ದೇಶ ಕಾಯುವುದು ಅತ್ಯಂತ ಹೆಮ್ಮೆಯ ಮತ್ತು ಜೀವಪಣಕ್ಕಿಟ್ಟು ಹೋರಾಡುವ ಕಾಯಕ. ಇಂದು ಲೇಹ್-ಲಡಾಕ್ ಭಾರತದಲ್ಲೇ ಉಳಿದುಕೊಂಡಿದ್ದರೆ ಅದಕ್ಕೆ ಕಾರಣನಾದ ಲಡಾಕಿ ಯುವಕ ಚೆವಾಂಗ್ ರಿಂಚೆನ್ ನ್ನು ಮರೆಯುವ ಹಾಗಿಲ್ಲ. ಅಲ್ಲಿನ ವಿಪರೀತ ಮಂಜು ಸುರಿಯುವ ಪ್ರಕೃತಿಯ ಪರಿಸ್ಥಿತಿಯಲ್ಲಿ , ಕೇವಲ ಹದಿನೈದೇ ದಿನದಲ್ಲಿ ತರಬೇತಿ ಪಡೆದು, ತನ್ನದೇ ತಂಡ ಕಟ್ಟಿಕೊಂಡು ಹಲವು ಬಾರಿ ದೈಹಿಕ ಸಾಮರ್ಥ್ಯದಿಂದಲೇ, ಪಾಕೀಸ್ಥಾನವನ್ನು ಬಗ್ಗು ಬಡಿದ ಮುಗ್ಧ ಮನಸ್ಸಿನ ಸಾಹಸೀ ಯುವಕನ ಯಶೋಗಾಥೆಯೇ ಈ ಪುಸ್ತಕದ ತಿರುಳು. ಚಕ್ರವರ್ತಿ ಸೂಲಿಬೆಲೆ ಅವರ ಕಂಚಿನ ಕಂಠದಲ್ಲಿ ಅತ್ಯಂತ ಅಮೋಘವಾಗಿ ಆಡಿಯೋ ಪುಸ್ತಕ ಮೂಡಿಬಂದಿದೆ.
ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ಚಿಂತಕ, ಅಂಕಣಕಾರ, ಬರಹಹಾರ ಮತ್ತು ಸಾಮಾಜಿಕ ಕಾರ್ಯಕರ್ತ. ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರು. ಅವರ ಸಾಮಾಜಿಕ ಸೇವೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ಮೂಲ ಹೆಸರು 'ಮಿಥುನ್ ಚಕ್ರವರ್ತಿ'. ಇವರು ೧೯೮೦ರ ಏಪ್ರಿಲ್ ೯ ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೊಂಕಣಿ ಮಾತನಾಡುವ ದೈವಜ್ಞ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ದೇವದಾಸ್ ಸುಬ್ರಾಯ ಶೇಟ್. ಇವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಓದಿ ಬೆಳೆದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಎಂಬ ಗ್ರಾಮದಲ್ಲಿ. ನಂತರ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಪೂರ್ವ ಶಿಕ್ಷಣವನ್ನು ಪಡೆದರು. ಮುಂದೆ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಸ್ವಾಮಿ ವಿವೇಕಾನಂದರ ಲೇಖನಗಳ ಪ್ರಭಾವಕ್ಕೆ ಒಳಗಾದ ಇವರು ರಾಮಕೃಷ್ಣ ಪರಮಹಂಸರ ಚಿಂತನೆಗಳನ್ನು ಹೊತ್ತೊಯ್ಯುವ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದರು. ಆರಂಭದಲ್ಲಿ ಚಕ್ರವರ್ತಿಯವರು 'ಹೊಸ ಸ್ವಾಂತಂತ್ರ್ಯದ ಬೆಳಕು' ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದರು. ನಂತರ ಅವರು 'ಗರ್ವ' ಟ್ಯಾಬ್ಲಾಯ್ಡ್ ವ್ಯವಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದರು. ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಜಯ ಕರ್ನಾಟಕದಲ್ಲಿ ಅಂಕಣಕಾರರಾಗಿದ್ದರು. 'ವಿಜಯವಾಣಿ', 'ಹೊಸ ದಿಗಂತ', 'ಸಂಯುಕ್ತ ಕರ್ನಾಟಕ', ಕರ್ಮವೀರ, ವಿವೇಕ ಸಂಪದ ಮತ್ತು ಇತರ ಕೆಲವು ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಇವರು ವಿಜಯವಾಣಿಯಲ್ಲಿ 'ವಿಶ್ವಗುರು' ಎಂಬ ಹೆಸರಿನ ಅಂಕಣಗಳನ್ನು ಬರೆಯುತ್ತಿದ್ದರು.
ಆಡಿಯೋ ಪುಸ್ತಕಗಳಿಂದ ಯಾವಾಗಲೂ ಮಾರು ದೂರ ನಾನು. ಆದರೂ ಇದಕ್ಕೆ ಧ್ವನಿ ನೀಡಿದ್ದು ಚಕ್ರವರ್ತಿ ಸೂಲಿಬೆಲೆ ಅವರು ಅನ್ನೋ ಒಂದೇ ಕಾರಣಕ್ಕೆ ಕೇಳಲು ಶುರು ಮಾಡಿದ್ದು. ಶುರು ಮಾಡಿದ್ದೊಂದೇ ಗೊತ್ತು.. ಮುಗಿದಿದ್ದು ಗೊತ್ತಾಗಲೇ ಇಲ್ಲ. ಅಷ್ಟು ಚೆನ್ನಾಗಿದೆ.
ಈ ಪುಸ್ತಕ ಓದಲು ಶುರು ಮಾಡುತ್ತಿದ್ದಂತೆಯೇ ವೀರ, ಸಾಹಸಿ ಚೆವಾಂಗ್ ರಿಂಚೆನ್ ಅವರ fan ಆಗುವುದರಲ್ಲಿ ಸಂಶಯವಿಲ್ಲ..ಭಾರತಕ್ಕೆ ಚೀನಿಯರು ಮತ್ತು ಪಾಕಿಗಳು ನುಸುಳಲು ಬಿಡದ ಹಾಗೆ,ಯುದ್ಧದಲ್ಲಿ ಶೌರ್ಯ, ಯುಕ್ತಿಯಿಂದ ಅವರನ್ನು ಹಿಮ್ಮೆಟ್ಟಿದ ಧೀರ ಈತ. ಕೇವಲ ೯೬ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಒಂದೆರಡು ದಿನಗಳಲ್ಲಿ ಓದಿ ಮುಗಿಸಬಹುದು, ಖಂಡಿತ ಓದಿ..ಇಂತಹ ವೀರನ ಪರಿಚಯ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು ಶ್ರೀ ಚಕ್ರವರ್ತಿ ಸೂಲಿಬೆಲೆ ಅವರಿಗೆ😊🙏 By the time you start reading few pages of this book, there's no doubt of you becoming a fan of him! He is Chewang Rinchen from Ladakh.. Read this book (we can finish reading this within 1 or 2 days as it contains only 96 pages) to know how he lead us to victory against China and Pakisthan by his courage and determination. Namaskara and thanks to Sri Chakravarty Sulibele avaru for introducing this hero to us😊🙏