Jump to ratings and reviews
Rate this book

ಹುಲಿ ಪತ್ರಿಕೆ ೨ | Huli patrike 2

Rate this book

206 pages, Paperback

Published January 1, 2021

2 people are currently reading
30 people want to read

About the author

ಅನುಷ್ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭಾ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಸೇರಿ ಆರಂಭಿಸಿರುವ 'ನಾವು' ಮತ್ತು 'ರಿದಂ ಅಡ್ಡ' ಬ್ಯಾಂಡ್‌ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಅನುಗ್ರಹ ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವೆಡೆಗೆ ಬಂದ ಅನುಷ್‌ರ ಈವರೆಗಿನ ಬರಹದ ಮೂಲವಸ್ತು ಪ್ರಕೃತಿಮೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರುತ್ತ, ಸದಾ ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಇವರು ಸದ್ಯ ಮಡದಿ ಡಾ. ಅನುಷಾ ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
32 (46%)
4 stars
31 (44%)
3 stars
6 (8%)
2 stars
0 (0%)
1 star
0 (0%)
Displaying 1 - 21 of 21 reviews
Profile Image for Nayaz Riyazulla.
417 reviews93 followers
July 4, 2021
ಅನುಷ್, ಈ ಪುಸ್ತಕ ಓದುವಾಗ ನಿಮ್ಮ ಕಿಟಕಿಯಾಚೆ ಮಳೆಯಾಗುತ್ತಿರಲಿ ಎಂದು ಆಶಿಸುತ್ತೇನೆ ಎಂದು ಮುನ್ನುಡಿಯಲ್ಲಿ ಬರೆದಿದ್ದಾರೆ... ಆ ಆಶಯ ನನ್ನ ಮಟ್ಟಿಗಂತೂ ಸತ್ಯವಾಗಿದೆ, ಇಂದು ಬೆಂಗಳೂರಿನಲ್ಲಿ ಜೋರು ಮಳೆ.... ಮಳೆ ಇಲ್ಲದಿದ್ದರೂ ಮಳೆಯಲ್ಲೇ ಕೂತು ಓದುತಿದ್ದೆವೇನೋ ಎಂದು ಓದುಗನಿಗೆ ಅನ್ನಿಸುವಷ್ಟು ಸೊಗಸಾಗಿ ಬರೆಯುತ್ತಾರೆ ಅನುಷ್.

ಹುಲಿ ಪತ್ರಿಕೆ ಭಾಗ 1 ಪ್ರಶ್ನೆಪತ್ರಿಕೆಯಾದರೆ, ಹುಲಿ ಪತ್ರಿಕೆ ಭಾಗ 2 ಆ ಪ್ರಶ್ನೆಪತ್ರಿಕೆಯ ಉತ್ತರಪತ್ರಿಕೆ.... ಅಲ್ಲಿ ಎಲ್ಲರ ಕಥೆಯನ್ನು ಒಂದು ಕುತೂಹಲ ಹಂತಕ್ಕೆ ತಂದು ನಿಲ್ಲಿಸಿ, ಈ ಭಾಗದಲ್ಲಿ ಎಲ್ಲರ ಕಥೆಗೂ ಸಮರ್ಥವಾದ ಅಂತ್ಯವನ್ನು ನೀಡಿ ಗೆದ್ದಿದ್ದಾರೆ.

ಸಾರಂಗನು, ಪತ್ರಿಕೆಯ ಸ್ವಾತಂತ್ರ ಮತ್ತು ಈಗಿನ ಪತ್ರಿಕೆಗಳ ಕೀಳು ರಾಜಕೀಯದ ಬಗ್ಗೆ ಮಾತನಾಡುವ ಸಂಭಾಷಣೆ ಇಷ್ಟವಾಗುತ್ತದೆ. ಡಿಟೇಕ್ಟಿವ್ಸ್ ಬಂದ ನಂತರದ ಭಾಗವಂತೂ ಮುಂದಿನ ಪುಟಕ್ಕೆ ಮನಸ್ಸು ಓಡುವಂತೆ ಮಾಡುತ್ತದೆ.

ಅನುಷ್ ಇನ್ನೂ ಹೆಚ್ಚೆಚ್ಚು ಬರೆಯಲಿ. ಈ ಪುಸ್ತಕದ ಯಶಸ್ಸು ಹೀಗೆ ಮುಂದುವರೆಯಲಿ.
Profile Image for Kanarese.
133 reviews19 followers
July 2, 2021
The non linear writing style of Anush is always commendable & nail biting. God speed to him and I wish he keep writing.

Linking the detective characters to 'ನೀನು ನಿನ್ನೊಳಗೆ ಖೈದಿ' is a surprise.

"ನನಗಾಗಲೆ ಮೂವತ್ತರ ಸನಿಹವೆಂಬ ಅರಿವಾಗುತ್ತಿದೆ, ಮತ್ತು ನನಗಿನ್ನೂ ಮೂವತ್ತರ ಸನಿಹವೆಂಬ ಅರಿವಾಗುತ್ತದೆ" this is one brilliant way of expressing adolescence💖

Truly, Anush is the Tejawsi of our generation.
Profile Image for That dorky lady.
371 reviews70 followers
August 2, 2021
ದೃಷ್ಯಗಳನ್ನೇ ಪದಗಳಾಗಿಸಿ ಪೋಣಿಸಿದಂತೆ ಬರೆಯುವ ಅನುಷ್'ರ ಸ್ಟೈಲ್ ಚೆಂದ. It was a good read. ನೀನು ನಿನ್ನೊಳಗಿನ ಖೈದಿಯ ಪತ್ತೆದಾರಿ duo ಇಲ್ಲೂ ಕೂಡ ಕಂಡಿದ್ದು ಮುಂದೆ ಚೈತನ್ಯ ಮಾಧವರೇ ಮುಖ್ಯಪಾತ್ರವಾಗಿರುವ ಪತ್ತೆದಾರಿ ಸರಣಿಯ hint ಇರಬಹುದೇ? Fingers crossed.. ಗಟ್ಟಿಯಾದ ಅವೆರಡೂ ಪಾತ್ರಗಳಿಗೆ ಸಿಗಬಹುದಾದ ಸ್ಪೇಸ್ ಇನ್ನೂ ಸಿಕ್ಕಿಲ್ಲ ಎಂತಲೇ ನನ್ನಭಿಪ್ರಾಯ.
10 reviews1 follower
January 22, 2022
ಹುಲಿ ಪತ್ರಿಕೆ ೧ ರ climax ಓದಿದಾಗಲೇ ಹುಲಿ ಪತ್ರಿಕೆ ೨ ಓದಲೇಬೇಕೆಂದು ನಿರ್ಧರಿಸಿದ್ದೆ. ಮುಂದೇನಾಗುತ್ತದೆ ಎಂಬ ಕುತೂಹಲವನ್ನೇ ಕೊಡುವ ಕಥೆ ಮಳೆಯಲ್ಲೇ ನಡೆದು, ನಮ್ಮ ಮೇಲು ನಾವೂ ಕೂಡ ಹೇಗಾದರೂ ಸಮಾಜಕ್ಕೆ ಒಳ್ಳೆಯದು ಮಾಡಬೇಕೆನ್ನಿಸುವ ಮೋಡದ ಛಾಯೆಯನ್ನು ತರುವುದಂತು ನಿಜ.
Profile Image for Harini  S T.
28 reviews8 followers
July 14, 2021
||• ಹುಲಿ ಪತ್ರಿಕೆ - ೨ •||
ಅನುಷ್ಕ ಎ ಶೆಟ್ಟಿ

ಹುಲಿ ಪತ್ರಿಕೆ-೧ ಮುಂದುವರೆದ ಭಾಗ ೨ ಕಾದಂಬರಿ ಶುರುವಾಗುವುದೇ ದೀರ್ಘವಾದ ಮಳೆ ಗುಡುಗು ಸಿಡಿಲು ಮಿಂಚು ! ಕಾಕನಕೋಟೆಯ ಇಡೀ ಊರಿನವರು ಸೇರಿ ಹುಲಿ ಪತ್ರಿಕೆ ಸುಟ್ಟು ಹಾಕಿದರೆ ಕಥೆಯ ಟ್ವಿಸ್ಟ್ ಮತ್ತು ಪತ್ರಿಕೆಯ ಮೂಲ ಉದ್ದೇಶ ಹುಡುಕಾಟಕ್ಕೆ ಇನ್ವೆಸ್ಟಿಗೇಷನ್ ಶುರುವಾಗುತ್ತದ

ಗರುಡ ಪುರಾಣದಲ್ಲಿ ಅಡಗಿರುವ ರಹಸ್ಯ ನಕ್ಷೆ ! ಗಾಂಜಾ ವ್ಯವಹಾರ ನಡೆಸುತ್ತಿರುವ ಸಾಮಿಲ್ ನವೀನ್ ಕೊಲೆ . ಪಟೇಲರ ಮಗ "ಸುಮಂತ" ಕಾಣೆಯಾಗಿರುವ ಹಿನ್ನೆಲೆಯ ನಡೆದಿರುವ ಘಟನೆಗಳು ಭಾಗ-1 ಪ್ರಶ್ನೆಗಳು ಭಾಗ-2 ಉತ್ತರಗಳು .

ಹುಲಿ ಪತ್ರಿಕೆ 1 ಹಲವು ಪ್ರಶ್ನೆಗಳು ಮತ್ತು ಗೊಂದಲಗಳು ಹುಟ್ಟಿಸಿರುವ ಲೇಖಕರು ಭಾಗ ಎರಡರಲ್ಲಿ ಒಮ್ಮೆ ಹುಲಿ ಪತ್ರಿಕೆ ಮಾತನಾಡಿದರೆ ಮತ್ತೊಂದು ಕಡೆ ಬೆಂಗಳೂರಿನಿಂದ ಬಂದ ಡಿಟೆಕ್ಟಿವ್ , ಹೀಗೆ ಪುಟಗಳು ಓದುತ್ತ ಹೋದಂಗೆ ಪಾತ್ರಗಳು ಅವರವರ ಕಥೆ ಹೇಳುತ್ತಾರೆ ಕೆಲವೊಂದು ಭಾಗದಲ್ಲಿ ಲೇಖಕರು ಮುಂದುವರಿಸುತ್ತಾರೆ ಕೊನೆಗೆ ನಿರೀಕ್ಷಿಸುವುದು ಹುಲಿ ಪತ್ರಿಕೆ ಮುಂದಿನ ಸಂಚಿಕೆ ಯಾವಾಗ ?

ಹರಿಣಿ
Profile Image for Vasanth.
104 reviews21 followers
July 23, 2025
ಒಂದೇ ದಿನದಲ್ಲಿ ಎರಡೂ ಭಾಗಗಳನ್ನು ಓದಿ ಮುಗಿಸಿದೆ. ಸರಳ ಬರವಣಿಗೆ ಮತ್ತು ಮುಂದೇನು ಎನ್ನುವ ಕುತೂಹಲ ಅದಕ್ಕೆ ಕಾರಣ. ಹುಲಿ ಪತ್ರಿಕೆ ೧ ಪ್ರಶ್ನೆ ಪತ್ರಿಕೆಯಾದರೆ, ಹುಲಿ ಪತ್ರಿಕೆ ೨ ಉತ್ತರ ಪತ್ರಿಕೆ. ಇಲ್ಲಿನ non-linear ನಿರೂಪಣೆ ಇಷ್ಟವಾಯ್ತು, ಹಿಂದಿನ ಅಧ್ಯಾಯದಲ್ಲಿ ಏನೋ ಮಿಸ್ಸಾಯ್ತು ಅಂದುಕೊಳ್ಳುತ್ತಿರುವಾಗಲೇ ಮುಂದಿನ ಅಧ್ಯಾಯದಲ್ಲಿ " ಓಹ್...! ಹಿಂಗ ಇದು" ಎನ್ನುವಂತೆ ಮಾಡುವಂತಹ ಚಾಲಾಕಿ ಬರವಣಿಗೆ ಲೇಖಕರದ್ದು.

ಮಿಸ್ಟರಿ ಥ್ರಿಲ್ಲರ್ ಪ್ರಕಾರಕ್ಕೆ ಸೇರಬಹುದಾದ ಈ ಸರಣಿ ಪುಸ್ತಕಗಳಲ್ಲಿದ್ದಿದ್ದು ಬೆರಳಣಿಕೆಯಷ್ಟು ಪಾತ್ರಗಳು, ಗೋಜಲಿಗೆ ಸಿಲುಕಿಸದ ಸರಳ ರಹಸ್ಯ ಭೇದಿಸುವ ಕಥೆ. In my opinion, when it comes to mystery thrillers, the world building is as crucial as the mystery itself, ಅದನ್ನು ಬಹಳ ಅಚ್ಚುಕಟ್ಟಾಗಿ ಅನುಷ್ ಅವರು ಭಾಗ ಒಂದರಲ್ಲಿ ನಿರ್ಮಿಸಿದ್ದಾರೆ, ಎರಡನೇ ಭಾಗದಲ್ಲಿ ನಾವು ಆ ಪ್ರಪಂಚದಲ್ಲಿ ಭಾಗಿಯಾಗುವಂತೆಯೂ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ Protagonist ಸಾರಂಗ ಹೆಸರಿನ ಪಾತ್ರ ಪತ್ರಿಕೋದ್ಯಮದ ಸ್ಥಿತಿಯ ಬಗ್ಗೆ ಮಾತನಾಡಿದ್ದು ಇಷ್ಟವಾಯ್ತು, ಭಾಗ ಎರಡರಲ್ಲಿ ಬರುವ ಎರಡು detective ಪಾತ್ರಗಳಿಗೆ space ಇರಲಿಲ್ಲ ಎನ್ನುವುದು ಒಂದು ಕೊರತೆ, ಮಿಕ್ಕಿದ್ದೆಲ್ಲವೂ ಓದುಗನಿಗೆ ಇಷ್ಟವಾಗುವಂತದ್ದೆ.

ಧನ್ಯವಾದ
ವಸಂತ್
೩ ೦ /೦ ೬ /೨ ೦ ೨ ೫
Profile Image for milton.reads.
59 reviews2 followers
August 11, 2024
ಹುಲಿ ಪತ್ರಿಕೆ ೧ ರಿಂದ ಮುಂದುವರಿದ ಭಾಗವಾದ ಈ ಪುಸ್ತಕ ಮೊದಲನೆಯ ಕತೆ ಮುಗಿಯುವಾಗ ಬರುವ ಅನೇಕ ಪ್ರಶ್ನೆಗಳಿಗೆ ಉತ್ತರ ಹೊಂದಿದ್ದರು ಕೂಡ ಒಂದು ಸ್ವತಂತ್ರ ಕತೆ ಕೂಡ ಹೇಳೋದ್ರಲ್ಲಿ ಯಶಸ್ವಿ ಆಗಿದೆ. ಸಮಾನಾಂತರವಾಗಿ ಮೊದಲನೆಯ ಪುಸ್ತಕದಲ್ಲಿ ಒಂದೆರಡು ಬಾರಿ ಉಲ್ಲೇಖಿಸಲಾದ ನವೀನ ಅನ್ನೋ ಪಾತ್ರದ ಕತೆ ಹೇಳುತ್ತೆ ಹಾಗೂ ಸುಮಂತನ ದ್ರಷ್ಟಿಕೋನದಿಂದ ಕತೆ ಮುಂದುವರೆಯುತ್ತದೆ.

ಸಾರಂಗ ಮತ್ತು ಫ್ರೆಂಡ್ಸ್ ಮಾಡೋ ಡಿಟೆಕ್ಟಿವ್ ಕೆಲ್ಸ ಇಲ್ಲಿ ನಿಜವಾದ ಡಿಟೆಕ್ಟಿವ್ಗಳಾದ ಚೈತನ್ಯ ಮತ್ತು ಮಾಧವ್ ಮಾಡುತ್ತಾರೆ. ಹೆಂಡದಂಗಡಿಯ ಸನ್ನಿವೇಶಗಳು ನೆನಪಾದ್ರೆ ಇನ್ನೂ ನಗು ಬರುತ್ತೆ, ಆ ಸಂಭಾಷಣೆಗಳು ಮಾತ್ರ ಸೂಪರ್. ಮಮತಾ ಅನ್ನೋ ಚಿಕ್ಕ ಪಾತ್ರ ಯಾಕಿರಬಹುದು ಅನ್ನೋ ಯೋಚ್ನೆ ಮಾಡ್ತಾ ಮಾಡ್ತಾ ಮತ್ತೆ ಗೊತ್ತಾಗಿದ್ದು ಅದು ಕತೆಗೆ ಎಷ್ಟು ಮುಖ್ಯ ಲಿಂಕ್ ಎಂದು.

ಹುಲಿ ಪತ್ರಿಕೆ ೧ ಮತ್ತು ೨, ಇವೆರಡರಲ್ಲಿ ಯಾವ್ದು ಮೇಲುಕೈ ಅಂತ ಕೇಳಿದ್ರೆ ಎರಡೂ ಅನ್ನಬಹುದು. ಬರುವ ದಿನಗಳಲ್ಲಿ ನನ್ನ ಪರ್ಸನಲ್ ಕಲೆಕ್ಷನ್ಗೆ ಸೇರಿಸಲು ಎರಡೂ ಪುಸ್ತಗಳು ಖರೀದಿಸುವೆ.

ರೇಟಿಂಗ್ - ⭐⭐⭐⭐
Profile Image for Soumya.
217 reviews49 followers
June 30, 2021
ಹುಲಿ ಪತ್ರಿಕೆ ೧ ಓದಿದ ನಂತರ next ಬುಕ್ ಯಾವಾಗ ಬರತ್ತೆ ಅನ್ನೋ ಕುತೂಹಲ ಇತ್ತು.

ಹುಲಿ ಪತ್ರಿಕೆ ೨ ಮೊದಲನೇ ಬುಕ್ ಅಷ್ಟು ಸಸ್ಪೆನ್ಸ್ ಎಲ್ಲ ಇಲ್ಲದೆ ಇದ್ರೂ, ಮೊದಲನೇ ಬುಕ್ ಅಲ್ಲಿ ಬಂದಂತಹ ಎಲ್ಲ ಸನ್ನಿವೇಶಗಳನ್ನ ಅಷ್ಟೇ ಚೆನ್ನಾಗಿ end ಮಾಡಿದ್ದಾರೆ.

ಹುಲಿ ಪತ್ರಿಕೆ ೧-೨ ಎರಡೂ ಓದಿದಮೇಲೆ ಒಂದು ಒಳ್ಳೆ ಸಸ್ಪೆನ್ಸ್ ಸಿನಿಮಾ ನೋಡಿದ ಹಾಗೆ ಆಯ್ತು.
Profile Image for Prashanth Bhat.
2,142 reviews137 followers
April 18, 2022
ಹುಲಿ ಪತ್ರಿಕೆ ‌ಒಂದರ ಸ್ಪಷ್ಟತೆ ಇಲ್ಲಿ ಕಾಣದಿದ್ದರೂ ರಹಸ್ಯಗಳೆಲ್ಲ ಬಗೆ ಹರಿದ ಓದಿನ ಸಮಾಧಾನ.
29 reviews1 follower
June 20, 2024
ನೆನ್ನೆ ಅಷ್ಟೇ ಕೈಗೆತ್ತಿಕೊಂಡ ಪುಸ್ತಕ... ಇವತ್ತು ಪೂರ್ತಿ ಓದಿ ಆಯಿತು... ಬೆಂಗಳೂರಿನ ಮಳೆಯ ವಾತಾವರಣ ಹಾಗೂ ಅನುಷ್ ಶೆಟ್ಟಿ ಅವರ ಪುಸ್ತಕದೊಂದಿಗೆ ಕಾಫಿ ಹಿರುತ್ತಾ ಓದುವ ಅನುಭವ ಸ್ವರ್ಗವೇ ಸರಿ...ಹುಲಿ ಪತ್ರಿಕೆ 1 ಥರವೇ 2 ನೇ ಭಾಗವು ಅಷ್ಟೇ ಬಿರುಸಾಗಿ ಓದಿಸಿಕೊಂಡಿತು...ಡಿಟೇಕ್ಟಿವ್ ಚೈತನ್ಯ ಹಾಗೂ ಮಾಧವ್ ಪಾತ್ರಗಳ ಜೊತೆಗೆ ಸ��ರಂಗ್, ವೇದ, ಅಬು, ಸಂತು ಹಾಗೇ ಇನ್ಸ್ಪೆಕ್ಟರ್ ಕೇಶವ್ ಪಾತ್ರಗಳು ಇಷ್ಟ ಆದ್ವು...
Profile Image for Shrilaxmi.
66 reviews28 followers
August 27, 2021
Exceeds expectations!

ನಿರೂಪಣೆಯ ಬಿಗಿ, ಕಥೆಯ ಓಟ, thriller/suspense ಅಂಶಗಳು, ಸಂಭಾಷಣೆಯಲ್ಲಿ ಇಣುಕುವ ಹಾಸ್ಯ - ಎಲ್ಲ ರೀತಿಯಿಂದಲೂ ಮನಸ್ಸು ಗೆಲ್ಲುವ ಪುಸ್ತಕ.
Profile Image for ಸುಶಾಂತ ಕುರಂದವಾಡ.
420 reviews24 followers
April 4, 2022
ಪುಸ್ತಕ: ಹುಲಿ ಪತ್ರಿಕೆ-೨
ಲೇಖಕರು: ಅನುಶ್ ಶೆಟ್ಟಿ

ಹುಲಿ ಪತ್ರಿಕೆ-೧ರ ಮುಂದುವರಿದ ಭಾಗ. ಅದರ ಜೊತೆಗೆ ಪತ್ರಿಕೆಯ ಉದ್ದೇಶ, ಪತ್ರಿಕೆಯನ್ನು ನಡೆಸಲು ಬಂದ ಪ್ರೇರಣೆ ಈ ಪುಸ್ತಕದಲ್ಲಿವೆ. ಲೇಖಕರು ಸ್ವತಃ ತಾವೇ ಪತ್ರಿಕೋದ್ಯಮದಲ್ಲಿ ದುಡಿದು ಅಲ್ಲಿಯ ಕಷ್ಟವನ್ನು ಕಂಡವರು. ಅಲ್ಲಿ ಅವರು ಕಾಣುವ ಕಷ್ಟ ಕಾರ್ಪಣ್ಯಗಳು, ರೀಸ್ಕಲ್ಲಿ ಮತ್ತು ಎಷ್ಟೋ ಜನರನ್ನು ಎದುರು ಹಾಕಿಕೊಂಡು ವಿಷಯಗಳನ್ನು ಸಂಗ್ರಹಿಸಿ ಅದನ್ನು ಪತ್ರಿಕೆಗಳಲ್ಲಿ ಮುದ್ರಣಗೊಳಿಸಿದಾಗ ಅವರಿಗೆ ಏನೋ ಒಂಥರಾ ಜಯ ಸಿಕ್ಕಹಾಗೆ. ಹಾಗೆ ಪ್ರತಿದಿನ ಅವರು ಕಷ್ಟಪಡಬೇಕಾಗಿದ್ದು ಇದ್ದಿದ್ದೇ. ಅವೆಲ್ಲವೂ ಇಲ್ಲಿ ಲೇಖಕರು ಬರೆದಿದ್ದಾರೆ. ಇದನ್ನು ಬಿಟ್ಟು ಕಥೆಯಲ್ಲಿ ಪಟೇಲರ ಮಗನ ಕಾಣೆ, ಊರಿನಲ್ಲಿ ನಡೆಯುವ ಅಕ್ರಮ ದಂಧೆಗಳು, ಅವು ಹೇಗೆ ಅವರ ಜೀವನಕ್ಕೆ ಮಾರಕವಾದವು ಎನ್ನುವುದು ಮುಂದುವರೆದ ಭಾಗ. ಅದರ ಜೊತೆಗೆ ಊರಿನಲ್ಲಿ detactiveಗಳ ಆಗಮನ ಒಂದು ಸಂಚಲನ ಮೂಡಿಸುತ್ತದೆ.
ಪುಸ್ತಕವನ್ನು ಓದಿಯೇ ಮಜ ತೆಗೆದುಕೊಳ್ಳಬೇಕು. ಅದಕ್ಕೆ ಇನ್ನು ಹೆಚ್ಚು ಪುಸ್ತಕದ ಬಗ್ಗೆ ನಾನು ಹಾಕಲು ಹೋಗುವುದಿಲ್ಲ. ಓದಿ ಆನಂದಿಸಿರಿ.
October 29, 2022
ಬರಹಗಾರ ಅನುಷ್ ಭಾಗ 1 ರಲ್ಲಿ ಶುರುಮಾಡಿದ್ದ ಎಲ್ಲವನ್ನು ಭಾಗ 2 ರಲ್ಲಿ ಸಮರ್ಪಕವಾಗಿ ಮುಗಿಸಿದ್ದಾರೆ. ಮೊದಲ ಭಾಗಕ್ಕೆ ಹೋಲಿಸಿದರೆ ಸ್ವಲ್ಪ ಕುತೂಹಲ ಕಡಿಮೆ ಮೂಡಿಸಿದ್ದು ನಿಜ; ಸಮಾಜದಲ್ಲಿ ಸ್ವತಂತ್ರ ಮಾಧ್ಯಮವು ಸಾಧಿಸಬಹುದಾದ ಗಮ್ಯಗಳನ್ನು ಹಾಗೂ ಅದನ್ನು ಸಾಧ್ಯವಾಗಿಸುವ ದಾರಿಯಲ್ಲಿ ಅದಕ್ಕೆ ಒದಗುವ ಸಂಕಷ್ಟಗಳನ್ನು ತಮ್ಮ ಕಲ್ಪನೆಯ ಬಿದಿರಿನಲ್ಲಿ 'ಹುಲಿ ಪತ್ರಿಕೆ’ ಎಂಬ ಬುಟ್ಟಿಯನ್ನು ಹೆಣೆದು ಓದುಗರ ಮುಂದೆ ತಂದಿಟ್ಟಿದ್ದಾರೆ. ಅನುಷ್ ಇನ್ನೂ ಸಾಕಷ್ಟು ಬರೆಯಲಿ ಎಂದು ಆಶಿಸುತ್ತೇನೆ.
Profile Image for Prathima Deepak.
142 reviews4 followers
May 1, 2022
Very gripping story. All the characters are justified at the end giving a good feel. A very strong message to the current media(newspapers) is conveyed.
24 reviews5 followers
March 10, 2025
ನಾನು ಹುಲಿ ಪತ್ರಿಕೆ 1 ಮತ್ತು 2 ರನ್ನು ಓದಿದ್ದು ನನ್ನ, ವಾರದಲ್ಲಿ ಮೂರು ದಿನದ, ಬೆಂಗಳೂರಿನ ಮೆಟ್ರೋ ಪ್ರಯಾಣದಲ್ಲಿ. ಕೆಲಸಕ್ಕೆ ಹೋಗಿ ಬರುವ ದಾರಿಯಲ್ಲಿ. ಈ ಹಿಂದೆ ಅನುಷ್ ರವರ ಎರಡು ಪುಸ್ತಕ ಓದಿ ಮೆಚ್ಚಿ, ಅವರು ಕನ್ನಡದಲ್ಲಿ ಬರೆಯುವ ಮಾಡರ್ನ್ ಕಥೆಗಳು ಹಿಡಿಸಿ, ನನಗೆ ಮಜಾ ಕೊಡುವ ಪುಸ್ತಕ ಓದಬೇಕು ಎಂದೆನಿಸಿದಾಗ ಆನುಷ್ ರವರ ಪುಸ್ತಕ ಕೈಗೆತ್ತಿಕೊಳ್ಳುತ್ತೇನೆ.

ಮಾಡರ್ನ್ ಎಂದ ಮಾತ್ರಕ್ಕೆ ಇವರ ಬರವಣಿಗೆ ಏನೂ ಗ್ರಹಿಸಲಾಗದ modernism ತರ ಅಲ್ಲ.
ನಾನು ಜೀವನದಲ್ಲಿ ಪುಸ್ತಕ ಓದೋಕ್ಕೆ ಶುರು ಮಾಡಿದ್ದು ಸ್ವಲ್ಪ ಲೇಟಾಗಿ, ಅದರಲ್ಲೂ ಕನ್ನಡ ಶುರು ಮಾಡಿದ್ದು ಇನ್ನೂ ಲೇಟು. ಹಾಗೇ ಇಂಗ್ಲಿಷ್ ಸಾಹಿತ್ಯ ಹಾಗೂ ಸಿನೆಮಾಗಳ ಪರಿಣಾಮ ನನ್ನ ಅಚ್ಚುಮೆಚ್ಚಿನ ಮೇಲೆ ಕೊಂಚ ಹೆಚ್ಚೇ ಇದ್ದಾಗ, ಅನುಷ್ ರವರ ನೀನು ನಿನ್ನೊಳಗೆ ಖೈದಿ ಓದಿದಾಗ ನನಗೆ ನನ್ನ ಭಾಷೆಯಲ್ಲೂ ಈ ಅಚ್ಚುಮೆಚ್ಚಿಗೆ ಸೇರೋ ಕೃತಿಗಳು ಇದೆಯಲ್ಲಾ ಎಂದು ಸಂತಸವಾಯಿತು. ಇದನ್ನ ನಾನು ಮಾಡರ್ನ್ ಅಂದಿದೀನಿ. ಅದು ತಪ್ಪಾದರೆ ತಪ್ಪು, ಇರ್ಲಿ ಬಿಡಿ.

ನನಗೇಕೆ ಅನುಷ್ ರವರ ಬರವಣಿಗೆ ಅಷ್ಟು ಇಷ್ಟ ಎಂದರೆ ಅವರ ಬರವಣಿಗೆಯ ಶೈಲಿ ತುಂಬ visual. ಇವರ ಪುಸ್ತಕ ಓದಬೇಕಾದರೆ ನಡೆಯುತ್ತಿರುವ ದೃಶ್ಯಗಳು, ಪಾತ್ರಗಳು, ಅವರ ಸಂದರ್ಶನ ಎಲ್ಲ vividಆಗಿ ಕಣ್ಣಮುಂದೆ ಬರುತ್ತವೆ. ಒಂದು ಸಿನಿಮಾ ಸ್ಕ್ರಿಪ್ಟ್ ಓದೋತರನೇ ಭಾಸವಾಗುತ್ತದೆ.

ಹುಲಿ ಪತ್ರಿಕೆ ಬಗ್ಗೆ ಹೇಳೋದಾದ್ರೆ, ಎರಡೂ ಭಾಗಗಳೂ ಅತಿ ವೇಗವಾಗಿ ಚಲಿಸುತ್ತವೆ. ಸಿಂಪಲ್ ಆಗಿರುವ ಭಾಷೆ ಆದರೆ ಭಾಷೆಯ ಸೊಗಸಿಗೆ, ಅನುಷ್ ರವರು ಬಳಿಸುವ ಮೆಟಫಾರ್ಸ್ ಗೆ, ಕಥೆ ಕಟ್ಟುವ ರೀತಿಗೆ, ಕಥೆಯ structure ಗೆ ಏನು ಕಮ್ಮಿಯೆನಿಸುವುದಿಲ್ಲ.
ಎರಡನೇಯ ಭಾಗದ ಮುಂಚೆ ಅನುಶ್ ರವರು "ಪುಸ್ತಕ ಓದುವಾಗ ನಿಮ್ಮ ಕಿಟಕಿಯಾಚೆ ಮಳೆಯಾಗುತ್ತಿರಲೆಂದು ಆಶಿಸುತ್ತೇನೆ" ಎನ್ನುತ್ತಾರೆ. ನಾನು ಇದನ್ನು ಓದಿದ್ದು ಫೆಬ್ರುವರಿಯಲ್ಲಿ. ಬೆಂಗಳೂರು ಚಳಿಗಾಲ ಬಿಟ್ಟು ಧಗೆ ಧಗಿಸುವ ಬೇಸಿಗೆಗೆ ಕಾಲಿಡುವ ಸಮಯ. ಮಳೆ ಬಿಡಿ, ಆಗಸದಲ್ಲಿ ಮೋಡ ಕಂಡರೂ ಅದು ನಮ್ಮ ಪುಣ್ಯ. ಇಂಥ ಸಮಯದಲ್ಲಿ ಮೆಟ್ರೋನಲ್ಲಿ ಪ್ರಯಾಣಿಸಿ ಓದುತ್ತಿರುವ ನನಗೆ, ದಿವಸ 1 ರಿಂದ 1.5 ಘಂಟೆ ಬೆಂಗಳೂರಿನಲ್ಲಿ ಫೆಬ್ರುವರಿಯಲ್ಲಿ ಮಳೆ ಧರೆಗಿಳಿದಿದೆ ಎಂಬಂತೆಯೇ ಇತ್ತು.

ಕೇವಲ ಪತ್ತೇದಾರಿ ಕೃತಿ ಹಾಗು ಗೆಳೆತನದ ಕೃತಿಯಾಗದೆ, ಹುಲಿ ಪತ್ರಿಕೆ ನಮ್ಮ ಈ ಜಗತ್ತಿನ ಈಗಿನ ಪರಿಸ್ಥಿತಿ, ಅದನ್ನು ಕಂಡು ತೆಪ್ಪಗಿರೋ ಸುದ್ದಿ ಮಾಧ್ಯಮಗಳು, ದ್ವೇಷ ಸಾರಿಸೋ ಟಿವಿ ನ್ಯೂಸ್ ಚಾನೆಲ್ಗಳು, ಸುಳ್ಳು ಸುದ್ದಿ ಹಬ್ಬಿಸೋ ಸೋ ಕಾಲ್ಡ್ ಪತ್ರಕರ್ತರು ಹಾಗು ಪತ್ರಿಕೋದ್ಯಮದ ಇಂಪಾರ್ಟೆನ್ಸ್ ಬಗ್ಗೆ ಬರೆದಿರುವ ಸಂಗತಿಗಳು, ಈ ಪುಸ್ತಕವನ್ನು ಒಂದು ಲೆವೆಲ್ ಮೇಲಕ್ಕೆ ಏರಿಸುತ್ತದೆ.
ಕೊನೆಯಲ್ಲಿ ನಮ್ಮ ನಾಯಕ ಸಾರಂಗ ಸ್ವಲ್ಪ monologueಗಿಗೆ ಹೋದರು, ಅದುವರಿಗೂ ಒಳ್ಳೆ ಪತ್ರಕರ್ತರು ಯಾರು, ಹೇಗಿರಬೇಕು. ಪತ್ರಿಕೆ, ಸುದ್ಧಿಗಳ ಪರಿಣಾಮ ಸಮಾಜದಲ್ಲಿ ಎಷ್ಟು ಮುಖ್ಯ, ಇವೆಲ್ಲವನ್ನು ತುಂಬ ಅಂದವಾಗಿ ಚಿತ್ರಿಸಿದ್ದಾರೆ.

ಆದರೆ ಒಂದು ನನಗೆ ಕಿರಿಕಿರಿ ಅನ್ನಿಸಿದ್ದು ಪುಸ್ತಕದ ಪ್ರಮುಖ ೫ ಪಾತ್ರಗಳಲ್ಲಿ ಮೂರು ಪಾತ್ರಗಳ ಹೆಸರು ಸ ಇಂದ ಶುರುವಾಗುತ್ತದೆ. ಸಾರಂಗ ನಮ್ಮ ನಾಯಕ, ಸಂತು ಅವನ ಗೆಳೆಯ, ಸುಮಂತ ಕಾಡಿಗೆ ಓಡಿಹೋಗಿರುವ ಹುಡುಗ. ಪುಸ್ತಕದ ಮೊದಮೊದಲು ಈ ಮೂವರು ಪತ್ರಗಳನ್ನು ಬೇರೆಬೇರೆಯಾಗಿ ನೋಡಲು ಸ್ವಲ್ಪ ಕಷ್ಟಯೆನಿಸಿತು. ಆದರೆ ಮುಂದೆ ಹೋಗ್ತಾಹೋಗ್ತಾ ಏನು ತೊಂದರೆಯಾಗಲಿಲ್ಲ. ಇದು ನನ್ನ ಸ್ಕಿಲ್ ಇಶ್ಯೂ ಕೂಡ ಇರಬಹುದು.
Profile Image for Aadharsha Kundapura.
58 reviews
March 11, 2022
ಅನುಷ್ ಎ ಶೆಟ್ಟಿಯವರ "ನೀನು‌ ನಿನ್ನೊಳಗಿನ ಖೈದಿ ಪುಸ್ತಕವು" ಅವರ ಹುಲಿ‌ ಪತ್ರಿಕೆ ಕಾದಂಬರಿ ಒದಲು ಸ್ಪೂರ್ತಿ.
ಒಂದು ಚಿಕ್ಕ ಪುಸ್ತಕ ಹಾಗೆ ಚಿಕ್ಕ ಓದು, ಒಂದೇ ಬಾರಿಗೆ ಓದಿ ಮುಗಿಸಬಹುದಾಂತ ಪುಸ್ತಕ. ಪುಸ್ತಕ ಚಿಕ್ಕದಾದರೂ ಅದರಲ್ಲಿರುವ ವಿಷಯಗಳು ರೋಮಾಂಚಕಾರಿ ಹಾಗು ಗಾಡವಾಗಿದೆ.
ಹುಲಿ ಪತ್ರಿಕೆ ಕಾಕನಕೋಟೆಯಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಪ್ರಸಾರ ಮಾಡತ್ತಿದ್ದ ಪತ್ರಿಕೆ. ಅದರ ಸಂಪಾಕರ ಹೆಸರು ಯಾರಿಗೂ ತಿಳಿಯದೇ ಗೌಪ್ಯವಾಗಿರತ್ತದೆ. ಇದರ ಪ್ರಭಾದಿಂದಾಗಿ ಕೆಲವು ವ್ಯಕ್ತಿಗಳು ತಮ್ಮ ಬಣ್ಣ ಬಯಲಾಗುತ್ತದೆ ಎನ್ನೊ ಗುಮಾನಿಯಿಂದ ಸಂಪಾದಕರ ಹುಡುಕಾಟದಲ್ಲಿ ತೊಡಗಿರುತ್ತಾರೆ.
ಕರ್ನಾಟಕದ ಕಾಕನಕೋಟೆ ಹಾಗು ಕೇರಳದ ಪಡಿಚಿರಗಳ ಮಧ್ಯೆ ಕಬಿನಿ ನದಿ ಹರಿದು ರಾಜ್ಯಗಳನ್ನು ಇಬ್ಬಾಗ ಮಾಡಿರುತ್ತದೆ. ಕಾಡು, ಮಳೆ, ಹಾಡು ಹೆಳುತ್ತಾ ನದಿದಾಟಿಸುತ್ತಾ ದೋಣಿ ಹುಟ್ಟು ಹಾಕುತ್ತಿರುವ ಮಾಣಿ, ಎಲ್, ಆರ್ ಈಶ್ವರಿ ಹಾಡು ಕೇಳುತ್ತ ಎಣ್ಣೆಯ ಮಂಪರಿನಲ್ಲಿ ಸದಾ ತೇಲಾಡುತ್ತಿರುವ ಬೋರಿ ಅಂಗಡಿಯ ಕುಡುಕರು, ನದಿಯ ದಡದಲ್ಲಿ ಕಾಣಿಸಿಕೊಂಡ ಹುಲಿ, ಅದೇ ಸಮಯದಲ್ಲಿ ಕಾಡಿನಲ್ಲಿ ನಾಪತ್ತೆಯಾಗಿರುವ ಸುಮಂತ್.

ಪತ್ರಿಕೆಯ ಸಂಪಾದಕರು ಸಿಕ್ತಾರ...??
ಕಾಡಲ್ಲಿ ಕಾಣೆಯಾದ ಸುಮಂತ್ ಏನಾದ..??
ಹುಲಿಯ ಹುಡುಕಾಟ ಏನಾಯ್ತು..?

ಇಲ್ಲೀಗಲ್ ಪತ್ರಿಕೆಯ ಹುಡುಕಾಟದ ಹಾದಿಯಲ್ಲಿ ಡಿಟೆಕ್ಟಿವ್‌ಗಳ ತನಿಖೆಗಳಿಗೆ ಸಿಕ್ಕ ತಿರುವುಗಳು..
‌ಈ ಎಲ್ಲ ವಿಷಯಗಳನ್ನೊಳಗೊಂಡ ಈ ಪುಸ್ತಕ ಒಂದು ಪಕ್ಕ ಸಸ್ಪೆನ್ಸ್, ಥ್ರಿಲ್ಲರ್‌ ಕಾದಂಬರಿ..

ಹುಲಿ ಪತ್ರಿಕೆ ಭಾಗ ೧ ಮತ್ತು ೨
ಅನುಷ್ ಎ ಶೆಟ್ಟಿ.
Profile Image for Sangeetha.
61 reviews22 followers
December 17, 2021
ಈ ಪುಸ್ತಕ ಹುಲಿಪತ್ರಿಕೆ ಯ ಎರಡನೆಯ ಭಾಗವಾದರು , ಮೊದಲನೆಯ ಪುಸ್ತಕದ ವಿಸೃತ ವಿವರಣೆ ಎನಿಸಿಬಿಡುತ್ತದೆ. ಒಂದೆರಡು ಪಾತ್ರವನ್ನು ತೆಗೆದು ಇನ್ನೂ ಗಟ್ಟಿಯಾದ ಕಥೆ ಮಾಡಬಹುದಿತ್ತು . ಮೊದಲ ಭಾಗದ ಬಿಗಿಯಾದ ನಿರೂಪಣೆ , ಪಾತ್ರ ಪೋಷಣೆ , ಎಲ್ಲಿಯೂ ನಿಲ್ಲದ ಕಥೆಯ ಮುಂದೆ ಇದು ಸಪ್ಪೆ ಆಗಿದಂತು ನಿಜ .ಒಟ್ಟಿನಲ್ಲಿ ಮೊದಲ ಪುಸ್ತಕ ಓದಿ ಆನಂದಿಸಿದ ಓದುಗರು ಕಥೆಯ ಪರಿಪೂರ್ಣತೆಗೆ ಇದನ್ನು ಓದಬೇಕು ಅಷ್ಟೇ.
Profile Image for Madhukara.
Author 7 books5 followers
February 22, 2022
Really apt ending to the series. This book presents the events happened in the first book in a new light. The story telling style is fluid and simple. Looking forward to read more books from the author.
Profile Image for ಲೋಹಿತ್  (Lohith).
89 reviews1 follower
May 10, 2023
ಮೊದಲಿನ ಭಾಗದಂತೆ ತುಂಬಾ ರೋಮಾಂಚಕವಾಗಿ ಕಥೆ ಸಾಗಿ ಒಂದು ಒಳ್ಳೆ ಅಂತ್ಯವನ್ನು ಕಾಣುತ್ತದೆ ..
ಇಡೀ ಕಾಕನಕೋಟೆಯ ಜಗತ್ತು ಕಣ್ಣ ಮುಂದಿತ್ತು..
Profile Image for Karthik.
61 reviews19 followers
December 18, 2021
ಹುಲಿ ಪತ್ರಿಕೆ 1 ಮಾಡಿದ ಮೋಡಿಗೆ ಮರುಳಾಗಿ ಹುಲಿ ಪತ್ರಿಕೆ 2 ಪುಸ್ತಕವನ್ನು ಅರಸುತ್ತಾ ಮೈಸೂರಿನ ನವ ಕರ್ನಾಟಕ ಪುಸ್ತಕ ಮಳಿಗೆಯ ಕದ ತಟ್ಟಿದ್ದೆ. ಹೋದವನೇ ಸೀದಾ ಹುಲಿ ಪತ್ರಿಕೆ 2 ಕೊಂಡು ಹೊರ ಬಂದಾಯ್ತು. ನನ್ನ ಜೀವನದಲ್ಲಿ ಪುಸ್ತಕ ಮಳಿಗೆಯಿಂದ ಇಷ್ಟು ಬೇಗ ಹೊರ ಬಂದದ್ದು ಇದೇ ಮೊದಲ ಬಾರಿ, just to know what is there inside this amazing Book!

ಪುಸ್ತಕದ ಕುರಿತು ಹೇಳೋದಾದ್ರೆ, ಇದೊಂದು complete meal! ಮೊದಲ ಭಾಗದಲ್ಲಿ ಕಥೆಯ summary ಇದ್ದರೆ , ಈ ಭಾಗದಲ್ಲಿ detailed explanation ಇದೆ. ಒಂಥರಾ behind the scenes ಏನಾಯ್ತು ಎಂಬುದರ ಅನಾಲಿಸಿಸ್. Anush ಅವ್ರು ಬ್ರಿಲಿಯಂಟ್ ಆಗಿ ಕಥೆ ಹೆಣೆದಿದ್ದಾರೆ ,ನೋ ಡೌಟ್.
ಪ್ರತಿಯೊಂದು ಅಧ್ಯಾಯ ಮುಗೀತಾ ಹೋದಂತೆ, ಅಯ್ಯೋ ಇಷ್ಟು ಬೇಗ ಮುಗೀತಾ ಇದ್ಯ! ಅನ್ನೋ ಕೊರಗು. ಪುಸ್ತಕ ಕೆಳಗಿಟ್ಟಾಗ ಏನೋ ಒಂದು ಚಡಪಡಿಕೆ. ಒಂದು cinematic feel ಕೊಟ್ಟದಂತೂ ನಿಜ! ಬಹಳ ದಿನ ಕಾಡುವ ಕಥೆ.. ಕಾಕನಕೋಟೆ,ಪಡಿಚಿರ,ಸಾರಂಗ,ವೇದ,ಅಬು,ಸಂತು, ಸುಮಂತ,ಹುಲಿ ಪತ್ರಿಕೆ , ಗರುಡ ಪುರಾಣ...! ಈ ಎಲ್ಲಾ ಪಾತ್ರ ,ವಿಷಯಗಳು ಬಹಳ ದಿನ ಕಾಡುವುದಂತೂ ನಿಜ.

- ಕಾರ್ತಿಕ್.
18.7.2021
Displaying 1 - 21 of 21 reviews

Can't find what you're looking for?

Get help and learn more about the design.