mallikarjuna M.
51 reviews14 followers
December 9, 2023
ಲೇಖಕರೇ ಅಘೋರಿಗಳ ನಡುವೆ ಒಡನಾಡಿ ಬರೆದಿರುವುದರಿಂದ ಅಘೋರಿಗಳ ಪ್ರಪಂಚದ ಬಗ್ಗೆ ಕುತೂಹಲ ಇರುವವರಿಗೆ first hand experience ನೀಡುವ ಪುಸ್ತಕ. ಪುಸ್ತಕ ಇನ್ನೂ ಸಂಕ್ಷಿಪ್ತವಾಗ ಬಹುದಿತ್ತು ಮತ್ತು ಕೆಲವೊಂದು ಕಡೆ ಅನಗತ್ಯ ವಿವರಣೆ ಹೆಚ್ಚಿದೆ ಎನಿಸಿತು.
Profile Image for Vrushi Pattar.
4 reviews
October 7, 2025
ಅಘೋರಿಗಳು,ನಾಗಾ ಸಾಧುಗಳ ಬಗ್ಗೆ ಬರೀ ಅಂತೆ,ಕಂತೆಗಳ ಸಂತೆನೇ ಕೇಳುತ್ತಿದ್ದೆ. ಅಘೋರಿಗಳ ಸುತ್ತ ಕಟ್ಟಿರುವ ಇಂತಹ ಊಹಾಪೋಹಗಳ ಕೋಟೆ ಭೇದಿಸಿ ನೈಜ ಸ್ಥಿತಿ ಅರಿಯಲು ಸಂತೋಷ್ ಮೆಹಂದಳೆ ಅವರ 'ಅಘೋರಿಗಳ ಲೋಕದಲ್ಲಿ' ಪುಸ್ತಕ ಪರಿಣಾಮಕಾರಿ ಅಸ್ತ್ರವಾಯಿತು.

ಒಬ್ಬ ವ್ಯಕ್ತಿ ಅಘೋರಿಯಾಗಿ ಬದಲಾಗಲು ಅನುಸರಿಸುವ ಮಾರ್ಗದಿಂದ ಹಿಡಿದು ಅವನ ಸಾಧನೆಗಳೇನು? ಅವು ಎಷ್ಟು ಸತ್ಯ? ಎಷ್ಟು ಸುಳ್ಳು? ಅವುಗಳಿಂದ ಸಮಾಜಕ್ಕಾಗುವ ಒಳಿತುಗಳೇನು? ಎಂಬುದನ್ನು ಚರ್ಚಿಸಿದ್ದಾರೆ.

ಗುರುವಿನಿಂದ ಶಿಷ್ಯನು ಅಕ್ಷಿಭೂತವನ್ನು ಪಡೆಯುವ ವಿಧಾನ ಓದಿದಾಗ ಮೈ ಝುಮ್ ಎನಿಸುತ್ತದೆ. ಶವಸಂಭೋಗದಂತಹ ಆಚರಣೆಗಳಿಗೆ ಲೇಖಕಕರು ಪ್ರತ್ಯಕ್ಷದರ್ಶಿ ಆಗಿ ಅದರ ವಿಚಿತ್ರ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಅಘೋರಿಗಳು ಅದನ್ನು ಆಚರಿಸಲು ಕಾರಣಗಳು, ಅದು ಆರಂಭವಾದ ಬಗೆ ಹೇಳಿದ್ದಾರೆ. ಸಹಸ್ರ ಜೀವ ಬಲಿಯ ನಿಜವಾದ ಅರ್ಥ, ಕುಂಡಲಿನಿ ಶಕ್ತಿ ಮತ್ತು ಮನ್ಮಥ ರೇಖೆಗಳ ಸುತ್ತ ಇರುವ ತಪ್ಪು ಮಾಹಿತಿಗಳನ್ನು ಅಳಿಸಿ ಹಾಕಿದ್ದಾರೆ.

ಅಘೋರಿಗಳು, ಕಪಾಲಗಳು, ಅಖಾಡುಗಳು, ಕುಂಭಮೇಳ, ಶಾಯಿ ಸ್ನಾನ, ಚಿತಾಭಸ್ಮ, ಮಾಂಸ ಭಕ್ಷಣೆ,ಅಘೋರಿಗಳು ಶಿವನನ್ನೇ ಆರಾಧಿಸಲು ಕಾರಣ, ಅವರ ಸ್ಮಶಾನವಾಸದ ಕಾರಣಗಳು,ಹೀಗೆ ಹಲವಾರು ವಿಷಯಗಳ ಬಗ್ಗೆ ತಿಳಿಸಿಕೊಡುತ್ತಾ 'ನಿಶಿದ್ಧ ಪ್ರಪಂಚದ ಅನುಭವ'ಕ್ಕೆ ಇಳಿಸುತ್ತದೆ.
Profile Image for Aadharsha Kundapura.
59 reviews
July 18, 2025
ಅಘೋರ ಲೋಕದ ಕರಾಳ ಅನುಭವಗಳ ಜೊತೆಗೆ ಅಘೋರಿಗಳ ಬಗ್ಗೆ ನಾವು ತಿಳಿಯದ ವಿಚಾರಗಳನ್ನು ಹೇಳಿದ್ದಾರೆ ಮೆಹೆಂದಳೆ ಅವರು..

ಅಘೋರಿಗಳ ಆ ಕರಾಳ ಲೋಕಕ್ಕೆ ಬೇಟಿಯಾಗಿ ತಮ್ಮ ಅನುಭವಗಳನ್ನು, ಅಘೋರಿಗಳ ಕಾರ್ಯಸಾಧನೆ, ಪೂಜೆ, ಮಾಟ ಮಂತ್ರಗಳ ಜೊತೆಗೆ ಭೀಭತ್ಸವಾದ ಶವ ಸಂಭೋಗ, ಶವ ಭಕ್ಷಣೆ, ಮೈನಡುಗಿಸುವಂತಹ ಕಠೋರ ಸಾಧನೆಗಳ ಪ್ರದರ್ಶನಗಳನ್ನು ಒಮ್ಮೊಮ್ಮೆ ಓದಲಾಗದೆ ಪುಸ್ತಕ ಮುಚ್ಚಿಟ್ಟಿದ್ದು ಉಂಟು. ಆದರೆ ಅದನೆಲ್ಲ ಎಲ್ಲಾರಿಗು ಪರಿಚಯ ಮಾಡಿಸುವುದಕ್ಕಾಗಿ ಅದನ್ನೆಲ್ಲ ಅಚ್ಚರಿಯಿಂದ ನೋಡಿ, ಎಲ್ಲಾರಿಗು ಪುಸ್ತಕದ ಮೂಲಕ ಸಚಿತ್ರಗಳ ಮೂಲಕ ತಿಳಿಸಲು ಹೊರಟ ಸಂತೋಷ್‌ಕುಮಾ‌ರ್ ಮೆಹೆಂದಳೆ ಅವರ ಧೈರ್ಯಕ್ಕೊಂದು ದೊಡ್ಡ ಸಲಾಮ್.

ಅಘೋರಿಗಳ ಪೂಜ ಕ್ರಮಗಳು, ಕ್ಷುದ್ರಶಕ್ತಿಗಳ ಓಲೈಕೆ, ಅನಾನುಭವಿ ಪೂಜಾವಿಧಾನಗಳಲ್ಲಿ ಕ್ಷುದ್ರಶಕ್ತಿಗಳಿಂದ ಭೀಕರವಾಗಿ ಸಾಯುವಂತ ಬಾಬಗಳ ದಂತಕಥಗಳು ಮೈಕಂಪಿಸುವಂತೆ ಮಾಡುವುದಂತು ಹೌದು..

ಕೊನೆಗು ಈ ಮಾಟಮಂತ್ರ, ಕ್ಷುದ್ರಶಕ್ತಿಗಳ ಆಹ್ವಾನ, ಅಮಾನುಷ ಶಕ್ತಿಗಳನ್ನು ನಂಬಬೇಕಾ? ಎಂಬ ಪ್ರಶ್ನೆಗೆ ಲೇಖಕರು "ನೀವುಂಟು, ನಿಮ್ಮ ನಂಬಿಕೆಗಳುಂಟು".. ಎಂದು ಅವರರವರಿಗೆ ಬಿಟ್ಟಿದ್ದಾರೆ..
Profile Image for Akasharagala Alemaari.
15 reviews2 followers
June 1, 2020
*“ಅಘೋರಿಗಳ ಲೋಕದಲ್ಲಿ”*
~ನಿಷಿದ್ಧ ಪ್ರಪಂಚದ ಅನುಭವ~

ಮೆದುಳಿಗೆ ಎಲೆಕ್ಟ್ರೋಡ್ ಗಳನ್ನು ಹಾಕಿ ಅಲ್ಲಿ ಕಂಪನಗಳನ್ನು ಎಬ್ಬಿಸಿ ಆಯಾ ಭಾಗವನ್ನು ಉದ್ರೇಕಿಸಿದರೆ, ಆಯಾ ಭಾಗಕ್ಕೆ ಸಂಬಂಧಿಸಿದ ಅಂಗಗಳು ವ್ಯಕ್ತಿಯ ಹತೋಟಿ ಮೀತಿ ಕೆಲಸ ಮಾಡುತ್ತವೆ ಎನ್ನುವುದು ಗೊತ್ತೇ ನಿಮಗೆ?... ನಗುವುದು, ಅಳುವುದು, ಕಣ್ಣೀರು ಬರಿಸುವುದು, ಕೈ ಮೇಲೆತ್ತಿ ಸುಮ್ಮನೆ ಕೂರುವುದು, ಹೀಗೆ ಮೆದುಳಿನ ಭಾಗಗಳ ಮೇಲೆ ವೈಜ್ನಾನಿಕವಾಗಿ ಹತೋಟಿ ಸಾಧಿಸಬಹುದಾಗಿದ್ದು, ಹಾಗೆ ಮನುಷ್ಯನನ್ನು ಮುಟ್ಟದೆ ಅಲೆಗಳ ಶಕ್ತಿಯ ರೂಪದಲ್ಲಿ ಆಯಾ ಭಾಗದ ಸಂವೇದನಾಶೀಲ ನರಜಾಲವನ್ನು ಉದ್ರೇಕಿಸಿ ಶಕ್ತಿಯನ್ನು ಹೊರ ಹೊಮ್ಮಿಸುವುದೇ ಸಾಧಕನ ಯಶಸ್ಸು ಎನ್ನಿಸಿಕೊಳ್ಳುತ್ತದೆ. ಅದಕ್ಕೆ ಎದುರಿನ ದೇಹ ಪ್ರತಿಕ್ರಿಯಿಸಿದರೆ ಅದೇ ಸಿದ್ಧಿ.

ವಿಸ್ಮಯಕಾರಿ ಲೋಕದ, ಮಾನವನ ಸಂಘ ಜೀವನಕ್ಕೆ ಹೊರತಾದ ಸಹಜವಲ್ಲದ ಬದುಕಿನ, ವಿಭಿನ್ನವಾದ ಜೀವನಶೈಲಿಯ, ಮನುಕುಲದ ಅಪರೂಪದ ಮತ್ತು ಭೀಭತ್ಸ ಪಳೆಯುಳೀಕೆಯಾಗೇ ಮುಂದುವರೆದ ಇವರ ಬಗ್ಗೆ ಓದುವಂತದ್ದು ಎನಿದೇ.? ಎಂದು ಸುಮ್ಮನೆ ಕುಳಿತರೆ ಯಾವತ್ತಿಗೂ ಆ ಲೋಕದ ರೀತಿ ನೀತಿಗಳು ಬರೀ ಕತೆಯಾಗೇ ತಮ್ಮ ಮಸ್ತಿಷ್ಕದಲ್ಲಿ ಉಳಿದು ಬಿಡುತ್ತವೆ. ಹಾಗಾಗದಂತೆ ಆಗಬೇಕಾದರೆ ಈ ಪುಸ್ತಕವನ್ನು ನೀವು ಕೈಗೆತ್ತಿಕೊಳ್ಳಲೆಬೇಕು. ಅದನ್ನು ಓದಿ ಅನುಭವಿಸಲೆಬೇಕು. ಆಗಾಲೇ ಅದರ ರುಚಿ ಏನು ಅಂತ ತಿಳಿಯುವುದು.
233 reviews7 followers
April 5, 2025
This is definitely a deviation from the kind of books that I usually read - a typical "Science and Technology" guy. I picked this book to know more about the lifestyle of Aghoris and I'm glad I did so. The author has gone through many challenges - money-wise and time-wise to collate his experiences of being and learning about them. Big big kudos for the author's patience and persistence for this.

Although I don't approve of some of their rituals - necrophilia being the most disturbing followed by cannibalism, yep, I AM being judgemental, the author boldly queries the reason for such behaviors from these 'babas'. The author's audacity to ask such confrontational questions is clearly commendable.

I was expecting more on how these monks achieved skills like mind-reading, out-of-body experience and such, but the author asserts that these are mostly based on people's beliefs and nothing more. Some monks also confirmed this during the course of the author's interview. Towards the end, the author says that a good number of monks have commercialized this as a business including those who try to use trickery and deception to 'loot' innocent and credulous folks.

Despite the fact that some monks perform these publicity stunts, I am left with curious inquisitiveness regarding how they can lead such an austere life, survive in the most numbing temperatures, starve for days together and what would they actually achieve by such a rigorous and stern meditation.
Profile Image for Raghavendra Shekaraiah.
34 reviews
January 28, 2025
ಅಘೋರಿಗಳು ಎಂದರೆ ನಮ್ಮ ಸಮಾಜದಲ್ಲಿ ಒಂದು ರೀತಿಯ ಭಯ ಮತ್ತು ಕುತೂಹಲ ಎರಡನ್ನೂ ಹುಟ್ಟಿಸುವ ವಿಷಯ. ಈ ಪುಸ್ತಕವು ಅಘೋರಿಗಳ ಬಗ್ಗೆ ಇರುವ ಅನೇಕ ತಪ್ಪು ಕಲ್ಪನೆಗಳನ್ನು ಮತ್ತು ಅಪಾರ್ಥಗಳನ್ನು ನಿವಾರಿಸುವ ಒಂದು ಪ್ರಯತ್ನ. ಪುಸ್ತಕದ ಆರಂಭದಲ್ಲಿ ಇದು ಕಾದಂಬರಿ ಎಂದು ತೋರಿದರೂ, ವಾಸ್ತವದಲ್ಲಿ ಇದು ಅಘೋರಿಗಳ ಜೀವನ ಮತ್ತು ಆಚರಣೆಗಳ ಕುರಿತ ವಿವಿಧ ಘಟನೆಗಳ ಸಂಗ್ರಹ. ಲೇಖಕರು ಪ್ರತಿಯೊಂದು ಆಚರಣೆಯ ಹಿಂದಿನ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ವಿವರಿಸಲು ಪ್ರಯತ್ನಿಸಿದ್ದಾರೆ.

ಲೇಖಕರು ತಮ್ಮ ಅನುಭವಗಳ ಮೂಲಕ ಈ ಸಂಪ್ರದಾಯದ ಕುರಿತು ತಮಗೆ ಅರ್ಥವಾದಂತೆ ವಿಶ್ಲೇಷಿಸಿದ್ದಾರೆ. ವಿವಿಧ ಅಘೋರಿಗಳೊಂದಿಗಿನ ಸಂವಾದಗಳು ಮತ್ತು ಅವರ ಜೀವನ ಶೈಲಿಯ ಅವಲೋಕನವು ಪುಸ್ತಕದ ಪ್ರಮುಖ ಭಾಗವಾಗಿದೆ. ಪುಸ್ತಕದಲ್ಲಿ ಒಂದು ಮುಖ್ಯ ಅಂಶವೆಂದರೆ ನಿಜವಾದ ಅಘೋರಿಗಳು ಯಾರಿಗೂ ಕೇಡು ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಅಘೋರಿಗಳ ಸಾಧನೆಯ ಮಾರ್ಗ ಭಿನ್ನವಾಗಿದ್ದರೂ, ಅವರ ಗುರಿ ಸತ್ಯದ ಅನ್ವೇಷಣೆ ಮತ್ತು ಆಧ್ಯಾತ್ಮಿಕ ಪ್ರಗತಿಯೇ ಆಗಿದೆ. ಅತ್ಯಾಶ್ಚರ್ಯಕರ ಘಟನೆಗಳನ್ನು ನಿರೀಕ್ಷಿಸುವವರಿಗೆ ಈ ಪುಸ್ತಕ ನಿರಾಶೆ ಮೂಡಿಸಬಹುದು. ಆದರೆ ಅಘೋರಿ ಸಂಪ್ರದಾಯದ ಬಗ್ಗೆ ಆಳವಾದ ತಿಳುವಳಿಕೆ ಪಡೆಯಲು ಬಯಸುವವರಿಗೆ ಇದು ಉಪಯುಕ್ತ ಮಾರ್ಗದರ್ಶಿ.

ಒಟ್ಟಾರೆಯಾಗಿ, ಈ ಪುಸ್ತಕವು ಅಘೋರಿ ಸಂಪ್ರದಾಯದ ಕುರಿತು ವೈಜ್ಞಾನಿಕ ದೃಷ್ಟಿಕೋನದಿಂದ ಬರೆಯಲ್ಪಟ್ಟ ಒಂದು ಪ್ರಾಮಾಣಿಕ ಪ್ರಯತ್ನ. ಆಧ್ಯಾತ್ಮಿಕ ಅನ್ವೇಷಕರಿಗೆ ಮತ್ತು ಈ ವಿಷಯದಲ್ಲಿ ಆಸಕ್ತಿ ಇರುವವರಿಗೆ ಇದು ಖಂಡಿತ ಓದುವ ಮೌಲ್ಯವುಳ್ಳ ಪುಸ್ತಕ.
61 reviews9 followers
September 11, 2020
ಹಲವಾರು ಹೊಸ ವಿಷಯಗಳು ಮತ್ತು ಲೇಖಕರ‌ ಅನುಭವಗಳು. "ಅಘೋರಿ" ಹೆಸರನ್ನು ಹೊರತುಪಡಿಸಿ, ಹೆಚ್ಚು ತಿಳಿದುಕೊಳ್ಳ ಬಯಸುವವರಿಗೆ.
1 review
March 26, 2021
A nice insight on Agoris life and the truth behind it ... kudos to the author’s work!
1 review
May 29, 2022
It's really interesting
This entire review has been hidden because of spoilers.
Displaying 1 - 11 of 11 reviews

Can't find what you're looking for?

Get help and learn more about the design.