Jump to ratings and reviews
Rate this book

ವಿಕ್ಷಿಪ್ತ | Vikshiptha

Rate this book
ಗುರುರಾಜ ಕೊಡ್ಕಣಿ, ಯಲ್ಲಾಪುರ ಅವರ ಕಾದಂಬರಿ-ವಿಕ್ಷಿಪ್ತ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

198 pages, Paperback

First published January 1, 2020

1 person is currently reading
9 people want to read

About the author

ಗುರುರಾಜ ಕೊಡ್ಕಣಿ ಚಿಂತಕರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು. ಶತಕಂಪಿನೀ, ವಿಕ್ಷಿಪ್ತ, ಪ್ರತಿಜ್ಞೆ ಇವು ಅವರ ಕಾದಂಬರಿಗಳು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
2 (28%)
4 stars
5 (71%)
3 stars
0 (0%)
2 stars
0 (0%)
1 star
0 (0%)
Displaying 1 - 4 of 4 reviews
Profile Image for That dorky lady.
375 reviews73 followers
September 14, 2020
It was entertaining, I enjoyed reading it. ಕಾದಂಬರಿಕಾರ ಕಥೆಯನ್ನು ಅನವಶ್ಯಕ ಎಳೆದಿಲ್ಲ, ವಿಪರೀತ ವಿವರಗಳನ್ನ ಒದಗಿಸಿ ತಲೆಕೆಡಿಸೋದು ಇತ್ಯಾದಿ ಏನೂ ಮಾಡಿಲ್ಲ. ಸುಲಭವಾಗಿ ಗೆಸ್ ಮಾಡಬಹುದಾದ ಕಥೆಯೇ ಆದ್ರೂ ನಡುವಲ್ಲಿ ಕೆಲವೊಂದು ಅನಿರೀಕ್ಷಿತ ಪ್ಲಾಟ್ ಟ್ವಿಸ್ಟ್ ಇದ್ದು ಓದ್ಲಿಕ್ಕೆ ಖುಷಿಯಾಯ್ತು. ಒಟ್ಟಾರೆಯಾಗಿ ಒಂದು ಚಿಕ್ಕ-ಚೊಕ್ಕ ಹಾರರ್ ಸಿನಿಮಾ ನೋಡಿದ ಅನುಭವ. ತುಳಸಿ, ತುಳಸೀದಳ,ಇತ್ತೀಚೆಗೆ ಓದಿದ ಬಿದಿರಿನ ಗಳ ಇವೆಲ್ಲವುಗಳ ಸಾಲಿಗೆ ಸೇರಿದ ಇನ್ನೊಂದು ಒಳ್ಳೆ ಹಾರರ್ ಕಾದಂಬರಿ.‌
Profile Image for Soumya.
217 reviews48 followers
March 7, 2021
Horror ಕಾದಂಬರಿ.
ಮೊದಲಿನ ಒಂದ್ ಹತ್ತು ಪುಟಗಳು ಬೇಜಾರ್ ಅನ್ಸಕ್ಕೆ ಶುರು ಆಗಿತ್ತು. ಮುಂದೆ ಓದ್ತಾ ಹೋದ ಹಾಗೆ ಚೆನ್ನಾಗಿ ಅನ್ನಿಸ್ತು. ಓದಿ ಮಲಗಿದ್ದ ರಾತ್ರಿ ನನ್ನ ಕನಸಲ್ಲಿ ಕರಡಿ ಬಂದ್ಬಿಟ್ಟಿತ್ತು😂
ಓದ್ತಾ ಓದ್ತಾ ಕಥೆನ predict ಮಾಡ್ತಾ ಹೋಗ್ಬೋದು, but still ಒಂದು ಸಾರಿ ಓದೋದಕ್ಕೆ ಚೆನ್ನಾಗಿದೆ.
Profile Image for Vasanth.
113 reviews22 followers
January 4, 2026
ಇದೊಂದು ಹಾರರ್ ಕಾದಂಬರಿ. ಇಲ್ಲಿ ಸಸ್ಪೆನ್ಸೂ ಇದೆ ತ್ರಿಲ್ಲಿಂಗಾಗೂ ಇದೆ, ಹಾಗಾಗಿ “ವಿಕ್ಷಿಪ್ತ” ಕಾದಂಬರಿಯನ್ನ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಪ್ರಕಾರಕ್ಕೆ ಸೇರಿಸಬಹುದು. ಇದು ನಾನು ಓದಿದ ಮೊದಲ ಹಾರರ್ ಕಾದಂಬರಿ and I thoroughly enjoyed reading every bit of it.

ನಮ್ಮ ಕಥಾನಾಯಕನ ಮನೆಯಲ್ಲೊಂದು ಕರಡಿ ಮುಖದ ಗೊಂಬೆ ಸಿಗುತ್ತೆ, ಅದೇ ಹಿಂದೆ ಕೀ ತಿರ್ಗಿಸಿದ್ರೆ ಕೊರಳಲ್ಲಿ ನೇತಾಕ್ಕೊಂಡಿರೋ ಡ್ರಮ್ ಬಾರಿಸುತ್ತಲ್ಲ, ಟಕಟಕಟಕಟಕಟಕ ಅಂತಾ ಆತರದ ಗೊಂಬೆ. ಅದು ಗೊಂಬೆಯಲ್ಲ ಅದಕ್ಕೆ ಅತಿಮಾನುಷ ಶಕ್ತಿಯಿದೆ ಎನ್ನುವುದು ನಮ್ಮ ನಾಯಕನಿಗೆ ಗೊತ್ತು. ಕಾರಂತರಗಳಿಂದ ಆತ ಬೆಂಗಳೂರಿನಿಂದ ಮಲೆನಾಡಿನಲ್ಲಿರೋ ತನ್ನೂರಿಗೆ ವಾಪಾಸ್ ಹೋಗಬೇಕಾಗುತ್ತೆ, ಆ ಗೊಂಬೆಯೂ ಅವನ ಜೊತೆಯೇ ಬರುತ್ತೆ. ಬೆಂಗಳೂರಿನಿಂದ ಊರಿಗೆ ಸಾಗುವ ಹಾದಿಯಲ್ಲಿ ಆ ಗೊಂಬೆಗೂ ತನಗೂ ಇರುವ ಸಂಬಂಧವನ್ನ ಹೇಳುವ ಕಥಾನಾಯಕ, ಊರು ತಲುಪಿದ ಮೇಲೆ ತನ್ನ ಹದಿನೈದು ವರ್ಷದ ಮಗನ ಜೊತೆಗೂಡಿ ಆ ದುಷ್ಟಶಕ್ತಿಯ ನಾಶಕ್ಕೆ ಮಾಡುವ ಸಾಹಸವನ್ನು ಕಾಣಬಹುದು. ಇದೇ ಈ ಕಥೆಯ ತಿರುಳು, ಆದರೆ ಪ್ರಕ್ರಿಯಲ್ಲಿ ಬಹಳ ಇಂಟರ್ಸ್ರಿಂಗ್ ಎನ್ನಿಸುವ ವಿಷಯಗಳು ಕಾದಂಬರಿಯಲ್ಲಿ ಬರುತ್ತವೆ, ಮುಂದೇನು ಎಂದು ಓದಿಸಿಕೊಳ್ಳುವ ಚಾಣಾಕ್ಷತನದ ಬರವಣಿಗೆಯಿದೆ. ಗೊಂದಲಕ್ಕೊಳಪಡಿಸದೆ ಒಂದೊಂದೇ ರಹಸ್ಯವನ್ನ ಬಿಚ್ಚಿಡುತ್ತಾ ಡಾಟ್ಸ್ಗಳನ್ನ ಕನೆಕ್ಟ್ ಮಾಡುವ ರೀತಿ ಇಷ್ಟವಾಯ್ತು.

ಹಾರರ್ ಸಸ್ಪೆನ್ಸ್ ಕಾದಂಬರಿ ಓದಬೇಕು ಎನ್ನುವವರಿಗೆ ವಿಕ್ಷಿಪ್ತ ಒಳ್ಳೆ ಸ್ಟಾರ್ಟಿಂಗ್ ಪಾಯಿಂಟ್ ಅನ್ನಿಸುತ್ತೆ ಮತ್ತೆ ನಾನು ಆಗಾಗ ಹಾರರ್ ಕಥೆ ಕಾದಂಬರಿಗಳನ್ನ ಓದಬೇಕು ಎನ್ನುವಂತೆಯೂ ಮಾಡಿದೆ .

- ವಸಂತ್
04/01/2026
1 review
December 6, 2025
ಪುಸ್ತಕ:- ವಿಕ್ಷಿಪ್ತ
ಲೇಖಕರು:- ಗುರುರಾಜ ಕೋಡ್ಕಣಿ
ಪ್ರಕಾಶಕರು:- ಸಮನ್ವಿತ
ಪುಟಗಳು:- 198
ಬೆಲೆ:- 180

ಬೆಂಗಳೂರಿನಿಂದ ತನ್ನೂರಿಗೆ‌ ಸಕುಟುಂಬ ಪರಿವಾರದೊಂದಿಗೆ ಮರಳಲು ಸಿದ್ಧವಾಗುತ್ತಿರುವ ಸಮಯದಲ್ಲಿ ಕಪಾಟಿನಿಂದ ಬಂದ ಸದ್ದು ಒಂದು ಕ್ಷಣ ಕಥಾನಾಯಕ 'ಅಭಿಮನ್ಯು'ವನ್ನು ಬೆಚ್ಚಿಬೀಳಿಸುತ್ತದೆ.‌ ಈ ಹಿಂದೆ ಹಲವಾರು ಕೇಳಿದ ಅದೇ ಧ್ವನಿ! ತನ್ನ ತಾಯಿ, ಸ್ನೇಹಿತ ಸೇರಿದಂತೆ ಮೂರು ಜೀವಗಳ ಬಲಿ ಪಡೆದ ಅದೇ...ಆ ಕರಡಿ ಬೊಂಬೆಯ ಧ್ವನಿ!

ವಾಮಾಚಾರದ ಅತ್ಯಂತ ಕ್ಲಿಷ್ಟಕರ ತಂತ್ರಗಳಲ್ಲಿ ಒಂದಾದ 'ಆತ್ಮ ಸ್ಥಂಭನ ವಿದ್ಯೆ'ಯ ಮೂಲಕ ಊರಿಗೆ ಮಾರಕವಾದ ಮಾಟಗಾತಿಗೆ 'ಅಭಿಮನ್ಯು' ವಂಶದವರ ಮೇಲೆ ಏಕಿಷ್ಟು ದ್ವೇಷ?

ಕೃಷ್ಣರಾತ್ರಿಗೂ ರಕ್ತ ಕಪಾಲಿ ನಡುವೆ ಇರುವ ಸಂಬಂಧವೇನು?
'ಕೂಡಿಟ್ಟ ಮನೆಗೆ ಅಗ್ನಿ, ಕಟ್ಟಿಟ್ಟ ಮನೆಗೆ ಭೈರವನ ಶಕ್ತಿ' ಎಂಬ ವಾಕ್ಯದ ಹಿಂದಿನ ಕತೆಯೇನು?

ಪ್ರತಿ ಪುಟದಲ್ಲಿಯೂ ಭಯದ ಜೊತೆಗೆ ರೋಚಕತೆಯನ್ನು ಮೂಡಿಸುವ ಅದ್ಭುತ ಕಾದಂಬರಿ. 'ಬಿದಿರಿನ ಗಳ, ಮಾಟಗಾತಿ, ಸರ್ಪ ಸಂಬಂಧ ತರಹ ವಾಮಾಚಾರ/ವಶೀಕರಣ ಕುರಿತಾದ ರೋಚಕ ಕಾದಂಬರಿ ಓದಲು ಬಯಸುವವರಿಗೆ ಈ ಪುಸ್ತಕ ಒಳ್ಳೆಯ ಆಯ್ಕೆ.ವಾಮಾಚಾರದ ಅತ್ಯಂತ ಕ್ಲಿಷ್ಟಕರ ತಂತ್ರಗಳಲ್ಲಿ ಒಂದಾದ 'ಆತ್ಮ ಸ್ಥಂಭನ ವಿದ್ಯೆ'ಯ ಮೂಲಕ ಊರಿಗೆ ಮಾರಕವಾದ ಮಾಟಗಾತಿಗೆ 'ಅಭಿಮನ್ಯು' ವಂಶದವರ ಮೇಲೆ ಏಕಿಷ್ಟು ದ್ವೇಷ?
ಕೃಷ್ಣರಾತ್ರಿಗೂ ರಕ್ತ ಕಪಾಲಿ ನಡುವೆ ಇರುವ ಸಂಬಂಧವೇನು?
'ಕೂಡಿಟ್ಟ ಮನೆಗೆ ಅಗ್ನಿ, ಕಟ್ಟಿಟ್ಟ ಮನೆಗೆ ಭೈರವನ ಶಕ್ತಿ' ಎಂಬ ವಾಕ್ಯದ ಹಿಂದಿನ ಕತೆಯೇನು?
ಪ್ರತಿ ಪುಟದಲ್ಲಿಯೂ ಭಯದ ಜೊತೆಗೆ ರೋಚಕತೆಯನ್ನು ಮೂಡಿಸುವ ಅದ್ಭುತ ಕಾದಂಬರಿ. 'ಬಿದಿರಿನ ಗಳ, ಮಾಟಗಾತಿ, ಸರ್ಪ ಸಂಬಂಧ ತರಹ ವಾಮಾಚಾರ/ವಶೀಕರಣ ಕುರಿತಾದ ರೋಚಕ ಕಾದಂಬರಿ ಓದಲು ಬಯಸುವವರಿಗೆ ಈ ಪುಸ್ತಕ ಒಳ್ಳೆಯ ಆಯ್ಕೆ.
This entire review has been hidden because of spoilers.
Displaying 1 - 4 of 4 reviews

Can't find what you're looking for?

Get help and learn more about the design.