ಪುಟ್ಟಗೌರಿ ಮದುವೆ ಸೀರಿಯಲ್ ಇಂದ ಎಲ್ಲರ ಮನೆಮಾತಾಗಿ, ನಮ್ಮಂತ ಯುವಕರ ಕಡುಗೋಪಕ್ಕೆ ತುತ್ತಾದ ಇವರೇ ರಂಜನಿ ರಾಘವನ್, ಕತೆ ಡಬ್ಬಿಯ ಲೇಖಕಿ. ಈ ಪುಸ್ತಕ ಓದಿದ ಮೇಲೆ ಯಾರೇ ಆಗಿರಲಿ ಇವರ ಅಭಿಮಾನಿಯಾಗುವುದರಲ್ಲಿ ಸಂಶಯವೇ ಇಲ್ಲ. ಇದು ಇವರ ಮೊದಲ ಪುಸ್ತಕ. ಮೊದಲ ಮ್ಯಾಚ್ನಲ್ಲೆ ಸೆಂಚುರಿ ಹೊಡೆದಿದ್ದಾರೆ ಅಂದರೆ ತಪ್ಪಾಗಲಾರದು.
ಒಟ್ಟು ೧೪ ಚಿಕ್ಕ ಕಥೆಗಳನ್ನು ಹೊಂದಿರುವ ಈ ಕಥಾಸಂಕಲನದ ಒಂದೊಂದು ಕಥೆಗಳು ವಿಭಿನ್ನವಾಗಿವೆ. ಮಾನವೀಯ ಮೌಲ್ಯಗಳು, ಬದುಕಿಗೆ ಬೇಕಾದ ಅಂಶಗಳು ತಿಳಿ ಹೇಳುತ್ತವೆ. ಸ್ವಾರ್ಥ, ಅಸೂಯೆ, ಪ್ರೀತಿ, ಕಾಳಜಿ, ದೇವರು, ಪ್ರಾಣಿಗಳು, ಬಡತನ ಇನ್ನೂ ಅನೇಕ ಅಂಶಗಳನ್ನು ಹೊಂದಿದೆ. ಒಮ್ಮೆ ಯಾದರು ಓದಲೇ ಬೇಕಾದ ಪುಸ್ತಕ.
ನನಗಂತು ಅನಿಸಿತು, ಈಕೆ ಇನ್ನಷ್ಟು ಬರೆಯಬಲ್ಲಳು ಅಂತ.
8/10 ⭐
ಕತೆ ಡಬ್ಬಿ
🖊️ರಂಜನಿ ರಾಘವನ್