ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ನಾವು ಕನ್ನಡಿಗರು ಭಾಗ್ಯಶಾಲಿಗಳು. ನಮಗಿನ್ನೂ ಸರಿಯಾಗಿ ಅದರ ಅರಿವಾಗಿಲ್ಲ ಅಷ್ಟೇ! ಜಾಗತಿಕ ಮಟ್ಟದಲ್ಲಿ ಯಾರಿಗೂ ಕಡಿಮೆಯಿಲ್ಲದ (ಕೆಲವರಿಗೆ ಹಿತ್ತಲ ಗಿಡ ಮದ್ದಲ್ಲ ಅವರನ್ನು ಅವರ ಪಾಡಿಗೆ ಬಿಡುವ) ಸಾಹಿತಿಗಳು ನಮ್ಮವರು. ಕುವೆಂಪು, ಕಾರಂತ,ಮಾಸ್ತಿ,ತೇಜಸ್ವಿ, ಭೈರಪ್ಪ ಯಾರು ಬೇಕು ಹೇಳಿ?
ಬದುಕಿನ ಸಾರವ ಸರಳವಾಗಿ ವಿವರಿಸಿದ ಡಿ.ವಿ.ಜಿ. ನಮ್ಮವರು!
ಇನ್ನೂ ಮೇಲಕ್ಕೆ , ದೇವುಡು ಅವರ ಕೈಯಲ್ಲಿ ಯಾವುದೋ ಶಕ್ತಿ ಬರೆಸಿದ ಮಹಾಕ್ಷತ್ರಿಯ,ಮಹಾಬ್ರಾಹ್ಮಣ, ಮಹಾದರ್ಶನ ನಮ್ಮ ಭಾಷೆಯದು! ಕಳೆದೊಂದು ವಾರದಿಂದ ಪದೇ ಪದೇ ಮರು ಓದಿಗೆ ಕೂತಿದ್ದೇನೆ. ಅರ್ಥವಾಯಿತು ಎನ್ನುವ ಮಾತೇ ಇಲ್ಲ. ಆದರೆ ಇದು ಮಹತ್ತಾದುದು.ಇದನ್ನು ಓದುವ ಸೌಭಾಗ್ಯ ದೊರೆತಿದೆ ಎಂಬ ಭಾವ. ಪುಣ್ಯ ಕ್ಷೇತ್ರಕ್ಕೆ ಹೋದಾಗ ಈ ದೇವರ ದರ್ಶನವಾದುದೇ ನನ್ನ ಪೂರ್ವ ಜನ್ಮ ಸುಕೃತ ಎಂಬ ಧನ್ಯತಾ ಭಾವ ಮೂಡುತ್ತದಲ್ಲ, ಹಾಗೆಯೇ.
ಇನ್ನೊಂದು ಮಾತು. ಇದನ್ನು ಮತ್ತೆ ಓದಲು ಈಗ ಕಾಲ ಕೂಡಿ ಬಂದದ್ದು ಸುಕೃತವೇ
ಇದಕ್ಕೆ ಕಾರಣರಾದ Krishna Prakasha Ulithaya ಅವರಿಗೆ ವಂದನೆ.
ವಿಮರ್ಶೆ ಮಾಡುವ ಯಾವ ಅರ್ಹತೆಯೂ ನನಗಿಲ್ಲ. ಹಾಗಾಗಿ ಇಷ್ಟು ಮಾತ್ರ ಬರೆಯಲು ಸಾಧ್ಯ.
ದೇವುಡು ಅವರ ಕೃತಿಗಳ ಬಗ್ಗೆ ಬರೆಯುವಷ್ಟು ದೊಡ್ಡವನು ನಾನಲ್ಲ. ಅವರ ಕೃತಿಗಳೆಂದರೆ ಅಪ್ಪಟ ಚಿನ್ನ. ಅವರ ಅಧ್ಯಯನವೂ ಹಾಗೆಯೇ, ಅವರ ಈ ಕೃತಿ ಅವರ ರಚನೆಯ ಮಹಾದರ್ಶನವನ್ನೇ ಮಾಡಿಸುತ್ತದೆ. ಒಂದು ಪುಟವನ್ನು ಒಂದೇ ಹೊಡೆತದಲ್ಲಿ ಮುಗಿಸಲು ಬಹಳ ಕಷ್ಟ. ಮನುಷ್ಯ ತನ್ನ ಜೀವತಾವಧಿಯಲ್ಲಿ ದೇವುಡು ಅವರ ಈ ಮೂರು 'ಮಹಾ'ಕೃತಿಗಳನ್ನು ಓದಲೇಬೇಕು.
Awesome book, great character, wonderful biography. Loved it to the core, reread it couple of times. gripping narration of sequences. Cheers to the author!!!
This entire review has been hidden because of spoilers.