Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
ನೀವು ಎಲ್ಲಾದ್ರೂ ಊಟಕ್ಕೆ ಹೋದ್ರೆ, ಅಲ್ಲಿ ಎಷ್ಟೇ ಮೃಷ್ಟಾನ್ನ ಭೋಜನ ಮಾಡಿದರೂ, ಆ ಊಟ ಸಂಪೂರ್ಣವಾಗುವದಕ್ಕೆ ಒಂದು ಸಣ್ಣ ತಿನಿಸು ಬೇಡುತ್ತದೆ ಉದಾ: ಬಾಳೆಹಣ್ಣು, ಸಿಹಿ ತಿನಿಸು ಹೀಗೆ. ಆ ತಿನಿಸು ತಿಂದರಷ್ಟೇ ನಮಗೆ ಒಂದು ಸಂತೃಪ್ತಿ. ಅದೇ ರೀತಿ ನನಗೆ ಗಣೇಶಯ್ಯರ ಕೃತಿಗಳು. ಎಷ್ಟೇ ಪುಸ್ತಕಗಳು ಓದಿದರೂ, ಅವರ ಪುಸ್ತಕ ವರ್ಷದಲ್ಲಿ ಒಮ್ಮೆ ಓದದಿದ್ದರೆ ನನ್ನ ಓದು ಪೂರ್ಣಗೊಳ್ಳುವುದಿಲ್ಲ.
ಗಣೇಶಯ್ಯರ ಈ ಕೃತಿ ಅವರ ಹಿಂದಿನ ಕೃತಿಗಳಿಗಿಂತ ಕೊಂಚ ಭಿನ್ನ ವಸ್ತು ಮತ್ತು ತಿಕ್ಷ್ಣ ವಸ್ತು. 3000 ವರ್ಷಗಳ ಬೃಹತ್ ಇತಿಹಾಸ ಸಾರುವ ಈ ಕೃತಿ ಯಾವುದೇ ಸಂಸ್ಥಾನದ ಅಳಿವು ಉಳಿವನ್ನು ಹೇಳದೇ ಧರ್ಮ ವರ್ಣಗಳ ಉಗಮ ಮತ್ತು ಆಹಾರ ಪದ್ಧತಿಗಳ ಹೊರಳುವಿಕೆಯನ್ನಷ್ಟೇ ತೆರೆದು ಕೊಡುತ್ತದೆ. ಗಣೇಶಯ್ಯರ ಈ ವರೆಗಿನ ಪುಸ್ತಕಗಳಿಗೆ ಹೋಲಿಸಿ ನೋಡಿದರೆ ಈ ಪುಸ್ತಕದ ಬರವಣಿಗೆ ಕಳಪೆ ಅನ್ನಿಸುತ್ತದೆ.
ಮತ್ತದೇ ತಂತ್ರ, ಮತ್ತದೇ ಅಟ್ಯಾಕ್, ಮತ್ತದೇ ಯಾವುದೋ ಸಂಸ್ಥೆ, ಮತ್ತದೇ ನಾಯಕಿ ಸಹಾಯ ಮಾಡುವುದು, ಮತ್ತದೇ ಕಳವು, ಇವೆಲ್ಲವನ್ನೂ ನಾವೇ ಊಹಿಸಬಹುದು. ಬಹಳ ಬೇಸರ ತರಿಸಿದ ಪುಸ್ತಕ, ಮತ್ತು ಲೇಖಕರು ನಮಗೆ ಗುರುವಿನ ಸಮವಾಗಿರುತ್ತಾರೆ, ಅವರು ಓದುಗರಿಗೆ ತನ್ನ ನಿಲುವೇ ಸರಿ, ತನ್ನ ಸಿದ್ಧಾಂತವೇ ಸರಿಯೆಂದು ಒತ್ತಿ ಒತ್ತಿ ಹೇಳುವುದು ಯಾಕೋ ಸರಿ ಕಾಣಲಿಲ್ಲ. ಗಣೇಶಯ್ಯರಂತ ಲೇಖಕರು ಈ ರೀತಿ ರೂಪಾಂತರ ಗೊಂಡಿರುವುದು ಬೇಸರವಾಗಿದೆ. ನನ್ನ ಮಟ್ಟಿಗೆ ಇದು ಸೋಲು. ಮುಂದೆ ಒಳ್ಳೆಯ ಕೃತಿಗಳು ಅವರಿಂದ ಸೃಷ್ಟಿಯಾಗುತ್ತದೆ ಎಂಬ ಭರವಸೆಯಲ್ಲಿ ಅವರ ಮುಂದಿನ ಕೃತಿಯ ಬಿಡುಗಡೆಗೆ ಎಂದಿನಂತೆ ಕಾಯುತ್ತೇನೆ
ಕ್ರಿಸ್ತ ಪೂರ್ವ ೧೧೦೦ ರಲ್ಲಿ ಅಂದರೆ ಸುಮಾರು ೩೦೦೦ ವರ್ಷಗಳ ಹಿಂದೆ ಭಾರತದ ದಕ್ಷಿಣ ಭಾಗದಲ್ಲಿ ಬುಡಕಟ್ಟು ಗುಂಪುಗಳು ತಮ್ಮದೆ ತಾತ್ಕಾಲಿಕವಾದ ಪೋಡುಗಳನ್ನು ನಿರ್ಮಿಸಿಕೊಂಡು ಅಲ್ಲಿನ ಕಾಡಿನ ಸಂಪನ್ಮೂಲಗಳನ್ನು ಬಳಸಿಕೊಂಡು, ನಿರ್ದಿಷ್ಟವಾಗಿ ತಮ್ಮದೇ ಒಂದು ನೈಸರ್ಗಿಕ ದೇವರನ್ನು ಪೂಜೆಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸುತ್ತಮುತ್ತಲಿನ ವನ್ಯ ಸಂಪನ್ಮೂಲಗಳು ಖಾಲಿಯಾದ ತಕ್ಷಣ ಬೇರೊಂದು ಪ್ರದೇಶಕ್ಕೆ ವಲಸೆ ಹೋಗುವ ಅಲೆಮಾರಿಗಳು ಇವರು. ಯಾವುದೇ ವರ್ಣ, ಜಾತಿ ಬೇಧ ವಿಕಾಸ ಹೊಂದಿರದ ಕಾಲವದು. ಬೇಟೆಯಾಡುವ ಇವರು ಪ್ರಮುಖವಾಗಿ ಮಾಂಸಹಾರ ಅವಲಂಬಿಸಿದ್ದರು. ಆಡಳಿತಾತ್ಮಕವಾಗಿ ಬೇರೆ ಬೇರೆ ಪೋಡುಗಳ ಜೊತೆ ಮನಸ್ತಾಪಗಳು, ಗಲಾಟೆಗಳಿದ್ದರು ಜಾತಿ, ವರ್ಣಬೇಧಗಳಿರಲಿಲ್ಲ. ಜಾತಿ, ವರ್ಣ ಬೇಧಗಳ ಬೀಜ ಇವರ ತಲೆಯಲ್ಲಿ ಬಿತ್ತಿದವರಾರು? ಒಂದೇ ದೇವರು ಹಾಗು ಸಂಸ್ಕೃತಿಗಳ ನಡುವೆ ವಿವಿಧತೆಯನ್ನು ತಂದು ಆಯ್ಕೆಗಳ ನಡುವೆ ಮನುಷ್ಯನನ್ನು ಸಿಲುಕಿಸಿದವರಾರು? ಮಾನವನ ವಿಕಾಸದಲ್ಲಿ ಇದೊಂದು ಮಹತ್ತರ ಘಟ್ಟ. ಈ ಬದಲಾವಣಿಯು ಜಾಗತಿಕವಾಗಿ ಈವಾಗಲು ಹಲವಾರು ಗಲಭೆಗಳಿಗೆ ನಾಂದಿ ಹಾಡಿದೆ. ಇದಲ್ಲದೆ ಮಾಂಸಹಾರಿಯಾಗಿರುವ ಮಾನವ, ಸಸ್ಯಹಾರವನ್ನು ಏಕೆ ಆರಿಸಿಕೊಂಡ? ಇದರಿಂದ ಜಾಗತಿಕವಾಗಿ ಆಗುತ್ತಿರುವ ಸಮಸ್ಯೆಗಳೇನು? ಎಲ್ಲವನ್ನು ಲೇಖಕರು ಪುರಾವೆಗಳ ಸಹಿತ ವಿವರಿಸಿದ್ದಾರೆ. 6.5/10 ⭐
Paperback ಅಲ್ಲಿ ಈ ಪುಸ್ತಕ ಬಂದ್ರೆ ಖರೀದಿ ಮಾಡುವ ಅಂತ ಸುಮ್ನೆ ಇದ್ದೆ. ಆದರೆ ಗಣೇಶಯ್ಯನವರ ಬರಹದ ಮೇಲಿನ addiction hardbound ಕಾಪಿಯನ್ನೇ ಖರೀದಿ ಮಾಡುವ ಹಾಗೆ ಮಾಡ್ತು!
ಎಂದಿನಂತೆ, ಈ ಸಲವೂ ಒಂದು ವಿಭಿನ್ನವಾದ concept ಇಟ್ಟುಕೊಂಡ ಗಣೇಶಯ್ಯನವರು ಈ ಪುಸ್ತಕ ಬರೆದಿದ್ದಾರೆ. ಇಲ್ಲಿ ಪ್ರಸ್ತುತ ಕಾಲಘಟ್ಟದಿಂದ ಮೂರು ಸಾವಿರ ವರ್ಷಗಳಷ್ಟು ಹಿಂದೆ ಹೋಗಿರುವರು, ಅಷ್ಟೇ! ಪ್ರತಿಸಲವೂ ಗಣೇಶಯ್ಯನವರ ಪುಸ್ತಕಗಳನ್ನ ಓದುವಾಗಲೂ ಮೂಡುವ ಕುತೂಹಲ, ರೋಚಕತೆಗಳನ್ನ ಈ ಪುಸ್ತಕದಲ್ಲಿಯೂ ಅನುಭವಿಸಬಹುದು. ಮದ್ಯೆ ಮದ್ಯೆ ಚಿತ್ರಗಳನ್ನ ಹಾಕಿ ಪುಟಗಳನ್ನ ಸುಮ್ಮನೆ ವೆಚ್ಚ ಮಾಡಲಾಗಿದೆ ಅಂತ ಅನ್ನಿಸಿದ್ದರಿಂದ, Hardcover ಬೇಡವಾಗಿತ್ತು! ಮತ್ತು ನಾನು ಎಂದಿನಂತೆಯೇ ಎಷ್ಟೇ ವೇಗವಾಗಿ ಓದಲು ಪ್ರಯತ್ನಿಸಿದರೂ, ಅವರ ಉಳಿದೆಲ್ಲಾ ಕಾದಂಬರಿಗಳಿಗಿಂತ ಈ ಕಾದಂಬರಿ ಸ್ವಲ್ಪ ನೀರಸವಾಗಿ ಸಾಗಿತು ಅಂತ ಅನ್ನಿಸಿತು. ಅದು ಕಾದಂಬರಿಯ ಒಳಗೆ ಇನ್ನೊಂದು ಕಾದಂಬರಿ ಬಂದಿದ್ದರಿಂದಲೂ ಇರಬಹುದು!
ಅದೇನೇ ಇದ್ದರೂ ಕೂಡ ಗಣೇಶಯ್ಯನವರ ಪುಸ್ತಕಗಳ perspective ವಿಶಿಷ್ಟವಾಗಿರುತ್ವೆ. ಕೆಲವೊಮ್ಮೆ ಕೆಲವು ಸಂಗತಿಗಳಲ್ಲಿನ ನನ್ನ perspective ಅನ್ನೂ ಬದಲಾಯಿಸಿದುವು ಅಂತ ಹೇಳಬಹುದು. ಅವರ ಪುಸ್ತಕಗಳಲ್ಲಿ ಎಂದಿನಂತೆಯೇ strong opinion ಗಳಿರುತ್ವೆ. ಅದನ್ನ ಸ್ವೀಕರಿಸುವುದು secondary. ಮೆದುಳಿಗೆ ಮೇವು ಹೋಗುವುದಂತೂ ಕಂಡಿತ!
ಈ ಇತಿಹಾಸ ಎಷ್ಟು unclear ಆಗಿರುತ್ತೆ ಅಲ್ಲವೇ? ಈ recorded historyನೇ ತೆಗೆದುಕೊಂಡರೆ, ಅದು ಜಯಶೀಲರಾದ ದೃಷ್ಟಿಯಿಂದ, ಕಥೆಗಾರರ ದೃಷ್ಟಿಯಿಂದ ಮತ್ತು ಈಗಿನ political ದೃಷ್ಟಿಯ ಭಿನ್ನತೆಯಿಂದ filter ಆಗಿ ನಮ್ಮ ಕೈ ಸೇರಿರುತ್ತೆ. ಅದೇ, ಲಿಪಿಗಳಿಲ್ಲದ ಸಮಯದಲ್ಲಿ, ನಮ್ಮ ದಕ್ಷಿಣ ಭಾರತದ ಜನಜೀವನ ಸಮಾಜ ಹೇಗಿದ್ದೀರಬಹುದು? ಅವರ ಆಹಾರ ಪದ್ಧತಿಗಳೇನಿರಬಹುದು? ವ್ಯಾಪಾರ ವ್ಯವಹಾರಗಳು ಹೇಗಿದ್ದೀರಬಹುದು? ಅವರ ಉಡುಗೆ ತೊಡುಗೆಗಳು ಎಷ್ಟು ಭಿನ್ನವಾಗಿ ಇದ್ದಿರಬಹುದು? ದೇವರ ಕಲ್ಪನೆ ಹೇಗಿದ್ದೀರಬಹುದು? ಸನಾತನ ಪದ್ಧತಿ ಹೇಗೆ ಹರಡಿರಬಹುದು? ವರ್ಣ ತಾರತಮ್ಯ ಧರ್ಮಗಳು ಹೇಗೆ ಬೆಳೆದು ಬಂದಿರಬಹುದು? ತಮ್ಮ ಪುಸ್ತಕದಲ್ಲಿ, ಈ ಎಲ್ಲಾ ವಿಷಯಗಳಿಗೆ ಗಣೇಶಯ್ಯನವರು ಕಾಲಯಾನ ಮಾಡಿಸುತ್ತಾ, ತಮ್ಮ ಅಭಿಪ್ರಾಯಗಳನ್ನ ನೀಡುತ್ತಾ ಹೋಗುವರು!
' ಡಾನ್ ಬ್ರೌನ್' ಎಂಬ ಕಾದಂಬರಿಕಾರ ಒಳ್ಳೆ ಥ್ರಿಲ್ಲರ್ ಕಾದಂಬರಿಗಳ ಬರೆಯುತ್ತಿದ್ದ. ಸಣ್ಣ ಸಣ್ಣ ಅಧ್ಯಾಯಗಳು. ಉಸಿರು ಬಿಗಿಹಿಡಿವ ಸನ್ನಿವೇಶಗಳು. ಒಂದೇ ಅಧ್ಯಾಯ ಸಾಕು ಇವತ್ತಿಗೆ ಅಂತ ಕೂತವರು ಇಡೀ ಪುಸ್ತಕ ಮುಗಿಸುವ ಹಾಗೆ. Digital fortress ಈಗಲೂ ನನ್ನ ನೆಚ್ಚಿನ ಥ್ರಿಲ್ಲರ್‌ಗಳಲ್ಲಿ ಒಂದು. ಅವನ angels and demons ಕೂಡ. ಆದರೆ davinci code ಬಂತು ನೋಡಿ. ಅದು ಎಬ್ಬಿಸಿದ ಅಲೆ, ಪ್ರಸಿದ್ಧಿ ಆಮೇಲೆ ಇಲ್ಲದ ಕಡೆ ಹುಡುಕಿಕೊಂಡು ಹೋಗುವ ಹಾಗಿನ ಬರಹಗಳು. ಒಂದೇ ತರ. ಅದರ ನಂತರದ ಯಾವುದೂ ಆಸಕ್ತಿ ಹುಟ್ಟಿಸಲಿಲ್ಲ. Inferno ಆಗಲಿ,origin ಆಗಲಿ.
ಹಾಗೆಯೇ ಗಣೇಶಯ್ಯನವರದು ಅದೇ ಶೈಲಿ. ಇತಿಹಾಸದ ಒಂದು ಸತ್ಯ ಹೇಳಲು ಅಥವಾ ಒಂದು ಥಿಯರಿ ಸಾಬೀತುಪಡಿಸಲು ಅವರು ಕಟ್ಟುವ ಕಥೆ ಓದುಗನ ಸುಸ್ತು ಮಾಡಿಸುತ್ತಿತ್ತು. 'ಸಸ್ಯ ಸಗ್ಗ' ದಂತಹ ಪುಸ್ತಕಗಳು ಬೇಕು. ಕಾದಂಬರಿ ಅಲ್ಲ ಅನಿಸುವ ಹಾಗೆ. ಹಾಗಾಗಿಯೇ ಇದನ್ನು ಓದಲು ತಡ ಮಾಡಿದೆ.
ಇದು ಕೂಡ ಹಾಗೆಯೇ ಕೊನೆಯ ನಲವತ್ತು ಪುಟಗಳಲ್ಲಿ ಬರುವ 'ಮಾಂಸಹಾರದ ಸೇವನೆಯ ದುಷ್ಪರಿಣಾಮಗಳು' ಎಂಬ ಸತ್ಯ ಬಗೆಯಲು ಓದುಗ ಉಳಿದ ಇಡೀ ಕಾದಂಬರಿ ಓದಬೇಕು.
ಕಥೆ ಚೆನ್ನಾಗಿದೆ. ಆದರೆ ಓದಲು ತ್ರಾಸ.
ಎಂದಿನಂತೆ ರಹಸ್ಯ, ನಿಗೂಢತೆ ,ಬೆನ್ನಟ್ಟಿದವರು, ಹುಡುಕಾಟ ನಡೆಸಿದವರು ಹೀಗೆ ಕಥೆ ಸಾಗುತ್ತದೆ.
ಡಾ || ಕೆ. ಎನ್ ಗಣೇಶಯ್ಯ ಅವರ ಚೌಕಟ್ಟು- ಯಾವದೋ ರಹಸ್ಯ ಭೇದಿಸಲು ಹತ್ಯೆ, ಸಂಚು, ಸಂಶೋಧನೆ. ಈ ಚೌಕಟ್ಟಿನಲ್ಲಿ ಇತಿಹಾಸದ ಪುಟಗಳನ್ನ ಸೃಜನಾತ್ಮಕವಾಗಿ ಬೆರೆಸಿ, ಕಾದಂಬರಿ ಒಳಗೆ ಕಾದಂಬರಿ ಸೇರಿಸಿ ಪುಟಗಳನ್ನ ಓದಿಸಿಕೊಂಡು ಹೋಗುವ ವಿಶೇಷ ಕಾದಂಬರಿ ಕಾನನ ಜನಾರ್ದನ
ಕ್ರಿ. ಪೂ 1100 ರ ಸುಮಾರಿಗೆ ದಕ್ಷಿಣ ಭಾರತದಲ್ಲಿ ಮನುಷ್ಯರ ವಾಸ, ಸಂಸ್ಕೃತಿ, ಸಂಪ್ರದಾಯ ಹಾಗೂ ಅವರು ಹೊರ ಪ್ರಪಂಚದೊಡನೆ ಇಟ್ಟುಕೊಂಡಿದ್ದ ವ್ಯಾಪಾರ ಸಂಬಂಧ -ಮುಖ್ಯವಾಗಿ ಈ ಸಂಸ್ಕೃತಿ ಉತ್ತರ ಭಾರತದ ಸಂಸ್ಕೃತಿಯ ಜೊತೆ ಆದ ಸಂಕರದಿಂದ ವರ್ಣ ವ್ಯವಸ್ಥೆ ದಕ್ಷಿಣ ಭಾರತದಲ್ಲಿ ಹರಡಿರಬಹುದು ಎನ್ನುವ ತಾರ್ಕಿಕ ವಾದ ಮತ್ತು ನಮ್ಮ ಸಮಾಜದ ಆಹಾರ ಪದ್ಧತಿ ಮುಖ್ಯವಾಗಿ ಸಸ್ಯಾಹಾರ /ಮಾಂಸಹಾರ ಹೇಗೆ ಈ ವರ್ಣ ವ್ಯವಸ್ಥೆಯಿಂದ derive ಆಗಿರಬಹುದು, ಹಸುವಿನ ಪ್ರಮುಖ್ಯತೆಗೆ ಕಾರಣ ಎನ್ನುವ "ಹೌದು ಹೀಗೆ ಆಗಿರಬಹುದು " ಎಂದು ಅನ್ನಿಸುವ ಕೊತೂಹಲಕಾರಿ ಊಹೆ ; ಜನರು ಕಾನನದಲ್ಲಿ ಪೋಡಿಗಳಲ್ಲಿ ವಾಸಿಸುವುದು, Shifting Cultivation ಅನುಸರಿಸುವುದು, ದೇವರ ಕಾಡು ಎಂಬ ಪೂಜೆನೀಯ ಸ್ಥಳ, ಸತ್ತವರಿಗೆ ಕಟ್ಟಿಸುವ ಕಲ್ಮನೆ ಗಳು ( Dolmens), ಅದರ ಸುತ್ತ ಕಲ್ಲುಗಳನ್ನ ಜೋಡಿಸಿ ನಿರ್ಮಿಸುವ ಸೂರ್ಯಜಾಡು ( Astronomical observatory), ಸಮುದ್ರ ವ್ಯಾಪಾರ, ದೇವರು ಮತ್ತು ದೇವರಪೂಜಾವಿಧಾನ ದಲ್ಲಿ ಉಂಟಾಗುವ ಘರ್ಷಣೆ -ಹೀಗೆ ಮಹಾಶಿಲಾಯುಗ (Megalithic Age) ದ ಕಾಲಮಾನದಲ್ಲಿ ಇದ್ದಿರಬಹುದಾದ ದಕ್ಷಿಣ ಭಾರತದ ಸಾಮಾಜಿಕ ಚಿತ್ರಣ ಇಲ್ಲಿ ಮೂಡಿಬಂದಿದೆ- ಕಾದಂಬರಿಯ ರೂಪದಲ್ಲಿ ಒಂದು ಕಾದಂಬರಿಯ ಒಳಗೆ!.
ಕರ್ನಾಟಕದಲ್ಲಿ ಎಷ್ಟೊಂದು Megalithic Sites ಪತ್ತೆಯಾಗಿವೆ - ಅವನ್ನೆಲ್ಲ ನೋಡಬೇಕೆನ್ನುವ ಆಸಕ್ತಿ ಹುಟ್ಟಿಸಿದ ಗಣೇಶಯ್ಯ ನವರಿಗೆ ಧನ್ಯವಾದಗಳು.
K.N.Ganeshaiah is the Dan Brown of Kannada Historical fiction. As Dan brown books, his books also follow very formulaic in story telling. But each time the story exposes us to new interesting historical discoveries happening around us.
I always amazed to find the number of new Historical discoveries that are happening in India and how they are changing the age old narratives. I am thankful for the author for exposing the reader to these findings.
In this book i felt the mystery and story is pretty weak. It felt like they were after thought compared to historical research. It could have been smaller book as it's streches quite a bit in some places.
If you like to understand the new Historical discoveries happening in India particularly in south India this book is for you.
ಸಾಮಾನ್ಯವಾಗಿ ಗಣೇಶಯ್ಯನವರ ಕಾದಂಬರಿಗಳು ಎಂದರೆ ರೋಚಕತೆಗಳ ನಡುವೆ ಕತೆಯ ಎಳೆ ತುಂಡಾಗಿ ಮತ್ತೆಲ್ಲೋ ಹೊಸೆದುಕೊಂಡು ಮುಂದುವರಿದು ಗೊಂದಲವಾಗುತ್ತದೆ ಎನ್ನುವ ಹಿಂಜರಿಕೆ! ಆದರೂ ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ಯೂಟ್ಯೂಬ್ ನಲ್ಲಿ ನೋಡಿ ಅಲ್ಲಿ ಅತಿಥಿಗಳು ಈ ಪುಸ್ತಕದ ವಿಷಯದ ಮೇಲೆ ಮಾತನಾಡಿದ್ದು ಇದನ್ನು ಓದಲು ಪ್ರೇರೇಪಿಸಿತು. ಮೊದಲೇ ಹೇಳಿದ ಹಾಗಿನ ಗಣೇಶಯ್ಯನವರ ಕಾದಂಬರಿಗಳಲ್ಲಿನ ಎಂದಿನ ಅತಿರೋಚಕತೆ ಇದರಲ್ಲಿ ಸ್ವಲ್ಪ ಕಡಿಮೆ ಎನ್ನಿಸಿತು.
ಕಾದಂಬರಿಯ ಒಳಗೊಂದು ಕಾದಂಬರಿ, ಮಾಂಸಾಹಾರದ ಪರಿಣಾಮದ ವಿಷಯದಿಂದ ಶುರುವಾಗಿ, 3000 ವರ್ಷಗಳ ಹಿಂದಕ್ಕೆ ಹೋಗಿ, ಅಂದಿನ ದಕ್ಷಿಣದ ದೇವರುಗಳು, ಜನಜೀವನ, ಉತ್ತರದಿಂದ ವಲಸೆ ಬಂದ ದೇವರುಗಳು ಮತ್ತು ದಕ್ಷಿಣದ ಆಧ್ಯಾತ್ಮದ ಮೇಲೆ ಅವುಗಳ ಪ್ರಭಾವ, ಶಿಲಾಯುಗ, ವರ್ಣ ವ್ಯವಸ್ಥೆ ಇತ್ಯಾದಿ ವಿಷಯಗಳೆಂಬ 'ಕೊಂಕಣಗ'ಳನ್ನು ಸುತ್ತಿ ಕೊನೆಗೆ ಮಾಂಸಾಹಾರದ ಪರಿಣಾಮಗಳೆಂಬ 'ಮೈಲಾರ'ಕ್ಕೆ ಬಂದು ನಿಲ್ಲುತ್ತದೆ.
Kanana Janardhan is the book which was written mainly on vegetarianism and it also tells the reasons of different food habits in different varnas in India. Many times Dr K N GANESHAIAH writes about the treasure and it's hunt. But this novel is completely different compared to previous once. You will learn many things from this novel.
K N Ganeshaiah at his best. He effortlessy weaves a plausible story around the growth of caste system in India. He explains it was a natural development which took place over a period of hundred of years.
Kanana Janardhan is a story related to our ancestors their culture and how the circumstances changed them. Most of the story takes place in imaginary town and the forest.