Jump to ratings and reviews
Rate this book

ಬಿದಿರಿನ ಗಳ

Rate this book

240 pages, Paperback

First published January 1, 2019

1 person is currently reading
45 people want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
20 (57%)
4 stars
14 (40%)
3 stars
0 (0%)
2 stars
1 (2%)
1 star
0 (0%)
Displaying 1 - 13 of 13 reviews
Profile Image for Sanjay Manjunath.
195 reviews10 followers
July 11, 2023
ಅಪ್ಪಟ ಗ್ರಾಮ್ಯ ಭಾಷೆಯ ಸೊಗಡನ್ನು ಒಳಗೊಂಡಿರುವ ಕಾದಂಬರಿ ಬಿದಿರಿನ ಗಳ.

ಕಥೆ ಸಾಗುವುದು ಹಳ್ಳಿಯ ಪರಿಸರದಲ್ಲಿ. ಕಥೆಯ ಗಾತ್ರ ಕೂಡ ತುಂಬ ದೊಡ್ಡದಲ್ಲ. ಒಂದು ಹಳ್ಳಿ, ಅದರೊಳಗಿನ ಜಾತಿ ಸಂಘರ್ಷ, ಅಸೂಯೆ, ಜೊತೆಗೆ ಪ್ರೀತಿ, ಕರುಣೆ, ಸಂಬಂಧಗಳು ಎಲ್ಲವೂ ಇದೆ. ಎಲ್ಲವೂ ಹದವಾಗಿದೆ. ಎಲ್ಲಿಯೂ ಹೆಚ್ಚು-ಕಡಿಮೆ ಇಲ್ಲ.

ಆದರೆ ಕಾದಂಬರಿ ವಿಭಿನ್ನವಾಗಿ ನಿಲ್ಲುವುದು "ವಾಮಾಚಾರ"ದ ಪ್ರಯೋಗಗಳು ಹೇಗೆಲ್ಲಾ ಇವೆ, ಅದರ ಸಾಧಕ ಬಾಧಕಗಳೇನು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಓದುಗನಿಗೆ ಕೊಟ್ಟಿರುವುದರಿಂದ.

ನಾನು ವಾಮಾಚಾರದ ಕುರಿತಾದ ಕಾದಂಬರಿಗಳನ್ನು ಓದಿಲ್ಲ. ಕಥೆಗಳನ್ನು ಕೇಳಿದ್ದೀನಿ. ಓದಿದ್ದೀನಿ. ಆದರೆ ಇದನ್ನು ಓದಿದ ಮೇಲೆ ಇಷ್ಟು ಕರಾರುವಕ್ಕಾಗಿ ಹೀಗೆ ಇದೆಯೇ!? ಎಂದು ಅನಿಸಿದ್ದು ಸುಳ್ಳಲ್ಲ. ಮತ್ತು ಸ್ವಂತ ಅನುಭವ ಇಲ್ಲದೆ ಹೀಗೆ ಬರೆಯುವುದು ಸಾಧ್ಯವೇ!? ಎಂದು ಅನಿಸಿತು.

ಹಾಗಂತ ವಾಮಾಚಾರವೇ ಎಲ್ಲವೂ ಆಗಿಲ್ಲ ಇಲ್ಲಿ. ಮಾನವನ ಸಹಜ ನಂಬಿಕೆಗಳು, ನಡವಳಿಕೆಗಳು, ದ್ವೇಷ, ಪ್ರೀತಿ ಎಲ್ಲವೂ ಸಹಜ ಸುಂದರವಾಗಿ ಚಿತ್ರಿತವಾಗಿದೆ. ಅದರಲ್ಲಿ ನನಗೆ ಅತಿ ಹೆಚ್ಚು ಹಿಡಿಸಿದ್ದು ಕತೆಯಲ್ಲಿ ಬರುವ ಗ್ರಾಮ್ಯಭಾಷೆ.

ಕತೆಯ ಬಗ್ಗೆ ಜಾಸ್ತಿ ಹೇಳಿದರೆ ಅದರ ಸ್ವಾರಸ್ಯ ಹಾಳುಗೆಡವಿದಂತಾಗುತ್ತದೆ. ಒಂದು ಹತ್ತು ಪುಟಗಳ ದಾಟುವ ಹೊತ್ತಿಗೆ ತಿಪ್ಪನಾಯಕನ ಹಳ್ಳಿಯ ಜನರಲ್ಲಿ ನೀವು ಒಬ್ಬರಾಗಿರುತ್ತೀರಿ. ಕಥೆ ಮುಗಿಯೋ ಹೊತ್ತಿಗೆ ರಾಘವ, ಕೃಷ್ಣಪ್ಪ, ನರಸಪ್ಪ, ಗೌರಮ್ಮ, ನಂಜಮ್ಮ, ವೆಂಕಟಸ್ವಾಮಿ, ಗಣಾಚಾರಿ, ಸುಬ್ಬಾಚಾರಿ, ರುದ್ರೇಗೌಡ, ಶಿವೇಗೌಡ ಇವರೆಲ್ಲರು ಜೊತೆಯಾಗಿರುತ್ತಾರೆ.

ಗಣಾಚಾರಿಯ ಶವಸಂಸ್ಕಾರ, ನರಸಪ್ಪ ಶೃಂಗೇರಿಯಿಂದ ಕಾಡುಮೇಡು ಅಲೆಯುತ್ತಾ ವಾರಣಾಸಿ ತಲುಪುವ ಹೊತ್ತಿಗೆ, ಅವನಿಗೆ ಸಿಕ್ಕ ಗುರುಗಳು ಮಾಡುವ ವಿವಿಧ ಕ್ರಿಯೆಗಳು ಮತ್ತು ಕಥೆಯ ಕೊನೆಯ ಘಟ್ಟ. ಇವಿಷ್ಟು ಮರೆಯಲಾಗದ ಸನ್ನಿವೇಶಗಳು ನನಗೆ.

ಒಟ್ಟಿನಲ್ಲಿ , ನಮ್ಮ ತಾತಂದಿರು ಹೇಳುತ್ತಿದ್ದ ದೆವ್ವಪಿಶಾಚಿಗಳ ಕಥೆಗಳನ್ನು ಹೇಗೆ ಕಿವಿಗೊಟ್ಟ ಆಲಿಸುತ್ತಿದ್ದೆವೋ ಹಾಗೆ ಈ ಕೃತಿಯಲ್ಲಿ ಒಂದು ಶತಮಾನದ ಹಿಂದಕ್ಕೆ ಹೋಗಿ ಅದೇ ದೆವ್ವಪಿಶಾಚಿಗಳ ಜೊತೆಗೆ ವಾಮಾಚಾರದ ಪರಿಸರವನ್ನು ಹೊಕ್ಕು ಬಂದ ಅನುಭವವಾಗುತ್ತದೆ. ಉತ್ತಮ ಕೃತಿ.
Profile Image for Soumya.
217 reviews49 followers
July 11, 2022
ಒಂದೊಳ್ಳೆ horror film ನೋಡಿದ ಹಾಗೆ ಇತ್ತು.

Goodreads ಸಹ ಓದುಗರ review ನೋಡಿ ಓದಲು ಶುರು ಮಾಡಿದ ಪುಸ್ತಕ.

ಪುಸ್ತಕದ ಬಹುಪಾಲು ಕುಣಿಗಲ್ ಸುತ್ತಮುತ್ತಲಿನ ಊರಿನ ಗ್ರಾಮ್ಯ ಭಾಷೇಲಿ ಇದೆ. ಆ ಭಾಷೆಯ ಸಲುವಾಗಿ starting ಅಲ್ಲಿ ಸ್ವಲ್ಪ ನಿಧಾನ ಗತಿ ಅಲ್ಲಿ ಇದ್ದ ಓದು, ಹೋಗ್ತಾ ಹೋಗ್ತಾ ಆ ಭಾಷೆಗೆ ಒಗ್ಗಿ ವೇಗ ತೋಗೊಳ್ತು.

ಇಡೀ ಪುಸ್ತಕದಲ್ಲಿ ಹಳ್ಳಿಗರ ಮನೋಭಾವ, ಹಳ್ಳಿ ಜೀವನವನ್ನ ಎತ್ತಿ ಹಿಡಿದಿದೆ. ಮೂರು ತಲೆಮಾರಿನ ಕಥೆ ಹೇಳಿದ್ದಾರೆ.
ಎಲ್ಲಕಿಂತ ನಂಗೆ ಪುಸ್ತಕದಲ್ಲಿ ಬಹಳ ಇಷ್ಟ ಆಗಿದ್ದು ಹಳ್ಳಿ ಹೆಣ್ಣು /ಹೆಂಗಸರ ಪಾತ್ರಗಳ ಚಿತ್ರಣ. ಪ್ರತಿಯೊಬ್ಬ ಹಳ್ಳಿ ಹೆಂಗಸು ಕೂಡ ತನ್ನದೇ ರೀತಿಯಲ್ಲಿ super woman.

ಪುಸ್ತಕದ ಕೊನೆ ಸೂಪರ್, ಆದ್ರೆ ಮನಸ್ಸಿಗೆ ಒಂತರ ಬೇಜಾರು.. ಹೀಗೆ ಆಗ ಬೇಕಿತ್ತಾ ಕೊನೆಯಲ್ಲಿ , ಪಾಪ ಅನ್ಸಿತು.

ಚೆನ್ನಾಗಿ ಓದಿಸಿಕೊಂಡು ಹೋಗುವಂತ ಪುಸ್ತಕ.
Profile Image for Karthik.
61 reviews19 followers
December 18, 2021
‘ಬಿದಿರಿನ ಗಳ’ ಪುಸ್ತಕದ ಬಗ್ಗೆ ಕಳೆದ ವರ್ಷ ಇನ್ಸ್ಟಾಗ್ರಾಮ್ ನಲ್ಲಿ ಗೆಳೆಯರೊಬ್ಬರು ಬರೆದಿದ್ದನ್ನು ಓದಿದ್ದೆ. ಆಗಿನಿಂದಲೇ ಈ ಪುಸ್ತಕದ ಬಗ್ಗೆ ಸೆಳೆತ ಆರಂಭವಾಗಿತ್ತು. ನನ್ನ ರೀಡಿಂಗ್ ಲಿಸ್ಟ್ ಅನ್ನು ಸೇರಿದ ಪುಸ್ತಕ , ಲಿಸ್ಟ್ ನಿಂದ ಹೊರಬಂದು ನಮ್ಮ ಪುಟ್ಟ ಪುಸ್ತಕದ ಶೆಲ್ಫ್ ಸೇರಲು ಒಂದು ವರ್ಷದ ಮೇಲೆಯೇ ಹಿಡಿಯಿತು. ನವಕರ್ನಾಟಕ ಪುಸ್ತಕ ಮಳಿಗೆಯಿಂದ ಪುಸ್ತಕ ಕೊಂಡ ದಿನವೇ ಕೂತು ಓದಲು ತೊಡಗಿದೆ.

ಮೊದಲ ಪುಟ ದಿಂದಲೇ ಯಾವುದೋ ನಿಗೂಢ ಲೋಕ ಪ್ರವೇಶಿಸಿದ ಅನುಭವ. ಮಂತ್ರ-ತಂತ್ರ-ಸಿದ್ಧಿಗಳ ನಿಗೂಢ ಲೋಕ. ಬೆಂಗಳೂರಿನಿಂದ ಬಂದ ರಾಘವನಿಗೆ ಎದುರಾದ ಸಂಕಷ್ಟವನ್ನು ಕಳೆಯಲು ಕಾರ್ಯ ಸಿದ್ಧರಾದ ಕೃಷ್ಣಪ್ಪ ಕೆಲ ಸನ್ನಿವೇಶಗಳಿಂದ ತನ್ನ ತಂದೆಯವರ ಕಾಲವನ್ನು ಮೆಲುಕು ಹಾಕುತ್ತಾ ಹೋದಂತೆ ಕಥೆ ವಿಶೇಷ ಅನುಭವ ನೀಡುತ್ತಾ ಸಾಗುತ್ತದೆ.

ಕಥೆಯ ಮುಖ್ಯ ಅಂಶ ವಿರುವುದು ಈ ಭಾಗದಲ್ಲಿ. ಕೃಷ್ಣಪ್ಪರ ತಂದೆಯವರಾದ ನರಸಪ್ಪರ ಹಠ-ಸಿದ್ಧಿ, ತಾಂತ್ರಿಕ ಲೋಕದ ಆಚರಣೆ, ಶಕ್ತಿ ಸಾಧನೆಗೆ ಅವರು ಕಂಡುಕೊಂಡ ದಾರಿಯನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ಹಾಗೂ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ. ಕೆಲವೊಂದು ಘಟನೆಯಂತೂ ಮನಕಲಕುವಂಥದ್ದು. ಗಣಾಚಾರಿಯ ದೇಹ-ದಹನ ಕಾರ್ಯವ ಊಹಿಸಿಕೊಂಡು ನಡುಕ ಹುಟ್ಟಿತ್ತು.

ನರಸಪ್ಪನವರು ಕಾಶಿಗೆ ತೆರಳಿ ಅಲ್ಲಿನ ಗುರುಗಳೊಂದಿಗೆ ನಡೆಸಿದ ಜೀವನ ಹುಬ್ಬೇರಿಸುವಂಥದ್ದು. ತನ್ನ ಹಸುವನ್ನು ಕೊಂದ,ತೋಟದಲ್ಲಿ ನೆಟ್ಟಿದ್ದ ತೆಂಗಿನ ಸಸಿಯನ್ನು ನಾಶಗೊಳಿಸಿದ ವ್ಯಕ್ತಿಗಳನ್ನು ತನ್ನ ಶಕ್ತಿಯಿಂದಲೇ ಕೊನೆಗೊಳಿಸುವ ನರಸಪ್ಪ ರದ್ದು ಅದೆಂತ ಸಾಧನೆ!!

1900-1970 ರ ಕಾಲಘಟ್ಟದಲ್ಲಿ ಮೂರು ತಲೆಮಾರುಗಳ ನಡುವೆ ನಡೆಯುವ ಈ ಕಾದಂಬರಿಯಲ್ಲಿ ರಾಜಕೀಯವಿದೆ , ನಂಜಯ್ಯ-ಮರಿಯಣ್ಣ ನಂತವರು ಕಾರುವ ದ್ವೇಷವಿದೆ , ಪಟೇಲ್ ರುದ್ರೇಗೌಡ – ನರಸಪ್ಪ ರ ನಡುವಿನ ಸ್ನೇಹದ ಅನಾವರಣವಿದೆ, ಮಂತ್ರ-ತಂತ್ರಗಳ ಸಿದ್ಧಿ-ಸಾಧನೆಗಳ ಘೋರ ಚಿತ್ರಣವೂ ಇದೆ.

ಕಾದಂಬರಿಯ ಪಾತ್ರಗಳು ಬಹಳ ದಿನ ನೆನಪಿನಲ್ಲಿ ಉಳಿಯುವಂಥದ್ದು . ನರಸಪ್ಪರ ಯೋಚನೆಯಲ್ಲಿ ಕೆಲ ಕಾಲ ಕಳೆದಿದ್ದೇನೆ, ಹಾಗೂ ನನಗೆ ಅರಿವಿಲ್ಲದಂತೆ ಗೌರವೂ ಬೆಳೆದಿದೆ. ಅವರು ನಿಜವಾಗಿಯೂ ಇದ್ದಿರಬಹುದೇ ಎಂಬ ಪುಟ್ಟ ಸಂಶಯವೂ ಕಾಡಿದೆ ! such a mysterious character!

238 ಪುಟಗಳ ಸುಂದರ ಕಾದಂಬರಿ ಇದು. ಪ್ರತಿ ಸಾಲನ್ನು ಸೂಕ್ಷ್ಮವಾಗಿ ನೇಯಲಾಗಿದೆ. ಎಲ್ಲೂ ಬೋರು , ಬೇಜಾರು ಅನಿಸಿಲ್ಲ.
ನಿಗೂಢತೆಯ ಲೋಕದಲ್ಲಿ ಹಳ್ಳಿ ಸೊಗಡಿನ ಕುಸುರಿಯಲ್ಲಿ ಅದ್ಭುತವಾಗಿ ಕಥೆಯನ್ನು ಸೃಜಿಸಿದ Raghu Venkatachalaiah ರಿಗೆ ಧನ್ಯವಾದಗಳು.

ಕಾರ್ತಿಕ್ ಕೃಷ್ಣ
24.7.2021
172 reviews20 followers
November 8, 2020
ಪುಸ್ತಕ:ಬಿದಿರಿನ ಗಳ

ಲೇಖಕರು:ರಘು ವೆಂಕಟಾಚಲಯ್ಯ

ಪ್ರಕಾಶಕರು:ಸಮನ್ವಿತ ಪ್ರಕಾಶನ,ಬೆಂಗಳೂರು


ಮಾಂತ್ರಿಕ ಜಗತ್ತಿನ ನಿಗೂಢತೆಯನ್ನು, ವಿಸ್ಮಯಗಳನ್ನು ಮತ್ತು ಆಚಾರ ವಿಚಾರಗಳನ್ನು ಕುರಿತಾದ ಕಾದಂಬರಿ. ಇಲ್ಲಿ ಬಳಸಿರುವ ಭಾಷೆ ಕಥಾಹಂದರಕ್ಕೆ ಇನ್ನಷ್ಟು ಸೊಗಸನ್ನು ತುಂಬಿದೆ. ಕಾದಂಬರಿಯು ಕುತೂಹಲಕಾರಿಯಾಗಿದೆ ಮತ್ತು ರೋಚಕತೆಯಿಂದ ಕೂಡಿದೆ.


ಮಂತ್ರ-ತಂತ್ರಗಳು,ವಾಮಪ್ರಯೋಗ,ಶಕ್ತಿಗಳನ್ನು ಒಲಿಸಿಕೊಂಡು ಕೈವಶ ಮಾಡಿಕೊಳ್ಳುವುದು,ಇಷ್ಟಾರ್ಥ ಸಿದ್ಧಿಗಾಗಿ ಅವುಗಳ ಬಳಕೆ ಮತ್ತು ದುರ್ಬಳಕೆ, ಕೊಂಚ ಎಡವಿದರೂ ಸಾಧಕನಿಗೆ ಒದಗಬಹುದಾದ ಅಪಾಯಗಳು,ಸಿಧ್ಧಿಯನ್ನು ಕರಗತ ಮಾಡಿಕೊಳ್ಳಲು ಅನುಸರಿಸಬೇಕಾದ ಪೂಜಾ ವಿಧಾನಗಳುಮತ್ತು ಬಳಸುವ ಪರಿಕರಗಳು,ಪ್ರತಿತಂತ್ರಗಳ ಬಳಕೆ ಮುಂತಾದವುಗಳ ಚಿತ್ರಣವಿದೆ. ಇಷ್ಟೇ ಅಲ್ಲದೇ ಸರಿ ಸುಮಾರು ಅರವತ್ತರ ದಶಕದ ಹಳ್ಳಿಯೊಂದರ ಬದುಕಿನ ವಿವಿಧ ಮಜಲುಗಳನ್ನು ಕೃತಿ ಒಳಗೊಂಡಿದೆ. ಎಲ್ಲ ಕಾಲದಲ್ಲೂ ಯಾವ ಜಾಗದಲ್ಲೂ ಕಾಣಬರುವ ಮನುಷ್ಯ ಸಂಬಂಧಗಳ ಸೂಕ್ಷ್ಮತೆಗಳನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.


ಬಹುಶಃ ಎಲ್ಲರಿಗೂ ಮಾಂತ್ರಿಕ ಲೋಕದ ಚಿಕ್ಕ ಪರಿಚಯ ಖಂಡಿತವಾಗಿಯೂ ಇರುತ್ತದೆ.ಕೆಲವು ಕೇಳಿದ್ದು ಇನ್ನೂ ಕೆಲವು ಸ್ವತಃ ಅನುಭವಕ್ಕೆ ಬಂದದ್ದು.ಆದರೆ ಸಾಧಕನಾಗಲು ಬಳಸುವ ಮಾರ್ಗಗಳು, ಅನುಸರಿಸಬೇಕಾದ ಆಚಾರ ವಿಚಾರಗಳನ್ನು ಕಾದಂಬರಿಯು ತೆರೆದಿಡುತ್ತದೆ.ಯಾವುದೇ ವಿದ್ಯೆಯಾಗಲಿ ಅದನ್ನು ಸಾರಾಸಗಟಾಗಿ ಕೆಟ್ಟದ್ದು ಎನ್ನಲು ಬರುವುದಿಲ್ಲ. ನಾವು ಅದನ್ನು ಯಾಕೆ ಮತ್ತು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಒಳಿತು ಕೆಡುಕುಗಳ ನಿರ್ಧಾರವಾಗುತ್ತದೆ ಎಂಬ ಅಂಶ ಓದು ಮುಗಿದಾಗ ಸ್ಪಷ್ಟವಾಗಿ ಗೋಚರಿಸುತ್ತದೆ.


ನಿಜವಾಗಿಯೂ ಮಂತ್ರ-ತಂತ್ರಗಳು,ವಾಮಾಚಾರಗಳನ್ನು ನಂಬಬಹುದೇ? ಅಲೌಕಿಕ ಸಿದ್ಧಿಯನ್ನು ಗಳಿಸಿಕೊಂಡು ನಮಗೆ ಬೇಕಾದ ರೀತಿಯಲ್ಲಿ ಬಳಸಬಹುದೇ? ಗೊತ್ತಿಲ್ಲ. ಇದು ನಮ್ಮ ನಂಬಿಕೆಗಳು ಮತ್ತು ಅನುಭವಗಳಿಗೆ ಬಿಟ್ಟ ವಿಚಾರ. 


ನಮಸ್ಕಾರ,

ಅಮಿತ್ ಕಾಮತ್


 
Profile Image for Aadharsha Kundapura.
58 reviews
December 20, 2022
ನಿಜಕ್ಕೂ ಅದ್ಭುತವಾದ ಪುಸ್ತಕ. ಖಂಡಿತವಾಗಿಯೂ ಭಯನಕ ಅನುಭವವನ್ನು ಕೊಡುತ್ತದೆ.
ಮೂರು ತಲೆಮಾರಿನ ಕಾಲ���ಟ್ಟದಲ್ಲಿ ಸಾಗುವ ಕತೆಯು ಮಾಟ, ಮಂತ್ರ, ವಾಮ ಪ್ರಯೋಗ, ಪ್ರತಿತಂತ್ರಗಳನ್ನೊಳಗೊಂಡಿದೆ. ದ್ವೇಷ ಸಾಧನೆಗೆ ದೇವತೆಗಳನ್ನೊಲೊಸಿಕೊಂಡು ತನ್ನ ರಕ್ಷಣೆಗೆ ವಾಮ ಪ್ರಯೋಗ ಮಾಡುವುದು ಅಲ್ಲದೆ ಬೇರೆ ಯಾವ ಕೆಟ್ಟ ಉದ್ದೇಶಗಳಿಗೂ ಉಪಯೋಗಿಸದಿದ್ದರೆ ಮಾಟ ಮಂತ್ರ ಒಂದು ಪ್ರದೇಶದ ದುಷ್ಟ ಶಕ್ತಿಗಳನ್ನು ಅಳಿಸಿ ಅಲ್ಲಿನ ಸಮತೋಲನ ಕಾಪಾಡುತ್ತದೆ ಎಂದು ತಿಳಿಸ ಹೊರಟಿದ್ದಾರೆ ಲೇಖಕರು.
ಒಮ್ಮೆಯಾದರೂ ಒದಲೇ ಬೇಕಾದ ಪುಸ್ತಕ.
8.5/10⭐

ಬಿದಿರಿನಗಳ
🖊ರಘು ವೆಂಕಟಾಚಲಯ್ಯ.
Profile Image for That dorky lady.
371 reviews70 followers
August 21, 2020
The book that can give goosebumps from page one! ಮಾಟ- ಮಂತ್ರ- ತಂತ್ರವಿದ್ಯೆಯ ವಿವರಣೆಗಳು ಭಯ ಹುಟ್ಟಿಸುವಷ್ಟಿವೆ. ತೆಲುಗಿನ ತುಳಸಿ, ತುಳಸೀದಳ, ಅಷ್ಟಾವಕ್ರ ಎಲ್ಲ ನೆನಪಾದವು.
Profile Image for Dr. Arjun M.
17 reviews8 followers
January 6, 2021
An amazing story spanning over three generations that takes you on a journey to a South Indian village filled with hatredness, casteism, theft and equally with love, friendship and SACRIFICE. The authors delicately bridges philosophy with black magic. I am sure you will be hooked to the story till the end.
Profile Image for Sowmya K A Mysore.
40 reviews34 followers
November 8, 2020
ಒಮ್ಮೆ ಹಿಡಿದರೆ ಮತ್ತೆ ಬಿಟ್ಟು ಎದ್ದೇಳಲಾಗದಂತೆ ಓದುಗರನ್ನು ಕಟ್ಟಿ ಹಿಡಿಯುವ ಕಾದಂಬರಿ.. ಬಹಳ ಸೊಗಸಾಗಿದೆ
Profile Image for Raghavendra Shekaraiah.
34 reviews
January 22, 2025
ತುಂಬಾ ದಿನಗಳ ನಂತರ ಒಂದು ತಾಂತ್ರಿಕ ಕಥೆ ಓದಿದ್ದು. ಪುಸ್ತಕ ಕೈಗೆ ಸಿಕ್ಕ ಮೇಲೆ ಕೆಳಗಿಡಲೇ ಆಗಲಿಲ್ಲ, ಅಷ್ಟೊಂದು ರೋಚಕವಾಗಿತ್ತು.

ಒಂದು ಹಳ್ಳಿ ಮತ್ತು ಅಲ್ಲಿನ ಜನರ ಸುತ್ತ ನಡೆಯುವ ಕಥೆ ಇದು. ಮೂರು ಪೀಳಿಗೆಗಳ ಕಥೆ ಇಲ್ಲಿ ಅನಾವರಣಗೊಳ್ಳುತ್ತದೆ. ನಾನು ಈ ಹಿಂದೆ ಅನೇಕ ತಾಂತ್ರಿಕ ಕಾದಂಬರಿಗಳನ್ನು ಓದಿದ್ದೇನೆ, ಆದರೆ ಇದು ಬೇರೆಯದೇ ಶೈಲಿಯಲ್ಲಿದೆ. ಇಂದಿರಾತನಯ ಅವರ ಬರವಣಿಗೆಯ ಶೈಲಿಯನ್ನು ನೆನಪಿಸುತ್ತದೆ.
ಕಥೆಯಲ್ಲಿ ನಡೆಯುವ ಪ್ರಮುಖ ಘಟನೆಗಳಿಗೆ ಜಾತಿ ತಾರತಮ್ಯವೇ ಕಾರಣ ಎಂದು ಭಾಸವಾಗುತ್ತದೆ. ಅನೇಕ ಕಡೆ ಗ್ರಾಮ್ಯ ಭಾಷೆಯ ಬಳಕೆ ಇದೆ. ಓದುತ್ತಿರುವಾಗ ಘಟನೆಗಳು ನಮ್ಮ ಮುಂದೆಯೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ಲೇಖಕರು ತಾಂತ್ರಿಕ ವಿಧಿ-ವಿಧಾನಗಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿರುವುದು ಕಾಣುತ್ತದೆ.

ಕಥೆ ಶುರುವಾಗುವ ಕ್ಷಣದಿಂದಲೇ ಓದುಗರನ್ನು ಹಿಡಿತದಲ್ಲಿಟ್ಟುಕೊಳ್ಳುತ್ತದೆ. ಕೆಲವೊಮ್ಮೆ ಮನುಷ್ಯರ ನಡುವಿನ ಸಂಬಂಧಗಳು, ಅವರ ಆಸೆ-ಆಕಾಂಕ್ಷೆಗಳು, ಸೇಡು-ದ್ವೇಷಗಳು ಹೇಗೆ ಅವರ ಜೀವನವನ್ನು ರೂಪಿಸುತ್ತವೆ ಎನ್ನುವುದನ್ನು ಕಾದಂಬರಿ ತೋರಿಸುತ್ತದೆ. ಇದರ ಜೊತೆಗೆ ತಾಂತ್ರಿಕ ಅಂಶಗಳು ಬೆರೆತಾಗ ಕಥೆ ಇನ್ನಷ್ಟು ರೋಚಕವಾಗುತ್ತದೆ.

ಒಟ್ಟಾರೆಯಾಗಿ, ತಾಂತ್ರಿಕ ಕಾದಂಬರಿಗಳ ಪ್ರಕಾರದಲ್ಲಿ ಇದು ವಿಭಿನ್ನವಾದ ಕೃತಿ. ತಾಂತ್ರಿಕ ಕಥೆಗಳು ಇಷ್ಟವಿರುವವರು ಖಂಡಿತಾ ಓದಬೇಕಾದ ಪುಸ್ತಕ ಇದು.
1 review
May 24, 2023
Such a thrilling and gripping read.
Even though in the beginning it felt quite weird to read about the action done on the corpse but while reading through around 100 pages I just couldn't keep down the book. The casteism of villagers, their hatred, and the innocent and deep relationship between people even though they aren't blood related, and of course the rituals they follow are very well written and reflected. As we keep on reading, it feels like the story has been happened in our surrounding and all the characters are very well known to us.
This is clearly a great novel to a debut author. Looking forward to read more works of him.
Profile Image for Bhanu Prakash.
2 reviews
March 11, 2022
A story that takes you on a journey of 3 generations touching on human relationships and a connect to spirits, every layer of this story keeps us hooked on to it. One of the best reads in recent days, Kudos to Raghu Sir for penning this gripping novel.
1 review
June 5, 2024
ರೋಮಾಂಚನ,ಕುತೂಹಲದಿಂದ ಓದುಗರನ್ನು ಹಿಡಿದಿಡುವ ಬರೆವಣಿಗೆ.ಹಳ್ಳಿಯ ಸೊಗಡು,ಒಟ್ಟಿನಲ್ಲಿ ಬೆರಗು ಮೂಡಿಸುವ ಓದಲೇ ಬೇಕೆನಿಸುವ ಕಾದಂಬರಿ 💯
Displaying 1 - 13 of 13 reviews

Can't find what you're looking for?

Get help and learn more about the design.