Jump to ratings and reviews
Rate this book

ದಡ ಸೇರಿಸು ತಂದೆ

Rate this book
‘ದಡ ಸೇರಿಸು ತಂದೆ’ ಅಮರೇಶ ನುಗಡೋಣಿ ಅವರ 6ನೇ ಕತಾಸಂಕಲನ. ಇಲ್ಲಿಯ ಕತೆಗಳು ಪ್ರಸ್ತುತ ಗ್ರಾಮದಲ್ಲಿ ಉರಿಯುತ್ತಿರುವ ನೈಜ ಸಮಸ್ಯೆಗಳನ್ನು ಜ್ವಲಿಸುತ್ತದೆ. ಲೇಖಕರ ಗಮನಕ್ಕೆ ಬಂದು ಕಾಡಿದ ಮರ್ಯಾದಾ ಹತ್ಯೆಗಳು, ಗುಂಪುಗಳ ಮೂಲಕ ಹಿಂಸಿಸುವ ನಡೆ, ವೈವಿಧ್ಯಮಯ ಬದುಕಿನ ಚಿತ್ರಗಳು ಈ ಸಂಕಲನದ ಪ್ರಧಾನ ಆಕರ್ಷಣೆ. ಒಟ್ಟು ಎಂಟು ಕತೆಗಳು ಸಮಕಾಲೀನರ ಚಿತ್ರಣಗಳನ್ನು ತೆರೆದಿಡುವಲ್ಲಿ ಸಫಲವಾಗಿದೆ.

185 pages, Paperback

Published January 1, 2019

Loading...
Loading...

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
2 (66%)
4 stars
0 (0%)
3 stars
1 (33%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Bharath Manchashetty.
220 reviews5 followers
June 17, 2026
೨೦೧೯ ರಲ್ಲಿ ಪ್ರಕಟವಾದ ಈ ಕೃತಿಗೆ ೨೦೨೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇವರ “ಸವಾರಿ” ಕಥಾಸಂಕಲನ ಬಹಳ ಹಿಡಿಸಿತ್ತು, ಹಾಗಾಗಿ ಇವರ ಹಲವು ಕೃತಿಗಳನ್ನೋದುವ ಹೆಬ್ಬಯಕೆ ಹೆಚ್ಚಿತ್ತು ಅನ್ನಲೇಬೇಕು. ಅಂತೆಯೇ ಕೈಗೆತ್ತುಕೊಂಡ ೮ ಕತೆಗಳುಳ್ಳ ಈ ಕೃತಿಯೂ ನಿರಾಶೆ ಮೂಡಿಸಲಿಲ್ಲ.

ಓದುಗನು ತೆವಳಿಕೊಂಡು ಓದುವಾಗ ಪಾತ್ರಗಳನ್ನು ಮೆಚ್ಚುತ್ತಾನೆ, ಬೆಳೆದಂತೆ ಪಾತ್ರಗಳಲ್ಲಿ ತತ್ವಗಳನ್ನುಡುಕುತ್ತಾ ಹೋಗುತ್ತಾನೆ, ಕ್ರಮೇಣ ಬೆಳೆದಂತೆ ಗಂಭೀರ ಸಾಹಿತ್ಯದಲ್ಲಿ ಕೈಗೆ ಸಿಗದ, ಕಣ್ಣಿಗೆ ಕಾಣದ, ಯಾವ ಪಾತ್ರಗಳಿಗೂ ಸಿಗದ ದೊಡ್ಡ ಖಳನಾಯಕನಾದ ವ್ಯವಸ್ಥೆಯನ್ನು ಅರಿಯುತ್ತಾ, ಕನಸಿನಲ್ಲಿ ಕೊಲ್ಲುತ್ತಾ-ಅಲ್ಲಗಳೆಯುತ್ತಾ ಪರಿಧಿಯೊಳಗೆ ಚಿಂತಿಸತೊಡಗುತ್ತಾನೆ. ಇವು ಓದುಗನ ಓದುವ ಕ್ರಮವನ್ನು ಬೆಸೆಯುತ್ತಾ ಬೆಳೆಸುತ್ತವೆ ಕೂಡ.

ಇಲ್ಲಿರುವ ಎಲ್ಲಾ ಕತೆಗಳು ವರ್ತಮಾನಕ್ಕೆ ಸಲ್ಲುವಂತವಾದರೂ, ಸಾರ್ವಕಾಲಿಕ ಸಂಗತಿಗಳಾದ ಬೆಂಕಿಯುಂಡೆಗಳಂತೆ ಜ್ವಲಿಸುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅಸಮಾನತೆ, ಮರ್ಯಾದಾ ಹತ್ಯೆ, ಬಂಡಾಯಶಾಹಿತನ, ಗ್ರಾಮೀಣ ಬದುಕಿನ ಅಸಹಾಯಕತೆ-ಮುಗ್ಧತೆ, ಕೊಳೆತುನಾರುವ ರಾಜಕೀಯ-ಪೊಲೀಸ್ ವ್ಯವಸ್ಥೆ… ಇತ್ಯಾದಿಗಳನ್ನು ಬಗೆಬಗೆಯಾಗಿ ತೆರೆದಿಡುವಂತವು. ಇವೆಲ್ಲ ಸಾಮಾಜಿಕ ಸಮಸ್ಯೆಗಳು ಭೂತಕಾಲದ ಮಂದಿಗೂ-ವರ್ತಮಾನದ ಮಂದಿಗೂ ಬಗೆಬಗೆಯ ರೂಪಾಂತರವಾಗಿ ಕಾಡಿದರೂ ಮೂಲದಲ್ಲಿರುವ ಸಮಸ್ಯೆಯ ಬೀಜಗಳು ವಿಭಿನ್ನ ಭ್ರೂಣದಿಂದ ಹೊರಹೊಮ್ಮುತ್ತಾ ಎಂದಿಗೂ ಚಿರಂಜೀವಿಯಂತೆ ಸಾಮಾನ್ಯ ಮನುಷ್ಯನ ಬದುಕನ್ನ ಛಿದ್ರಗೊಳಿಸುತ್ತವೆ. ಇಂತಹ ಕತೆಗಳನ್ನು ಎಣೆಯುವ ಕೌಶಲ ಲೇಖಕರಿಗೆ ಬಹುಮಾನವಾಗಿ ದಕ್ಕಿದೆ ಮತ್ತು ತಮ್ಮ ಜೀವನಾನುಭವದಿಂದ ಸೃಜನಶೀಲತೆಯ ಸೆಲೆ ಕವಲೊಡೆದು ಬಳ್ಳಿಯಂತೆ ಹಬ್ಬಿದೆ.
Profile Image for ARUNKUMAR GHATTI.
5 reviews
April 3, 2026
Hey Book Lovers,

This depcits how instincts of life kickstarts ,book takes us to the nature ,soil ,helplessness, humanity, rural beautiful joureny.Every story takes us to the harmonics we needed in life.Worth reading if you want to go home and enjoy what we are supposed to be as human beings.
Displaying 1 - 2 of 2 reviews