What do you think?

ರಥಬೀದಿ
168 pages, Unknown Binding
Published January 1, 2009
About the author
Sridhara Balagara
10 books1 followerಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್. ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ. ಬೇಂದ್ರೆ ಸ್ಮಾರಕ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಸಂಸ್ಕರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ ಮತ್ತು 'ಅಮ್ಮ' ಪ್ರಶಸ್ತಿ ಸೇರಿದಂತೆ ಹಲವು ಗೌರನ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 1 of 1 review
July 5, 2021
ರಥಬೀದಿ - ಶ್ರೀಧರ ಬಳಗಾರ
ಕತೆಗಾರ ಎಂದು ನಾನು ಕರೆಯಲು ಇಷ್ಟಪಡುವ ಶ್ರೀಧರ ಬಳಗಾರರ ಅಂಕಣ ಬರಹಗಳ ಸಂಕಲನ ಇದು. ಆದರೆ ಇದು ಅದಕ್ಕಿಂತ ಮೇಲೆ ಜಿಗಿದು ಸ್ವಗತವೂ ,ಕಥಾಸಂಕಲನವೂ ಆಗಿರುವುದು ವಿಶೇಷ.
ಇವರ ಜಗತ್ತಿನೊಳಗೆ ಆಧುನಿಕತೆ ಇನ್ನೂ ತನ್ನ ಕಬಂಧ ಬಾಹುಗಳ ಅಷ್ಟಾಗಿ ಚಾಚಿಲ್ಲ. ತನ್ನ ಊರಿನ ಸರಹದ್ದುಗಳ ಕಥಾ ಪ್ರಪಂಚ ದಾಟಿಲ್ಲ. ಆಚೆ ಮನೆ ದನ ,ಕರು ಹಾಕಿದರೂ ಸುದ್ದಿಯೇ , ಊರ ಶಾಲೆಯ ಮಾಸ್ತರರು ನಿವೃತ್ತಿಯಾದರೆ ವಿಷಾದವೇ.
ಈ ಜಗತ್ತು ಊರಿನ ಎಲ್ಲರ ಭಾವಗಳ ಒಗ್ಗೂಡಿಸುವಂತದ್ದು. ಈಗಿನ ನಗರ ಕೇಂದ್ರಿತ ಬದುಕಿನ ಎದುರು ಮನೆಯಾತನ ಗುರುತಿಲ್ಲ ಎಂಬುದು ಇಲ್ಲಿಲ್ಲ.
ಹಾಗಾಗಿಯೇ ಇಲ್ಲಿ ಪರಿಸರವೂ ಬರಹಗಳ ಪಾತ್ರವಾಗಿ ಉಸಿರಾಡುತ್ತವೆ.
ನೀವು ಉತ್ತರ ಕನ್ನಡದವರಾಗಿದ್ದರೆ ಮಿಸ್ ಮಾಡಬೇಡಿ
ಕ್ಷಮಿಸಿ ನೀವು ಭಾವಗಳಿರುವ ಮನುಷ್ಯರಾಗಿದ್ದರೆ ಊರಿನ ನೆನಪುಗಳ ಜೋಕಾಲಿಯಲ್ಲಿ ಜೀಕುವವರಾಗಿದ್ದರೆ ಶ್ರೀಧರ ಬಳಗಾರರ ಓದಿ.