Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ನಿಜ ಹೇಳಬೇಕೆಂದರೆ ನಂಗೆ ಶುರುವಿನಲ್ಲಿ ಈ ಪುಸ್ತಕದ ಮೇಲೆ ಪ್ರೀತಿ ಹುಟ್ಟಲೇ ಇಲ್ಲ 😐 ಶುರು ಮಾಡಿ ಆಯ್ತು, ಹಾಗಾಗಿ ಮುಗಿಸುವ ಅಂತ ಹೇಳಿ ಓದ್ತಾ ಹೋದೆ. ಪೂರ್ತಿ ಓದಿದ ನಂತರನೂ ನಂಗೆ ಯಾವ ಕಥೆಯು ಮನಸಲ್ಲಿ ಉಳಿಯುವಂತೆ ಅನ್ಸ್ಲಿಲ್ಲ. ಆದರೆ ಎಲ್ಲ ಕಥೆಗಳ ಕೊನೆಯಲ್ಲೂ ಲೇಖಕ ಏನನ್ನು conclude ಮಾಡದೆ ನಮ್ಮ ಯೋಚನೆಗೆ ಬಿಟ್ಟ ರೀತಿ ಇಷ್ಟ ಆಯ್ತು. ಪ್ರೀತಿಸುವವರನ್ನು ಕೊಂಡುಬಿಡಿಯ ಅರ್ಥ ಕಡೆಯ ಕಥೆಯಲ್ಲಿ ಚೆನ್ನಾಗಿ ಹೇಳಿದ್ದಾರೆ 😀
ಪ್ರೀತಿ ನನ್ನ ಅತಿ ಮೆಚ್ಚಿನ ವಿಷಯ. ಪ್ರೀತಿಯೆಂದರೆ "ಅವನು, ಅವಳು" ಪ್ರೀತಿಗೆ ಸೀಮಿತವಲ್ಲ. ಬದುಕಿನೆಡೆಗೆ ಇರುವುದೂ ಪ್ರೀತಿಯೇ! ಜೋಗಿರವರ ಎರಡು ಪುಸ್ತಕಗಳನ್ನು ತರಿಸಿಕೊಂಡಿದ್ದೆ. ವಿರಹದ ಸಂಕ್ಷಿಪ್ತ ಪದಕೋಶ ಮುಗಿಸಿದ ಮೇಲೆ ಅದರಷ್ಟೇ ಗಾತ್ರದ "ಪ್ರೀತಿಸುವವರನ್ನು ಕೊಂದುಬಿಡಿ" ಪುಸ್ತಕವನ್ನು ಮುಗಿಸಿಬಿಡೋಣ ಎಂದು ಕುಳಿತೆ. ಕಾದಂಬರಿಯಿರಬೇಕು ಎಂದುಕೊಂಡೆ. ಆದರೆ ಈ ಪುಸ್ತಕದಲ್ಲೂ ಕೂಡ ಜೋಗಿರವರು ಆಶ್ಚರ್ಯವನ್ನು ಕೊಟ್ಟುಬಿಟ್ಟರು.
ಶೀರ್ಷಿಕೆಯೇ ವಿಚಿತ್ರವಾಗಿದೆ! ಪ್ರೀತಿಸುವವರನ್ನು ಕೊಲ್ಲುವುದು ಎಂದರೇನು? ಸಾಧ್ಯವಾ ಅದು, ಅಷ್ಟು ಪ್ರೀತಿಸಿಕೊಳ್ಳುವುದು ಬದುಕುವುದಕ್ಕಾಗಿ ಅಲ್ಲವಾ? ಸಾಯಿಸಿ ಎನ್ನುತ್ತಿದ್ದಾರಲ್ಲ ಎಂಬ ನಾಲ್ಕೈದು ಪ್ರಶ್ನೆಗಳೊಂದಿಗೆ ಶುರುವಿಟ್ಟೆ..!!
ಒಂದು ಇಪ್ಪತ್ತು ಸಣ್ಣಕಥೆಗಳಿರುವ ೨೦೩ ಪುಟಗಳ ಚಿಕ್ಕ ಪುಸ್ತಕ. ಪ್ರೀತಿ ಕೇವಲ ಗಂಡು ಹೆಣ್ಣಿಗೆ ಸೀಮಿತವಲ್ಲ, ಒಂದು ಆಟಿಕೆಗೋ ಅಥವಾ ನಾವು ಕೊಂಡ ವಾಹನದೆಡೆಗೋ ಅಥವಾ ನಮ್ಮ ಹವ್ಯಾಸಗಳೆಡೆಗೂ ಪ್ರೀತಿ ಇರುತ್ತದೆ. ಪ್ರೀತಿಗೆ ಯಾರ ಅವಶ್ಯಕತೆಯೂ ಇರುವುದಿಲ್ಲ, ಅನಿವಾರ್ಯತೆಗಳಂತೂ ಇಲ್ಲವೇ ಇಲ್ಲ! ಅದೊಂದು ಸ್ವತಂತ್ರ ಇರುವು, ವಿಶಾಲವಾಗಿ ಬೆಳೆದುಕೊಂಡ ಮರ, ವಿಸ್ತಾರವಾಗಿ ಹರಡಿಕೊಂಡ ಸಾಗರ! ನಮ್ಮ ಲೌಕಿಕ ಅಲೌಕಿಕ ಬಯಕೆಗಳನ್ನು ಭಾವಗಳನ್ನು ಹೊತ್ತೊಯ್ದು ಅಲ್ಲಿ ಆಶ್ರಯ ಹುಡುಕಿಕೊಳ್ಳುತ್ತೇವೆ.
ಈ ಪುಸ್ತಕದ ಯಾವ ಕಥೆಗಳನ್ನು ಇಲ್ಲಿ ಹೇಳಲಾರೆ. ಅವೆಲ್ಲವೂ ವಿಮರ್ಶೆಗೆ ನಿಲುಕದ್ದು. ಆದರೆ ಎಲ್ಲಾ ಕಥೆಯಲ್ಲೂ ಒಂದೊಂದು ಬಗೆಯ ವೈಶಿಷ್ಟ್ಯವಿದೆ. ಬದುಕು ಮತ್ತು ಪ್ರೀತಿಯ ಸತ್ಯಗಳನ್ನು ಇಷ್ಟಿಷ್ಟೇ ತೆರೆದಿಡುತ್ತಾ ಪ್ರತಿ ಕಥೆಗೂ ಒಂದು ಅಸ್ಪಷ್ಟ ಅಂತ್ಯ ನೀಡುತ್ತಾ ಓದುಗನ ಮನಸಲ್ಲಿ ಹೊಸ ಹೊಸ ಪ್ರಶ್ನೆಗಳನ್ನು ಉಳಿಸುತ್ತಾರೆ. ಹೀಗೆ ಎಂದು ಕೊನೆಯಾಗಿಸಿದ್ದರೆ ಕಥೆಯ ಹರಹು ಕಡಿಮೆಯಾಗುತ್ತಿತ್ತು. ಕಥೆಯನ್ನಷ್ಟೇ ಹೇಳಿ ನಮ್ಮ ಅಭಿಪ್ರಾಯಗಳಿಗೆ ಅವಕಾಶ ನೀಡಿದ್ದಾರೆ. ಓದುಗನಾಗಿ ಮಾತ್ರ ಓದದೇ ಲೇಖಕರೊಡನೆ ಲೇಖಕರಾಗುವ ವಿಶಿಷ್ಟ ಅವಕಾಶಗಳಿದೆ.
ಬದುಕು ದುಸ್ತರವೆನಿಸಿದರೆ, ಪ್ರೀತಿ ಜಾಡ್ಯವೆನಿಸಿದರೆ ಈ ಪುಸ್ತಕವನ್ನು ಓದಿ. ದುರಸ್ತಿ ಕಾರ್ಯ ಶುರುಮಾಡಬೇಕಿನಿಸಬಹುದು. ಪ್ರೀತಿ ಕೊಡುವ ನೋವುಗಳಿಗೆ, ಬದುಕು ಎಸೆಯುವ ಪ್ರಶ್ನೆಗಳಿಗೆ ನಿರ್ದಿಷ್ಟ ಕಾರಣಗಳನ್ನು ಜೋಗಿರವರು ನೀಡಿದ್ದಾರೆ. ಗಾಢವಾಗಿ ಅರ್ಥೈಸಿಕೊಳ್ಳುವಿರಾದರೇ ಹೌದಲ್ಲವಾ ಇದೇ ಕಾರಣಕ್ಕೆ ಇಷ್ಟು ದಿನ ಆಶಾಭಂಗವಾಗುತ್ತಿತ್ತಾ ಎಂಬ ಆಲೋಚನೆ ನೀಡುತ್ತದೆ. ಯಾವ ವೇದಾಂತವನ್ನು ಹೇಳದೇ ಪ್ರೀತಿಯನ್ನು ಅದರ ಚೌಕಟ್ಟಿನಲ್ಲೇ ಅಚ್ಚುಕಟ್ಟಾಗಿ ವಿವರಿಸಿ ಹೇಳಿದ್ದಾರೆ.
ಪುಸ್ತಕದ ಕೊನೆ ಕೊನೆಗೆ ನಿಮ್ಮಳಗೊಬ್ಬ ಜೀವನೋತ್ಸಾಹಿ ಹುಟ್ಟುತ್ತಾನೆ. ಪ್ರೀತಿಸಿಕೊಂಡವವರಾಗಿದ್ದರೆ ಹೊಸ ಪ್ರೇಮಿಯೊಬ್ಬ ಹುಟ್ಟುತ್ತಾನೆ. ಉಳಿದು ಹೋದವರಾಗಿದ್ದರೆ ಬದುಕಿನೆಡೆಗೆ ಹೊಸ ಚಿಲುಮೆಯೊಂದು ಹುಟ್ಟುತ್ತದೆ.
ಅಂದ ಹಾಗೇ ಕೊಲ್ಲುವುದು ಎಂದರೇ ಎಂದು ನಾನು ಪುಸ್ತಕದ ಮೊದಲ ಪುಟದಲ್ಲಿ ಕೇಳಿಕೊಂಡ ಪ್ರಶ್ನೆಗೆ ೨೦೩ನೇ ಪುಟದಲ್ಲಿ ಉತ್ತರ ದೊರಕಿತು.!
ಸಮಯ ಸಿಕ್ಕರೆ ಓದಿ, ಈಗಾಗಲೇ ಓದಿದ್ದಲ್ಲಿ ಎಂದಿನಂತೆ ನಿಮ್ಮ ಅಭಿಪ್ರಾಯ ನಮ್ಮೊಂದಿಗೂ ಹಂಚಿಕೊಳ್ಳಿ..!
ಒಮ್ಮೆ ಪುಸ್ತಕದ ಹೆಸರು ನೋಡಿದಾಗ, ಓದಲೇಬೇಕೆನ್ನುವ ದಿಗಿಲು ಹುಟ್ಟುತ್ತದೆ. ಅಂತಹದೊಂದು ತುಡಿತದಲ್ಲಿ, ಓದಿದ ಪುಸ್ತಕದ ಪಟ್ಟಿಯಲ್ಲಿ ಇದು ಒಂದು. ಜೋಗಿಯವರ ವಿಶೇಷತೆ ಏನೆಂದರೆ ಪುಸ್ತಕದ ಶೀರ್ಷಿಕೆ ಮತ್ತು ಪುಸ್ತಕದ ಕತೆಗಳಿಗೆ ಲಿಂಕ್ ಮಾಡದೆ ಬರೆಯುವುದು ಇದು ಕೂಡ ಒಂದು ವಿಶಿಷ್ಟ ಶೈಲಿಯ ಬರವಣಿಗೆ. ಈ ಪುಸ್ತಕವು ಸುಮಾರು ಕಥೆಗಳನ್ನು ಒಳಗೊಂಡಿದೆ. ಪ್ರಸ್ತುತ ಲೌಕಿಕ ಜಗತ್ತಿನಲ್ಲಿ ಪ್ರೀತಿ ಹೇಗೆ ಎಂದು ಇಲ್ಲಿ ಲೇಖಕರು ಅಚ್ಚುಕಟ್ಟಾಗಿ ಬರೆದಿದ್ದಾರೆ. ಪ್ರೀತಿಯೇ ಜೀವನವಾ? ಅಥವಾ ಜೀವನದ ಪರ್ಪಸ್ ನ ಹುಡುಕಾಟದಲ್ಲಿ ಸಿಗುವ ಸ್ನೇಹವೇ ಮುಂದೆ ಪ್ರೀತಿಯಾಗುತ್ತದಾ? ಈ ವಿಷಯಗಳನ್ನು ಒಳಗೊಂಡ ಕತೆ ನನಗೆ ಇಷ್ಟವಾಯಿತು. ಇನ್ನೂ ಕೆಲವು ಕತೆಗಳು ವಾಸ್ತವಕ್ಕೆ ಕನ್ನಡಿಯಂತೆ ಇದೆ. ಕೊನೆಯಲ್ಲಿ ನಿಮ್ಮ ಪ್ರೀತಿ ಯಾವಾಗಲೂ ನೈಜತೆಯಿಂದ ಹಾಗೂ ಅನ್ಕಂಡೀಶನಲ್ ಆಗಿರಬೇಕು, ನೀವು ಪ್ರೀತಿಯಲ್ಲಿ ಎಷ್ಟು ನಿರೀಕ್ಷಿಸದೆ ಪ್ರೀತಿ ಮಾಡುತ್ತಿರೋ ಆ ಪ್ರೀತಿ ಎಂದಿಗೂ ಅಪರಿಮಿತ ಎಂಬ ಲೇಖಕರ ಈ ಮಾತು ನನಗೆ ತುಂಬಾ ಇಷ್ಟವಾಯಿತು. "ಕೊಂದರೂ ಸಾಯದ ಪ್ರೀತಿ", "ಇಲ್ಲಿ ಪ್ರೀತಿಯೇ ಕೊಲೆಗಾತಿ" ಈ ಎರಡು ಕತೆಗಳು ನನ್ನನ್ನು ಹೆಚ್ಚು ಕಾಡಿದವು. "ಪ್ರೀತಿಸಿದವರನ್ನು ಕೊಂದು ಬಿಡಿ" (ಕಥಾ ಸಂಕಲನ) ಲೇಖಕರು ಯಾರನ್ನು ಪ್ರೀತಿಸಿದರು? ಮತ್ತೆ ಯಾರನ್ನು ಕೊಂದರು? ಈ ಪ್ರಶ್ನೆಗಳಿಗೆ ಉತ್ತರ ಪುಸ್ತಕವನ್ನು ಕೊಂಡು ಓದಿ.