ನನಗೆ ಒಂದು ದಿನದ ಓದು ಈ ಪುಸ್ತಕ . ಸ್ಪರ್ಧಾತ್ಮಕ ಪರೀಕ್ಷೆ ಬರೆಯ ಹೊರಟವರು , ಒಂದು ಬಾರಿ ಈ ಪುಸ್ತಕ ಓದಿದರೆ ಒಳ್ಳೆಯದು . ಕಾರಣಗಳೇ ನೆಪವಾಗಿಸುವವರು ,ಪುಸ್ತಕ ಓದಿದ ಮೇಲೆ ಬದಲಾಗಬಹುದು. ಪುಸ್ತಕದಲ್ಲಿ ದಯಾನಂದರ ಬಾಲ್ಯದ ಕೋಳಿ ಕಳ್ಳತನ ನಗಿಸುತ್ತೆ, ಹಸಿವು ಅಳಿಸುತ್ತೆ . ಚಪ್ಪಲಿ ಕಥೆ , ತಂದೆಯ ಪಾದ, ಯೋಚನೆ ಮಾಡಿಸುತ್ತೆ. ಸಾಮಾನ್ಯವಾಗಿ ಇನ್ನೂ ಸೇವೆಯಲ್ಲಿರುವ ಅಧಿಕಾರಿಗಳ ಆತ್ಮಕಥೆ ಕಡಿಮೆ ಅಥವಾ ನಾನು ಓದಿದ್ದೆ ಕಡಿಮೆ ಇರಬಹುದು, ಅದಕ್ಕೆ ಪುಸ್ತಕವನ್ನ ಆತ್ಮ ವೃತ್ತಾಂತ ಅಂತಲೂ ಕರೆದಿರಬಹುದು. ಯಾಕೆ ಈಗಲೇ ಅನ್ನೋದನ್ನು ಅವರೇ ಪುಸ್ತಕದಲ್ಲಿ ಹೇಳಿದ್ದಾರೆ . ದಯಾನಂದರೂ ಜಿಲ್ಲಾಧಿಕಾರಿಯಾಗಿ ಶಿವಮೊಗ್ಗದಲ್ಲಿ ನಿಂತಿದ್ದ ಸಹ್ಯಾದ್ರಿ ಉತ್ಸವ ಮತ್ತೆ ಆರಂಭಿಸಿದ್ದರು. ಅದರಿಂದಲೇ ಜೀವನದಲ್ಲಿ ಮೊದಲ ಬಾರಿ ಪ್ಯಾರಾಗ್ಲೈಡಿಂಗ್ ಹೋಗಿ ಆಕಾಶದಿಂದ ಶಿವಮೊಗ್ಗ ನೋಡೋ ಅವಕಾಶ ಸಿಕ್ಕಿತ್ತು.😊
ಮೂರನೇ ಮುದ್ರಣ ಅಂತ ನೋಡಿದಾಗ Radha Krishna ಅವರತ್ರ ನಿಜಾನಾ ಸಾರ್ ಅಂತ ಕೇಳಿದ್ದೆ.
ಯಾವಾಗಲಾದರೂ ಓದಿದರಾಯ್ತು ಏನಿರುತ್ತೆ ಇದರಲ್ಲಿ ಅಂತ ಅಂದುಕೊಂಡಿದ್ದೆ
ಹೇಗೆ ಓದಿಸಿಕೊಂಡು ಹೋಯಿತು ಅಂದರೆ... ಬೆಳಗ್ಗೆ ಶುರು ಮಾಡಿದವ ಮುಗಿಸಿಯೇ ಬಿಟ್ಟೆ.
ತಮ್ಮ ಬಗ್ಗೆ ಕೀಳರಿಮೆ ಇರುವ, ಜೀವನದಲ್ಲಿ ಸಾಧಿಸುವ ಹಂಬಲ ಇರುವ ನಿಮ್ಮ ಆಪ್ತ ಹುಡುಗರಿಗೆ ಕೊಡಿ ಇದನ್ನು. ಅವರೊಂದು ಹಂತ ಮುಟ್ಟಿದ ಮೇಲೆ ' ಅವತ್ತು ಆ ಪುಸ್ತಕ ಸಿಕ್ಕಿದ ಕಾರಣ ನನ್ನ ಬದುಕು ಬದಲಾಯಿತು ' ಅಂತ ಹೇಳುವ ಪುಸ್ತಕ ಇದು.
ಬಡ ಕುಟುಂಬದಲ್ಲಿದ್ದೆ .ಕಷ್ಟಪಟ್ಟು ಮೇಲೆ ಬಂದೆ ಎನ್ನುವ ಸಾಮಾನ್ಯ ನಿರೂಪಣೆ ಅಲ್ಲ. ಚಿಕ್ಕ ಚಿಕ್ಕ ಅಧ್ಯಾಯಗಳಲ್ಲಿ ಘಟನೆಗಳ ವಿವರಿಸುವಾಗ ಇಷ್ಟವಾಗುತ್ತದೆ.. ಸವಾಲುಗಳು,ಕೀಳರಿಮೆ ,ಅಡ್ಡಿ, ಆತಂಕ ಎದುರಿಸಿ ಗೆದ್ದವರ ಕಥೆ ಇದು
ನೀವು ಓದಲೇಬೇಕಾದ ಅದಕ್ಕಿಂತ ಜಾಸ್ತಿ ಹತ್ತನೇ ಕ್ಲಾಸೋ ಪಿಯುಸಿಯೋ ಆಗಿ ಮುಂದೇನು ಅಂತ ಚಿಂತಿಸುವ ಕಮ್ಮಿ ಮಾರ್ಕು ಅಂತ ಬೇಸರಿಸುವ ಎಳೆಯರಿಗೆ ಕೊಡಬೇಕಾದ ಪುಸ್ತಕ.
ಅಬ್ಬಾ....!!!!!!! ಎಂಥ ಆಪ್ತವೆನಿಸಿದ ಓದು. ಸುಂದರವಾದ ಆತ್ಮ ವೃತ್ತಾಂತ.. ಪ್ರತಿ ಲೇಖನವೂ ಸ್ಫೂರ್ತಿದಾಯಕ. ಬದುಕಿನಲ್ಲಿ ಏನಾದ್ರು ಸಾಧಿಸಲೇ ಬೇಕು ಎನ್ನುವವರು ಒಮ್ಮೆ ಒದ್ಬೇಕು ಏನೂ ಮಾಡಲು ತೋಚುತ್ತಿಲ್ಲ ಎನ್ನುವವರೂ ಒಮ್ಮೆ ಓದಬೇಕಾದಂತಹ ಪುಸ್ತಕ. ಪ್ರತಿ ಲೇಖನವೂ ರೋಮಾಂಚನ ಉಂಟು ಮಾಡಿತು ಹಾಗೆ ಹಲವು ಬಾರಿ ಕಣ್ಣಂಚಿಗೆ ನೀರು ತರಿಸಿತು ಕೂಡ. ಚರ್ಮವನ್ನೇ ಚಪ್ಪಲಿಯಾಗಿಸಿಕೊಂಡ ಅಪ್ಪ ಹಾಗೂ ಹುಚ್ಚಮ್ಮ ಲೇಖನಗಳು ನಂಗೆ ತುಂಬಾ ಇಷ್ಟವಾಯಿತು ಪ್ರಶಾಂತ್ ಭಟ್ ಅವರು ಆವತ್ತು ಈ ಪುಸ್ತಕದ ಬಗ್ಗೆ ಬರೆದದ್ದನ್ನು ನೋಡಿ ಪುಸ್ತಕ ತರಿಸಿಕೊಂಡು ಓದಿಯಾಯಿತು ಇಲ್ಲದಿದ್ದರೆ ಈ ಪುಸ್ತಕ ಬಂದಿದ್ದೆ ಗೊತ್ತಾಗುತ್ತಿರಲಿಲ್ಲವೇನೋ ನನಗೆ, ಧನ್ಯವಾದಗಳು ಸರ್..🙂