Jump to ratings and reviews
Rate this book

ಐ ಹೇಟ್ ಮೈ ವೈಫ್

Rate this book

210 pages, Paperback

Published November 18, 2021

2 people are currently reading
12 people want to read

About the author

ಜೋಗಿ | Jogi

79 books44 followers
Jogi Girish Rao Hatwar
ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.

WikiPage- https://kn.wikipedia.org/s/pyg
Facebook Profile- facebook.com/girish.hatwar

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (7%)
4 stars
5 (38%)
3 stars
5 (38%)
2 stars
1 (7%)
1 star
1 (7%)
Displaying 1 - 5 of 5 reviews
Profile Image for Karthik.
61 reviews19 followers
January 20, 2022
ಐ ಹೇಟ್ ಮೈ wife - ಪ್ರೀತಿಸದ ಹೊರತು ದ್ವೇಷಿಸಲಾರೆ !

ಜೋಗಿಯವರು ತಮ್ಮ ಲೈಫ್ ಇಸ್ ಬ್ಯೂಟಿಫುಲ್ ಸರಣಿಯ ಆರನೆಯ ಪುಸ್ತಕದಲ್ಲಿ ಮದುವೆ ಎಂಬ ವ್ಯವಸ್ಥೆಯನ್ನು ಕೂಲಂಕುಷವಾಗಿ ವಿಮರ್ಶೆ ಮಾಡಿ ನಮ್ಮ ಮುಂದಿಟ್ಟಿದ್ದಾರೆ. ಟೈಟಲ್ ನೋಡಿ, ಅಯ್ಯೋ ಇದ್ಯಾಕೆ ಇಂತಾ ಹೆಸರಿಟ್ಟಿದ್ದಾರೆ ಅಂತ ಅನ್ಸಿದ್ರೂ, ಓದುತ್ತಾ ಹೋದಂತೆ ಅದರ ಆಳ ಅರ್ಥವಾಗುತ್ತದೆ. ಇಲ್ಲಿ ದ್ವೇಷ ಬೆಳೆಯುವುದು ‘ಮಡದಿ/ಗಂಡ’ ಎಂಬ ಪಾತ್ರದ ಮೇಲೆಯೇ ಹೊರತು, ವ್ಯಕ್ತಿಯ ಮೇಲಲ್ಲ ! ಎಷ್ಟೆಂದರೂ ಆಕೆ/ಆತ ನೀವು ಇಷ್ಟ / ಕಷ್ಟ ಪಟ್ಟೋ ಕೈ ಹಿಡಿದ ವ್ಯಕ್ತಿ ಕಣ್ರೀ ! Marriage is a ನೆಸಸರಿ evil. ಕಷ್ಟ ಆದರೂ ಸರಿದೂಗಿಸಿಕೊಂಡು ಪಾಲಿಸಬೇಕಾದ ಧರ್ಮ.

ಇಲ್ಲಿ ಜೋಗಿಯವರು ಹೇಳಿದ ಮತ್ತೊಂದು ಕಾನ್ಸೆಪ್ಟ್ ಇಷ್ಟ ಆಯ್ತು. ಮದುವೆ ಆಗುವ ಮುಂಚೆ ನಿಮಗೆ ಯಾವುದೋ ಒಂದು ಹವ್ಯಾಸ ಇದ್ದಿರಬಹುದು, ಸೋಲೋ ಪಯಣಗಳ ದಾಸರಾಗಿರಬಹುದು, ಕಾಪಿ ಅಚ್ಚು ಮೆಚ್ಚಾಗಿರಬಹುದು. ಆದರೆ, ಮದುವೆ ಆದ ತಕ್ಷಣ ಅದನೆಲ್ಲಾ ಬದಿಗೊತ್ತಿ, ಗಂಡ - ಹೆಂಡತಿ ಪಾತ್ರಕ್ಕೆ mold ಆಗಿ ನಮ್ಮ ಸ್ವಂತಿಕೆಯನ್ನು ಮರೆಯಬಾರದು. ನಮ್ಮ ಇಷ್ಟ ಕಷ್ಟಗಳನ್ನು ಮೆಚ್ಚಿ, ಅದನ್ನು ಬದಲಿಸದೆ, ತಾನೂ ಬದಲಾಗದ ವ್ಯಕ್ತಿ ಸಿಕ್ಕರೆ ಮಾತ್ರ ಮದುವೆ ಆಗಿ !

ಕೆಳಗಿನ ಎರಡು ಸಾಲು ನಿಜ ಅನಿಸ್ತು. ಸರಿಯಾಗಿ ಪಾಲಿಸಿದರೆ/ಅರ್ಥ ಆದ್ರೆ, ಮದುವೆ ಎಂಬ ಪ್ರಯಾಣ ಹೈ ವೆ ನಲ್ಲಿ ಹೋದಂತೆ ಸಲೀಸೂ, ತಪ್ಪಿದ್ರೆ ಉಡೀಸು !

೧. Compatibility ಅಂದರೆ ಒಂದೇ ತರ ಇರುವುದಿಲ್ಲ. ಒಂದಾಗುವುದು ಒಂದೇ ತರ ಇದ್ದರೆ ಒಂದಾಗುವುದು ಸಾಧ್ಯವೇ ಇಲ್ಲ. ನೀರಿಗೆ ನೀರು ಸೇರಿಸಿದರೆ ನೀರೇ ಉಳಿಯುತ್ತದೆ. ನೀರಿಗೆ ವಿಸ್ಕಿ ಸೇರಿಸಿದಾಗ ಎರಡನ್ನೂ ಒಳಗೊಂಡ ಮತ್ತೊಂದು ರುಚಿ ಹುಟ್ಟುವುದು.
.
೨. ಈ ಜಗತ್ತಿನಲ್ಲಿ ನಮಗೆ ಕೊನೆಗೂ ಉಳಿಯುವುದು ನಮ್ಮ ನಮ್ಮ ಬಾಳ ಸಂಗಾತಿ ಮಾತ್ರ. ಆಕೆ ಆತನ ಪಾಲಿಗೆ , ಆತ ಆಕೆಯ ಪಾಲಿಗೆ ವೈದ್ಯ,ನರ್ಸು, ಅಡುಗೆಯವ, ಆಪ್ತ ಸಲಹೆಗಾರ, ರಕ್ಷಕ, ದೇವರು ಮತ್ತು ಸಾವು !

ವಿ ಸೂ : 216 ಪುಟಗಳ ಈ ಪುಸ್ತಕವನ್ನು ಮದ್ವೆ ಆಗದೇ ಇರೋರು , ಆದವರು, ಇನ್ನೇನು ಆಗ್ಬೇಕು ಅಂತ ತುದಿಗಾಲಲ್ಲಿ ನಿಂತಿರೋರು ಎಲ್ಲರೂ ಒದ್ಬೋದು.

ಹಾ ಇನ್ನೊಂದು ಮಾತು, ಸಂಸಾರದಲ್ಲಿ ಬೇಕಾಗಿರೋದು ಸಂಗಾತಿ. ಸಹಾಯಕಿ/ಸಹಾಯಕ ಅಲ್ಲ.

- ಕಾರ್ತಿಕ್ ಕೃಷ್ಣ
೨೦-೧-೨೦೨೨
ಮೈಸೂರು.
Profile Image for Prashanth Bhat.
2,162 reviews140 followers
April 6, 2022
ಆರಂಭ ಚೆನ್ನಾಗಿತ್ತು. ಆಮೇಲೆ ಬೋರ್ ಆಯಿತು. ಹೊಸದೇನೂ ಗೊತ್ತಾದ ಹಾಗೆ ಆಗಲಿಲ್ಲ. ಯೂಶುವಲ್ ಜೋಗಿ.
ಹೊಸ ಓದುಗರಿಗೆ ಇಷ್ಟವಾಗಬಹುದು.
2 reviews2 followers
December 24, 2021
ಐ ಹೇಟ್ ಮೈ ವೈಫ್:

ಜೋಗಿ ಅವರ ಇತ್ತೀಚಿನ ಚೊಕ್ಕ ಮತ್ತು ಚಿಕ್ಕ ಅನುಭವ ಕಥನ ಅನ್ನಬಹುದು. ಅವರು ನೋಡಿದ್ದು, ಅವರು ಕೇಳಿದ್ದು, ಅವರು ಅನುಭವಿಸಿದ್ದು ಇಲ್ಲಿ ದಾಖಲಾಗಿದೆ. ನಾನಿಲ್ಲಿ ಅವರು ಎಂದು ಪ್ರತ್ಯೇಕವಾಗಿ ಹೇಳಲು ಕಾರಣ ಮದುವೆ ಅನ್ನೋದು ಪ್ರತಿಯೊಬ್ಬರ ಭಿನ್ನ ಅನುಭವ. ಒಬ್ಬರಿಗೆ ಆದ ಜೀವನಾಭವ ಇನ್ನೊಬ್ಬರಿಗೆ ಹಾಗೆಯೇ ಅನ್ನಿಸಬೇಕು ಅಂತ ಇಲ್ಲ.

ಇದನ್ನ ಯಾರು ಓದಬೇಕು ಮತ್ತು ಯಾಕೆ ಓದಬೇಕು ಅನ್ನೋದಕ್ಕೆ ನನ್ನಲ್ಲಿ ಎರಡು ಮುಖ್ಯ ಮತ್ತು ಒಂದು ತಮಾಷೆಯ ಕಾರಣಗಳಿವೆ.

೧. ನೀವಿನ್ನೂ ಮದುವೆ ಆಗದೆ ಇದ್ರೆ ಇದನ್ನ ಖಂಡಿತಾ ಓದಿ. ಮದುವೆ ಆದ ಮೇಲೆ ಹೀಗೆ ಇರುತ್ತೆ ಅನ್ನುವ ಕೆಲವೊಂದು ಸಿದ್ದ ಸೂತ್ರಗಳು ನಿಜವಾಗಿಯೂ ಹೀಗೆ ಇಲ್ಲದೆಯೂ ಇರಬಹುದು ಅನ್ನುವ ಕೆಲವು ಯೋಚನೆಗಳನ್ನು ಹುಟ್ಟು ಹಾಕುತ್ತದೆ, ಹಾಗೆಯೇ ಮದುವೆ ಮೊದಲಿನ ಪೂರ್ವ ತಯಾರಿ ಮದುವೆಯ ನಂತರ ಹೇಗೆಲ್ಲ ತಿರುಗು ಬಾಣವಾಗಿ ನಿಮಗೆ ಚುಚ್ಚಬಹುದು ಅನ್ನುವ ಸೂಕ್ಷ್ಮ ಅನುಭವ ಕೊಡುತ್ತದೆ. ನೆನಪಿರಲಿ ಹೆದರಿಸುವುದಿಲ್ಲ, ಅರಿವು ಹುಟ್ಟಿಸುತ್ತೆ ಅಷ್ಟೇ.

೨. ನೀವು ಮದುವೆ ಆಗಿದ್ದರೆ ನಿಮ್ಮ ಗೃಹಸ್ಥ ಜೀವನವನ್ನ ಇನ್ನೊಮ್ಮೆ ಮೆಲಕು ಇದಕ್ಕಿಂತ ಒಳ್ಳೆ ಪುಸ್ತಕ ದೊರೆಯದು.

೩. ನೀವಿನ್ನೂ ನಿಮ್ಮ ಹೆಂಡತಿಯನ್ನು/ಗಂಡನನ್ನು ದ್ವೇಷಿಸಲು ಸಕಾರಣ ಹುಡುಕುತ್ತಿದ್ದರೆ ಹೇರಳವಾದ ಕಾರಣಗಳ ಗಂಟೆ ಇದೆ ಇಲ್ಲಿ 😜😀

ಇದನ್ನೂ ಓದುವಾಗ ನಮಗೆ ಹಲವಾರು ಪ್ರಶ್ನೆಗಳನ್ನ ಜೋಗಿ ಎಸೆಯುತ್ತಾ ಹೋಗುತ್ತಾರೆ, ನಾವು ನಮ್ಮಲ್ಲೇ ಅಂದು ಕೊಳ್ಳುವ ಉತ್ತರ ಮುಂದಿನ ಪುಟದಲ್ಲಿ ತಟ್ ಅಂಥ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಅರೇ ಆಗಲೇ ನಾನು ಮನಸಿನಲ್ಲಿ ಅಂದುಕೊಂಡಿದ್ದು ಇದನ್ನೇ ಅಲ್ಲವೇ ಅಂತ ನಿಮಗೆ ಒಂದು ಕ್ಷಣ ಅನ್ನಿಸುತ್ತದೆ. ಇದರ ಅರ್ಥ ಜೋಗಿ ಅವರು ಪ್ರತಿಯೊಂದು ಸಂಗತಿಯನ್ನು ಅವಲೋಕಿಸುವುದರ ಜೊತೆಗೆ ಅದಕ್ಕೆ ಎದುರಾಗಬಹುದಾದ ಹಲವು ವಿವಿಧ ಮತ್ತು ವೈರುಧ್ಯ ಉತ್ತರಗಳನ್ನು ಕೂಡ ಪಟ್ಟಿ ಮಾಡಿದ್ದಾರೆ.

ಕೆಳಗಿನ ಕೆಲವೊಂದು ಟಿಪ್ಪಣಿಗಳು ನಿಮ್ಮನ್ನ ಒಂದು ವಿಭಿನ್ನ ಯೋಚನೆಗೆ ಕೊಂಡೈಯುತ್ತವೆ.

"ಸಂಸಾರ ತನ್ನ ಭಾರಕ್ಕೆ ತಾನೇ ಕುಸಿಯುವ ಚಪ್ಪರ"

"ಪತ್ನಿಯಿಂದ ದೂರ ಇರುವುದೇ ತನ್ನ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವುದು ಎಂದು ಪತಿ ಅಂದು ಕೊಳ್ಳುತ್ತಾನೆ, ಆದರೆ ಅದು ಎಂದೂ ಆಗುವುದಿಲ್ಲ, ಯಾಕೆಂದರೆ ಪತಿ ತನ್ನಿಂದ ದೂರ ಇರುವುದೇ ತನ್ನ ದೊಡ್ಡ ಸಮಸ್ಯೆ ಎಂದೂ ಪತ್ನಿ ಭಾವಿಸಿರುತ್ತಾಳೆ".

ಕೊನೆಯದಾಗಿ ಅಲ್ಲಲ್ಲಿ ಸ್ವಲ್ಪ ಎಳೆತಾ ಇದೆ ಅನ್ನಿಸಿದರೂ ಒಮ್ಮೆ ಓದಲಿಕ್ಕೆ ಏನೂ ತೊಂದರೆ ಇಲ್ಲದ ಪುಸ್ತಕ ಇದು.

ಚಿಕ್ಕ ಮಗು ಅತ್ತಾಗ ಅಮ್ಮನ ಎದೆ ಹಾಲಿಗೆ ಅದು ಸುಮ್ಮನಾಗುತ್ತದೆ ಅನ್ನೋದು ಸರ್ವರೂ ನಂಬಿರುವ ವಿಷಯ. ಯಾರಿಗೆ ಗೊತ್ತು ಅಮ್ಮನ ಎದೆಯ ಸ್ಪರ್ಶವೇ ಅದನ್ನ ಸಮಾಧಾನ ಮಾಡುತ್ತಿರಬಹುದು.
ದಾಂಪತ್ಯ ಕೂಡ ಹಾಗೆ, ಎಲ್ಲವೂ ಇದ್ದೂ ಏನು ಇಲ್ಲದ ಹಾಗೆ, ಏನೂ ಇಲ್ಲದೇ ಎಲ್ಲರಿಗಿಂತ ಸುಖವಾಗಿ ಬಾಳುವ ಹಲವು ಸಂಸಾರ ನಾವು ನೋಡಿರುತ್ತೇವೆ.
ಸುಖ ಸಂಸಾರಕ್ಕೆ ಸಿದ್ದ ಸೂತ್ರಗಳು ಎಂದೂ ಇಲ್ಲ ಆದರೆ ಸುಖ ನಿದ್ರೆಗೆ ಸಂಸಾರ ಸುಖವಾಗಿರಬೇಕು😀
Profile Image for Sangeetha.
62 reviews22 followers
April 4, 2022
Usually books will be gender neutral i.e. everyone will get it but some are not. Example, Jogi's writing. While I don't have any concern on it but his books are more in men's perspective. Keeping that one aside , Jogi's writing is always close to heart and very practical, so was this book. Overall, okay read for me.
Profile Image for Skanda Prasad.
70 reviews2 followers
January 26, 2022
ಸರಾಗವಾಗಿ ಓದಿಸದಿದ್ದರೂ, ಒಂದೇ ದಿನದಲ್ಲಿ ಓದಿ ಮುಗಿಸಬಹುದು.
Displaying 1 - 5 of 5 reviews

Can't find what you're looking for?

Get help and learn more about the design.