ಹೊಯ್ಸಳ, ಚಿತ್ರದುರ್ಗ, ವಿಜಯನಗರ ಇತಿಹಾಸದ ಬಗ್ಗೆ ಒಂದು ಪುಟವಿದ್ದರೂ ಅದು ನಾನು ಓದಲೇಬೇಕು ಎನ್ನುವಷ್ಟು ನನಗೆ ಅದರ ಇತಿಹಾಸ ಇಷ್ಟ...
ಈ ಕೃತಿ ಅಂತಹ ಹೊಯ್ಸಳ ಇತಿಹಾಸದ ಸುಂದರ ಎಳೆಯಾದ ವಿಷ್ಣುವರ್ಧನ ಮತ್ತು ಶಾಂತಲೆ ಕಥೆಯ ವರ್ತಮಾನ ರೂಪ...
ನಮಗೆಲ್ಲ ಶಾಂತಲೆ ಗೊತ್ತಿರುವುದು ಕೇವಲ ನಾಟ್ಯಮಯೂರಿಯಾಗಿ, ಒಬ್ಬ ತ್ಯಾಗಮಯಿಯಾಗಿ.. ಆದರೆ ಇವೆಲ್ಲವನ್ನು ಮೀರಿ ಆಕೆ ಬಹಳ complex character ಅನ್ನುವ ಯೋಚನೆ ಮುಂಚಿನಿಂದ ಇತ್ತು.. ಆದರೆ ಅವರನ್ನು ಆ ನಿಟ್ಟಿನಲ್ಲಿ ಬಹಳಷ್ಟು ಇತಿಹಾಸಕಾರರು ವಿಶ್ಲೇಷಿಸಿಲ್ಲ... ಇಲ್ಲೂ ಆಕೆಯನ್ನು ಕೇವಲ ಒಬ್ಬ ನಾಟ್ಯಮಯೂರಿಯಾಗಿ ಮತ್ತು ತ್ಯಾಗಮಯಿಯಾಗೆ ಚಿತ್ರಿಸಲ್ಪಟ್ಟಿದ್ದಾರೆ...
ಇದು ಕಾದಂಬರಿಯಾಗಿರುವದರಿಂದ ಅದನ್ನು ಅಪೇಕ್ಷಿಸುವುದು ತಪ್ಪು ಕೂಡ... ಆದರೂ ಲೇಖಕರು ಕಥೆಯನ್ನು ಸುಂದರವಾಗಿ ಕಟ್ಟಿದ್ದಾರೆ, ಕೆಲ ಭಾಗಗಳಲ್ಲಿ ಕೌತುಕಗಳನ್ನು ಕಾಪಾಡಿಕೊಂಡು ತಕ್ಕ ಮಟ್ಟಿಗೆ ಗೆದ್ದಿದ್ದಾರೆ...
ಐತಿಹಾಸಿಕ ಕಾದಂಬರಿ ಅಲ್ಲದಿದ್ದರೂ ಒಂದು ಸುಂದರ ಸಾಮಾಜಿಕ ಕಾದಂಬರಿ...