ಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ. ಜೀವನದ ವಿರಾಟ್ ಅರ್ಥ ಹೀನತೆಯ ಪರಿಧಿಯೊಳಗೆ ಅದರ ಅರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿ ಕೊಡುತ್ತದೆ.
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
ನಾನು ಪ್ರೌಢಶಾಲೆಯ ತರಗತಿಯಲ್ಲಿದ್ದಾಗ ನನ್ನ ತಂದೆಯ ಬಳಿ ಕಾಡಿ ಬೇಡಿ ಎರಡು second hand ಪುಸ್ತಕಗಳನ್ನು ಕೊಂಡಿದ್ದೆ, ಒಂದು ಮಹಾಪಲಾಯನ ಇನ್ನೊಂದು ಜುಗಾರಿ ಕ್ರಾಸ್. ಎರಡೇ ಪುಸ್ತಕಗಳನ್ನ ತಿರ್ಗ ಮುರ್ಗ ಓದೋದೇ ನನ್ನ ಆಟವಾಗಿತ್ತು. ಹಾಗಾಗಿ ಈ ಪುಸ್ತಕಗಳನ್ನ 15 ಸಲ ಆದ್ರೂ ಓದಿರ್ಬೋದು. ಮತ್ತೊಮ್ಮೆ ಓದಿದರೂ ಅದೇ ಖುಷಿ, ಇದೇ ಅಲ್ವೇ ನಮ್ಮ ತೇಜಸ್ವಿ ಎಂಬ ಮಾಯಾವಿಯ ಮ್ಯಾಜಿಕ್.
24 ಗಂಟೆಗಳಲ್ಲಿ ನಡೆಯುವ ಈ ಕಥೆ, ಒಂದು ಕ್ರೂರ ಪ್ರಪಂಚವನ್ನು ಬಿಡಿಸುತ್ತ ಹೋಗುತ್ತದೆ, ಥ್ರಿಲ್ಲರ್ ಪ್ರಧಾನವಾದ ಕಥೆಯಾದರೂ, typical ತೇಜಸ್ವಿರವರ humour ಕಾದಂಬರಿಯನ್ನು ಆಪ್ತಗೊಳಿಸುತ್ತದೆ. ಇಷ್ಟಲ್ಲದೆ ಕಾಡು ಮತ್ತು ಪ್ರಕೃತಿ ಹೇಗೆ ಮನುಜನ ಕಪಿಮುಷ್ಠಿಯಲ್ಲಿ ನಲುಗಿ ಅವಸಾನದ ಕಡೆಗೆ ಹೋಗುತ್ತಿದೆ ಎಂಬುದನ್ನು ಹೇಳುವುದು ಲೇಖಕರ ಮುಖ್ಯ ಆಶಯ.
ಒಂದು ಕಾದಂಬರಿ ಮನರಂಜನೆಯನ್ನೊಂದೇ ನೀಡಿದರೆ ಅದು ಬಹಳ ಕಾಲದವರೆಗೂ ನಿಲ್ಲುವುದು ಖಂಡಿತ ಸಾಧ್ಯವಿಲ್ಲ. ಈ ಕೃತಿ ಈಗಲೂ ಹೇಗೆ ಹೊಸ ಓದುಗರನ್ನು ಮತ್ತು ಮರುಓದುಗರನ್ನು ದಕ್ಕಿಸುಗೊಳ್ಳುತ್ತಿದೆ, ಇದು ಮನರಂಜನೆಯ ಜೊತೆಗೆ ಕೊಡುವ ದಟ್ಟ ವಿವರಗಳು ಮತ್ತು ಮಾಹಿತಿಗಳಿಂದ. ಉದಾಹರಣೆಗೆ : ದೇವಪುರದ ವಿವರಣೆ ಕೊಡುತ್ತ ಲೇಖಕರು ಪ್ಲಾಸ್ಟಿಕ್ ಹೇಗೆ ಬಿದಿರಿನ ವಸ್ತುಗಳನ್ನು replace ಮಾಡಿದವು ಅನ್ನುವುದನ್ನು ವಿವರಿಸುವುದಲ್ಲಿ ಸಿಗುವ ಮಾಹಿತಿ ಮೌಲ್ಯಯುತವಾದದ್ದು. ಹೀಗೆ, ಎಲ್ಲೂ ಸಿಗದ ಅನುಭವ ನಮಗೆ ತೇಜಸ್ವಿರ ಕೃತಿಗಳಲ್ಲಿ ಸಿಗುವದರಿಂದಲೇ ಇಂದಿಗೂ ತೇಜಸ್ವಿ ಮತ್ತು ಅವರ ಕೃತಿಗಳು ಪ್ರಸ್ತುತ ಎನಿಸಿರುವುದು.
ಸಾಮಾಜಿಕ ಕಾದಂಬರಿಯನ್ನ ಸರ್ವಕಾಲಕ್ಕೂ ಪ್ರಸ್ತುತ ಅನಿಸುವಂತೆ ಬರೆಯುವುದು ಎಷ್ಟು ಕಷ್ಟ! ಎಲ್ಲರ ಎಲ್ಲ ದೇವರೂ ಒಂದೇ ಅಲ್ಲವೇ? ಸಾಬರೋ ಬ್ರಾಹ್ಮಣರೋ ಲಿಂಗಾಯ್ತರೋ ಒಕ್ಕಲಿಗರೋ ಕಳ್ಳರೋ ಖದೀಮರೋ ಎಲ್ಲರ ಬಾಸ್ ಕೊನೆಗೆ ಒಬ್ಬನೇ. ಎಲ್ಲ ಧರ್ಮಗಳೂ ಸೇರುವುದು ಕೊನೆಗೆ ಒಂದೇ ಬಾಸ್ ಹತ್ತಿರ. ಯಾರು ಕೊಲೆ ಖೂನಿ ದಾನ ಧರ್ಮ ಇತ್ಯಾದಿ ಯಾವ ಕಾರ್ಯಕ್ಕೂ ಯಾರಿಗೂ ಸಮಜಾಯಿಷಿ ಕೊಡಬೇಕಾಗಿಲ್ಲವೋ ಅವನೇ ಆ ಬಾಸ್! ಅವನ ಪ್ರೀತ್ಯರ್ಥ ಕೆಲವರು ಉರುಳು ಸೇವೆ, ಕೆಲವರು ಕೊರಳು ಸೇವೆ, ಕೆಲವರು ರಕ್ತಬಲಿ, ಕೆಲವರು ನರಬಲಿ ಹೀಗೇ ನೂರೆಂಟು ತರದ ನೈವೇದ್ಯ ನೀಡಬಹುದು. ಎಲ್ಲಾ ಅವರವರ ನಂಬಿಕೆ ನಿಷ್ಠೆ, ಅಷ್ಟೇ! ನಂಬಿಕೆ ಬಾಸ್`ಗಿಂತ ಮುಖ್ಯ. ಏಕೆಂದರೆ ನಂಬಿಕೆ ಬಾಸ್ನ`ನ ಸೃಷ್ಟಿಸುತ್ತದೆ, ರೂಪಿಸುತ್ತದೆ ಇಂತಹ ಸಾಲುಗಳು ಮೊದಲ ಓದಿನಷ್ಟೇ ಪ್ರತೀ ಓದಿಗೂ ಹಿಡಿದು ನಿಲ್ಲಿಸುತ್ತವೆ. ಮರು ಓದು - 10+th time and still enjoyed it like a new book.
ಚಿದಂಬರ ರಹಸ್ಯದ ನಂತರ ಓದಿದ ಪುಸ್ತಕ ಇದು . ಒಂದೇ ಸಿಟ್ಟಿಂಗ್ನಲ್ಲಿ ಇಡೀ ಪುಸ್ತಕ ಎಲ್ಲೂ ಬೇಸರ ಅನಿಸದೆ ಕೊನೆ ತನಕ ತನ್ನಲ್ಲಿ ಕೂತೂಹಲ ಉಳಿಸಿಕೊಂಡು ತಾನಾಗೇ ಓದಿಸಿಕೊಂಡು ಹೋಗುವ ಒಂದು ಒಳ್ಳೆ ಕಾದಂಬರಿ. ಥ್ರಿಲ್ಲರ್ ಕಾದಂಬರಿ ಇಷ್ಟ ಪಡುವವರು, ಪೂಚಂತೇ ಅವರ ಅಭಿಮಾನಿಯಾದವರು , ಸಹ್ಯಾದ್ರಿಯ ಕಾಡುಗಳ ಇವತ್ತಿನ ಪರಿಸ್ಥಿತಿಯನ್ನು ನೋಡ ಬಯಸುವವರು ಓದಲೇ ಬೇಕಾದ ಪುಸ್ತಕ . ಸಮಾಜದ ಕೆಟ್ಟ ಕೆಡಕುಗಳನ್ನು, ಕಾಡು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಣೆ ಕಾಣಬಹುದು ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿ. ಈ ಕಾದಂಬರಿಯಲ್ಲಿ ಪತ್ತೇದಾರಿ ಜೊತೆ ಸಾಹಸಗಳು ಸಹ ಅಕ್ಷರಗಳಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ,ತಾನು ಅದರಲ್ಲಿನ ಪಾತ್ರವೆಂಬಂತೆ ಓದುಗನಿಗೆ ಭಾಸವಾಗುತ್ತದೆ.
ತೇಜಸ್ವಿಯವರ ಸಾಹಿತ್ಯದಲ್ಲಿ ಹೆಚ್ಚಾಗೆ ಆಸಕ್ತಿ ಹೊಂದಿರಲಿಲ್ಲ. ಗೆಳೆಯರ ಸಲಹೆಯ ಮೇರೆಗೆ ಇವರ ಕೆಲವು ಕಾದಂಬರಿಯ ಬಗೆಗಳನ್ನು ಖರೀದಿ ಮಾಡಿದೆ. ಬರಿಯೆ ಪುಸ್ತಕದ ಹೆಸರಿನಂದ ಕುತೂಹಲ ಉಂಟಾಗಿ ಓದಲು ಪ್ರಾರಂಭಿಸಿದೆ.
Very soon I realized that this is "Davinci code movie directed by Jogi Prem".
ಆಂಗ್ಲ ಸಾಹಿತ್ಯದಲ್ಲಿ ಇರುವ ಬಹುತೇಕ ಪತ್ತೇದಾರಿ ಕಾದಂಬರಿಯ ಜಾಡನ್ನು ಕನ್ನಡೀಕರಿಸುವ ಪ್ರಯತ್ನ ಜುಗಾರಿ ಕ್ರಾಸ್. ಕೆಲವು ಪಾತ್ರಗಳು ಪರಿಚಯ ಮುಗಿಯುವುದರಲ್ಲೆ ಮೋಕ್ಷ ಕಂಡವು.ಅವುಗಳ ಅವಶ್ಯಕತೆ ಹಾಳೆತುಂಬುವುದೆ?
ಪತ್ತೇದಾರಿ ಕಥೆಗಳ ಕೀಲಿ ಇರುವುದು ಹೇಗೆ ಲೇಖಕ ಓದುಗರನ್ನು ಗ್ರಾಹಕರನ್ನಾಗಿಸಿ ಸದಾ ಕುತೂಹಲದಲ್ಲಿ ಬಂದಿಸಿರುತ್ತಾನೆನ್ನುವುದರ ಮೇಲೆತಾನೆ? ಸನ್ನಿವೇಶ ಬೆಳವಣಿಗೆ ಲೇಖಕನ ಸ್ವಾತಂತ್ರ್ಯವಾದರೆ, ಅಂತ್ಯ ತರ್ಕದ ಅಧೀನವಾಗಬೇಕು. ಆದರೆ ಈದಾವ ನೈಪುಣ್ಯವು ಕಾದಂಬರಿಯಲ್ಲಿಲ್ಲ.
ನನ್ನ ಪ್ರಕಾರ ಜುಗಾರಿಕ್ರಾಸ್ ನ ಸೊಗಡಿರುವುದು ಕಥೆಯಲ್ಲಿ ಹೆಣದಿರುವ ಗುರುರಾಜ ಕವಿಯ ದ್ವೀಸಂದನಾ ಕಾವ್ಯದ ರತ್ನಮಾಲ ನರ್ತಕಿಯ ವಿಶ್ಲೇಷಣೆ ಮತ್ತು ಅದರಲ್ಲಿ ಅಡಗಿರುವ ರತ್ನಮೂಲ ನದಿಯ ರೂಪಕ.
ಇತಂಯ ಹೆಚ್ಚು ಹೆಚ್ಚು ಪ್ರಯೋಗಗಳು ಕನ್ನಡದಲ್ಲಿ ಬರಬೇಕೆಂಬ ಆಶೆಯ ಹಾಗೂ ಇವು ವಿಕಾಸವಾಗಬೇಕು.
ತೇಜಸ್ವಿಯವರ ಕಾದಂಬರಿ ಕಥೆಗಳು ಕಾಡಿನ ರಸವತ್ತಾದ ವರ್ಣನೆ ಓದುತ್ತ ಹೋದಂತೆ ಮತ್ತೊಂದು ಲೋಕಕ್ಕೆ ಕರೆದೊಯ್ಯುವ ಶಕ್ತಿ ಅವರ ಬರಹಕ್ಕಿದೆ.ತೇಜಸ್ವಿಯವರ ಬರಹಗಳು ಓದಿದ್ದು ನಾನು ಬಹಳ ಕಡಿಮೆ ಕರ್ವಾಲೊ,ಪರಿಸರದ ಕಥೆ, ಅಣ್ಣನ ನೆನಪು,ಇದೆಲ್ಲಾ ಪುಸ್ತಕಗಳು ಓದಿದ ನಂತರ ಸಾಮಾನ್ಯವಾಗಿ ಕುತೂಹಲ ಮೂಡುವುದು ಜುಗಾರಿ ಕ್ರಾಸ್ ಕಥೆ ಆರಂಭದಿಂದಲೂ ಕುತೂಹಲ ಹುಡುಕಾಟ ನಮ್ಮೊಳಗೆ ಇನ್ನೊಂದು ಜಗತ್ತನ್ನು ಸೃಷ್ಟಿಸಬಲ್ಲ ಕಾದಂಬರಿಯಲ್ಲಿ ಪ್ರತಿಯೊಬ್ಬನ ವ್ಯಕ್ತಿಯಲ್ಲಿ ಅನುಮಾನ ,ಸರಿ ತಪ್ಪಿನ ಹುಡುಕಾಟ ನಂಬಿಕೆಯಿಲ್ಲದೆ ನಂಬಿಕೆ ಇಟ್ಟುಕೊಂಡು ಅಭಿನಯಿಸುವ ಬದುಕಿನಲ್ಲಿ ಬ್ರಮೆಯಿಂದ ಬದುಕುತ್ತಿರುತ್ತೇವೆ.
24 ಗಂಟೆಯಲ್ಲಿ ನಡೆಯುವ ಕಥೆಯನ್ನು ಪ್ರತಿಹಂತದಲ್ಲೂ ಕೊನೆಯಲ್ಲಿ ಒಂದು ಸುಳಿಯು ಸಿಗುವ ಹಾಗೆ ಮೂಡಿಸುವ ಕಥೆ ಜುಗಾರಿ ಕ್ರಾಸ್.ಮೊದಲನೇ ಮುದ್ರಣ1994ಕಾದಂಬರಿ ಪ್ರಕಟವಾದರೂ ಈಗಿನ ಪ್ರಸ್ತುತ ನಡೆಯುವ ವರ್ತಮಾನಕ್ಕೆ ಕೂಡ ಅನುಗುಣವಾಗುವ ತೇಜಸ್ವಿಯವರ ಬರಹಗಳು.
ಈಗಾಗಲೇ ಜುಗಾರಿ ಕ್ರಾಸ್ ಓದಿದವರು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ .
திகில் பயணம் . ---------------------- எந்த ஒரு மர்மக்கதையுமே எப்போதும் வாசகனை வேகமாக படித்து முடிக்க வைக்கும் நோக்கத்துடன்தான் எழுதப்பட்டிருக்கும். அதன் அடிப்படை முடிச்சு அவிழ்வதில்தான் ஒரு வாசகனின் கவனத்தை அது கட்டிவைத்திருக்கும். ஆனால் அது மட்டுமே அதன் நோக்கம் என்றிருந்தால் நின்று கொண்டே வேகவேகமாக உண்டு செல்லும் துரித உணவு தொழிற்சாலையான உடுப்பி சாகர் இட்டிலி சாம்பார் போல் தான் அது இருக்கும். அதைத்தாண்டி ஒரு வாசகனின் ரசனைக்கு அது எந்தத் தீனியும் போட முடியாது.
ஆனால், அப்படி இல்லாமல், வெகு சில எழுத்தாளர்கள் தான் கதைக்களம், கட்சியமைப்பு, அது நிகழும் காலகட்டத்தின் சமூக, பொருளாதார, அரசியல் நிகழ்வுகள் என ஒரு விரிந்த பார்வையை காட்சிப்படுத்தி, ஒரு பரந்த வாசிப்பு அனுபவத்தை வாசகனுக்கு வழங்கு திறன் படைந்தவர்களாக இருப்பர். மேற்குலகில் முன்னணி வெகுஜன எழுத்தாளர்களான, Ken Follett, Jeffrey Archer, Robert Harris எனப் பலர் உள்ளனர்.
இந்திய எழுத்தாளர்களில் அந்த வகையில் வெகு சிலரே உள்ளனர். அந்த வகையில், கன்னட இலக்கிய உலகில் K.P. பூர்ணச்சந்திர தேஜஸ்வி ஒரு குறிப்பிடத்தக்க எழுத்தாளர். அவர் ஒரு எழுத்தாளர் என்பதையும் தாண்டி சுற்றுச்ச���ழல் ஆர்வலர் / வல்லுநர் என்பதும் குறிப்பிடத்தக்கது. அவருடைய எழுத்துக்கள் கன்னட உலகில் கொண்டாடப்பட்டாலும் மற்றவர்களுக்கு அதைப் பற்றிய எந்தப் புரிதலும் இல்லை. அதற்குக் காரணம் அவருடைய எழுத்துக்கள் அதிகம் மொழிபெயர்ப்பிக்கப்படவில்லை என்பதோடு, அப்படி மொழிபெயர்க்கப்பட்ட ஓரிரு புத்தகங்களும் அதிகம் வெளிச்சம் பெறாததும் ஒரு காரணம்.
அவருடைய ஜுகாரி கிராஸ் எனப்படும் இந்த புத்தகம், பல தேடல்களுக்குப் பின் தான் எனக்கு ஆங்கில மொழிபெயர்ப்பாக சிக்கியது. இதை ஆங்கிலத்தில் மொழிபெயர்த்தவர் ரவி ஹஞ்ச்.
கதை 70களில், எமர்ஜென்சி காலக்கட்டத்தில், 24 மணிநேரத்தில் நடந்து முடியும் நிகழ்வாக அமைந்துள்ளது என்றபோதும், அதன் மூலமாக தேஜஸ்வி அந்த காலகட்ட மலநாட் பகுதியை கண்முன்னே கொண்டுவந்து நிறுத்துகிறார். பெயரிலேயே உள்ள (ஜுகாரி என்னும் கன்னட வார்த்தை) சூதாட்டம் என்ற சொல்லால் ஒருவ வித எதிர்பார்ப்பை ஏற்படுத்திவிடுகிறார். மெதுவாக நகைச்சுவை இழையோட அந்தப்பகுதியின் சாமானிய மக்கள் மற்றும் அவர்கள் வாழ்வை காட்டிவிட்டுத்தான் கதையின் முடிச்சுக்குள் செல்கிறார்.
மலநாட் பகுதியில், குறிப்பாக சக்லேஷ்புரா மற்றும் அதன் சுற்றுப்புறங்களுக்கு பரிச்சயம் உள்ளவர்களுக்கு அந்த விவரணை ஒரு காலப்பயணம். அதேசமயம், அந்தப்பகுதிகளின் பரிச்சயம் இல்லாதவர்களையும் அதன் விவரணை மிக எளிதாக உள்ளிழுத்துவிடுகிறது. சற்றே அந்தக்கால ஜெய்சங்கரின் மர்மப் படங்களின் வாடை அடிக்கும் கதை, அதன் பின் வேகமாக பல திருப்பங்களுடன் சென்று, முடியும் போது கதையின் முக்கிய பாத்திரங்களுடன் நாம் சென்ற ஒரு பயணம் முடிவுற்றது போன்ற ஏக்கத்தில் தொக்கி நிற்கிறது.
இந்தக் கன்னட முன்னணி இயக்குனரான நாகாபரணா இயக்க சிரஞ்சீவி சர்ஜா ( நம்ம நடிகர் அர்ஜுன் மருமகன் தான் ) நடிக்க துவங்கப்படுவதாக 2019ல் அறிவிப்பு வெளியானது . ஆனால், தயாரிப்பாளருக்கும் இயக்குனருக்கும் ஏற்பட்ட முரண்பாட்டால் பிறகு கைவிடப்பட்டது எனத் தெரிகிறது. பிறகு சிரஞ்சீவி சர்ஜாவும் அகால மரணம் அடைந்தார். அப்படி அந்தப்படம் வெளிவந்திருந்தால், ஒரு வேளை இந்தக்கதையும், தேஜஸ்வியின் எழுத்துக்களும் வெளிச்சம் பெற்றிருக்கக்கூடும்.
தமிழுக்கு மிக நெருக்கமான கன்னட மொழியில் அமைந்த இந்தக்கதை, மிக எளிமையான ஆங்கிலத்தில் மொழிபெயர்க்கப்பட்டு வாசிக்க வசதியாக இருந்தாலும், இதை யாராவது தமிழில் மொழிபெயர்த்திருந்தால், இன்னும் சுவையாக இருந்திருக்குமே என்ற எண்ணம் வருவதை மட்டும் தவிர்க்கமுடியவில்லை.
"ಹೊಗೆಯ ಹಾಗೆ ಕವಿದಿದ್ದ ಮಳೆಯ ತೆಳ್ಳನೆಯ ತೆರೆ ನಿಧಾನವಾಗಿ ಸರಿದು ದೂರದ ಕಾಡು ಗುಡ್ಡಗಳೆಲ್ಲ ಸ್ಪಷ್ಟವಾಗುತ್ತಿದ್ದವು. ಆದರೂ ಹೊರಗೆ ಓಡಾಡುವಷ್ಟು ಹೊಳುವಾಗಿರಲಿಲ್ಲ"
The author uses these lines after the couple starts recollecting events when they are waiting in front of a closed shop while it's raining. Impressive.
This is my second book of Thejaswi after 'Chidambara Rahasya'. The events were very thrilling indeed and kept me hooked particularly from the 18th chapter.
Some of the best parts I enjoyed were: 1. The humorous conversations between the conductor and the passenger outside the bus. 2. The funniest incident involving a woman who threw up at the bus stop. (I bet any pictorial representation would fall short of how extremely funnily Thejaswi has written this particular part, one of his strengths) 3. Couple spending time together recollecting the events one after the other while also pointing out each other's foolishness. 4. The railway tunnel part, where the dialogues between the couple felt very thrilling in that eerie atmosphere when literally nothing else was happening around them.
Just can't let go of the book once you've started to read. A simple, but adventurous, farming couple start their journey to Devapura expecting to sell their farm produce for a good price. But little do they know of the extraordinary turn of events that lands them in a spot where they're chased by contract killers for a reason they are not aware. The couple, on the run, meets their old friend on a train and suspecting him to be one among 'them' jumps out of a train and then encounter a mysterious man, living in a tunnel for ages, who reveals to them that they're victims, just like him, of an underworld network. At last when the couple escape the killers and the day sees a happy ending, they're left with a memory of a huge treasure with an adventure still left in them to find that. But would they find it? K.P.Purnachandra Tejaswi has tried to open people's eyes to the loot and exploitation of environment that's happening in Malnad regions of Karnataka, changing times and modernisation that has left many tribes jobless without spoiling or lengthening the story even a bit.
The description and the author's own note call this a 'romantic thriller'. Well it's not. Its almost like a play being staged and the reader knows almost everything that is happening and that the characters have no clue as to what is happening. But that's not to take anything away from this book.
Things happen over 24 hours technically, but the author sets up a lot of side stories at the start which go well into the past, but they tie up well at the end. The conversations stay easy flowing and funny right till the end. The story never takes itself too seriously. The writing style is very colloquial and it makes for some really quick reading.
About the story, its a bit of an oddball caper, where a couple gets mixed up in some nasty business and get out of it through a lot of muddling and some help from friends. Most of the story and the buildup happens in the minds of the characters and this is another of the book's stronger points. Almost Guy Ritchie territory. But the sad part is that most of it happens amidst the rampant destruction of the Western Ghats. The description of the train through the ghats reminded me of my trek along the abandoned railway track and how much the Ghats destroy the tracks.
If you're looking for a good Kannada book to get started with, I'd recommend this. A really good and fun read.
ಪುಸ್ತಕ ತಕ್ಕಂಡು ವರ್ಷದ ಮೇಲಾದರೂ ಯಾಕೋ 10 ಪುಟಗಳ ಮೇಲೆ ಓದಲಾಗಿರ್ಲಿಲ್ಲ. ಪ್ರತಿ ಸಲ ಹಿಂದಿನ ಪುಟ ತಿರುವೋದು ಮೇಲಿನ ಪ್ಯಾರಾ ಓಧೋದು ಇದೆ ಆಗಿತ್ತು. ಆದ್ರೆ ಈ ಸಲ ಯಾಕೋ ಮುಗಿಸಲೇ ಬೇಕು ಅನ್ನೋ ಹಠದಲ್ಲಿ ಓದಿದ್ದೆ. ನಿಜಕ್ಕೂ ತುಂಬಾ ಇಷ್ಟ ಆಯ್ತು. ಸುರೇಶ್ ಮತ್ತು ಗೌರಿ ಜೋಡಿ ಅದ್ಬುತ. ಕುತೂಹಲ ಕೆರಳಿಸಿದ್ದ ಪುಸ್ತಕ. ಇದನ್ನ ವಿಮರ್ಶೆ ಮಾಡೊದಕಿಂತ ಓದಿ ಅನುಭವಿಸಬೇಕು. ಇನ್ನು ಕಥೆ ಮುಂದುವರಿ ಬೇಕು ಇಷ್ಟ ಬೇಗ ಮುಗಿಬಾರ್ದು ಅನಿಸ್ತು. ಕಥೆಯಲ್ಲಿ ಬರೋ 24 ಘಂಟೆ ಒಂದು ಶತಮಾನ ದಷ್ಟು ಹೊತ್ತು ತಂದಿದೆ. ಕೆಂಪು ಕಲ್ಲು ಇದ್ದಿದ್ರೆ ಹುಡುಕಿಕೊಂಡು ಹೋಗ್ಬಹುದು ಅನ್ಸತ್ತೆ. ಪುಸ್ತಕ ಪ್ರೇಮಿಗಳು ಓದಲೇಬೇಕಾದ ಪುಸ್ತಕ.
Woww !!! This book is so interesting to read that i read it within 2 days , i mean i can't resist not to read it , Each and every page has a twist and turn and even this book story revolves in places of malenadu . This book is very much different than his other books , If you have seen the movie "Vantage point " its the similar way , Story goes forward with different perspectives . Story starts with 2 smugglers and ends totally different , This book is far better than watching a suspense thriller blockbuster movie :) Must read guys !
ಥ್ರಿಲ್ಲಿಂಗ್ ಹಾಗೂ ಕ್ಯೂರಿಯಸ್ ಆಗಿದ್ದು, ಕೊನೆಯ ಅಧ್ಯಾಯದವರೆಗೂ ಕುತೂಹಲವನ್ನು ಮೈನ್ಟೈನ್ ಮಾಡುವಲ್ಲಿ ಯಶಸ್ವಿಯಾಗಿದೆ , ಈ ಕಾದಂಬರಿನ ಮತೊಮ್ಮೆ ಓದಬೇಕು ಅಂತ ಅನ್ನಿಸುವಹಾಗೆ ತೇಜಸ್ವಿ ಅವರ ಬರವಣಿಗೆ ಚಂದವಾಗಿ ಮೂಡಿಬಂದಿದೆ.
ಜುಗಾರಿ ಕ್ರಾಸ್ ಪುಸ್ತಕ ಒಂದು ವಿಶೇಷವಾದ ಕೃತಿ. ಮೊದಲಿಗೆ ಅನೇಕ ವಿಷಯಗಳು ಸಮಯ ವ್ಯರ್ಥ ಮಾಡಲೆಂದೇ ಬರೆಯಲ್ಪಟ್ಟಿವೆ ಅನ್ನಿಸಿದರೂ , ಕೊನೆಯಲ್ಲಿ ಎಲ್ಲ ಅರ್ಥಗರ��ಬಿತವಾಗಿ ಕಾಣುತ್ತವೆ. ಸುರೇಶ ಮತ್ತು ಗೌರಿಯ ಅಪರೂಪದ ಜೋಡಿ ಓದುಗರಿಗೆ ಹಿಡಿಸಿಬಿಡುತ್ತವೆ. ಮನಸ್ಸಿಗೆ ಬಹಳ ಹಿಡಿಸಿದ ಸಂಗತಿಗಳು: ನಾನು ಮಲೆನಾಡಿನ ಕುದುರೆಮುಖ ಊರಿನವನಾಗಿದ್ದರಿಂದ ನನಗೆ ಲೇಖಖರು ಹೇಳಿದ ಮಲೆನಾಡಿನ ಚಿತ್ರಣ ಹಾಗೆ ಕಣ್ಣ ಮುಂದೆ ಬಂದ ಹಾಗಿತ್ತು. ನದಿಗಳ ವಿವರಣೆ, ಕಾಡುಗಳ ಸೌಂದರ್ಯ, ಸುರಂಗ ದೊಳು ನುಗ್ಗುವ ರೈಲಿನ ರೋಮಾಂಚಕ ಯಾನ , ಇವೆಲ್ಲ ಅಚ್ಚುಕಟ್ಟಾಗಿ ವರ್ಣಿಸಲಾಗಿದೆ. ಏಲಕ್ಕಿ ವ್ಯಾಪಾರದ ಅನಿಸ್ಚಿತತೆ . ಏಜೆಂಟ್ ಗಳ ಮಾತಿನ ಚಕಮಕಿ, ಮಗೂನ��� ಚೂಟಿ ತೊಟ್ಟಿಲನ್ನು ತೂಗುವ ಶೇಷಪ್ಪ ನಂಥ ನಯವಂಚಕರು, ಎಳೆ ಹೆಣ್ಣು ಮಗುವಿನ ಹೂ ಮಾರುವ ಆಸೆ, ಮಲೆನಾಡಿನ ಬಸ್ಸಿನ ಪ್ರಯಾಣದ ಅನುಭವ, ಇವೆಲ್ಲವನ್ನೂ ನಮ್ಮ ಕಣ್ಣ ಮುಂದೆ ನಡೆಯುವ ಘಟನೆಗಳಂತೆ ಬಿಂಬಿಸುವಲ್ಲಿ ಲೇಖಖರು ಯಶಸ್ವಿಯಾಗಿದ್ದಾರೆ. ಕಾಳಧಂದೆಯ ವಿಲಕ್ಷಣ ರೂಪ, ಅದರ ಅಪಾಯಗಳು, ಅದರಲ್ಲಿ ಸಿಲುಕಿಕೊಂಡಿರುವ ಜನರ ಮನಸ್ಥಿತಿ , ಅದರ ನಿಗೂಡ ರಹಸ್ಯ ಹಾಗೂ ಅಸ್ಪಷ್ಟತೆ ತೀರಾ ವಿವರವಾಗಿ ಬರೆಯಲಾಗಿದೆ. ಸುರೇಶ ಗುರುರಾಜ ಕವಿಯ ಕಡತ ಓದುವಾಗ ನನ್ನ ಕೈನಲ್ಲೇ ಸಿಕ್ಕಹಾಗೆ ರೋಮಾಂಚನ!!! ಅದರ ಒಗಟು ಬಿಡಿಸುವಾಗ ನಾನೂ ಕೆಂಪು ರತ್ನದ ಮೂಲ ತಿಳಿಯಬಹುದೆಂದು ಹಿಗ್ಗಿದ್ದೆ. ಪುಸ್ತಕದ ಈ ಭಾಗವು ನನಗೆ ಅತ್ಯಂತ ರೋಮಾಂಚಕಾರಿ ಎನ್ನಿಸಿದ್ದು ಹಾಗೂ ಮುಂದೆ ಏನಾಗಬಹುದೆಂದು ಇನ್ನಿಲ್ಲದ ಕುತೂಹಲ ಕೆರಳಿಸಿದ್ದು. ರೇಲ್‌ವೇ ಕ್ಯಾಂಟೀನ್ ನ ಘಮ ಘಮ ವಡೆ , ಪೂರಿ ಇತ್ಯಾದಿಗಳ ವರ್ಣನೆ ನನ್ನ ಬಾಯಲ್ಲಿ ಕೂಡ ನೀರೂರಿಸಿದ್ದು ಸುಳ್ಳಲ್ಲ. ಸುತ್ತ ಮಂಜು ಕವಿದ ಕತ್ತಲಲ್ಲಿ ಟೀ ಕುಡಿದು ಮೈ ಬೆಚ್ಚಗೆ ಮಾಡಿಕೊಳ್ಳುವ ಸುಖ ಮತ್ತೆ ಮಾರುಕಳಿಸಿದಂತಾಯಿತು. ಬಹಳ ಇಷ್ಟವಾಗಿದ್ದು ಸುರೇಶ ಹಾಗೂ ಗೌರಿ ದಂಪತಿಗಳು. ಅವರು ಏನೇ ಹೊಸ ಸಾಹಸಕ್ಕೆ ಕೈ ಹಾಕುವ ಮುನ್ನ ಎರಡು ಸತಿ ಯೋಚನೆ ಮಾಡುವವರಲ್ಲ. ಧೈರ್ಯದಿಂದ ಮುನ್ನುಗ್ಗುವರು ಹಾಗೂ ಒಬ್ಬರಿಗೊಬ್ಬರು ಬೆಂಬಲ ಸೂಚಿಸುವರು. ಎಂಥಾ ಕಷ್ಟದ ಪರಿಸ್ಥಿತಿಯಲ್ಲೂ ತಮಾಷೆ ಮಾಡಿಕೊಂಡು ನಗು ನಗುತ್ತಾ ಬಾಳುವ ದಂಪತಿಗಳು ಅವರು. ಹಳೆಯ ಯುರೋಪ್ ಲೇಖಖನ ಡೈರೀ ಹಾಗೂ ಅದರಲ್ಲಿ ಬರುವ ಮಹಿಷಿರ್ ಮೀನಿನ ವರ್ಣನೆ ನನಗೂ ಆ ಮೀನನ್ನು ಒಂದು ಬಾರಿ ನೋಡುವ ಆಸೆ ತುಂಬಿತ್ತು. ಪ್ಲಾಸ್ಟಿಕ್ ಬಂದು ಹೇಗೆ ಒಂದು ಇಡೀ ಊರಿನ ಜನರ ಬದುಕು ನಶಿಸಿ ಹೋಯಿತು ಎಂದು ಬಹಳ ಚನ್ನಾಗಿ ಬರೆದಿದ್ದಾರೆ . ವಿಮಾನಗಳ ಕಾಂಪಸ್ ನಲ್ಲಿ ದಿಕ್ಕು ಸರಿಯಾಗಿ ತೋಚದೆ ಕ್ರ್ಯಾಶ್ ಆದದನ್ನು ನೋಡಿದರೆ ನಮ್ಮ ಮಲೆನಾಡು ಯಾವ ಬರ್ಮುಡಾ ಟ್ರೈಯಾಂಗಲ್ ಗೂ ಕಮ್ಮಿ ಇಲ್ಲ ಅಂತ ಕಾಣ್ತದೆ.
ಮನಸ್ಸಿಗೆ ಹಿಡಿಸದ ಸಂಗತಿಗಳು: ಪುಸ್ತಕದ ಶುರುವಿನಲ್ಲಿ, ಕುಂಟ ರಾಮನ ವಿವರಣೆ, ಮೂಕಿ ದೇವಮ್ಮನ ಗಂಡ ಕಾಣೆಯಾಗಿದ್ದು, ಮೆದರಳ್ಳಿಯ ಹಾಳು ಗುಡಿಸಲುಗಳ ವಿವರಗಳು ಬೋರ್ ಹಿಡಿಸಿದವು. ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ನಡೆವ ಯೋಚನೆಗಳನ್ನು ಅವರ ಮುಖಾಂತರವೇ ಹೇಳಿದ್ದಾರೆ ಇನ್ನೂ ಚನ್ನಾಗಿರುತಿತ್ತು. ಸುರೇಶನ ಬಗ್ಗೆ ಆಗಲಿ, ಗಂಗೂಲಿ ಬಗ್ಗೆ ಆಗಲಿ, ವರ್ಣಿಸುವಾಗ ಗಾನ್ ಕೇಸ್ ಸುರೇಶ, ಕೆಲಸಕ್ಕೆ ಬಾರದವನು ಎಂದು ಲೇಖಖರೆ ತೀರ್ಮಾನಿಸಿದ್ದಾರೆ. ಇದು ಸರಿ ಅಲ್ಲ. ನನಗೆ ಅತ್ಯಂತ ಪ್ರಿಯವಾದ ಪಾತ್ರವೆಂದರೆ ಸುರೇಶ ಹಾಗೂ ಗೌರಿ. ಅವರನ್ನು ಸಾಮಾನ್ಯಜ್ಞಾನ ಇಲ್ಲದವರಂತೆ ಬಿಂಬಿಸುವ ಪ್ರಯತ್ನ ನಡೆದಿದೆ, ಆದರೆ ಅವರಿಬ್ಬರೇ ಜೀವನವನ್ನು ಸಂಪೂರ್ಣವಾಗಿ ಅನುಭವಿಸುವರು. ಏನೇ ಹೊಸದಕ್ಕೆ ಕೈ ಹಾಕಲು ಎಂದಿಗೂ ಎದೆ ಗುಂದಿದವರಲ್ಲ, ಸಾಹಸ ಪ್ರಿಯರು. ಪರಸ್ಪರ ಪ್ರೀತಿ ಹೊಂದಿದ್ದವರು. ಅವರ ಮನಸ್ಸಿಗೆ ಹಿಡಿಸಿದನ್ನು ಮಾಡುವವರು. ಸಮಾಜಕ್ಕಾಗಿ ಅಲ್ಲದೆ ತಮಿಗೋಸ್ಕರ ಬದುಕುವವರು. ಅಂಥವರನ್ನ ಗಾನ್ ಕೇಸ್, ಹಟಮಾರಿ ಎಂದೆಲ್ಲ ವ್ಯಾಖ್ಯಾನಿಸುವುದು ಎಷ್ಟು ಸರಿ? ಕೊನೆಗೆ ಗುರುರಾಜ ಕವಿಯ ಕಡತ ಗಳು ನದಿಗೆ ಬಿದ್ದು ಹರಿದು ಹೋದಾಗ ಮನಸ್ಸಿಗೆ ಅತ್ಯಂತ ಧುಃಖ ಆಯಿತು. ರತ್ನಮೂಲ ನದಿಯ ರಹಸ್ಯ ಎಂದೆಂದಿಗೂ ನಮನ್ನು ಬಿಟ್ಟು ದೂರವಾದ ಹಾಗೆ ಭಾಸವಾಯಿತು. ನಮ್ಮ ಸಾಹಸಿ ಮನಸ್ಸಿಗಾಗಿ ಆ ಕಡತಗಳನ್ನು ಹಾಳು ಮಾಡದೆ ಇನ್ನೂ ಮುಂದಿನ ಭಾಗದಲ್ಲಿ ಮತ್ತೆ ಯಾರಿಗೋ ಸಿಗುವ ಹಾಗೆ ಕಥೆಯನ್ನು ಕೊನೆಗೊಳಿಸಿದ್ದರೆ ಕಥೆಯು ಇನ್ನೂ ಸ್ವಾರಸ್ಯಕರವಾಗಿ ಇರಬಹುದಿತ್ತು.
What a gripping story this was! Through the scenic beauty of the Malnad region, the author takes us to the darkest places. This is not just a thriller but its way more than that. The author has explored and exposed so many things in the story, that it makes the reader think and mull over it. It's about two crazy couple Suresh and Gouri who get into a strange mess unknowingly, and as they dig deep, it seems to get even messier. Thanks to the translator. Otherwise, I would have definitely missed this gem of a book.
"ಜುಗಾರಿ ಕ್ರಾಸ್": ಒಂದು ಮಲೆನಾಡಿನ ಥ್ರಿಲ್ಲರ್ ಅನುಭವ ಪೂರ್ಣಚಂದ್ರ ತೇಜಸ್ವಿ ಅವರ "ಜುಗಾರಿ ಕ್ರಾಸ್" ಕಾದಂಬರಿಯನ್ನು ಓದುವುದು ಒಂದು ಅನನ್ಯ ಅನುಭವ. ಇದು ಕೇವಲ ಒಂದು ಪತ್ತೇದಾರಿ ಕಾದಂಬರಿ ಅಲ್ಲ, ಬದಲಿಗೆ ಮಲೆನಾಡಿನ ದಟ್ಟ ಕಾಡುಗಳಲ್ಲಿನ ಜನರ ಬದುಕು, ಅಲ್ಲಿನ ಪರಿಸರ, ಮತ್ತು ಆಡುವ ಭಾಷೆಯ ಸೊಗಡನ್ನು ಅದ್ಭುತವಾಗಿ ಸೆರೆಹಿಡಿದಿರುವ ಕೃತಿ. ಪುಸ್ತಕದ ಪ್ರತಿ ಪುಟದಲ್ಲೂ ತೇಜಸ್ವಿ ಅವರ ಬರವಣಿಗೆಯ ಜಾದೂ ಎದ್ದು ಕಾಣುತ್ತದೆ. ಕಥೆಯು ಮಲೆನಾಡಿನ ರೈತ ದಂಪತಿಗಳಾದ ಸುರೇಶ್ ಮತ್ತು ಗೌರಿಯರ ಸುತ್ತ ಸುತ್ತುತ್ತದೆ. ಒಂದು ವಿಚಿತ್ರ ಸನ್ನಿವೇಶದಲ್ಲಿ ಅವರು ಭೂಗತ ಲೋಕದ, ಅಂದರೆ ಕಳ್ಳಸಾಗಣೆ ಮತ್ತು ಅಪರಾಧಗಳ ಜಾಲಕ್ಕೆ ಅನಿರೀಕ್ಷಿತವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ ನಡೆಯುವ ಘಟನೆಗಳು, ಓದುಗರನ್ನು ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಂತೆ ಮಾಡುತ್ತವೆ. ಪುಸ್ತಕದ ಪ್ರತಿ ತಿರುವೂ ಕುತೂಹಲ ಕೆರಳಿಸುತ್ತದೆ. ಸುರೇಶ್ ಮತ್ತು ಗೌರಿ ಈ ಸಮಸ್ಯೆಯಿಂದ ಹೇಗೆ ಹೊರಬರುತ್ತಾರೆ? ಈ ಭೂಗತ ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ? ಇವೆಲ್ಲ ಪ್ರಶ್ನೆಗಳು ನಿಮ್ಮನ್ನು ಕಥೆಯೊಳಗೆ ಸೆಳೆದು ಇಟ್ಟುಕೊಳ್ಳುತ್ತವೆ. ತೇಜಸ್ವಿ ಅವರು ಮಲೆನಾಡಿನ ಆಡುಭಾಷೆಯನ್ನು ಬಳಸಿ ಕಥೆಗೆ ಇನ್ನಷ್ಟು ನೈಜ ಸ್ಪರ್ಶ ನೀಡಿದ್ದಾರೆ. ನೀವು ಆ ಕಥಾಪಾತ್ರಗಳ ಜೊತೆಗೇ ಬದುಕುತ್ತಿರುವ ಅನುಭವ ನೀಡುತ್ತದೆ. ಮಲೆನಾಡಿನ ಪರಿಸರ ವರ್ಣನೆ, ದಟ್ಟ ಕಾಡುಗಳ ನಡುವಿನ ರೈಲು ಪ್ರಯಾಣ, ಮಂಜು ಮುಸುಕಿದ ಪರ್ವತಗಳು - ಇವೆಲ್ಲವೂ ಓದುವಾಗ ನಿಮ್ಮ ಕಣ್ಮುಂದೆ ಜೀವಂತವಾಗಿ ನಿಲ್ಲುತ್ತವೆ. ಇದು ಕೇವಲ ಕಾಲ್ಪನಿಕ ಕಥೆಯಾದರೂ, ನೈಜತೆಗೆ ತೀರ ಹತ್ತಿರವಾಗಿದ್ದು, ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶ ಮತ್ತು ಕಳ್ಳಸಾಗಣೆಯಂತಹ ಸಮಸ್ಯೆಗಳ ಕುರಿತೂ ಒಳನೋಟ ನೀಡುತ್ತದೆ. ಗೌರಿಯ ಪಾತ್ರ ನಿರ್ದಿಷ್ಟವಾಗಿ ಗಮನ ಸೆಳೆಯುತ್ತದೆ. ಸಮಸ್ಯೆಗಳು ಬಂದಾಗ ಆಕೆ ತೋರುವ ಧೈರ್ಯ, ಅವುಗಳನ್ನು ಎದುರಿಸುವ ರೀತಿ ನಿಜಕ್ಕೂ ಅದ್ಭುತ. ಕಥೆಯಲ್ಲಿನ ಸಣ್ಣ ಸಣ್ಣ ಪಾತ್ರಗಳು ಕೂಡ ಅಷ್ಟೇ ಆಳವಾಗಿ ಮನಸ್ಸಿನಲ್ಲಿ ಉಳಿಯುತ್ತವೆ. "ಜುಗಾರಿ ಕ್ರಾಸ್" ಒಂದು ಪತ್ತೇದಾರಿ ಕಾದಂಬರಿ ಆಗಿದ್ದರೂ, ಅದರ ಮೂಲಕ ತೇಜಸ್ವಿ ಅವರು ಜೀವನದ ಜಟಿಲತೆ, ಮನುಷ್ಯ ಸಂಬಂಧಗಳು, ಮತ್ತು ಆಧುನಿಕತೆಯ ಆಮಿಷಕ್ಕೆ ಸಿಲುಕುವ ಅಮಾಯಕರ ಬದುಕಿನ ಬಗ್ಗೆ ಬಹಳ ಸೊಗಸಾಗಿ ಹೇಳುತ್ತಾರೆ. ಒಟ್ಟಾರೆ, "ಜುಗಾರಿ ಕ್ರಾಸ್" ಕೇವಲ ಓದಿ ಮುಗಿಸುವ ಪುಸ್ತಕವಲ್ಲ, ಇದು ಒಂದು ಅನುಭವ. ತೇಜಸ್ವಿ ಅವರ ನಿರೂಪಣಾ ಶೈಲಿ, ಪಾತ್ರಗಳ ರಚನೆ, ಮತ್ತು ಕಥೆಯ ಆಳ - ಇವೆಲ್ಲವೂ ಕನ್ನಡ ಸಾಹಿತ್ಯದಲ್ಲಿ ಇದಕ್ಕೊಂದು ವಿಶೇಷ ಸ್ಥಾನ ಗಳಿಸಿಕೊಟ್ಟಿದೆ. ನೀವು ತೇಜಸ್ವಿ ಅವರ ಅಭಿಮಾನಿಗಳಾಗಿದ್ದರೆ ಅಥವಾ ಉತ್ತಮ ಪತ್ತೇದಾರಿ, ಪರಿಸರ-ಆಧಾರಿತ ಕಾದಂಬರಿಯನ್ನು ಹುಡುಕುತ್ತಿದ್ದರೆ, "ಜುಗಾರಿ ಕ್ರಾಸ್" ಖಂಡಿತವಾಗಿಯೂ ಓದಲೇಬೇಕಾದ ಕೃತಿ. ಇದು ನಿಮ್ಮ ಮನಸ್ಸನ್ನು ಮುದಗೊಳಿಸುವುದರ ಜೊತೆಗೆ, ನಿಮ್ಮಲ್ಲಿ ಅನೇಕ ಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತದೆ.
What did I just read? I am more confused after finishing this..😑
When I looked up this book before reading, it says that the story takes place in the span of 24 hours. Which is kinda true kinda not. The actual plot starts after almost halfway into the book and the actual main characters come after 30+ pages. All the characters and events before this point does not come up later or matter in the end for the plot. We get to learn about few characters and their stories for no reason. Like the forester at the beginning, mooki dyaavamma and her daughter, they are not required at all for the plot and they do not come up ever in the book after their specific chapters are done. It all kinda felt pointless.🙄 Only the story of Suresha, his wife Gowri and his friend Raajappa is what matters in this whole thing and this when the 24 hours of the story begins. Even until the last chapter I believed that somehow all these people and their stories would be tied up together and it all would make sense but nope.☹️
I really did like the idea of this story and how the mysteries in this area have a grip on the people of this town. But I cant help but feel that it was not well executed and I am left disappointed. I wish the whole book would have been compacted to the actual plot and mystery rather than learning about the characters that don't matter. I would have loved if the book delved more into the poet and why it was written that way and the intricacies of the Jugaari Cross red stone mystery. ☹️
"ಜುಗಾರಿ ಕ್ರಾಸ್" ಹೆಸರಾಂತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕೃತಿ, ಪ್ರಾರಂಭದಿಂದ ಕೊನೆಯವರೆಗೂ ಓದುಗರನ್ನು ತೀವ್ರ ತುದಿಗಾಲಲ್ಲಿ ಇಡುವ ಥ್ರಿಲ್ಲರ್ ಆಗಿದೆ. ಕರ್ನಾಟಕದ ಹಸಿರಿನ ಪಶ್ಚಿಮ ಘಟ್ಟಗಳ ಹಿನ್ನೆಲೆಯನ್ನು ಹೊಂದಿರುವ ಈ ಕಥೆ, ಅತ್ಯಂತ ವಿಶೇಷ ಘಟನಾವಳಿಗಳ ಕೇಂದ್ರಬಿಂದುವಾಗಿರುವ ಸಾಮಾನ್ಯ ಸ್ಥಳವಾದ ಜುಗಾರಿ ಕ್ರಾಸ್ ಅನ್ನು ಆಧಾರವಾಗಿರಿಸಿದೆ.
ಈ ಕಥೆಯು, ಒಂದು ಸಾಮಾನ್ಯ ದಿನವನ್ನು ಆರಂಭಿಸುತ್ತಿರುವ ಯುವ ಜೋಡಿಯ ಜೀವನವನ್ನು ಒಳಗೊಂಡಿದೆ, ಆದರೆ ಶೀಘ್ರದಲ್ಲಿಯೇ ಅವರು ಅಪಾಯ ಮತ್ತು ಸಾಹಸಗಳ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ನಿರೂಪಣೆ ಕೇವಲ 24 ಗಂಟೆಗಳಲ್ಲಿ ನಡೆಯುತ್ತದೆ, ಇದು ಪುಸ್ತಕವನ್ನು ತೀವ್ರ ಮತ್ತು ವೇಗದ ಓದಾಗಿ ಮಾಡುತ್ತದೆ. ತೇಜಸ್ವಿ ಅವರ ಕಥೆಗಾರಿಕೆಯು ಓದುಗರನ್ನು ಹುರಿದುಂಬಿಸುತ್ತದೆ ಮತ್ತು ಕಥೆಯ ಪ್ರತಿ ತಿರುವು ಮತ್ತು ಮುನ್ನುಗ್ಗುವಿಕೆಯಲ್ಲಿ ಕುತೂಹಲವನ್ನು ಜೀವಂತವಾಗಿ ಇಡುತ್ತದೆ.
ತೇಜಸ್ವಿ ಅವರ ಬರವಣಿಗೆಯು ಕಸರತ್ತು ಮತ್ತು ಆಕರ್ಷಕವಾಗಿದೆ, ಓದುಗರನ್ನು ಪಶ್ಚಿಮ ಘಟ್ಟಗಳ ಶ್ರುಂಗಾರಿಕ ಸೌಂದರ್ಯದಲ್ಲಿ ಮುಳುಗಿಸುತ್ತದೆ. ಅವರ ಪಾತ್ರಗಳು ಚೆನ್ನಾಗಿ ಅಭಿವೃದ್ಧಿಯಾಗಿದ್ದು, ಕಥಾನಕಕ್ಕೆ ಆಳವನ್ನು ನೀಡುತ್ತವೆ. ಈ ಪುಸ್ತಕವು ಕೇವಲ ಪುಟ ತಿರುಗಿಸುವುದಲ್ಲ, ಆದರೆ ಅತಿರೇಕದ ಸವಾಲುಗಳ ಎದುರಿನಲ್ಲಿ ಮಾನವೀಯ ಭಾವನೆಗಳು ಮತ್ತು ಸಹನೆಗಳ ಸೂಕ್ಷ್ಮ ಅಧ್ಯಯನವಾಗಿದೆ.
"ಜುಗಾರಿ ಕ್ರಾಸ್" ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದ್ದು, ವೈವಿಧ್ಯಮಯ ಓದುಗರಿಗೆ ಲಭ್ಯವಾಗುವಂತೆ ಮಾಡಿದೆ. ಅನುವಾದವು ಮೂಲ ಕೃತಿಯ ಸಾರಾಂಶ ಮತ್ತು ತೀವ್ರತೆಯನ್ನು ಉಳಿಸಿಕೊಂಡು, ಕನ್ನಡೇತರ ಓದುಗರಿಗೂ ಅದೇ ತೀವ್ರ ಅನುಭವವನ್ನು ನೀಡುತ್ತದೆ.
ಕೇವಲ ಇಪ್ಪತ್ನಾಲ್ಕು ಗಂಟೆ ನಡೆಯುವ ರೋಚಕ ಕಥೆಯು,ಇಪ್ಪತ್ನಾಲ್ಕು ಸಂವತ್ಸರ ಕಳೆದರೂ ಮನಸಿಂದ ಮಾಸಾದ ರೀತಿಯಲ್ಲಿ ಇದೆ ಎಂದರೆ.... ಇದು ತೇಜಸ್ವಿ ಮಾಡೋ ಪವಾಡವೇ ಸರಿ! ಸಹ್ಯಾದ್ರಿ ತಪ್ಪಲಿನ ಮಲೆನಾಡಿನ ಪ್ರಕೃತಿಯನ್ನೇ ಬಂಡವಾಳ ಮಾಡಿಕೊಂಡಿರುವ ಕಾಳಧನಿಕರು, ಮಂಡಿ ವ್ಯಾಪಾರಿಗಳ ಸಣ್ಣಬುದ್ಧಿ,ಕಳ್ಳ ಧನಿಕರ ಕುಯುಕ್ತಿ.
ಗಾಂಜಾ,ಅಫೀಮು,ಕೆಂಪುಕಲ್ಲು ಇದೆಲ್ಲದರ ಜಾಲಕ್ಕೆ ಸಿಕ್ಕವರೇಷ್ಟೋ, ಅದರಿಂದ ಬಲಿಯಾದವರೇಷ್ಟೋ!! ಖೂದ್ದುಸ್ ಎಕ್ಸೆಸ್,ಶೇಷಪ್ಪನ ಬೀಡಾ.ಗಂಗೂಲಿಯನ ಅರ್ಥಹೀನ ಆದರ್ಶಗಳು, ಗುರುರಾಜ ಕವಿಯ ರಹಸ್ಯಮಯ ಕಾವ್ಯ, ಬೆಟ್ಟದ ಹೊಟ್ಟೆಯೊಳಗೆ ನುಸುಳಿ ಮಂದಗತಿಯಲ್ಲಿ ಸ್ವಿ ಸಾಗುವ ಟ್ರೈನ್ ಪ್ರತಿಯೊಂದು ವಿಶ್ಲೇಷಣೆಯು ಅಬ್ಬಾ ಎನ್ನುವಂತೆ ಭಾಸವಾಗುತ್ತದೆ!!!!!
ಗೌರಿ ಸುರೇಶರ ಕೌತುಕತೆ ಹಾಗೂ ಆ ಕೌತುಕತೆಯಿಂದ ಅವರಲ್ಲಿ ಉಂಟಾಗುವ ಹೆಚ್ಚು ಮತ್ತು ಹುಚ್ಚು ಎದೆಗಾರಿಕೆ ಪ್ರತಿಯೊಂದು ಸನ್ನಿವೇಶದಲ್ಲೂ ಮುಂದೇನಾಗುತ್ತೋ??? ಇನ್ನೆಷ್ಟು ಪೇಜ್ ಪೇಜಿದ್ಯೋ ಎನ್ನುವಂತೆ ಭಾಸವಾಗುತ್ತದೆ!! ಕೊನೆಯಲ್ಲಿ ಗೌರಿ ಹೇಳುವ,"ಆ ಹಾಳು ಊರಿಗಿಂತ ಕಾಡು ಸಾವಿರ ಪಾಲಿಗೆ ವಾಸಿ.ಯಾರನ್ನು ಯಾರೂ ನಂಬೋಹಂಗೆ ಇಲ್ವ ಊರಲ್ಲಿ."ಎನ್ನುವ ಮಾತು ಓದುವ ಪ್ರತಿಯೊಬ್ಬರಿಗೂ ಮನಮುಟ್ಟುವಂತಿದೆ.
ಪ್ರಕೃತಿ ಎಂದರೆ ಪೂರ್ಣಚಂದ್ರ ತೇಜಸ್ವಿ. ಸದಾ ಕಾಡು, ನದಿ, ಬೆಟ್ಟಗುಡ್ಡಗಳು, ನಿಸರ್ಗದ ಮಡಿಲಲ್ಲಿ ಕಥೆಗಳನ್ನು ಹೆಣೆಯುವುದು ತೇಜಸ್ವಿಯವರ ಚಾಕಚಕ್ಯತೆ. ಹೆಗ್ಗಾಡಿನ ನಡುವೆ ಕೆಲವು ದಾರಿಗಳು ಸಂದಿಸುವ ಜಾಗ, ಜುಗಾರಿ ಕ್ರಾಸ್. ಜೂಜು-ಜುಗಾರಿ, ಕಾಳದಂದೆ ಅಲ್ಲಿನ ಕಾಡಿನಗಿಂತ ಭಯಾನಕವಾಗಿ ಹಬ್ಬಿಕೊಂಡಿರುವ ಜುಗಾರಿ ಕ್ರಾಸ್‌ನಲ್ಲಿ ಸುರೇಶ್ ಮತ್ತು ಗೌರಿ ದಂಪತಿಗಳ ಜೀವನದ ಒಂದು ದಿನ ೨೪ ಗಂಟೆಗಳಲ್ಲಿ ನಡೆಯುವ ಘಟನೆಗಳು ಕೊನೆಯಲ್ಲಿ ಪಡೆಯುವ ತಿರುವುಗಳು ಊಹೆಗೂ ಮೀರಿದ್ದಾಗಿದೆ. ಕ್ಯಾಪ್ಟನ್ ಖುದ್ದೂಸ್ ಎಕ್ಸ್‌ಪ್ರೆಸ್, ಮೇಲ್ ಟ್ರೈನ್, ಗುರುರಾಜ ಕವಿ ದ್ವಿಸಂದಾನ ಕಾವ್ಯ, ಅಗ್ನಿ ಶಿಲೆ, ದೋಣಿ ಹೊಳೆ ಮತ್ತೆ ಜುಗಾರಿ ಕ್ರಾಸ್. ಓದಲು ಅದ್ಭುತವಾಗಿದೆ.. ಶತಮಾನದ ಕಥೆಯನ್ನು ಇಪ್ಪತ್ನಾಲ್ಕು ಗಂಟೆಗಳಲ್ಲಿ ಪ್ರತಿಮಿಸಿದೆ. ಕಥೆ ಮುಕ್ತಾಯದ ಹಂತದಲ್ಲಿ ಇನ್ನಷ್ಟು ರೋಚಕವಾಗಿದೆ. ಉತ್ತಮ ಕಾದಂಬರಿ💯
ಪೂರ್ಣಚಂದ್ರ ತೇಜಸ್ವಿ ( ಪೂ. ಚಂ. ತೇ ) ಬಗ್ಗೆ ಸಾಹಿತಿಗಳ ವಿಮರ್ಶೆ ಹಾಗು ಕೆಲವು ಮಿತ್ರರ ಹೊಗಳು ನುಡಿ ಕೇಳಿದ ಮೇಲೆ ಅವರಿಗೆ ನಾನು ಕೇಳಿದ ಪ್ರಶ್ನೆ ಪೂ. ಚಂ. ತೇ ರವರ ಯಾವ ಪುಸ್ತಕ ಮೊದಲು ಓದಲು ಸಲಹೆ ನೀಡುತ್ತೀರಿಯೆಂದು? ಆಗ ಹೇಳಿದ್ದು 'ಜುಗಾರಿ ಕ್ರಾಸ್'. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಲು ನಮ್ಮನ್ನು ಪ್ರೇರೇಪಿಸುತ್ತಾ ಮುಂದಿನ ಪುಟಕ್ಕೆ ಹೋಗಲು ಸುಪಾರಿ ನೀಡುತ್ತಾ ಆ ಕಥಾವಳಿಯಲ್ಲಿ ನಮ್ಮನು ಸಹಪ್ರಯಾಣಿಕನಾಗಿಸಿ ಸಾಗುತ್ತದೆ. ಪೂ. ಚಂ. ತೇ ನಮಗೆ ತಿಳಿದಿರುವುದೇ ನಿಸರ್ಗ ಪ್ರೇಮಿಯಾಗಿ ಹಾಗಾಗಿ ಪಶ್ಚಿಮಘಟ್ಟದ ರುದ್ರ ರಮಣೀಯ ವರ್ಣನೆಗೆ ' ಜುಗಾರಿ ಕ್ರಾಸ್' ನಲ್ಲಿ ಕೊರತೆಯಿಲ್ಲ.
Feeling proud to be a Kannadiga. I read the original kannada edition. I am not sure how well the english edition has come. An amazing story teller. KPPT has a unique writing style which takes you into whole new world filled with thrill, suspense, humor (He has a gift when it comes to humor) and compel you to never put it down. Jugari cross is one of his best !! A page turner with a unique creative plot. A must read !!
Poornachandra Tejaswi sir is one of the first authors in Kannada language to introduce the thriller genre to the reader. And, the Jugari Cross is one such book where you're hooked to the book till the end. The backdrop of the Southern Karnataka will add more suspense to the story. A strong story with the gripping characters.