Jump to ratings and reviews
Rate this book

ರೌದ್ರಾವರಣಂ

Rate this book

160 pages, Unknown Binding

5 people want to read

About the author

ಅನಂತ

2 books1 follower

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (9%)
4 stars
6 (54%)
3 stars
4 (36%)
2 stars
0 (0%)
1 star
0 (0%)
Displaying 1 - 5 of 5 reviews
Profile Image for Sanjay Manjunath.
201 reviews10 followers
January 11, 2026
ಅವನದೊಂದು ಬದುಕು. ಊರವರಿಗೆ ಅವನದು ಪರದೇಸಿ ಬದುಕು. ಆದರೆ ಊರವರಿಗೆ ಅರಿವಿಲ್ಲದ ನಿಗೂಢ ಬದುಕು ಅವನದು. ಅಂತ ಬದುಕಿಗೆ ಉಸಿರಾಗಿರುವುದು ಮಾತಿಲ್ಲದ ಹೆಂಗಸಿನಿಂದ ಸಿಕ್ಕಿದ ಮಗು ಮತ್ತು ಮಾತಿಲ್ಲದೆ ಮೂಕ ಪ್ರೀತಿಯನ್ನು ತೋರಿಸುವ ಪ್ರಾಣಿ ನಾಯಿ.

ಬರೀ ಪ್ರೀತಿ ಅಂದುಕೊಂಡರೆ ಅದು ನಿಜವೇ.. ಆದರೆ ಆ ಪ್ರೀತಿಯನ್ನು ಉಳಿಸಲು ಅವನು ಪಡುವ ಪಡಿಪಾಟಲುಗಳ ಅನೇಕ ಸಂಗತಿಗಳು ಇಲ್ಲಿದೆ.

ಕಾದಂಬರಿಯಲ್ಲಿ ಬರುವ ವಿವಿಧ ಪಾತ್ರಗಳು, ಆ ಪಾತ್ರಗಳ ನಡುವೆ ನಡೆಯುವ ಘಟನೆಗಳು ಮತ್ತು ಆ ಘಟನೆಗಳು ಒಂದಕ್ಕೊಂದು ಬೆಸೆದುಕೊಂಡಿರುವುದು ಚೆನ್ನಾಗಿ ನಿರೂಪಿತವಾಗಿದೆ.

ಓದುವಾಗ ಈ ಕಥೆಯನ್ನು ಆವರಿಸಿರುವುದು ನಾಯಿ ಚಂದ್ರ ನಾ ಅಥವಾ ಬಾಬಣ್ಣ ನಾ ಎಂದು ಅನಿಸುವುದು ಸಹಜ .ಇದಕ್ಕೆಲ್ಲ ಕಾರಣ ಮಗ ಅಗಸ್ತ್ಯ ಎನ್ನಬಹುದು.

ಕೆಲವು ಕಡೆ ಕಥೆಯ ಹದ ತಪ್ಪುತಿತ್ತು ಎನಿಸಿತು. ಅಷ್ಟು ಬಿಟ್ಟರೆ ಕುತೂಹಲಕರವಾಗಿ ಓದಿಸಿಕೊಳ್ಳುವ, ಒಂದೆರಡು ಗಂಟೆಗಳಲ್ಲಿ ಮುಗಿಸಬಹುದಾದ ಕೃತಿ.
Profile Image for Aadharsha Kundapura.
60 reviews
January 3, 2025
'ತೇಜಸ್ವಿಯಂತೆ, ನನ್ನಂತೆ
ನಾಯಿಮರಿಗಳನ್ನು ಹಾಗೂ ಪುಸ್ತಕಗಳನ್ನು
ತುಂಬ ಪ್ರೀತಿಸುವವರಿಗೆ'
ಪುಸ್ತಕ ತೆರೆಯುತ್ತಿದ್ದಂತೆ ಕಂಡ ಈ ಸಾಲುಗಳೇ ಸಾಕಿತ್ತು ನಾನು ಈ ಪುಸ್ತಕ ಓದಲು.
ಇನ್ನೇನು ಆತುರ‌ ಆತುರದಿಂದ ಶುರುಮಾಡಿದಂತೆ ಅಷ್ಟೇ ಬೇಗ ಮುಗಿದೇ ಹೋಯಿತು.
   ಇಲ್ಲಿ ನನಗೆ ಇಷ್ಟವಾಗಿದ್ದು ಮೂರು ವಿಷಯಗಳು, ಒಂದು ಬಾಬಣ್ಣ, ಇನ್ನೂಂದು ಚಂದ್ರ, ಮತ್ತೊಂದು ಕರಿಗುಡ್ಡ.
‌‌ ಜೀವನದಲ್ಲಿ ಸಂದರ್ಭಗಳೊಡ್ಡುವ ಅದೆಷ್ಟೋ ಪ್ರಶ್ನೆಗಳಿಗೆ ಎದೆವೊಡ್ಡಿ ನಿಲ್ಲುವ ಬಾಬಣ್ಣ ಈ ಕಾದಂಬರಿಯ ಕಥಾನಾಯಕನಾದರೆ ಬಾಬಣ್ಣನ ಸಾಕು ನಾಯಿಯಾದ ಚಂದ್ರನೂ ಕೂಡ ಇನ್ನೊಬ್ಬ ಬಹು ಮುಖ್ಯ ಕಥಾನಾಯಕ. ಹಾಗೆ ಇವರ ಜೀವನಕ್ಕೆ ಸಾಕ್ಷಿಯಾದ ಕರಿಗುಡ್ಡ ಮತ್ತೊಂದು ಕಥಾನಾಯಕ.
ಇದಲ್ಲದೆ‌ ಅಗಸ್ತ್ಯ, ಗೌಡ್ರು ಹಾಗೇ ಮೇಷ್ಟ್ರು ಪಾತ್ರಗಳಿಂದ ಕಥೆಗೆ ಇನ್ನಷ್ಟು ತೂಕ ಸಿಕ್ಕಿದೆ. ಕರಿಗುಡ್ಡದ ಸಂಪಿಗೆ ಮರ ಕಣ್ಕಟ್ಟಿದಂತಿದೆ. ಎಲ್ಲು ಬೇಸರವಾಗದಂತೆ ಮುಗಿಯುವ ಕಾದಂಬರಿ ಅಂತ್ಯದಲ್ಲಿ ತನ್ನ ಯಜಮಾನನಿಗೋಸ್ಕರ ಪ್ರಾಣ ತ್ಯಾಗ ಮಾಡಿದ ಚಂದ್ರ ಸದಾ ಬೇಸರದಿ ಕಾಡುವನು. ಕಾಡು, ಬೇಟೆ, ನಾಯಿ, ಪ್ರಕೃತಿ ಹಾಗೇ ರೋಚಕತೆ ಕತೆ ಉದ್ದಕ್ಕು ಇದೆ‌. ಒಂದು ಸಲ ಓದಬಹುದಾದ ಕಾದಂಬರಿ.
ಸ್ವಾರ್ಥ ಪ್ರಪಂಚದಲ್ಲಿ ಪ್ರಾಮಾಣಿಕ ಜೀವನ ಜೀವಿಸಿದ ಬಾಬಣ್ಣನ‌ ಜೀವನದಲ್ಲಾದ ದುರಂತಗಳು ಅವನ ಮನಸ್ಸಿನಲ್ಲಿ ಕಾಡ್ಗಿಚ್ಚಾಗಿ ಎಲ್ಲರನ್ನೂ ಸುಡುತ್ತದೆಯೇ??
‌ ಮುಂದಿನ ಭಾಗದಲ್ಲಿ ಉತ್ತರ ಸಿಗಬಹುದು...

ರೌದ್ರವರಣಂ
🖊ಅನಂತ ಕುಣಿಗಲ್
⭐⭐⭐⭐/5⭐
29 reviews1 follower
June 15, 2024
ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದಂತಹ ಪುಸ್ತಕ... ಅಷ್ಟು ತೀವ್ರತೆಯಲ್ಲಿ ಓದಿಸಿಕೊಂಡು ಹೋಗುತ್ತದೆ... ಬಾಬಣ್ಣ ಮತ್ತು ಅವನ ನಾಯಿ ಚಂದ್ರನ ಸುತ್ತ ಹೆಣೆದಿರುವ ಕತೆ... ಬಾಬಣ್ಣ ಅಪಾಯಕ್ಕೆ ಸಿಕ್ಕಿ ಹಾಕಿಕೊಂಡಾಗ ಚಂದ್ರ ಹೇಗೆ ಕಾಪಾಡುತ್ತಾನೆ ಎಂಬ ಅಂಶ ಇಷ್ಟ ಆಯಿತು...
Profile Image for Sanjota Purohit.
Author 3 books41 followers
January 5, 2025
ಕಾಡಿನೊಳಗಿರುವ ಹಲವು ವಿಸ್ಮಯಗಳ ಹಾಗೆಯೇ ಈ ಪುಟ್ಟ ಕಾದಂಬರಿಯಲ್ಲಿ ಬರುವ ಪಾತ್ರಗಳು, ಘಟನೆಗಳು, ಕರಿಗುಡ್ಡ, ಬಾಬಣ್ಣ, ಚಂದ್ರ ಎಲ್ಲವೂ ನಿಗೂಢಗಳ ಗುಚ್ಛ. ನಾಯಿ ಚಂದ್ರನನ್ನು ತನ್ನ ಸಂಗಾತಿಯಾಗಿಸಿಕೊಂಡು ಒಂಟಿ ಜೀವನ ಕಳೆಯುತ್ತಿರುವ ಬಾಬಣ್ಣನ ಬದುಕಿನಲ್ಲಿ ಪುಟ್ಟ ಮಗುವೊಂದು ಅವತರಿಸಿ ಹಲವು ವಿಕ್ಷಿಪ್ತಗಳಿಗೆ ಕಾರಣವಾಗುತ್ತದೆ. ಆ ಮಗುವನ್ನು ಉಳಿಸಿಕೊಳ್ಳುವ ಹೋರಾಟವೇ ಈ ರೌದ್ರಾವರಣಂ ಎನ್ನಿಸಿದರೂ ಸಣ್ಣ ಹಳ್ಳಿಯಲ್ಲಿ ನಡೆಯಬಹುದಾದ ಹಲವು ಸಂಗತಿಗಳನ್ನು ಒಂದಕ್ಕೊಂದು ಹೊಸೆದು ಇಡೀ ಕಥಾನಕವನ್ನು ಕಟ್ಟಿರುವುದರಿಂದ ಇದು ಒಂದು ನಾಯಿಯ ಕಥೆ ಅಥವಾ ಬಾಬಣ್ಣನ ಕಥೆ ಎಂದು ಹೇಳಲಾಗುವುದಿಲ್ಲ.

ಒಂದೆರಡು ತಾಸುಗಳಲ್ಲಿ ಮುಗಿಸಬಹುದಾದ ಕಾದಂಬರಿಗೆ ವೇಗದ ಓದಿನ ಗತಿ ಬರಲು ಕಾರಣ ಲೇಖಕರ ನಿರೂಪಣೆಯ ಶೈಲಿ. ಕಣ್ಣಿಗೆ ಕಟ್ಟುವ ಹಾಗೆ ದೃಶ್ಯಗಳನ್ನು ಚಿತ್ರಿಸಿದ್ದರಿಂದ ದಟ್ಟ ಕಾಡಿನೊಳಗೆ ಹೊಕ್ಕಂತಹ ಅನುಭವವಾಗುತ್ತದೆ. ಸಾಹಿತ್ಯದ ಬಗ್ಗೆ ಅನಂತ್ ಅವರಿಗಿರುವ ಉತ್ಸಾಹ ಪ್ರಶಂಸನೀಯ.
Profile Image for Kanarese.
136 reviews19 followers
March 21, 2023
"Roudravataram"
This novel, influenced by Tejaswi and Anush Shetty, doesn't offer much to discuss. Although some parts sparked my interest, the story primarily revolves around the recurring theme of caste oppression. Some characters exhibit heroism at times but then become directionless later on. This book is the first installment, and the conclusion is relatively Okay!!. Overall, it's a decent one-time read.
Displaying 1 - 5 of 5 reviews

Can't find what you're looking for?

Get help and learn more about the design.