Jump to ratings and reviews
Rate this book

ಸುಪ್ತ ಸ್ವರ

Rate this book
ಗಂಡನನ್ನು ಬಳ್ಳಿಯಂತೆ ಬಳಸುತ್ತಾ ಹೆಜ್ಜೆ ಹೆಜ್ಜೆಗ3 ಅವನನ್ನು ಮೆಚ್ಚಿಸುತ್ತಾ ಅವನ ಮುಖದಲ್ಲಿ ಸಂತಸ ತುಳುಕಿದರೆ ತಾನು ಧನ್ಯ ಎಂದು ಭಾವಿಸುತ್ತಾ ಅದರಲ್ಲೇ ತನ್ನ ಜೀವನ ಸಾರ್ಥಕತೆಯನ್ನು ಕಾಣುತ್ತಿದ್ದ - ಸಂಧ್ಯಾ
ಹೆಣ್ಣಿಗೆ ಮದುವೆಯೊಂದೇ ಪಾರಮ್ಯವಲ್ಲ. ಅವಳ ಜೀವನ ನಾಲ್ಕು ಗೋಡೆಗಳ ನಡುವೆ ಸೀಮಿತವಾಗಬೇಕಿಲ್ಲ. ಆರ್ಥಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯವೂ ಅವಳಿಗೆ ಬೇಕು. ಅವಳಿಗೂ ಕನಸುಗಳಿವೆ ಎಂದು ತಿಳಿದ ನಲ್ವತ್ತು ದಾಟಿದರೂ ಮದುವೆಯಾಗದ, ನೌಕರಿಯಲ್ಲಿರುವ - ವೇದಾ.
ಈ ಇಬ್ಬರು ಸೋದರಿಯರ ತಾಕಲಾಟವೇ ಈ 'ಸುಪ್ತ ಸ್ವರ'

213 pages, Paperback

Published January 1, 2012

1 person want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
1 (100%)
3 stars
0 (0%)
2 stars
0 (0%)
1 star
0 (0%)
Displaying 1 of 1 review
Profile Image for ಸುಶಾಂತ ಕುರಂದವಾಡ.
431 reviews26 followers
January 24, 2022
ಸ್ತ್ರೀ ಪ್ರಮುಖ ಪಾತ್ರ ಹೊಂದಿರುವ ಕಾದಂಬರಿ. ಮಹಿಳೆಯರಲ್ಲಾಗುವ ಉಭಯ ಮನಸುಗಳ ಕದನವನ್ನು ಇಲ್ಲಿ ಲೇಖಕರು ಎಳೆ ಎಳೆಯಾಗಿ ಚಿತ್ರಿಸಿದ್ದಾರೆ.
ಒಬ್ಬಳು ಗಂಡ ಮತ್ತು ಮಕ್ಕಳು ಇರುವ ಪ್ರೀತಿಯ ಸಂಸಾರದಲ್ಲಿ ಹಾಯಾಗಿ ತೇಲುತ್ತಿರುವವಳು(ಸಂಧ್ಯಾ). ಇನ್ನೊಬ್ಬಳು ತನ್ನ ಕೆಲಸ ಕಾರ್ಯಗಳೇ ತನ್ನ ಸಂಸಾರ ಮಡದಿಗಳು ಎಂದು ನಂಬಿ ಅವಿವಾಹಿತಳಾಗಿ ಜೀವನವನ್ನು ನಡೆಸುವ ಧ್ಯೇಯವನ್ನು ಹೊಂದಿರುವವಳು(ವೇದಾ).
ಸಂಧ್ಯಾಳು ತನ್ನ ಜೀವತಾವಧಿಯಲ್ಲಿ ಏನನ್ನಾದರೂ ಸಾಧಿಸಬೇಕು ಅಂತ ಕಥೆಗಳನ್ನು ಬರಿಯಲು ಶುರು ಮಾಡುತ್ತಾಳೆ. ಆದರೆ ತನ್ನ ಪತಿಯಿಂದ ಯಾವುದೇ ರೀತಿಯ ಬೆಂಬಲ ಅವಳಿಗೆ ಸಿಗುವುದಿಲ್ಲ. ಆದರೂ ಛಲವನ್ನು ಬಿಡದೆ ಮುನ್ನುಗ್ಗುತ್ತಾಳೆ, ಈ ನಡುವೆ ಅವಳಿಗೆ ತನ್ನ ಪತಿ ಒಂದು ಕಾಲದಲ್ಲಿ ಲೇಖಕರಾಗಿದ್ದರು ಎಂದು. ಅವನು ಬರೆದಂತಹ ಕಥೆಗಳನ್ನು ಅವನ ಹೆಸರಿನಲ್ಲೇ ಪೂರ್ಣಗೊಳಿಸಿ, ಅವುಕ್ಕೊಂದು ರೂಪಕೊಟ್ಟು ಅವನನ್ನು ವಿಜಯಶಾಲಿಯಾಗಿ ಮಾಡುತ್ತಾಳೆ. ಇದರಲ್ಲೇ ಅವಳು ಕಾಣುವ ಬಹಿರ್ ಸಂತೋಷ ಆದರೆ ಅಂತರ್ ಸಂತೋಷ ಇರುವುದಿಲ್ಲ.
ಈ ಕಡೆ ವೇದಾ, ಸದಾನಂದ ಎಂಬ ಲೇಖಕನಿಗೆ ಮನಸೋತು ಈ ವಯಸ್ಸಿನಲ್ಲಿ ತನಗೊಂದು ಬಾಳ ಸಂಗಾತಿ ಬೇಕು ಅಂತ ಅನ್ನಿಸಿ ಅವನನ್ನು ವರಿಸುತ್ತಾಳೆ. ಆದರೆ ಸದಾನಂದನಿಗೆ ಅವನ ಮನೆಯೆಲ್ಲಿ ಅವನಿಗೆ ಬೇಕಾದ ಆಶೀರ್ವಾದ ಸಿಗುವುದಿಲ್ಲ. ಅದಕ್ಕೆ ಕೊನೆಗೆ ವೇದಾ ಅವನ ಭವಿಷ್ಯದ ಚಿಂತೆಗಾಗಿ ಅವನನ್ನು ತೊರೆಯಲು ಮುಂದಾಗುತ್ತಾಳೆ.
ಇನ್ನು ಮುಂದೆ ಸಂಧ್ಯಾಳ ಪತಿ ನಿರಂಜನನು ವೇದಾಳಿಗೆ ನೀಡಿದ ಕಿರುಕುಳದಿಂದ ಅವನ್ನನ್ನು ಬಿಟ್ಟು ಸಂಧ್ಯಾ ವೇದಾಳಲ್ಲಿ ಬಂದಾಗ ಅವಳ ಮಗುಗೆ accident ಆಗುತ್ತದೆ. ಇದೆ ನೆಪವಾಗಿ ನಿರಂಜನನು ತನ್ನ ತಪ್ಪನ್ನು ಒಪ್ಪಿ ಮತ್ತೆ ಅವರಿಬ್ಬರು ಒಂದಾಗುತ್ತಾರೆ. ವೇದಾಳು pregnent ಆಗುವ ಸೂಚನೆ ಬಂದು, ಸದಾನಂದನು ಅವಳನ್ನು ಮತ್ತೆ ಬಂದು ಕೊಡುತ್ತಾನೆ. ಕೊನೆಗೆ Happy ending!
ಕಾದಂಬರಿ ಓದುತ್ತಾ ಹೋದಾಗ ಹಲವು ಯೋಚನೆಗಳು ನಮ್ಮ ಸ್ಮೃತಿಯಲ್ಲಿ ಹೊಕ್ಕುತ್ತವೆ. ಮಹಿಳೆಯರು ತಮ್ಮ ಕಾಲ ಮೇಲೆ ನಿಂತು ಯಾವುದೇ ಪುರುಷನಿಗೆ ತಾನು ಕಮ್ಮಿಯಿಲ್ಲ ಅಂತ ತೋರಿಸುವ ಕಾಲವಿದು. ಒಂದು ಕಡೆ ಹೆಣ್ಣಿಗಿಂತ ತಾನು ಏನೂ ಕಮ್ಮಿ ಇಲ್ಲ ಅಂತ ಮನೆ ನಡಿಸಿಕೊಂಡು ಹೋಗುವ ಪುರುಷರನ್ನು ನಾವು ಇಂದು ಸಮಾಜದಲ್ಲಿ ಕಾಣಬಹುದು. ಅವರಿಬ್ಬರ ಸಮ್ಮಿಲನ ಒಂದು ಸಂತೋಷಪಥಕ್ಕೆ ನಾಂದಿ ಹಾಡಬಲ್ಲದು, ಹಾಗೆಯೇ ನಡುವಿನ ಸಂಘರ್ಷ ಒಂದು ವಿಕೋಪಕ್ಕೆ ಕೂಡ ಎಡೆ ಮಾಡಿ ಕೊಡಬಹುದು. ಸಂತೋಷಪಥ ಮತ್ತು ವಿಕೋಪ ಇವುಗಳನ್ನಾಗಿಸುವುದು ಆ ಎರಡು ಜೀವಿಗಳ ಕೈಯಲ್ಲಿದೆ, ಆ ಜೀವಿಗಳು ಬೇರೆಯವರ ಕಡೆಗೆ ಕಿವಿಗೊಡದಿದ್ದರೆ ಅವರ ಜೀವನ ಆನಂದಯುತವಾಗಿರುವುದರಲ್ಲಿ ಸಂದೇಹವಿಲ್ಲ.
Displaying 1 of 1 review

Can't find what you're looking for?

Get help and learn more about the design.