ಸಂತಸ, ನನ್ನೆದೆಯ ಹಾಡು ಹಕ್ಕಿ "ಬದುಕು ಬದಲಿಸಬಹುದು" ಸರಣಿಯ ನಾಲ್ಕನೇ ಬುಕ್. ಇಡೀ ಪುಸ್ತಕ ಆಸಕ್ತಿದಾಯಕ ಮತ್ತು ಸಂಗ್ರಹಯೋಗ್ಯ ಮಾಹಿತಿಗಳಿಂದ ತುಂಬಿದೆ. ಇರುವ ಮೂವತ್ತೊಂದು ಶೀರ್ಷಿಕೆಗಳಲ್ಲಿ 6-7 ಬರಹಗಳು ಕ್ಯಾನ್ಸರ್ ಸರ್ವೈವರ್ಸ್, ಮಿಸ್ ಡಯಾಗ್ನೋಸಿಸ್, ಪರ್ಯಾಯ ಚಿಕಿತ್ಸೆ, ಆಹಾರ ಮತ್ತು ಜೀವನ ಕ್ರಮ ಹೀಗೆ ಕ್ಯಾನ್ಸರ್ ಸುತ್ತಲೇ ಇವೆ. ನಾಲ್ಕು ಬರಹಗಳು ಹಾಲೊಕಾಸ್ಟಿಗೆ ಸಾಕ್ಷಿಯಾಗಿರುವ ಜರ್ಮನ್ ಸ್ಥಳಗಳು ಅಲ್ಲಿನ ಹಿಂದಿನ ಮತ್ತು ಈಗಿನ ಸ್ವರೂಪಗಳ ಕುರಿತು ಹಾಗೂ ಮಿಕ್ಕವು ಅಪರೂಪದ ವಿಶಿಷ್ಟ ವ್ಯಕ್ತಿಪರಿಚಯ, ಸಹಜ ಕೃಷಿ, ಸರೋಗೆಸಿ, ಪರಿಸರ ಕಾಳಜಿ, ವ್ಯಕ್ತಿತ್ವ ವಿಕಸನ ಇತ್ಯಾದಿ ಯಾದೃಚ್ಛಿಕ ಜೀವನಪ್ರೀತಿಯ ಸ್ಪೂರ್ತಿದಾಯಕ ಬರಹಗಳ ಗುಚ್ಛವೇ ಇಲ್ಲಿದೆ. I loved it.
ನೇಮಿಚಂದ್ರರ ಬಗ್ಗೆ ಹೊಸದೇನೂ ಹೇಳಬೇಕಾದ್ದಿಲ್ಲ. ಯಾದ್ ವಶೇಮ್‌ನಂತಹ ಕಾದಂಬರಿ, ನೋವಲ್ಲದ್ದಿದ ಕುಂಚ ದಂತಹ ಜೀವನ ಕಥನ, ಬದುಕ ಬದಲಿಸಬಹುದು ಸರಣಿಯ ಮೂರು ಪುಸ್ತಕಗಳು ಓದದ ಸಹೃದಯ ಬಳಗ ಕಡಿಮೆ.
ಇದು ಆ ಸರಣಿಯ ಕೊನೆಯ ಪುಸ್ತಕ. ಇದೆಲ್ಲವೂ ಉದಯವಾಣಿ ಪ್ರಕಟಿತ ಅಂಕಣ ಬರಹಗಳ ಸಂಗ್ರಹ. ಈ ಸಂಗ್ರಹದ ಮುಖ್ಯ ಲೇಖನಗಳು ಕ್ಯಾನ್ಸರ್ ಎಂಬ ಮಾರಕ ಖಾಯಿಲೆಯ ಉಪಚಾರ, ಅನುಭವ ಇವುಗಳ ಸುತ್ತಲೂ ಸುತ್ತುತ್ತದೆ. ಮಾಹಿತಿ ಮತ್ತು ಭಾವನೆಗಳ ಹದವಾಗಿ ಬೆರೆಸಿ ನೇಮಿಚಂದ್ರ ಬರೆವ ಲೇಖನಗಳಲ್ಲಿ ಜೀವದ್ರವ್ಯ ಇರುವ ಕಾರಣವೇ ಅವು ತಾಕುತ್ತದೆ. ಸಾಧ್ಯವಾದರೆ ಬದುಕ ಬದಲಿಸಬಹುದು ಸರಣಿಯ ನಾಲ್ಕೂ ಪುಸ್ತಕಗಳ ಓದಿ ,ಓದಿಸಿ.
ಚೆನ್ನಾಗಿದೆ. 31 ಕಥೆಗಳ ಸಂಕಲನ. ಸರಣಿಯ ಉಳಿದ 3 ಪುಸ್ತಕಗಳಂತೆ ಇದು ಸಹ ನೈಜ ಘಟನೆಗಳ ಕಥೆಗಳು. ಬಹಳಷ್ಟು ವಿಚಾರಗಳನ್ನ ತಿಳ್ಸಿದ್ದಾರೆ. ಹಲವು ಒಳ್ಳೆ ಒಳ್ಳೆ books reference ಕೊಟ್ಟಿದ್ದಾರೆ. ಹೆಚ್ಚು ಕಮ್ಮಿ ಎಲ್ಲ ಕಥೆಗಳು positivity ಹಾಗೂ ನಾವು ಜೀವನದಿಂದ ಏನು ಕಲಿಯಬಹುಫು ಎನ್ನುವುದರಲ್ಲಿ ಮುಗಿಯತ್ತೆ. ಆದ್ರೆ ಕೆಲವು ಕಥೆಗಳು ಓದಿದಾಗ ತಲೆ ಧಿಮ್ಮ್ ಅನ್ನಸಿತು. ಆರೋಗ್ಯ, cancer ವಿಚಾರಗಳು ತುಂಬಾ deep ಆಗಿ study ಮಾಡಿ ಬರ್ದಿದ್ದಾರೆ.