Jump to ratings and reviews
Rate this book

ಶ್ಮಶಾನ ಕುರುಕ್ಷೇತ್ರ

Rate this book

60 pages, Unknown Binding

2 people are currently reading
23 people want to read

About the author

Kuvempu

64 books558 followers
Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.

He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.

He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi

His son K P Poornachandra Tejaswi was a famous writer as well.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
7 (77%)
4 stars
1 (11%)
3 stars
1 (11%)
2 stars
0 (0%)
1 star
0 (0%)
Displaying 1 - 4 of 4 reviews
Profile Image for Nayaz Riyazulla.
425 reviews94 followers
October 5, 2021
ಪಾಂಡವರು ಗೆದ್ದು ಗೆಲ್ಲಲಿಲ್ಲ, ಕೌರವರು ಸೋತು ಸೋಲಲಿಲ್ಲ. ಇದು ಕುರುಕ್ಷೇತ್ರ ಯುದ್ಧದ ಪರಿಣಾಮ? ಇರಬಹುದು, ಕೌರವರು ಪಾಂಡವರನ್ನು ಪಕ್ಕಕ್ಕಿಟ್ಟು ಸಾಮಾನ್ಯ ಜನರ ದೃಷ್ಟಿಯಲ್ಲಿ ಸ್ಥಿತಿಯನ್ನು ಪರಿಶೀಲಿಸಿದಾಗ, ಅವು ನಮಗೆ ನಮ್ಮದೇ ಪ್ರತಿಬಿಂಬದಂತೆ ಕಾಣುತ್ತವೆ.

ಯುದ್ಧ ಮತ್ತು ಹಿಂಸೆಯೇ ಎಲ್ಲ ಪ್ರಶ್ನೆಗಳಿಗೂ, ಸನ್ನಿವೇಶಗಳಿಗೂ ಉತ್ತರ ಎಂದು ಬಡಿದಾಡುವ ಮನುಜ ರೂಪದ ರಕ್ಕಸರಿಗೆ, ಕೌರವರಂತವರಿಗೆ ಸಿಗುವುದು ನೀರಿಗೆ ಬದಲು ರಕ್ತ, ಔತಣದ ಬದಲು ಕೊಳಕು ನರಮಾಂಸ. ದಾಯಾದಿಗಳ ಕದನದೊಳ್ ಸೋತು ಸತ್ತದ್ದು ಕೇವಲ ಭೀಷ್ಮ, ಕರ್ಣ, ದ್ರೋಣ, ಕೌರವನಲ್ಲ, ಅಥವಾ ಪಾಂಡವರಲ್ಲಿ ಅಭಿಮನ್ಯು, ಘಟೋತ್ಕಚರು ಅಲ್ಲ. ಇಬ್ಬರ ಕಡೆಯಲ್ಲೂ ವಿಧಿ ಹೆಣಗಳ ಗೋಪುರವೇ ಕಟ್ಟಿತ್ತು. ನೀರು ಸಿಗದೇ ಜಿಗುಟು ರಕ್ತ ಸಿಗುತಿತ್ತು. ತಾಯಿ ತನ್ನ ಸತ್ತ ಮಗನನ್ನು ಹುಡುಕಿಕೊಂಡು ಅಥವಾ ಮಗು ತನ್ನ ಸತ್ತ ತಂದೆಯನ್ನು ಶ್ಮಶಾನದಲ್ಲಿ ಹುಡುಕಿಕೊಂಡು ಬರುವ ಆ ದೃಶ್ಯ ಮೂಡಿಸಿ, ನಾವು ಮಾನವರೇ? ಎಂಬ ಪ್ರಶ್ನೆ ಹುಟ್ಟಿ ಹಾಕುತ್ತದೆ. ಇವೆಲ್ಲದರ ಚಿತ್ರಣ ಈ ಅಮೋಘ ನಾಟಕ.

ಕುವೆಂಪು ಪೌರಾಣಿಕ ನಾಟಕ ಬರೆದರೂ ಅದನ್ನು ವರ್ತಮಾನದಲ್ಲಿ ನಡೆಯುತ್ತಿರುವ ಅಥವಾ ಭವಿಷ್ಯದಲ್ಲಿ ಮನುಜರು ಎದರಿಸುವ ಘಟನಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಬರೆಯುವುದು ಅವರ ಹೆಚ್ಚುಗಾರಿಕೆ. ನಾಟಕ ಕಾವ್ಯಮಯವಾಗಿದ್ದರೂ, ನಾಟಕೀಯ ಸನ್ನಿವೇಶಗಳು ಈ ನಾಟಕವನ್ನು ಇನ್ನೂ ಗಟ್ಟಿ ಮಾಡುತ್ತದೆ. ಒಂದಷ್ಟು ಉದಾಹರಣೆ ಕೊಡುತ್ತೇನೆ.

1. ಭೀಮನು ಅಭಿಮನ್ಯು, ಘಟೋತ್ಕಚರ ಅಂತ್ಯ ಕಾರ್ಯ ಮಾಡುವ ಸಂದರ್ಭದಲ್ಲಿ ದೃತರಾಷ್ಟ್ರ ಮತ್ತು ಗಾಂಧಾರಿಯ ನೋವು ತಿಳಿಯುತ್ತದೆ, ಅಲ್ಲಿಯವರೆಗೂ ಇದ್ದ ಅವನ ಮೊಂಡು ವೀರತನ ನಾಶವಾಗುತ್ತದೆ.

2. ಕೌರವರ ಪಡೆಯ ಒಬ್ಬ ಸೈನಿಕ, ತನ್ನ ಅಂತಿಮ ಕ್ಷಣದಲ್ಲಿ ನೀರನ್ನು ಹರಸಿ ಸಾಯುವ ಪರಿಸ್ಥಿತಿಯಲ್ಲಿದ್ದಾಗ ಯುದಿಷ್ಟಿರ ನೀರು ಕುಡಿಸುತ್ತಾನೆ, ಆ ಸೈನಿಕ ನೀರು ಕುಡಿಸಿದವ ಪಾಂಡವ ಎಂದು ತಿಳಿದಾಗ, ಅಂತಿಮ ಕಾಲದಲ್ಲಿ ತನ್ನ ಸ್ವಾಮಿಗೆ ದ್ರೋಹ ಬಗೆದೆ ಎಂದೆನೆಸಿ ಪ್ರಾಣ ತ್ಯಜಿಸುತ್ತಾನೆ.

3. ಇನ್ನೂ ಭೂಮಿ ತೂಕಕ್ಕೆ ನಿಲ್ಲಬಲ್ಲ ದೃಶ್ಯವೆಂದರೆ ಹತ್ತನೇ ದೃಶ್ಯ. ಇಲ್ಲಿ ಕೃಷ್ಣ, ರುದ್ರನಿಗೆ ಕಲಿಯುಗದಲ್ಲಿ ನಡೆಯುವ ಪ್ರಮುಖ ಘಟನೆಗಳ ದಿವ್ಯದರ್ಶನವನ್ನು ತೋರಿಸುತ್ತಾರೆ. ಆ ದೃಶ್ಯದ ಸಂಭಾಷಣೆ ಮತ್ತು ವಸ್ತು ಭವ್ಯ ಮತ್ತು ಅನಂತ.

ಬಹುಷಃ ನನ್ನ ಮಟ್ಟಿಗೆ ಇದು ಕುವೆಂಪುರವರು ಬರೆದಿರುವ ಶ್ರೇಷ್ಠ ನಾಟಕ. ಕೆಲವು ಪುಸ್ತಕಗಳನ್ನು ಸಮಯವನ್ನು ಕಳೆಯುವದಕ್ಕೆ, ಮನ ಹಗುರಗೊಳ್ಳಿಸುವದಕ್ಕೆ ಓದಿ ಮರೆಯಬಹುದು, ಕೆಲ ಪುಸ್ತಕಗಳನ್ನು ನಾವು ಹೃದಯದಲ್ಲಿ ಆಳವಾದ ಗುಣಿ ತೆಗೆದು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಅವು ನಮಗೆ ಅಗ್ಗದ ಬೆಲೆಯಲ್ಲಿ ಸಿಗಬಹುದಾದ ಅನರ್ಘ್ಯ ರತ್ನಗಳು. ಮನಸ್ಸು ಮಾನವೀಯತೆ ಮರೆತು ನಶಿಸಿ ಹೋಗುವ ಸಂದರ್ಭದಲ್ಲಿ ಇಂತಹ ಪುಸ್ತಕಗಳು ನಮ್ಮನ್ನು ಕಾಪಾಡುತ್ತವೆ, ನಮ್ಮನ್ನು ರೂಪಿಸುತ್ತವೆ.

ಈ ನಾಟಕದ ರಂಗಪ್ರಯೋಗಕ್ಕೆ ಸಿಕ್ಕ ಯಶಸ್ಸು ಮತ್ತು ವಿಮರ್ಶೆ, ಮುದ್ರಿತ ರೂಪಕ್ಕೆ ಏಕೋ ಸಿಗಲಿಲ್ಲ. ಈ ಪುಸ್ತಕದ ಬಗ್ಗೆ ವಿಮರ್ಶಕರು, ಓದುಗರು ಚರ್ಚಿಸಿದ್ದು ಕಡಿಮೆಯೇ. ಚರ್ಚಿಸಿ ಬಹಳಷ್ಟು ಮನಗಳನ್ನು ತಲುಪಬಹುದಿತ್ತು. ನಮ್ಮ ಕಿರಿಯರಿಗೆ, ಬರುವ ಚೇತನಗಳಿಗೆ ಮಹಾಭಾರತ ಕಥೆ ಹೇಳುವಷ್ಟೇ ಮುಖ್ಯ, ಅದರ ಪರಿಣಾಮವನ್ನು ವಿವರಿಸುವುದು ಸಹ. ನಮಗೋಸ್ಕರ ಆ ಕಾರ್ಯವನ್ನು ನಮ್ಮ ಮಹಾಕವಿ ಮಾಡಿಕೊಟ್ಟಿದ್ದಾರೆ. ನಾವು ಆ ವಿಚಾರದ ದೀವಿಗೆಯನ್ನು ಸಾಧ್ಯವಾದಷ್ಟು ಮನಗಳಲ್ಲಿ ಹಚ್ಚೋಣ, ಅಂಚೋಣ.
Profile Image for Spoorthi  Chandrashekhar.
62 reviews16 followers
December 21, 2022
ಒಂದು ಅತಿದೊಡ್ಡ ವಿರಾಮ, ಯುದ್ಧ, ಹೋರಟಗಳ ನಂತರ ಪುನಃ ಓದಲು ಶುರುಮಾಡುವ ಸಂದರ್ಭದಲ್ಲಿ ನನಗೆ ಸಿಕ್ಕ ಪುಸ್ತಕ ಅಂದ್ರೆ ಅದು "ಶ್ಮಶಾನ ಕುರುಕ್ಷೇತಂ".
ಪುಸ್ತಕದ ಶಿರ್ಷಿಕೆ ನೋಡಿದಾಗ ಏನಿದು ಕುರುಕ್ಷೇತ್ರದ ನಂತರ ಯುದ್ಧಭೂಮಿ ಶ್ಮಶಾನವಾಗುತ್ತದೆ, ಆದರೆ ಈ ಶ್ಮಶಾನ ಕುರುಕ್ಷೇತಂ ಅಂದ್ರೆ ಏನು ಅನ್ನೋದನ್ನ ಉಹಿಸಕ್ಕೆ ತುಂಬಾ ಸಮಯ ತೆಗೆದುಕೊಂಡೆ.
ಎರಡು ದಿನಗಳ ಕಾಲ ಅನುಭವಿಸಿ ಓದಿದ ಪುಸ್ತಕ ಅಂದ್ರೆ ತಪ್ಪಾಗಲ್ಲ.
ಗ್ರಂಥಗಳಲ್ಲಿ ಮಹಾಭಾರತದ ಕತೆ ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ಮಾತು, ನೀತಿ, ವಿನಯ, ವಿವೇಚನೆಯನ್ನು ಹೇಳುತ್ತದೆ.
ಹದಿನೆಂಟು ದಿನಗಳ ಮಹಾಭಾರತದ ಯುದ್ಧ ಭೂಮಿಯಲ್ಲಿ ನಡೆದ ಅನೇಕ ಕತೆಗಳನ್ನು ಪ್ರತಿಮಾ ಸೃಷ್ಟಿಯಲ್ಲಿ ಕುವೆಂಪು ಅತ್ಯಂತ ಸ್ವಚ್ಛವಾಗಿ, ಮನೋಹರವಾಗಿ ವರ್ಣಿಸಿದ್ದಾರೆ. ಪ್ರತಿ ದೃಶ್ಯವೂ ಮನೋಹರ, ಮೈತಣಿಸಿ, ನೀರವ ಮೌನಕ್ಕೆ ಕರೆದೊಯ್ಯುತ್ತದೆ.
ಈ ಪುಸ್ತಕವನ್ನು ಓದಲು ಬಹಳ ಚಿಕ್ಕವಳಾದೆ ಎಂಬ ಸಂಕೋಚವೂ ಇದೆ. ಆದರೆ ಓದುವಾಗ ನಾನು ನನ್ನ ಶಾಲ ದಿನಗಳ ಹಳೆಗನ್ನಡ ಪದ್ಯವನ್ನು ಓದುತ್ತಿದ್ದೇನೆ ಎಂಬ ಸಂತಸ ನನ್ನನ್ನು ಆವರಿಸಿತು.

ನನ್ನಿಷ್ಟದ ದೃಶ್ಯ -೯

ಕುಂತಿ ಮರುಗಿ ಹೇಳುತ್ತಾಳೆ:
ಓ ಭೀಮ, ಓ ಅರ್ಜುನ,
ಓ ಎನ್ನ ಕಂದಗಳಿರಾ, ಕೈಮುಗಿದು ಬೇಡುವೆನ್,
ಸೆರಗೊಡ್ಡಿ ಬೇಡುವೆನ್ ಎನ್ನಾಸೆಯಂ ಸಲಿಸಿಂ!
ನಾನ್ ನಿಮಗೆ ತಾಯಿ ಅಹುದಾದೊಡೆ -

ಈ ಸಾಲುಗಳು ಮನಕಲುಕುವ ರೀತಿಯಲ್ಲಿ ಕುವೆಂಪು ಬರೆದಿದ್ದಾರೆ.
ಹಾಗೆ ದೃಶ್ಯ ೧೦ ರಲ್ಲಿ ರುದ್ರ ಪ್ರಸನ್ನನಾಗುವಾಗ ಕೃಷ್ಣ ಹೇಳುವ ಮಾತುಗಳು ಮಾತ್ರ ಅಬ್ಬಾ! ಅದಕ್ಕೆ ಕುವೆಂಪು ಅವರು "ರಾಷ್ಟ್ರ ಕವಿ" ಎನ್ನುವ ಸಮಾರೋಪ ನನಗೆ.

ಹಳೆಗನ್ನಡ ಇಷ್ಟ ಪಡುವ ಎಲ್ಲರಿಗೂ ಈ ಪುಸ್ತಕ ಇಷ್ಟವಾಗುತ್ತದೆ. ಕೊಂಡು ಓದಿ.
Profile Image for Bharath Manchashetty.
134 reviews3 followers
November 20, 2025
“ಸ್ಮಶಾನ ಕುರುಕ್ಷೇತ್ರಂ- ಕುವೆಂಪುರವರು 1931 ರಲ್ಲಿ ರಚಿಸಿದ ನಾಟಕ ಕೃತಿ.”

“ಕವಿಯು ತನ್ನ ಜೀವನಾನುಭವ, ಸೃಜನಶೀಲ ದೃಷ್ಟಿ, ಎಚ್ಚರದ ಸ್ಥಿತಪ್ರಜ್ಞೆಯು ಇತಿಹಾಸದ ತುಣುಕನ್ನು ಸಮಕಾಲೀನ ಸಂಗತಿಗಳ ಸಾಹಿತ್ಯದೊಳಗೆ ಎರೆದು-ಮೆರೆದು ತಮ್ಮ ಅಭಿವ್ಯಕ್ತಿ ಸ್ವಾಂತಂತ್ರ್ಯದಿಂದ ಕಂಗೊಳಿಸುತ್ತಾರೆ, ಅದರಲ್ಲಿ ಕುವೆಂಪುರವರ ಶ್ರೇಷ್ಠತೆ ಕಾವ್ಯಕ್ಕೆ ನಿಲುಕದ್ದು.”

“ ಕುವೆಂಪುರವರ ಯಾವ ಕೃತಿ ಓದಿದರೂ ಅದು ಬರೀ ಓದಿನ ಅನುಭವವಲ್ಲ, ದಿವ್ಯದರ್ಶನದ ಅನಂತ ದಿವ್ಯಾನುಭವ. ಅವರ ನಿಸರ್ಗಪ್ರೀತಿ, ಜೀವನದ ಒಲವು ಹೆಚ್ಚಾಗಿ ಕಾಣಿಸುತ್ತದೆ.”

“ಯುದ್ಧವು ರಾಜರುಗಳಿಗೆ ತಮ್ಮ ಶಕ್ತಿ ಮತ್ತು ಅಹಂಕಾರಗಳ ಪ್ರದರ್ಶನದ ಪರಮಾವಧಿಯನ್ನು ತಲುಪಿ ಜನ ಸಾಮಾನ್ಯರ ದಿನ-ಜೀವನವನ್ನು ನಾಕವಾಗಿಸುತ್ತದೆ. ಇಲ್ಲೂ ಕೂಡ ಅಷ್ಟೇ, ಯುದ್ಧ ಯಾವ ಕಾಲದದ್ದಾದರೂ ಅದರಿಂದ ಪರಿಣಾಮವಾಗುವುದು ಜನ ಸಾಮಾನ್ಯರಿಗೆ ಹೆಚ್ಚು ಅನ್ನುವುದು ಕೃತಿಯ ಆಶಯ.”

“ರಣರಂಗದೊಳಗೆ ತಾಯಿಯು ಮಗನನ್ನು, ಹೆಂಡತಿ ಗಂಡನನ್ನು, ಮಗುವು ತಂದೆಯನ್ನು ಹುಡುಕುತ್ತಾ ಹೊರಟಾಗ ಸಿಗುವ ಶವಗಳಿಂದಾಗಿ ರಾಜರುಗಳನ್ನು ಶಪಿಸುತ್ತಾರೆ, ಒಬ್ಬ ಸೈನಿಕ ನೀರಿಗಾಗಿ ಹಾತೊರೆದಾಗ ಧರ್ಮರಾಯನು ನೀರು ಕುಡಿಸಿದರೂ ಅವನ ನಿಷ್ಠೆ ದುರ್ಯೋಧನನ ಕಡೆ ಇದ್ದು, ನನ್ನ ಪ್ರಭುವಿಗೆ ಮೋಸ ಮಾಡಿದನೆಂದು ಮರುಗುತ್ತಾನೆ.”

“ಲೇಖಕರ ಪಾತ್ರ ಸೃಷ್ಟಿಯ ಅನನ್ಯತೆಗೆ ಕಲಿದೇವ ಮತ್ತು ದ್ವಾಪರದೇವ ಪಾತ್ರಗಳೇ ಸಾಕ್ಷಿ. ದ್ವಾರಪನ ಕೊನೆಯ ಆಶೆ ದುರ್ಯೋಧನನ್ನು ಕಾಣುವುದು. ಕೃಷ್ಣ ಯಾವತ್ತೂ ಶ್ರೇಷ್ಠನೇ ಎನ್ನುವುದನ್ನು ಕೆಲವು ದೃಶ್ಯಗಳಲ್ಲಿ ಮಹೋನ್ನತವಾಗಿ ಚಿತ್ರಿಸಿದ್ದಾರೆ.”

“ಊರಿಗೆ ಅರಸನಾದರೂ, ಶೌರ್ಯವಂತನಾದರೂ ತಾಯಿಗೆ ಯಾವತ್ತೂ ಮಗನೇ ಎನ್ನುವುದು ಕುಂತಿ-ಕರ್ಣನ ಕಳೇಬರವನ್ನು ಹುಡುಕುವುದರಲ್ಲಿ ಕಾಣಿಸುತ್ತದೆ.”

“ಕೊನೆಯ ದೃಶ್ಯವನ್ನು ಓದಿ ಮಂತ್ರ ಮುಗ್ಧನಾದೆ. ಅಬ್ಬಾ…! ಪಾಂಡವ-ಕೌರವರ ಸ್ಮಶಾನ ಬೂದಿಯ ಎರಡು ಬೆಟ್ಟಗಳ ಮೇಲೆ ಕಾಲಿಟ್ಟು ಕುಳಿತಿರುವ ಶಿವನ ರೌದ್ರಾವತರಣ ಎಲ್ಲ ಊಹೆಗಳಿಗೂ ಮೀರಿದ್ದು, ವಿಷ್ಣುವಿನ ಲೀಲೆ ಕಲಿಯುಗದಲ್ಲಿ ಹೇಗಿರುವುದು ಎಂಬುದನ್ನು ಚಿಕ್ಕ ಚಿಕ್ಕ ತುಣುಕುಗಳಾಗಿ ಶಿವನೆದುರು ತೋರಿಸಿದಾಗ ಎಲ್ಲವೂ ಪೂರ್ವನಿಶ್ಚಿತ ಬದುಕು ಎನಿಸುತ್ತದೆ.”

“ರಾಜತ್ವವಿರಲಿ ಅಥವಾ ಪ್ರಜಾಪ್ರಭುತ್ವವಿರಲಿ ಸಾಮಾನ್ಯ ನಾಗರೀಕರ ಹಿತರಕ್ಷಣೆ ಆಡಳಿತಾಧಿಕಾರಿಗಳ ಕರ್ತವ್ಯ ಎನ್ನುವುದು ಮಹಾಕವಿಯ ಆಶಯ”.

“ಕೌರವನು ಸೋತು ಸೋತವನಲ್ಲ, ಭೀಮನು ಗೆದ್ದು ಗೆದ್ದವನಲ್ಲ”.

“ಯುದ್ಧಮುಗಿದನಂತರ ಎಲ್ಲರಲ್ಲೂ ಸ್ಮಶಾನ ಮೌನ”.

-ಭರತ್ ಎಂ.
ಓದಿದ್ದು ೦೪.೦೪.೨೦೨೫
Displaying 1 - 4 of 4 reviews

Can't find what you're looking for?

Get help and learn more about the design.