ಪರಿಸರ ವ್ಯವ್ಯಸ್ಥೆಯಲ್ಲಿ ಪ್ರಾಣಿಪಕ್ಷಿಗಳ ಪಾತ್ರ, ಪ್ರಾಣಿ ಮರಗಿಡಗಳ ಸಂಬಂಧವನ್ನು ತಿಳಿಸಿ, ಚಿರತೆ ಹುಲಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಗುರುತಿಸುವ ಬಗ್ಗೆ ನಿರೂಪಿಸಿ, ಕಲೆ ಸಂಸ್ಕೃತಿಯಲ್ಲಿ ವನ್ಯಜೀವಿಗಳ ಪ್ರಭಾವವನ್ನು ಕಾಣಿಸಿ, ಮಾನವ-ವನ್ಯಜೀವಿಗಳ ಸಂಬಂಧದ ಕೊಂಡಿಯನ್ನು ಕೂಡಿಸಿ ಬರೆದಿರುವ ಪುಸ್ತಕವೇ ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು. ಈ ಪುಸ್ತಕದ ನಾಯಕರು ಹುಲಿ, ಚಿರತೆ, ಆನೆ, ಕಾಟಿ, ತರಕರಡಿ, ಬೂರಗ, ಉರುಗಲು, ಹಾಲುವಾಣ ಮರಗಳು, ಅರಣ್ಯ ಕಾಯುವ ಸಿಬ್ಬಂದಿ, ಬಿಳಿಗಿರಿರಂಗನಬೆಟ್ಟ, ಬುಕ್ಕಾಪಟ್ಟಣ, ನಾಗರಹೊಳೆಯ ಕಾಡುಗಳು, ಇತ್ಯಾದಿ.
ಸಾಹಿತ್ಯವೂ, ವನ್ಯಜೀವಿ ವಿಜ್ಞಾನವೂ ಸಮಕೈಯಾಗಿ ಸಾಗುವ ಹಾಗೆ ಪ್ರಕರಣಗಳೊಂದಿಗೆ ಪುಸ್ತಕದಲ್ಲಿ ವಿವರಿಸಿದ್ದಾರೆ ದೇಶದ ಪ್ರಖ್ಯಾತ ವನ್ಯಜೀವಿ ವಿಜ್ಞಾನಿ ಮತ್ತು ಸಂರಕ್ಷಕರಾದ ಸಂಜಯ್ ಗುಬ್ಬಿಯವರು. ಇದು ಇವರ ಎರಡನೇ ಕನ್ನಡ ಪುಸ್ತಕ. ಇತ್ತೀಚಿಗೆ ಬಿಡುಗಡೆಯಾದ ಆಂಗ್ಲ ಭಾಷೆಯ ಸೆಕೆಂಡ್ ನೇಚರ್: ಸೇವಿಂಗ್ ಟೈಗರ್ ಲ್ಯಾಂಡ್ಸ್ಕ್ಯಾಪ್ಸ್ ಇನ್ ದಿ ಟ್ವೆಂಟಿ-ಫಸ್ಟ್ ಸೆಂಚುರಿ ಸಾಕಷ್ಟು ಜನಪ್ರಿಯತೆ ಕಂಡ ಅವರ ಮೊದಲ ಆಂಗ್ಲ ಪುಸ್ತಕ.
೨೦೧೭ರಲ್ಲಿ ಗ್ರೀನ್ ಆಸ್ಕರ್ ಎಂದೇ ಪ್ರಖ್ಯಾತಿಯಾದ ವಿಟ್ಲಿ ಪ್ರಶಸ್ತಿಗೆ ಭಾಜನರಾದ ಸಂಜಯ್ ಗುಬ್ಬಿಯವರು ಹಲವಾರು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ದೇಶದ ೬೫ನೇ ಸ್ವಾತಂತ್ರೋತ್ಸವದ ಅಂಗವಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಇವರನ್ನು '೨೫ ನಾಳಿನ ನಾಯಕ'ರ ಪಟ್ಟಿಯಲ್ಲಿ ಗುರುತಿಸಿತ್ತು.
Loved this. Wish there was a glossary as it wasn't easy to figure out the English names of many of the wildlife. As much as that is unfortunate, it would've been useful. Maybe some pictures would've helped too.
ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು... -ಸಂಜಯ್ ಗುಬ್ಬಿ ~~~~~~~~~~~~~~~~~~~~~~~~~~~~~ ಹಲವಾರು ದಶಕಗಳ ಹಿಂದೆ ಹುಲಿ, ಚಿರತೆ, ಕಾಡು ಹಂದಿ, ಮೊಲ, ಸಾರಂಗ, ಜಿಂಕೆ ಹೀಗೆ ಪ್ರಾಣಿಗಳ ಬೇಟೆ ಮಾಡುತ್ತಿದ್ದ ಕೆನೆತ್ ಆ್ಯಂಡರಸನ್, ಜಿಮ್ ಕಾರ್ಬೆಟ್, ತೇಜಸ್ವಿ, ಕೆದಂಬಾಡಿ ಜತ್ತಪ್ಪ ರೈಯಂತವರ ಶ್ರೇಷ್ಠ ಬೇಟೆಗಾರರ ಅನುಭವ ಕಥನಗಳನ್ನು ಓದಿಕೊಂಡಿದ್ದ ನನಗೆ ಕಾಡಿನ ಆ ನೋಟ, ಪ್ರಾಣಿಗಳ ಚಾಣಾಕ್ಷತೆ ಕುತೂಹಲರಿಯಾಗಿ ಮೂಡಿತ್ತು. ಎಂದೂ ಪ್ರಾಣಿಗಳನ್ನು ಕಂಡಿರದ ನಗರವಾಸಿಗಳಿಗೆ ಕಾಡು ನಮ್ಮ ದೃಷ್ಟಿಯಲ್ಲಿ ಊಹೆಗೂ ದಾಟಿ ಬೆಳೆದು ನಿಂತಿತ್ತು.
ಕಾಡಿನ ಆ ಅಚ್ಚರಿಗಳನ್ನು ನಾನು ನನ್ನ ಬದುಕಿನಲ್ಲಿ ಅನುಭವಿಸಿ ಕಾಡಿನ ಅನಂತವಾದ ರಹಸ್ಯತರ ಸಂಗತಿಗಳನ್ನು ತಿಳಿದುಕೊಳ್ಳುವ ಹಂಬಲ, ಆಸೆ. ಆದರೆ, ಇಂದಿಗೆ ಬದಲಾದ ಕಾಡಿನ ಪರಿಸ್ಥಿತಿ,ಬೆಳೆಯುತ್ತಿರುವ ಮನುಜ ಸಂತತಿ, ಕೈಗಾರಿಕರಣದಂತಹ ಸನ್ನೀವೇಶಗಳಿಗೆ ಪ್ರಾಣಿಗಳು ವಿನಾಶದ ಹಂತ ತಲುಪಿರುವುದು ಶೋಚನಿಯ. ವನ್ಯಜೀವಿ ಸಂರಕ್ಷಣೆಯ ಹಂತಕ್ಕೆ ಬಂದಿರುವ ಇಂದಿನ ಸಮೃದ್ಧವಾಗಿದ್ದ ಕಾಡು ಇಂದು ಮರೆಯಾಗಿ ನನ್ನನ್ನು ರಕ್ಷಿಸಿ ಎಂದು ಕೂಗಿಕೊಳ್ಳುತವಂತಿದೆ. ಪ್ರಾಣಿಗಳು ಆಹಾರ, ನೀರಿನ ಕೊರತೆಯಿಂದ ಪರಿತಪಿಸುತ್ತಿವೆ. ಇಂತಹ ಸ್ಥಿತಿಯಲ್ಲಿರುವ ಕಾಡಿನ ಸಂರಕ್ಷಣೆ ಅಗತ್ಯವಷ್ಟೆ ಅಲ್ಲದೆ ಅನಿವಾರ್ಯವೂ ಕೂಡ.
ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಜಯ್ ಗುಬ್ಬಿಯವರ ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು ತಮ್ಮ ಬದುಕಿನಲ್ಲಿ ಪಡೆದ ವನ್ಯಜೀವಿಗಳ ವಿಸ್ಮಯ ಬದುಕಿನ ಅನುಭವ ಕಥನಗಳು. ಸಂಜಯ್ ಗುಬ್ಬಿಯವರು ಈ ಕಥನಗಳ ಮೂಲಕ ವನ್ಯಜೀವಿ ಸಂರಕ್ಷಣೆಯ ಅನಿವಾರ್ಯತೆ ಮತ್ತು ಅವಶ್ಯಕತೆಗಳನ್ನು ಅತಿ ಸರಳವಾಗಿ, ಸುಂದರವಾಗಿ ನಿರೂಪಿಸಿದ್ದಾರೆ.
ಬೆಂಕಿಯ ಕಥೆ, ಪಿಂಕಿಯ ವ್ಯಥೆಯ, ಕಸದ ರಹಸ್ಯ, ಅರಣ್ಯ ಇಲಾಖೆಯವರ ಕಷ್ಟದ ಕಾರ್ಯ, ಇಬ್ಬನಿಯ ಹುಲಿಗಳ ಕಥೆಗಳು ನಮ್ಮನ್ನು ಕಥೆ ಮುಗಿದರೂ ಕಾಡುತ್ತಲೆ ಇರುತ್ತವೆ. ಪ್ರಾಣಿಗಳ ಬುದ್ಧಿವಂತಿಕೆ, ಗೌಪ್ಯತೆ, ನಡವಳಿಕೆಯ ಬಗ್ಗೆ ಅಭ್ಯಸಿಸಿ ಕಥೆಗಳ ರೂಪದಲ್ಲಿ ಸುಂದರವಾಗಿ ಬರೆದಿದ್ದಾರೆ. ಹಾಗೆಯೇ ತಾವು ಅನುಭವಿಸಿದ ಕಷ್ಟ, ರಾಜಕೀಯದ ತೊಳಲಾಟ, ಸಂರಕ್ಷಣೆಯ ಸಂದರ್ಭದ ಪರದಾಟಗಳೆಲ್ಲವನ್ನೂ ವಿವರಿಸಲಾಗಿದೆ. ಕಾಡಿನ ಹಲವಾರು ವಿಷಯಗಳ ಬಗ್ಗೆ ಯಾವುದೇ ಮುಲಾಜಿಲ್ಲದೆಯೇ ಓದುಗರ ಮುಂದೆ ಬಹಿರಂಗಗೊಳಿಸಿದ್ದಾರೆ.
ಈ ಪುಸ್ತಕದ ವಿಶೇಷತೆಯೆಂದರೆ ವನ್ಯಜೀವಿ ಸಂರಕ್ಷಣಾ ಹಂತದಲ್ಲಿರುವ ಕಾಡಿನ ಕಥನಗಳ ಒಂದು ವಿಶಿಷ್ಟ ಸರಣಿ.ಅಲ್ಲದೆ ಕನ್ನಡದಲ್ಲಿ ಬಂದ ವಿಶಿಷ್ಠವಾದ ಕಥಾ ಸರಣಿಯೂ ಕೂಡ. ವನ್ಯಜೀವಿ ಸಂರಕ್ಷಣೆಯನ್ನು ಅದರ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಅದರತ್ತ ಕಾರ್ಯನಿರ್ವಹಿಸಬೇಕೆಂಬ ಆಸಕ್ತಿ ಮೂಡಿಸುವಲ್ಲಿ ಈ ಕೃತಿಯು ಯಶಸ್ವಿಯಾಗಿರುವಲ್ಲಿ ಅನುಮಾನವಿಲ್ಲ...
An excellent book, which provides a lot of information about the lesser known mammals,trees and protected areas of Karnataka.The stories about the animals make it an enjoyable read.This book is a must read for everyone interested in wildlife and conservation.
[9/8, 12:01 AM] Jyothi: It is simply beautiful....the way the book takes reader through world life....the way it creates curiosity....n along with the way it creates awareness..... Really great. Even though I am a nature lover and has done lots of trekking inside forest.. never could understand n observed wildlife in these angles.... hats off to you sir. This book definitely will serves the your purpose of creating awareness those who reads. [9/8, 12:03 AM] Jyothi: You have written it so simple but yet very beautiful. [9/8, 12:05 AM] Jyothi: Thank you so much for sharing your so great knowledge n experience of wildlife through this book with ppl like me.
I wish this book reach to millions n millions of people n create sense of responsibility towards nature.