*ಸಾರ್ಥ*
ಇತ್ತೀಚಿಗೆ ಓದಿದ ಭೈರಪ್ಪನವರ ಸಾರ್ಥ ಕಾದಂಬರಿಯ ಕುರಿತು:
ಭೈರಪ್ಪನವರ ಎರೆಡು ಐತಿಹಾಸಿಕ ಕಾದಂಬರಿಗಳಲ್ಲಿ ಆವರಣವು ಒಂದು,ಸಾರ್ಥವು ಮತ್ತೂಂದು.
ಸಾರ್ಥ ಕ್ರಿ.ಶ. ೮ನೆಯ ಶತಮಾನದ ಭರತಖಂಡದಲ್ಲಿ ನಡೆಯಿತೆಂದು ಕಲ್ಪಿಸಿಕೂಳ್ಳಬೇಕಾದ ಸಂಗತಿಗಳನ್ನಾದರಿಸಿದ ಕಾದಂಬರಿ. ಆನೆ,ಕುದುರೆ,ಹೇಸರುಗತ್ತೆ ನೊರಾರು ಗಾಡಿಗಳ ಮೇಲೆ ವಾಣಿಜ್ಯ ಪದಾರ್ಥಗಳನ್ನು ಹೇರಿಕೊಂಡು ವ್ಯಾಪಾರ ಮಾಡುತ್ತ ದೂರ ದೂರ ದೇಶಗಳಲ್ಲಿ ಸಂಚರಿಸುವುದನ್ನು ಆ ಕಾಲದಲ್ಲಿ ಸಾರ್ಥ ಎನ್ನುತ್ತಿದ್ದರು.
ಬೌಧ್ಧ ಧರ್ಮದ ಪ್ರಭಾವವು ಇಲ್ಲಿ ತಿಳಿಯಬಹುದು.
ಅಮರುಕ ಮಹಾರಾಜನು ಸಾರ್ಥದ ಮರ್ಮವನ್ನು ತಿಳಿಯಲು ಮಾಹಿಷ್ಮತಿಯಲ್ಲಿ ಮಂಡನ ಮಿಶ್ರರ ಶಿಷ್ಯನಾದ ನಾಗಭಟ್ನನನ್ನು ಕಳುಹಿಸುತ್ತಾನೆ.ನಾಗಭಟ್ಟನು ಅವನ ಆಜ್ಞೆಯಂತೆ ಮನೆ,ಹೆಂಡತಿ ಮತ್ತು ತಾಯಿಯನ್ನು ತನ್ನ ಊರಾದ ತಾರತಮ್ಯವನ್ನು ಬಿಟ್ಟು ಮಥುರೆಗೆ ತಲಪುತ್ತಾನೆ. ಅಮರುಕನು ನಾಗಭಟ್ಟನ ಹೆಂಡತಿ ಶಾಲಿನಿಯನ್ನು ವಶಪಡಿಸಿಕೂಳ್ಳುತ್ತಾನೆ ಇದನ್ನು ತಿಳಿದು ದುಃಖ ಪಡುತ್ತಾನೆ, ಮಥುರೆಯನ್ನು ತಲುಪುವ ಮುಂಚೆ ಮಣಿಭದ್ರ ಯಕ್ಷನ ಬಗ್ಗೆ, ಬೋಧಿಸತ್ವದ ಬಗ್ಗೆ,ಬೌದ್ಧ ಧರ್ಮವು ಸಿಂಹಳ ದೇಶಕ್ಕೆ,ಉತ್ತರದ ತ್ರಿವಿಷ್ಟು,ಅತ್ತ ಚೀನಾ, ಪೂರ್ವದ ಸುವರ್ಣ ದ್ವೀಪಗಳಿಗೆ ಹೇಗೆ ಹರಡಿದೆ ಎಂಬುದನ್ನು ತಿಳಿಯುತ್ತಾನೆ.ನಂತರ ನಾಗಭಟ್ಟನು ಮಥುರೆಯಲ್ಲಿ ನೆಲೆಸುತ್ತಾನೆ. ಮಥುರೆಯಲ್ಲಿ ಜಯಸಿಂಹರ ಪರಿಚಯ ಅವರ ಮೂಲಕ ನಾಟಕಮಂಡಳಿಯಲ್ಲಿ ನಟನಾಗುತ್ತಾನೆ. ನಾಟಕಮಂಡಳಿಯಲ್ಲಿ ನಾಟಕವಾಡುವಾಗ ಚಂದ್ರಿಕೆಯ ಪರಿಚಯ, ಅದೇ ಅವರ ಪ್ರೇಮಕ್ಕೆ ನಾಂದಿಯಾಗುತ್ತದೆ.ಅವನು ನಾಟಕವಾಡುತ್ತಾ ಕೃಷ್ಣಾನಂದನಾಗುತ್ತಾನೆ,ಕೃಷ್ಣಾನಂದರೆಂದರೆ ಕೃಷ್ಣನ ಅವತಾರಪುರುಷರು ಎಂಬಂತೆ ಪ್ರಸಿಧ್ಧನಾಗುತ್ತಾನೆ. ಹೀಗೆ ಕೃಷ್ಣಾನಂದನು ನಾಟಕದ ನಟನಾಗಿ, ಅದಾದನಂತರ ಯೋಗಸಾಧನೆಯಲ್ಲಿ,ನಂತರ ಎರಡು ವರ್ಷ ತಂತ್ರ ಸಾಧನೆಯಲ್ಲಿ ತೂಡಗುತ್ತಾನೆ.
ನಂತರ ನಾಲಂದ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮದ ಬಗ್ಗೆ ತಿಳಿಯಲು ಜಯಸಿಂಹರ ಮೂಲಕ ಸೇರುತ್ತಾನೆ. ಬೌದ್ಧ ಧರ್ಮವನ್ನು ಬೋಧಿಸುವ ನಾಲಂದ ವಿಶ್ವವಿದ್ಯಾಲಯದ ಬಗ್ಗೆ ತಿಳಿಯುತ್ತಾನೆ. ಅಲ್ಲಿ *ಕುಮಾರಿಲ ಭಟ್ಟರ* ಭೇಟಿ, ಕುಮಾರಿಲ ಭಟ್ಟರು ಬೌದ್ಧ ಧರ್ಮವನ್ನು ಹಲವಾರು ಗ್ರಂಥಗಳಲ್ಲಿ ಖಂಡಿಸಿದ್ದಾರೆ,ಅವರ ಶಿಷ್ಯರೇ ಮಂಡನ ಮಿಶ್ರರು. ನಂತರ ಗಯಾಕ್ಕೆ ತಲುಪಿ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದ ಮಹತ್ವವನ್ನು ಮತ್ತೆ ಗಯಾಗೆ ಬಂದು ವಿಷ್ಣುಪಾದದಲ್ಲಿ ಪಿಂಡಪ್ರದಾನ ಮಾಡಿದರೆ ಸತ್ತ ಆತ್ಮಕ್ಕೆ ಸದ್ಗತಿ ದೂರಕುತ್ತ ವೆಂಬದನ್ನು ತಿಳಿಯುತ್ತಾನೆ.
ಇದೇ ಸಮಯದಲ್ಲಿ ಆದಿ ಶ್ರೀ ಶಂಕರಾಚಾರ್ಯರ ದರ್ಶನ,ಅವರ ಅದ್ವೈತ ಸಿದ್ಧಾಂತದ ಬಗ್ಗೆ ತಿಳಿಯುತ್ತಾನೆ.ಶಂಕರಾಚಾರ್ಯರು ಇಡೀ ದೇಶವನ್ನು ಸುತ್ತಿ ಅದ್ವೈತ ಸಿದ್ಧಾಂತದ ಬಗ್ಗೆ ಎಲ್ಲರಿಗೂ ಬೋಧಿಸಿದನ್ನು ತಿಳಿದುಕೂಳ್ಳುತ್ತಾನೆ.ಶಂಕರಾಚಾರ್ಯರನ್ನು ವಾಕ್ಯಾರ್ಥಲ್ಲಿ ಸೋಲಿಸಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ, ಮಂಡನ ಮಿಶ್ರರು ವಾಕ್ಯಾರ್ಥದಲ್ಲಿ ಶಂಕರಾಚಾರ್ಯರ ಜೂತೆ ಸೋತು ಅವರ ಶಿಷ್ಯರಾಗಿ ಸುರೇಶ್ವರ ಎಂದು ಪ್ರಸಿದ್ಧಿ ಹೂಂದುತ್ತಾರೆ. ಹೀಗೆ ಶಂಕರಾಚಾರ್ಯರ ಮಹಿಮೆಯನ್ನು ತಿಳಿಯಬಹುದು.
ನಂತರ ಅರಬ್ಬರ ಆಕ್ರಮಣ,ಅವರ ಆಕ್ರಮಿತ ಪ್ರದೇಶದಲ್ಲಿ ವೈಧಿಕ ಧರ್ಮ ಪ್ರಚೋದನೆಗಾಗಿ ನಾಟಕ ಮಾಡುತ್ತಿದ್ದಾಗ ಕೃಷ್ಣಾನಂದ ಮತ್ತು ಚಂದ್ರಿಕೆ ಇಬ್ಬರೂ ಅರಬ್ಬರ ಕೈಯಲ್ಲಿ ಸಿಕ್ಕಿಬಿದ್ಧು ಪಡುವ ಸಂಕಷ್ಟಗಳು ಇಲ್ಲಿ ತಿಳಿಯಬಹುದು.
ಈ ಕಾದಂಬರಿಯಲ್ಲಿ ಶಂಕರಾಚಾರ್ಯರ ಬಗ್ಗೆ, ಬುದ್ಧ,ಮಂಡನ ಮಿಶ್ರ,ಕುಮಾರಿಲ ಭಟ್ಟ,ನಾಲಂದ ವಿಶ್ವವಿದ್ಯಾಲಯ,ಬೋಧಿ ವೃಕ್ಷ,ಗಯಾ ಕ್ಷೇತ್ರ,ಅದ್ವೈತದ ಸಿದ್ಧಾಂತದ ಬಗ್ಗೆ,ಯೋಗಸಾಧನೆ ಮತ್ತು ತಂತ್ರ ಸಾಧನೆ ಬಗ್ಗೆ ಆಗಿನ ಕಾಲದಲ್ಲಿ ಅರಬ್ಬರ ದಬ್ಬಾಳಿಕೆ ಬಗ್ಗೆ ಇನ್ನೂ ಹಲವು ಈ *ಸಾರ್ಥ* ದಲ್ಲಿ ಓದಿ ತಿಳಿಯಬಹುದು.