ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಪಂಚತಂತ್ರ ಎಂದರೆ ಐದು ತಂತ್ರಗಳು ಅವು 1. ಲಬ್ಧ ಪ್ರಣಾಶ (ಸಿಕ್ಕಿದ್ದು ಹೋಯಿತು) 2. ಅಪರಿಕ್ಷಿತಕಾರಕ (ನೋಡದೆ ಮಾಡಿದರೆ) 3. ಮಿತ್ರಭೇದ (ಒಡೆಯುವುದು) 4. ಸುಹೃಲ್ಲಾಭ (ಸ್ನೇಹ ಕಟ್ಟುವುದು) 5. ಕಾಕೋಲೀಕಿಯ (ವೈರ ಸಾದಿಸುವುದು)
ಅಮರಶಕ್ತಿ ಎಂಬ ರಾಜನ ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತ ಶಕ್ತಿ ಎಂಬ ಮೂವರು ದಡ್ಡ ಮಕ್ಕಳ ವಿದ್ಯಾರ್ಜನೆಯ ಜವಾಬ್ದಾರಿ "ವಿಷ್ಣುಶರ್ಮ"ರ ಹೆಗಲಿಗೆ ಬೀಳುತ್ತದೆ... ಅವರು ಅರ್ಥಶಾಸ್ತ್ರದ, ವೇದಗಳ ಮತ್ತು ಇತರೆ ನೀತಿ ಶಾಸ್ತ್ರಗಳ ಸಾರವನ್ನು ಪುಟ್ಟ ಪುಟ್ಟ ಕಥೆಗಳ ಮೂಲಕ ಐದು ತಂತ್ರಗಳನ್ನು ರಚಿಸಿ ಹೇಳುವ ಕಥಾ ಗುಚ್ಚವೇ ಪಂಚತಂತ್ರ... ಒಟ್ಟು ಇದರಲ್ಲಿ 95 ನೀತಿ ಕಥೆಗಳಿವೆ... ಇದರ ಮೂಲ ಸಂಸ್ಕೃತ... ಇದನ್ನು ನಮ್ಮ ದೇವುಡು ನರಸಿಂಹಶಾಸ್ತ್ರಿಗಳು ಸರಳ ಕನ್ನಡದಲ್ಲಿ ಅನುವಾದಿಸಿದ್ದಾರೆ... ಮಕ್ಕಳಿಂದ ಹಿರಿಯರವರೆಗೂ ಇದನ್ನು ಸುಲಭವಾಗಿ ಓದಿ ಆಸ್ವಾದಿಸಬಹುದು...