ಕರ್ವಾಲೋ ಕಥೆ ಕಗ್ಗಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ಘಟನೆ. ಹಳ್ಳಿಯ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೋ ಕಾಲಜ್ಞಾನಿಯಾಗಿ ರೂಪುಗೊಳ್ಳುವ ಅಚ್ಚರಿಯ ಕಥೆ! ಧರ್ಮ, ಧ್ಯಾನ, ತಪಸ್ಯೆಗಳನ್ತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡದ ಎಲ್ಲ ಕಾದಂಬರಿಗಳಿಗಿಂತ ಸಂಪೂರ್ಣ ವಿಭಿನ್ನವಾದ ಕೃತಿ. ಈವರೆಗೆ ಕನ್ನಡದಲ್ಲಿ ಹನ್ನೆರಡು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಇಂಗ್ಲಿಷ್, ಹಿಂದಿ, ಮರಾಠಿ, ಮಲಯಾಳಂ, ಮತ್ತು ಜಪಾನಿ ಭಾಷೆಗಳಲ್ಲಿ ಪ್ರಕಟವಾಗಿದೆ. - ಪ್ರಕಾಶಕ
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
Karvalho is one of my childhood favorites! Tejaswi's books are the ones which inculcated reading habit in me. Regarded as one of the hallmark books in scientific writing in Kannada, Karvahlo is the name of the scientist who along with two of the village folk go on adventure, searching for a species of flying lizard amid the dense forests of Western Ghats in India. The amazing thing about this book is, it doesn't rely completely on the scientific facts but on the inquisitive knowledge and experience of the village folks, against the backdrop of socio-economic contexts of this small village in rural Karnataka. With no slight hint of boredom, it takes the readers on an incredible journey of hope, knowledge and friendships.
ಕರ್ವಾಲೋ ಓದುವುದು ಎಂದರೆ ನನ್ನ ಬಾಲ್ಯಕ್ಕೆ ಮರುಳುವ ಹೆದ್ದಾರಿಯೇ ಸರಿ. ಇದು ನಾನು ಓದಿದ ಮೊದಲ ಕನ್ನಡ ಪುಸ್ತಕ. ಅಚ್ಚರಿಯ ನನ್ನ ಕಣ್ಣುಗಳನ್ನು ಪ್ರಕಾಶಿಸಿ ಸಾಹಿತ್ಯಲೋಕದ ಒಳಗೆ ಮಾಯಾವಿಯಂತೆ ಸೆಳೆದು ಎಳೆದುಕೊಂಡ ಹೊತ್ತಿಗೆಯಿದು. ಮತ್ತೆ ಮತ್ತೆ ಓದುವುದು ಆ ಚಮತ್ಕಾರದ ಕ್ಷಣದ ಪುನರ್ಮಿಲನದ ಅನುಭವಕ್ಕೆ.
ಈ ಕೃತಿ ನೂರು ಮುದ್ರಣಗಳ ಮೈಲುಗಲ್ಲಿನ ಸನಿಹದಲ್ಲಿದೆ, ಇಷ್ಟು ಓದುಗರನ್ನು ಆಕರ್ಷಿಸಲು ಕಾರಣವೇನಿರಬಹುದು ಎಂಬುದನ್ನು ಹುಡುಕುತ್ತ ಹೊರಟರೆ ಅನೇಕ ಕಾರಣಗಳು ಸಿಗಬಹುದು. ಆದರೆ ನನ್ನ ಮಟ್ಟಿಗೆ ಬಹು ಮುಖ್ಯ ಕಾರಣ ಕಗ್ಗಲ್ಲಿನಂತ ಜೀವ ವಿಕಾಸದ ವಿಷಯದ ಮೇಲಿನ ಕಥೆಯನ್ನು ಸಾಮನ್ಯರ ಮೂಲಕ ಹೇಳಿಸಿದ್ದು. ಓದುಗರು ಕನೆಕ್ಟ್ ಆಗಿದ್ದು ಇಲ್ಲಿಯೇ ಎಂಬುದು. ಹಾರುವ ಓತಿ, ಜೇನು ನೊಣ, ಮಿಂಚು ಹುಳು, ವಿಕಾಸ ಇವೆಲ್ಲವೂ ವೈಜ್ಞಾನಿಕವಾಗಿ ಹೇಳುತ್ತಾ ಹೋದರೆ ಕೆಟ್ಟ ಬೋರು ಎನಿಸಿ ಪುಸ್ತಕ ಮಡಚಿಟ್ಟು ಓಡಿಯೇ ಹೋಗುತ್ತೇವೆ, ತೇಜಸ್ವಿರವರು ಸುಲಭ ಭಾಷೆಯಲ್ಲಿ ಹುಲು ಮಾನವರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿರುವ ಇಲ್ಲಿನ ತಂತ್ರ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.
ಇಲ್ಲಿನ ಪಾತ್ರವರ್ಗ ಮಜವಾಗಿವೆ, ಮಂದಣ್ಣ ಸಾರ್ವಕಾಲಿಕ ಉತ್ತಮ ಪಾತ್ರಗಳಲ್ಲಿ ಒಂದು. ಆ ಪಾತ್ರ ಸಿಲುಕುವ ವಿವಿಧ ಸಂದರ್ಭಗಳೇ ಕಾದಂಬರಿಯ ಜೀವಂತಿಕೆ, ಅವನೇ ಈ ಕಾದಂಬರಿಯ ಸಾರಥಿ. ಊರೂರೇ ಅವನನ್ನು ಅಪ್ರಯೋಜಕ ಅಂದುಕೊಳ್ಳುತ್ತಿದ್ದರೆ ಕರ್ವಾಲೋ ಅವನನ್ನು ಅವತಾರ ಪುರುಷನಂತೆ ಕಾಣುತ್ತಾರೆ, ಅವನ ಅವಲೋಕನ ಕೌಶಲ್ಯವನ್ನು ಗುರುತಿಸಿರುತ್ತಾರೆ. ಅವನ ಬಗ್ಗೆ ಕರ್ವಾಲೋ ಹೇಳುವ ಈ ಮಾತನ್ನು ಗಮನಿಸಿ
"ಇಲ್ಲ ಇಲ್ಲ ಈ ಒಂದು ವಿಷಯದಲ್ಲಿ ಮಂದಣ್ಣನ್ನ ಮೀರಿಸುವವರು ಯಾರೂ ಇಲ್ಲ. ಅಷ್ಟೊಂದು ಚೆನ್ನಾಗಿ ಗ್ರಹಿಸ್ತಾನೆ. ಅವನೊಬ್ಬ ಹುಟ್ಟಾ ನ್ಯಾಚುರಲಿಸ್ಟ್. ಹೆಚ್ಚು ಕಡಿಮೆ ಈವರೆಗೂ ಅವನು ಹೇಳಿರೋದು ಒಂದೊಂದು ಕೂಡ ಅದರ ವಿವರಗಳಲ್ಲಿ ಸಹ ಸುಳ್ಳಾಗಿಲ್ಲ, ಅಷ್ಟೊಂದು ಸೂಕ್ಷ್ಮವಾಗಿ ಗ್ರಹಿಸ್ತಾನೆ. ಅದ್ಭುತ ಪ್ರಕೃತಿ ಶಾಸ್ತ್ರಜ್ಞ ಅವನು. ಅಂಥೋನು ನನ್ನ ಹತ್ತಿರ ಬಂದು ಪ್ಯೂನ್ ಕೆಲಸ ಕೊಡೀoದರೆ ನನಗೆ ಸಿಟ್ಟು ಬರೋದಿಲ್ಲವೇ ರಾಸ್ಕಲ್." ಇದು ಮಂದಣ್ಣನ ಒಟ್ಟು ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತದೆ, ತನ್ನ ಬಳಿ ಇರುವ ಅಭೂತಪೂರ್ವ ಪ್ರತಿಭೆ ಸ್ವತಃ ಅವನಿಗೆ ತಿಳಿಯದೇ ಇರುವುದು, ಅವನ ಜೀವನದ ದುರಂತ
ಕರ್ವಾಲೋರು ಎಲ್ಲವನ್ನು ಭಿನ್ನ ನೋಟದಿಂದ ಕಾಣುವುದು ಓದುಗರನ್ನು ಕೌತುಕರನ್ನಾಗಿ ಬೆರಗು ಕಣ್ಣಿನಿಂದ ಓದಿಸಿಕೊಂಡು ಹೋಗುತ್ತದೆ, ಕರ್ವಾಲೋ ಪಾತ್ರವನ್ನು ಓದುವ ಪ್ರತಿಯೊಬ್ಬ ಓದುಗನು ಇವರನೊಮ್ಮೆ ನೋಡಬೇಕಲ್ಲ ಅನಿಸದೇ ಇರಲಾರದು, ಅವರ ಪ್ರಬುದ್ಧತೆ, ಜೀವ ವಿಕಾಸದ ಮೇಲಿನ ಅವರ ಸಂಭಾಷಣೆ, ಕೀಟದ, ಓತಿಯ ವಿವರಣೆ ಇವೆಲ್ಲವೂ ಅವರನ್ನು ಪ್ರಾಜ್ಞರನ್ನಾಗಿ ಚಿತ್ರಿಸುತ್ತದೆ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ಆ ಪಾತ್ರದ ಆಕರ್ಷಣೆ ಇರುವುದು ಅವರ ಮೆದು ಹೃದಯದಿಂದ, ಮಂದಣ್ಣನ ಪರ ಕರ್ವಾಲೋರವರು ಕೋರ್ಟಿಗೆ ಹೋಗಿ ಸಾಕ್ಷಿ ಹೇಳಲು ಅವರ ಸಹೋದ್ಯೋಗಿ ಪ್ರಭಾಕರ ಕೇಳಲು ಹಿಂದೇಟು ಹಾಕಿದಾಗ ಕರ್ವಾಲೋರ ಪ್ರತಿಕ್ರಿಯೆ ಗಮನಿಸಿ "ನಾನ್ಸೆನ್ಸ್, ನನ್ನ ಹತ್ತಿರ ಶಿಷ್ಯವೃತ್ತಿ ಮಾಡಿ ನೀನು ತರಾಬೇತಾಗಿರೋದು ಇಷ್ಟೇನೋ ಪ್ರಭಾಕರ. ನಾನು ಪ್ರೊಫೆಸರು, ಮಂದಣ್ಣ ಹಳ್ಳಿ ಗಮಾರ, ಇವೆಲ್ಲ ಹೆಬ್ಬುಬ್ಬೆ ನೀನು ನಿಜಾಂತ ತಿಳಿದರೆ ಏನಪ್ಪಾ ಕಲಿತಂತೆ ಆಯ್ತು? ಇದರಲ್ಲೇ ನಿನ್ನ ಆಯಸ್ಸು ಮುಗಿದುಹೋಗುತ್ತೆ. ಸತ್ಯದ ಕಿಂಚಿತ್ ದರ್ಶನಾನೂ ಆಗೋಲ್ಲ ನಿನಗೆ. ಈ ಮಾಯೇನೆಲ್ಲ ಮೀರಬೇಕು ನಾವು. ಆಗಲೇ ನಿಮಗೆ ಬೇರೆ ಬೇರೆ ಜಗತ್ತು, ಪ್ರಪಂಚ ಕಾಣ್ತದೆ." ಅವರ ಸೂಕ್ಷ್ಮ, ಶಾಂತಚಿತ್ತ ಲಕ್ಷಣಗಳು ಸಾಧನೆ ಮಾಡಿದ ರಿಷಿಯಂತೆ ಕಾಣಿಸುತ್ತದೆ, ಇದಕ್ಕೆ ನಿರೂಪಕರ ಮಾತೊಂದನ್ನು ಇಲ್ಲಿ ಗಮನಿಸಿ - "ಕೊಂಚ ದೂರದಲ್ಲೇ ಧಗಧಗಿಸುತ್ತಿದ್ದ ಬೆಳಕು ಅವರ ಮುಖವನ್ನು ಕತ್ತಲ ಹಿನ್ನಲೆಯಲ್ಲಿ ದೇದೀಪ್ಯಮಾನ ಮಾಡಿತ್ತು. ಪುರಾತನ ಮಹರ್ಷಿಯೋರ್ವನ ಮುಖದಂತೆ ಅವರ ಗಡ್ಡ ಮೀಸೆ ವದನ ಕಾಣುತ್ತಿತ್ತು." ಈ ಪಾತ್ರ ಮಲೆನಾಡಿನ ಶ್ರೀಮಂತಿಕೆಯನ್ನು ಜಡವೆಂದು ಭಾವಿಸುವ ಅಲ್ಲಿನ ಜನರೊಳಗೆ ಚೇತನವೊಂದನ್ನು ಬಡಿದೆಬ್ಬಿಸುವ ರೂಪಕದಂತೆ ಧ್ವನಿಸುತ್ತದೆ
ನಿರೂಪಕರ ಪಾತ್ರ ತಮಾಷೆಯಿಂದ ಎಲ್ಲರನ್ನು ಬೈಯುತ್ತಲ್ಲೇ, ಕೊಂಚ ಅಸ್ವಾಭಾವಿಕರಂತೆ ವರ್ತಿಸುತ್ತಾ ಕೆಲವೊಮ್ಮೆ ತ್ರಾಸು ಕೊಡುವಂತೆ ಸಾಗುತ್ತದೆ. ಆದರೆ ಇವರು ಇತರ ಪಾತ್ರಗಳಿಗೆ ಕೊಡುವ ಪ್ರತ್ಯುತ್ತರಗಳು, ವಕ್ರ ವಿನೋದ ಮಾತುಗಳು ನಗೆಗಡಲ್ಲಿನಲ್ಲಿ ತೇಲಿಸುತ್ತದೆ. ಈ ಪಾತ್ರ ಮಂದಣ್ಣ, ಪ್ಯಾರ, ಕರಿಯಪ್ಪರಿಗೆ ಮಾತು ಮಾತಿಗೂ ಗಮಾರ, ಎಡ್ಡ, ಹಜಾಮ ಎಂದೆಲ್ಲ ಬೈಯುವುದು ಅತಿ ಅನಿಸುತ್ತದೆ..
ಇನ್ನೂ ಈ ಕಾದಂಬರಿಯ ಸಂಭಾಷಣೆಯಂತೂ ಅಮೋಘ, ಪ್ರಭಾಕರ ಎಂಬ ಪಾತ್ರ ಕ್ಯಾಮೆರಾ ಮತ್ತು ಇತರೆ ಸಲಕರಣೆ ಕತ್ತಿಗೆ ನೇತುಹಾಕಿಕೊಂಡಾಗ ಬರುವ ಸಂಭಾಷಣೆಯಲ್ಲಿ ಕಾಣುವ ಉಪಮೆ ನೋಡಿ "ಪ್ರಭಾಕರ ಕ್ಯಾಮರಾ, ಲೆನ್ಸ್ ಗಳು ಇತ್ಯಾದಿ ನೊರೆಂಟು ಕುತ್ತಿಗೆ ತೋಳು ಮುಂತಾದಕ್ಕೆಲ್ಲ ಕಾಯಿ ಬಿಟ್ಟ ತೆಂಗಿನ ಮರದಂತೆ ಜೋತುಕೊಂಡಿದ್ದ". ಇನ್ನೊಮ್ಮೆ ಮಾತನಾಡುವಾಗ ವಿಷಯ ದಾರಿ ತಪ್ಪಿ ಹೋದಾಗ ಕರ್ವಾಲೋರ ಮಾತನ್ನು ಕೇಳಿ "ನೋಡಿ ನೋಡಿ ಮುಖ್ಯ ವಿಷಯ ಬಿಟ್ಟು ಅಡ್ಡದಾರಿ ತುಳೀಬೇಡಿ. ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತೀವಿ. ಕಾಲ ಸರೀತಾ ಇದೆ." ಜೇನುಗಳ ಕಾಟದಿಂದ ನಿರೂಪಕರು ಜೇನನ್ನು ಒಂದು ಅನರ್ಹ ಕೀಟವೆಂದಾಗ ಕರ್ವಾಲೋ ಹೇಳುವ ಈ ಮಾತು ಸಮಂಜಸ ಎನಿಸುತ್ತದೆ "ನೋ ನೋ ನೀವು ತಪ್ಪು ತಿಳಿದಿದ್ದೀರಿ, ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷಿ ಎಂದರೆ ಹೋಮೋಸೆಪಿಯನ್. ಎರಡು ಕಾಲಿನ ಮಾನವ." ಮೌ ಮೌ ಜೇನು ನೊಣಕ್ಕೆಹೆದರಿ ಕರಿ ಕಂಬಳಿಯನ್ನು ಹೊದ್ದುಕೊಂಡು ಕೂತಿದ್ದ ನಿರೂಪಕರಿಗೆ ಮಂದಣ್ಣ ಹೇಳುವ ಈ ಮಾತು ಗಮನಿಸಿ ಎಷ್ಟು ಮಜವಾಗಿದೆ "ಏನ್ ಸಾರ್, ಕಂಬ್ಳಿ ಹೊದ್ದುಕೊಂಡು? ಕರಿಯಪ್ಪ ನೋಡಿದ್ರೆ ಕರಡೀ ಅಂತ ಏರಿಸೇಬಿಡ್ತಾನೆ." ಹೀಗೆ ಕಚಗುಳಿ ಇಡುತ್ತಾ ನಮ್ಮನ್ನು ಎಚ್ಚರಿಸುತ್ತ, ಜೀವ ವಿಕಾಸದ ಬಗ್ಗೆ ತಿಳಿಸುತ್ತಾ ಸಾಗುವ ಮಾತುಗಳು ಸುಂದರ ರಸಾನುಭವವನ್ನು ಉಣಬಡಿಸುತ್ತದೆ.
ಈ ಕಾದಂಬರಿಯನ್ನು ಓದಿ ಅಥವಾ ಇದರ ಬಗ್ಗೆ ತಿಳಿದುಕೊಂಡು ಇಲ್ಲಿ ಬರುವ ಹಾರುವ ಓತಿಯನ್ನು ಕಾಡಿನಿಂದ ಹುಡುಕಿ ಇಡಿದು ತೇಜಸ್ವಿರ ಬಳಿ ತರುತ್ತಿದ್ದರಂತೆ. ಈಗಲೂ ನಾವು ಹಾರುವ ಓತಿಯನ್ನು ಮಲೆನಾಡಿನಲ್ಲಿ ಕಾಣಬಹುದು, ಇಷ್ಟೇ ಏಕೆ ನನ್ನ ಸ್ನಾತಕ ಪದವಿಯ ಸಮಯದಲ್ಲಿ ಈ ಓತಿಯನ್ನು ನಮ್ಮ ಕೀಟಶಾಸ್ತ್ರದ ಲ್ಯಾಬಿನಲ್ಲಿ ದೊಡ್ಡ ವಯಲ್ಲಿನಲ್ಲಿ ಇಟ್ಟಿದನ್ನು ನೋಡಿದೀನಿ ಅದರ ಮೇಲೆ ಕರ್ವಾಲೋ ಕಾದಂಬರಿಯಲ್ಲಿ ಬರುವ ಹಾರುವ ಓತಿಯಂದೇ ಹೆಸರಿಸಿದ್ದರು. ಇವೆಲ್ಲ ಕಂಡಾಗ ಅನಿಸಿದ್ದು ಹಾರುವ ಓತಿ ಇಲ್ಲಿ ಒಂದು ರೂಪಕವಷ್ಟೇ, ಮಾನವ ಏನೇ ಆವಿಷ್ಕಾರ ಮಾಡಿದ್ದರೂ ಏನೇ ಸಾಧಿಸಿದ್ದರೂ ಅವನ ಗಣನೆಯ ಆಚೆಗೆ, ಅವನು ತಿಳಿದುಕೊಳ್ಳಬೇಕಾದುದ್ದು ಆಗಸದಷ್ಟು ವಿಶಾಲವಾಗಿದೆ ಎಂಬುದು, ತಿಳಿದುಕೊಂಡಿದ್ದರೂ ಇದೇ ಅಂತಿಮ ಸತ್ಯ ಎಂಬುದಕ್ಕೂ ಖಾತ್ರಿ ಇಲ್ಲ. ಇದಕ್ಕೆ ಸೂಚನೆಯಾಗಿ ಕಾದಂಬರಿಯಲ್ಲಿ ಕೊನೆಯ ಸಾಲು ಮನದಲ್ಲಿ ಉಳಿಯುತ್ತದೆ "ತಪ್ಪು ಸರಿ ಹೇಗೆ ಹೇಳ್ತೀರಿ. ನಮಗೆ ಈ ಕ್ಷಣ, ಇಲ್ಲಿ ಹೀಗನ್ನಿಸಿದೆ, ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ."
ಈ ಕಾದಂಬರಿಯನ್ನು ಬಹಳಷ್ಟು ಓದುಗರು ತೇಜಸ್ವಿರ ಆತ್ಮಕತೆಯ ಭಾಗವಂತೆ ಓದಿ ಇಲ್ಲಿ ಬರುವ ಪಾತ್ರಗಳನ್ನು ಹುಡುಕುತ್ತ ಮೂಡಿಗೆರೆಗೆ ಹೋಗುವುದು ಕಂಡಿದ್ದೇವೆ, ಕೇಳಿದ್ದೇವೆ. ಇಲ್ಲಿ ಬರುವ ಕರಿಯಪ್ಪ ಎಂಬ ಪಾತ್ರವನ್ನು ಹೋಲುವ ನೈಜ ಹಿರಿಯರ ಸಂದರ್ಶನ ಮಾಡಿರುವ ತುಣುಕನ್ನು ನೋಡಿದ್ದೇನೆ. ಅಷ್ಟೇ ಏಕೆ, ರಾಜೇಶ್ವರಿ ತೇಜಸ್ವಿರವರ "ನನ್ನ ತೇಜಸ್ವಿ" ಪುಸ್ತಕದಲ್ಲಿ ಕುವೆಂಪುರವರು ಸೊಸೆಗೆ ತಮ್ಮ ಇಳಿವಯಸ್ಸಿನಲ್ಲಿ ಮುಗ್ದರಾಗಿ ಕರ್ವಾಲೋ ಅನ್ನುವವರು ಇದ್ದರೇ? ಎಂದು ಕೇಳುವುದನ್ನು ನಾವು ಓದಿದ್ದೇವೆ,
ಏನೇ ಆದರೂ ಇದೊಂದು ಸೃಜನಾತ್ಮಕ ಕೃತಿ, ಆದರೂ ನೈಜತೆಗೆ ಹತ್ತಿರವಾಗುವಂತೆ ಸುತ್ತಮುತ್ತಲಿನ ಜನರೇ ಪಾತ್ರಗಳನ್ನಾಗಿ ಮಾಡಿಕೊಂಡು ಬರೆಯುವಾಗ ಆ ಕೃತಿ ಓದುಗನಿಗೆ ಹತ್ತಿರವಾಗುತ್ತದೆ, ಹಾಗಾಗಿಯೇ ಇದು ತೇಜಸ್ವಿರವರ ಮುಖ್ಯ ಕೃತಿಯಾಗಿ ಓದುಗರ ಮನದಲ್ಲಿ ನಿಲ್ಲುತ್ತದೆ. ಈ ಕೃತಿಯೊಂದು ನಮ್ಮ ಭಾಷೆಯಲ್ಲಿದೆ ಎಂಬುದು ಕನ್ನಡಿಗರ ಹೆಮ್ಮೆಯ ವಿಷಯ, ಓದುವುದು, ಮತ್ತೆ ಮತ್ತೆ ಓದುವುದು ಆಸ್ವಾಧಿಸುವುದು ಓದುಗನ ಮಟ್ಟಿಗೆ ಚಂದದ ದುರಾಸೆಯಷ್ಟೇ
ಕರ್ವಾಲೊ! ಇದೊಂದು ವಿಜ್ಞಾನದ ಹೊಸ ಆಯಾಮಗಳನ್ನು ತೋರ್ಪಡಿಸುವ ಒಂದು ವಿಶಿಷ್ಟ ಕಥೆ. ವೃತ್ತಿಯಲ್ಲಿ ವಿಜ್ಞಾನಿಯಾದ ನಾನು, ಇದರ ಒಳ ಪದರುಗಳ ರುಚಿಯನ್ನು ಉಂಡೆನು. ಇದು ಕನ್ನಡ ಸಾಹಿತ್ಯಕ್ಕೆ, ಶ್ರೀ ತೇಜಸ್ವಿರವರ ಅಪೂರ್ವ ಕೊಡುಗೆ.
ಪರಿಸರ, ಪಕ್ಷಿ ಅಂದು ಕೂಡಲೇ ಚಿಕ್ಕವಯಸ್ಸಿನಲ್ಲಿ ನೆನಪಾಗುತ್ತಿದ್ದದ್ದು ಸಾಲುಮರದ ತಿಮ್ಮಕ್ಕ ಹಾಗೂ ಸಲೀಂ ಅಲಿ. ಆದರೆ ಸಾಹಿತ್ಯದ ರುಚಿ ಕಂಡಾಗ ಪರಿಸರ, ಪಕ್ಷಿ, ಕೃಷಿ ಎಂದರೆ ಥಟ್ ಅಂತ ನೆನಪಾಗೋದು ಪೂಚಂತೇಯ "ಕರ್ವಾಲೋ" ಪುಸ್ತಕ ಮಾತ್ರ. ಹೌದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು, ಜೀವನವನ್ನು ಸ್ವಾದಿಸಿ ಬದುಕಿದ ಮನುಷ್ಯ ಅಂದ್ರೆ ಅದು ಈಗಿನ ಕಾಲಕ್ಕೆ ತೇಜಸ್ವಿ ಮಾತ್ರ. "ಕರ್ವಾಲೋ" ಹೆಸರು ಕೇಳಿದೊಡನೆ ಒಂದು ರೀತಿಯ ಅಚ್ಚರಿ ಮೂಡಿಸುವಂತಹ ಪುಸ್ತಕ. ಆದರೆ ಒಮ್ಮೆ ಓದಲು ಕುಳಿತರೆ ಮಾತ್ರ ಪುಸ್ತಕವನ್ನು ಓದಿ ಮುಗಿಸುವ ತನಕ ಕೂತೂಹಲ ಹಾಗೆ ಇರುತ್ತದೆ,in other words, you can tell they make us to sit on the edge of one's seat.
ಕಾದಂಬರಿಯ ಆಕರ್ಷಣೆಯ ಕೇಂದ್ರ ಬಿಂದು "ಮಂದಣ್ಣ"ನಾದರೆ, ಕಿವಿ, ಪ್ಯಾರ, ಕರ್ವಾಲೋ ಇವರೆಲ್ಲರೂ ಕಥೆಯ ಒಂದು ಭಾಗವಾಗುತ್ತಾರೆ. ಕಾಗ್ಗಾಡಿನಲ್ಲಿ ನಡೆಯುವ ಒಂದು ಕಥೆ ಇದು. ಜೇನುತುಪ್ಪದಿಂದ ಶುರುವಾಗುವ ಕಾದಂಬರಿ, ಮಧ್ಯದಲ್ಲಿ ಅನೇಕ ತಿರುವುಗಳು, ವನಸಿರಿಯ ಮಡಿಲಲ್ಲಿ ಸ್ವರೂಪ ಪಡೆದು, ಕಾಡಿನಲ್ಲಿ ನಸುಗತ್ತಲಿನಲ್ಲಿ ನಡೆದ ಹರಸಾಹಸಗಳು; ಕೊನೆಗೆ "ತಪ್ಪು ಸರಿ ಹೇಗೆ ಹೇಳ್ತೀರಿ. ನಮಗೆ ಈ ಕ್ಷಣ, ಇಲ್ಲಿ ಹೀಗನ್ನಿಸಿದೆ. ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ" ಎಂದು ಕರ್ವಾಲೋ ಅವರ ಮಾತಿನಿಂದ ಮುಕ್ತಾವಾಗುವ ಒಂದು ರೋಚಕ ಕಥೆ. ಕಾದಂಬರಿ ಬರೆದಿರುವ ಶೈಲಿ ಓದುಗರನ್ನು ಸೆಳೆಯುದರಲ್ಲಿ ಎರಡೂ ಮಾತೆ ಇಲ್ಲ. ಏಕೆಂದರೆ ತೇಜಸ್ವಿಯ ಬರಹವೇ ಹಾಗೆ ಯಾವುದೇ ಶೋಧಕವಿಲ್ಲದೆ, ನೇರವಾಗಿ, ಗ್ರಾಮ್ಯ ಭಾಷೆಯ ಸೊಗಡಿನಲ್ಲಿ ಅತ್ಯಂತ ಶುಭ್ರವಾಗಿ ಬರೆದ್ದಿದ್ದಾರೆ. ಆದರೆ ಈ ಪುಸ್ತಕವನ್ನು ಯಾರಾದರೂ ಬೇರೆ ಭಾಷೆಗೆ ಅನುವಾದ ಮಾಡಿದರೂ; ತೇಜಸ್ವಿ ಅವರು ಮಂದಣ್ಣ ನನ್ನು ವರ್ಣಿಸುವ ಶೈಲಿಯಲ್ಲಿ ಅಂದ್ರೆ "ಅಸಡಾ ಬಸಡಾ ಬೀಸುತ್ತಾ ನಡೆದುಹೋದರೂ" ಈ ಸಾಲನ್ನು ಖಂಡಿತವಾಗಿಯೂ ಯಾರೂ ಸಹಾ ಅನುವಾದಿಸಲು ಸಾಧ್ಯವಿಲ್ಲ ಯಾಕೆಂದರೆ ಅದೇ ಮಾತೃಭಾಷೆಗೆ, ಹಾಗೆ ತೇಜಸ್ವಿ ಅವರು ಉಪಯೋಗಿಸುವ ಅಕ್ಷರಗಳಿಗೆ ಇರುವ ಶಕ್ತಿ ಅಂತ ಅನ್ನಬಹುದು. ಈ ಪುಸ್ತಕವನ್ನು ಓದಿದಾಗ ನಿಜವಾಗಿಯೂ ನಾನೇ ಈ ವಿಸ್ಮಯ ಪ್ರಪಂಚವನ್ನು, ಪರಿಸರವನ್ನು ಬೇರೆಯೇ ರೀತಿಯಲ್ಲಿ ನೋಡಿ ಬೆರಗಾಗಿದ್ದುಂಟು. ಯಾರ್ ಯಾರ್ ಓದಿಲ್ಲ ಒಮ್ಮೆ ಕೊಂಡು ಓದಿ. ಯಾರ್ ಯಾರ್ ಓದ್ದಿದ್ದೀರಾ ಮತ್ತೆ ಮತ್ತೆ ಓದಿ. ಯಾಕೆಂದರೆ ತೇಜಸ್ವಿಯ ಬರಹಗಳೇ ಹಾಗೆ, ಕೊಂಚ ಹಾಸ್ಯ, ಜೊತೆಗೆ ವಿಸ್ಮಯ, ಕೊನೆಗೆ ಆಲೋಚನೆ.
ಇಂದು ತೇಜಸ್ವಿಯ ನೆನಪಿನಲ್ಲಿ ಇಲ್ಲಿ ಬರೆದಿರುವೆ. ಅವರಿಗೆ ಅವರೇ ಸಾಟಿ. ತೇಜಸ್ವಿನಾವಧೀತಮಸ್ತು.🙏🏻
ಕರ್ವಾಲೋ ನೂರೆಂಟು ಯೋಚನೆಗಳು,ಕುತೂಹಲ,ಪ್ರಶ್ನೆಗಳು ಹುಟ್ಟುವ . ಓದುವಾಗ ಒಂದೊಂದು ಪುಟದಲ್ಲೂ ಉತ್ತರದ ದಾರಿ ತೋರಿಸುತ್ತ ಹೋಗುತ್ತದೆ . ತೇಜಸ್ವಿಯವರ ಲೇಖನದಲ್ಲಿ ಅವರೇ ಸೂತ್ರದಾರಿ ಹಾಗೂ ಪಾತ್ರದಾರಿ , ಕಥೆ ಶುರುವಾಗುವುದು ಮೂಡಿಗೆರೆ ಜೇನು ಸೊಸೈಟಿ ಜೇನು ಕೊಳ್ಳಲು ಹೋಗಿ ಮಂದಣ್ಣ ಮತ್ತು ಲಕ್ಷ್ಮಣನ ಮೊದಲ ಭೇಟಿ ಗೆಳೆತನದಿಂದ ಶುರುವಾದ ನೂರೆಂಟು ವಿಘ್ನಗಳನ್ನು ಅನುಭವಿಸುವ ಹಾಗೂ ವಿಸ್ಮಯ ಸಂಗತಿಗಳನ್ನು ವಿಸ್ತಾರಗೊಳ್ಳುತ್ತ ಹೋಗುತ್ತದೆ . ತಂದೆಯವರಿಗೆ ಅಂತ ಜೇನು ಕೊಳ್ಳಲು ಹೋಗಿ ಎಪ್ಪತ್ತು ರೂಪಾಯಿ ಕೊಟ್ಟು ಜೇನುತುಪ್ಪದ ಟಿನ್. ತಮಾಷೆ ತಮಾಷೆಯಾಗಿ ಜೇನುತುಪ್ಪದ ಕಥೆ . ಸದಾ ಆತ್ಮೀಯ ಗೆಳೆತನದಿಂದ ಇರುವ ಕಿವಿ ನಾಯಿ .ಹಂತ ಹಂತದಲ್ಲೂ ತಾಪತ್ರೆ ಉಂಟಾದರೂ ಛಲಬಿಡದೆ ಉತ್ಸಾಹ ಕಳಕೊಳ್ಳದೆ ಹಾದಿಯನ್ನು ತಲುಪುವ ಗುರಿಯನ್ನು ಸಾಧಿಸುವ ,ಪ್ರಯಾಣ ಮಾಡುತ್ತಿರುವ ನಮಗೆ ಓದಿ ಮುಗಿಸಿದಾಗ ಮನಸ್ಸಿಗೆ ಹಗುರವೆನಿಸುತ್ತದೆ
First I want to thank my friend for 2 reasons: 1) For getting on my nerves to make me read a kannada book!! :D 2) For having recommended this book to me after I decided to read a kannada book! It was a marvellous read, from start to the finish. Not once, did the narration slacked up nor did it became a drag. The story was interesting and fun and the characters were lively. Now I am looking forward to read more Kannada books! :)
I realized one thing after reading this novel, that our country's regional language novelists are no less than any Nobel Prize laureates in storytelling and visual setting. Just that, we overestimate western writers a lot.
Tejaswi is one such gifted storyteller. He hooks the reader right from start to the plot. His writing is so nutritious(doesn't include any extra fluff & fat). He immerses & excites the reader simultaneously.
When it comes to this novel, his honesty rings in - every word, character development, and plot. His injection of slang triggered me to laugh out loud throughout my read.
Through this adventurous story, Tejaswi questions the basic tenets of atheism, morality, science, and evolution.
I've made up my mind to include only our regional novels to feed my fiction appetite in the coming days.
In the end, if you can read Kannada, I highly recommend diving into this fantastic novel in its original version, if not, please take up the English translated copy.
Bought it after seeing the ratings in various forum, ended up finding out that it is way overrated. Found nothing great, small story introducing characters one by one and stories in their life and finally a trek into forest to find gliding lizard. Small book of about 140 pages that can be covered in single sitting
Language usage was not that great, cuss words used in most of the places. I have been to multiple treks near mudigere I haven't seen ppl using so much bad words there 😂. And I have seen gliding lizards in couple of places, I really think the last 10-20 pages over describe the 'wow' moment
Nice short story about the search for a gliding lizard to advance the scientific knowledge about it and it's also about those people who came together as a group for this search. This takes place in malnad forest areas and it was nice to read about. Also, did not appreciate how the narrator was showering cuss words to the workers all the time just casually. Every time something happens the narrator gets angry, that seems to be his only response to everything around him. That does get irritating after a while.
Again, another bad translation from Sahitya Akademi. I simply can't stand the prose of their translations. This is my third experience with their prose and it's not getting any better.
And regarding the story, being a supposed adventure, it spends too much time not on building characters but in messed up introductions that only in the third quarter of the book we get to the adventure part which is vaguely satisfactory. Would've been an enjoyable story nevertheless if not for the bad prose.
'ಕರ್ವಾಲೋ' - ಕನ್ನಡ ಸಾಹಿತ್ಯದ ಶಿಖರ ಏರಲು ನಾನಿಟ್ಟ ಮೊದಲನೇ ಹೆಜ್ಜೆ. ಈ ನನ್ನ ಪ್ರಥಮ ಕನ್ನಡ ಪುಸ್ತಕ ನನಗೆ ಬಹಳ ವಿಶೇಷ. ಇಲ್ಲಿ ಬರುವ ಮಂದಣ್ಣನ ಅಚಾತುರ್ಯಗಳಿಂದ ಒದಗುವ ಸಂಕಷ್ಟಗಳನ್ನು ಲಕ್ಷ್ಮಣ, ತೇಜಸ್ವಿ, ಕರ್ವಾಲೋ, ಎಲ್ಲರೂ ಸೇರಿ ಸಹಾಯ ಮಾಡುವ ರೀತಿ ಚೆಂದ. ಮೂಡಿಗೆರೆಯ ದಿನಚರಿ, ವಿಶಿಷ್ಟ ಪಾತ್ರಗಳು, ಕಿವಿ ಎಂಬ ಚುರುಕು ಶ್ವಾನ... ಇವೆಲ್ಲವೂ ನಮ್ಮನ್ನು ಒಂದು ಹೊಸ ಪ್ರಪಂಚಕ್ಕೆ ಕೊಂ��ೊಯ್ಯುತ್ತವೆ. ಇದಲ್ಲದೆ ಬಹು ಮಹತ್ವವಾದ ಒಂದು ಕೆಲಸಕ್ಕೆ ಹೊರಟಾಗ ಆಗುವ ಅನುಭವ ಮಲೆನಾಡಿನ ದಟ್ಟಡವಿ, ಪರ್ವತ ಶ್ರೇಣಿ, ಜೀವ ಸಂಕುಲವನ್ನು ನಮಗೆ ಪರಿಚಯಿಸುತ್ತದೆ. ಚಾರ್ಮಡಿ, ಶಿರಾಡಿ ಘಾಟ್ ಗಳಲ್ಲಿ ಮೂಡಿ ಬರುವ ಈ ಕಥೆ ಕಣ್ಣಿಗೆ ಕಟ್ಟುವಂತಿದೆ. ಕೊನೆವರೆಗೂ ಏನಾಗುತ್ತದೆ ಎಂಬ ಕುತೂಹಲವನ್ನು ಉಳಿಸಿಕೊಳ್ಳುವ ಲೇಖಕರು "ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ" ಎಂಬ ಸೂಕ್ತ ವಾಕ್ಯಯಿಂದ ಪೂರ್ಣಗೊಳಿಸುತ್ತಾರೆ. ನನ್ನ ಅಭಿಪ್ರಾಯದಲ್ಲಿ ಎಲ್ಲರೂ ಒಮ್ಮೆ ಓದಲೇ ಬೇಕಾದ ಪಟ್ಟಿಯಲ್ಲಿ ಈ ಪುಸ್ತಕ ಅಗ್ರಗಣ್ಯ.
ಕರ್ವಾಲೋ ಓದುವುದು ಎಂದರೆ ನನ್ನ ಬಾಲ್ಯಕ್ಕೆ ಮರುಳುವ ಹೆದ್ದಾರಿಯೇ ಸರಿ. ಇದು ನಾನು ಓದಿದ ಮೊದಲ ಕನ್ನಡ ಪುಸ್ತಕ. ಅಚ್ಚರಿಯ ನನ್ನ ಕಣ್ಣುಗಳನ್ನು ಪ್ರಕಾಶಿಸಿ ಸಾಹಿತ್ಯಲೋಕದ ಒಳಗೆ ಮಾಯಾವಿಯಂತೆ ಸೆಳೆದು ಎಳೆದುಕೊಂಡ ಹೊತ್ತಿಗೆಯಿದು. ಮತ್ತೆ ಮತ್ತೆ ಓದುವುದು ಆ ಚಮತ್ಕಾರದ ಕ್ಷಣದ ಪುನರ್ಮಿಲನದ ಅನುಭವಕ್ಕೆ.
ಈ ಕೃತಿ ನೂರು ಮುದ್ರಣಗಳ ಮೈಲುಗಲ್ಲಿನ ಸನಿಹದಲ್ಲಿದೆ, ಇಷ್ಟು ಓದುಗರನ್ನು ಆಕರ್ಷಿಸಲು ಕಾರಣವೇನಿರಬಹುದು ಎಂಬುದನ್ನು ಹುಡುಕುತ್ತ ಹೊರಟರೆ ಅನೇಕ ಕಾರಣಗಳು ಸಿಗಬಹುದು. ಆದರೆ ನನ್ನ ಮಟ್ಟಿಗೆ ಬಹು ಮುಖ್ಯ ಕಾರಣ ಕಗ್ಗಲ್ಲಿನಂತ ಜೀವ ವಿಕಾಸದ ವಿಷಯದ ಮೇಲಿನ ಕಥೆಯನ್ನು ಸಾಮಾನ್ಯರ ಮೂಲಕ ಹೇಳಿಸಿದ್ದು. ಓದುಗರು ಕನೆಕ್ಟ್ ಆಗಿದ್ದು ಇಲ್ಲಿಯೇ ಎಂಬುದು. ಹಾರುವ ಓತಿ, ಜೇನು ನೊಣ, ಮಿಂಚು ಹುಳು, ವಿಕಾಸ ಇವೆಲ್ಲವೂ ವೈಜ್ಞಾನಿಕವಾಗಿ ಹೇಳುತ್ತಾ ಹೋದರೆ ಕೆಟ್ಟ ಬೋರು ಎನಿಸಿ ಪುಸ್ತಕ ಮಡಚಿಟ್ಟು ಓಡಿಯೇ ಹೋಗುತ್ತೇವೆ, ತೇಜಸ್ವಿರವರು ಸುಲಭ ಭಾಷೆಯಲ್ಲಿ ಹುಲು ಮಾನವರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿರುವ ಇಲ್ಲಿನ ತಂತ್ರ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.
ಇಲ್ಲಿನ ಪಾತ್ರವರ್ಗ ಮಜವಾಗಿವೆ, ಮಂದಣ್ಣ ಸಾರ್ವಕಾಲಿಕ ಉತ್ತಮ ಪಾತ್ರಗಳಲ್ಲಿ ಒಂದು. ಆ ಪಾತ್ರ ಸಿಲುಕುವ ವಿವಿಧ ಸಂದರ್ಭಗಳೇ ಕಾದಂಬರಿಯ ಜೀವಂತಿಕೆ, ಅವನೇ ಈ ಕಾದಂಬರಿಯ ಸಾರಥಿ. ಊರೂರೇ ಅವನನ್ನು ಅಪ್ರಯೋಜಕ ಅಂದುಕೊಳ್ಳುತ್ತಿದ್ದರೆ ಕರ್ವಾಲೋ ಅವನನ್ನು ಅವತಾರ ಪುರುಷನಂತೆ ಕಾಣುತ್ತಾರೆ, ಅವನ ಅವಲೋಕನ ಕೌಶಲ್ಯವನ್ನು ಗುರುತಿಸಿರುತ್ತಾರೆ. ಅವನ ಬಗ್ಗೆ ಕರ್ವಾಲೋ ಹೇಳುವ ಈ ಮಾತನ್ನು ಗಮನಿಸಿ "ಇಲ್ಲ ಇಲ್ಲ ಈ ಒಂದು ವಿಷಯದಲ್ಲಿ ಮಂದಣ್ಣನ್ನ ಮೀರಿಸುವವರು ಯಾರೂ ಇಲ್ಲ. ಅಷ್ಟೊಂದು ಚೆನ್ನಾಗಿ ಗ್ರಹಿಸ್ತಾನೆ. ಅವನೊಬ್ಬ ಹುಟ್ಟಾ ನ್ಯಾಚುರಲಿಸ್ಟ್. ಹೆಚ್ಚು ಕಡಿಮೆ ಈವರೆಗೂ ಅವನು ಹೇಳಿರೋದು ಒಂದೊಂದು ಕೂಡ ಅದರ ವಿವರಗಳಲ್ಲಿ ಸಹ ಸುಳ್ಳಾಗಿಲ್ಲ, ಅಷ್ಟೊಂದು ಸೂಕ್ಷ್ಮವಾಗಿ ಗ್ರಹಿಸ್ತಾನೆ. ಅದ್ಭುತ ಪ್ರಕೃತಿ ಶಾಸ್ತ್ರಜ್ಞ ಅವನು. ಅಂಥೋನು ನನ್ನ ಹತ್ತಿರ ಬಂದು ಪ್ಯೂನ್ ಕೆಲಸ ಕೊಡೀoದರೆ ನನಗೆ ಸಿಟ್ಟು ಬರೋದಿಲ್ಲವೇ ರಾಸ್ಕಲ್." ಇದು ಮಂದಣ್ಣನ ಒಟ್ಟು ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತದೆ, ತನ್ನ ಬಳಿ ಇರುವ ಅಭೂತಪೂರ್ವ ಪ್ರತಿಭೆ ಸ್ವತಃ ಅವನಿಗೆ ತಿಳಿಯದೇ ಇರುವುದು, ಅವನ ಜೀವನದ ದುರಂತ
ಕರ್ವಾಲೋರು ಎಲ್ಲವನ್ನು ಭಿನ್ನ ನೋಟದಿಂದ ಕಾಣುವುದು ಓದುಗರನ್ನು ಕೌತುಕರನ್ನಾಗಿ ಬೆರಗು ಕಣ್ಣಿನಿಂದ ಓದಿಸಿಕೊಂಡು ಹೋಗುತ್ತದೆ, ಕರ್ವಾಲೋ ಪಾತ್ರವನ್ನು ಓದುವ ಪ್ರತಿಯೊಬ್ಬ ಓದುಗನು ಇವರನೊಮ್ಮೆ ನೋಡಬೇಕಲ್ಲ ಅನಿಸದೇ ಇರಲಾರದು, ಅವರ ಪ್ರಬುದ್ಧತೆ, ಜೀವ ವಿಕಾಸದ ಮೇಲಿನ ಅವರ ಸಂಭಾಷಣೆ, ಕೀಟದ, ಓತಿಯ ವಿವರಣೆ ಇವೆಲ್ಲವೂ ಅವರನ್ನು ಪ್ರಾಜ್ಞರನ್ನಾಗಿ ಚಿತ್ರಿಸುತ್ತದೆ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ಆ ಪಾತ್ರದ ಆಕರ್ಷಣೆ ಇರುವುದು ಅವರ ಮೆದು ಹೃದಯದಿಂದ, ಮಂದಣ್ಣನ ಪರ ಕರ್ವಾಲೋರವರು ಕೋರ್ಟಿಗೆ ಹೋಗಿ ಸಾಕ್ಷಿ ಹೇಳಲು ಅವರ ಸಹೋದ್ಯೋಗಿ ಪ್ರಭಾಕರ ಕೇಳಲು ಹಿಂದೇಟು ಹಾಕಿದಾಗ ಕರ್ವಾಲೋರ ಪ್ರತಿಕ್ರಿಯೆ ಗಮನಿಸಿ "ನಾನ್ಸೆನ್ಸ್, ನನ್ನ ಹತ್ತಿರ ಶಿಷ್ಯವೃತ್ತಿ ಮಾಡಿ ನೀನು ತರಾಬೇತಾಗಿರೋದು ಇಷ್ಟೇನೋ ಪ್ರಭಾಕರ. ನಾನು ಪ್ರೊಫೆಸರು, ಮಂದಣ್ಣ ಹಳ್ಳಿ ಗಮಾರ, ಇವೆಲ್ಲ ಹೆಬ್ಬುಬ್ಬೆ ನೀನು ನಿಜಾಂತ ತಿಳಿದರೆ ಏನಪ್ಪಾ ಕಲಿತಂತೆ ಆಯ್ತು? ಇದರಲ್ಲೇ ನಿನ್ನ ಆಯಸ್ಸು ಮುಗಿದುಹೋಗುತ್ತೆ. ಸತ್ಯದ ಕಿಂಚಿತ್ ದರ್ಶನಾನೂ ಆಗೋಲ್ಲ ನಿನಗೆ. ಈ ಮಾಯೇನೆಲ್ಲ ಮೀರಬೇಕು ನಾವು. ಆಗಲೇ ನಿಮಗೆ ಬೇರೆ ಬೇರೆ ಜಗತ್ತು, ಪ್ರಪಂಚ ಕಾಣ್ತದೆ." ಅವರ ಸೂಕ್ಷ್ಮ, ಶಾಂತಚಿತ್ತ ಲಕ್ಷಣಗಳು ಸಾಧನೆ ಮಾಡಿದ ರಿಷಿಯಂತೆ ಕಾಣಿಸುತ್ತದೆ, ಇದಕ್ಕೆ ನಿರೂಪಕರ ಮಾತೊಂದನ್ನು ಇಲ್ಲಿ ಗಮನಿಸಿ - "ಕೊಂಚ ದೂರದಲ್ಲೇ ಧಗಧಗಿಸುತ್ತಿದ್ದ ಬೆಳಕು ಅವರ ಮುಖವನ್ನು ಕತ್ತಲ ಹಿನ್ನಲೆಯಲ್ಲಿ ದೇದೀಪ್ಯಮಾನ ಮಾಡಿತ್ತು. ಪುರಾತನ ಮಹರ್ಷಿಯೋರ್ವನ ಮುಖದಂತೆ ಅವರ ಗಡ್ಡ ಮೀಸೆ ವದನ ಕಾಣುತ್ತಿತ್ತು." ಈ ಪಾತ್ರ ಮಲೆನಾಡಿನ ಶ್ರೀಮಂತಿಕೆಯನ್ನು ಜಡವೆಂದು ಭಾವಿಸುವ ಅಲ್ಲಿನ ಜನರೊಳಗೆ ಚೇತನವೊಂದನ್ನು ಬಡಿದೆಬ್ಬಿಸುವ ರೂಪಕದಂತೆ ಧ್ವನಿಸುತ್ತದೆ
ನಿರೂಪಕರ ಪಾತ್ರ ತಮಾಷೆಯಿಂದ ಎಲ್ಲರನ್ನು ಬೈಯುತ್ತಲ್ಲೇ, ಕೊಂಚ ಅಸ್ವಾಭಾವಿಕರಂತೆ ವರ್ತಿಸುತ್ತಾ ಕೆಲವೊಮ್ಮೆ ತ್ರಾಸು ಕೊಡುವಂತೆ ಸಾಗುತ್ತದೆ. ಆದರೆ ಇವರು ಇತರ ಪಾತ್ರಗಳಿಗೆ ಕೊಡುವ ಪ್ರತ್ಯುತ್ತರಗಳು, ವಕ್ರ ವಿನೋದ ಮಾತುಗಳು ನಗೆಗಡಲ್ಲಿನಲ್ಲಿ ತೇಲಿಸುತ್ತದೆ. ಈ ಪಾತ್ರ ಮಂದಣ್ಣ, ಪ್ಯಾರ, ಕರಿಯಪ್ಪರಿಗೆ ಮಾತು ಮಾತಿಗೂ ಗಮಾರ, ಎಡ್ಡ, ಹಜಾಮ ಎಂದೆಲ್ಲ ಬೈಯುವುದು ಅತಿ ಅನಿಸುತ್ತದೆ..
ಇನ್ನೂ ಈ ಕಾದಂಬರಿಯ ಸಂಭಾಷಣೆಯಂತೂ ಅಮೋಘ, ಪ್ರಭಾಕರ ಎಂಬ ಪಾತ್ರ ಕ್ಯಾಮೆರಾ ಮತ್ತು ಇತರೆ ಸಲಕರಣೆ ಕತ್ತಿಗೆ ನೇತುಹಾಕಿಕೊಂಡಾಗ ಬರುವ ಸಂಭಾಷಣೆಯಲ್ಲಿ ಕಾಣುವ ಉಪಮೆ ನೋಡಿ "ಪ್ರಭಾಕರ ಕ್ಯಾಮರಾ, ಲೆನ್ಸ್ ಗಳು ಇತ್ಯಾದಿ ನೊರೆಂಟು ಕುತ್ತಿಗೆ ತೋಳು ಮುಂತಾದಕ್ಕೆಲ್ಲ ಕಾಯಿ ಬಿಟ್ಟ ತೆಂಗಿನ ಮರದಂತೆ ಜೋತುಕೊಂಡಿದ್ದ". ಇನ್ನೊಮ್ಮೆ ಮಾತನಾಡುವಾಗ ವಿಷಯ ದಾರಿ ತಪ್ಪಿ ಹೋದಾಗ ಕರ್ವಾಲೋರ ಮಾತನ್ನು ಕೇಳಿ "ನೋಡಿ ನೋಡಿ ಮುಖ್ಯ ವಿಷಯ ಬಿಟ್ಟು ಅಡ್ಡದಾರಿ ತುಳೀಬೇಡಿ. ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತೀವಿ. ಕಾಲ ಸರೀತಾ ಇದೆ." ಜೇನುಗಳ ಕಾಟದಿಂದ ನಿರೂಪಕರು ಜೇನನ್ನು ಒಂದು ಅನರ್ಹ ಕೀಟವೆಂದಾಗ ಕರ್ವಾಲೋ ಹೇಳುವ ಈ ಮಾತು ಸಮಂಜಸ ಎನಿಸುತ್ತದೆ "ನೋ ನೋ ನೀವು ತಪ್ಪು ತಿಳಿದಿದ್ದೀರಿ, ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷಿ ಎಂದರೆ ಹೋಮೋಸೆಪಿಯನ್. ಎರಡು ಕಾಲಿನ ಮಾನವ." ಮೌ ಮೌ ಜೇನು ನೊಣಕ್ಕೆಹೆದರಿ ಕರಿ ಕಂಬಳಿಯನ್ನು ಹೊದ್ದುಕೊಂಡು ಕೂತಿದ್ದ ನಿರೂಪಕರಿಗೆ ಮಂದಣ್ಣ ಹೇಳುವ ಈ ಮಾತು ಗಮನಿಸಿ ಎಷ್ಟು ಮಜವಾಗಿದೆ "ಏನ್ ಸಾರ್, ಕಂಬ್ಳಿ ಹೊದ್ದುಕೊಂಡು? ಕರಿಯಪ್ಪ ನೋಡಿದ್ರೆ ಕರಡೀ ಅಂತ ಏರಿಸೇಬಿಡ್ತಾನೆ." ಹೀಗೆ ಕಚಗುಳಿ ಇಡುತ್ತಾ ನಮ್ಮನ್ನು ಎಚ್ಚರಿಸುತ್ತ, ಜೀವ ವಿಕಾಸದ ಬಗ್ಗೆ ತಿಳಿಸುತ್ತಾ ಸಾಗುವ ಮಾತುಗಳು ಸುಂದರ ರಸಾನುಭವವನ್ನು ಉಣಬಡಿಸುತ್ತದೆ.
ಈ ಕಾದಂಬರಿಯನ್ನು ಓದಿ ಅಥವಾ ಇದರ ಬಗ್ಗೆ ತಿಳಿದುಕೊಂಡು ಇಲ್ಲಿ ಬರುವ ಹಾರುವ ಓತಿಯನ್ನು ಕಾಡಿನಿಂದ ಹುಡುಕಿ ಹಿಡಿದು ತೇಜಸ್ವಿರ ಬಳಿ ತರುತ್ತಿದ್ದರಂತೆ. ಈಗಲೂ ನಾವು ಹಾರುವ ಓತಿಯನ್ನು ಮಲೆನಾಡಿನಲ್ಲಿ ಕಾಣಬಹುದು, ಇಷ್ಟೇ ಏಕೆ ನನ್ನ ಸ್ನಾತಕ ಪದವಿಯ ಸಮಯದಲ್ಲಿ ಈ ಓತಿಯನ್ನು ನಮ್ಮ ಕೀಟಶಾಸ್ತ್ರದ ಲ್ಯಾಬಿನಲ್ಲಿ ದೊಡ್ಡ ವಯಲ್ಲಿನಲ್ಲಿ ಇಟ್ಟಿದನ್ನು ನೋಡಿದೀನಿ ಅದರ ಮೇಲೆ ಕರ್ವಾಲೋ ಕಾದಂಬರಿಯಲ್ಲಿ ಬರುವ ಹಾರುವ ಓತಿಯಂದೇ ಹೆಸರಿಸಿದ್ದರು. ಇವೆಲ್ಲ ಕಂಡಾಗ ಅನಿಸಿದ್ದು ಹಾರುವ ಓತಿ ಇಲ್ಲಿ ಒಂದು ರೂಪಕವಷ್ಟೇ, ಮಾನವ ಏನೇ ಆವಿಷ್ಕಾರ ಮಾಡಿದ್ದರೂ ಏನೇ ಸಾಧಿಸಿದ್ದರೂ ಅವನ ಗಣನೆಯ ಆಚೆಗೆ, ಅವನು ತಿಳಿದುಕೊಳ್ಳಬೇಕಾದುದ್ದು ಆಗಸದಷ್ಟು ವಿಶಾಲವಾಗಿದೆ ಎಂಬುದು, ತಿಳಿದುಕೊಂಡಿದ್ದರೂ ಇದೇ ಅಂತಿಮ ಸತ್ಯ ಎಂಬುದಕ್ಕೂ ಖಾತ್ರಿ ಇಲ್ಲ. ಇದಕ್ಕೆ ಸೂಚನೆಯಾಗಿ ಕಾದಂಬರಿಯಲ್ಲಿ ಕೊನೆಯ ಸಾಲು ಮನದಲ್ಲಿ ಉಳಿಯುತ್ತದೆ "ತಪ್ಪು ಸರಿ ಹೇಗೆ ಹೇಳ್ತೀರಿ. ನಮಗೆ ಈ ಕ್ಷಣ, ಇಲ್ಲಿ ಹೀಗನ್ನಿಸಿದೆ, ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ."
ಈ ಕಾದಂಬರಿಯನ್ನು ಬಹಳಷ್ಟು ಓದುಗರು ತೇಜಸ್ವಿರ ಆತ್ಮಕತೆಯ ಭಾಗವಂತೆ ಓದಿ ಇಲ್ಲಿ ಬರುವ ಪಾತ್ರಗಳನ್ನು ಹುಡುಕುತ್ತ ಮೂಡಿಗೆರೆಗೆ ಹೋಗುವುದು ಕಂಡಿದ್ದೇವೆ, ಕೇಳಿದ್ದೇವೆ. ಇಲ್ಲಿ ಬರುವ ಕರಿಯಪ್ಪ ಎಂಬ ಪಾತ್ರವನ್ನು ಹೋಲುವ ನೈಜ ಹಿರಿಯರ ಸಂದರ್ಶನ ಮಾಡಿರುವ ತುಣುಕನ್ನು ನೋಡಿದ್ದೇನೆ. ಅಷ್ಟೇ ಏಕೆ, ರಾಜೇಶ್ವರಿ ತೇಜಸ್ವಿರವರ "ನನ್ನ ತೇಜಸ್ವಿ" ಪುಸ್ತಕದಲ್ಲಿ ಕುವೆಂಪುರವರು ಸೊಸೆಗೆ ತಮ್ಮ ಇಳಿವಯಸ್ಸಿನಲ್ಲಿ ಮುಗ್ದರಾಗಿ ಕರ್ವಾಲೋ ಅನ್ನುವವರು ಇದ್ದರೇ? ಎಂದು ಕೇಳುವುದನ್ನು ನಾವು ಓದಿದ್ದೇವೆ, ಏನೇ ಆದರೂ ಇದೊಂದು ಸೃಜನಾತ್ಮಕ ಕೃತಿ, ಆದರೂ ನೈಜತೆಗೆ ಹತ್ತಿರವಾಗುವಂತೆ ಸುತ್ತಮುತ್ತಲಿನ ಜನರೇ ಪಾತ್ರಗಳನ್ನಾಗಿ ಮಾಡಿಕೊಂಡು ಬರೆಯುವಾಗ ಆ ಕೃತಿ ಓದುಗನಿಗೆ ಹತ್ತಿರವಾಗುತ್ತದೆ, ಹಾಗಾಗಿಯೇ ಇದು ತೇಜಸ್ವಿರವರ ಮುಖ್ಯ ಕೃತಿಯಾಗಿ ಓದುಗರ ಮನದಲ್ಲಿ ನಿಲ್ಲುತ್ತದೆ. ಈ ಕೃತಿಯೊಂದು ನಮ್ಮ ಭಾಷೆಯಲ್ಲಿದೆ ಎಂಬುದು ಕನ್ನಡಿಗರ ಹೆಮ್ಮೆಯ ವಿಷಯ, ಓದುವುದು, ಮತ್ತೆ ಮತ್ತೆ ಓದುವುದು ಆಸ್ವಾಧಿಸುವುದು ಓದುಗನ ಮಟ್ಟಿಗೆ ಚಂದದ ದುರಾಸೆಯಷ್ಟೇ
I have already a good number of books this year but Carvalho is without doubt the most unique book I have read thus far into this year. There are two english translations available for this book, originally written in Kannada by Purnachandra Tejasvi, but going by the reviews D.A. Shankar's translation is superior.
The translator notes in the introduction that Tejasvi's writing eclipsed the heavy, imported load of Marxist and Existential thought in the contemporary Kannada literature by choosing a light, casual mode and incorporating into it a rational thinking along with Upanishadic mysticism.
This book has a well-educated farmer as the narrator who loves village life but is unsuccessful at agriculture and is considering moving to the city. By a series of accidental events, he gets involved in the lives of some curious people, the most curious of these being Mandanna, the village vagabond who also happens to be a good student of natural history unbeknownst to most people in the village. Carvalho is a scientist paid by the government to be stationed in the village and help out farmers. He is Mandanna's teacher and often takes him along on his nature trips.
The book paints a honest picture of rural Kannada life using direct and often comic narration. Half the novel is spent in Mandanna trying to get married and then getting into trouble with the law from which the narrator rescues him. Then all of them set on a quest for an elusive flying lizard whose confirmed discovery will shed new light on the steps of evolution. This expedition takes the book along with the narrator into the great forests with a choice set of companions, including Kiwi, his golden spaniel and Biriyani Kariappa, so named because of his extraordinary skill in making biriyani. This part of the book gives it many dimensions, both scientific and spiritual.
This book is a gem in the tradition of both Indian and Kannada literature. I'd recommend this book to everyone. Translator encapsulates perfectly the spirit of the novel by quoting from Eliot's The Four Quartets:
We shall not cease from exploration And the end of all our exploring Will be to arrive where we started And know the place for the first time.
ಸರಳ ಬರವಣಿಗೆಯಲ್ಲಿ ತೇಜಸ್ವಿಯವರ ಅದ್ಭುತ ಸೃಷ್ಟಿ ಇದು. ಮಂದಣ್ಣ, ಕರ್ವಾಲೋ, ಕಿವಿ ಹೀಗೆ ಎಲ್ಲವೂ ಬಹಳ ಹತ್ತಿರವಾಗುವಂತ ಪಾತ್ರಗಳು. ಹಾರುವ ಓತಿ ಇಲ್ಲಿ ಮುಖ್ಯ ಪಾತ್ರ ವಹಿಸಿದರೂ ಅದು ಬರೋದು ಕೊನೆಯಲ್ಲಿ. ಹಳ್ಳಿ, ಕಾಡು, ಜೇನು ಹೀಗೆ ಕರ್ವಾಲೋ ಕಥೆ ಕಗ್ಗಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ಘಟನೆ. ಹಳ್ಳಿಯ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೋ ಕಾಲಜ್ಞಾನಿಯಾಗಿ ರೂಪುಗೊಳ್ಳುವ ಅಚ್ಚರಿಯ ಕಥೆ! ಧರ್ಮ, ಧ್ಯಾನ, ತಪಸ್ಯೆಗಳನ್ತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡದ ಎಲ್ಲ ಕಾದಂಬರಿಗಳಿಗಿಂತ ಸಂಪೂರ್ಣ ವಿಭಿನ್ನವಾದ ಕೃತಿ. ಒಮ್ಮೆ ಓದಿದ ಪುಸ್ತಕ ಇನ್ನೊಮ್ಮೆ ಓದಬೇಕು ಅನಿಸುವ ಹಾಗೆ ಮಾಡುತ್ತೆ ಅಂದರೆ ಅದು ಬಹಳ ವಿಶೇಷವಾಗಿರಲೇಬೇಕು. ಅಂತಹ ಸಾಲುಗಳಲ್ಲೆ ನಮ್ಮ ಕರ್ವಾಲೋ ಬರೋದು. ಕನ್ನಡ ಸಾಹಿತ್ಯ ಓದುವವರಿಗೆ ಶುರುಮಾಡಲು ಕಾದಂಬರಿ ಅಂದರೆ ಅದು ಕರ್ವಾಲೋ. ಒಮ್ಮೆ ಓದಿ ಬದಿಗೆ ಇಟ್ಟಮೇಲೆ ಸಹ ಮತ್ತೆ ಮತ್ತೆ ಓದಬೇಕು ಅನಿಸುವಂತೆ ಮೋಡಿ ಮಾಡುತ್ತೆ.
Picked up this book because I want to read more non English books in their respective languages. The book was…nice. But didn’t wow me. I come from Malnad - the land of the rain - and the book is set there. So maybe it wasn’t as exotic for me but rather commonplace which perhaps reduced its charm. There are aspects of discussion in the book about nature, evolution and the discourse of scientific method which are interesting. But overall not my cup of tea.
The book is rightly dedicated to the Western Ghats of India, what connects is the raw and rustic feel in the story. For someone who has been in and around Mudigere, who knows people belonging to such towns, reading this one is an absolute pleasure.
ಇದು ನಾನು ಓದಿದ ಮೊದಲ ಕೆಲವು ಕಾದಂಬರಿಗಳಲ್ಲಿ ಒಂದಾಗಿದೆ. ನನ್ನ ಶಾಲಾ ದಿನಗಳಲ್ಲೇ ಇದನ್ನು ಓದಿದ್ದೆ. ಮತ್ತೊಮ್ಮೆ ಇದರ ಆಡಿಯೋ ಬುಕ್ ನ್ನು Youtube ನಲ್ಲಿ ಇಂದು ಕೇಳಿ ಮುಗಿಸಿದೆ. ಇದು ಚಿಕ್ಕ ವಯಸ್ಸಿನಲ್ಲಿ ಓದಿದಾಗ ಬಹಳ ಇಷ್ಟವಾಗುವ ಕಾದಂಬರಿ. ಲೇಖಕರೇ ನಿರೂಪಕರೂ, ಮುಖ್ಯ ಪಾತ್ರಧಾರಿಯೂ ಆಗಿರುವ ಈ ಕಥೆಯಲ್ಲಿ, ಮೊದಲಾರ್ಧದಲ್ಲಿ ಹಳ್ಳಿಗಾಡಿನ ಚಿತ್ರಣ ಕೊಟ್ಟು ಕೊನೆಯರ್ದದಲ್ಲಿ ಕಾಡಿನ ಅಗಾದತೆ, ಅದರ ಮುಂದೆ ಮನುಷ್ಯ ಜೀವನದ ನಿರರ್ಥಕತೆ, ಹಲವು ವೈಜ್ಞಾನಿಕ ವಿಚಾರಗಳು ಹಾಗೂ ಸ್ವಲ್ಪ ಮಟ್ಟಿಗೆ Philosophy ವಿಚಾರಗಳ ಮೂಲಕ ರೋಚಕತೆಯನ್ನು ಬೆಳೆಸಿ ಓದುಗರನ್ನು ಹಿಡಿದಿಡುತ್ತದೆ. ಯುವ ಓದುಗರು ಓದಲೇಬೇಕಾದ ಪುಸ್ತಕ ಇದಾಗಿದ್ದು ಗಾತ್ರದಲ್ಲಿ ಚಿಕ್ಕದಾಗಿರುವ ಕಾರಣ ಮೊದಲ ಕಾದಂಬರಿಯನ್ನಾಗಿ ಹೊಸ ಓದುಗರು ಇದನ್ನು ಆರಿಸಿಕೊಳ್ಳಬಹುದು.
Ever since my cousin and niece from Mysuru raved about Poornachandra Tejaswi's writing, I've been looking for translations from the Kannada originals. I read a short story in the anthology, Sirigannada called An indentured spirit and recently (finally) found a translation of his novel, Carvalho translated by D.A.Shankar.
The narrator in Carvalho is an educated family man living in a village, trying his hand at farm life. He is astounded to find that the venerated Prof. Carvalho regards the lowly born Mandanna to be a born naturalist who intimately knows the forested Malnad region. The narrator gets a crash course in natural history with many incidents piquing his curiosity, from bees and honey to his dog Kiwi, and Mandanna himself.
Can the fickle-seeming Mandanna be relied upon to lead a squabbling coterie comprising the Professor, the narrator, and colourful characters like Prabhakara and Biriyani Kariappa, to prove the existence of a species that is not quite extinct as reported? Read more to find our how the path to this quest is paved with hurdles such as a wedding alliance, and an illicit liquor case.
The strength of this slim book is in the memorable characters who saunter in and out of the pages. The translation is efficient and some of the humour comes through, but I suspect it is tough to capture Tejaswi's wry expressions in English. If Tejaswi's works had been translated earlier, he could have stood shoulder to shoulder alongside R.K.Narayan for his observations of life in a village. I'm sure this is the sad plight of much of the untranslated gems in Indian regional literature featuring the mystifying being that is the ordinary Indian.
My discovery today was that there are narrations of Carvalho and other Kannada books on YouTube. What a wonderful way to discover Indian regional fiction in languages one understands but does not read!
ಪ್ರಕ್ರತಿಯಲ್ಲಿರುವ ಕೆಲವು ಕೌತುಕಗಳನ್ನು ನೋಡಿಯೆ ಕಲಿಯಬೇಕೆಂಬ ವಿಚಾರಕ್ಕೆ ತೇಜಸ್ವಿಯವರ ಈ ಕಾದಂಬರಿ ತದ್ವಿರುದ್ಧವಾಗಿದೆ. ಗಾಳಿಬೀಸುವ ಶಬ್ದದಿಂದ ಹಿಡಿದು ಅವರ ನಾಯಿಯು ಬೊಗಳುವ ಸದ್ದು ಕೂಡ ಓದುವವನ ತೀರ ಹತ್ತಿರದಲ್ಲೆ ನಡೆಯುತ್ತಿದೆ ಅನ್ನುವಷ್ಟರ ಮಟ್ಟಿಗೆ ಅವರ ಬರವಣಿಗೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ.... ಒಂದು ವಿಚಿತ್ರ ಪ್ರಾಣಿಯನ್ನು ಒಬ್ಬ ಹಳ್ಲಿಯವನು ವಿವರಿಸುವ ಬಗೆ, ವಿಜ್ಞಾನಿ ಕರ್ವಾಲೊ ಅದರ ಬಗ್ಗೆ ಕುತೂಹಲ ತಳಿದು ಕಾಡಲ್ಲಿ ಅದರ ಹುಡುಕಾಟ, ಆ ತೊಳಲಾಟದ ನಡುವೆಯು ನಡೆಯುವ ಅರ್ಥ ಪೂರ್ಣ ಸಂಭಾಷಣೆಗಳು, ಕೊನೆಗೆ ಮಾನವನ ಹುಟ್ಟು, ವರುಷಗಳ ಹಿಂದೆ ಅವನು ಬದುಕಿದ ರೀತಿ ಇದೆಲ್ಲದರ ಬಗ್ಗೆ ವಿಜ್ಞಾನಿ ಕರ್ವಾಲೊ ವಿವರಿಸುತ್ತಿದ್ದಂತೆ ತೇಜಸ್ವಿ ಅವರ ಕಣ್ಣಲ್ಲಿ ಕರ್ವಾಲೊ ಕಾಲಜ್ನಾನಿ ಆಗಿ ಕಾಣುವ ರೀತಿ ಎಲ್ಲವೂ ಅದ್ಭುತ. ಪ್ರಕ್ರತಿಯ ಒಡನಾಡಿ ತೇಜಸ್ವಿಯವರ ಒಂದೊಂದು ಬರವಹು ವರ್ಣಮಯ ಕಲಾಕ್ರತಿ
Karvahlo is a different story. This is a story about the expedition of a scientist with the help of few villagers to find the trail of a flying chameleon. That's right. The protagonist seemed like a curious answer seeker who takes part in this expedition. But, Dr. Karvahlo is the one who takes all the credits. A gripping tale and a must read.
karvalo my favourite book i ever read. i feeling like to be in the forest with the team who are searching of flying lizard. mm gud experince. i read this book when i was in 7th standard. when i felt lonelyless i began to read this book and felt cool.
One of the best book by K.P. Purnachandra Tejaswi. The scientist Karvalo bring's us to the new world by explaining the critical topics in very understandable way and story is very adventures.