Jump to ratings and reviews
Rate this book

ಚಿಗುರಿದ ಕನಸು | Chigurida Kanasu

Rate this book
Story of an Electrical Engineer, who finds rural environment more interesting than cities, finds his real interest in Farming and turns a rugged forest land into Farm with his own innovations and about his emotional journey.

267 pages, Paperback

Published April 1, 2021

38 people are currently reading
658 people want to read

About the author

Kota Shivarama Karanth

95 books451 followers
Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.

Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.

Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.

He has received several literary awards,.Namely, Jnanpith Award, Padma Bhushan, Sahitya Academy award and Pampa Award.

He passed away on 9th December 1997 in Manipal, Karnataka.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
159 (55%)
4 stars
95 (33%)
3 stars
20 (7%)
2 stars
5 (1%)
1 star
5 (1%)
Displaying 1 - 20 of 20 reviews
Profile Image for Gowthami.
31 reviews8 followers
January 31, 2025
ಪುಸ್ತಕ : ಚಿಗುರಿದ ಕನಸು

ಲೇಖಕರು : ಶಿವರಾಂ ಕಾರಂತ

ಕಥೆಯ ನಾಯಕ ಶಂಕರ್ ಹುಟ್ಟಿನಿಂದ ನಗರ ಪ್ರದೇಶದಲ್ಲೇ ಬೆಳೆದವ, ವಿದ್ಯುತ್‌ ಇಂಜಿನಿಯರಿಂಗ್ ಮಾಡಿದ ವಿದ್ಯಾವಂತ, ಅಂತರ್ಮುಖಿ. ತನ್ನ ತಂದೆ ಸುಂದರರಾಯರ ಉನ್ನತ ಹುದ್ದೆಯ ದೆಸೆಯಿಂದ ಪದೇ ಪದೇ ವರ್ಗಾವಣೆಯಾಗಿ ಬೇರೆ ಬೇರೆ ಊರುಗಳಿಗೆ ಅಲೆಯುವ ಪರಿಸ್ಥಿತಿ

ಶಂಕರನಿಗೆ ಎಲ್ಲಿ ಹೋದರೂ ತನ್ನ ಮೂಲ ತನ್ನ ಊರು ಎಂಬುದಿಲ್ಲ ಎನ್ನುವ ಕೊರಗು, ಇರುವ ಊರನ್ನು ಅಪ್ಪಿ ತನ್ನ ನಾಡು ಎಂದು ಹೇಳುವುದಕ್ಕೆ ಮನಸ್ಸು ಸಿದ್ಧವಿಲ್ಲ .

ಗೆಳೆಯ ಸೀತಾರಾಮುವಿನ ಊರನ್ನು ನೋಡುವ ಸಲುವಾಗಿ ಮತ್ತು ತನ್ನ ಊರನ್ನು ಹುಡುಕುವ ಆಸೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಳ್ಳುವರು, ವಿಧಿಯಾಟದಂತೆ ಆಶಯ ಕೈಗೂಡುತ್ತದೆ ಆದರೆ ತನ್ನ ಮೂಲ, ನೆಲ, ಜನ ಸಿಕ್ಕ ಮೇಲೆ ಶಂಕರ ಏನು ಮಾಡ್ತಾನೆ? ತನ್ನ ಊರಿನ ಏಳಿಗೆಗೆ ಹೇಗೆ ಶ್ರಮಿಸುತ್ತಾನೆ? ಎನ್ನುವುದೇ ಕಥೆಯ ಮುಖ್ಯ ತಿರುಳು ಇದನ್ನು ಓದಿಯೇ ಸವಿಯಬೇಕು.

ಕಾರಂತರು ಪಾತ್ರಗಳ ಮೂಲಕ ಮಂಡಿಸಿರುವ ಎಷ್ಟೋ ವಿಷಯಗಳು ಆಳವಾಗಿ ಯೋಚಿಸತಕ್ಕದ್ದು, ದೇಶಭಕ್ತಿ ಅಂದರೆ ಏನು ? ಕೇವಲ ಭಾರತ ದೇಶದ ಭಕ್ತಿಯಲ್ಲದೆ ತಾನಿರುವ ಸ್ಥಳದ ಏಳೆಗಾಗಿ ಶ್ರಮಿಸುವುದು ಎಂಬ ಅರ್ಥ ಕೊಡುವ ಸಾಲುಗಳು ಮನ ಮುಟ್ಟುತ್ತವೆ.

ಹಳ್ಳಿಗಳು ಮತ್ತು ರೈತರ ಬಗ್ಗೆ ಇರುವ ಧೋರಣೆ ಮಾತುಗಳು/ ಅನಿಸಿಕೆಗಳು ಆಗಿಂದಾ ಈಗಿನ ತನಕ ಬದಲಾಗದೆ ಇರುವುದು, ಗುಲಾಮಗಿರಿಯ ಹುದ್ದೆಗಳಿಗೆ ಸಿಗುವ ಮಾನ್ಯತೆ ಓದುವಾಗಲೇ ನಮ್ಮಮನವನ್ನು ನೋಯಿಸುತ್ತದೆ.

ಕಾರಂತರ ಎಲ್ಲ ಕಥೆಗಳಂತೆ ಇಲ್ಲೂ ದಕ್ಷಿಣ ಕನ್ನಡವನ್ನು ಸುಂದರವಾಗಿ ಚಿತ್ರಿಸಿದ್ದಾರೆ.
Profile Image for Aadharsha Kundapura.
59 reviews
December 23, 2023
ಹಳ್ಳಿಯಲ್ಲಿ ಹುಟ್ಟಿ ನಗರ ಜೀವನಕ್ಕೆ ಮಾರುಹೋಗುವ ಯುವ ಪೀಳಿಗೆಯ ನಡುವಿನಲ್ಲಿ ದಿಲ್ಲಿಯ ನಗರ ಜೀವನಕ್ಕೆ ಬೇಸತ್ತು ಶಂಕರ ತಾನು ಸ್ವತಃ ವಿದ್ಯುತ್ ಇಂಜಿನಿಯರ್ ಆಗಿದ್ದರು ಅವನ ಪೂರ್ವಜರು ಹುಟ್ಟಿ ಬದುಕಿದ ಊರಿನಲ್ಲಿ ತನ್ನ ಜೀವನ ಕಟ್ಟಿಕೊಳ್ಳುತ್ತಾನೆ.
‌‌‌ ಅದೆಷ್ಟೊ ಅಡೆತಡೆಗಳು, ಸಾಹಸಗಳು, ನಂಜು ಕಾರುವ ವೈರಿಗಳು ಎಲ್ಲವನ್ನು‌ ಲೆಕ್ಕಿಸದೆ ಅವನ‌‌ ಧನಾತ್ಮಕ ಚಿಂತನೆಗಳಿಂದ ತನ್ನ ಪೂರ್ವಜರು ಹುಟ್ಟಿದ ಬಂಗಾಡಿಯನ್ನು ಹಸಿರಿನಿಂದ ತೇಲಿಸುತ್ತಾನೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅನುಭವಿ ಕೃಷಿಕನನ್ನು ನಾಚಿಸುವಂತೆ ಯಶಸ್ಸು ಪಡೆಯುತ್ತಾನೆ.
‌‌‌ ಅವನಿಗೆ ತಮ್ಮ ವಿಠ್ಠಲ, ಸ್ನೇಹಿತ ಸೀತಾರಾಮ, ಕೃಷ್ಣ, ತನ್ನ ಅಜ್ಜನ ಆಳು ಮುದುಕ ಮುತ್ತಯ್ಯ ಗೌಡ ಬೆನ್ನೆಲುಬಾಗಿ ನಿಂತರು. ತನಗಾಗಿ ಬದುಕಿರುವ ಅಜ್ಚಿಗೊಸ್ಕರ ಆ ಭೂಮಿಯಲ್ಲಿ ಮತ್ತೆ ವ್ಯವಸಾಯ ಮಾಡಬೇಕಿನ್ನಿಸಿತು. ಆ ಒಂದು ಜೀವಕ್ಕಾಗಿ ತನ್ನವರೆಲ್ಲರನ್ನ ತೊರೆದು ಹಳ್ಳಿಯಲ್ಲಿ ಜೀವನ ಸಾಗಿಸುತ್ತಾನೆ. ಇನ್ನಿತರ ಪಾತ್ರಗಳಾದ ಶ್ರೀಮತಿ, ವರಲಕ್ಷೀ, ಶ್ಯಾನುಭೋಗರು,‌ ಎಳಚಿತ್ತಾಯರು ಎಲ್ಲವು ಅದ್ಭುತವಾಗಿದೆ

ಕಾದಂಬರಿ ಆಧಾರಿತವಾಗಿಟ್ಟುಕೊಂಡು ಕನ್ನಡದಲ್ಲಿ 2003 ರಲ್ಲಿ ಚಿಗುರಿದ ಕನಸು ಚಲನಚಿತ್ರ ಕೂಡ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ತೋರಿಸಿದಕ್ಕಿಂತ‌ ಕಾದಂಬರಿಯಲ್ಲಿ ನಾಯಕ ಸಾಹಸ ನೂರುಪಟ್ಟು ಹೆಚ್ಚು.

ಚಿಗುರಿದ ಕನಸು (1951)
🖊ಶಿವರಾಮ ಕಾರಂತ
Profile Image for Abhiram's  Book Olavu.
105 reviews3 followers
November 18, 2025
ನಾನು ಸಂಪೂರ್ಣವಾಗಿ ಒಂದು ಪುಸ್ತಕವನ್ನು ಡಿಜಿಟಲ್ ಮಾಧ್ಯಮದಲ್ಲಿ ಓದಿದ್ದರೆ ಅದು, 'ಚಿಗುರಿದ ಕನಸು' (ಪಿಡಿಎಫ್ ರೀತಿಯಲ್ಲಿ ಹಲವು ಜಾಲತಾಣಗಳಲ್ಲಿ ಲಭ್ಯವಿದೆ ಕೂಡ). ಹಾಗಂತ ನನಗೆ ಇ-ಬುಕ್ಗಳನ್ನ ಓದುವ ಚಪಲವೇನಿಲ್ಲ ಆದರೆ ಈ ಒಂದು ಪ್ರಯತ್ನ ಮಾಡಿ ನೋಡುವ ಅಂತ ಹಂಬಲ ಅಷ್ಟೇ; ನನಗೆ ಎಂದಿಗೂ ನೈಜ ಪುಸ್ತಕಗಳೇ ಅಚ್ಚುಮೆಚ್ಚು! ಒಂದು ನಿಜವಾದ ಪುಸ್ತಕ ನೀಡುವಂತಹ ತೃಪ್ತಿ ಒಂದು ಇ-ಪುಸ್ತಕ ನೀಡಲಾರದು ಅಂತ ನನ್ನ ಅಭಿಪ್ರಾಯ, ಏನೆನ್ನುತ್ತೀರ?

ನಮ್ಮ ಹುಟ್ಟೂರು, ನಮ್ಮ ವಂಶದ ಮೂಲ, ನಮ್ಮ ಪೂರ್ವಜರು ಎಂದಾಕ್ಷಣ ಮನಸ್ಸು ಎಷ್ಟು ಆಹ್ಲಾದಿಸುವುದು, ಸಂಭ್ರಮಿಸುವುದು ಅಲ್ಲವೇ? ಅದೇ ಒಂದು ಹುಟ್ಟೂರಿನ ಬಗ್ಗೆ, ತಮ್ಮ ಮೂಲದ ಬಗ್ಗೆ ತಿಳಿಯದೆ ಇರುವ ವ್ಯಕಿಗಳ ಮನಸ್ಸಿನಲ್ಲಿ ಎಲ್ಲಿಯೋ ಏನನ್ನೋ ಕಳೆದುಕೊಂಡ ಭಾವನೆ ಇರಲಾರದೇ?‌ ಹಾಗೆಯೇ ತನ್ನ ಮೂಲದ ಬಗ್ಗೆ ತಿಳಿಯದ ವ್ಯಕ್ತಿಯ ಜೀವನದ ಉದ್ದೇಶವು ಸಾಕಾರಗೊಳ್ಳುವುದಾದರೂ ಹೇಗೆ? ವಂಶದ ಮೂಲವೇನೋ ಸರಿ ಆದರೆ ಮಾನವ ಮೂಲ? ಅಥವಾ ಇದೆಲ್ಲವೂ perception ಅಷ್ಟೇನಾ?

ಅದೇನೇ ಇರಲಿ, ಇಲ್ಲಿ ನಮ್ಮ ಕಥಾನಾಯಕ ಶಂಕರ ತಾನು ಯಾರು, ತನ್ನ ವಂಶಜರು ಯಾರು, ತನ್ನ ಮೂಲ‌ ಯಾವುದು ಎನ್ನುವ ಜಿಜ್ಞಾಸೆಗೆ ಒಳಗಾಗುವನು. ಈ ನಿಟ್ಟಿನಲ್ಲಿ ತಾನು ದೆಹಲಿಯಿಂದ ತನ್ನ ಹುಟ್ಪೂರಾದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕುಗ್ರಾಮವಾದ ಮೂಡೋಡಿಗೆ ಪಾದಾರ್ಪಣೆ ಮಾಡುವನು. ಹೆಚ್ಚು ಹಸಿರಿನ ಬೆಟ್ಟ, ನದಿ, ಕಾಲುವೆ, ಕಾನನಗಳ ಸೋಗಸಾದ ನಾಡು, ಫಲವತ್ತತೆಯ ತವರು; ಇಷ್ಟು ಪುಣ್ಯ ಭೂಮಿಯಾದರೂ ಜನರು ಏಕೆ ವ್ಯವಸಾಯವನ್ನ ಕೈಗೂಡಿಸಿಕೊಳ್ಳದೆ ಭೂಮಿನ್ನ ಹಾಳುಗೆಡವಿದ್ದಾರೆ? ನಾನು ಏಕೆ ಇಲ್ಲಿದ್ದು ವ್ಯವಸಾಯ ಮಾಡಿ ಈ ನೆಲವನ್ನು ಸಮೃದ್ಧಿಗೊಳಿಸಬಾರದು? ಇದೇ ಶಂಕರನಲ್ಲಿ 'ಚಿಗುರಿದ ಕನಸು'!

ಶಂಕರನಿಗೆ ತನ್ನ ಹಾದಿಯಲ್ಲಿ ಎಲ್ಲವೂ ಸುಗಮವಾಗಿರಲಿಲ್ಲ, ಬಂದ ಸವಾಲುಗಳಿಗೆ ಎದೆಗುಂದದೆ ತನ್ನ ಛಲ ಸಾಧಿಸಿ ಯಶಸ್ಸ್ವಿಯಾದ ಮತ್ತು ಆದರ್ಶವೂ ಆದ! ಇಲ್ಲಿ ಲೇಖಕರು ಆಗಿನ ಕಾಲಘಟ್ಟದಲ್ಲಿ ಸರ್ವೇ ಸಾಮಾನ್ಯವಾಗಿ ಇದ್ದಂತಹ ಬಡತನ, ದಾರಿದ್ರ್ಯ, ಬೇನೆ, ಆಲಸ್ಯ, ಮನಸ್ಥಿತಿ ಮತ್ತು ನೈಸರ್ಗಿಕ ಸಂಪತ್ತು ಹಾಗೂ ಅದರ ಪಲವತ್ತೆಗಳ ಕುರಿತು ಇಲ್ಲಿ ಚರ್ಚಿಸಿದ್ದಾರೆ‌. ಹಾಗೆ ನೋಡಿದರೆ ಈ ಕಾದಂಬರಿ ಒಂದು ನಿಟ್ಟಿನಲ್ಲಿ ನಮ್ಮ ಅಜ್ಜ ಮುತ್ತಜ್ಜಂದಿರ ಕಥೆಯೂ ಹೌದು! 'ಕೈ ಕೆಸರಾದರೆ ಬಾಯಿ ಮೊಸರು' ಎನ್ನುವ ತತ್ವಕ್ಕೆ ಈ ಪುಸ್ತಕ ಸಾಕ್ಷಿಯಾಗಿದೆ ಕೂಡ!

ಕಾರಣಾಂತರಗಳಿಂದ ತಮ್ಮತಮ್ಮ ಹುಟ್ಟೂರುಗಳನ್ನ ತೊರೆದು ಬೆಂಗಳೂರು, ಹಾಗೂ ಇನ್ನಿತರ ಮೆಟ್ರೋ ನಗರಗಳಿಗೆ ಹಾಗೂ ಹೊರ ದೇಶಗಳಿಗೆ ಹೋಗಿ ಸೇರಿಕೊಳ್ಳತ್ತಾ ಇರುವ ನಮ್ಮಂತಹ ಮನಸ್ಸುಗಳಿಗೆ ಈ ಯುಗದಲ್ಲಿ ಈ ಪುಸ್ತಕವು ಬಹಳ ಮಹತ್ತರದ್ದಾದೊಂದು ಸಂದೇಶ ನೀಡುವುದು ಅಂತ ನನ್ನ ಅನಿಸಿಕೆ.
Profile Image for mahesh.
270 reviews26 followers
October 22, 2020
In one of the interviews, Tejawsi has mentioned about Chigurida Kanasu and how it molded the perception of life. So I decided to jump into this in four days stay in a grandparent village surrounded by paddy fields and coconut gardens.

Though the Kannada film industry tried to adapt this story in a movie, They have failed miserably in adaptation and made it a typical action movie which is a great injustice to the book.

It's not just a novel, it's a reflection of every human longing secretly hidden from the judging eyes of society. The author tried to find an answer for the meaningful existence of humans by connecting different worlds and its characters in one place.
Profile Image for Vignesh ವಿಮರ್ಶೆ.
36 reviews
May 7, 2023
Karanthajja never fails to impress the reader with virtual tour of Dakshina Kannada. First 100 pgs of the novel is a blend of scenic beauty and mother land described in his typical narrative. Too much of drama towards the end disappointed me. Agricultural development could have been written in detail.

Note: This is a relative rating keeping Bettada jeeva in mind.
Profile Image for Karthikeya Bhat.
109 reviews13 followers
December 21, 2018
*ಚಿಗುರಿದ ಕನಸು*:
ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತರ ಅತ್ಯುತ್ತಮ ಕಾದಂಬರಿ. ಶಂಕರನ ಪಾತ್ರವನ್ನು ಆಧಾರವಾಗಿಟ್ಟುಕೊಂಡು ಮಾನವರ ಸಂಬಂಧಗಳ ಬಗ್ಗೆ ಈ ಕಾದಂಬರಿಯಲ್ಲಿ ಸುಂದರವಾಗಿ ವಿವರಿಸಿದ್ದಾರೆ.

*ಈಗಿನ ಪೀಳಿಗೆಯಲ್ಲಿ ಎಷ್ಟೋ ಜನರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕೆ ಮತ್ತು ಉದ್ಯೋಗದ ಸಲುವಾಗಿ ತಮ್ಮ ಹುಟ್ಟೂರನ್ನು ತ್ಯಜಿಸಿ ನಗರಕ್ಕೆ ಹೋಗಿ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಪಡೆದು ಅಲ್ಲೇ ನೆಲಸುತ್ತಾರೆ. ಉದ್ಯೋಗ ದೊರಕಿದ ನಂತರ ತಮ್ಮ ಹುಟ್ಟೂರನ್ನೇ ಮರೆಯುವ ಎಷ್ಟೋ ಜನರನ್ನು ಹಾಗೆಯೇ ಹೆತ್ತವರಿಗೆ ತಿಂಗಳಿಗೆ ಇಷ್ಟು ಅಂತ‌ ಕಳಿಸಿದರೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸುತ್ತಾರೆ , ಆದರೆ ಹಿರಿಯರು ಹುಟ್ಟಿ ಬೆಳದ ನೆಲ, ಅದನ್ನು ಕಾಣಬೇಕು, ಅಲ್ಲಿ ಬದುಕಬೇಕು, ಅದು ಬರೀ ನೆಲವೆಲ್ಲ ಅದೊಂದು ದೇವಸ್ತಾನ,ಅದು ತನ್ನ ಹೆತ್ತ ತಾಯಿಗೆ ಸಮಾನವೆಂದು ಭೂಮಿತಾಯಿಯ ಮಕ್ಕಳಿಗಿರಬೇಕಾದ ಆಸೆ, ಆದರೆ ಈಗಿನ ಪೀಳಿಗೆಯಲ್ಲಿ ಅದು ಬತ್ತಿಹೋಗಿದೆ ಅದಕ್ಕೆ ಅವರವರ ಕಾರಣಗಳುಂಟು*

ಆದರೆ ಇಲ್ಲಿ ಬರುವ ಶಂಕರನ ಪಾತ್ರವು ಅದಕ್ಕೆ ‌ತದ್ವಿರುದ್ದ, ತಾನು ಹುಟ್ಟಿ ಬೆಳೆದಿದ್ದು ನಗರದಲ್ಲಾದರೂ ತನಗೆ ಹುಟ್ಟ���ರಿಲ್ಲವೆಂದು ಬೇಸರ, ತಾನು ವಿದ್ಯುತ್ ಇಂಜಿನಿಯರ್ ಅದರೂ ತನ್ನ ಆಸಕ್ತಿಯಲ್ಲ ಕೃಷಿ ಜೀವನದಲ್ಲಿ. ತನ್ನ ಸ್ನೇಹಿತನಾದ ಸೀತಾರಾಮನಿಂದ ತನ್ನ ಹುಟ್ಟೂರು ಬಂಗಾಡಿ ಎಂದು ತಿಳಿದು ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಹಲವಾರು ವ್ಯಕ್ತಿಗಳನ್ನು ಭೇಟಿಯಾದಾಗ ಮನುಷ್ಯರ ಗುಣಗಳನ್ನು ಒಂದೂಂದಾಗಿ ಅರ್ಥಮಾಡಿಕೂಳ್ಳುತ್ತಾನೆ. ಅಲ್ಲಿ ಆತನನ್ನು ಪ್ರೀತಿಸುವ ತನ್ನ ಅಜ್ಜಿ, ಮುತ್ತಯ್ಯ ಕೃಷ್ಣ, ಶ್ರೀ ಮತಿ,ಆರಾಧಿಸುವ ಎಳಚಿತ್ತಾಯರು, ದ್ವೇಷಿಸುವ ತನ್ನ ಸೋದರಮಾವ ರಾಮಾರಾಯ ಇನ್ನೂ ಹಲವರನ್ನು ಭೇಟಿಯಾಗುತ್ತಾನೆ. ಶಂಕರ ಮತ್ತು ತನ್ನ ತಮ್ಮ ವಿಠ್ಠಲರ ಸಂಬಂಧದ ಬಗ್ಗೆ ಓದುತ್ತಾ ಹೋದರೆ ಎಷ್ಟೋ ಖುಷಿಯಾಗುತ್ತದೆ ಅಣ್ಣ ತಮ್ಮಂದಿರ ಸಂಬಂಧ ಹೀಗಿರಬೇಕೆಂದು. ವಿಠ್ಠಲನ ಹಾಗು ಸೀತಾರಾಮನ ಸಹಾಯದಿಂದ ಕೃಷಿ ಜೀವನವನ್ನು ಆರಂಭಿಸಿ ಒಳ್ಳೆ ಕೀರ್ತಿ ಹೊಂದುತ್ತಾನೆ, ಹೀಗೆ‌ ತನ್ನ ಜೀವನವು ಸಾಗುವ ಸಮಯದಲ್ಲಿ ತನ್ನನ್ನು ಪ್ರೀತಿಸುವವರನ್ನು ಕಳೆದುಕೂಳ್ಳುತ್ತಾನೆ. *ನಗರದಲ್ಲಿ ದೂರಕದೇ‌ ಇರುವ ಸಂತೋಷವನ್ನು, ತನ್ನನ್ನು ಪ್ರೀತಿಸುವವರನ್ನು, ಒಳ್ಳೆಯ ಸ್ನೇಹಿತರನ್ನು, ಕಡೆಯದಾಗಿ ತನ್ನನ್ನು ಅರ್ಥ ಮಾಡಿಕೂಂಡು ತನ್ನ ಜೊತೆಯಲ್ಲಿ ಇರಲು ಇಷ್ಟಪಟ್ಟ ವರಲಕ್ಷ್ಮೀ ಮತ್ತು ತಂದೆ ತಾಯಿಯರ ಜೂತೆ ಬಂಗಾಡಿಯಲ್ಲಿ ಕೃಷಿ ಜೀವನ ಸಾಗಿಸುತ್ತಾ ಹೋಗುತ್ತಾನೆ* .

"ಸಂಬಂಧಗಳನ್ನು ಎಷ್ಟು ಸ್ವಚ್ಚವಾಗಿ ಇಟ್ಟುಕೊಂಡರೆ, ಬದುಕು ಅಷ್ಟೇ ಸಂತೋಷವಾಗಿರುತ್ತದೆ".
----- *ಕಾರ್ತಿಕ್*
31 reviews
January 17, 2021
ಕಾರಂತರು ಈ ಕಾದಂಬರಿಯನ್ನು ೧೯೫೧ ರಲ್ಲಿ ರಚಿಸಿದ್ದಾರೆ. ಕಥೆಯು ೧೯೪೦ರ ದಶಕದಲ್ಲಿ ನಡೆಯುತ್ತದೆ. ಆ ಕಾಲಕ್ಕೆ ಈ ಕೃತಿ ಎಷ್ಟು ಪ್ರಭಾಶಾಲಿಯಾಗಿತ್ತು ಎಂದು ನಾನು ಹೇಳಲಾರೆ. ಮುಖ್ಯ ಪಾತ್ರವಾದ ಶಂಕರ ಸೇರಿದಂತೆ ಕೆಲವು ಪಾತ್ರಗಳನ್ನು ನೋಡಿದರೆ ಈ ಕಾಲಕ್ಕೆ ಸ್ವಲ್ಪ ಸಿನಿಮೀಯ ಎಂದು ನನಗೆ ಎನಿಸುತ್ತದೆ. ಈ ಕಥೆಯ ಕೊನೆಯ ಸಾವು ಮತ್ತು ಕೊನೆಗೊಳ್ಳುವ ರೀತಿಯೂ ನನಗೆ ಈ ಭಾವನೆ ಬರಲು ಕಾರಣ. ಆದರೂ ಪ್ರತಿಮೆ, ರಂಗರಾಯ, ಮಂಜುನಾಥರಂತಹ ಪಾತ್ರಗಳು ಕೆಲವು ಮಾನವ ಪ್ರವೃತ್ತಿ/ದುರ್ವೃತ್ತಿಗಳನ್ನು ಸಹಜವಾಗಿ ಬಿಂಬಿಸಿವೆ. ಒಟ್ಟಾರೆ ಇದು ಓದಲು ಒಂದು ಒಳ್ಳೆಯ ಕಾದಂಬರಿ.

ಇದು ನಾನು ಓದಿದ ಕಾರಂತರ ಎರಡನೆಯ ಪುಸ್ತಕ. "ಮೂಕಜ್ಜಿಯ ಕನಸುಗಳು" ಅಷ್ಟು ಪ್ರಭಾವಿಯಲ್ಲ, ಹೋಲಿಕೆ ಮಾಡಲೂ ಬಾರದು.
Profile Image for Shivu Pagad.
2 reviews
May 28, 2023
ನಮ್ಮತನದ ಬೇರು ಹುಡುಕಿಕೊಂಡು ಹೋಗಿ, ಕನಸುಗಳನ್ನು ಎಂತಹ ಕತ್ತುಹಿಸುಕುವ ಸನ್ನಿವೇಶಗಳು ಬಂದರೂ.. ನಮ್ಮಕನಸುಗಳಲ್ಲಿನ ನಂಬಿಕೆ, ನಿರಂತರ ಶ್ರಮ ಮತ್ತು ಜೀವನ್ ಹೋರಾಟದ ಯಾವತ್ತೂ ಸಂದಿಗ್ಧ ಕ್ಷಣಗಳ ಚಿತ್ರಣ ಈ ಕಾದಂಬರಿಯದ್ದಾಗಿದೆ.
ಜೀವನಾವಶ್ಯಕ ಅಂಶಗಳಾದ ತಾಳ್ಮೆ, ಸಹನೆ, ಕ್ರೋಧ, ಅಸೂಯೆ, ಸರಿ-ತಪ್ಪುಗಳ ವಿಮರ್ಶೆ, ಕಾಮನೆ, ಆಸೆ, ಆಶಾವಾದ - ಗಳಂತಹ ನೂಲುಗಳನ್ನು ಹೆಣದು ತೆಗೆದ ಸುಂದರ ಕಥೆಯಿದಾದಿಗೆ...
ಒಮ್ಮೆ ಓದಿ ನೋಡಿ,
ನಿಮಗವಶ್ಯಕವಾದ ಅಂಶವನ್ನು ಈ ಕಾದಂಬರಿ ಹುಡುಕಿ ಕೊಡಲೂಬಹುದು.
44 reviews1 follower
August 1, 2020
ಚಿಗುರಿದ ಕನಸು

ಈ ಕಾದಂಬರಿಯ ಬಗ್ಗೆ ಮೊದಲು ಕೇಳಿದ್ದು ನಾಗಾಭರಣ ಇದನ್ನು ಆಧಾರವಾಗಿಟ್ಟು ಮಾಡಿದ ಚಲನಚಿತ್ರ. ಅದನ್ನು ನಮ್ಮಜ್ಜಿಯ ಜೊತೆ ಕೂತು ನೋಡಿದ್ದೆ. ಒಳ್ಳೆಯ ಚಿತ್ರ , ಆದರೆ ಅಜ್ಜಿಗೆ ಅಷ್ಟು ಹಿಡಿಸಿರಲಿಲ್ಲಾ . ಕಥೆ ಬದಲಾಯಿಸಿದ್ದಾರೆಂದು ಹೇಳ್ತಿದ್ರು . ಆ ವಯಸ್ಸಿನಲ್ಲಿ ಓದುವ ಹವ್ಯಾಸವಿರಲಿಲ್ಲ .

ಕಳೆದ ತಿಂಗಳು Coronaದಿಂದ ಓದುವ ಅವಕಾಶವಾಯ್ತು.

ಶಂಕರ, ಒಬ್ಬ city ಯಲ್ಲಿ ಬೆಳೆದು, engineering ಓದಿ, ಭಾಷೆ ಗೊತ್ತಿಲ್ಲದ, ಜನ ತಿಳಿಯದ ಊರಿಗೆ ಹೋಗಿ ಬರಡು ಭೂಮಿಯಂತಿದ್ದ ನೆಲವನ್ನು ನಂದನವನವಾಗಿಸಿದ ಕಥೆ .

"Every Engineer, after working for 2-3 years, wants to be an agriculturist" ತರಹವಲ್ಲ.

ತನ್ನ ಮನಸ್ಸಿಚ್ಛೆಯನ್ನು ಸಾಕಾರಗೊಳಿಸುವುದಕ್ಕಾಗಿ, ಸುಖವಾಗಿ ಇರಬಹುದಾದ ಜೀವನವನ್ನು ತ್ಯಜಿಸಿ, ಪ್ರೀತಿಸುವ ಹುಡುಗಿಯನ್ನು ಬಿಟ್ಟು ಮಲೆನಾಡಿನ ತನ್ನ ಪೂರ್ವಜರ ಊರನ್ನು ಸೇರಿ ಅಲ್ಲಿ ಕೃಷಿಯಲ್ಲಿ, ಜೀವನದಲ್ಲಿ ಸಾಧನೆ ಮಾಡಿದ ಕಥೆ .
ಕಾರಂತರು ಇದಕ್ಕಾಗಿ ಎಷ್ಟೆಲ್ಲಾ ಕಷ್ಟಗಳನ್ನು ಹಿಮ್ಮೆಟ್ಟಿಸಬೇಕು ಎಂಬುದನ್ನು ತೋರಿಸುವುದರಲ್ಲಿ ಹಿಂದೇಟು ಹಾಕಿಲ್ಲ. ಬರಿಯ ಮನಸ್ಸಿನ ಇಚ್ಛೆ ಸಾಲದು, ಅದನ್ನು ಸಾಧಿಸುವುದಕ್ಕೆ ಅದಕ್ಕಿಂತ ಹೆಚ್ಚು ಶ್ರಮಪಡಬೇಕು ಮತ್ತು ಆ ಶ್ರಮದ ಸಾಥತ್ಯತೆ ಎಷ್ಟು ದೊಡ್ಡ ಪಾತ್ರ ನಿರ್ವಹಿಸುತ್ತದೆ ಎಂದು ಶಂಕರನ ಪಾತ್ರ ತೋರಿಸಿದೆ.

ಕಥೆಯಲ್ಲಿ ಸತತವಾಗಿ ಬರುವ ಇನ್ನೊಂದು Theme ಎಂದರೆ, ಒಬ್ಬ ವ್ಯಕ್ತಿಗೆ ಒಂದು ನೆಲೆಯಿರಬೇಕು, ನಾಡಿರಬೇಕು, ಜನ ಇರಬೇಕು .ಇದರ ಪ್ರಭಾವ ಇದ್ದವರಿಗೆ ಅಷ್ಟಾಗಿ ಅನುಭವಕ್ಕೆ ಬಂದಿರುವುದಿಲ್ಲ. ಇವೆಲ್ಲಾ ಇಲ್ಲದಿರುವವರಿಗೆ ಇವುಗುಳ ಬೆಲೆ ಎಷ್ಟೆಂದು ತಿಳಿದಿರುತ್ತದೆ. ಇವುಗಳ ಇಲ್ಲದಿರುವಿಕೆ ಮನಸ್ಸಿನಲ್ಲಿ ತಳಮಳ ಸೃಷ್ಟಿಸುತ್ತದೆ. ಈಗಿನ globalization ಯುಗದಲ್ಲಿ ಇದು ಹಳೆಯ ತರಹದ ಯೋಚನೆ ಎಂದು ಅನ್ನಿಸಬಹುದು ಆದರೆ corona ಬಂದ ಸಮಯದಲ್ಲಿ ಜನ ತಮ್ಮ ತಮ್ಮ ಊರುಗಳ ಕಡೆ ಗುಳೆ ಹೊರಟಿರುವುದನ್ನು ನೋಡಿದರೆ, ಈ ವಿಚಾರ ಇನ್ನು ಸಮಂಜಸ.

ಶಂಕರನಲ್ಲಿ ಬರುವ ಮತ್ತೊಂದು ಇಷ್ಟವಾಗುವ ಗುಣ, ಕಷ್ಟದ ಸಮಯದಲ್ಲಿ ಕಾರ್ಯ ತತ್ಪರತೆ. ಭೈರಪ್ಪನವರು ಧರ್ಮಶ್ರೀ ಯಲ್ಲಿ ಹೇಳುವ ಹಾಗೆ " ನಮಗೆ ಮುಖ್ಯವಾಗಿ ಬೇಕಾದುದು ಅವಿರತವಾದ ಕ್ರಿಯೆ". ಸತತ ಕ್ರಿಯಾಶೀಲತೆಯಿಂದ ದೈನಂದಿನದ ಸುಖ ದುಃಖಗಳನ್ನು ಮರೆಯುವುದು.

ಒಟ್ಟಾರೆ ಹೇಳುವುದಾದರೆ, ಕನ್ನಡದ ಕಾದಂಬರಿಗಳಲ್ಲಿ ಓದಲೇಬೇಕಾದ ಒಂದು ಪುಸ್ತಕ.
ಕಥೆ ಸಕಾರಾತ್ಮಕವಾಗಿ ಸಾಗುತ್ತದೆ. ಮನಸ್ಸಿನಲ್ಲಿ ಉತ್ಸಾಹ ತುಂಬಿಸುತ್ತದೆ.
Profile Image for Ashwitha Thunga.
14 reviews
July 31, 2024
ಬಹಳ ದಿನಗಳ ನಂತರ ಮನಸ್ಸಿಗೆ ತುಂಬಾ ಮುದ ನೀಡಿದಂತಹ ಪುಸ್ತಕ..

ಶಂಕರನ ಆಕಾಂಕ್ಷೆ-ಸಾಹಸಗಳು, ತುಮುಲ - 'ಚಿತ್ತ ಚಾಂಚಲ್ಯಗಳು' ಬಹಳ relatable ಎನಿಸಿದವು.. 1951 ರಲ್ಲೇ ಹೊರಬಂದ ಕಥೆಯ ಕೃಷಿ ಸಂಬಂಧಿತ ಸಾಮಾಜಿಕ ಕಳಕಳಿಗಳು ಇಂದಿಗೆ ಇನ್ನೆಷ್ಟು ಪಟ್ಟು ಹದಗೆಟ್ಟಿದೆಯೋ..?
ಮತ್ತೆ ಹಾಂ, ಕಾರಂತಜ್ಜರು ಬೆಟ್ಟ ಗುಡ್ಡಗಳ, ಗದ್ದೆ, ಮಳೆಗಾಲದ ವರ್ಣನೆ ಕಣ್ಣಿಗೆ ಕಟ್ಟುವಂತೆ ಅತ್ಯದ್ಭುತವಾಗಿ ಬರೆದಿದ್ದಾರೆ. ಅಲ್ಲದೆ ಜಾಗವನ್ನು ಅಷ್ಟು ಕರಾರುವಕ್ಕಾಗಿ ಬರೆದುದನ್ನು ನೋಡಿದರೆ ಅವರೂ ಚಾರಣ ಪ್ರಿಯರೇ ಎಂಬ ಸಂಶಯ ಉಂಟಾಗಿದೆ. ಅದಕ್ಕೀಗ ಅವರ ಇನ್ನಷ್ಟು ಬರವಣಿಗೆ ಶೋಧಿಸಿ ಈ ಸತ್ಯ ಕಂಡು ಕೊಳ್ಳಬೇಕೆಂಬ ನಿರ್ಣಯವೂ ಮಾಡಿದ್ದಾಗಿದೆ 😌
Profile Image for Sangeetha.
62 reviews22 followers
July 1, 2024
Karanth is my favorite Kannada novelist for sure. The way his novels just flows without efforts is fabulous art one can possess.
Karanth's book and nature are always tied together. This book proved to be yet another ride in the nature and wonderful experience.
3 star is only because ending went too fast considering the initial flow of book and became overwhelming ( I have seen this happen with most of the other novelists too! )
Profile Image for ಲೋಹಿತ್  (Lohith).
89 reviews1 follower
December 11, 2023
ಕಾರಂತರ ಎಲ್ಲ ಕೃತಿಗಳಂತೆ ಇಲ್ಲೂ ಅವರು ದಕ್ಷಿಣ ಕನ್ನಡ ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಬಹಳ ಅಂದವಾಗಿ ಚಿತ್ರಿಸಿದ್ದಾರೆ,ಹಾಗೂ ಮಳೆಗಾಲದಲ್ಲಿ, ಶ್ರಾವಣಕಾಲದಲ್ಲಿ ಪ್ರಕೃತಿಯ ಬದಲಾವಣೆಯ ಬಗ್ಗೆ ಪರಿ ಪರಿಯಾಗಿ ವಿವರಿಸಿದ್ದಾರೆ..

ತನ್ನ ಮೂಲವನ್ನು ಹುಡುಕಿಕೊಂಡು ಬಂದ ಶಂಕರ ಹೇಗೆ ಹಳ್ಳಿ ಸೊಗಡಿಗೆ ಮಾರಿ ಹೋಗಿ,ತನ್ನ ಬಂಧು ಬಾಂಧವರನ್ನು ಕಂಡುಕೊಂಡು ಅಲ್ಲಿನ ಜನರೊಂದಿಗೆ ಬೆರೆತು ಅವರಲ್ಲೊಬ್ಬನಾಗುವ ಪಯಣ ಸೊಗಸಾಗಿದೆ..
63 reviews9 followers
August 12, 2020
ಅದ್ಬುತವಾಗಿದೆ. ಇದರ ಮೇಲೆ ಕನ್ನಡ ‌ಮತ್ತು‌ ಹಿಂದಿಯಲ್ಲಿ ‌ಸಿನಿಮಾ ಮಾಡಿದ್ದಾರೆ. ಒಳ್ಳೆಯ ‌ಪ್ರೇರಣೆ ಮತ್ತು ಪ್ರಕೃತಿಯ ಜೊತೆ‌ ನಮ್ಮ ಜೋಡಣೆ.
Profile Image for ಸುಶಾಂತ ಕುರಂದವಾಡ.
422 reviews25 followers
April 30, 2021
ಒಬ್ಬ ಎಂಜಿನೀರ್ ಹೇಗೆ ಒಂದು remote area ಗೆ ಬಂದು ತನ್ನ ತಾಂತ್ರಿಕ ಬಲದಿಂದ ಹಳ್ಳಿಯಲ್ಲಿ ಬದಲಾವಣೆಯನ್ನು ತರುತ್ತಾನೆ.
ಇದೆ ಕಾದಂಬರಿ ಆಧಾರದ ಮೇಲೆ ಶಿವರಾಜಕುಮಾರ್ ಅವರ ಚಲನಚಿತ್ರ ಮೂಡಿ ಬಂದಿದೆ
2 reviews
August 11, 2023
ನಾವು ನಮ್ಮ ಪೂರ್ವಜರು, ನಮ್ಮ ಊರು
ಡಾ ಶಿವರಾಮ ಕಾರಂತರು 🐐
2 reviews
February 22, 2013
Rain that doesn't stop for months .......
Lush greenery wherever you look at ......
A lost young soul searching for it's roots ......
Virtual world created by people around themselves ......
Pain of seeing your younger generation die in front of you .....
To stand and face nature in patience .......

A line which summarizes this book would be -
"Magu, Naanu badukiddini anno onde ondu kaarana saaku innu chennagi badukoke"
-- Jayanth Kaykini


I love this book coz i somehow identify myself with character in the story.
If not exact context, the ideology has influence me to an extent.


Note:
Some say hindi movie SWADES was inspired by this book and kannada movie CHIGURDA KANASU.
However, i would disagree with it coz the layers in which this story operates is way too far from superficial ones portrayed in movie. Still Swades is a wonderful FILM.
If at all someone is OK in seeing kannada movie (coz everyone in karnataka seem to hate them), watch CHIGURIDA KANASU. Never have i seen such a great adaptation and improvisation of a novel on screen (Note: Hero isn't good looking and ignore his initial hindi conversations)
Profile Image for Shashi Kumar.
5 reviews
July 28, 2015
Ondhe olle pustaka odhidhini antha ega manasige samadana agthide...
Thmaba Olle pusthaka idhu.. Ellaru hodabeku...
Pustaka odhuthidhare manasinalli aa chitragalu odaduva bavane kalpisudhu...
7 reviews
October 25, 2017
odutha iddare nave malemadinali sancharisidantaguthade. thumbha olleya kadambari.
Displaying 1 - 20 of 20 reviews

Can't find what you're looking for?

Get help and learn more about the design.