ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಸ್ವಾತಂತ್ರ್ಯಾನಂತರದಲ್ಲಿ, ಆರ್ಥಿಕವಾಗಿ ಮಧ್ಯಮ ಮೇಲ್ವರ್ಗ ಮತ್ತು ಮೇಲ್ವರ್ಗದ ಸಂಸಾರಗಳಲ್ಲಿನ ಸಂಸ್ಕಾರಗಳಲ್ಲಿಯ ಮತ್ತು ಅಲೋಚನೆಗಳಲ್ಲಿ ಆದ ಬದಲಾವಣೆಯ ವಿಶ್ಲೇಷಣಾತ್ಮಕ ಕೃತಿ ಎಂದು ನನಗೆ ವಯ್ಯಕ್ತಿಕವಾಗಿ ಅನಿಸಿದ್ದು. ಹಿಂದಿನವರ ನಂಬಿಕೆ, ಬ್ರಿಟಿಷರ ಆಳ್ವಿಕೆ, ಅವರು ಬಿಟ್ಟು ಹೋದ ಆಲೋಚನಾ ಲಹರಿ ಅದರಿಂದಾಗಿ ಇಲ್ಲಿನ ಮೂಲದ ತತ್ವಾಲೋಚನೆಗಳಲ್ಲಿ ಉಂಟಾದ ಅಪನಂಬಿಕೆ, ಹೀಗೆ. ಕೆಲವು ಕಡೆ, ಅರೆ! ಇದು ಎಷ್ಟು ಸತ್ಯ ಎನ್ನಿಸುವಂತಹ ಬರವಣಿಗೆ. ಇನ್ನೂ ಕೆಲವು ಕಡೆ, ತೀರಾ ಅನ್ಯಗ್ರಹದ ಭಾವನೆಯ ವಿಚಾರ, ನನಗೆ ಅನ್ವಯಿಸದ್ದು ಅನಿಸುತ್ತೆ - ಹೀಗೆ ಹಿಂದು ಮುಂದು ಕರೆದುಕೊಂಡು ಹೋಗಿ ಇಂದಿನ ಡಿಸೆಂಬರ್ 17ರ ರತ್ರಿ ದಡ ಮುಟ್ಟಿದೆ.