ಯಂಡಮೂರಿ ವೀರೇಂದ್ರನಾಥರು ಎರಡು ತದ್ವಿರುದ್ಧ ವಿಷಯಗಳಾದ ವಾಮಾಚಾರ ಮತ್ತು ವಿಜ್ಞಾನ ಇವೆರಡನ್ನು ಹೊಸೆದು ಅದ್ಭುತವಾದ 'ತುಳಸಿದಳ' ಕಾದಂಬರಿ ರಚಿಸಿದ್ದಾರೆ. ವಾಮಾಚಾರದ ಅನೇಕ ಮಜಲುಗಳನ್ನು ಪರಿಚಯಿಸುತ್ತಾ ಮನುಷ್ಯನ ವಿಕೃತ, ಸ್ವಾರ್ಥ ಮನಸ್ಥಿತಿಗೆ ಮಾಟ,ವಾಮಾಚಾರದಂತಹ ಕ್ಷುದ್ರ ವಿದ್ಯೆಗಳ ಆಧಾರ ಲಭಿಸಿದರೆ ಅವನ ಕ್ರೂರತೆ ಎಷ್ಟು ಅಮಾನುಶವಾಗಿರುತ್ತದೆ, ಸದ್ಬಳಕೆಯಾಗಬೇಕಾದ ವಿಜ್ಞಾನ ದುರ್ಬಳಕೆಯಾದರೆ ಹೇಗೆ ಸಂಸಾರಗಳ ನೆಮ್ಮದಿಯೇ ಬುಡಮೇಲು ಮಾಡುತ್ತದೆ ಎಂದು ನಿದರ್ಶಿಸಿದ್ದಾರೆ.
ಈ ಕಾದಂಬರಿ ತುಳಸಿ ಎಂಬ ಮಗುವಿನ ಸುತ್ತ ಸುತ್ತುತ್ತದೆ. ರಾಬರ್ಟ್ ಕೊಟ್ಟ ಕಾಣಿಕೆ ತುಳಸಿಯ ಸಾವಿನ ಕುಣಿಕೆ ಆಗುತ್ತದೆ. ಕಾಶ್ಮೋರ ಮೂಲಕ ಮಗುವಿಗೆ ನೀಡುವ ಹಿಂಸೆಯನ್ನು ಉಸಿರು ಬಿಗಿ ಹಿಡಿದುಕೊಂಡೆ ಓದಬೇಕು. ಒಬ್ಬರ ನಂಬಿಕೆಯನ್ನು ಮತ್ತೊಬ್ಬರು ಪ್ರತಿಭಟಿಸುವುದು, ಒಬ್ಬರ ಸಲಹೆಯನ್ನು ಇನ್ನೊಬ್ಬರು ತಿರಸ್ಕರಿಸುವುದರಿಂದಲೇ, ತುಳಸಿ ನಲುಗಿ ಹೋಗುತ್ತಾಳೆ. ಅನಿತಾ ಮೂಢನಂಬಿಕೆಗೆ ಜಾರಿ ಪುಟ್ಟ ಬೀಸಿದ ಬಲೆಗೆ ಬಲಿಯಾಗುತ್ತಾಳೆ. ನಾರಾಯಣನ ಮೂಕ ಪ್ರೀತಿ ವ್ಯಕ್ತವಾಗುವುದೇ ಇಲ್ಲ.
ಮನುಷ್ಯನ ಸುತ್ತಲಿನ ಘಟನೆಗಳೇ ಆತನ ನಿಲುವುಗಳು,ನಂಬಿಕೆಗಳನ್ನು ನಿರ್ಧರಿಸುತ್ತವೆನ್ನುವಂತೆ! ವಾಮಾಚರ ನಂಬುತ್ತಿದ್ದ ಶಾರದಾ ಬದಲಾಗಿ ವೈಜ್ಞಾನಿಕ ಮಾರ್ಗ ತುಳಿಯುತ್ತಾಳೆ, ಪ್ರತಿ ಘಟನೆಗಳಲ್ಲೂ ವಿಜ್ಞಾನದ ಹಿನ್ನೆಲೆ ಕೆದಕುತ್ತಿದ್ದ ಶ್ರೀಧರ, ಅಬ್ರಕಡಬ್ರನೊಂದಿಗೆ ಸೇರಿ ವಾಮಾಚಾರದ ಬೆನ್ನನ್ನುತ್ತುತ್ತಾನೆ. ಹೀಗೆ ಇಬ್ಬರ ವ್ಯಕ್ತಿತ್ವದಲ್ಲಿ,ನಂಬಿಕೆಯಲ್ಲಿ ಬದಲಾವಣೆಯಾಗಿಬಿಡುತ್ತದೆ.
ತುಳಸಿಯನ್ನು ಉಳಿಸುವ ಸಲುವಾಗಿ ಎಲ್ಲರು ಅವರವರ ನಂಬಿಕೆಗನುಸಾರವಾಗಿ ಭಿನ್ನ ಮಾರ್ಗಗಳತ್ತ ಹೊರಳುತ್ತಾರೆ. ಡಾಕ್ಟರ್ ಪಾರ್ಥಸಾರಥಿ ವೈದ್ಯಕೀಯದ ಮೂಲಕ; ಜೈದೇವ ಮತ್ತು ಶಾರದಾ ಹಿಪ್ನೋಸಿಸ್ ಮುಖೇನ; ಶ್ರೀಧರ್ ಮತ್ತು ಅಬ್ರಕಡಬ್ರ ವಾಮಾಚಾರದ ಮೂಲಕ. ಆಕೆ ಗುಣಮುಖವಾಗಿದ್ದು ಇವರೆಲ್ಲರ ಪ್ರಯತ್ನದಿಂದಲೇ? ಅಥವಾ ಇವರಲ್ಲಿ ಒಬ್ಬರ ಪ್ರಯತ್ನದಿಂದಲೇ? ಎಂಬುದು ಹೇಳಲಸಾಧ್ಯ.
ಲೇಖಕರು ತುಳಸಿ ಸಾವಿನ ದವಡೆಗೆ ಸಿಲುಕಿದ್ದು ವಾಮಾಚಾರದಿಂದಲೇ? ಅಥವಾ ಹಿಪ್ನೋಸಿಸ್ ಮೂಲಕವೇ? ಎಂಬುವುದನ್ನು ಯಕ್ಷ ಪ್ರಶ್ನೆಯಾಗಿ ಉಳಿಸುತ್ತಾರೆ! ಅವಳು ಗುಣವಾಗಿದ್ದು ವಾಮಾಚಾರದ ನಾಶದಿಂದಾ? ಅಥವಾ ವಿಜ್ಞಾನದಿಂದಾ? ಎಂಬುವುದನ್ನು ಓದುಗನ ತರ್ಕಕ್ಕೆ ಬಿಟ್ಟಿದ್ದಾರೆ. ಪ್ರತಿ ಪುಟದ ತಿರುವಿನಲ್ಲೂ ಕುತೂಹಲ ಕೆರಳಿಸಿಕೊಂಡು ಹೋಗುವ ಥ್ರಿಲ್ಲರ್ ಕಾದಂಬರಿಯಾಗಿದೆ.
ಪುಸ್ತಕ: ತುಳಸಿದಳ ಮೂಲ ಲೇಖಕರು: ಯಂಡಮೂರಿ ವೀರೇಂದ್ರನಾಥ ಅನುವಾದ: ವಂಶಿ
ನನಗೆ ತಿಳಿದಮಟ್ಟದಲ್ಲಿ ಈ ಗ್ರೂಪ್ಪಿನಲ್ಲಿಯ ಎಲ್ಲರೂ ಈ ಪುಸ್ತಕವನ್ನು ಓದಿರಬೇಕು. ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುವ ಕಾದಂಬರಿ. ಚಲನಚಿತ್ರವಾಗಿಯೂ ಮೂಡಿ ಬಂದಿತ್ತು ಈ ಕಾದಂಬರಿ ಆದರೆ ofcourse ಕಾದಂಬರಿಯಲ್ಲಿಯಂತೆ ಚಿತ್ರದಲ್ಲಿ ಮೂಡು ಬಂದಿಲ್ಲ. ಈ ಜಗತ್ತಿನಲ್ಲಿ ಮಾಟ ಅಥವಾ ಕ್ಷುದ್ರಶಕ್ತಿ ಎಂಬುದಿದೆಯೇ? ಆ ಕ್ರಿಯೆಗಳಿಗೆ ವೈಜ್ಞಾನಿಕ ವಿಶ್ಲೇಷಣೆಗಳಿವೆಯೇ? ಈಗ ಈ ಮಾಟ ಅಥವಾ ತಂತ್ರಗಳಿವೆ ಎಂದರೆ, ಅವುಗಳಿಗೆ ವೈಜ್ಞಾನಿಕವಾಗಿ ನಿಗ್ರಹಿಸಬಹುದೇ? ಮತ್ತು ಅವು ಸಾಕಾರಗೊಳ್ಳುವೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನ ಈ ಪುಸ್ತಕದಲ್ಲಿದೆ. ಪುಸ್ತಕ ಓದಿದಾಗ ಲೇಖಕರು ಎಷ್ಟು ಮಾಟ ಮಂತ್ರ ತಂತ್ರಗಳ ಬಗ್ಗೆ ಅಧ್ಯಯನ ಮಾಡಿರಬಹುದು ಎಂಬುದು ಕಂಡುಬರುತ್ತದೆ. ಹಣದ ದಾಹಕ್ಕಾಗಿ ಒಂದು ಪುಟ್ಟ ಹುಡುಗಿಯ ಪ್ರಾಣವನ್ನು ಲಕ್ಷಿಸದೆ ಮುಂದಾಗುವ ಪಾಟಕಿಗಳಿಗೆ ಮುಂದೆ ಆ ಹಣವೇ ಹೇಗೆ ಮುಳ್ಳಾಗುತ್ತದೆ ಎಂಬುದು ಕಥೆಯ ಸಾರಾಂಶ. ಆದರೆ ಹುಡುಗಿಯ ಮೇಲೆ ನಡೆಯುವ ಕಾಶ್ಮೊರ ಎಂಬ ಭಯಂಕರ ತಂತ್ರ ಪ್ರಯೋಗ ಆ ಪ್ರೀತಿಯ ಕುಟುಂಬದ ಮಲೆ ಪ್ರಭಾವ ಬೀರಿ ದೇವರು-ದೆವ್ವಗಳ ಮೇಲೆ ನಂಬಿಕೆಯಿಲ್ಲದ ಶ್ರೀಧರ(ಹುಡುಗಿಯ ತಂದೆ) ಬೇರೆ ದಾರಿ ಕಾಣದೆ ಮಾಟವನ್ನು ಧ್ವಂಸಗೊಳಿಸಲು ಮುಂದಾಗುತ್ತಾನೆ. ಈ ನಡುವೆ ವೈಜ್ಞಾನಿಕ ರೂಪದಲ್ಲಿ ಹೇಗಾದರೂ ಮಗುವನ್ನು ರಕ್ಷಿಸಲು ಡಾಕ್ಟರ್ ಪಡುವ ಕಷ್ಟ ಮತ್ತು ಅವರು ಕಂಡುಹಿಡಿಯುವ ಸಾಧ್ಯತೆಗಳು ವಿಜ್ಞಾನವು ಯಾವ ಮಜಲನ್ನು ಮುಟ್ಟಿದೆ ಎಂಬುದು ತಿಳಿಯುತ್ತದೆ. ಬೇಗವಾಗಿ ಓದಿಸಿಕೊಂಡು ಹೋಗುವ ಪುಸ್ತಕ.
I am going to need some time to recover from this. It messed with my mind in unimaginable ways. This was my first read in this genre and I am blown away. It was such a thrilling, chilling and haunting read. I was really scared during many scenes and had to put down to recover. But once it reached a point, this was unputdownable. I devoured around 80% of the book in a day. The storyline, storytelling, characters, scenes.. everything was incredible. I could see the amount of effort and research that went into writing this book. I loved the book more for this.
Thriller story that keeps the reader on the edge of his bay. This is amazing book that justifies the characters of the book. Pain, sorrow, happiness, logics, belief etc all are depicted in this book. This is one complete package!!!