Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಸಸ್ಯಗಳಲ್ಲಿ Hidden Hunger ಅನ್ನುವ ಒಂದು ತಂತ್ರವಿದೆ, ಅಂದರೆ ತನ್ನಲ್ಲಿ ಪೋಷಕಾಂಶಗಳ ಕೊರತೆ ಇದ್ದರೂ ಅದನ್ನು ತೋರಿಸಿಕೊಳ್ಳದೆ ಸಹಜವಾಗಿ behave ಮಾಡುವ ತಂತ್ರವದು. ಇದೇ Hidden Hunger ತಂತ್ರ ಎಲ್ಲ ತಾಯಿಯಂದರಲ್ಲೂ ಇರುತ್ತದೆ, ತನ್ನ ಹಸಿವನ್ನು ಅಥವಾ ತನ್ನ ಕಷ್ಟಗಳನ್ನು ತೋರಿಸಿಕೊಳ್ಳದೆ ತನ್ನ ಮಕ್ಕಳಿಗೆ ಮತ್ತು ಅವರ ಜೀವನಕ್ಕೆ ಆಧಾರಸ್ತಂಭಳಾಗುತ್ತಾಳೆ. ಇದರ ಉದಾಹರಣೆಯಾಗಿ ಜೋಗಿಯವರು ತಮ್ಮ ಆತ್ಮದಲ್ಲಿ ಬೆರೆತ ತಾಯಿಯ ಆತ್ಮಕಥೆಗಳನ್ನು ಬಿಚ್ಚಿಡುತ್ತಾ ಹೋಗುತ್ತಾರೆ.
ತಾಯಿ ಎಲ್ಲರ ಬಾಳಿನಲ್ಲೂ ಮೊದಲ ಗುರು, ಮೊದಲ ವೈದ್ಯೆ, ಮೊದಲ ಪ್ರೇಮಿ ಮತ್ತು ಹಲವಾರು ಮೊದಲುಗಳ ಸ್ವರೂಪಿಣಿ... ಜಗತ್ತಿನ ಎಲ್ಲ ತಾಯಂದಿರ ಪ್ರತಿನಿಧಿಯಾಗಿ ಜೋಗಿಯವರ ತಾಯಿ ಇಲ್ಲಿನ ಪ್ರಬಂಧಗಳಲ್ಲಿ ಅಥವಾ ಕಥೆಗಳಲ್ಲಿ ಇದ್ದಾರಷ್ಟೇ, ಓದುಗನಿಗೆ ಕಾಣಿಸುವುದು ತನ್ನ ತಾಯಿಯೇ....
ಲೇಖಕರು ಕೃತಿಯನ್ನು ಚಂದಗೊಳಿಸಲು ಹೋಗಿಲ್ಲ ಎಂದಿದ್ದಾರೆ, ಏಕೆಂದರೆ ತಾಯಿಯ ಬಗ್ಗೆ ಏನೇ ಬರೆದರೂ ಚಂದವಿರುತ್ತದೆ ಎಂಬುದು ಜೋಗಿರಂತ ಲೇಖಕರಿಗೆ ತಿಳಿದಿದೆ, ಇದೇ ಈ ಪುಸ್ತಕದ ಗೆಲುವು, ಲೇಖಕರ ಗೆಲುವು... ಅಲ್ಲ ತಾಯಿಯ ಗೆಲುವು...
ಈ ಸರಣಿಯ ಇತರೆ ಪುಸ್ತಕಗಳ ಮಾದರಿಯಲ್ಲೇ ಇದೂ ಕೂಡ ಹೊಸ ಓದುಗರಿಗೆ ಪ್ರಶಸ್ತವಾಗಿದೆ. Mother sentiment brewed with some ನೀತಿ ಪಾಠಗಳು. ಯಾಕೋ ಜೋಗಿಯವರು ಹೊಸ ಓದುಗರನ್ನು ಹುಟ್ಟುಹಾಕುವ ಭರದಲ್ಲಿ ಕೊಂಚ ಓದಲು ಕಲಿತ ನಮ್ಮನ್ನೂ, ಅವರ ಬರವಣಿಗೆಯನ್ನು ಸಾಣೆಹಿಡಿಯಬಲ್ಲ ನುರಿತ ಓದುಗರನ್ನೂ ಕಡೆಗಣಿಸ್ತಿದ್ದಾರೆ ಎನಿಸುತ್ತಿದೆ.
ಜೋಗಿ ನನ್ನಿಷ್ಟದ ಬರಹಗಾರ. ಆದರೆ ಅವರ ಓದಿದ್ದು ಜಾಸ್ತಿಯಾಯಿತು ನಾನು.
'ಒಂದೇ ತಿಂಗಳಲ್ಲಿ ಅವಳ ಗಾಯನ ಬೊಂಬಾಯಿಯಲ್ಲಿದೆ ಎಂದು ತಿಳಿಯಿತು.ಮೊದಲ ಸಲ ಹಾಡಿದ ಮೂರು ಬಿಹಾಗನ್ನೇ ಹಾಡಿದಳು. ಅವೇ ವರಸೆಗಳು. ಅವೇ ಜಲ್ದ್ ಬಾಜಿಗಳು. ಪ್ರೇಕ್ಷಕರನ್ನು ಗೆದ್ದು ಹೊಸಕಿಹಾಕುವ ಅದೇ ಗೂಳಿಯಾಟ. ಆದರೆ ನನಗೆ ಮೋಹ ಕಳೆದಿರಲಿಲ್ಲ. ಇನ್ನೂ ಮೆಚ್ಚಿಕೊಂಡೆ. ಇದಾದ ಎರಡು ತಿಂಗಳಿಗೆ ಜಯಪುರದಲ್ಲಿ ಮತ್ತೆ. ಮತ್ತದೇ ಮೂರು ಬಿಹಾಗ್. ಡಿಟ್ಟೋ ಸಂಚಾರ ಮಾರ್ಗಗಳು. ವಿಮಾನಚಾಲನಾ ಪ್ರದರ್ಶನದಲ್ಲಿ ಮಾಡುವಂತಹ ಪಲ್ಟಿಯಾಟಗಳು. ಮುಂದಿನ ರಾಗ,ಮುಂದಿನ ಠುಮರಿ, ಕೊನೆಯದು ಹೀಗೆ ಎಲ್ಲವೂ ಅವೇ. (ಎಸ್.ಎಲ್.ಭೈರಪ್ಪ ಅವರ ಆತ್ಮವೃತ್ತಾಂತ ಭಿತ್ತಿ.ಪು.ಸಂ. 436)
ಈ ಪುಸ್ತಕ ಓದಿದಾಗ ಈ ಪ್ಯಾರಾ ನನಗೆ ತುಂಬಾ ನೆನಪಾಯಿತು. ಜೋಗಿಯವರು ಅದ್ಭುತ ಬರಹಗಾರ. ಹೊಸ ಓದುಗರಿಗೆ ಪ್ರವೇಶಕ್ಕೆ ಅವರಷ್ಟು ಒಳ್ಳೆಯ ಲೇಖಕ ಸಿಗುವುದು ಕಷ್ಟ. ಆದರೆ ಹಳೆಯ 'ಜಾನಕಿ ಕಾಲಂ' ಓದುಗರಾದ ನನ್ನಂಥಹವರಿಗೆ.
ಇಷ್ಟೆಲ್ಲ ಆಗಿಯೂ, ಈ ಪುಸ್ತಕದಲ್ಲಿ ಅಮ್ಮ ಹೇಳಿದ ಕೆಲವು ರೆಸಿಪಿಗಳು ಇವೆ. ಎಷ್ಟು ಸರಳ ಎಷ್ಟು ಚಂದ .ಅವುಗಳು ಮಾತ್ರ ನನಗೆ ಭಯಂಕರ ಇಷ್ಟ ಆಯ್ತು. ಉಳಿದವು ಇಷ್ಟ ಆಗಲಿಲ್ಲ ಅಂತ ಅಲ್ಲ. ಉಳಿದವು ನಾನು ಓದದ ಜೋಗಿ ಅಲ್ಲ.
Jogi learning from mother .. !! Those few learnings are being shared in this book , how jogi mother helped him understand important elements of life through practical situations and some through her experience .
There are two important points : one is mother importance , her bond and another is life . It's more of a moral story . But as u go reading , u will start connecting mother and kid bond and start thinking abt ourselves with our mother .
There are few dishes mentioned - consider as bonus or nostalgic moments if u know the food . And some mother examples from epic stories how great mother's were And the last 10 points mentioned in the book are common but it's relevant and good !
Book inspires to look the things where u cud stay happy !!