Rayakonda is a black humor novel written by Karanam Pavan Prasad. Where Rayakonda is a fictional town set in between the borders of Karnataka and Andhra. Happened to be a village saga, but story overcomes of that perception and strikes with various characters which are subtle and satirical, then depicting the intrinsic stimulus of human life.
Karanam Pavan Prasad, a Kannada novelist and playwright from Bangalore, is celebrated for his distinctive storytelling that combines new-age perspectives with themes of urban ecology, identity, and faith. Transitioning from a successful theater career, he gained widespread acclaim with novels like Karma, Nunni, Grastha, Rayakonda, and Sattu, each exploring complex societal and philosophical themes. solidifying his place as a prominent voice in contemporary Kannada literature.
ನೀವು ಬಳ್ಳಾರಿ ಕಡೆಯ ಬ್ರಾಹ್ಮಣರು ಸಮಾರಂಭದಲ್ಲಿ ಬಡಿಸುವ ಊಟ ಮಾಡಿದ್ದೀರಾ? ಈ ಕಾದಂಬರಿ ಅದೇ ಊಟದ ಅನುಭವ ಕೊಡುತ್ತದೆ ಓದುಗನಿಗೆ
ಕರಣಂ ಕಾದಂಬರಿ ಬರದೆ ಮೂರು ವರ್ಷವಾಯಿತು ಅಂತ ಕಾದು ಕಾದು ಓದಿದ್ದು. ಲೇಖಕರಾಗಿ ಐದನೇ ಕಾದಂಬರಿ. (ಪ್ರಕಟಿತ ನಾಲ್ಕು)
ಅವರ ಈ ಹಿಂದಿನ ಕಾದಂಬರಿಗಳಿಗಿಂತ ಸಂಪೂರ್ಣ ಭಿನ್ನ ಕಥಾವಸ್ತು ಇದು. ರಾಯಕೊಂಡ ಬ್ರಾಹ್ಮಣ ಕುಟುಂಬವೊಂದರ ತಲೆಮಾರುಗಳ ಕಥೆ. ಆಂಧ್ರ ಕರ್ನಾಟಕ ನಡುವಿನ ಊರಾದ್ದರಿಂದ ಕಾದಂಬರಿಯಲ್ಲಿ ಯಥೋಚಿತವಾಗಿ ತೆಲುಗು ಸಂಭಾಷಣೆಗಳೂ ಇವೆ. ಆದರೆ ಓದಿನ ಓಘಕ್ಕೆ ಅನುವಾದ ಬೇಕು ಅಂತ ಅನಿಸುವುದಿಲ್ಲ. ಇನ್ನು ನಿಮಗೆ ಬೀಚಿಯವರ ದಾಸಕೂಟ ಇತ್ಯಾದಿ ಒಮ್ಮೆ ನೆನಪಾಗುತ್ತದೆ. ಕಥೆಯ ಸ್ವಾರಸ್ಯ ನಾನು ಹೇಳಲು ಹೋಗುವುದಿಲ್ಲ.
ಅವರ ಹೊಸ ಕಾದಂಬರಿಯಾದರೂ ಪುಟಸಂಖ್ಯೆ ಜಾಸ್ತಿ ಇದೆಯೇ ಎಂದು ಕೇಳಿದ್ದಾಗ ಕಥೆಯ ಸಾಂದ್ರತೆ ಇದ್ದರೆ ಪುಟಸಂಖ್ಯೆ ಹೇಗಿದ್ದರೇನು ಎಂದಿದ್ದರು. ಅಕ್ಷರಶಃ ಸತ್ಯ ಈ ಕಾದಂಬರಿಯ ವಿಷಯದಲ್ಲಿ. ಪುಟ್ಟ ಕಾದಂಬರಿ ಇನ್ನೂರ ಐದು ಪುಟಗಳದ್ದು ಅಂತ ಓದಲು ಹೊರಟಾಗ ಸುಮಾರು ಎಂಟು ಗಂಟೆ ಬಿಟ್ಟೂ ಬಿಡದೆ ಓದಿಸಿಕೊಂಡಿತು.
ಮೊದಲ ಪುಟದಲ್ಲೇ ವಂಶಾವಳಿಯ ನಕ್ಷೆ ಕೊಟ್ಟಿರುವುದು ಓದುಗನಿಗೆ ಅನುಕೂಲ. ಆದರೆ ಒಂದೆರಡು ಸಲ ಬಿಟ್ಟರೆ ಅದು ಅಗತ್ಯ ಅಂತ ಅನಿಸುವುದಿಲ್ಲ. ಮೊದಲ ಹತ್ತು ಪುಟ ಓದಿ ,ಯಾರು ಯಾರಿಗೆ ಎಂತ ಸಂಬಂಧ ಅಂತ ತಲೆಕೂದಲು ಕಿತ್ತುಕೊಳ್ಳುವಾಗ ನಿರೂಪಕ ಅಥವಾ ಕಾದಂಬರಿಕಾರ ಬಂದು ಅದರ ಬಗ್ಗೆ ತಲೆಬಿಸಿ ಬೇಡ ಮುಂದೆ ನಿಮಗೇ ಗೊತ್ತಾಗುತ್ತದೆ ಎಂಬ ಅತಿ ಅಗತ್ಯದ ಅಭಯಹಸ್ತ ನೀಡುತ್ತಾನೆ. ಮುಂದೆ ಎಪ್ಪತ್ತು ಪುಟಗಳವರೆಗೆ ನಾಗಾಲೋಟದ ಓದಿನ ನಂತರ ನಡುವೆ ಕೆಲವರಿಗೆ ಇವರು ಬ್ರಾಹ್ಮಣರ ಇತರೆ ಕಲ್ಯಾಣ ಗುಣಗಳ ವಿವರಿಸುವಾಗ ಗುಟ್ಟಾಗಿ ಎಂಜಾಯ್ ಮಾಡಿಕೊಂಡರಾ ಅಂತ ಅನಿಸದೆ ಇರದು. ಆದರೆ ಆ ಸೀಮೆಯ ಬ್ರಾಹ್ಮಣರ ನಡವಳಿಕೆಗಳ ವಿವರಣೆ ಓದಿ ನೋಡಿ ತಿಳಿದುಕೊಂಡವರಿಗೆ ಇದು ಅತಿಶಯೋಕ್ತಿ ಅನಿಸುವುದಿಲ್ಲ. ಇನ್ನು ರಾಜಕೀಯದ ವಿವರ ಒಂದು ಕಾಲಘಟ್ಟವ ಸರಿಯಾಗೇ ಸೂಚಿಸುವುದರಿಂದ ಕಾದಂಬರಿಯಲ್ಲಿ ಇಸವಿಗಳ ಗೊಂದಲ ಇಲ್ಲದೆ ಇದ್ದರೂ ಓದುಗನಿಗೆ ಚಿತ್ರಣ ದೊರೆಯುತ್ತದೆ. ಅದು ಅಗತ್ಯ ಅಂತ ಅನಿಸುವುದೂ ಇಲ್ಲ. ಈ ಕಾದಂಬರಿಯ ವಿವರವಾಗಿ ಐನೂರು ಪುಟಗಳವರೆಗೆ ಬರೆಯುವಷ್ಟು ಸರಕು ಹೊಂದಿದ್ದರೂ ಗಟ್ಟಿ ಮೊಸರಿನಂತೆ ಇಷ್ಟಕ್ಕೇ ಇಳಿಸಿ ಒಪ್ಪಿಸಿದ್ದು ಒಳ್ಳೆಯದಾಯಿತು.
ಕರಣಂ ಪವನ್ ಪ್ರಸಾದ್ ಅವರ ಫೇಸ್ಬುಕ್ ಬರಹಗಳ ಗಮನಿಸುತ್ತಿದ್ದ ನನಗೆ ಇವರು ಹೇಗೋ ಮುಂದಿನ ಕಾದಂಬರಿ ಬರೆಯುತ್ತಾರಲ್ಲ ಅದು ಚೆನ್ನಾಗಿಲ್ಲದಿದ್ದರೆ ಹಿಡಿದು ಸರಿಯಾಗಿ ವಿಮರ್ಶಿಸಿ ಅವರ ತಾನೊಬ್ಬ ದೊಡ್ಡ ಕಾದಂಬರಿಕಾರ ಎಂಬ ಅಹಂಗೆ ಪೆಟ್ಟು ಕೊಡುವ ಎಂಬ ಆಸೆ ಇತ್ತು. ಅದಕ್ಕೆ ಅವಕಾಶವನ್ನೇ ಕೊಡದಂತಹ ಬರವಣಿಗೆ.
ಇನ್ನು ತಕರಾರುಗಳು.
ಕಾದಂಬರಿಯಲ್ಲಿ ಮೊಸರನ್ನದಲ್ಲಿ ಕಲ್ಲು ಸಿಕ್ಕುವ ಹಾಗೆ ರಾಶಿ ರಾಶಿ ಅಕ್ಷರ ತಪ್ಪುಗಳು.ಗಮನವಿಟ್ಟು ಓದುವವನಿಗೆ ಕಿರಿಕಿರಿ ಅದು.
ನನಗೆ ಮುಖ್ಯವಾಗಿ ಎರಡು ತಕರಾರುಗಳಿವೆ. ಕಾದಂಬರಿ ನಡೆಯುವಾಗ ನಿರೂಪಕ ಅಥವಾ ಕಾದಂಬರಿಕಾರನ ಮಧ್ಯಪ್ರವೇಶ ಹೊಸದೇನಲ್ಲ.ಆದರೆ ಇಲ್ಲಿ ಆರಂಭದಲ್ಲಿ ಮಾತ್ರ ಅದು ಹಿತವೆನಿಸುವುದು.ನಡು ನಡುವೆ ' ಅದು ಮುಂದೆ ಬರುತ್ತದೆ ' ,' ಅದರ ಬಗ್ಗೆ ಈಗ ಬೇಡ' ' ಅದು ಹಾಗಾಗುವುದು ಸಾಮಾನ್ಯ' ಎಂಬಿತ್ಯಾದಿ ಕಾದಂಬರಿಕಾರ ನಡುವೆ ಮಾತಾಡುವಾಗ ಓದುಗ,ಕಾದಂಬರಿಕಾರ,ಕಥೆ ಮತ್ತದರ ಪಾತ್ರಗಳು ಎಲ್ಲವೂ ಒಟ್ಟಾಗಿ ಸರಿಯೆನಿಸುವುದಿಲ್ಲ. ಬಹುಶಃ ಲೇಖಕರು ನಾಟಕಕಾರರೂ ಆಗಿರುವುದರಿಂದ ಓದುಗನ ಪ್ರೇಕ್ಷಕ ವರ್ಗದಲ್ಲಿ ಕೂರಿಸಿ ಅವರು ಕಥೆ ಹೇಳುವ ಕೆಲಸಕ್ಕೆ ಇಳಿದಿದ್ದಾರೆ.ಇದು ಓದಿನಲ್ಲಿ ತಾಧ್ಯಾತ್ಮ ಭಾವಕ್ಕೆ ಅಡ್ಡಿಯುಂಟು ಮಾಡುತ್ತದೆ.
ಎರಡನೆಯ ಅಂಶ ಸರಳವಾಗಿ ಹೇಳಬೇಕಾದ ಕಡೆ ತೂಕದ ಪದಪುಂಜಗಳ ಬಳಕೆ. ಇದು ಅಗತ್ಯವಿತ್ತೇ ಎಂದು ಅನಿಸುವಷ್ಟು.
ಮೂರನೆಯ ಅಂಶ ಸಾಮಾನ್ಯವಾಗಿ ಗಂಭೀರ ಕಾದಂಬರಿಗಳ ಅದರಲ್ಲೂ ಜೀವನಕ್ಕೆ ಹತ್ತಿರವಿರುವ ಕಾದಂಬರಿ ಬರೆಯುವವರಲ್ಲಿ ದ್ರವ್ಯದ ಗಟ್ಟಿತನ ಜಾಸ್ತಿ. ಅವರ ವ್ಯಂಗ್ಯ ಗುರಿ ತಪ್ಪುವುದೇ ಬಹಳ. ಶಿವರಾಮ ಕಾರಂತರ ವ್ಯಂಗ್ಯ ಕಾದಂಬರಿಗಳು ಇದಕ್ಕೆ ಉದಾಹರಣೆ. ಭೈರಪ್ಪನವರ ಕೃತಿಗಳಲ್ಲಿ ವ್ಯಂಗ್ಯವಾಗಲೀ ತಮಾಷೆ,ಹಾಸ್ಯ ರಸ ಹುಡುಕಿದರೂ ಸಿಗದು. ಇಂತಿಪ್ಪವರ ಸಾಲಿನ ಬರಹಗಾರರಾದ ಕರಣಂ ಇಲ್ಲಿ ನಡು ನಡುವೆ ವ್ಯಂಗ್ಯದ ಭಾಷೆ ಬಳಸುವಾಗ ಅದು ಅದ್ಭುತ ಗಾಯನದ ನಡುವೆ ಗಾಯಕ ಸಂಚಾರೀ ಭಾವಗಳ ಪ್ರಲೋಭನೆಗೆ ಒಳಗಾದ ಹಾಗೆ ಕಾಣುತ್ತದೆ.ಇದರಲ್ಲಿ ಬರುವ ಹಲವು ಕಾಮಿಕ್ ಸಂದರ್ಭಗಳಲ್ಲಿ ಅದು ಎದ್ದು ಕಾಣುತ್ತದೆ.
ನಾಲ್ಕನೆಯ ಅಂಶ ಅಭಿಪ್ರಾಯ ಮಂಡನೆ. ಕಥೆಯಲ್ಲಿ ನಿರೂಪಕ ನಿರ್ಲಿಪ್ತನಾಗಿರಬೇಕು. ಇಲ್ಲಿ ಕೆಲವು ಪಾತ್ರಗಳ ನಡವಳಿಕೆಗಳ ಅಥವಾ ಸಂದರ್ಭಗಳ ವಿವರಿಸುವಾಗ ತನ್ನ ಅಭಿಪ್ರಾಯವನ್ನೂ ನಿರೂಪಕ ಮಂಡಿಸುತ್ತಾನೆ ಒಂದೊಂದು ಸಾಲಿನಲ್ಲಿ.ಅದು ಸಾಮಾಜಿಕ ತಾಲತಾಣಗಳ ಪ್ರಭಾವವೇ ಎಂಬ ಸಂಶಯವೂ ನನಗಿದೆ!
ಈ ನಾಲ್ಕೂ ಅಂಶಗಳು ಇತರರ ಕಾದಂಬರಿಗಳಲ್ಲಿ ನಿರ್ಲಕ್ಷಿಸಬಹುದಾದದ್ದು. ನಾನು ಓದುವಾಗ ಕಂಡರೂ ಅದನ್ನು ಗಮನಿಸದೆ ಮುಂದೆ ಹೋಗುತ್ತೇನೆ.ಆದರೆ ಕರಣಂ ಬರೆಯುವಾಗ ಅವರ ಆಳಕ್ಕೆ ಈ ರಂಧ್ರಗಳ ಅಥವಾ ನನಗೆ ಹಾಗೆ ಕಂಡದ್ದರ ಬರೆಯಬೇಕು ಅನಿಸಿತು.
ಇವಿಷ್ಟರ ಹೊರತಾಗಿ ಈ ವರ್ಷ ಓದಿದ ಅತ್ಯುತ್ತಮ ಕೃತಿಗಳಲ್ಲೊಂದು ಇದು. ಸಾವಧಾನದ ಓದಿಗೆ ಇನ್ನೂ ರುಚಿಕರವಾಗಬಹುದು. ಇದು ಮೊದಲ ಓದಿನ ಬಿಸಿಬಿಸಿ ಅಭಿಪ್ರಾಯ ಅಷ್ಟೇ!
ಕರಣಂ ಬರೆಯುವಾಗ ' ಇವರಿಗೆ ಅಹಂಕಾರ ಬಹಳ ' ಅಂತ ಸಾಮಾನ್ಯ ಓದುಗರಿಗೆ ಅನಿಸುತ್ತದೆ. ಅವರ ಕೃತಿಗಳ ಓದುವಾಗ ಈ ಅಹಂಕಾರ ಇದ್ದರೂ ಪರವಾಗಿಲ್ಲ ಇಷ್ಟು ಒಳ್ಳೆ ಬರವಣಿಗೆಗೆ ಅಂತಲೂ ಅನಿಸುತ್ತದೆ. ಆದರೂ ಹೆಂಗಸರ ಬಗ್ಗೆ ಬರೆಯುವಾಗ ಸ್ವಲ್ಪ ಜಡ್ಜ್‌ಮೆಂಟಲ್ ಆಗಿ (ಅದರಲ್ಲಿ ತಥ್ಯವಿದ್ದರೂ) ಬರೆಯುವುದು ಕಡಿಮೆ ಮಾಡಿ ಎನ್ನುವುದು ಪ್ರೀತಿಯ ಮಾತು.
ಹೇಳಲು ಮರೆತೆ. ಎಂತಹ ಮುಖಪುಟ ಮಾರಾಯ್ರೇ. ಇಡೀ ಕತೆಯನ್ನು ಅದರಲ್ಲೇ ಹೇಳಿದ ಹಾಗಿದೆ! ಭೂಪತಿ ಶ್ರೀನಿವಾಸನ್ ಅವರಿಗೆ ನಮಸ್ಕಾರಗಳು.
ಮೊದಲ ಪುಟದಲ್ಲೇ ಪಾತ್ರಗಳ ಸಂಬಂಧ ಸೂಚಿ ಒದಗಿಸಿದ್ದಕ್ಕೆ ಲೇಖಕರಿಗೆ ಧನ್ಯವಾದಗಳು. ಕಥೆ ಮುಮ್ಮುಖವಾಗಿ ಶುರುವಾಗಿ ಮತ್ತೆ ಫ್ಲಾಷ್ಬ್ಯಾಕ್, ಫ್ಲಾಷ್ ಫಾರ್ವರ್ಡ್ ಆಚೆ ಈಚೆ ಎಂದು ಹಬ್ಬಿಕೊಳ್ಳೋದರಿಂದ ಅದಿಲ್ಲದೇ ಕಥೆಯನ್ನ ಅರ್ಥಮಾಡಿಕೊಳ್ಳೋದು ಕಷ್ಟವಾಗ್ತಿತ್ತು(ನನಗೆ).
ಮಾಲತಿಯ ಮದುವೆಯಿಂದ ಆರಂಭಗೊಂಡು ಅಲ್ಲಿಗೇ ಬಂದು ನಿಲ್ಲುವ ಕಾದಂಬರಿಗೆ ಮಾಲತಿಯೇನೂ ಮುಖ್ಯಪಾತ್ರವಲ್ಲ! ನಾಲ್ಕು ತಲೆಮಾರಿನ ಕಥೆಗೆ ಸಿನಿಮೀಯವಾಗಿ ಮುಖ್ಯಪಾತ್ರ ಇರಲು ಸಾಧ್ಯವೇ ಅನಿಸಿದರೂ ಪದ್ದಣ್ಣನ ಅಧ್ಯಾಯ ಪೂರಾ ಒಳ್ಳೇ ತೆಲುಗು ಸಿನಿಮಾ ತರವೇ ವಿಜ್ರುಂಭಣೆಯಾಗಿದೆ.
ಊರಿನ ರಣಬಿಸಿಲು ಜನರ ಸ್ವಭಾವದಲ್ಲೂ ಬೆರೆತಂತಾ ವಿಚಿತ್ರ ವಿಲಕ್ಷಣ ಪಾತ್ರಗಳು. ಅದೇನು ಕಠೋರ ನಾಲಿಗೆಯವರಪ್ಪ! ಗಂಡಸರಂತೂ ಸರಿಯೇಸರಿ, ಹೆಣ್ಣು ಪಾತ್ರಗಳ ಮೇಲಷ್ಟು ಕರುಣೆ ಬೇಡವೇ ಲೇಖಕರೇ.. ಮನೆತನ, ಮಕ್ಕಳು ಬವಣೆಗಷ್ಟೆ ಸೀಮಿತವಾಗದೇ ಇಡೀ ರಾಯಕೊಂಡ, ಅಗ್ರಹಾರ, ಅದರಾಚೆಗಿನದ್ದು ಏನಿದೆಯೋ ಅಷ್ಟೂ ಚಿತ್ರಣ, ಪಕ್ಷ ರಾಜಕಾರಣ, ಮನವ ಸಹಜ ಸ್ವಭಾವಗಳು, ಗುಣಾವಗುಣಗಳು, ಆಯ್ಕೆಗಳು ಎಲ್ಲವೂ very natural and very raw. ಪ್ರತೀ ಹೊಸ ಪಾತ್ರ ಪರಿಚಯವಾದಂತೆಯೂ ಸಾವರಿಸಿಕೊಂಡು ಓದಬೇಕಾಯ್ತು.
ಹೆಚ್ಚಿನ ಗಟ್ಟಿಮಾತುಗಳೆಲ್ಲಾ ಅಮ್ಮಿ ಅತ್ತೆಯ ಮಾತು, ಚಿಂತನೆಗಳಲ್ಲೇ ಇವೆ. ಆಕೆಯ ಬದುಕು, ಬವಣೆ, ಮಾನಸಿಕ ಬೆಳವಣಿಗೆಯೋ ಅಳವಡಿಕೆಯೋ ಎಂತದೋ ಒಂದು; ಇಷ್ಟವಾಯ್ತು.
ಅಲ್ಲದೇ ಕಾದಂಬರಿಯಲ್ಲಿ ಆಗೀಗ ಹಣಕುವ ಲೇಖಕರು- " ಪುಷ್ಪಾಳನ್ನು ಈಗ ಹತ್ತಿರದ ಹಳ್ಳಿಗೆ ಮದುವೆ ಮಾಡಿಕೊಡಲಾಗಿದೆ. ಹಳ್ಳಿಗೆ ಎಂದರೆ ಇಡೀ ಹಳ್ಳಿಗಲ್ಲ, ಅಲ್ಲಿ ಒಬ್ಬ ಹುಡಿಗನಿಗೆ, ಅದಕ್ಕೆ ಭಾಷೆಯ ಅಂತರಾಳ ಗೊತ್ತಿರಬೇಕು, ನೆಲದ ಸೊಗಡು ಗೊತ್ತಿರಬೇಕು ಅನ್ನೋದು. ಇಂಗ್ಲೀಷಿಗೆ ಅನುವಾದವನ್ನು ಹೀಗೇ ಮಾಡಿದರೆ ಏನು ಕಥೆ!?" ಎಂಬಿತ್ಯಾದಿ ಒಂದಷ್ಟು ಮಾತುಗಳನ್ನು ಲೇಖಕರು ತಾವೂ ಆಡಿದ್ದಾರಲ್ಲಾ ಅದೊಂತರಾ ಮಜವಾಗಿತ್ತು ಓದಲು.
ಇಷ್ಟವಾಗಿತ್ತು/ ಕಷ್ಟವಾಗಿತ್ತು ಎಂದೆಲ್ಲ ಕ್ಯಾಟಗರೈಸ್ ಮಾಡಲು ತಿಳಿಯುತ್ತಿಲ್ಲ. ಝಳಝಳ ಬಿಸಿಲ ಹೊತ್ತಲ್ಲಿ ಒಂದೊಳ್ಳೆ ಸ್ಟ್ರಾಂಗ್ ಕಾಫಿ ಕುಡಿದಂತೆ It was a good read.
This entire review has been hidden because of spoilers.
The novel based in fictional village called “Rayakonda” which is set in Karnataka- Andhra Pradesh border. The story revolves around the 3-4 generations of a Brahmin family of Rayakonda. The plot of the novel is written based on the characters and writer sets the novel through the individual story of a single character as like character driven.
Every character in the novel has its own importance to the story while Ammi atte is one of the strongest character written who feels like a protagonist of the novel. The link between the Ammi atte and another character Malathi tells the transformation of old generation women to the new generation women. Ammi atte has seen in the cover page of the book is felt like a silent witness to the everything that happens in Rayakonda. There are many different women characters spinning in the novel in such a way that author has tried to tell the different personalities of women in the society. Rayakonda is filled with Love, Emotions, Sacrifice, Pain and Humour.
Rayakonda has the essence of Karnataka-Andhra border culture and language, we can see the Rayalaseema influence in characters like Paddanna and his grandson Chitti, Kona Reddy and Chinna Reddy.
Rayakonda as said travels through generations of a single family and with the different personalities within a family. It also dealts with Casteism which is one of best part in the novel, Social inequality, Teenage love/lust attraction, Abortion, Adultery and Homosexuality.
The writing is so tight and gripping it feels like story of 300-350 is compressed to 200. The language is lucid while even usage of telugu many times doesn’t slow down the reading.
I have read all of the novel’s written by Karanam Pavan Prasad. Every novel has different story and are unique, still remembers many characters and plots of all his novels. The author has grown over the years as a novelist and so we has his readers. Looking for more experimental novel’s from him. He is highly recommended in contemporary Kannada literature.
Some of the lines which touched while reading the novel 👇
“ಒಬ್ಬಂಟಿತನದಲ್ಲೇ ಅಲ್ಲವೇ ಮೂಲಭೂತ ಪ್ರಶ್ನೆಗಳು ಏಳುವುದು, ಸಂಘಜೀವನದಲ್ಲಿ ಸಂತೋಷ, ದುಃಖ ಎರಡೇ ಸಾಧ್ಯತೆ. ಒಬ್ಬಂಟಿತನದಲ್ಲಿ ಮಾತ್ರ ಇವೆರಡು ಬಿಟ್ಟು ಮೂರನೇ ನಿರ್ಲಿಪ್ತತನ ಸಾಧ್ಯ”.
ಇಂದಿಗೂ ಪುಸ್ತಕ ಬಿಡುಗಡೆಯ ಮುಂಚೆಯೇ ಸಂಚಲನ ಮೂಡಿಸೋ ಲೇಖಕರು ಇದ್ದರೆ ಅದು ಕೇವಲ ಬೆರಳಣಿಕೆಯಷ್ಟು .ಅವರಲ್ಲಿ ಒಬ್ಬರು ಕರಣಂ ಪವನ್ ಪ್ರಸಾದ್. ಗ್ರಸ್ತ ಬಂದು ಮೂರು ವರ್ಷದ ನಂತರ ಈಗ ರಾಯಕೊಂಡ ಬಿಡುಗಡೆಯಾಗಿದೆ.. ಗ್ರಸ್ತದಲ್ಲಿ ಬಹಳ ಗಂಭೀರ ವಿಷಯವನ್ನು ಹೇಳಿ ರಾಯಕೊಂಡದಲ್ಲಿ, ತಮಾಷೆಯಾಗಿ ಒಂದು ಕೌಟುಂಬಿಕ ಏಳು ಬೀಳುಗಳನ್ನು ಚಿತ್ರಿಸಿದ್ದಾರೆ...
ರಾಯಕೊಂಡದಲ್ಲಿ ಪ್ರಧಾನವಾಗಿ ನಡೆಯುವ ಈ ಕಥೆ ಎರಡು ಕುಟುಂಬದ್ದು ಒಂದು ರಂಗಪ್ಪ ದೇವಮ್ಮರದ್ದು ಇನ್ನೊಂದು ದೇವಮ್ಮ ಅಣ್ಣರಾದ ನಾರಾಯಣ ಭಟ್ಟರದ್ದು, ಇಲ್ಲಿ ಮೊಮ್ಮಗಳ ಮದುವೆ ನೋಡೋ ಇಚ್ಛೆಯುಳ್ಳ ಶೇಷಪ್ಪರಂತ ಹಿರಿಯರೂ ಇದ್ದಾರೆ ಮತ್ತು ಮದುವೆಯಾಗುವ ಪರಮ ಇಚ್ಛೆಯುಳ್ಳ MBA ಮುಗಿಸಿ ಕಾಯುತ್ತಿರುವ ಸುಜಯನು ಇದ್ದಾನೆ... ದೈನಂದಿನ ಧಾರಾವಾಹಿ ನೋಡೋ ಅಮ್ಮಿ ಅತ್ತೆಯು ಇದ್ದಾರೆ ಮತ್ತು ಒಂದೇ ರಾತ್ರಿಯಲ್ಲಿ netflixನಲ್ಲಿ ಒಂದು ಸೀಸನ್ ಮುಗಿಸೋ ಮಾಲತಿಯು ಇದ್ದಾಳೆ, ಇದು ಮೂರು ಪೀಳಿಗೆಯ ಕಥೆ , ಒಂದೊಂದು ಪೀಳಿಗೆಯ ಕಥೆಯನ್ನು ಲೇಖಕರು ವಿಡಂಬನೆಯ ಶೈಲಿಯಲ್ಲಿ ಅದ್ಭುತವಾಗಿ ಹೇಳಿದ್ದಾರೆ.
ಅಮ್ಮಿ ಮತ್ತು ಕಿಟ್ಟಪ್ಪನ ಪಾತ್ರಗಳನ್ನು ತುಂಬಾ ಚೆನ್ನಾಗಿ ಲೇಖಕರು ಪೋಷಿಸಿದ್ದಾರೆ, ವ್ಯವಕ್ತಿಕವಾಗಿ ನನಗೆ ಗುಂಡ, ರಾಜಿ, ಚರತೆ ಪದ್ದಣ್ಣನ ಪಾತ್ರಗಳು ಬಹಳ ಇಷ್ಟವಾದವು
ಲೇಖಕರು ಸ್ವತಃ ಅದ್ಬುತ ವಾಗ್ಮಿಯಾಗಿರುದರಿಂದ ಕಾದಂಬರಿಯ ಕೆಲ ಸಾಲುಗಳು ಬಹಳ ಇಷ್ಟವಾಗುತ್ತದೆ ಉದಾ : "ಒಂದು ನಿದ್ದೆ ವಿವೇಕವನ್ನು ಮರುಕಳಿಸುತ್ತದೆ. ಕತ್ತಲಿನ ಕೋಪ, ಬೆಳಕಿನಲ್ಲಿ ತಿಳಿಯಾಗುತ್ತದೆ" "ಅನ್ನವನ್ನು ಮರೆಸುವಷ್ಟು ಪಾಪಪ್ರಜ್ಞೆ ಬಲಿಷ್ಠವಾದುದೇ ಎಂಬಂತಹ ಲಹರಿ ಅಮ್ಮಿಯಲ್ಲಿ ಬಂದರೂ ಅದೇ ಅರ್ಥದ ಪದಗಳು ಮೂಡಲಿಲ್ಲ".
ಏತೇಚ್ಛವಾಗಿ ಬರುವ ತೆಲಗು ಸಂಭಾಷಣೆಗಳು ಕಿರಿ ಕಿರಿ ಅನ್ನಿಸುತ್ತದೆ.. ಕೆಲ ಪಾತ್ರಗಳಿಗೆ ಕತ್ತರಿ ಹಾಕಿ, ಇರುವ ಮುಖ್ಯ ಪಾತ್ರಗಳನ್ನೇ ಸಂಸ್ಕರಿಸಬಹುದಿತ್ತು ಎಂದನಿಸಿತು.. ಇಷ್ಟು ಬಿಟ್ಟರೆ ಕಾದಂಬರಿ ಬಹಳ ಅಚ್ಚುಕಟ್ಟಾಗಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ...
ಕೆಲ ಮಿತ್ರರು ಕರ್ಮದಷ್ಟೂ ಚೆನ್ನಾಗಿಲ್ಲ ಎಂದರು... ಅರೆ, ಎಲ್ಲವೂ ಕರ್ಮದಂತೆ ಆಗಬೇಕಾದರೆ ಕರ್ಮವನ್ನೇ ಮತ್ತೆ ಓದಬಹುದಲ್ಲ, ಏಕೆ ರಾಯಕೊಂಡ, ಏಕೆ ನನ್ನಿ ಮತ್ತು ಏಕೆ ಗ್ರಸ್ತ.... ನನಗೆ ಪುರಹರ ಇಷ್ಟ ಆಗಂತ ಆದಿಲ್ ಶಾ ನನ್ನು ರಾಯಕೊಂಡದಲ್ಲಿ ತರುವುದಕ್ಕೆ ಆಗುವುದಿಲ್ಲ. ಲೇಖಕರು ಎಲ್ಲವು ಓದುಗನಿಗೆ ಇಷ್ಟವಾಗಲಿ ಎಂದೇ ಬರೆಯುವುದು, ಅದನ್ನು ಓದಿ ಸವಿಯಬೇಕೇ ಹೊರತು ಇನ್ನಿತರ ಕೃತಿಗಳ ಸತ್ವಕ್ಕೆ ಹೊಂದಿಸಿ ನೋಡಬಾರದು ಎಂಬುದೇ ನನ್ನ ಆಶಯ...
ರಾಯಕೊಂಡ ಎಂಬುದು ಕನ್ನಡ-ತೆಲುಗು ಇರುನುಡಿಗಳಿಗೂ ಎಡೆಯಾಗಿರುವ ಸೀಮೆಯ ಒಂದು ಬ್ರಾಹ್ಮಣ ಕುಟುಂಬದ ತಲೆಮಾರುಗಳ ಕಥೆ. ವಿಶೇಷವಾಗಿ ಪಾತ್ರಗಳ ಡೀಟೈಲಿಂಗ್ ಕರಣಂ ಪವನ್ ಪ್ರಸಾದ್ ರವರು ಎಷ್ಟು ಮಂದಿಯನ್ನ ಅವರ ಹಾವಭಾವಗಳನ್ನೆಲ್ಲಾ ಆಳವಾಗಿ ಗಮನಿಸಿದ್ದಾರೆ ಎಂಬುದನ್ನು ತೋರದೇ ಇರುವುದಿಲ್ಲ. ಈ ಸೀಮೆಯ ಮಂದಿಗೆ ನಮ್ಮ ಬಳಗದವರ ಈ ಪಾತ್ರಗಳು ಎನ್ನಿಸುವಷ್ಟು! ೪ ತಲೆಮಾರುಗಳಲ್ಲಿ ಆದ ಸಾಮಾಜಿಕ ಬದಲಾವಣೆ, ಅಯಾ ತಲೆಮಾರಿನವರು ಎದುರಿಸಿದ ಧರ್ಮಸಂಕಟಗಳು ಮನುಷ್ಯ ಸಹಜ ಭಾವನೆಗಳು ವಿಕಾರಗಳು ಎಲ್ಲವನ್ನೂ ಚಿತ್ರಿಸಿದ್ದಾರೆ ಕರಣಂ ರವರು. ಈ ತಲೆಮಾರುಗಳ ಕಥೆಯಲ್ಲಿ ಅಮ್ಮೀ ಅತ್ತೆಯ ಪಾತ್ರ ಹಾಗೂ ಪದ್ದಣ್ಣನ ಪಾತ್ರಗಳ ಮೇಲೆ ಲೇಖಕರಿಗೇ ವಿಶೇಷ ಒಲವಿದ್ದಂತಿದೆ.ಅವರೇ ಕೇಂದ್ರ ಪಾತ್ರಗಳೋ ಏನೋ. ಸಮಾಜಕ್ಕೆ ಹೆದರಿ ಮನುಷ್ಯ ಎಷ್ಟು ತಣ್ಣಿಗಿನ ಕ್ರೌರ್ಯಕ್ಕೆ ತೊಡಗುತ್ತಾನೆ ಎಂಬುದನ್ನ ಈ ಪುಸ್ತಕದಲ್ಲಿ ತಿಳಿಸಿರುವುದು ವಿಶೇಷ.ಹಲವು ಪಾತ್ರಗಳ ಮೂಲಕ ಈ ಗುಣವನ್ನ ಕಾಣಬಹುದು ಇನ್ನೂ ಕೆಲವು ವಿಷಯ ನರೇಶನ್ ಕುರಿತಾದ್ದದ್ದು.(spoiler ಆಗಬಹುದು) ಒಂದಾದರಮೇಲೊಂದು ಸಾವುಗಳನ್ನ avoid ಮಾಡಬಹುದಿತ್ತೇನೋ
ನನ್ನ ಲಿಸ್ಟ್ ಗೆ ಒಬ್ಬ ಒಳ್ಳೆ ಬರಹಗಾರರು ಸೇರಿದ ಖೂಷಿ ನಂಗೆ. ತುಂಬಾ ಒಳ್ಳೆಯ ಕಾದಂಬರಿ ಇದು. ಯಾರಾದರೂ ಕನ್ನಡ ಕಾದಂಬರಿ ಓದಲು ಪ್ರಾರಂಭಿಸಬೇಕು ಅಂತಾದರೆ ಇದ್ರಿಂದ ಮಾಡಬಹುದು. ಎಲ್ಲ ಪಾತ್ರಗಳೂ ಮನಸಿನಲ್ಲಿ ಮನೆ ಮಾಡುತ್ತದೆ. ಕಥಾ ನಾಯಕ ಮತ್ತು ಕಥಾ ನಾಯಕಿ ಯನ್ನು ನೀವೇ ನಿರ್ಧರಿಸಬೇಕು. ಮೊದಲನೇ ಪುಟದಲ್ಲಿ ಇರುವ ಸಂಬಂದ ಸೂಚಿ ಅವಶ್ಯ ಎನಿಸಿತು. ಅಲ್ಲಲ್ಲಿ ತೆಲುಗು ಸಂಭಾಷಣೆ ಕಥೆಗೆ ಸೂಕ್ತ ಎನಿಸಿತು. ಆದ್ರೆ ಮಂಗಳ ಪಾತ್ರದ ಬಗ್ಗೆ ಎಲ್ಲೂ ಹೇಳಿಲ್ಲ. ಅದೊಂದು ಸ್ವಲ್ಪ ಬೇಸರ. ಒಟ್ಟಿನಲ್ಲಿ ಒಂದು ಸರಳ ಸುಂದರ ಕಾದಂಬರಿ ಇದು.
ಕಾದಂಬರಿ ಮೊದಲನೇ ಪುಟ ನನಗೆ ಆಕರ್ಷಣೆ ಆಗಿರೋದು ಪಾತ್ರಗಳ ಸಂಬಂಧ ಸೂಚಿ (ನಕ್ಷೆ ) . ಸಂಬಂಧದ ಪಟ್ಟಿ ನೋಡಿದ ಕೂಡಲೇ ಸಹಜವಾಗಿ ನಮಗೆ ಅನಿಸುವುದು ಒಂದು ದೊಡ್ಡ ಕುಟುಂಬ ಹಾಗೂ ಊರಿನ ಕಥೆಗಳು ಮತ್ತು ಕಾದಂಬರಿಯಲ್ಲಿ ಬರುವ ಪಾತ್ರಗಳ ಕಥೆ .
ಕರಣಂ ಪವನ್ ಪ್ರಸಾದ್ ಅವರು ಬರೆದಿರುವ ಕಾದಂಬರಿ ಹಾಗೂ ನಾಟಕ , ನಾನು ಓದಿರುವ ಮೊದಲ ಕಾದಂಬರಿ ರಾಯಕೊಂಡ , ಈ ವರ್ಷದಲ್ಲಿ ಒಂದು ಒಳ್ಳೆ ಕಾದಂಬರಿ ಓದಿದ್ದೇನೆ ಎಂದರೆ ತಪ್ಪಾಗುವುದಿಲ್ಲ . ಲೇಖಕರು ಬರೆದಿರುವ ಕರ್ಮ , ನನ್ನಿ , ಗ್ರಸ್ತ , ಓದಲು ಆಸೆ ಮೂಡಿದೆ .
ಓದಲು ಪ್ರಾರಂಭವಾದಾಗ ಇಷ್ಟೊಂದು ಪತ್ರದ ಹಿನ್ನೆಲೆ ಅಜ್ಜ ಅಜ್ಜಿ ಮಕ್ಕಳು ಮೊಮ್ಮಕ್ಕಳ ಹೀಗೆ ಶುರುವಾಗುವ ಕಾದಂಬರಿ ಓದುವಾಗ ತಳಮಳ ಉಂಟಾಯಿತು ಅದೇ ಸಮಯಕ್ಕೆ ಲೇಖಕರು ಇದನ್ನು ಅಷ್ಟಾಗಿ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಾರೆ ಪುಟಗಳು ಮುಂದೆ ಹೋಗುತ್ತಾ ಹಾಗೆ ಕಥೆ ಏನೆಂಬುವುದು ಅರ್ಥವಾಗುತ್ತದೆ .
ಚಿಕ್ಕಬಳ್ಳಾಪುರ ಕಡೆಯಿರುವ ತಾಲ್ಲೂಕು ಕೇಂದ್ರವೇ ರಾಯಕೊಂಡ ಊರಿನಲ್ಲಿ ನಡೆಯುವ,ಏಳುಬೀಳಿನ ಗುದ್ದಾಟ ,ಹೋರಾಟ ,ಆಸ್ತಿಯ ಪಾಲು, ಆಂಧ್ರ ಸೀಮೆಯ ರಾಯಕೊಂಡದ ಪಟ್ಟ ಬ್ರಾಹ್ಮಣರ ಕುಟುಂಬದ ಮನೆಯವರು ನಾಲ್ಕು ಜನ ಅಣ್ಣತಮ್ಮಂದಿರು ಒಬ್ಬಳು "ಮುದ್ದಾದ ತಂಗಿಯೇ ಪದ್ಮ ಅಡಿಯಾಸ್ ಅಮ್ಮಿ ,ಅಮ್ಮಿಅತ್ತೆ " ಕಾದಂಬರಿಯ ಕೇಂದ್ರಬಿಂದು ಅನ್ನಬಹುದು. ಅಮ್ಮಿಅತ್ತೆ ಜೀವನದಲ್ಲಿ ನಡೆದಿರುವ ಘಟನೆಗಳು ಅನುಭವಿಸಿರುವ ಸಂಕಟಗಳನ್ನು ನೋವು-ನಲಿವು ವಾಸ್ತವದಲ್ಲಿ ನಾವು ನಮ್ಮ ಅಮ್ಮ ಅಜ್ಜಿ ಅವರ ಜೀವನದಲ್ಲಿ ನಡೆದಿದೆಯಲ್ಲ ಎನಿಸುತ್ತದೆ .
ಅಡುಗೆ ರುಚಿಗೆ ತಕ್ಕಷ್ಟು ಉಪ್ಪು ಅನ್ನೋಹಾಗೆ ರುಚಿಗೆ ತಕ್ಕಷ್ಟು ತೆಲುಗು ಭಾಷೆ . ಆರಂಭವಾಗುವುದೇ ನಿಶ್ಚಿತಾರ್ಥ ಸಂಭ್ರಮ ಮೂಲಕ ಅಮ್ಮಿಅತ್ತೆ ಪಾತ್ರದ ಪರಿಚಯ ಕತೆ ಹೇಳಲು ಹೊರಟರೆ ಇನ್ನೊಂದು ಕಡೆ ಪಾತ್ರಗಳು ಮಾತನಾಡುತ್ತವೆ ಇದರ ನಡುವೆ ಕೆಲವೊಮ್ಮೆ ಲೇಖಕರು ನಿರ್ದೇಶನ ಮಾಡುತ್ತಾರೆ ಕೊನೆಗೆ ತಲುಪುವುದು ಸುಖಾಂತ್ಯ
ಇದು ಮೂರ್ನಾಲ್ಕು ತಲೆಮಾರುಗಳ ಒಂದು ಅವಿಭಕ್ತ ಕುಟುಂಬದಲ್ಲಿ ಸಂಭವಿಸುವ ಪಲ್ಲಟಗಳನ್ನು ಚಿತ್ರಿಸುವ ಸಾಂಸಾರಿಕ ಕಾದಂಬರಿ. "ರಾಯಕೊಂಡ" ಎ��ಬ ಕಾಲ್ಪನಿಕ ಊರಿನ ಒಂದು ಬ್ರಾಹ್ಮಣ ಕುಟುಂಬದ ಕಥೆಯ ಮೂಲಕ ಸಂಪ್ರದಾಯ, ಸಂಸ್ಕ್ರತಿ, ಮತ್ತು ಪರಂಪರೆಯು ಬದಲಾಗುತ್ತಾ ಸಾಗುವುದನ್ನು ಬಹಳ ಸೊಗಸಾಗಿ ನಿರೂಪಿತವಾಗಿವೆ.
ನಮ್ಮಲ್ಲಿ ರೂಢಿಯಲ್ಲಿರುವ ಹಲವು ನಂಬಿಕೆಗಳು ಮತ್ತು ಆಚಾರ ವಿಚಾರಗಳನ್ನು ವ್ಯಂಗಮಿಶ್ರಿತ ಹಾಸ್ಯದ ಮೂಲಕ ಅಲ್ಲಲ್ಲಿ ಕುಟುಕುವ ಪರಿ ನಗು ತರಿಸಿದರೂ ಅವುಗಳ ಪ್ರಸ್ತುತತೆಯ ಕುರಿತು ವಿಚಾರ ಮಾಡುವಂತೆ ಪ್ರೇರೆಪಿಸುತ್ತವೆ. ಒಬ್ಬ ವ್ಯಕ್ತಿಯ ಜೀವ ಮತ್ತು ಜೀವನಕ್ಕಿಂತ ಆಚಾರ,ನಂಬಿಕೆಗಳು ಪ್ರಾಮುಖ್ಯತೆಯನ್ನು ಪಡೆದಾಗ ಬದುಕು ತನ್ನ ಮೌಲ್ಯವನ್ನು ಕಳೆದುಕಳ್ಳುವುದನ್ನು ಹಾಗೂ ಆ ಪ್ರಕ್ರಿಯೆಯಲ್ಲಿ ಒಳಗೊಂಡ ಮುಗ್ಧ ಮನಸ್ಸುಗಳು ಪಶ್ಚಾತ್ತಾಪದಲ್ಲಿ ನರಳುವುದು ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಸಂಪ್ರದಾಯನಿಷ್ಠ ಕುಟಂಬದ ಚಿತ್ರಣದ ಜೊತೆಗೆ ಹಳ್ಳಿಯ ಜಾತಿ ವ್ಯವಸ್ಥೆ,ರಾಜಕೀಯ ಒಳಸುಳಿಗಳು,ಆಧುನಿಕತೆಯ ಸ್ಪರ್ಶದಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಉಂಟಾಗುವ ಪಲ್ಲಟಗಳು ಬಹಳ ರಸವತ್ತಾಗಿ ಚಿತ್ರಿತವಾಗಿವೆ. ಅಲ್ಲಲ್ಲಿ ಬರುವ ತೆಲುಗು ಸಂಭಾಷಣೆಗಳು ಸ್ವಲ್ಪ ಕಿರಿಕಿರಿ ಉಂಟು ಮಾಡಿದ್ದು ಬಿಟ್ಟರೆ ಸರಾಗವಾಗಿ ಓದಿಸಿಕೊಂಡು ಹೋಗುವ ಪುಸ್ತಕ.
ಕರ್ನಾಟಕ ಅಂದ್ರದ ಗಡಿ ಜಿಲ್ಲೆ ರಾಯಕೊಂಡದ ಬ್ರಾಹ್ಮಣ ಕುಟುಂಬದ 4 ತಲೆಮಾರಿನ ಕಥೆ. ಮಾಲತಿಯ ನಿಶ್ಚಿತಾರ್ಥ ಇಂದ ಶುರುವಾಗಿ ಅವಳ ಮದುವೆಯಲ್ಲಿ ಮುಗಿಯುವ ಕಥೆ. ಈ ಮಧ್ಯೆ ಬಂದು ಹೋಗುವ ಹಲವಾರು ಪಾತ್ರಗಳು ಮತ್ತು ಅವರ ಕಥೆಗಳು. ರಾಜಕೀಯ, ಜಾತಿ, ಸಲಿಂಗ ಪ್ರೇಮ, ಅಂತರ್ಜಾತಿ ಸಂಬಂಧ, ಮದುವೆ ಇವೆಲ್ಲ ಅಂಶಗಳು ಕಥೆಯ ವಿವಿಧ ಭಾಗದಲ್ಲಿ ಬಂದು ಹೋಗತ್ತೆ. ಅಮ್ಮಿ ಅತ್ತೆ ಪಾತ್ರ ಯಾಕೋ ತುಂಬಾ ಹಿಡಿಸಿತು. ಪುಸ್ತಕದ ಮೊದಲಲ್ಲಿ ಕೊಟ್ಟ ಸಂಬಂಧಗಳ chart ಕಥೆಯ ಶುರುವಿನಲ್ಲಿ ತುಂಬಾ help ಆಗತ್ತೆ. ಹೋಗ್ತಾ ಹೋಗ್ತಾ ಅದ್ರ ಅವಶ್ಯಕತೆ ಕಮ್ಮಿ ಆಗ್ತಾ ಹೋಗತ್ತೆ.
This entire review has been hidden because of spoilers.
"ನಾರಾಯಣ ಭಟ್ಟ" ಹಾಗೂ "ಚಿರತೆ ಪದ್ದಣ್ಣ" ಅಧ್ಯಾಯಗಳು ಬಹಳ ರೊಮಾ೦ಚನಕಾರಿಯಾಗಿದೆ. ಅಷ್ಟು ದೊಡ್ಡ ಕುಟು೦ಬದ ಪ್ರತಿ ವಿಷಯವನ್ನು ಎಳೆ ಎಳೆಯಾಗಿ ಬಿಡಿಸಿದ ಪವನ್ ಪ್ರಸಾದ್ ರವರ ನಿರೂಪಣಾ ಶೈಲಿ ಸೊಗಸಾಗಿದೆ.
I liked this novel and the presentation. I am an admirer of Pawan's work and his style of writing. Rayakonda just didn't reach my expectations.
Rayakonda revolves around a big Brahmin family from the belts of Karnataka and Andhra Pradesh border. The story takes us on a journey by getting to know each and every character of the family and their tryst with the life's ups and downs. Each character adds his/her own way of importance to the plot. The Ammi character stands apart from the novel. Many bits and pieces of characters adds some mileage to the plot, down the line the plot just lost somewhere with illicit relationships of the family members with others, the Homosexuality, and deaths of many characters.
Overall, I feel like the novel was finished abruptly and could've expanded to few more pages. But, there is never a dull moment, the quirky dialogues or the Telugu/Kannada mixed way of speaking adds some fun while reading along.
I believe, given Pawan's way of narrating the story and his ability to build plot or characters he can do much better than this. Nevertheless, Rayakonda is not a must read, but a good read.
ಮಾನವ ಸ್ವಭಾವ ತುಂಬಾ ಸರಳ ಮತ್ತು ಸುಲಭ ಅಂತ ಅನ್ನಿಸಿದರೂ, ಇದು ಹಲವಾರು ರೀತಿಯಲ್ಲಿ ಸಂಕೀರ್ಣ ಮತ್ತು ಕ್ಲಿಷ್ಟಕರವಾಗಿದೆ. ನಮ್ಮ ನಡವಳಿಕೆಗಳು ಮನೆಗಳಲ್ಲಿ, ಸಾರ್ವಜನಿಕ ಸಂದರ್ಭದಲ್ಲಿ ಅಥವಾ ಸಾಮಾಜಿಕ ಸಂಪ್ರದಾಯಗಳ ಪ್ರಕಾರದಲ್ಲಿ ಬದಲಾಗುತ್ತದೆ. ಮಾನವರ ಈ ವಿಶಿಷ್ಟ ಸ್ವಭಾವವೇ ಪ್ರತಿಯೊಂದು ಕುಟುಂಬಗಳನ್ನ ಸಮಾಜದಲ್ಲಿ ವಿಭಿನ್ನಗೊಳಿಸುತ್ತದೆ. ಹೀಗೆ ಹತ್ತು ಹಲವು ದೋಷಗಳು ಮತ್ತು ವೈಶಿಷ್ಟ್ಯಗಳಿಂದ ತುಂಬಿದ ಪ್ರತಿಯೊಂದು ಕುಟುಂಬಕ್ಕೆ ಹೇಳಲು ತನ್ನದೇ ಆದ ಕಥೆಗಳು ಇವೆ.
ಅದರಲ್ಲಿ ಪವನ ಪ್ರಸಾದರವರ ಈ ಸುಂದರ ಕಾದಂಬರಿಯೂ ಒಂದು. ಮತ್ತು ಇಲ್ಲಿ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳ ಗಡಿಯಲ್ಲಿ ನೆಲೆಯಾದ ರಾಯಕೊಂಡದ ಒಂದು ಬ್ರಾಹ್ಮಣ ಕುಟುಂಬದ ಕಥೆಯನ್ನ ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ. ಇದು ದೇವಮ್ಮ ಮತ್ತು ರಾಮಪ್ಪ ದಂಪತಿಯ ಕುಟುಂಬದ ಮೂರು ಪೀಳಿಗಳನ್ನು ಒಳಗೊಂಡ ಕಥೆ. ದೇವಮ್ಮನ ಸಹೋದರ ನಾರಾಯಣ ಭಟ್ಟರ ಕಥೆಯೂ ಇದಕ್ಕೆ ಅವಿಭಾಜ್ಯವಾಗಿದೆ. ಇಲ್ಲಿ ಮುಖ್ಯ ಆಕರ್ಷಣೆಗಳೆಂದರೆ ದಂಪತಿಗಳ ನಾಲ್ಕು ಸುಪುತ್ರರು ಮತ್ತು ಏಕೈಕ ಮಗಳು ಪದ್ಮ, ಅಂದರೆ ಅಮ್ಮಿ. ನನಗೆ ಅಮ್ಮಿ ಅತ್ತೆ ಮತ್ತು ಪದಣ್ಣರ ಪಾತ್ರಗಳು ತುಂಬಾ ಇಷ್ಟವಾದವು. ಅಷ್ಟೇ ವಿರೋಧ ಕೆಲವು ಪಾತ್ರಗಳ ಮೇಲೆ ನನಗೆ ಮೂಡಿತು. ಮತ್ತು ಕೆಲವು ಪಾತ್ರಗಳಿಗೆ ಹೆಚ್ಚು ಆಳ ಮತ್ತು ವಿವರ ಬೇಕಾಗಿದೆ ಅಂತಲೂ ಅನ್ನಿಸಿತು.
ನೀವು ನನಗೆ ಕಥೆಯ ಸಾರಾಂಶವನ್ನು ಒಂದು ವಾಕ್ಯದಲ್ಲಿ ಹೇಳಲು ಕೇಳಿದರೆ, 'ಮಾಲತಿಯ ನಿಶ್ಚಿತಾರ್ಥದಿಂದ ಆರಂಭಗೊಂಡು ಅವಳ ಮದುವೆಯಲ್ಲಿ ಅಂತ್ಯವಾಗುವ action-packed ತೆಲುಗು ಕುಟುಂಬಿಕ ಚಿತ್ರದ ಕಥೆ!' ಅಂತ ಎನ್ನಬಹುದು. ಆದರೆ, ಇದು ಅಷ್ಟು ಸುಲಭವಿಲ್ಲ! ಈ ಕುಟುಂಬದ ಕಥೆಯಲ್ಲಿ ತುಂಬಾ ಸೂಕ್ಷ್ಮ, ಸಂಕೀರ್ಣ, ವಿಚಿತ್ರ, ಸಿನಿಮೀಯ, ಹಾಸ್ಯಾಸ್ಪದ ಮತ್ತು ಆಳವಾದ ಅಂಶಗಳಿವೆ. ಪ್ರತಿಯೊಂದು ಪಾತ್ರಗಳ ಜೀವನದಲ್ಲಿ ಇರುವ ಪರಿಸ್ಥಿತಿಗಳೂ ಬಹಳ ವಿಭಿನ್ನವಾಗಿದೆ. ನಾವೆಲ್ಲರೂ ದಿನನಿತ್ಯ ಜೀವನದಲ್ಲಿ ಹೇಗೆ ಬದುಕುತ್ತೇವೆಯೋ ಹಾಗೆ! ಆಂತರಿಕ ಮತ್ತು ಬಾಹ್ಯವೆಂಬ ಎರಡು ಜಗತ್ತುಗಳು, ಎಂಬಂತೆ!
ಹಾಗಾದಲ್ಲಿ, ಈ ಕಾದಂಬರಿ ಏಕೆ ವಿಶೇಷವಾಗುತ್ತೆ?! ಕಾರಣಗಳು ಸುಲಭ, ಪ್ರತಿಯೊಬ್ಬ ವಿಶಿಷ್ಟ ರೀತಿಯಲ್ಲಿ ಮೂಡಿಬರುವ ಪಾತ್ರದ developement ಹಾಗೂ ಅವಕ್ಕೆ ಹಿನ್ನೆಲೆ ಕಥೆಯನ್ನು ಸೂಕ್ಷ್ಮವಾಗಿ ಚಿತ್ರಿಸಿರುವುದು ಮತ್ತು ಪ್ರತಿಯೊಂದು ಪಾತ್ರದ ಪರಿಸ್ಥಿತಿಗಳನ್ನ ಬಹಳ ಜಾಣ್ಮೆಯಿಂದ ಸೃಷ್ಟಿಸಿರುವುದು ಮತ್ತು ಈ ಪಾತ್ರಗಳ ನಿರ್ಧಾರಗಳನ್ನ ಓದುಗರ ಮುಂದಿಟ್ಟು ಸವಾಲೆಸೆದಿರುವ ಪರಿ ತುಂಬಾ brilliant ಆಗಿ ಮೂಡಿ ಬಂದಿದೆ. ಸಮಾಜದ ದ್ವಮುಖವನ್ನ ಮತ್ತು ಕೆಲವು ನಿಷೇಧಗಳೆಡೆಗೆ ಬೆಳಕು ಮೂಡಿಸುವರು ಮತ್ತು ಪ್ರಶ್ನೆಯೂ ಮಾಡುವರು. ಉದಾಹರಣೆಗೆ Premarital relationship & conception, infidelity, religious barriers, queerness, number of taboos ಹೀಗೆ ಹತ್ತು ಹಲವು!. ವಿಚಾರಣೆಗಳಿಗೆ ಕೊರತೆಯೇ ಇಲ್ಲ ಈ ಅಮೋಘ ಕಾದಂಬರಿಯಲ್ಲಿ!
ಮೂರು ತಲೆಮಾರಿನ ಕತೆಯನ್ನ ಚೆನ್ನಾಗಿ ಹೇಳಿದ್ದಾರೆ ಪವನ್ ಪ್ರಸಾದರು. ಪಾತ್ರಗಳ ಮದ್ಯೆ ಜಗಳಕ್ಕೆ ತೆಲುಗು ವಾಕ್ಯಗಳು ಬಳಸಿರೋದು ನಮ್ಮಂತಹ ಮಲೆನಾಡ ಜನರಿಗೆ ಅರ್ತವೇ ಆಗೋಲ್ಲ :) ಆದರೆ ಏನೋ ಬೈದಿದ್ದರೆ ಅಂತ ಅಂದ್ಕೊಂಡು ಮುಂದೆ ಓದ್ಕೊತಾ ಹೋಗಬೇಕು. ಅಮ್ಮಿ ಅತ್ತೆ ಅಂತ ಗಟ್ಟಿ ಗಿತ್ತಿ ಹೆಣ್ಣು ಪ್ರತಿಯೊಂದು ವಂಶದಲ್ಲಿ ಇದ್ರೆ ಎಲ್ಲ ಕುಟುಂಬಗಳು ಎಂತಾ ಕಷ್ಟವನ್ನು ಬೇಕಾದ್ರೂ ಜೈಸಬಹುದು.
ಪುಸ್ತಕದ ಹೆಸರನ್ನು ಕೇಳಿದ ತಕ್ಷಣ ಇದೆಲ್ಲೋ ಒಂದು ತೆಲುಗು ಸಿನಿಮಾ ಎಂದನ್ನಿಸಬಹುದು. ತೆಲುಗು ಸಿನಿಮಾದ ಕೆಲವು ಅಂಶಗಳನ್ನು ಸೇರಿಸಿ ಒಂದೊಳ್ಳೆ ಸಾಂಸ್ಕೃತಿಕ, ಆಚಾರ , ವಿಚಾರ , ಆಚರಣೆಗಳ ಸಾಂಸಾರಿಕ ಚಿತ್ರಣ. ಕನ್ನಡ ಪುಸ್ತಕವಾದರೂ ನಡುನಡುವೆ ತೆಲುಗು ಪದಗಳು ಮತ್ತು ವಾಕ್ಯಗಳು ಸಂದರ್ಭಕ್ಕೆ ಸರಿಯಾಗಿ ಬಳಸಲಾಗಿದೆ ಮತ್ತು ಹಿತವಾಗಿದೆ. ಆಂಧ್ರಕ್ಕೆ ಗಡಿರೇಖೆಗೆ ಹೊಂದಿಕೊಂಡ ಕನ್ನಡ ಹಳ್ಳಿಗಳ ಮತ್ತು ಸ್ವಲ್ಪ ದೊಡ್ಡ ಊರುಗಳ ಜನರ ಜೀವನ ಶೈಲಿಗಳು, ಪದ್ದತಿಗಳು , ರಾಜಕೀಯ, ಜಾತಿ ವಿಷಯಗಳು , ಇಲ್ಲಿಂದ ಮುಂಬಂದು ನಗರ ಸೇರಿರುವ ಹೊಸ ತಲೆಮಾರಿನ ಆಲೋಚನೆಗಳು ಮತ್ತು ಜೀವನ ವಿಧಾನ. ಬಹುಷಃ ಒಂದೊಳ್ಳೆ ಸಾಂಸಾರಿಕ ಚಿತ್ರಣ, ಕೆಲವೊಂದು ಪಾತ್ರಗಳ ಕಷ್ಟಗಳು, ತ್ಯಾಗಗಳು ಮನಸ್ಸಿಗೆ ಹತ್ತಿರವಾಗುತ್ತೆ. ಲೇಖಕರ ಇತರೆ ಕಾದಂಬರಿಗಳಿಗಿಂತ ಈ ಪುಸ್ತಕ ಅದ್ಭುತವೆಂದೇನನಿಸಲಿಲ್ಲ.!!
ಕರಣಂ ಪವನ್ ಪ್ರಸಾದರ ಬರವಣಿಗೆ ನನಗೆ ಮೆಚ್ಚಿಗೆಯಾದ್ದು ಕರ್ಮದಿಂದಲೇ. ಅಲ್ಲಿಂದ ರಾಯಕೊಂಡದವರೆಗೆ ಅದು ಬೆಳೆದಿದೆ. ರಾಯಕೊಂಡ ಬಿಡುಗಡೆಯಾದಾಗ ಫೇಸ್ಬುಕ್ಕಿನಲ್ಲಿ ಬಂದ ಅನೇಕ ರಿವ್ಯುವ್ ಪೋಸ್ಟಗಳನ್ನ ನೋಡಿದ್ದೆನಾದರೂ ಪುಸ್ತಕ ಎತ್ತಿಕೊಂಡು ಓದುವ ಧೈರ್ಯ ಮಾಡಿರಲಿಲ್ಲ. ಅದಕ್ಕೆ ನನ್ನದೇ ಆದ ಓದಿನ ಹರಿವಿನ ಕಾರಣವೂ ಇದ್ದಿತು. *** ಕತೆ, ಕವಿತೆ, ಕಾದಂಬರಿ, ಪ್ರಬಂಧ ಹೀಗೆ ಎಲ್ಲದರಲ್ಲೂ ಕೈ ಆಡಿಸಿ ಕೊನೆಗೆ ಯಾವುದರಲ್ಲೂ ಯಶಸ್ಸು ಕಾಣದೆ ಬರೆಯುವುದನ್ನು ವೃತ್ತಿಯೆನ್ನುವಂತೆ ಮಾಡಿಕೊಳ್ಳುವ ಅನೇಕರಲ್ಲಿ ಕರಣಂರು ಅದರಾಚೆಗೆ ಸರಿದು ನಿಲ್ಲುತ್ತಾರೆ. ಕರಣಂರ ಕಾದಂಬರಿ ಬಗೆಗಿನ ವಿಶೇಷವಾದ ಅಸ್ಥೆ, ಗಂಭೀರತೆ, ಶ್ರದ್ದೆ ನನಗೆ ಹೆಚ್ಚಾಗಿ ಸೆಳೆಯುತ್ತದೆ.
ಅದೇ ಶ್ರದ್ಧೆಯನ್ನು ನಾನು ಈ ಕಾದಂಬರಿಯಲ್ಲಿ ಕಂಡೆ. ಕಾದಂಬರಿಯ ಆಳ ಸೂಕ್ಷ್ಮವಾದರೂ ಅರ್ಥ ಆಗದೆ ಇರುವಂಥಹದೆನಲ್ಲ. ಪ್ರಾರಂಭದಲ್ಲಿ ನೀಡಿರುವ Baruch Spinozaರ ಮಾತಿನಂತೆ ಇರುವ ಸತ್ಯ. *** ಹೆಚ್ಚೆನು ಹೇಳಲಾರೆ ಒಂದು ಒಳ್ಳೆಯ ಓದು. ಬಹುಶಃ ಆರಂಬದ ಓದುಗರಿಗೆ ಈ ಪುಸ್ತಕ ಓದಲು ಕಠಿಣವೆನ್ನಿಸಬಹುದು. ಆದರೆ ಓದಿನ ಅನುಭವ ಅದ್ಭುತ. ಈಗಲ್ಲದೆಯಾದರೂ ಮುಂದೆಯಾದರೂ ಓದಿ.
ಕರ್ನಾಟಕ ಮತ್ತು ಆಂಧ್ರದ ನಡುವೆ ಬರೋ ಈ ಕಾಲ್ಪನಿಕ ಹಳ್ಳಿಯ ಬ್ರಾಹ್ಮಣರ ಕುಟುಂಬವೊಂದರ ತಲೆಮಾರಿನ ಕಥೆ. ಸಂಭಾಷಣೆಗಳು ತೆಲುಗಿನಲ್ಲಿ (ಕನ್ನಡದ ಟೆಕ್ಸ್ಟ್‌ನಲ್ಲಿ) ಇದೆ. ಮಾಲತಿಯ ನಿಶ್ಚಿತಾರ್ಥದಿಂದ ಶುರುವಾಗೋ ಕತೆ ಮನೆಗಿನೆ, ಆಸ್ತಿಪಾಸ್ತಿ, ಬದುಕಿನ ಏರಿಳಿತ, ರಾಜಕೀಯ, ಜಾತಿ, ಸಲಿಂಗ ಪ್ರೇಮ, ಅಂತರ್ಜಾತಿ ಸಂಬಂಧ ಅಂತೆಲ್ಲ ಕುಟುಂಬದೊಂದು ರಾಜಕೀಯದ ಸುತ್ತ ಕರೆದುಕೊಂಡು ಹೋಗಿ ಮದುವೆಯಲ್ಲಿ ‘ಪುಲ್‌ಸ್ಟಾಪ್’ ಇಡುತ್ತೆ ಈ ಕಾದಂಬರಿ. ಓದೋಕೆ ಶುರುಮಾಡಿದಾಗ ಹೆಂಗ್ ಇಷ್ಟೆಲ್ಲ ಪಾತ್ರಗಳನ್ನ ನನ್ನ ಮೆದುಳಿಗೆ ತುಂಬ್ಸಿ ನೆನಪಿಡ್ಕೋ ಅನ್ನೋದು ಅಂದುಕೊಂಡೇ ಶುರುಮಾಡಿದ್ದು. ಹೋಗ್ತಾ ಹೋಗ್ತಾ ಪಾತ್ರಗಳು ಭಾರ ಅನಿಸಿದ್ರು ಓದೋಕೆ ಏನು ಅಡ್ಡಿಯಾಗಲಿಲ್ಲ. ಬರವಣಿಗೆ ಸಹ ಚೆನ್ನಾಗೇ ಓದಿಸಿಕೊಂಡು ಹೋಗುತ್ತೆ. ಕಾದಂಬರಿ ಬಹಳ ಗಂಭೀರ ಮ್ಯಾಟ್ರುದು ಅನಿಸಿದ್ರು ಓದು ಹಗುರವಾಗೇ ಇರುತ್ತೆ (lightweight). ಸಂಬಂಧ ಸೂಚಿ ಮೊದಲೇ ಕೊಟ್ಟಿದ್ದು ಯಾವುದ್ಯಾವುದೋ ಪಾತ್ರಗಳೆಲ್ಲ ಬಂದಾಗ ಒಂದು ಸಲ ಹಿಂದೆ ಬಂದು ಸೂಚಿನ ನೋಡ್ಕೊಂಡು ಓದೋಕೆ ಶುರುಮಾಡಿ. ಆಮೇಲಾಮೇಲೆ ಅವೆಲ್ಲ ಅಗತ್ಯ ಇರಲ್ಲ; ನಿಮ್ಗೆ ಇವ್ರು ಯಾರಮನೆಯವರು, ಯಾರಿಗೆ ಏನಾಗಬೇಕು ಅನ್ನೋದು ನೆನಪಿರುತ್ತೆ. ಚೆನ್ನಾಗಿದೆ ಓದಿ ಜೈ.
ಕರ್ನಾಟಕ - ಆಂಧ್ರಪ್ರದೇಶದ ಗಡಿಯಲ್ಲಿರುವ ರಾಯಕೊಂಡ ಎಂಬ ಊರಿನ ಒಂದು ಕುಟುಂಬದ ಸುಮಾರು ನಾಲ್ಕು ತಲೆಮಾರಿನ ಕಥಾನಕ. ಪದ್ಮ ಅಥವಾ ಅಮ್ಮಿ ಅತ್ತೆ ಕಥಾನಾಯಕಿ ಎನ್ನಬಹುದು. ಆಕೆಯ ಹಿಂದಿನ ತಲೆಮಾರಿನಿಂದ ಆರಂಭವಾಗುವ ಕಥೆ ಆಕೆಯ ಮೊಮ್ಮಗನ ತಲೆಮಾರಿನ ತನಕ ಸಾಗುತ್ತದೆ. ಮಾಲತಿ ಎಂಬುವವಳ ಮದುವೆಯ ಪ್ರಸ್ತಾಪದೊಂದಿಗೆ ಶುರುವಾಗುವ ಕಥೆ ಆಕೆಯ ಮದುವೆ ಆಗುವುದರೊಳಗೆ ಆಕೆಯ ಕುಟುಂಬದ ಸುಮಾರು ನಾಲ್ಕು ತಲೆಮಾರಿನ ಘಟನೆಗಳನ್ನು ಬಿಚ್ಚಿಡುತ್ತದೆ. ಲೇಖಕರು ಎಷ್ಟು ಚೆನ್ನಾಗಿ ಕಥೆ ಹೆಣೆಯುತ್ತಾರೆ ಎಂದರೆ ಸುಮಾರು ಹತ್ತು - ಹದಿನೈದು ಪಾತ್ರಗಳು ತಮ್ಮದೇ ಆದ ಬದುಕಿನ ಕಥೆ ಹೇಳಿದರೂ ಮೂಲ ಕಥೆಯಿಂದ ಬೇರೆ ಎನಿಸುವುದಿಲ್ಲ. ಈ ಎಲ್ಲಾ ಪಾತ್ರಗಳ ಜೀವನದ ಪ್ರಮುಖ ಘಟನೆಗಳಿಗೆ ಅಮ್ಮಿ ಅತ್ತೆ ಸಾಕ್ಷಿಯಾಗಿ ನಿಲ್ಲುತ್ತಾಳೆ. ಸುಮಾರು ೨೦೦ ಪುಟಗಳ ಪುಸ್ತಕ ತನ್ನಲ್ಲಿ ಹಲವಾರು ವಿಷಯಗಳನ್ನು ಹುದುಗಿಸಿಕೊಂಡಿದೆ. ಅದರಲ್ಲಿ ಕಾಲದೊಂದಿಗೆ ಆದ ಬದಲಾವಣೆ ಪ್ರಮುಖವಾದುದು. ಹಿಂದಿನ ಕಾಲದಲ್ಲಿದ್ದ ನೀರಿನ ಅಭಾವ ಹಾಗೂ ಇವತ್ತು ರಾಯಕೊಂಡದಲ್ಲಿರುವ ನೀರಿನ ಲಭ್ಯತೆ ಒಂದು ರೀತಿಯಲ್ಲಿ ಗತಿಸಿ ಹೋದ ಕಾಲವನ್ನು ಬಿಂಬಿಸುತ್ತದೆ. ಒಟ್ಟಾರೆಯಾಗಿ ಹಲವಷ್ಟು ಪಾತ್ರಗಳು, ಮೂಲ ಕಥೆಗೆ ಅಂಟಿಕೊಂಡ ಅವುಗಳ ಪ್ರತ್ಯೇಕ ಕಥೆ ಪುಸ್ತಕವನ್ನು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
This entire review has been hidden because of spoilers.