ಬಿ. ಬಿ ಅಶೋಕ್ ಸರ್ ಅವ್ರು ನಮಗೆಲ್ಲ ಟೈಗರ್ ಎಂದೇ ಪರಿಚಿತ, ಅವರು ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡುವಾಗ ಅವರಿಗೆ ಬಂದ ಕೇಸ್ಗಳನ್ನು ಹೇಗೆ ತಮ್ಮ ತನಿಖೆಯಿಂದ ಪರಿಹರಿಸಿದರು ಅನ್ನೋದನ್ನ ಇಲ್ಲಿ ಹೇಳಿದ್ದಾರೆ .
ಒಬ್ಬ ರೇಷ್ಮೆ ವ್ಯಾಪಾರಿ ಹೇಗೆ ತನ್ನ ಮನೆ ಮುಂದೆ ಇಟ್ಟ ನಾಮಫಲಕದಿಂದ ತನಗೆ ತಾನೇ ಮುಳ್ಳಿನ ಹೊದಿಕೆ ಎಳೆದುಕೊಂಡ ಕೊನೆಗೆ ಅವನ ಆ ಹೊದಿಕೆ ಸರಿಸಲು ಪೊಲೀಸ್ ಅಧಿಕಾರಿಗಳು ಏನೆಲ್ಲಾ ಮಾಡಿದರು, ಒಂದು ಶರ್ಟಿನ ಗುಂಡಿ ಸಹ ಹೇಗೆ ಹಂತಕರಿಗೆ ಶಿಕ್ಷೆ ಕೊಡಿಸಲು ಸಹಾಯ ಮಾಡಿತು , ಒಬ್ಬ ದಿಲ್ಲಿ ವಿದ್ಯಾರ್ಥಿ ಅಂಡರ್ವರ್ಲ್ಡ್ ನಂಟಿದ್ದ ,ಅಮಾನತು ಗೊಳಿಸಿದ್ದ ಕಸ್ಟಮ್ ಇನ್ಸ್ಪೆಕ್ಟರ್ ಬಲೆಗೆ ಬಿದ್ದು ಕೊನೆಗೆ ಏನಾದ ?, ಮೈನಾ ಚಿತ್ರದ ಕಥೆಯು ನೈಜ ಘಟನೆ ಆಧಾರಿತ ಎಂದು ತಿಳಿದಿದೆ ಆದರೆ ಅಲ್ಲಿ ನಿಜವಾಗಲೂ ಏನಾಯಿತು? , ಕನ್ನಡದ ಮಾದಯ್ಯ ಎಂದೇ ಕರೆಯಲ್ಪಟ್ಟ ಡಿ.ಎಂ ಮಾದಯ್ಯ ಅವರು ಹೇಗೆ ಅಸು ನೀಗಿದರು? ಹೀಗೇ ತಮ್ಮ ವೃತ್ತಜೀವನದಲ್ಲಿ ನೋಡಿದ, ಪರಿಹರಿಸಿದ, ಪರಿಹರಿಸಲಾಗದ ಕೇಸುಗಳ ಬಗ್ಗೆ ಸವಿವರವಾಗಿ ಹೇಳಿದ್ದಾರೆ . ಆಗಿನ ಕಾಲದಲ್ಲಿ ಇಷ್ಟು ಟೆಕ್ನಾಲಜಿ ಇಲ್ಲದೆ ಅವರೆಲ್ಲ ಎಷ್ಟು ಕಷ್ಟ ಪಟ್ಟು ಪ್ರತಿಯೊಂದು ಕೇಸ್ ಪರಿಹರಿಸಲು ಆಹಾರ, ನಿದ್ರೆ ಬಿಟ್ಟು ದುಡಿದರೆಂದು ಓದುವಾಗ ನಿಜಕ್ಕೂ ವಾಹ್ ಅನ್ನಿಸದೇ ಇರಲಾರದು ,ಟೈಗರ್ ಸರ್ ಹಾಗೂ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನನ್ನ ಒಂದು ನಮನ 🙏. ಇಲ್ಲಿ ಮುಖ್ಯವಾಗಿ ನನ್ನ ಗಮನ ಸೆಳೆದದ್ದು ಎಂ. ಪಿ ಜಯರಾಜ್ ಕೇಸ್, ಈತ ಹೇಗೆ ಪೊಲೀಸ್ ಅಧಿಕಾರಿಗಳ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿಸಿ ಅವರನ್ನ ಕಷ್ಟಕ್ಕೆ ನೂಕಿದ, ಕೊನೆಗೆ ಅವನ ಅಂತ್ಯ ಎಷ್ಟು ಕ್ರೂರವಾಗಿ ಆಯಿತು ಎಂಬುದೆಲ್ಲ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಟೈಗರ್ ಸರ್ ಅವ್ರು ಅವರ ಜೀವನದ ಕುರಿತು , ಅವರು ಬಗೆ ಹರಿಸಿದ ಮೊದಲ ಕೇಸ್ ಕುರಿತು, ಒಬ್ಬ ಪೊಲೀಸ್ ಅಧಿಕಾರಿಗೆ ಹೇಗೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಶತ್ರು ಆಗುತ್ತಾರೆ ಎನ್ನುವ ಬಗ್ಗೆ ಸಹ ಬರೆದಿದ್ದಾರೆ. ಪೊಲೀಸ್ ಅಧಿಕಾರಿಗಳು ಹೇಗೆ ಕೇಸ್ ಬಗೆಹರಿಸುತ್ತಾರೆ ಎನ್ನುವುದರ ಕುತೂಹಲ ಇರುವವರು ಓದಬೇಕಾದ ಪುಸ್ತಕ . ವಿ.ಸೂ.: ಅಶೋಕ್ ಸರ್ ಸಾಹಿತಿ ಅಲ್ಲ ಹಾಗಾಗಿ ಅವರ ಪುಸ್ತಕದಲ್ಲಿ ಸಾಹಿತಿ ಬರೆವಣಿಗೆಯ ಆಶಯ ಬೇಡ 🙏