ಯಹೂದ್ಯರ ಬಗ್ಗೆ ಹತ್ತಾರು ಕಾಲ್ಪನಿಕ ಕಾದಂಬರಿಗಳು, ಬಯೋ/ ಆಟೋಬಯೋಗ್ರಫಿಗಳೂ ಓದಿಯಾದ ಮೇಲೆ ಸ್ವಲ್ಪ ತಡವಾಗಿ ಯಹೂದ್ಯರ ಮೂಲ ನೆಲೆ, ಇತಿಹಾಸ, ಪ್ರಗತಿಯ ಹಾದಿ ಹೀಗೆ ಒಂದಷ್ಟು ವಿಷಯಗಳ ಕುರಿತಾದ non fictional ಓದಿಗೆ ಸಿಕ್ಕಿದ್ದು ಈ ಪುಸ್ತಕ. "ಇಸ್ರೇಲ್ ವೈಶಿಷ್ಟ್ಯ- ಇತಿಹಾಸ," "ಇಸ್ರೇಲ್ ವಿಜ್ಞಾನ- ತಂತ್ರಜ್ಞಾನ ಸಹಯೋಗ", "ಇಸ್ರೇಲ್ ಪ್ಯಾಲಿಸ್ತೀನ್ ಸಂಬಂಧ, ಭಾರತದ ಬಿಗಿಹಗ್ಗದ ನಡಿಗೆ" ಇತ್ಯಾದಿ ಒಂದಷ್ಟು ಆಸಕ್ತಿಕರ ವಿಷಯಗಳಿವೆ. ಗಡಿಬಿಡಿಯಲ್ಲಿ ಓದಿ ಮುಗಿಸುವಂತದ್ದಲ್ಲ.
ಇಸ್ರೇಲ್ ದೇಶದ ಬಗ್ಗೆ ಆಸಕ್ತಿ ಇರುವವರು ಓದಬಹುದಾದ ಪುಸ್ತಕ.ಇಸ್ರೇಲ್ ದೇಶದ ಹುಟ್ಟು, ಅಲ್ಲಿನ ಯಹೂದಿಗಳ ಹೋರಾಟ,ಮೋಸ್ಸಾದ್ ಸಂಸ್ಥೆಯ ಸಾಹಸಿ ಕಾರ್ಯಾಚರಣೆಗಳ ವಿವರ, ಭಾರತ ಮತ್ತು ಇಸ್ರೇಲ್ ನಡುವಿನ ತಟಸ್ಥ ನೀತಿ ಮೊದಲಾದ ವಿಷಯಗಳ ಸಂಕ್ಷಿಪ್ತ ವಿವರಗಳು ಈ ಪುಸ್ತಕದಲ್ಲಿದೆ .