ಚಾಪ್ಲಿನ್ (ಜೀವನ ಮತ್ತು ಸಾಧನೆ)
ಲೇಖಕರು:- ಕುಂ. ವೀರಭದ್ರಪ್ಪ
ಪ್ರಕಾಶಕರು:- ಸಪ್ನ ಬುಕ್ ಹೌಸ್
ಪುಟಗಳು:- 252
ಬೆಲೆ:- 180/-
ಸದಾ ಎಲ್ಲರನ್ನು ನಗಿಸುವ, ತಮ್ಮ ಅಭಿನಯದಿಂದ ಎಲ್ಲರ ನೋವನ್ನು ಮರೆಸುವ ಇಂತಹ ಪ್ರತಿಭಾ ಸಂಪನ್ನರಾದ ಕಲಾವಿದನಲೂ ಇಷ್ಟು ನೋವುಗಳು ಅಡಗಿದೆ ಎಂದರೆ ನಂಬಲು ಸಾಧಯವಾಗುವುದಿಲ್ಲ. ಅತ್ಯಂತ ಬಡತನದಲ್ಕಿ ನೊಂದು- ಬೆಂದು, ತಿನ್ನುವುದಕ್ಕು ಗತಿಯಿಲ್ಲದೆ ಒದ್ದಾಡಿದ ಸನ್ನಿವೇಶಗಳು ಹಲವು. ತಂದೆ- ತಾಯಿಯ ಪ್ರೀತಿ ಕೂಡ ಹಣೆಯಬರಹದಲ್ಲಿ ಇಲ್ಲ. ಇರಲು ಸರಿಯಾದ ಸ್ಥಳವಿಲ್ಲದೆ, ಜೀವನಕ್ಕೆ ಬೇಕಾದ ಮೂಲ ಸೌಲಭ್ಯಳಲ್ಲಿದೆ ಅನಾಥಾಶ್ರಮವನ್ನು ಸೇರುವ ಸನ್ನಿವೇಶ ಒಡಗಿಬರುತದೆ. ಅಲ್ಲೂ ಬಹಳ ಕಿರುಕುಳ ಅನುಭವಿಸಬೇಕಾಗುತದ್ದೇ. ಅಲ್ಲಿಂದ ತಪ್ಪಿಸಿಕೊಂಡು ಅಣ್ಣ-ತಮ್ಮಂದಿರೂ ನಟಿಸಲು ಶುರುಮಾಡುತ್ತಾರೆ. ತಾಯಿ ಜೀವನದ ಸಂಘರ್ಷಗಳನ್ನು ಅನುಭವಿಸಿ ಮಾನಸಿಕ ರೋಗಿಯಾಗಿ ಹುಚ್ಚಅಸ್ಪತ್ರೆ ಸೇರುತ್ತಾಳೆ. ಅಣ್ಣ-ತಮ್ಮಂದಿರು ಯಾರ ಸಹಾಯವಿಲ್ಲದೆ ಒಂದ್-ಒಂದೇ ಮೆಟ್ಟಲು ಹತ್ತುತ್ತಾರೆ.
"ಎ ಡಾಗ್ಸ್ ಲೈಫ್" ಅಂತಹ ಚಿತ್ರಗಳನ್ನು ಮಾಡಿ, ಒಂದು ನಾಯಿಯ ಮೂಲಕ ಕೂಡ ಹಾಸ್ಯವನ್ನು ತೋರಿಸಬಹುದು ಎನ್ನುವುದು ಸಾಬೀತು ಮಾಡುತ್ತಾನೆ.
ತನ್ನ ಅಸಫಲ ವಿವಾಗದಿಂದ ಬೇಸತ್ತು ಮಗುವನ್ನು ಕಳೆದುಕೊಂಡಾಗ ಕೂಡ, ಒಬ್ಬನೇ ಕೂತು ತನ್ನ ಚಿತ್ರದ ಸಂಕಲನ ಮುಗಿಸಿ ತನ್ನ ದುಃಖವನ್ನು ಮರೆಯುತ್ತಾನೆ.
ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಕೀರ್ತಿ, ಯಶಸ್ಸು ಮತ್ತು ಹಣವನ್ನು ನೋಡಿ ಅದರಿಂದ ತಾನು ಕೆಡಬಾರದುಯೆನ್ನುವ ಎಚ್ಚರ ವಹಿಸುತ್ತಾನೆ.
ತನ್ನ ಸುತ್ತ ಮುತ್ತಲಿನ ವಸ್ತುಗಳಿಂದ, ಸನ್ನಿವೇಶಗಳಿಂದ ಕಲಿತಿದನ್ನು ಸಂದೇಶದ ರೂಪದಲ್ಲಿ ಹಾಸ್ಯದ ಮೂಲಕ ಹೇಳುವುದರಲ್ಲಿ ಯಶಸ್ವಿಯಾಗುತ್ತಾನೆ.
"ದಿ ಐಡೀಲ್ ಕ್ಲಾಸ್" ಚಿತ್ರೀಕರಿಸುವಾಗ ಚಿಕ್ಕ ಅಪಘಾತಕ್ಕೆ ತುತ್ತಾಗಿ, ಅದನ್ನು ಜನರು ವರದಿಗಳ ಮೂಲಕ ತಿಳಿದು, ತನಗೆ ತಂತಿಗಳ ಮೂಲಕ, ಫೋನ್ಗಳ ಮೂಲಕ, ತಮ್ಮ ಕಳವಳ ವ್ಯಕ್ತಪಡಿಸಿದನ್ನು ನೋಡಿ ಮರುಗಿದ. ಮಾನವ ಕೋಟಿ ತನ್ನ ಮೇಲಿಟ್ಟಿರುವ ಅದಮ್ಯ ಪ್ರೀತಿ, ವಿಶ್ವಾಸ ಕಂಡು ಚಾಪ್ಲಿನ್ ಕಣ್ಣಲ್ಲಿ ನೀರು ತುಂಬಿಕೊಂಡ.
ಚಾಪ್ಲಿನ್ ಪಂಚತಾರಾ ಹೋಟೆಲ್ಗಳಲ್ಲಿದ್ದರು, ತನಗೆ ಎಷ್ಟೋ ಪಾಠಗಳನ್ನು ಕಲಿಸಿರುವ, ಕಲಿಸುತ್ತಿರುವ ಕೊಳಚೆಗೇರಿಗಳಿಂದ ದೂರ ಸರಿಯುವ ಪ್ರಯತ್ನ ಮಾಡಲಿಲ್ಲ.
ತನ್ನ ಖಾಸಗಿ ಜೀವನದಲ್ಲಿ ಏನೆಲ್ಲಾ ಕಳೆದುಕೊಂಡನೋ ಅದನ್ನೆಲ್ಲ ಬೆಳ್ಳಿತೆರೆಯ ಮೇಲೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದನು. ತಾನು, ತನ್ನ ಬದುಕು ಎರಡು ಇನ್ನೊಬ್ಬರ ಮನೋರಂಜನೆಯ ಸಾಧನರಿಯಾಯಿತಲ್ಲ ಎನ್ನುವ ಕೊರಗು ಅವನಲ್ಲಿ ಬೇರುಬಿಟ್ಟಿತು.
ಇಡೀ ಪ್ರಪಂಚ ಗೌರವಿಸುವ, ಅಭಿಮಾನಿಸುವ ಗಣ್ಯ ವ್ಯಕ್ತಿಗಳಲ್ಲಿ ಚಾರ್ಲಿ ಚಾಪ್ಲಿನ್ ಕೂಡ ಒಬ್ಬರು. ಅವರು ಕೇವಲ ವಿನೋದ ಚಕ್ರವರ್ತಿ ಮಾತ್ರವಲ್ಲ, ಸೃಜನಶೀಲ ಲೇಖಕ, ಸಂಗೀತಕಾರ, ವಿದ್ವಾಂಸ, ಅಪರೂಪದ ಚಲನಚಿತ್ರಗಳ ನಿರ್ದೇಶಕ, ನಟ.. ಇವೆಲ್ಲಕ್ಕಿಂತ ಮಿಗಿಲಾಗಿ ಹೃದಯವಂತ, ಕರುಣಾಮಯಿ, ವಿಜ್ಞಾನಿ, ಸರಳಜೀವಿ, ಅನಾಯಾಸವಾಗಿ ಹೃದಯಗಳ್ಲನು ಕರಾಗಿಸಬಲ್ಲರು, ಬಹು ಅಪರೂಪದ ಕಲಾವಿದರು.. ವಿಶ್ವ ಮಾನವರು.