Novelist, poet, short-story writer, essayist, playwright, educationist, linguist.... author of over 90 books in Kannada as well as English. M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teaching of English language, grammar and Phonetics; Published in Kannada 47 novels, 5 anthologies of short stories, 6 anthologies of essays, 2 anthologies of poems, 28 plays, 17 radio plays and a travelogue; Published in the Tulu language a novel and a collection of poems translated from English. Became a primary teacher at the age of 17 but still continued to learn more.
೧೯೮೨ ರಲ್ಲಿ ಪ್ರಕಟವಾದ ಈ ಕೃತಿಯ ಹಳೆಯ ಪ್ರತಿಯ ಪುಟಗಳ ಘಮ ಬಾಲ್ಯವನ್ನು ನೆನಪಿಸಿತು. ನಾನು ಓದಿದ ಕೆ ಟಿ ಗಟ್ಟಿಯವರ ಮೊದಲ ಕೃತಿ ಇದು. ಲೇಖಕರು ಬಹುತೇಕ ಕೃತಿಗಳನ್ನು ಬರೆದಿರುವುದು ತಾವು ಅನ್ಯ ದೇಶದಲ್ಲಿ ನೆಲೆಯೂರಿದ್ದಾಗ ಮತ್ತು ಈ ಕೃತಿಯೂ ಅದಕ್ಕೆ ಹೊರತಲ್ಲ. ಭಾರತದ ಹೆಸರಾಂತ ಆಧ್ಯಾತ್ಮಿಕ ಸ್ಥಳಗಳಲ್ಲಿ ನಡೆಯುವ ಕತೆಯ ದ್ರವ್ಯ ಓದುಗನನ್ನು ಸರಾಗವಾಗಿ ಮನಸೆಳೆಯುತ್ತದೆ. ಲೇಖಕರ ಮನಸ್ಸಿನಲ್ಲಿರುವ ವಿಚಾರವಂತಿಕೆ, ಜೀವನದರ್ಶನ, ಆಧ್ಯಾತ್ಮಿಕತೆ ಮತ್ತು ಮಾನವ ಸಂಬಂಧಗಳು ಸೂಕ್ಷ್ಮವಾಗಿ ಪಾತ್ರಗಳ ಮೂಲಕ ಅಂಜುತ್ತಾ ಹೊರಬಂದಿದೆ ಎನಿಸಿತು. ಇವರ ನಂತರದ ಕೃತಿಗಳಲ್ಲಿ ಹೆಚ್ಚಿದೆಯೆಂದು ಇದರಲ್ಲಿರುವ ಕಥಾತುಣುಕಿನ ಮೂಲಕ ಸೂಚಿಸಿರಬಹುದು.
“ಕರ್ಮಣ್ಯೇವಾಧಿಕಾರಸ್ತೆ ಮಾಫಲೇಶು ಕದಾಚನ” ಈ ವಾಕ್ಯವನ್ನು ದಿನನಿತ್ಯ ಅಲ್ಲಿ-ಇಲ್ಲಿ ಕೇಳುತ್ತೇವೆ. ಪ್ರತಿಫಲ ನಿರೀಕ್ಷಿಸದೇ ಕರ್ಮವೆಸಗುವುದು ಮನುಷ್ಯನ ಕೆಲಸವಷ್ಟೇ. ಈ ಮಾತನ್ನು ಹೇಳಿರುವುದು ಶ್ರೀಕೃಷ್ಣ. ಈ ಕೃತಿಯಲ್ಲೂ ಶ್ರೀಕೃಷ್ಣಯ್ಯನೆಂಬ ಪಾತ್ರದ ಮುಖೇನ ಪ್ರಮುಖ ತಿರುವಿದೆ. ಈ ಕೃತಿಯಲ್ಲಿ ಬಹುಮುಖ್ಯ ಪಾತ್ರ ಹೆಣ್ಣು ಮತ್ತು ಅವಳ ಜೀವನ, ಸಂತಾನಕ್ಕೆ ಸಂಬಂಧಪಟ್ಟದ್ದು. ಹುಟ್ಟಿನಿಂದಲೇ ಅನುಭವಿಸುವ ಪುರುಷನ ಅಂಗವೈಕಲ್ಯತೆ ಮತ್ತೆ ಮತ್ತೆ ಮಹಾಭಾರತವನ್ನು ನೆನಪಿಸುತ್ತದೆ ಮತ್ತು ಅದರ ಎಳೆಯನ್ನೇ ಕಥಾವಸ್ತುವಾಗಿ ಹೆಣೆದು ವೈಚಾರಿಕತೆಯ ಸ್ಪರ್ಶ ನೀಡುವಲ್ಲಿಲೇಖಕರು ಸಫಲರಾಗಿದ್ದಾರೆ. ಹುಟ್ಟಿನಲ್ಲಿ ಆರಂಭವಾಗುವ ಕೃತಿ ಹುಟ್ಟಿನ ಮೂಲಕ ಮುಗಿಯುತ್ತದೆ.
ಕೆ.ಟಿ.ಗಟ್ಟಿ ರವರ ಇತರೆ ಕೃತಿಗಳಂತೆ ಈ ಕೃತಿಯು ಸೃಜನಶೀಲತೆ ಮತ್ತು ವೈಚಾರಿಕತೆಯ ಸುಂದರ ಸಮ್ಮಿಲನ....
ಇದೆ ಕೃತಿಯ ಒಂದು ಭಾಗವನ್ನು ಓದಿದರೆ ತಿಳಿಯುತ್ತದೆ ಲೇಖಕರ ವೈಚಾರಿಕತೆ
"ನನಗೆ ಪುನರ್ಜನ್ಮವಿದೆ ಎಂಬುದರಲ್ಲಿ ನಂಬಿಕೆಯಿಲ್ಲ. ಒಂದೇ ಬದುಕಿನೊಳಗೆ ಹಲವು ಜನ್ಮಗಳು ಅಥವಾ ಅವಸ್ಥೆಗಳು ಇರುತ್ತವೆ ಎಂದು ನಾನು ಭಾವಿಸುತ್ತೇನೆ. ಒಂದು ಅವಸ್ಥೆಯಿಂದ ಮುಕ್ತಿ ದೊರೆತು ಇನ್ನೊಂದು ಅವಸ್ಥೆಯನ್ನು ಪ್ರವೇಶಿಸುವುದು ಕಷ್ಟ. ಹಾಗೆ ಪ್ರವೇಶಿಸಲು ಸಾಧ್ಯವಾದರೆ, ಕಳೆದ ಅವಸ್ಥೆಯನ್ನು ಹಿಂದಿನ ಜನ್ಮ ಎಂದು ಕರೆಯಬಹುದು, ಅಂದರೆ, ಹಾಗೆಂದು ಭಾವಿಸಿಕೊಳ್ಳಬಹುದು.ಹಾಗೆ ಭಾವಿಸಿಕೊಳ್ಳುವುದರಲ್ಲಿ ಸುಖವೂ ಇಲ್ಲ, ದುಃಖವೂ ಇಲ್ಲ. ಜೀವ ಇರುವ ತನಕ ಇರುವ ಬದುಕನ್ನು ಹೇಗೆ ಬದುಕಬೇಕು ಎಂದು ಯೋಚಿಸಬೇಕಾದ್ದೇ ಮುಖ್ಯ"
ಇವರ ಕೃತಿಗಳು ಬಹಳ ಪ್ರಸಿದ್ಧವಾಗಿಲ್ಲ ಎಂಬುದೇ ಬೇಸರದ ಸಂಗತಿ.... great, but least recognized...