M. R. Dattathri is a bilingual novelist, poet, translator, and columnist from Bengaluru, India. After spending three decades as a senior IT professional in India and the US, he transitioned full-time to literature, publishing in both Kannada and English. His fiction blends incisive social observation with a global outlook shaped by years spent on two continents. Dattathri’s novels have earned many of Karnataka’s highest honours, including the Masti Prashasti (2019), Book Brahma Novel of the Year (2023), Vardhamana Prashasti (2023), and the Sunanda Belgaokar Award (2024). Two of his books have appeared in Telugu, and his latest English book—What’s Your Price, Mr Shivaswamy?—was released by Penguin Random House India in April 2025. In addition to five novels, he has published a poetry collection, several volumes of essays, and an acclaimed English edition of poems by Dr H. S. Venkateshamurthy, which he edited. Dattathri lives in Bengaluru, where he advocates for cross-cultural literary exchange. More information is available at www.dattathri.in.
ಮೊದಲ ಮುದ್ರಣದಿಂದ ಸರಿಯಾಗಿ ಹತ್ತು ವರ್ಷಗಳ ನಂತರ ಪ್ರಿಂಟೆಡ್ ಬುಕ್ ಸಿಗದೇ ಈ-ಬುಕ್ ಆವೃತ್ತಿ ಓದಿದೆ. ಆಶ್ಚರ್ಯದ ವಿಷಯ ಏನೆಂದ್ರೆ ಇಷ್ಟು ಒಳ್ಳೇ ಕಾಬರಿ ಕುರಿತು ಗೆಳೆಯರ ಬಳಗದಲ್ಲಿ ಮತ್ತು ವೆಬ್ ಪೋರ್ಟಲ್ ಇತ್ಯಾದಿ ಯಾವ ಮೀಡಿಯಾದಲ್ಲಾಗಲೀ ಹೆಚ್ಚಿನ ಚರ್ಚೆ ಕೇಳಿರಲಿಲ್ಲ. So I was completely blank when I picked it up.
ಕಥೆ ಪ್ರಾರಂಭದಲ್ಲಿ 9/11 ಪ್ರಸ್ತಾಪ ಬಂದಿದ್ದು ನೋಡಿ ಇದೇನೋ ಉಗ್ರರ ಧಾಳಿಯ ಕುರಿತ ಕಾದಂಬರಿಯಾ ಎನಿಸಿತು. ಆಗಲೇ ನಿಲ್ಲಿಸಿಬಿಡಲಾ ಎಂದುಕೊಂಡರೂ ಬರವಣಿಗೆ ಶೈಲಿಯ ಮೋಡಿಗೆ ಸಿಕ್ಕು ಓದು ಮುಂದುವರಿಯಿತು. ನಗರ ಜೀವನ, it ಕಲ್ಚರ್ ಇವನ್ನೆಲ್ಲಾ ಒಬ್ಬ ಸಾಮಾನ್ಯ ಕೆಲಸಗಾರನ ಪಾತ್ರದ ಮೂಲಕ ಬಿಚ್ಚಿಡುವ ರೀತಿ ಬಹಳ ಚೆನ್ನಾಗಿದೆ. ಕಳೆದುಹೋದ ಕೃಷ್ಣನ ನಿರೀಕ್ಷೆ ಶ್ರೀಕಾಂತನಷ್ಟೇ ನನಗೂ ಇತ್ತು.. ಕಡೆಗೂ ಅದೊಂದು ಬಗೆಹರಿಯಲಿಲ್ಲ. ಆದರೆ ಕಳೆದು ಹೋದ ತಮ್ಮನಿಗಾಗಿ ಅಷ್ಟೊಂದು ಪರಿತಪಿಸುವ ಶ್ರೀಕಾಂತ್ ಊರಲ್ಲಿ ಒಬ್ಬನೇ ಇರುವ ತಂದೆಯ ಬಗ್ಗೆ ಅಷ್ಟೇನೂ ಅಕ್ಕರಾಸ್ತೆ ತೋರಿಸದಿರೋದು, ತಂದೆಯ ಪಾತ್ರ ಹೆಚ್ಚೂಕಮ್ಮಿ out of the frame ನಿಂತಿದ್ದು ವಿಚಿತ್ರವೆನಿಸಿತು. ಹಾಗೆಯೇ Work related conferenceಗೆ ಬಸುರಿ ಹೆಂಡತಿಯನ್ನು ಕರೆದುಕೊಂಡು ಹೋಗಿ ಕಷ್ಟಕ್ಕೆ ಸಿಕ್ಕಿಕೊಳ್ಳುವ ಅಶೋಕರ ವರ್ತನೆಯೂ ಕೂಡ ಅಸಹಜ ಎನಿಸಿತು.
ಹಳ್ಳಿಯಿಂದ ಪಾರಾಗಲು ಪಟ್ಟಣಸೇರುವ ಶ್ರೀಕಾಂತ್ ವೃತ್ತ ಪೂರ್ಣಗೊಂಡಂತೆ ಮತ್ತೆ ಮೊದಲಿದ್ದಲ್ಲಿಗೇ ಮರಳುವ ಸುದೀರ್ಘ ಯಾನಕ್ಕೆ , ಯುದ್ಧದಲ್ಲಿ ಬುದ್ಧನನ್ನು ಹುಡುಕಿ ಹೊರಡ ಮಹಿಂದ, ವಿಚಿತ್ರ ಮಾನಸಿಕ ಸಂಘರ್ಷಕ್ಕೊಳಗಾಗಿ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳಿವ ಕ್ರಿಸ್ ಬ್ರೆಂಟನ್ ಪಾತ್ರಗಳು ತೂಕ ಹೆಚ್ಚಿಸಿವೆ.
ಕಂಪೆನಿಯೊಂದರ ದೈನಂದಿನ ವಾತಾವರಣ,ಪಾರ್ಟೀಪ್ಯಾಕ್ಡ್ ವೀಕೆಂಡುಗಳು,ಒಳ ರಾಜಕೀಯ, ಆಡಳಿತ ಬದಲಾವಣೆ, ಲೇ ಆಫ್ ಸಂದರ್ಭ ಇವೆಲ್ಲ ಕಥೆಗೆ ಪೂರಕವಾಗಿ ಚಿತ್ರಿಸಿರುವ ರೀತಿ ಚೆನ್ನಾಗಿದೆ. ಆದರೆ ಬಯೋ ಫ್ಯೂಯಲ್ಲಿನ ವಿಷಯ ಮಾತ್ರ ಅಗತ್ಯಕ್ಕಿಂತಲೂ ಹೆಚ್ಚಾಗಿದೆ ಎನಿಸಿ ಅಲ್ಲಲ್ಲಿ ಸ್ಕಿಮ್ ರೀಡ್ ಮಾಡುವಂತಾಯ್ತು.
This entire review has been hidden because of spoilers.
80%ರಷ್ಟು ಅಲ್ಲ ಶೇಕಡಾ 90%ರಷ್ಟು ನಮ್ಮ ಜನ ತಮಗೆ ಇಷ್ಟದ ಮಾರ್ಗವನ್ನು ಬಿಟ್ಟು, ಪಾಪಿ ಪೆಟ್ ಕಾ ಸವಾಲ್ ಮಾರ್ಗ ಹಿಡಿಯುವುತ್ತಾರೆ, ಕಾರಣ ಅವರ ಬೆನ್ನಿಗೆ job security ಎಂಬ ಪೆಡಂಭೂತ ಹತ್ತಿರುತ್ತದೆ, ಈ ಮಾರ್ಗಕ್ಕೆ ನಮ್ಮನ್ನು ನಮ್ಮ ಮಣ್ಣನ್ನು, ನಮ್ಮ ಸಂಬಂಧಗಳ ಬಂಧಗಳನ್ನು ಕಳಚಿ ದೂರದ ಊರಿಗೆ ಕರೆದುಕೊಂಡು ಹೋಗುವ ಭೀಮ ಶಕ್ತಿ ಇದೆ... ಈ ಕಾದಂಬರಿ ಆ ಮಾರ್ಗವನ್ನು ಹಿಡಿದ ಜನರ ಕಥೆ, ವ್ಯಥೆ....
ಶ್ರೀಕಾಂತ್ ಒಬ್ಬ IIT ಪದವಿಧರ, ಶ್ರಮ ಜೀವಿ... ತನ್ನ ಕಂಪನಿಯಿಂದ ದೂರದ ಅಮೇರಿಕಾಕ್ಕೆ ವರ್ಗವಾಗುತ್ತದೆ... ಭಾರತದಲ್ಲಿ ಅವನ ಪ್ರಪಂಚ ಬಹಳ ಚಿಕ್ಕದು: ಅಪ್ಪ, ಹೆಂಡತಿ ಮತ್ತು ಕಳೆದುಹೋಗಿರುವ ತಮ್ಮ... ಹೆಂಡತಿಯೊಂದಿಗೆ ಹೊರಟ ಶ್ರೀಕಾಂತ್ ಅಮೇರಿಕಾದ ಪ್ರಪಂಚಕ್ಕೆ ಹೊಂದಿಕೊಂಡರೂ, ಅಲ್ಲಿನ ಮೆಕ್ಯಾನಿಕಲ್ ಪೈಶಾಚಿಕ ಜೀವನ ಮಾನಸಿಕವಾಗಿ ಹಿಂಸಿಸುತ್ತದೆ... ಅಲ್ಲಿ ಇವನು ಭಾರತದಲ್ಲಿ ಕಳೆದುಕೊಂಡ ಸಂಬಂಧಗಳನ್ನು ಹುಡುಕುತ್ತ ಹೋಗುತ್ತಾನೆ... ಅಲ್ಲಿನ ಕೆಲವರು ಇವನಿಗೆ ಅತ್ಯಮೂಲ್ಯ ಪಾಠವನ್ನು ಸಹ ಕಲಿಸುತ್ತಾರೆ... ಅಲ್ಲಿನ ಪರಿಸರ, ಅಲ್ಲಿನ ಭಾರತೀಯರ ಪಾಡು, ಅಲ್ಲಿನ corporate culture ಇವೆಲ್ಲರ ನಡುವೆ ಶ್ರೀಕಾಂತ್ ಕಂಡುಕೊಳ್ಳುವ ಜೀವನವೇ ಕಾದಂಬರಿಯ ವಸ್ತು
ಲೇಖಕರು, ತಾವು ಹೇಳಬೇಕಾದ ವಿಷಯದಲ್ಲಿ ಸ್ಪಷ್ಟವಾಗಿದ್ದಾರೆ. ಎಲ್ಲಿ ತಿರುವುಗಳನ್ನು ಕೊಡಬೇಕು, ಎಲ್ಲಿ ವಿವರಗಳ ಅಗತ್ಯವಿದೆ, ಎಲ್ಲಿ emotions ಬೇಕು... ಎಲ್ಲವೂ ಅರಿತು ಕೈಗೊಂಡು ಇಷ್ಟವಾಗುತ್ತಾರೆ...
ಶ್ರೀಕಾಂತ್ ಊರಿನ ಅಧ್ಯಾಯಗಳಂತೂ ತುಂಬಾ ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ, ಇನ್ನೂ ಹೆಚ್ಚು ಅದರ ಅಧ್ಯಾಯಗಳು ಇರಬೇಕಿತ್ತು... ಮೋಟಕಾಗಿ ಮುಗಿಸಿದ್ದಾರೆ, ಕೆಲ ಪಾತ್ರಗಳು ದ್ವಂದ್ವ ಭಾವ ಮೂಡಿಸುತ್ತದೆ ಆ ಪಾತ್ರಗಳ ಸ್ಪಷ್ಟ ರೂಪ ತಿಳಿಯುವುದೇ ಇಲ್ಲ ಉದಾ : ಫ್ರಾಕೋ, ಭೂಷಣ್ ರಾವ್, ಶ್ರೀಕಾಂತ್ ತಂದೆ.
ಏನೇ ಇರಲಿ ಒಂದು ವಿಭಿನ್ನ ಕಥಾಹಂದರವುಳ್ಳ ಪುಸ್ತಕವಿದು.... ಮನಸ್ಸಿನ ಆಳವನ್ನು ಮುಟ್ಟಿ ಕಲಕುವ ಪುಸ್ತಕ....ಈ ಪುಸ್ತಕ ಓದಿ ಚಿತ್ತಾಲರ ಶಿಕಾರಿ ನೆನಪದರೂ ಅದರಂತೆ ಕಬ್ಬಿಣದ ಕಡಲೆಯಲ್ಲ... ಇದು ಸರಾಗವಾಗಿ ಓದಿಸಿಕೊಂಡು ಹೋಗುವ ನೆಲಗಡಲೆ... 🥰
ಬಹಳ ಆಪ್ತವಾದ ಕಾದಂಬರಿ. ಹಲವಾರು themes ಇದ್ದರೂ ದತ್ತಾತ್ರಿಯವರು ಎಲ್ಲೂ ಗೋಜಲಾಗದ ಹಾಗೆ ಕತೆಯ ಚೌಕಟ್ಟಿನಲ್ಲೇ ಎಲ್ಲವನ್ನೂ ಸರಾಗವಾಗಿ ಅನ್ವೇಷಿಸಿದ್ದಾರೆ. ಬೇಲೂರಿನ ಬಳಿ ಡ್ಯಾಮ್ ಕಟ್ಟುವಿಕೆಯಿಂದ ಮುಳುಗಡೆಯಾಗಬಹುದಾದ ಒಂದು ಹಳ್ಳಿಯಿಂದ ಹಿಡಿದು ಅಮೇರಿಕಾದ ಟ್ರಕ್ ಡ್ರೈವರ್ ರಾಜಕಾರಣಗಳವರೆಗೂ ಎಲ್ಲಾ ವಿಷಯಗಳನ್ನು ಕತೆಯಲ್ಲಿ ವಿವರವಾಗಿ, ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಕಥಾನಾಯಕ ಮೊದಲ ಬಾರಿಗೆ ಸೈಕಲ್ ತುಳಿಯುತ್ತಾ ಲಾಸ್ ಏಂಜಲಿಸ್‌ನ ಬಡಾವಣೆಗಳನ್ನು ಅನ್ವೇಶಿಸುವುದು, ಯೋಸೆಮಿಟಿಯ ವರ್ಣನೆ ಸೇರಿದಂತೆ ಕೆಲವು ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇವೆ. ಪಾತ್ರಗಳ characterization ಅವುಗಳನ್ನು ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತವೆ. ಇಷ್ಟು ದಿನ ಇವರ ಒಂದೂ ಪುಸ್ತಕ ಓದದೆ ಹೇಗೆ ಇದ್ದೆ ಎಂಬುದೇ ಆಶ್ಚರ್ಯ! ಒಂದು ಒಳ್ಳೆಯ ಕಾದಂಬರಿಯನ್ನು ಓದಿದ ಸಮಾಧಾನ.
ನಾನು ಎಂಜಿನಿಯರಿಂಗ್ ಓದಿ ಮುಗಿಸಿ 13 ವರ್ಷಗಳೇ ಸಂದವು. ಎಂಜಿನಿಯರಿಂಗ್ ಸೇರಿದಾಗ ಸಾಫ್ಟ್ವೇರ್ ಕ್ಷೇತ್ರವು ಉತ್ತುಂಗದಲ್ಲಿದ್ದ ಸಮಯ. ಸಾಫ್ಟ್ವೇರ್ ಎಂಜಿನಿಯರ್ ಆದರೆ ಸಾಕು ಕೈತುಂಬ ಸಂಬಳ ಎಂಬುದು ಮನೆಮಾತಾಗಿತ್ತು. ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿದ್ದಾಗ ರಿಸೆಷನ್ ಪಿರಿಯಡ್ ಶುರುವಾಗಿ ಅನೇಕರು ಕೆಲಸ ಕಳೆದುಕೊಂಡ ಬಗ್ಗೆ ವಿಷಯಗಳು ನಮಗೆಲ್ಲ ಗೊತ್ತಾಗುತ್ತಿದವು. ನಂತರದ ದಿನಗಳಲ್ಲಿ ಸಾಫ್ಟ್ವೇರ್ ಕ್ಷೇತ್ರ ಮತ್ತೆ ಲಯಕಂಡುಕೊಂಡಿತು. ಎಂಜಿನಿಯರಿಂಗ್ ಮುಗಿಸಿ ನಾನು ಸಾಫ್ಟ್ವೇರ್ ಉದ್ಯೋಗಕ್ಕೆಂದು ಬೆಂಗಳೂರಿಗೆ ಹೋಗಿ, ಬೆಂಗಳೂರಿಗೆ ನಾನು ಆಗಿ ಬರದೆ ಅಲ್ಲಿಂದ ವಾಪಸ್ಸು ಬಂದಿದ್ದೆ. ಆದರೆ ನನ್ನ ಜೊತೆ ಬೆಂಗಳೂರನ್ನು ಸೇರಿದ ಅನೇಕ ಸ್ನೇಹಿತರು ಈಗ ಅದೇ ಕ್ಷೇತ್ರದಲ್ಲಿ ಅತಿ ಎತ್ತರದ ಸ್ಥಾನ ಮಾನಗಳನ್ನು ಹೊಂದಿದ್ದಾರೆ ಹಾಗೂ ಬೇರೆ ಬೇರೆ ದೇಶಗಳಲ್ಲಿ ಹೋಗಿ ನೆಲೆಸಿದ್ದಾರೆ.
ದ್ವೀಪವ ಬಯಸಿ ಕಾದಂಬರಿಯನ್ನು ಓದುತ್ತಿದ್ದಾಗ ಇಷ್ಟೆಲ್ಲಾ ನೆನಪಾಗುತ್ತಿದ್ದವು.
ದೂರದ ಅಮೆರಿಕದಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ, ಚಿಕ್ಕಮಗಳೂರಿನ ಒಂದು ಹಳ್ಳಿಯಲ್ಲಿ ಬೆಳೆದ ಶ್ರೀಕಾಂತ್ ಎಂಬ ವ್ಯಕ್ತಿಯ ಬದುಕಿನ ಹೂರಣವೇ ದ್ವೀಪವ ಬಯಸಿ.
ಮುಳುಗಡೆಯಾದ ತನ್ನ ಊರು, ಅವನ ಅಪ್ಪ, ಕಳೆದುಕೊಂಡ ತಮ್ಮ, ಮನೆ ಬಿಟ್ಟು ಹೋದ ಚಿಕ್ಕಪ್ಪನ ನೆನಪುಗಳು, ಪ್ರೀತಿಸಿ ಮದುವೆಯಾದ ಹೆಂಡತಿ, ಐಟಿ ಕೆಲಸ, ಪ್ರಮೋಷನ್ ಪಡೆದು ಅಮೆರಿಕಕ್ಕೆ ಪಯಣ ಮತ್ತು ಅಲ್ಲಿಯ ಐಟಿ ಜೀವನ, ರಿಸೆಷನ್, ಸಾಫ್ಟ್ವೇರ್ ಉದ್ಯೋಗದಲ್ಲಿನ ಅನಿಶ್ಚಿತತೆ, ಅದರಲ್ಲಿನ ಏರಿಳಿತಗಳು, ಹೀಗೆ ಹಲವು ಭಾಗಗಳಿವೆ.
ಓದುತ್ತ ಹೋದಂತೆ, ಲೇಖಕರು ನನ್ನ ಅನೇಕ ಗೆಳೆಯರ ಕಥೆಯನ್ನು ಹೇಳುತ್ತಿದ್ದಾರೆ ಎಂದೆನಿಸುತ್ತಿತ್ತು.
ಕನ್ನಡ ಸಾಹಿತ್ಯದಲ್ಲಿ ಭಿನ್ನವಾಗಿ ನಿಲ್ಲುವ ಹಾಗೂ ತಾಜಾತನ ಹೊಂದಿರುವ ಉತ್ತಮ ಕೃತಿ ದ್ವೀಪವ_ಬಯಸಿ.
ಶ್ರೀಕಾಂತನಿಗೆ ಕೊನೆಯವರೆಗೂ ತಮ್ಮ ಕೃಷ್ಣ ನೆನಪು ಮಾತ್ರವಾಗಿ ಉಳಿದ, ಭೌತಿಕವಾಗಿ ಅವನನ್ನು ಹುಡುಕುಲು ಆಗಲಿಲ್ಲ, ಆದರೆ ಒಂದು ಊರನ್ನು ಬಿಟ್ಟು ಹೊರಟುಹೋಗಬೇಕಾಗಿ ಬಂದಾಗ ಮೂಡುವ ಅಸಹಾಯಕತೆ ಮತ್ತು ಇತರ ಹತಾಶೆಯ ಭಾವಗಳನ್ನು ಆತ ವರ್ಷಗಳ ಹಿಂದೆ ಅನುಭವಿಸಿದಂತೆಯೇ ಇವನೂ ಅನುಭವಿಸಬೇಕಾಗಿ ಬಂದದ್ದ�� ಬದುಕಿನ ವೈರುಧ್ಯ.
ಒಳ್ಳೆಯ ಓದುಗ ಸ್ನೇಹಿತರು ಯಾಕಿರಬೇಕು ಮತ್ತು ಅಂತಹ ಸ್ನೇಹಿತರನ್ನು ಪದೇ ಪದೇ ಭೇಟಿಯಾಗುತ್ತಿರಬೇಕೇಕೆ ಎಂಬುದನ್ನು ಅರ್ಥಮಾಡಿಸಿದ ಪುಸ್ತ��.
ಇತ್ತೀಚೆಗೆ ದತ್ತಾತ್ರಿರವರ ಒಂದೊಂದು ತಲೆಗೂ ಒಂದೊಂದು ಬೆಲೆ ಕಾದಂಬರಿ ಓದಿದಾಗ ಅವರ ಬರಹದ ಶೈಲಿ ತುಂಬಾ ಇಷ್ಟವಾಯಿತು ಹಾಗು ಅದೊಂದು ಅದ್ಭುತ ಕಾದಂಬರಿ ಕೂಡ. ದ್ವೀಪವ ಬಯಸಿ ಕೂಡ ಅದೇ ಸಾಲಿಗೆ ಸೇರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಉದ್ಯೋಗ ಹೌದು ಇದು ಎಲ್ಲರಿಗೂ ಅವಶ್ಯಕತೆ, ಸ್ವದೇಶದಲ್ಲಲದೇ ಹೆಚ್ಚು ಹಣ ಸಂಪಾದಿಸಲು ದೇಶವನ್ನು ಬಿಟ್ಟು ಪರದೇಶಕ್ಕೆ ಹೋಗಿ ಅಲ್ಲಿನ ಜನರ ಮಧ್ಯೆ ಜೀವನ ಸಾಗಿಸುವಾಗ ವಲಸೆ ಹೋದವರಿಗೆ ಎದುರಾಗುವ ಅಡೆತಡೆಗಳು, ಕೆಲಸದಲ್ಲಿ ಅವಕಾಶಗಳು, ಹಾಗು ಅಲ್ಲಿ ನಡೆಯುವ ರಾಜಕೀಯಗಳು ಹಾಗು ಕಂಪನಿ ಕೆಲಸದಿಂದ ತೆಗೆದಾಗ ಅಂದರೆ ಲೇ ಆಫ್ ಆದಾಗ ಎದುರಾಗುವ ಸಂಕಷ್ಟಗಳು ಈ ಕಾದಂಬರಿಯಲ್ಲಿ ಶ್ರೀಕಾಂತ ಹಾಗು ಇನ್ನು ಕೆಲವು ಪಾತ್ರಗಳಿಂದ ಮನಮುಟ್ಟುವ ಹಾಗೆ ಬರೆದಿದ್ದಾರೆ.
ಮುಖ್ಯ ಪಾತ್ರ ಶ್ರೀಕಾಂತ ಸೂರ್ಯನಾರಾಯಣ ರಾವ್. ಕಾದಂಬರಿ ಶುರುವಾಗುವುದು ಇನ್ಪೋವಾಯೆಜ್ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀಕಾಂತ್ ಲಾಸ್ ಎಂಜಲಿಸ್ ಗೆ ತನ್ನ ಪತ್ನಿ ವಾಣಿಯೊಂದಿಗೆ ಪ್ರಯಾಣ ಹೊರಡುವ ಸನ್ನಿವೇಷದಿಂದ. ಆದರೆ ಅದೇ ಸಮಯದಲ್ಲಿ ಅಮೇರಿಕದ ಮೇಲೆ ವೈಮಾನಿಕ ದಾಳಿ ನಡೆದಿರುವ ಕಾರಣ ಬಹಳ ಸಾವು ನೋವು ಸಂಭವಿಸಿರುತ್ತದೆ, ಆದ್ದರಿಂದ ಅಮೇರಿಕಾದ ನೆಲದ ಮೇಲೆ ಯಾವ ವಿಮಾನವೂ ಹಾರುವಂತಿಲ್ಲ ಎಂದು ಅಮೇರಿಕ ಏರ್ಬ್ಯಾನ್ ಹಾಕಿರುತ್ತದೆ. ತಾನು ಕೆಲಸ ಮಾಡುತ್ತಿದ್ದ ಹೈಪರ್ಲಿಂಕ್ ಕಂಪನಿಯನ್ನು ಇನ್ಪೋವಾಯೆಜ್ ಕೊಂಡಿದ್ದು, ಒಂದು ಪ್ರಾಜಕ್ಟ್ ಮೇರೆಗೆ ತಾನು ಅಮೇರಿಕಾಕ್ಕೆ ಹೋಗಲು ಅವಕಾಶ ದೊರೆತದು ಅದಕ್ಕೆ ವಾಣಿ ಸಹಕರಿಸಿದ್ದು ಎಲ್ಲವು ವಿಸ್ಮಯವಾಗಿ ಕಾಣುತ್ತದೆ.
ಹುಟ್ಟಿ ಬೆಳದ ಗೊಲ್ಲರಹಳ್ಳಿ ದ್ವೀಪವಾದದ್ದು ಬೇಲೂರು ಮತ್ತು ಚಿಕ್ಕಮಗಳೂರಿನ ಮಧ್ಯೆ ಯಗಚಿ ನದಿಗೆ ಅಣೆಕಟ್ಟು ಕಟ್ಟಿದಾಗ, ಅಣೆಕಟ್ಟು ಕಟ್ಟುವಾಗ ಶ್ರೀಕಾಂತನ ಮನಸ್ಸಿಗಾದ ದುಃಖ ಅಷ್ಟಿಷ್ಟಲ್ಲ, ಇಡೀ ಗೊಲ್ಲರಹಳ್ಳಿ ಮುಳುಗುತ್ತದೆಂದು ತಿಳಿದಾಗ ತನ್ನ ಅಪ್ಪ ದುಃಖಕ್ಕೊಳಗಾಗಿ ಪ್ರತಿ ದಿವಸ ವೀರಭದ್ರ ದೇವಸ್ಥಾನದಲ್ಲೇ ಸಮಯ ಕಳೆಯುತ್ತಿದ್ದರು, ತಾಯಿಯಿಲ್ಲದೆ, ಅಪ್ಪನ ಆರೈಕೆಯಿಲ್ಲದೇ ತಾನು ಮತ್ತು ತಮ್ಮ ಕೃಷ್ಣ ಒಬ್ಬಂಟಿಯಾಗಿದ್ದೆವು. ಕೃಷ್ಣನಿಗೆ ವಿದ್ಯೆ ಹತ್ತಲಿಲ್ಲ, ಏವುದಾದರೂ ಕೆಲಸ ಮಾಡಿಕೊಂಡು ಜೀವನ ಸಾಗಿಸುವನೆಂದು ಹಾಗು ಗೊಲ್ಲರಹಳ್ಳಿಯಲ್ಲಿ ಒಬ್ಬಂಟಿಯಾಗಿ ಇರಲಾರನೆಂದು ಕೇಳಿಕೊಂಡಾಗ ತಾನು ಓದಲು ಬೆಂಗಳೂರಿಗೆ ಹೋಗುವ ಸಮಯದಲ್ಲಿ ನಿಸ್ಸಹಾಯಕನಾಗಿದ್ದೆ, ಕೃಷ್ಣನನ್ನು ಬಿಟ್ಟು ಹೊರಟಾಗ ದುಃಖ ಹೇಳತೀರದು, ಒಂದು ದಿನ ಪೋಲಿಸ್ ನವರಿಂದ ಕೃಷ್ಣನು ಊರು ಬಿಟ್ಟು ಕಣ್ಮರೆಯಾಗಿರುವ ಸುದ್ಧಿ ತಿಳಿದು ಅದಕ್ಕೆ ಅವನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಬರದೇ ಇರುವುದೇ ಕಾರಣವೆಂದು ದುಃಖಪಡುತ್ತಾನೆ, ಅಂದಿನಿಂದ ಕಳೆದುಹೋದ ಕೃಷ್ಣನನ್ನು ತಾನು ಎಲ್ಲೇ ಹೋಗಲಿ ಎಲ್ಲರಲ್ಲಿಯೂ ಹುಡುಕುತ್ತಿರುತ್ತಾನೆ. ಐಐಟಿ ಖರಗ್ಪುರ್ ನಲ್ಲಿ ವಿಧ್ಯಾಭ್ಯಾಸ ಮುಗಿಸಿ ಹೈಪರ್ಲಿಂಕ್ ಕಂಪನಿಗೆ ಸೇರಿಕೊಂಡು ಒಳ್ಳೆಯ ಹೆಸರೂ ಪಡೆದು, ಅಲ್ಲೇ ಆಕಸ್ಮಿಕವಾಗಿ ವಾಣಿಯ ಭೇಟಿಯಾಗಿ ಒಬ್ಬರೊನ್ನೊಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಇದೇ ಸಮಯದಲ್ಲಿ ತಾನು ಕೆಲಸ ಮಾಡುತ್ತಿದ್ದ ಹೈಪರ್ಲಿಂಕ್ ಕಂಪನಿಯನ್ನು ಇನ್ಪೋವಾಯೆಜ್ ಕೊಂಡಿದ್ದು , ಒಂದು ಪ್ರಾಜಕ್ಟ್ ಮೇರೆಗೆ ತಾನು ಅಮೇರಿಕಾಕ್ಕೆ ಹೋಗಲು ಅವಕಾಶ ದೊರೆಯುತ್ತದೆ.
ಪರದೇಶಕ್ಕೆ ಹೋದಾಗ ತನ್ನ ಸಹೋದ್ಯೋಗಿ ಆಂಜನೇಯಲು ನೆರವಾಗುತ್ತಾರೆ, ಟಸ್ಟಿನಲ್ಲಿ ಮನೆಮಾಡುತ್ತಾರೆ, ಅಲ್ಲಿ ಕನ್ನಡದವರೇ ಆದ ಅಶೋಕ್ ಸುಜಾತರವರ ಪರಿಚಯವಾಗುತ್ತದೆ, ಆಫೀಸಿನಲ್ಲಿ ಹಲವರ ಪರಿಚಯವಾಗುತ್ತದೆ, ಪ್ರಾಂಕೋನನ್ನು ಕಂಡಾಗಲೆಲ್ಲ ಕೃಷ್ಣನನ್ನೇ ಕಂಡ ಹಾಗೆ ಕುತುಹಲವಾಗುತ್ತದೆ, ತನ್ನ ಸಹೋದ್ಯೋಗಿಗಳು ಪ್ರಾಂಕೋನನ್ನು ದೂರಿದರೂ ತಾನು ಮಾತ್ರ ಆತನಿಗೆ ಸದಾ ನೆರವಾಗುತ್ತಿರುತ್ತಾನೆ, ಆತನಲ್ಲಿ ಕೃಷ್ಣನನ್ನು ಕಂಡ ನಂತರ ಅವನೊಂದಿಗೆ ಸಂಬಂಧವೇ ಸಂಪೂರ್ಣವಾಗಿ ಬದಲಾಗುತ್ತದೆ, ಇದರಿಂದ ಪ್ರಾಂಕೋಗೂ ಆಶ್ಚರ್ಯವಾಗುತ್ತದೆ. ಪ್ರಾಂಕೋಗೆ ಪೋಟೋಗ್ರಫಿ ಹುಚ್ಚು, ಒಮ್ಮೆ ಆರೇಂಜ್ ಕೌಂಟಿ ಕ್ಯಾಮರಾ ಕ್ಲಬ್ ನಲ್ಲಿ ಆತನ ಛಾಯಚಿತ್ರಗಳ ಪ್ರದರ್ಶನವಿದೆಯೆಂದು ತನ್ನನ್ನು ಕರೆದೊಯ್ಯುತ್ತಾನೆ, ಅಲ್ಲಿ ಸಮಿಂದ ಮದುರೆಸಿಂಘೆಯವರ ಚಿತ್ರಗಳಿದ್ದವು ಅದರಲ್ಲಿ *ದ್ವೀಪವ ಬಯಸಿ* ಚಿತ್ರ ಆಕರ್ಷಣೆಯಾಗಿ ಕಾಣುತ್ತದೆ. ಅವರ ಪರಿಚಯವೂ ಹಾಗು ಅವರ ಮಗ ಮಹಿಂದನ ಪರಿಚಯವಾಗುತ್ತದೆ.
ತಾನು ಪ್ರಾಂಕೋ ಜೆನ್ಸನ್ ಗ್ರೀನ್ ಎನರ್ಜಿ ಎನ್ನುವ ಕಂಪನಿಯ ಪ್ರಾಜೆಕ್ಟನಲ್ಲಿ ಕೆಲಸ ಮಾಡಲು ಅವಕಾಶ ದೊರೆಯುತ್ತದೆ, ಈ ಕಂಪನಿ ಜೋಳದಲ್ಲಿ ಪೆಟ್ರೋಲ್ ತರಹದ ಇಂಧನವನ್ನು ತಯಾರಿಸುವ ಕಂಪನಿ, ಜೋಳದಂತಹ ಪ್ರಮುಖ ಆಹಾರ ಧಾನ್ಯವನ್ನು ಇಂಧನ ತಯಾರಿಕೆಗೆ ಬಳಸಿದರೆ ಪ್ರಪಂಚದ ಆಹಾರ ವ್ಯವಸ್ಥೆಯಲ್ಲಿ ಏರುಪೇರಾಗುವುದೆಂದು ಆಹಾರಕ್ಕೆ ಎಷ್ಟು ಜೋಳ, ಇಂಧನಕ್ಕೆ ಎಷ್ಟು ಜೋಳ ಎನ್ನುವ ಪ್ರಶ್ನೆಗಳು ಎದುರಾಯಿತು. ಇದೇ ಸಮಯದಲ್ಲಿ ಅರಬ್ ರಾಷ್ಟ್ರಗಳು. ಪೆಟ್ರೋಲಿನ ಉತ್ಪಾದನೆಯನ್ನು ಹೆಚ್ಚು ಮಾಡಿದ್ದೇ ತಡ ಅಮೇರಿಕಾಕ್ಕೆ ಪೆಟ್ರೋಲ್ ಹೆಚ್ಚು ಹೆಚ್ಚು ಬರತೊಡಗಿತು, ಇದರಿಂದ ಜೋಳದಿಂದ ಪೆಟ್ರೋಲ್ ಉತ್ಪಾದನೆ ಮಾಡುತ್ತಿದ್ದ ಜೆನ್ಸನ್ ಗ್ರೀನ್ ಕಂಪನಿಗೆ ಆಘಾತವಾಯಿತು, ಇದರಿಂದ ತಾವು ಮಾಡುತ್ತಿದ್ದ ಹಲವಾರು ಪ್ರಾಜೆಕ್ಟ್ ನಿಂತುಹೋದವು. ಇದರಿಂದ ಲೇಆಫ್ ಆಗಿ ಪ್ರಾಂಕೋ, ಆಂಜನೇಯಲು, ಹಾಗು ಇನ್ನಿತರೆ ಸಹೋದ್ಯೋಗಿಗಳನ್ನು ಕಂಪನಿಯಿಂದ ಹೊರಹಾಕಿ ತನ್ನನ್ನು ಮಾತ್ರ ಉಳಿಸಿಕೊಂಡದ್ದು ಹೆಚ್ಚು ಆಘಾತಕಾರಿಯಾಯಿತು. ಮಾಸ್ ಲೇಆಫ್ ಗಳಲ್ಲಿ ಸರ್ವೈವ್ ಆದವರಿಗೆ ಈ ನೋವಿನ ಭಾವನೆ ಸಹಜ ಇದಕ್ಕೆ ಸರ್ವೈವರ್ ಸಿಂಡ್ರೋಮ್ ಎಂದು ವಾಣಿ ಹೇಳಿದಾಗ ಪ್ರಾಂಕೋ ಯುದ್ಧದಲ್ಲಿ ಬದುಕುಳಿದ ತನ್ನ ಅಪ್ಪ ಅಮ್ಮನ ಬಗ್ಗೆ ಹೇಳುವಾಗ ಕೂಡ ಇದನ್ನೇ ಬಳಸಿದ್ದು ಜ್ಞಾಪಕವಾಗುತ್ತದೆ. “ಹೌದು ಯುದ್ಧದಲ್ಲಿ ಜೊತೆಗಾರರು ಸತ್ತು ತಾವೊಬ್ಬರೇ ಉಳಿಯುವ ಸೈನಿಕರಲ್ಲಿ ಇದು ಸಾಮಾನ್ಯವಂತೆ, ಉಳಿದ ನೌಕರರು ಲೇಆಫ್ ಆದರೂ ನನ್ನಿಂದಲೇ ಇವೆಲ್ಲಾ ಆಯಿತು ಎನ್ನುವ ಭಾವನೆ ಬೆಳೆಯುತ್ತದೆ”. ಈ ಮನೋಸ್ಥಿತಿಗೆ ಒಳಗಾಗಿ ಅದರಿಂದ ಆಚೆ ಬರಲು ಸಮಿಂದರು ನೆರವಾಗುತ್ತಾರೆ, ಫೋಟೋಗ್ರಫಿಯಲ್ಲಿ ಆಸಕ್ತಿ ಬೆಳೆಯುತ್ತದೆ, ಇದರಿಂದ ತಮ್ಮ ಮನಸ್ಸಿನ ನೋವುಗಳನ್ನು ಮರೆಯುತ್ತಾ ಹೋಗುತ್ತಾನೆ. ವಾಣಿ ಜೊತೆ ತನ್ನ ಸಮಯವನ್ನು ಕಳೆಯಲು ತೊಡಗುತ್ತಾನೆ.
ಅಮೇರಿಕಾ ರಿಪೋರ್ಟರ್ ಆಗಿ ಆಫ್ಘಾನಿಸ್ತಾನಕ್ಕೆ ಹೋದ ಮಹಿಂದನ ಸಾವಿನಿಂದ ಸಮಿಂದರು ಹೃದಯಾಘಾತಕ್ಕೆ ಒಳಗಾಗಿ ಜೀವನದಲ್ಲೇ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇತ್ತ ತನಗೂ ಭಾರತಕ್ಕೆ ವಾಪಸ್ಸು ಹೋಗುವ ಮನಸ್ಸಾಗುತ್ತದೆ, ಹೋಗುವ ಮುನ್ನ ಪ್ರಾಂಕೋ, ಆಂಜನೇಯಲು ವನ್ನು ಭೇಟಿಮಾಡಿ ಕೆಲಸವನ್ನು ಕಳೆದುಕೊಂಡು ಇತರೆ ಕೆಲಸ ಸಿಗದೆ ಕೆಲಸಕ್ಕೆ ಪರದಾಡುವ ಅವರ ಸ್ಥಿತಿಯನ್ನು ಕಂಡು ದುಃಖವಾಗುತ್ತದೆ, ತಾನು ಅಮೇರಿಕಾಕ್ಕೆ ಬಂದಾಗ ಸಹಾಯ ಮಾಡಿದವರಿಗೆ ತಾನೇನೂ ಸಹಾಯ ಮಡಲಾಗಲಿಲ್ಲ ಎಂದು ಬೇಸರವಾಗುತ್ತದೆ, ಅವರಿಗೆ ಅಮೇರಿಕಾದಲ್ಲಿ ವಾಸಿಸುವುದೇ ಅಗತ್ಯವಾದದ್ದು, ವಾಸಿಸಲು ಕೆಲಸವಿರಬೇಕು ಇಲ್ಲದಿದ್ದಲ್ಲಿ ಅಲ್ಲಿರುವುದಕ್ಕೆ ಸರಕಾರ ಅವಕಾಶ ಕೊಡುವುದಿಲ್ಲ. ಆದರೆ ತನಗೆ ಅಮೇರಿಕಾದಲ್ಲಿ ಇರಲು ಆಸಕ್ತಿಯಿಲ್ಲದೆ ಭಾರತಕ್ಕೆ ವಾಪಸ್ಸೋಗಲು ನಿರ್ಧರಿಸಿದಾಗ ವಾಣಿ ನೆರವಾಗುತ್ತಾಳೆ, ಮಕ್ಕಳಿಲ್ಲದೇ ಇರುವ ತಮಗೆ ಭಾರತಕ್ಕೆ ಹೋದರೆ ಮಕ್ಕಳಾಗುವುದೆಂದು ವಾಣಿಯ ನಂಬಿಕೆ.
ಮುಳುಗಡೆಯಾದ ತನ್ನ ಊರು, ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಳ್ಳುವುದಲ್ಲದೇ, ಊರು ಮುಳುಗುವ ಸಮಯದಲ್ಲಿ ಅಪ್ಪ ತಮ್ನಿಂದ ದೂರವಾದದ್ದು, ಕೃಷ್ಣನ ಕಣ್ಮರೆ, ವಾಣಿಯ ಜೊತೆ ವಿವಾಹ, ಇನ್ಪೋವಾಯೆಜ್ ಕಂಪನಿಗೆ ಸೇರಿದ ಮೇಲೆ ತನ್ನ ಜೀವನದಲ್ಲಾದ ಏರು ಪೇರುಗಳು, ತನ್ನ ಜೀವನದಲ್ಲಿ ಪ್ರಾಂಕೋ, ಅಶೋಕ್, ಆಂಜನೇಯಲು, ಸಮಿಂದ, ತನ್ನ ಕನಸುಗಳಿಗೆ ಪ್ರಾಧಾನ್ಯತೆ ಕೊಟ್ಟು ತನ್ನ ಕನಸಿನ ಹಾದಿ ಹಿಡುದು ಹೋಗುವ ಮಹಿಂದರ ಪಾತ್ರ, ಇದರಿಂದ ಮಹಿಂದ ತನಗೆ ಹೇಗೆ ಆದರ್ಶವ್ಯಕ್ತಿಯಾದುದು, ಮಹಿಂದನ ಸಾವು, ಕಂಪನಿಯಲ್ಲಿ ಲೇಆಫ್ ಆದಾಗ ತನ್ನ ಸಹೋದ್ಯೋಗಿಗಳನ್ನು ಕಳೆದುಕೊಂಡಾಗ ಮನಸ್ಸಿಗಾದ ಆಘಾತ, ಹೀಗೆ ಹಲವಾರು ಭಾಗಗಳು ಅತ್ಯದ್ಭುತವಾಗಿವೆ.
ಛಂದ ಪುಸ್ತಕದಲ್ಲಿ ಪ್ರಕಟವಾಗುತ್ತಿರುವ ಕಾದಂಬರಿಗಳಲ್ಲಿ ಒಂದು ವಿಶೇಷವೇನೆಂದರೆ ಎಲ್ಲವೂ ದೂರದ ದೇಶದಲ್ಲಿ ಐಟಿ ಬಿಟಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವಗಳು ಅತ್ವಾ ಬವಣೆಗಳ ಕುರಿತಾಗಿಯೇ ಸುತ್ತುವರೆಯುತ್ತವೆ. ಬಹುಶ ಈ ಸಾಫ್ಟ್ವೇರ್ ಇಂಜಿನಿಯರ್ಗಳು ಬರಿಯಲು ಶುರುಮಾಡಿದ ನಂತರ ಅದೇ ಹಳೆ ಶೂಷಣೆಯ ಒಂದು ವರ್ಗವ ತೆಗಳುವ ಕಥೆಗಳು ಬರುವುದು ಕಡಿಮೆಯಾಗಿ ನಿಂತ ನೀರ್ ಆಗಿದ್ದ ಕನ್ನಡ ಸಾಹಿತ್ಯಕ್ಕೆ ಸ್ವಲ್ಪ ಇವರ ಪುಸ���ತಕಗಳು ಇಂಬು ನೀಡಿದ ಹಾಗೆ ಆಯಿತು.
ದ್ವೀಪವ ಬಯಸಿ ೨೦೦೦ನೇ ಇಸವಿ ಮತ್ತು ಅದರ ಆರಂಭದ ಕಥೆ. ಭಾರತದಿಂದ ಅಮೆರಿಕದ ಲಾಸ್ ಏಂಜಲೀಸ್ ರಾಜ್ಯಕ್ಕೆ ಕೆಲಸದ ನಿಮಿತ್ತ ವಲಸೆ ಹೋಗುವ ದಂಪತಿಗಳ ಕಥೆ ಅಷ್ಟೇ ಅಂದ್ರೆ ತಪ್ಪಾಗುತ್ತದೆ. ಲೇಖಕರು ಸಾಕಷ್ಟು ವಿಚಾರದಬಗ್ಗೆ ಹೇಳುತ್ತಾರೆ. ಐಟಿ ಕಂಪನಿಗಳ ಕಾರ್ಯ ಪ್ರವೃತ್ತ, ಅನಿವಾಸಿ ಭಾರತೀಯರು ದೂರದ ದೇಶದಲ್ಲಿ ಅವರ ಸಂಕೃತಿಯ ಜೊತೆ ತಮ್ಮನ್ನು ಹೊಂದಿಸಿಕೊಳ್ಳಲು ಬಡುವ ಪರಿಪಾಠಲು, ಅಲ್ಲಿನ ಜನರ ಜೀವನ ಶೈಲಿ, ಲಾಸ್ ಏಂಜಲೀಸ್ ರಾಜ್ಯ�� ಅಕ್ರಮ ವಲಸಿಗರ ಮತ್ತು ನಾಗರಿಕರ ಕಚ್ಚಾಟಗಳು ಹೀಗೆ ಆ ಪಾತ್ರಗಳ ಜೊತೆಗೆ ನಮಗೂ ಅಮೆರಿಕ ಸುತ್ತಿದ ಅನುಭವವಾಗುತ್ತದೆ. ಅಲಲ್ಲಿ ಸ್ವಲ್ಪ ಎಳೆದ ಹಾಗೆ ಅನ್ನಿಸಿದರೂ ಕೊನೆಯಲ್ಲಿ ಏನೋ ಒಂದು ಒಳ್ಳೆಯ ಕ್ಲೈಮಾಕ್ಸ್ ಇರುವ ಚಿತ್ರದ ರೀತಿ ಸುಗಮವಾಗಿ ಓದಿಸಿಕೊಂಡು ಹೋಗುತ್ತದೆ.
ಹೆಚ್ಚು ಕಮ್ಮಿ ಎಲ್ಲ IT ಉದ್ಯೋಗಿಗಳ ಕಥೆ. Interest ಮತ್ತೊಂದರಲ್ಲಿ ಆದ್ರೆ ವರಮಾನ, future security ಗೋಸ್ಕರ ದುಡಿಯೋದು IT ಅಲ್ಲಿ.
ಶ್ರೀಕಾಂತನ ಪಾತ್ರದ ಮೂಲಕ ಒಂದು IT companyಯ ಆಗು ಹೋಗುಗಳು, ಒಳ ರಾಜಕೀಯ, on-site opportunity, visa problem, lay off ಎಲ್ಲಾವುದನ್ನು ಚೆನ್ನಾಗಿ ಹೇಳಿದ್ದಾರೆ. ಕಥೆಯಲ್ಲಿ ಬರುವ ಮತ್ತೆ ಕೆಲವು ಪಾತ್ರಗಳು ಇಂತದ್ದೇ ಅಂತ ಕಾರಣವಿಲ್ಲದೆ ಇಷ್ಟ ಆಗತ್ತೆ.
ಭೂಷಣ ರಾವ್, ಶ್ರೀಕಾಂತ್ ತಂದೆ, ಕೃಷ್ಣ ಈ ಪಾತ್ರಗಳಿಗೆ open ending ಕೊಟ್ಟಿದು ನಂಗೆ ಇಷ್ಟ ಆಗ್ಲಿಲ್ಲ, ಯಾಕಂದ್ರೆ ಈ ಪಾತ್ರಗಳು ಏನಾಗತ್ತೆ ಅಂತ ಬಹಳ ಕುತೂಹಲ ಇತ್ತು.
ಕಥೆಯಲ್ಲಿ ಬರುವ ಹಲವು ಪಾತ್ರಗಳು, ಅವಕ್ಕೆ ನೀಡಿರುವ ತಿರುವು, ಕೆಲವೊಂದು ಪಾತ್ರಗಳು ನೀಡುವ ಹಿತ, ಸಂದೇಶ ಇಷ್ಟ ಆಯ್ತು.
Industrial psychology, biofuel ಬಗ್ಗೆ ಅಗತ್ಯಕ್ಕಿಂತ ಜಾಸ್ತಿ ಇದೆ ಅನ್ಸಿ ಆ parts ನ ಹಂಗೆ ಮೇಲೆ ಮೇಲೆ ಓದಿಕೊಂಡು ಹೋದೆ.
Overall ಚೆನ್ನಾಗಿದೆ ಪುಸ್ತಕ.
This entire review has been hidden because of spoilers.
ಇತ್ತೀಚೆಗೆ ಎಂ.ಆರ್.ದತ್ತಾತ್ರಿಯವರ "ತಾರಾಬಾಯಿಯ ಪತ್ರ" ಕಾದಂಬರಿಯನ್ನು ಓದಿದ್ದೆ. ಅದು ಹುಟ್ಟುಹಾಕಿದ ತಳಮಳ,ತುಮುಲಗಳಿಗೆ ಅಕ್ಷರ ರೂಪವನ್ನು ಕೊಡುವುದು ಸಾಧ್ಯವಾಗಿರಲಿಲ್ಲ. ಈಗ ಈ ಕಾದಂಬರಿಯನ್ನು ಓದಿ ಮುಗಿಸಿದಾಗ ಅವರ ಯಾವ ಕೃತಿಯ ಅನಿಸಿಕೆಯನ್ನು ಸಹ ಬರಹ ರೂಪಕ್ಕೆ ಇಳಿಸಲು ನಾನು ಅಸಮರ್ಥ ಎಂದು ತೋರುತ್ತದೆ. ಏಕೆಂದರೆ ಈ ಒಳತೋಟಿಗಳು ನಮ್ಮಷ್ಟಕ್ಕೆ ನಾವೇ ಅನುಭವಿಸುವಂತಾದ್ದು. ಅನುಭವವನ್ನು ವಿಮರ್ಶೆಯ ಚೌಕಟ್ಟಿನಲ್ಲಿ ಕೂರಿಸಲು ಸಾಧ್ಯವಿಲ್ಲ. ಅದನ್ನು ಇತರರಿಗೆ ದಾಟಿಸುವುದು ಸವಾಲಿನ ಕೆಲಸ.
ಇಂದಿನ ಜಗತ್ತಿನಲ್ಲಿ ಉದ್ಯೋಗ ಎಂಬುದು ಎಲ್ಲರ ಅವಶ್ಯಕತೆ ನಿಜ. ಆದರೆ ಕೇವಲ ಉದ್ಯೋಗ ನಿಮಿತ್ತ ಪರದೇಶದಲ್ಲಿ ತನ್ನ ಬದುಕನ್ನು ರೂಪಿಸಿಕೊಳ್ಳಲು ಹೆಣಗಾಡುವ ಪ್ರತಿಯೊಬ್ಬನ ಕಥೆಯೂ ಈ ಕಾದಂಬರಿಯ ಕಥಾವಸ್ತು. ಉದ್ಯೋಗ ನಿಮಿತ್ತ ಪರದೇಶದಲ್ಲಿ ನೆಲೆಸಿರುವವರು ಎದುರಿಸಬೇಕಾದ ಸವಾಲುಗಳು, ಜಾಗತಿಕ ಆರ್ಥಿಕ ಹಿಂಜರಿತ ಕಾರ್ಪೋರೇಟ್ ಜಗತ್ತಿನಲ್ಲಿ ಉಂಟುಮಾಡುವ ತಲ್ಲಣಗಳು ಮತ್ತು ಉದ್ಯೋಗ ಸ್ಥಳದಲ್ಲಿನ ಒಳ ರಾಜಕೀಯ, ಸಾಮೂಹಿಕ ವಲಸೆಯಿಂದಾಗುವ ಪರಿಣಾಮಗಳು ಮತ್ತು ಆಗಾಗ ಸಂಭವಿಸುವ ಯುದ್ಧಗಳು ಮತ್ತು ಪ್ರಕೃತಿ ವಿಕೋಪಗಳ ಹಾನಿಗಳ ಕುರಿತಾದ ವಿವರಣೆಗಳು ಎಲ್ಲೂ ಬೇಸರ ಹುಟ್ಟಿಸದೆ ಓದಿಸಿಕೊಳ್ಳುತ್ತದೆ. ಕಥೆಯ ಬಹುಭಾಗ ಅಮೆರಿಕೆಯಲ್ಲಿ ನಡೆದರೂ ಇಲ್ಲೆ ಎಲ್ಲೋ ಹತ್ತಿರದಲ್ಲೇ ನಡೆಯುವಂತೆ ಭಾಸವಾಗುತ್ತದೆ.
ಯಗಚಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವಾಗ ಊರು ಮುಳುಗಡೆಯ ಭೀತಿ,ಥಳುಕು ಬಳುಕಿನ ಕಾರ್ಪೋರೇಟ್ ಜಗತ್ತಿನ ಹುಳುಕುಗಳು,ಎಂದೋ ಕಳೆದುಹೋದ ತಮ್ಮನನ್ನು ಹುಡುಕುವ ಶ್ರೀಕಾಂತನ ಮನಸ್ಥಿತಿ, ಸಾಂಪ್ರದಾಯಿಕ ಶೈಲಿಯನ್ನು ಧಿಕ್ಕರಿಸಿ ತನ್ನ ಕನಸುಗಳಿಗೆ ಪ್ರಾಧಾನ್ಯತೆ ಕೊಟ್ಟು ತನ್ನ ಕನಸಿನ ದಾರಿ ತುಳಿಯುವ ಮಹಿಂದ ಮಧುರಸಿಂಘೆ ಎಲ್ಲವೂ ಕಾದಂಬರಿಯ ಓದನ್ನು ಇನ್ನಷ್ಟು ಆಪ್ತವಾಗಿಸುತ್ತವೆ.ಜಾಗತೀಕರಣದಿಂದ ಇಡೀ ವಿಶ್ವವೇ ಒಂದು ಪುಟ್ಟ ಗ್ರಾಮದಂತೆ ಅನಿಸಿದರೆ,ಆ ಗ್ರಾಮದ ವಿವಿಧ ಕಾಲುದಾರಿಗಳು ಇಡೀ ಕಾದಂಬರಿಯುದ್ದಕ್ಕು ಕಾಣಸಿಗುತ್ತವೆ. ಭಾರತ, ಅಮೆರಿಕ, ಮೆಕ್ಸಿಕೋ, ಶ್ರೀಲಂಕಾ, ಚೀನಾ, ರಷ್ಯಾ, ಆಫ್ಘಾನಿಸ್ತಾನ, ಇಟಲಿ, ಕ್ಯೂಬಾ ಎಲ್ಲಾ ದೇಶದ ಪಾತ್ರಗಳು ನಮ್ಮೊಡನೆ ನೇರ ಸಂಭಾಷಣೆಯನ್ನು ಬೆಳೆಸಿದಂತೆ ಅನಿಸುತ್ತದೆ.
ಉದ್ಯೋಗವನ್ನರಸಿ ಪರವೂರು ಅಥವಾ ವಿದೇಶಗಳಿಗೆ ಹೋಗಿ ನೆಲೆಸಿದ ಪ್ರತಿಯೊಬ್ಬರೂ ತಪ್ಪದೇ ಓದಲೇಬೇಕಾದ ಕೃತಿ.ಆದರೆ ಮೊದಲೇ ಹೇಳಿದಂತೆ ನಾನು ಎಷ್ಟು ಹೇಳಿದರೂ ಏನೇ ಹೇಳಿದರೂ ಕೃತಿಯನ್ನು ಓದಿ ಮುಗಿಸಿದಾಗ ಸಿಗುವ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಕಷ್ಟಸಾಧ್ಯ.
ಕಣ್ತೆರೆದು ನೋಡಿದ ಮೊದಲ ಬಾರಿ, ನೀ ಬರೀ ದ್ವೀಪವೇ! ರೆಕ್ಕೆ ಬೆಳೆದು ನಾ ಹರಿದಾಗ ಕಂಡದ್ದು, ಸಂತಸದ ದ್ವೀಪವೇ! ಜೀವನ ಕಲಿಸಿದ ಪಾಠ ಕಲಿತು ಹಿಂಬರುವಾಗ, ನೀ ನಾ ಬಯಸದ ದ್ವೀಪವೇ!!! ಮತ್ತೆ ಸೇರಲು ಹೊರಟಿರುವೆನು ನನ್ನನ್ನು ಬಯಸಿರುವ ದ್ವೀಪವನ್ನೇ.....
ಯಗಚಿ ದ್ವೀಪದಲ್ಲಿ ಆರಂಭವಾಗುವ ಶ್ರೀಕಾಂತನ ಪಯಣ ಜೀವನದ ಪ್ರತಿ ಹಂತದಲ್ಲು ಪಡೆಯುವ ಅನಿರೀಕ್ಷಿತ ತಿರುವು, ಮತ್ತೊಂದು ಲಾಸ್ ಎಂಜೇಲ್ಸ್ ದ್ವೀಪವ ಬಯಸದೆ ಸೇರಿ ಪಡೆದ ಬದುಕಿನ ಅನುಭವದ ಸಾರವನ್ನು ಉತ್ತಮವಾಗಿ ಪದಗಳಲ್ಲಿ ಚಿತ್ರಿಸಿರುವ ಬ್ಯೂಟಿಫುಲ್ ಕಾದಂಬರಿ ಇದಾಗಿದೆ...
ಭಾವನೆಯ ವ್ಯಕ್ತಿಪಡಿಸಲಾಗದ ಓದುಗರಿಗೆ ಇದು ಅದ್ಭುತ ಓದು ಆಗಿದೆ...
ಬಹಳ ದಿನಗಳ ನಂತರ ಒಂದು ಒಳ್ಳೆಯ ಪುಸ್ತಕ ಓದಿದ ಅನುಭವ ಆಯಿತು , ಹೆಸರೇ ಹೇಳಿದಂತೆ ದ್ವೀಪವ ಬಯಸಿ , ಐಟಿ ಉದ್ಯೋಗಿಯ ಕೇಂದ್ರೀಕೃತ ಕಾದಂಬರಿ ಆದರೂ ಕಾಡಿದು ಮಾತ್ರ ಬುದ್ಧನ ರೂಪದ ಮಹಿಂದಾ . ಸಂಬಂದಗಳ ನಡುವಿನ ಭಾವನೆಗಳನ್ನು ಬಹಳ ಚೆನ್ನಾಗಿ ಚಿತ್ರಿಸಿದರೆ , ಕ್ರೀಸ್ ಬ್ರೆಂಟನ್ ಹೇಳುವ ಜಾಗತೀಕರಣದಲ್ಲಿ ಮಾನವೀಯ ಮೊಲ್ಯಗಳಿಗೆ ಬೆಲೆಯಿಲ್ಲ ಎಂಬ ಮಾತು ವಿತಂಡ ಅನ್ನಿಸಿದರೂ ಸತ್ಯ , ಆಹಾರದ ಅಭಾವ , ಇಂಧಾನಕಾಗಿ ಜೋಳವನ್ನು ಉಪಯೋಗ , ಇಂಧನದ ಬೆಲೆ ಏರಿಕೆ ಇಂದ ಆಹಾರದ ಮೇಲೆ ಆಗುವ ಪರಿಣಾಮಗಳು , ಐ ಟಿ ಕ್ಷೇತ್ರದಲ್ಲಿ ನಡೆಯುವ ಮಾಸ್ ಲೇ ಆಫ್ ಗಳು ಮತ್ತು ಅದರಿಂದ ಆಗುವ ಪರಿಣಾಮಗಳ ವಿವರಣೆ ನೈಜ್ಯವಾಗಿದೆ ,ಬರೀತಾ ಹೋದ್ರೆ ತುಂಬಾ ಇದೆ , ಕೃಷ್ಣ ಮತ್ತು ಭೂಷಣ್ ರಾವ್ ಪಾತ್ರಗಳಿಗೆ ತಾರ್ಕಿಕ ಅಂತ್ಯ ಬೇಕಿತೆನೋ ಅನ್ನೋ ಒಂದು ಸಣ್ಣ ತುಡಿತ ಬಿಟ್ಟರೆ , ಇದು ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ .