Jump to ratings and reviews
Rate this book

ಅಮಲನ ಕಥೆ

Rate this book

35 pages, Paperback

1 person is currently reading
30 people want to read

About the author

Kuvempu

64 books558 followers
Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.

He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.

He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi

His son K P Poornachandra Tejaswi was a famous writer as well.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
7 (87%)
4 stars
1 (12%)
3 stars
0 (0%)
2 stars
0 (0%)
1 star
0 (0%)
Displaying 1 - 6 of 6 reviews
Profile Image for Nayaz Riyazulla.
425 reviews94 followers
April 23, 2022
ಅಮಲ ಬಡವ, ಆತನೊಬ್ಬ ಬಡಗಿ, ಬಡವನಾದರೂ ಮಹಾನ್ ದೈವಭಕ್ತ, ಹರಿನಾಮಸ್ಮರಣೆ ಆತನ ಇಷ್ಟದ ಕಾರ್ಯ. ಎಲ್ಲರಲ್ಲೂ ಹರಿಯನ್ನು ಕಾಣುವ ಆತ ಸುಖಿ. ಅಮಲ ಕಾನನವನ್ನು ಹಾಯ್ದು ಹೋಗುವಾಗ ಒಂದು ಹರಿಣ ಭಯದಿಂದ ಓಡಿ ಬರುತ್ತಿರುತ್ತದೆ. ಅಮಲನ ಕೋಮಲ ಹೃದಯವನ್ನು ತಿಳಿದು, ಯಾರೋ ಒಬ್ಬ ಶಬರ ತನ್ನನ್ನು ಕೊಲ್ಲಲು ಭರದಿಂದ ಬರುತಿದ್ದಾನೆ ಎಂದು ಅಮಲನಲ್ಲಿ ರಕ್ಷೆಯನ್ನು ಬೇಡುತ್ತದೆ. ಅಮಲ ಹರಿಣಗೆ ಅಭಯ ನೀಡುತ್ತಾನೆ. ತನ್ನ ಪ್ರಾಣ ಕೊಟ್ಟಾದರೂ ರಕ್ಷಿಸುತ್ತಾನೆ ಎನ್ನುತ್ತಾನೆ. ಹರಿಣನನ್ನು ಬದಿಗೆ ಸರಿಸಿ ನಿಲ್ಲುತ್ತಾನೆ. ಶಬರ ಬಂದು ಅಮಲನಲ್ಲಿಗೆ ಹರಿಣ ಹೋದ ದಾರಿ ಕೇಳುತ್ತಾನೆ. ಕೊಲ್ಲುವುದು ತಪ್ಪು ಎಂದು ಅಮಲ ಶಬರನಿಗೆ ಹೇಳಿದರೂ ಶಬರ ಕೇಳದೆ ಕೋಪಗೊಳ್ಳುತ್ತಾನೆ. ಕೋಪಗೊಂಡು ಶರವನ್ನು ಕಿವಿಯವರೆಗೂ ಸೆಳೆದು ಬಾಣ ಬಿಡಲು, ಅದೇ ಸಮಯಕ್ಕೆ ಅಮಲ ತನ್ನ ಕೈಲಿದ್ದ ಕೊಡಲಿಯನ್ನು ಬಿಸುಟುತ್ತಾನೆ. ಅಲ್ಲಿಂದ ಹೊಮ್ಮಿದ ಕಾಂತಿಯನು ಭೇದಿಸಿ ದೇವ ಕಾಣಿಸಿಕೊಳ್ಳುತ್ತಾನೆ. ಅಮಲನ ಭಕ್ತಿಗೆ ಮೆಚ್ಚಿ ಮುಕ್ತಿಯ ದಾರಿ ತೋರುತ್ತಾನೆ.

ಇದೇ ಸಮಯದಲ್ಲಿ, ಮನೆಗೆ ಇನ್ನೂ ಬಾರದ ಅಮಲನನ್ನು ನೆನೆದು ಮಡದಿ ಮಕ್ಕಳೆಲ್ಲರೂ ಗಾಬರಿಯಾಗುತ್ತಾರೆ. ಅಮಲನ ಮಗ ಮಧುರ, ತಾಯಿಯ ಅಪ್ಪಣೆ ಪಡೆದು ಅಮಲನನ್ನು ಹುಡುಕಿಕೊಂಡು ಸರಿರಾತ್ರಿ ಹೊತ್ತಲ್ಲಿ ಪಂಜು ಹಿಡಿದು ಹೊರಡುತ್ತಾನೆ. ಕಾಡಿನ ಮದ್ಯೆಯಲ್ಲಿ ಸಿಡಿಲು ಬಡಿದು ಭೋರ್ಗರಿಸಿ ಕಲ್ಲಿನ ಗಾತ್ರದ ಮಳೆಹನಿಗೊಂಡು ಮಳೆ ಬರುತ್ತದೆ. ಇಂತಹ ಕಠಿಣ ಸಮಯದಲ್ಲೂ ಮಧುರ ದೈವಭಕ್ತಿಯನ್ನು ಬಿಡದೇ ಅಂತಹ ರುದ್ರ ಪ್ರಳಯದಲ್ಲೂ ದೇವನ ಶಕ್ತಿಯನ್ನು ಹಾಡಿ ಹೊಗಳುತ್ತಾನೆ. ದೇವರು ತನ್ನನ್ನು ಕಾಪಾಡುತ್ತಾನೆ ಎಂದು ನಂಬುತ್ತಾನೆ. ಅಲ್ಲಿಯೂ ಬರುವ ಹರಿ ಮಧುರನನ್ನು ಕಾಪಾಡಿ ಮನೆಗೆ ತೆರಳಲು ಹೇಳುತ್ತಾನೆ.

ಮನೆಗೆ ಬಂದರೆ ತನ್ನ ಗುಡಿಸಲು ಸುವರ್ಣ ಸೌಧವಾಗಿರುವುದನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ. ಅಲ್ಲಿನ ಸೌಂದರ್ಯ, ಭೇದ ಭಾವಗಳಿಲ್ಲದ ಅನುಭವವೆಲ್ಲವನ್ನು ಕಂಡು ಬೆರಗಾಗುತ್ತಾನೆ. ಒಳಗೆ ನಡೆದರೆ ಸಿಂಹಾಸನದಲ್ಲಿ ಅಮಲ ಪದ್ಮನಾಭನಾಗಿ ಅಲಂಕರಿಸಿದ್ದಾನೆ. ಅಮಲನು ಹರಿತತ್ವಗಳನ್ನು ಭೋದಿಸಿತ್ತಾನೆ. ಎಲ್ಲ ಕಡೆಯು ಹರಿ ಸುಜ್ಞಾನದ ರೂಪದಲ್ಲಿ, ಸೌಖ್ಯದ ರೂಪದಲ್ಲಿ, ಚೈತನ್ಯದ ರೂಪದಲ್ಲಿ ಇರುವದನ್ನು ಹೇಳುತ್ತಾನೆ.

ಭಗವದ್ಗೀತೆ, ಉಪನಿಷತ್ ಸಾರಗಳನ್ನು ನನ್ನ ಕವಿ ಕುವೆಂಪು ತಮ್ಮ ಕಥನಗಳಲ್ಲಿ, ಪ್ರಬಂಧಗಳಲ್ಲಿ ತುಂಬಿ ಹೇಳುವುದು ವಿಶೇಷ. ಇಲ್ಲಿಯೂ ಅದು ದಟ್ಟವಾಗಿದೆ. ತಮ್ಮ ಕಿಶೋರ ವಯಸ್ಸಿನಲ್ಲಿ ಅಂದರೆ ತಮ್ಮ 20ನೇ ವರ್ಷಕ್ಕೆ ಇಂತಹ ವಿಚಾರಧಾರೆ ಇರುವುದು ಸಾಮನ್ಯ ಅನಿಸುವುದಿಲ್ಲ. ಕುವೆಂಪುರನ್ನು ಮನುಜರಾಗೇ ನೋಡುವುದು ನನಗೆ ಕಷ್ಟ. ಅವರಲ್ಲಿ ಯಾವುದೋ ಅಗೋಚರ ಶಕ್ತಿ ಇತ್ತೆಂಬುದು ನನ್ನ ಬಲವಾದ ನಂಬಿಕೆ, ಕಾರಣ ಸಾಮನ್ಯ ಮನುಜರು ಬರೆಯುವ ಸಾಲುಗಳಲ್ಲ ಇವು. ಕುವೆಂಪು ಒಂದು ಮಹಾ ಆತ್ಮ.

ಇಷ್ಟವಾದ ಕೆಲ ಸಾಲುಗಳು

"ಕಲ್ಲು ದೇವರು ಎಂದು ದೂರದೆ
ಪೊಳ್ಳು ವಿಗ್ರಹವೆಂದು ಜರೆಯದೆ
ಕಲ್ಲು ಮುಳ್ಳಲ್ಲಿರುವ ನನ್ನನು
ಎಲ್ಲಿಯಂ ನೀ ಪೂಜಿಸು"

"ನಾಡಿನೊಳಗಿಹ ಬಾಲರಾದರು
ಪಾಡಲೆನ್ನನು ಹರುಷದಿಂದಲಿ,
ಕಾಡಿನೊಳಗಿಹ ಯೋಗಿಗೀಯುವ
ಗಾಢ ಸುಖವನು ಕೊಡುವೆನು!"

"ಹರಿಯು ಹರನೂ ಬೇರೆ ಎನ್ನುತ
ಬರಿದೆ ಭೇದವ ಮಾಡಲೊಲ್ಲದ
ನರನು ಯಾವಜ್ಜನ್ಮದಲ್ಲಿಯೂ
ಹರಿಯ ಬಲದಿಂದಿರುವನು!"

❤️
Profile Image for Mallikarjuna M.
51 reviews14 followers
January 22, 2023
ಶತಮಾನದ ಅಂಚಿನಲ್ಲಿರುವ ಕೃತಿ....ಕುವೆಂಪು ಅವರಿಗೆ ಕುವೆಂಪು ಅವರೇ ಸಾಟಿ... just WOW...👌👌👌
.
ಓದುವ ಸೂಚನೆ: ಬೆಳ್ಳಿಗ್ಗೆ ಅಥವಾ ಸಂಜೆ, ಬಯಲಲ್ಲಿ ಅಥವಾ ಬಾಲ್ಕನಿಯಲ್ಲಿ, ಜೋರಾಗಲ್ಲದಿದ್ದರು ನಿಮಗೆ ಕೇಳುವಷ್ಟು ಧನಿಯಲ್ಲಿ ಓದಿದರೆ ಈ ಕಥನ ಕಾವ್ಯ ಒಂದು ದಿವ್ಯ ಅನುಭವ ಕರುಣಿಸುತ್ತದೆ...☯️
Profile Image for ಲೋಹಿತ್  (Lohith).
90 reviews1 follower
September 27, 2023
ಕುವೆಂಪುರವರ ಕವನಗಳನ್ನು ಓದಲು ಅದಕ್ಕೆ ಆದ ವಾತಾವರಣ ಬೇಕು, ತಿಳಿ ಮುಂಜಾನೆಯಾಗಲಿ ಅಥವಾ ಮುಸ್ಸಂಜೆಯಲ್ಲಿ, ಸುತ್ತ ಹಸಿರಿನ ಚಾಪು ಇರುವ ಕಡೆಯೇ ಆಗಿರಬೇಕೆಂದು ಶತಾಯ ಗತಾಯ ತೀರ್ಮಾನ ಮಾಡಿ ನಮ್ಮದೇ ಅಡಿಕೆ ತೋಟದಲ್ಲಿ ಒಂದು ಮಲಗುವ ಉಯ್ಯಾಲೆ ಕಟ್ಟಿ ಅದರಲ್ಲಿ ಆಡುತ್ತ ಈ ಪುಸ್ತಕವನ್ನು ಓದಿ ಮುಗಿಸಿದೆ..

ಅಷ್ಟು ಸುಲಭವಾಗಿ ಅರ್ಥವಾಗುವ ಕೃತಿ ಇದಲ್ಲ,ಆದರೂ ಅಮಲನ ಜಗತ್ತಿನಲ್ಲಿ ಕಳೆದ ಪ್ರತಿ ಕ್ಷಣವೂ ಅಮೋಘವಾಗಿತ್ತು..

ಹಾಗೂ ಇಲ್ಲಿ ನಯಾಜ್ ರವರು ಕೃತಿಯನ್ನು ವಿಸ್ತಾರವಾಗಿ ವಿವರಣೆ ನೀಡಿದ್ದು ತುಂಬಾ ಸಹಾಯವಾಯಿತು..

ನನ್ನ ಇಷ್ಟವಾದ ಸಾಲುಗಳು:

ರವಿಯು ಮಿನುಗುವ ಮುನ್ನ ಏಳುತ
ಸವಿಯ ಗಂಜಿಯನ್ನುಂಡು ಸುಖದಲ್ಲಿ
ಲವ ಲವಿಕೆಯಿಂದಲಿ ಹೊರಟನಾ
ಕವಿದ ಮಂಜಿನ ಮಧ್ಯದಿ

ಕಲ್ಲು ದೇವರು ಎಂದು ದೂರಿದೆ
ಪೊಳ್ಳು ವಿಗ್ರಹವೆಂದು ಜರೆಯದೆ
ಕಲ್ಲು ಮುಳ್ಳಲಿರುವ ನನ್ನನು
ಎಲ್ಲಿಯೆಂ ನೀ ಪೂಜಿಸು !

ಎಲ್ಲಿ ಧರ್ಮ ಧ್ವಜವು ಇರುವುದೋ,
ಎಲ್ಲಿ ಸತ್ತವು ಆಳುತಿರುವುದೋ,
ಎಲ್ಲಿ ಕರುಣೆಯು ಪಾಡುತಿರುವುದೋ,
ಅಲ್ಲಿ ನೆಲೆಸಿವೆ ನಿತ್ಯದಿ
Profile Image for Spoorthi  Chandrashekhar.
62 reviews16 followers
December 27, 2022
ಕುವೆಂಪು ಅವರ ಬರಹಗಳೇ ಹಾಗೆ, ಅರ್ಥವಾಗಲು ಕೆಲವು ಸಮಯ ಹಿಡಿಯುತ್ತದೆ, ಆದರೆ ಅರ್ಥವಾದರೆ ಮಾತ್ರ ಆ ಬರಹಗಳಿಗೇ ಹುಚ್ಚುರಾಗಿ ಮಾರುಹೋಗುತ್ತೀವಿ. ಹಾಗೆ ನನ್ನನ್ನು ಈ ವರ್ಷ ಕಾಡಿದ ಕವಿ ಎಂದರೆ ಕುವೆಂಪು. ಈ ವರ್ಷ ಗೆಳೆಯ ನಯಾಜ಼್ ನ ಸಹವಾಸ ಮಾಡಿ ಕುವೆಂಪು ಅವರ ಬಗ್ಗೆ ಅಪಾರವಾದ ಪ್ರೀತಿ,ಗೌರವ ಹಾಗೆ ಭಕ್ತಿ ಕೂಡ ಬೆಳೆದು ಅತೀ ಹೆಚ್ಚು ಅವರ ಪುಸ್ತಕಗಳನ್ನೇ ಓದಿದೆ ಈಗಲೂ ವರ್ಷದ ಕೊನೆಯಲ್ಲೂ ಅವರ ಪುಸ್ತಕಗಳನ್ನೇ ಓದುತ್ತಿರುವೆ.

ಹಿಗೊಂದು ಓದಲು ಕೂತ ಪುಸ್ತಕ ಎಂದರೆ ಅದು "ಅಮಲನ ಕಥೆ" ಮುಂಚೆಯಲ್ಲಾ ಒಂದೇ ಧಾಟಿಗೆ ಓದಲು ಶುರುಮಾಡುವ ಅದೇ ಧಾಟಿಗೆ ಓದಿ ಮುಗಿ‌ಸುತ್ತಿದೆ ಆದರೆ ಯಾಕೋ ಇತ್ತೀಚಿಗೆ ಓದಲು ಬಹಳ ಸಮಯ ಹಿಡಿಯುತ್ತಿದೆ ಹಾಗೂ ಉತ್ಸಾಹ ಅಲ್ಪವಾಗಿದೆ.

"ಅಮಲನ ಕಥೆ" ಒಂದು ಬಡವ ಮನುಷ್ಯನ ಕಥೆ, ಕಥೆಯ ಸಾರಾಂಶ ಹೇಳಿದರೆ ಕಥೆಯ ಸತ್ವ ಹೋಗುತ್ತದೆ ಎಂಬುದು ನನ್ನ ಅನಿಸಿಕೆ. ಇದೊಂದು ಕಥನ ಕಾವ್ಯ. ಕುವೆಂಪು ಅವರ ಬರಹಗಳ ಶೈಲಿಗೆ ಶರಣಾಗುವ ಕೆಲಸ ಮಾತ್ರ ನಮ್ಮದು. ಶುರುವಿನಿಂದ ಕೊನೆಯ ವರೆಗೂ ಎಲ್ಲೂ ಬೇಸರವಾಗಿದೆ, ಹುರುಪನ್ನು ನೀಡುವ ಪುಸ್ತಕ.
ಕೊನೆಗೆ ಬಡವನಿಗೆ ಏನಾಗುತ್ತದೆ‌‌ ಎಂಬ ಪ್ರಶ್ನಾರ್ಥಕ ಚಿಹ್ನೆಗೆ ನನ್ನ ಉತ್ತರ ಪುಸ್ತಕವನ್ನು ಕೊಂಡು ಓದಿ.
Twinkle twinkle little star ಎಂದೂ ಮಕ್ಕಳಿಗೆ ಓದಿಸುವ ಬದಲು, ಈ ರೀತಿ ನಮ್ಮ ಮಣ್ಣಿನ ಪುಸ್ತಕವನ್ನು ಓದಿಸಿದರೆ ಭಾಷೆಯ ಸತ್ವ ಇನ್ನೂ ಬೆಳೆಯುತ್ತದೆ.


ನನ್ನಿಷ್ಟದ ಸಾಲು:

ಕಲ್ಲು ದೇವರು ಎಂದು ದೂರದೆ
ಪೊಳ್ಳು ವಿಗ್ರಹವೆಂದು ಜರೆಯದೆ
ಕಲ್ಲು ಮುಳ್ಳಲ್ಲಿರುವ ನನ್ನನು
ಎಲ್ಲಿಯಂ ನೀ ಪೂಜಿಸು
Profile Image for Abhi.
89 reviews20 followers
September 29, 2021
ಆಮಲನ ಕಥೆಯು ಕುವೆಂಪು ಅವರು ಮಕ್ಕಳಿಗಾಗಿ ರಚಿಸಿದ ಕೃತಿ. ಇದರಲ್ಲಿ 190 ಚೌಪದಿಗಳಿವೆ. ಈ ಕಥೆಯು 1924ರಲ್ಲಿ ಮೊದಲ ಮುದ್ರಣವಾಗಿತ್ತು!

- ಬುಕ್ ‌ಬ್ರಹ್ಮ
7 reviews
October 24, 2021
ಮುಗ್ದತೆಯ ಮತ್ತೊಂದು ಹೆಸರು..
Displaying 1 - 6 of 6 reviews

Can't find what you're looking for?

Get help and learn more about the design.