This is a Kannada translation of the Sanskrit work Amarushatakam, a collection of 100 verses by the poet Amaruka in 7th century. The translaton is also in verse form. The verses in the collection deal with love and life. The book is published by the Sahitya Academi, a premier publisher from India.
ಸಂಸ್ಕೃತ ಕವಿ ಅಮರುಕನು ಸುಮಾರು ಏಳನೇ ಶತಮಾನದಲ್ಲಿ ಬರೆದ ಮುಕ್ತಕಗಳ ಸಂಕಲನವೇ ಅಮರುಶತಕ. ಇದರ ಹೊಸಗನ್ನಡ ಪದ್ಯಾನುವಾದವನ್ನು ಮಾಡಿದ್ದಾರೆ ರಾಮಪ್ರಸಾದ್ ಕೆ ವಿ. ಈ ಸಂಕಲನದ ಪದ್ಯಗಳಲ್ಲಿ ಬರುವಂತಹ ಮುಖ್ಯ ವಿಷಯವೆಂದರೆ ಪ್ರೀತಿ-ಪ್ರೇಮ. ಪುಸ್ತಕ ಪ್ರಕಟಣೆ ಸಾಹಿತ್ಯ ಅಕಾಡೆಮಿಯಿಂದ.
Amarushataka is a collection of one hundred verses in Sanskrit supposedly dating back to the 8th century CE. Though the date and author details are buried in various legends, the verses are pure gold. As the saying goes, each verse deserves an exposition as long as an essay. That is the magnitude of dhvani that is each verse.
The Kannada translation by KV Ramaprasad is an excellent introduction of the same to the Kannada reader. The translations are in metrical verses and adhere to all the relevant rules of prosody. The author has employed metres such as Mallikamala, Chaupadi, etc.
The original verse is provided in both Devanagari and in Kannada scripts along with the translated verse, and is accompanied by copious footnotes to help the reader understand the context and intricacies. Also, the author provides extensive critical apparatus in footnotes and in an appendix to indicate which verses are to be found in which recension, which are later additions, etc. An alphabetical listing of the verses is provided for easy access.
An appendix also provides an introduction to Amaruka, the literary tradition, and details of the society and of sociological norms that are discernible from the verses.
This is a very good work that is a must read for any Kannada reader.
Amarushataka is a fascinating compilation of the Kannada translation of the 7th century poet Amaruka's work in Sanskrita. Hamsanandi has presented the translations in an easy to read and contemporary Kannada style. Each verse is given in Sanskrita, Sanskrita in Kannada lipi, translation in Kannada, and its contextual explanation in Kannada. The book also explains different types of Chandas in Kannada and Sanskrit, which helps beginners to Kannada literary world. All poems pertains to various emotions of love, separation pangs, ego games, etc between husband and wife. One gets to understand the cultural and social lifestyles that prevailed in India 1200 years ago.
ಅಮರುಶತಕ ಸುಮಾರು ಸಾವಿರದ ಮುನ್ನೂರು ವರ್ಷಗಳ ಹಿಂದಿನ ಕಾವ್ಯ. ಇದು ನಾಲ್ಕು ಸಾಲುಗಳ ಮುಕ್ತಕಗಳ ಸಂಗ್ರಹ. ಪ್ರತಿ ನಾಲ್ಕು ಸಾಲೂ ತನ್ನದೇ ಕಾವ್ಯ. ನೂರು ಮುಕ್ತಕಗಳು ನೂರು ಕವಿತೆಗಳು. ಹಲವು ಹೆಣ್ಣಿನ ಎದೆಯಾಳದ ಮಾತುಗಳಾದರೆ ಕೆಲವು ಗಂಡಿನವು. ಆದರೆ ಅವೆಲ್ಲವುಗಳ ಮೂಲ ಭಾವ ಒಂದೇ. ಪ್ರೀತಿ.
ಮೂಲ ಕವಿತೆಗಳ ರಸಕಾವ್ಯ ಸೊಗಸನ್ನು ರಾಮಪ್ರಸಾದ್ ಕೆ. ವಿ. ಬಹಳ ಸಮರ್ಥವಾಗಿ ಕನ್ನಡದಲ್ಲಿ ಹಿಡಿದುಕೊಟ್ಟಿದ್ದಾರೆ. ಕನ್ನಡ ಜಾಯಮಾನಕ್ಕೆ ಅನುಗುಣವಾಗಿ ಪದ್ಯದಿಂದ ಪದ್ಯಕ್ಕೆ ಛಂದಸ್ಸನ್ನೂ ಬದಲಿಸಿಕೊಂಡಿದ್ದಾರೆ. ರಾಮಪ್ರಸಾದ್ ಅಮೆರಿಕದಲ್ಲಿ ನೆಲಸಿರುವವರು. ನನಗೆ ಬಹುದಿನಗಳ ಪರಿಚಯ. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರ ಓದಿನ ಆಳ ವಿಸ್ತಾರ ಮತ್ತು ಸಾಹಿತ್ಯಾನುಭವವನ್ನು ಖುದ್ದು ಕಂಡ ನನಗೆ ಅವರ ಈ ಉತ್ಕೃಷ್ಟ ಅನುವಾದ ಅಚ್ಚರಿಯನ್ನು ತರಲಿಲ್ಲ.
ನನ್ನಂತೆಯೇ ನೀವೂ ಕೆ ಎಸ್ ನರಸಿಂಹಸ್ವಾಮಿಯವರ ಪ್ರೇಮಕಾವ್ಯದ ಅಭಿಮಾನಿಗಳಾಗಿದ್ದರೆ, ನೆರೂಡಾ ಎಂದೊಡನೆ ಅವನ ಇಪ್ಪತ್ತು ಪ್ರೇಮಗೀತೆಗಳನ್ನು ಮೊದಲು ನೆನಪಿಸಿಕೊಳ್ಳುವವರಾದರೆ, ಅಮರುಕನ ಈ ಕವಿತೆಗಳು ದಿಟಕ್ಕೂ ನಿಮಗೆ ರುಚಿಸುತ್ತವೆ. ’ಸಂಜೆಗೆನ್ನ ಪಯಣವೆಂದು ತಿಳಿದಳೆನ್ನ ಸುಂದರಿ’ ಗೀತೆಯ ಭಾವದಲ್ಲೇ ಅಮರುಕನ ಈ ನಾಲ್ಕು ಸಾಲುಗಳನ್ನು ಓದಿಕೊಳ್ಳಿ -
ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ? ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ? ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ!
ದೂರ ಪಯಣಕ್ಕೆ ಹೊರಟ ಇನಿಯನ ಮುಂದೆ ಕಣ್ಣೀರನ್ನು ಸುಳ್ಳುನಗೆಯಲ್ಲಿ ಮುಚ್ಚಿದ ಪ್ರಿಯತಮೆಗೆ ಅವನನ್ನು ಬಿಟ್ಟು ತಾನು ಬದುಕಲಾರೆ ಎಂಬ ಭಾವವನ್ನು ಮಾತ್ರ ವ್ಯಕ್ತಪಡಿಸದೆ ಹತ್ತಿಕ್ಕುವುದು ಸಾಧ್ಯವಾಗಲಿಲ್ಲ.
ಪ್ರೇಮ ಸರಳ ಮತ್ತು ಸಹಜ. ಅದಕ್ಕೆ ಕಸರತ್ತು ಬೇಕಿಲ್ಲ. ಪದ್ಯ ಹನ್ನೆರಡರಲ್ಲಿ, ಹಾಸಿಗೆಯಲ್ಲಿ ಪತಿ-ಪತ್ನಿ ಒಬ್ಬರಿಗೊಬ್ಬರು ಮುಖತಿರುವಿ ವಿರಸದಲ್ಲಿ ಮಲಗಿದ್ದಾರೆ. ಮಧ್ಯೆ ಬಿಂಕದ ಗೋಡೆಯಿದೆ. ಹೇಗೋ, ಯಾವುದೋ ನೀರವಕ್ಷಣದಲ್ಲಿ ಕಣ್ಣುಕಣ್ಣುಗಳು ಕೂಡುತ್ತವೆ. ಅಷ್ಟೇ! ಅಪ್ಪುಗೆಯೊಂದಿಗೆ ವಿರಸ ಸರಸವಾಗುತ್ತದೆ. ನೀರವಕ್ಷಣ ರಸಕ್ಷಣವಾಗುತ್ತದೆ. ಇದಕ್ಕಿಂತ ಚಿಕ್ಕದಾಗಿ ಮತ್ತು ಪರಿಣಾಮಕಾರಿಯಾಗಿ ಪ್ರೇಮಕತೆಯೊಂದನ್ನು ಹೇಳಲು ಸಾಧ್ಯವೇ?ಇನ್ನೊಂದು ಕವಿತೆಯಲ್ಲಿ, ಪ್ರಿಯತಮೆಯು ಕೋಪಿಸಿಕೊಂಡಿದ್ದಾಳೆ. ಕೋಪದ ತೀವ್ರತೆಯನ್ನು ನೋಡಿದರೆ ಪ್ರಿಯತಮನು ಏನೋ ದೊಡ್ಡ ತಪ್ಪನ್ನೇ ಮಾಡಿದ್ದಾನೆ. ಕ್ಷಮೆ ಕೇಳಲು ಹೊಂಚು ಹಾಕುತ್ತಿದ್ದಾನೆ. ಗೋಗರಿಯುತ್ತಿದ್ದಾನೆ. ಅವಳಿಗದು ಒಳಗೊಳಗೇ ಇಷ್ಟವಾದರೂ ತ್ವರಿತದಲ್ಲಿ ಅವನೊಂದಿಗೆ ರಾಜಿಯಾಗುವುದು ಬೇಕಿಲ್ಲ. ಹಾಗಾಗಿ, ಅವನು ಕಾಲಿಗೆ ಬಿದ್ದಾನು ಎಂದು ಸೀರೆಯ ನೆರಿಗೆಯಲ್ಲಿ ಪಾದಗಳನ್ನು ಮುಚ್ಚಿಕೊಳ್ಳುತ್ತಾಳೆ. ಆದರೆ ಪ್ರಿಯತಮನಿಗೆ ಅದೂ ಪ್ರೀತಿಯ ಸೂಚನೆಯಂತೆ ಆಕರ್ಷಿಸುತ್ತದೆ. ಅವಳ ಬಿಂಕವೇ ಅವನಿಗೆ ಪ್ರಣಯದ ಕರೆಯಾಗುತ್ತದೆ. ಇಂತಹ ಪದ್ಯಗಳಲ್ಲಿ ಒಂದು ಹೇಳಿದರೆ ತೊಂಬತ್ತೊಂಬತ್ತು ಅಂತರ್ಗತವಾಗಿರುತ್ತದೆ. ಪ್ರೀತಿಯ ಅಭಿವ್ಯಕ್ತಿಗೆ ಜಾಸ್ತಿ ಮಾತು ಬೇಕಿಲ್ಲ. ಜೋರು ಮಾತೂ ಬೇಕಿಲ್ಲ. ಶೇಕ್ಸ್‌ಪಿಯರ್‌ನ ಮಚ್ ಅಡೂ ಎಬೌಟ್ ನಥಿಂಗ್ ನಾಟಕದಲ್ಲಿ ನಾಯಕ ಹೇಳುತ್ತಾನೆ - ಸ್ಪೀಕ್ ಲೋ, ಇಫ್ ಯು ಸ್ಪೀಕ್ ಲವ್. ಈ ಪದ್ಯಗಳು ಆ ಮಾತಿನ ಅರ್ಥದವು.
ಸಂಸ್ಕೃತ ಕವಿಗಳ ಮೇಲೆ ಕಾಳಿದಾಸನ ದಟ್ಟ ಪ್ರಭಾವವಿರುವಂತೆ ಅಮರುಕನ ಮೇಲೂ ಇದೆ. ಪುಸ್ತಕ ತೆರೆಯುತ್ತಿದ್ದಂತೆಯೇ, ಪದ್ಯ ಒಂದರ ಮೊದಲ ಸಾಲೇ, ನನಗೆ ಕಾಳಿದಾಸನನ್ನು ನೆನಪಿಸಿತು. ಆ ಪದ್ಯದ ನಾಯಕಿಯ ಪ್ರಿಯತಮ ವ್ಯಾಪಾರದ ನಿಮಿತ್ತ ಸಾರ್ಥ ಸೇರಿ ಪಯಣ ಬೆಳೆಸಿ ತಿಂಗಳುಗಳೇ ಉರುಳಿರಬೇಕು. ಅವನ ಯೋಚನೆಯಲ್ಲೇ ಇವಳು ಕೃಶಳಾಗಿದ್ದಾಳೆ. ಪದ್ಯದ ಸಾಲು ಹೀಗೆ ಪ್ರಾರಂಭವಾಗುತ್ತದೆ - "ತೊಟ್ಟ ಬಳೆಗಳು ಕೈಯ ತೊರೆದಿವೆ ಕಣ್ಣ ನೀರದು ಸುರಿದಿದೆ". ಮೇಘದೂತದ ಯಕ್ಷನಿಗೂ ಹೀಗೇ ಆಗುತ್ತದೆ. ಪ್ರಿಯತಮೆಯಿಂದ ದೂರವಾದ ಅವನು ವಿರಹದಲ್ಲಿ ಹೇಗೆ ಸೊರಗಿದ್ದನೆಂದರೆ, "ಕೆಲವೆ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು" (ಅನುವಾದ: ದ ರಾ ಬೇಂದ್ರೆ). ಕಾಳಿದಾಸನ ಕಾವ್ಯದಲ್ಲಿ ಗಂಡು ಮತ್ತು ಅಮರುಕನ ಪದ್ಯದಲ್ಲಿ ಹೆಣ್ಣು. ಭಾವ ಒಂದೇ.
ತೊಟ್ಟ ಬಳೆಗಳು ಕೈಯ ತೊರೆದಿವೆ ಕಣ್ಣ ನೀರದು ಸುರಿದಿದೆ ಧೈರ್ಯ ಚಣದಲೆ ಮಾಯವಾಗಿದೆ ಮನಸು ದೂರಕೆ ಓಡಿದೆ ಗಟ್ಟಿ ಮನದಲೆ ನಲ್ಲ ತೆರಳಿರೆ ಜೊತೆಯಲೇ ಇವರೆಲ್ಲರೂ ಹೊರಟು ಹೋದರೆ ಜೀವ ಸಾರ್ಥವ ತೊರೆದು ಉಳಿದಿಹೆಯೇತಕೆ?
ಮೇಘದೂತದಂತೆಯೇ ಕಣ್ಣೀರಲ್ಲಿ ಪ್ರೀತಿಯ ಹರಳನ್ನು ತೊಳೆದುಕೊಡುವ ಗೀತೆಯಿದು. "ಹೇ ಜೀವ, ಅವನೊಂದಿಗೇ ನಿನ್ನ ಗೆಳೆಯರಾದ ಧೈರ್ಯ, ಕಣ್ಣೀರು ಎಲ್ಲವೂ ನನ್ನ ಬಿಟ್ಟು ದೂರ ಹೋದಮೇಲೆ, ಅವುಗಳ ಸಾರ್ಥವನ್ನು (ಸಂಚಾರಿ ಗುಂಪನ್ನು) ನೀನೇಕೆ ಬಿಟ್ಟಿದ್ದೀಯೆ? ನೀನೂ ಹೊರಟುಹೋಗು." ವಿರಹದಾಳದಲ್ಲಿ ಪ್ರೀತಿಯಾಳವನ್ನು ತೋರಿಸುವ ಕವಿತೆಯಿದು.
ಪ್ರಣಯದಲ್ಲಿ ಎಲ್ಲವೂ ಚೆಂದ. ಅಭಿವ್ಯಕ್ತಿಗೆ ಸಾವಿರ ಸೂಕ್ಷ್ಮಗಳು. ಶೃಂಗಾರವು ಸೃಷ್ಟಿಸುವ ಸಾಹಿತ್ಯ ವೈವಿಧ್ಯಕ್ಕೆ ಮತ್ಯಾವ ಮಾನವ ಮೂಲಪ್ರಕೃತಿಗಳೂ ಸ್ಪರ್ಧಿಸಲಾರವು. ಅಮರುಕನ ಒಂದು ಕವಿತೆಯಲ್ಲಿ ಗಂಡ-ಹೆಂಡತಿಯ ಏಕಾಂತದ ಮಾತುಗಳನ್ನು ಕೇಳಿಸಿಕೊಂಡ ಮನೆಗಿಳಿ ಅದನ್ನು ಹಗಲಿನಲ್ಲಿ ಕೂಡುಕುಟುಂಬದ ಮುಂದೆ ಆಡುತ್ತದೆ. ಆಗ ಹೆಣ್ಣು ನಾಚಿಕೊಂಡು ತನ್ನ ಕೆಂಪಿನೋಲೆಯ ಹರಳನ್ನು ಅದಕ್ಕೆ ತೋರಿಸುತ್ತ ದಾಳಿಂಬೆ ಕೊಡುವೆ ಸುಮ್ಮನಿರು ಎನ್ನುತ್ತಾಳೆ. ಈ ಬಗೆಯ ಕವಿತೆಗಳಲ್ಲಿ ಸಿಗುವ ನವಿರು ಲಾಲಿತ್ಯದ ಹಗುರ ಸುಖ ನೇರ ವ್ಯಕ್ತ ಪ್ರಣಯ ಕವಿತೆಗಳಲ್ಲಿ ಸಿಗಲಾರದೇನೋ. ನನಗಂತೂ ಹಾಗೆ ಅನ್ನಿಸಿತು.
ಈ ಕವಿತೆಗಳೂ, ಪ್ರಣಯ ಶೃಂಗಾರ ಭಾವಗಳಂತೆಯೇ, ಅಷ್ಟೂ ಒಂದೇಬಾರಿಗೆ ಸವಿಯುವುದಕ್ಕಲ್ಲ. ನೂರು ಕವಿತೆಗಳು ನೂರು ಮಿಠಾಯಿಗಳ ಡಬ್ಬದಂತೆ. ದಿನಕ್ಕೆ ಐದು ಪದ್ಯಗಳನ್ನು ಓದಿದರೆ ಆಸ್ವಾದ ಹೆಚ್ಚು. ಈ ಪುಸ್ತಕವು ಕನ್ನಡಕಾವ್ಯ ಪ್ರಪಂಚಕ್ಕೆ ಒಂದು ಒಳ್ಳೆಯ ಸೇರ್ಪಡೆ.