ಲಿಪಿಯ ಪತ್ರಗಳು - ಇತ್ತೀಚಿನ ಓದಿನಲ್ಲಿ ಹೊಸ ಅನುಭವ ನೀಡಿದ ಪುಸ್ತಕ. ಈ ಪುಸ್ತಕವನ್ನು ಪೂರ್ಣ ಪ್ರಮಾಣದ ಕಾದಂಬರಿ ಎಂದಾಗಲಿ, ಹರಟೆ ಅಥವಾ ಚರ್ಚೆ ಎಂದಾಗಲೀ ಹೇಳಲು ಸಾಧ್ಯವಿಲ್ಲ. ಲಿಪಿ ಮತ್ತು ಲಿಖಿತಾ ಎಂಬ ಎರಡು ಪಾತ್ರಗಳ ಮೂಲಕ ಲೇಖಕಿ ಮೇಘನಾ ಸುಧೀಂದ್ರ ಬಾಲ್ಯ, ತಾರುಣ್ಯ ಮತ್ತು ವೃದ್ದಾಪ್ಯದ ಬಗ್ಗೆ, ವೈಯಕ್ತಿಕ ಅಭ್ಯಾಸ ಮತ್ತು ಸ್ವಭಾವಗಳ ಬಗ್ಗೆ, ಶಾರುಕ್ ಖಾನನಿಂದ ಸಿಲ್ಲಿಲಲ್ಲಿಯವರೆಗೆ, ಎಮ್ ಡಿ ಪಲ್ಲವಿ, ರಾಜು ಅನಂತಸ್ವಾಮಿ ಹಾಡುಗಳ ಬಗ್ಗೆ, ತೇಜಸ್ವಿ, ಜೋಗಿ ಮತ್ತಿತರ ಪುಸ್ತಕಗಳ ಬಗ್ಗೆ.. ಹೀಗೆ ಹತ್ತು ಹಲವು ವಿಷಯಗಳ ಕುರಿತು ಒಮ್ಮೆ ಮನಸಾಗಿ, ಮತ್ತೊಮ್ಮೆ ಮಸ್ತಕವಾಗಿ ಲಿಪಿ ಮತ್ತು ಲಿಖಿತಾ ಇಬ್ಬರೂ ಪತ್ರಮುಖೇನ ಸಂಭಾಷಿಸುತ್ತಾ ಎರಡು ಭಿನ್ನ ದೃಷ್ಟಿಕೋನವನ್ನು ಮಂಡಿಸುತ್ತಾರೆ.
ಒಂದು ವಿಷಯವನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವ ಅಭ್ಯಾಸವು ಎಷ್ಟು ಸುಲಭವೋ ಅಷ್ಟೇ ಸಂಕುಚಿತ. ಇಲ್ಲಿ ಲಿಪಿಯ ಮಾತುಗಳನ್ನು ಕೇಳುವಾಗ ಅದೇ ಸರಿ ಎನಿಸುತ್ತದಾದರೂ ಅದಕ್ಕೆ ತದ್ವಿರುದ್ದ ಹೇಳಿಕೆ ನೀಡುವ ಲಿಖಿತಳ ಮಾತು ಕೇಳುವಾಗ ಅದೂ ಕೂಡ ಸರಿಯೇ ಎನ್ನಿಸಿ ಮನಸ್ಸು ಮತ್ತು ಬುದ್ಧಿಯ ನಡುವೆ ಸಂಘರ್ಷ ಶುರುವಾಗುತ್ತದೆ. ಪುಸ್ತಕ ಕೊನೆಗೊಂಡ ನಂತರವೂ ಅದರಲ್ಲಿ ಚರ್ಚಿಸಿದ ವಿಷಯ ಮತ್ತು ನಮ್ಮ ಸ್ವಭಾವಕ್ಕನುಗುಣವಾಗಿ ನಾವು ಯಾವ ಯಾವ ವಿಷಯಗಳ ಕುರಿತು ಮನಸಿನ ಕಡೆ ವಾಲುವವರೋ ಅಥವಾ ಬುದ್ಧಿಯ ಕಡೆಗೋ ಎಂಬ ಯೋಚನೆ ಹುಟ್ಟಿಸುವ ಒಳ್ಳೆಯ ಓದು.
ಕೇಳುಕಥೆಗಳನ್ನು (audiobooks) ಕೇಳುವ ರೂಢಿಯಿದ್ದರೆ i highly recomend ಲಿಪಿಯ ಪತ್ರಗಳು in audio form- which is available in storytel app.
It's a book about conversation about twin sisters who choose to communicate only through letters. The difference between thoughts of 2 people who were born and grew up together is very interesting. Short read.
ಇಂಟರ್ನೆಟ್, ವಾಟ್ಸಾಪ್ ನ ಈ ಕಾಲದಲ್ಲಿ ಬೇರೆ-ಬೇರೆ ದೇಶಗಳಲ್ಲಿರುವ ಅಕ್ಕ-ತಂಗಿಯರು ಹಲವಾರು ಪತ್ರಗಳ ಮೂಲಕ ಮಾತಾಡಿಕೊಂಡರೆ ಹೇಗಿರತ್ತೆ? 90ರ ದಶಕದ ನಮ್ಮ ಬಾಲ್ಯದ ‘inland’ ಲೇಟರ್ಗಳ ನೆನಪು ತರಿಸುವ 'ಲಿಪಿಯ ಪತ್ರಗಳು' ಪುಸ್ತಕ ಸೊಗಸಾಗಿದೆ. ಪ್ರತಿ ಪತ್ರವೂ ಹೊಚ್ಚ ಹೊಸದಾಗಿ ನಮಗೆ ಹಿಡಿಸುವಂತೆ ಮೇಘನಾ ಬರೆದಿದ್ದಾಳೆ! Easily my favourite book of hers! If you’re a 90s’ kid and haven’t read this book, please get hold of it. Lipiya Pathragalu will definitely enthral you.