ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕತೆಗಳು ಸರಣಿ ಓದಿ ಮೆಚ್ಚಿದವರಿಗೆ ಈ ಪುಸ್ತಕವೂ ಇಷ್ಟವಾಗುವುದು ನಿಸ್ಸಂಶಯ. ಸಾಕ್ಷಿಯವರ ಅನುವಾದ ತುಂಬಾ ಚೆನ್ನಾಗಿದೆ. ಪುಸ್ತಕದಲ್ಲಿ ಬರಿದೇ ಕೆನೆತ್ ಆಂಡರ್ಸನ್ರ ಬೇಟೆಯ ಸಾಹಸಮಯ ಕಥೆಗಳಲ್ಲದೇ ಆಂಡರ್ಸನ್ರ ಮಗ ಡೊನಾಲ್ಡ್ ಆಂಡರ್ಸನ್ನರವ ಬೇಟೆಯ ಅನುಭವಗಳೂ, ಇತರೆ ಪ್ರಾಣಿಗಳೊಂದಿಗಿನ ಒಡನಾಟವೂ ಜೊತೆಗೆ ಅವರ ಸಂದರ್ಶನ ಕೂಡ ಇದ್ದು ಸುಲಭವಾಗಿ ಓದಿಸಿಕೊಳ್ಳುತ್ತದೆ.