Jump to ratings and reviews
Rate this book

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ

Rate this book

58 pages, Unknown Binding

12 people want to read

About the author

Kuvempu

64 books558 followers
Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.

He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.

He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi

His son K P Poornachandra Tejaswi was a famous writer as well.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
9 (64%)
4 stars
5 (35%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Nayaz Riyazulla.
425 reviews94 followers
February 19, 2022
ಅಬ್ಬಾ, ಎಂತ ಪುಸ್ತಕವಿದು... ಕುವೆಂಪುರವರ ವಿಚಾರಗಳು, ಅವರು ವಿಷಯವನ್ನು ಓದುಗನಿಗೆ ಕಟ್ಟಿಕೊಡುವ ಪರಿ ಅಮೋಘ. ವಿದ್ಯಾರ್ಥಿಗಳಿಗೆ ಮತ್ತು ಯುವ ಮನಸ್ಸುಗಳಿಗೆ ತಮ್ಮ ಮಿತಿಯನ್ನು ವಿಸ್ತರಿಸಿಕೊಳ್ಳಲು ಬರೆದಿರುವ ಇಲ್ಲಿನ ಲೇಖನಗಳು ಮೈ ರೋಮಾಂಚನಗೊಳ್ಳಿಸುತ್ತದೆ, ಈ ಪುಸ್ತಕ ಬಹುಷಃ ನನಗೆ 6-7 ವರ್ಷದ ಹಿಂದೆ ಸಿಕ್ಕಿದ್ದರೆ ನನ್ನ ಶಿಕ್ಷಣ ಮೌಲ್ಯ ಖಂಡಿತವಾಗಿಯೂ ಇನ್ನೂ ಹಿರಿದಾಗಿಸುತ್ತಿತ್ತು. ಮಲೆನಾಡ ವಿದ್ಯಾರ್ಥಿಗಳಿಗೆ ಬರೆದಿರುವ ಲೇಖನವಂತೂ ಸೊಬಗು, ಅದೊಂದು ಸೊಬಗು.

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಲೇಖನದ ಒಂದು ಭಾಗ ಓದಿ.
1. ಇರುವುದೊಂದೇ ಸತ್ಯ; ತಿಳಿದವರು ಬೇರೆ ಬೇರೆ ರೀತಿಯಿಂದ ಹೇಳುತ್ತಾರೆ.

2. ಚರಾಚರ ಜಗತ್ತೆಲ್ಲವನ್ನೂ ಈಶ್ವರನಿಂದ ಆವರಿಸು. ತ್ಯಾಗದಿಂದ ಅದನ್ನು ಅಸ್ವಾದಿಸು. ಇತರರ ಸಿರಿಗೆ ಅಳುಪದಿರು.

3. ಒಂದು ಶತಮಾನ ಬಾಳಬೇಕೆಂದು ಇಚ್ಛಿಸುವಾತನು ಕರ್ಮ ಮಾಡುತ್ತಲೇ ಬಾಳಬೇಕು. ಹಾಗೆ (ಜಗತ್ತೆಲ್ಲವನ್ನೂ ಈಶ್ವರನಿಂದ ಆವರಿಸಿ) ಬಾಳಿದರೆ ಕರ್ಮಲೇಪನವಿಲ್ಲ

4. ಶುಭವಾದುದನ್ನೆ ನಮ್ಮ ಕಿವಿಯಾಲಿಸಲಿ. ಪೂಜಾರ್ಹವಾಗಿ ಮಂಗಳವಾದುದನ್ನೆ ನಮ್ಮ ಕಣ್ಣು ನೋಡಲಿ. ದೃಢದೇಹದಿಂದಲೂ ಆನಂದದಿದಲೂ ಜೀವಮಾನ ದೇವಹಿತವಾಗಿ ಸಾಗಲಿ.

ಮಲೆನಾಡ ಯುವಕರಲ್ಲಿ ಲೇಖನದಲ್ಲಿ ಅಕ್ಷರಗಳ/ವಿದ್ಯೆಯ ಮೌಲ್ಯವನ್ನು ಸಾರುವ ಈ ಸಾಲು ಓದಿ

"ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ, ಚಿನ್ನದ ಚೆಲುವು ಹೆಣದಂತೆ! ನಿಮ್ಮ ಕನ್ಯೆಯರಿಗೆ ಸೇರು ಬಂಗಾರದ ಕೊರಳ ಹಾರಕ್ಕಿಂತಲೂ ಮುದ್ದಾದ ಕನ್ನಡದ ಅಕ್ಷರಮಾಲೆಯ ರಮಣೀಯತರವಾದ ಅಲಂಕಾರವೆಂದೂ ನಾನು ಧೈರ್ಯವಾಗಿ ಹೇಳಬಲ್ಲೆ".

ಓದಿ, ಶಾಂತ ಮನಸ್ಸಿನಿಂದ ಗಮನವಿಟ್ಟು ಒಮ್ಮೆ ಓದಿ.
Profile Image for Bharath Manchashetty.
134 reviews3 followers
December 12, 2025
“ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ” ಕೃತಿ ಮಾನವನ ಅಂತರಂಗದ ಹುಡುಕಾಟ, ಆತ್ಮಸಾಕ್ಷಾತ್ಕಾರದ ಹಾದಿ ಹಾಗೂ ಜೀವನದ ತತ್ತ್ವಚಿಂತನೆಗಳನ್ನು ಅನಾವರಣಗೊಳಿಸುತ್ತದೆ. ಲೇಖಕರು ಆತ್ಮದ ಮಹತ್ವವನ್ನು ತತ್ವಶಾಸ್ತ್ರೀಯ ದೃಷ್ಟಿಯಿಂದ ಸಮರ್ಥವಾಗಿ ವಿವರಿಸಿ, ವ್ಯಕ್ತಿ ತನ್ನ ಅಂತರಾಳವನ್ನು ತಿಳಿದುಕೊಂಡಾಗ ಮಾತ್ರ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸಬಹುದು ಎಂದು ಪ್ರತಿಪಾದಿಸಿದ್ದಾರೆ. ಯಾರೋ ಹೇಳಿದರೆಂದು ಒಪ್ಪದೆ ವಿಚಾರ ವಿಮರ್ಶೆ ಮಾಡಿ ಸರಿ ಅನಿಸುವುದನ್ನು ಒಪ್ಪಬೇಕು, ದೇವರೇ ಪ್ರತ್ಯಕ್ಷವಾದರೂ ಕೂಡ ಅದನ್ನೇ ಪಾಲಿಸಬೇಕು ಎಂದು ದೃಢವಾಗಿ ಹೇಳುತ್ತಾರೆ.

ವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಈ ಕೃತಿ ಓದಿ ಸಾಕಷ್ಟು ತಿಳಿದೆ. ಇದನ್ನೂ ಕೂಡ ಓದಿದ ಮೇಲೆ ನಾವೆಷ್ಟು ಬದಲಾಗಬೇಕು, ಸಮಾಜ ಯಾವ ಹಂತದಲ್ಲಿದೆ ಎಂಬುದು ತಿಳಿಯುತ್ತದೆ. ಕುವೆಂಪು ತಮ್ಮ ವಿಶಿಷ್ಟ ಸಾಹಿತ್ಯ ಶೈಲಿಯಲ್ಲಿ, ವ್ಯಕ್ತಿಯು ಬಾಹ್ಯ ನಿಯಮ-ಸಂಪ್ರದಾಯಗಳಿಗೆ ಬದ್ಧನಾಗದೆ ತನ್ನ ಅಂತರಾಳದ ಧ್ವನಿಯನ್ನು ಅನುಸರಿಸಿ ಬದುಕಬೇಕು ಎಂಬ ಸಂದೇಶವನ್ನು ನೀಡುತ್ತಾರೆ.

ಪುಟ್ಟ ಕೃತಿಯಲ್ಲಿ ಜೀವನದ ಹೋರಾಟ, ಆಧ್ಯಾತ್ಮಿಕ ಮೌಲ್ಯಗಳು ಮತ್ತು ಸಮಾಜದ ನಿಯಮ-ಸಂಪ್ರದಾಯಗಳ ನಡುವಿನ ಸಂಘರ್ಷವನ್ನು ಸ್ಫುಟವಾಗಿ ಬಿಂಬಿಸಲಾಗಿದೆ. ಶಬ್ದಸಮೃದ್ಧ ಶೈಲಿ, ತೀಕ್ಷ್ಣ ಚಿಂತನೆ ಹಾಗೂ ಆಳವಾದ ವಾದ-ಪ್ರತಿವಾದಗಳ ಮೂಲಕ ಕೃತಿ ಓದುಗರಲ್ಲಿ ಆತ್ಮಾವಲೋಕನದ ಮನೋಭಾವನೆ ಹುಟ್ಟಿಸುತ್ತದೆ.

ಈ ಕೃತಿ ಓದುವಾಗ ಓದುಗನು ತನ್ನ ಬದುಕಿನ ಗುರಿ, ನಂಬಿಕೆಗಳು ಮತ್ತು ತತ್ವಗಳನ್ನು ಮರುಪರಿಶೀಲಿಸಲು ಪ್ರೇರಿತನಾಗುತ್ತಾನೆ. “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ” ಕೇವಲ ಒಂದು ಕೃತಿಯಾಗಿರದೆ , ಆತ್ಮಯಾನದ ದಾರಿದೀಪದಂತಿದೆ.

-ಭರತ್ ಎಂ
ಓದಿದ್ದು ೧೯.೦೯.೨೦೨೫
Displaying 1 - 2 of 2 reviews

Can't find what you're looking for?

Get help and learn more about the design.