Jump to ratings and reviews
Rate this book

ಉತ್ತರ

Rate this book

272 pages, Unknown Binding

Published January 1, 2022

20 people want to read

About the author

Supreeth K.N.

6 books2 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
12 (85%)
4 stars
2 (14%)
3 stars
0 (0%)
2 stars
0 (0%)
1 star
0 (0%)
Displaying 1 - 9 of 9 reviews
Profile Image for That dorky lady.
375 reviews73 followers
November 26, 2022
ಮೊದಲ ಓದಿನ ನಂತರ -
ಗೆಳೆಯ ಪ್ರಶಾಂತ ಸಾಗರ ಪ್ರತಿದಿನ ಹಂಚಿಕೊಳ್ಳುವ ಸಾಹಿತ್ಯದ ಸಾಲುಗಳಲ್ಲಿ ಈ ಪುಸ್ತಕ ಪರಿಚಯವಾಗಿ ಓದಲು ಮನಸಾಗಿದ್ದರಿಂದ ಮೊದಲು ಅವರಿಗೆ ಧನ್ಯವಾದ ಹೇಳಬೇಕು.
ಪುಸ್ತಕದ ಬಗ್ಗೆ ಏನು ಬರೆಯಲಿ ಅಂತ ಯೋಚಿಸಿದಷ್ಟೂ ತಲೆ ಖಾಲಿ. ಓದುವಾಗಿನ ಅನುಭವ ವಿವರಿಸಲು ಪದಗಳಿಲ್ಲ. ಅಬ್ಬಾ! ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟೀವಿ ಸೆಳೆತ ಮರೆಸಿ ಗಾಢವಾಗಿ ಆವರಿಸಿದ ಅತಿ ಕಡಿಮೆ ಕಾದಂಬರಿಗಳಲ್ಲಿ ಇದೂ ಒಂದು ಅಂತ ಮಾತ್ರ ಹೇಳಬಲ್ಲೆ. ಸ್ವಲ್ಪಮಟ್ಟಿಗೆ ಆಧ್ಯಾತ್ಮಿಕ, ಧಾರ್ಮಿಕ ವಾತಾವರಣದಲ್ಲಿರುವವರಿಗೆ ಓದು, ಸ್ವೀಕೃತಿ ಸರಾಗ ಅನಿಸುವಂಥ ಕಥೆ. ನನಗೆ ಬಹಳವೇ ಇಷ್ಟವಾಯ್ತು. ಓದುತ್ತಾ ಓದುತ್ತಾ ಇಷ್ಟವಾದ ಸಾಲುಗಳನ್ನು ವಾಟ್ಸಪ್, instastoryಯಲ್ಲಿ ಹಂಚುತ್ತಿದ್ದದ್ದನ್ನ ನೋಡಿ 'ನಮಗೂ ಓದ್ಲಿಕ್ಕೆ ಸ್ವಲ್ಪ ಉಳಿಸು ಮಾರಾಯ್ತೀ, ಪುರ್ತಿ ಸಾರ ನೀನೇ ಸಾರಿಬಿಡಬೇಡ' ಅಂತ ಗೆಳೆಯರು ಕಾಲೆಳೆದಾಗ್ಲೇ ಈ ಪುಸ್ತಕದ ವಿಚಾರದಲ್ಲಿ ನನ್ನ ಅತೀ ಉತ್ಸಾಹ ನನ್ನ ಗಮನಕ್ಕೆ ಬಂದಿದ್ದು 😃
ನವೆಂಬರ್ ಮಾಸದ ಕನ್ನಡ ಸಂಭ್ರಮದ ಸಲುವಾಗಿ ಒಂದಿಬ್ಬರು ಆಪ್ತರಿಗೆ ಇದನ್ನು ಉಡುಗೊರೆಯಾಗೂ ಕೊಟ್ಟಿರುವೆ. ಕಥೆ, ಕಥೆಯ ಹಿಂದಿನ ತತ್ವ ಬಹಳವೇ ಯೋಚನೆಗೆ ಹಚ್ಚುವಂತವು. ಆದರೆ ಯಾರಿಗಾದ್ರು ರೆಕಮೆಂಡ್ ಮಾಡೋ ಮೊದಲು ಯೋಚಿಸಬೇಕಾದೀತು;ಇದು ಎಲ್ಲರಿಗೂ ಸೇರುವಂತಾ ಕಥೆಯಲ್ಲ ಅನ್ನಿಸ್ತಿದೆ.
ಇದನ್ನು ಓದಿದ ನಂತರ ಸುಪ್ರೀತರ ಇತರ ಕಾದಂಬರಿಗಳನ್ನೂ ಓದುವ ಮನಸ್ಸಾಗಿದೆ,ನೋಡುವ...
___________

ಮನಸ್ಸು ತುಂಬಾ ಆಟ ಆಡಿಸುತ್ತೆ. ನಾನು ಎಲ್ಲರಿಗಿಂತಲೂ ಉತ್ತಮನಾಗ್ತಿದೀನಿ ಅನ್ನೋ ಅಹಂ ಭಾವ ಮೂಡಿಸ್ತಾನೇ ಇರುತ್ತೆ. ಇಡೀ ಬ್ರಹ್ಮಾಂಡದಲ್ಲಿ ಸಾಕಷ್ಟು ನಕ್ಷತ್ರಗಳಿವೆ. ಆ ಎಲ್ಲಾ ನಕ್ಷತ್ರಗಳು, ಅದರ ಸುತ್ತಾ ಇರೋ ಗ್ರಹಗಳು; ಈ ಬ್ರಹ್ಮಾಂಡದಲ್ಲಿ ಧೂಳಿನ ಕಣಕ್ಕೆ ಸಮ. ಅವುಗಳೇ ಧೂಳಿನ ಕಣಕ್ಕೆ ಸಮನಾದ ಮೇಲೆ ಇನ್ನು ಈ ದೇಶ, ಈ ಊರು, ಆ ಧೂಳಿನಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾದ ಕಣ. ಆದರೆ ಇಲ್ಲಿ ವಾಸ ಮಾಡೋ ನಾವು ಮಾತ್ರ ತುಂಬಾ ದೊಡ್ಡ ಮನುಷ್ಯ ಅನ್ನೋ ಭ್ರಮೇಲಿ ಇದ್ದೀವಿ. ನಾವು ಕೂಡ ಧೂಳಿನ ಕಣ ಅನ್ನೋ ಅರಿವಾದಾಗಲೇ ನಾವು ಬ್ರಹ್ಮಾಂಡದಲ್ಲಿ ಕರಗಿ ಹೋಗೋಕೆ ಸಾಧ್ಯ. ಅಧ್ಯಾತ್ಮ ಸಾಧನೆ ಮಾಡಬೇಕಿರೋದು ನಾವು ಎಲ್ಲರಿಗಿಂತ ಎತ್ತರವಾಗೋಕಲ್ಲ, ನಾನು ಧೂಳಿನ ಕಣ ಅನ್ನೋದು ಅರಿವಾಗಿ ಕರಗಿ ಹೋಗೋಕೆ.
- ಪುಸ್ತಕದಿಂದ
Profile Image for Prashanth Bhat.
2,157 reviews140 followers
April 9, 2022
ಉತ್ತರ - ಸುಪ್ರೀತ್ ಕೆ ಎನ್.

ಈ ಪುಸ್ತಕ ಓದಲು ಗೆಳೆಯ ಪ್ರಶಾಂತ ಸಾಗರ ಅವರೇ ಕಾರಣ. ಅವರು ಒಂದು ದಿನವೂ ತಪ್ಪದ ಹಾಗೆ ಪುಸ್ತಕಗಳ ಆಯ್ದ ಸಾಲುಗಳ ವಾಟ್ಸಪ್ ಮೆಸೇಜ್ ಆಗಿ ಕಳಿಸುತ್ತಾರೆ.ಈ ರೀತಿಯಾಗಿ ಅವರು ಹಲ ಗೆಳೆಯರಿಗೆ ಮಾರುತ್ತರದ ನಿರೀಕ್ಷೆ ಕೂಡ ಇಲ್ಲದೆ ಮಾಡುತ್ತಾ ಬಂದಿದ್ದಾರೆ. ಅವರ ಈ ಅಭ್ಯಾಸದಿಂದ ಹಲವಾರು ಉತ್ತಮ ಕೃತಿಗಳ ಓದುವ ಭಾಗ್ಯ ದೊರಕಿದೆ.

ಸುಪ್ರೀತರ ಆರಂಭದ ಕೃತಿ ' ಕಾದಂಬರಿ(!?)' ನನಗೆ ಖುಷಿ ಕೊಟ್ಟಿತು. ಯೌವನದ ಹಳವಂಡಗಳ, ಅದೇ ಮಾನಸಿಕ ತೊಳಲಾಟವ ,ಹಸಿ ಭಾಷೆಯಲ್ಲಿ ಬರೆದ ಆ ಕೃತಿ ಪ್ರಾಮಾಣಿಕವಾಗಿತ್ತು. ಅನುಭವದ ನೆಲೆಯೂ ಇರಬಹುದಾಗಿದ್ದ ಅದು ಆ ಕಾರಣಕ್ಕೇ ಲವಲವಿಕೆಯಿಂದ ಇಷ್ಟವಾಗಿತ್ತು.

ಅವರ ನಂತರದ ಕೃತಿಗಳು ನನಗೆ ಓದು ಸರಾಗ ಎನಿಸಿದರೂ ಒಳಕ್ಕಿಳಿದಿರಲಿಲ್ಲ. ಅದರಲ್ಲಿ ಬರುವ ಮಾಹಿತಿಗಳು ಸಾಂದರ್ಭಿಕ ರೆಫರೆನ್ಸ್ ಆಗಿ ಉಳಿದು ,ಮುಖ್ಯ ಕತೆಗೂ ಅವಕ್ಕೂ ಹೊಂದಿಕೆಯಾಗದೆ ಎಲ್ಲೋ ಏನೋ ಹದ ತಪ್ಪಿದ ಅನಿಸಿಕೆ.
ಈ ಮೊದಲಿನ ಕೃತಿ 'ಸಾವು' ಅವರ ಬರಹದ ಬದಲಾವಣೆಯ ತೋರಿಸಿತ್ತು. ಭಾಷೆ ಮತ್ತು ವಸ್ತುವಿನ ಮಥನದ ಭೈರಪ್ಪರ ಶೈಲಿ ಅದು. ಕಥೆ ಸರಾಗವಾಗಿದ್ದರೂ ಸ್ವಲ್ಪ ಪಳಗಬೇಕು ಎನಿಸಿತ್ತು.

ಆದರೆ ,'ಉತ್ತರ' ಓದುವಾಗ ಇವೆಲ್ಲ ಕಳೆದು ಬಹಳ ಬೆಳೆದುಬಿಟ್ಟರು ಎನಿಸಿತು.
ಓದುವಾಗ ಹಲವಾರು ನಿಜ ಜೀವನದ ವ್ಯಕ್ತಿಗಳು ಕಣ್ಮುಂದೆ ಬಂದರೂ ಆ ಎಲ್ಲಾ ಪಾತ್ರಗಳ ಮನೋವ್ಯಾಪಾರದ ಚಿತ್ರಣ, ಆಧ್ಯಾತ್ಮಿಕ ಸಾಧನೆಗಳ ವಿವರಣೆ ,ಕಥಾ ನಿರೂಪಣೆಯ ಹದ, ಸಂಯಮ ತಪ್ಪದ ಭಾಷೆ ಇವೆಲ್ಲ ಅಡುಗೆ ಮಾಡುವಾಗ ಪಾಕ ತಪ್ಪದ ಹಾಗೆ ಬೆರೆತು ಓದಲು ಖುಷಿಯೆನಿಸಿತು.
ಶ್ರೀಚಕ್ರದ ಉಪಾಸನೆ, ಆಧ್ಯಾತ್ಮಿಕ ಸಾಧನೆಯ ವಿವಿಧ ಹಂತಗಳ ಪರಿಚಯ, ಇಂತಹ ಕಾದಂಬರಿಗಳಲ್ಲಿ ವಿಜೃಂಭಿಸುವ ಕಾಮದ ಪರಿಚಯದಲ್ಲಿ ಗೆರೆ ದಾಟದ ಸಂಯಮದ ಬರಹದ ರೀತಿ ಅವರು ಬಹಳ ಬೆಳೆದಿದ್ದಾರೆ ಎಂಬುದಕ್ಕೆ ಸಾಕ್ಷಿ.

ಒಳ್ಳೆಯ ಕೃತಿ. ಇನ್ನೂ ಅತ್ಯುತ್ತಮ ಕೃತಿಗಳನ್ನು ಕೊಡುವ ಶಕ್ತಿ ಅವರಿಗಿದೆ ಎಂದು ಓದುವಾಗ ಅನಿಸಿತು.
Profile Image for Akhila Ashru.
187 reviews20 followers
October 3, 2023
ಬಹಳ ಸಮಯದ ಬಳಿಕ ಒಂದು ಉತ್ತಮ ಓದು. ಅದೆಷ್ಟು ತೀಕ್ಷ್ಣ ಪ್ರಶ್ನೆಗಳಿವೆಯೋ ಅದಕ್ಕೆ ಅಷ್ಟೇ ಪ್ರಜ್ಞಾಪೂರ್ವಕ ಉತ್ತರಗಳಿವೆ. ಮತ್ತೆ ಮತ್ತೆ ಓದಬಹುದಾದ ಓದು. ಉತ್ತಮ quote ಗಳನ್ನು highlight ಮಾಡೋದಾಡ್ರೆ ಪುಸ್ತಕದ ಅರ್ಧ ಭಾಗ highlight ಮಾಡಬೇಕಾಗಬಹುದು. ಆಧ್ಯಾತ್ಮದ ವಿಚಾರಗಳಲ್ಲಿ ವಿಶ್ವಾಸವಿರುವವರು ಓದಲೇ ಬೇಕಾದ ಪುಸ್ತಕ. ಈಗ ಸಮಸ್ಯೆ ಮುಂದಿನ ಪುಸ್ತಕ select ಮಾಡದೂ ?😲
Profile Image for Srikanth.
237 reviews
February 5, 2024
ಅದ್ವೈತ ವೇದಾಂತದ ಅಧ್ಯಾತ್ಮಸಾಧನೆಯ ವಿವಿಧ ಹಂತಗಳನ್ನು ಪರಿಚಯಿಸುವ ಕಾದಂಬರಿ ಇದು. ಅಧ್ಯಾತ್ಮದ ಕ್ಲಿಷ್ಟಕರವಾದ ವಿವರಗಳನ್ನು ಈ ರೀತಿ ಎಲ್ಲರಿಗೆ ಅರ್ಥವಾಗುವಂತೆ ಹಾಗು ಅಷ್ಟೇ ಸ್ವಾರಸ್ಯಕರವಾಗಿ ಓದಿಸಿಕೊಂಡು ಹೋಗುವ ಒಂದು ಕಥೆಯ ರೂಪದಲ್ಲಿ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ಲೇಖಕರು ಅಚ್ಚುಕಟ್ಟಾಗಿ ಮಾಡಿದ್ದಾರೆ.
Profile Image for Soumya.
217 reviews48 followers
March 13, 2023
ಬೇಕೋ ಬೇಡವೋ ಅಂತ ದ್ವಂದ್ವದಲ್ಲಿ ಕೊಂಡ ಪುಸ್ತಕ.
ಆದರೆ ಓದಿದ ನಂತರ ಅಬ್ಬಾ ಸಕ್ಕತ್ ಪುಸ್ತಕ ಅನ್ನಿಸಿತು. ಪುಸ್ತಕದ ತುಂಬಾ highlights ಮಾಡಿ ಇಟ್ಟಿದ್ದಿನಿ. ಮತ್ತೊಮ್ಮೆ ಓದುತ್ತಿನಿ ಅನ್ನಿಸುತ್ತೆ.

ಪುಸ್ತಕದ base ಧಾರ್ಮಿಕ ಹಾಗೂ ಆದ್ಯಾತ್ಮ ಆಗಿದ್ದರು ಕೂಡ, ನಮ್ಮ day to day life ನ ಹಲವು ಪ್ರಶ್ನೆಗೆ ಉತ್ತರ ಸಿಗತ್ತೆ. ಕಥೆ ಶುರುವಾಗಿ ಮುಗಿಯುವವರೆಗೆ ಪುಸ್ತಕ ಹಿಡಿದಿಟ್ಟುರತ್ತೆ.
ಎಲ್ಲೋ ಶುರುವಾಗಿ ಆ characters ಎಲ್ಲಾ interlink ಆಗುವ ರೀತಿ ಚೆನ್ನಾಗಿದೆ.

ಈ review, ನಾ ಪುಸ್ತಕ ಓದಿದಾಗ ಕೊಟ್ಟ ಖುಷಿಗೆ ಖಂಡಿತ justice ಮಾಡುತ್ತಿಲ್ಲ. ನಾ ಓದಿದಾಗ ಎಷ್ಟೊಂದು ವಿಷಯಗಳು ನಂಗೆ ಇಷ್ಟ ಆಯ್ತು. ಆದ್ರೆ ಅದನ್ನ ಆ review ಅಲ್ಲಿ ಬರೆಯೋಕೆ ಆಗ್ತಿಲ್ಲ.

ನಂಗೆ personally ತುಂಬಾ ಇಷ್ಟ ಆದ ಪುಸ್ತಕ.
Profile Image for Mallikarjuna M.
51 reviews14 followers
January 4, 2023
ಲೇಖಕರ ಸ್ವ್ಯಾಪಿಂಗ್, ಮಂದಿರ-ಮಸೀದಿ ಕಾದಂಬರಿಗಳನ್ನು ಬಿಡುಗಡೆಯಾದ ಸಂದರ್ಭದಲ್ಲೇ ಓದಿ facebookನಲ್ಲಿ ಮೆಚ್ಚುಗೆ ಹಂಚಿಕೊಂಡಿದ್ದೆ. ನಂತರ facebok ತೊರೆದ ಕಾರಣಕ್ಕೋ ಅಥವಾ ವೃತ್ತಿ ಒತ್ತಡದಿಂದಲೋ ಲೇಖಕರ ಇತರ ಕೃತಿಗಳನ್ನು ಓದಲಾಗಲಿಲ್ಲ.
Goodreadsನಲ್ಲಿ ಕಂಡ ವಿಮರ್ಶೆಯಿಂದ 'ಉತ್ತರ'ವನ್ನು ಓದುವಂತಾಯಿತು. ಲೇಖಕರ ಬರವಣಿಗೆಯಲ್ಲಿನ ವಿಚಾರ, ಪ್ರಬುದ್ಧತೆ, ಕೃತಿ ರಚಿಸಲು ಅವರು ಮಾಡಿಕೊಂಡಿರಬಹುದಾದ ಸಿದ್ಧತೆಗಳನ್ನು ನೆನೆದು ಹೆಮ್ಮೆಯಾಯಿತು.
ಆಧ್ಯಾತ್ಮದಲ್ಲಿ ಆಸಕ್ತಿಯಿರುವವರು ಒದಲೇಬೇಕಾದ ಪುಸ್ತಕ 👌👌
Profile Image for milton.reads.
59 reviews1 follower
July 28, 2024
Supreeth K N's ಉತ್ತರ was a medicine I needed. Its a Self-help book disguised as a Novel. There's a healing touch in its chapters. I had bought the novel approx 4-5 months ago when I came across some of my GR friends' reviews, but never picked to read, and now I regret it.

I have been reading it since 25 days, much engrossed in its deeply spiritual and philosophical thoughts, but never felt the need to complete it soon. I wonder what made me take my own time. Maybe the book itself made me read a chapter or two and then start reflecting on it, connect with my own life, my family, how I am struggling with the problems the character Skanda is facing in his life. 

I can assure that the book has impacted me heavily. I have changed a lot myself in some of the aspects without me knowing it, realising it only after my better half pointed out to me. Definitely I have started keeping myself unattached to few things, also some patience, a bit of 'why should I be bothered' attitude and more. I ain't exaggerating it as I already said I am unaware of the changes. 

You can read it without a break as it's in very simple, easy to understand Kannada. At many places, narrative changes from First to Third person abruptly but doesn't confuse tbh.

Planning to gift a copy to one of my collegues who would be retiring from her service soon. 

Rating - ⭐⭐⭐⭐½
Profile Image for Raghavendra Shekaraiah.
34 reviews
December 13, 2024
ಆಧ್ಯಾತ್ಮಿಕ ಕಥೆಗಳೆಂದರೆ ನನಗೆ ತುಂಬಾ ಇಷ್ಟ. 'ಉತ್ತರ' ಪುಸ್ತಕ ಕುತೂಹಲದಿಂದ ಖರೀದಿಸಿದೆ. ಪುಸ್ತಕ ತೆರೆದ ಕ್ಷಣದಿಂದಲೇ ಕಥೆ ನನ್ನನ್ನು ಎಳೆದುಕೊಂಡು ಹೋಯಿತು. ಆಧ್ಯಾತ್ಮದ ಆಳವಾದ ವಿಷಯಗಳನ್ನು ಇಷ್ಟು ಸುಲಭವಾಗಿ ತಿಳಿಸುವ ರೀತಿ ನನಗೆ ತುಂಬಾ ಇಷ್ಟವಾಯಿತು. ಲೇಖಕರು ಎಷ್ಟೋ ಅಧ್ಯಯನ ಮಾಡಿರಬೇಕು ಅನ್ನಿಸುತ್ತೆ - ಪ್ರತಿಯೊಂದು ವಿಷಯವೂ ಅಷ್ಟು ನಿಖರವಾಗಿದೆ.

ಆದರೆ ಕಾದಂಬರಿಯ ಸ್ವಲ್ಪ ಭಾಗ ದಾಟಿದ ನಂತರ, ಒಂದೇ ಘಟನೆಯನ್ನು ಬೇರೆ ಬೇರೆ ಪಾತ್ರಗಳ ದೃಷ್ಟಿಯಿಂದ ಹೇಳುವ ರೀತಿ ಸ್ವಲ್ಪ ಬೇಸರ ತಂದಿತು. ಹಾಗೆಯೇ ಕಥೆ ಆಗಾಗ ಹಿಂದಕ್ಕೆ ಹೋಗಿ ಮತ್ತೆ ವರ್ತಮಾನಕ್ಕೆ ಬರುತ್ತಿರುವುದರಿಂದ ಕಥೆ ನಿಧಾನವಾಗಿ ಮುಂದುವರೆಯುತ್ತಿರುವಂತೆ ಅನ್ನಿಸುತ್ತದೆ. ಮೊದಲು ಈ ವಿಧಾನ ಆಸಕ್ತಿದಾಯಕವಾಗಿ ಅನ್ನಿಸಿದರೂ, ಮತ್ತೆ ಮತ್ತೆ ಇದೇ ರೀತಿ ಬರುತ್ತಾ ಹೋದಂತೆ ಕೆಲವು ಭಾಗಗಳನ್ನು ಬಿಟ್ಟು ಮುಂದೆ ಓದಬೇಕಾಯಿತು.

ಆದರೂ ಪುಸ್ತಕದಲ್ಲಿ ಬರುವ ಆಳವಾದ ವಿಚಾರಗಳು, ಸಾರ್ಥಕ ಮಾತುಗಳು ನನ್ನನ್ನು ಆಕರ್ಷಿಸಿದವು. ಸ್ಕಂದನ ಪಾತ್ರದ ಮೂಲಕ ಬರುವ ಅನುಭವಗಳು, ಆತನ ಮನಸ್ಥಿತಿ ನಮ್ಮದೇ ಆಗಿರುವಂತೆ ಅನ್ನಿಸುತ್ತದೆ. ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಬರುವ ಪ್ರತಿಯೊಂದು ಹಂತವನ್ನು ಎಷ್ಟು ಸುಂದರವಾಗಿ ವಿವರಿಸಿದ್ದಾರೆ! ನಮ್ಮ ದೈನಂದಿನ ಜೀವನದಲ್ಲಿ ಬರುವ ಹಲವಾರು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರ ಸಿಗುತ್ತದೆ. ನಿಜ ಹೇಳಬೇಕೆಂದರೆ, ಮೂಲ ಕಥೆ ಚಿಕ್ಕದಾದರೂ ಅದು ನೀಡುವ ಅನುಭವ ತುಂಬಾ ದೊಡ್ಡದು. ಜೀವನದ ಬಗ್ಗೆ ನನ್ನ ನೋಟ ಸ್ವಲ್ಪ ಬದಲಾಯಿಸಿತು ಅನ್ನಿಸುತ್ತೆ. ಸುಪ್ರೀತ್ ಅವರ ಬರವಣಿಗೆ ತುಂಬಾ ಸರಳ, ಆದರೆ ಆಳವಾದ ಅರ್ಥ ಹೊಂದಿದೆ.
Profile Image for Mahesh.
88 reviews
April 1, 2024
ಬಹಳ ದಿನಗಳ ನಂತರ ಒಂದು ಒಳ್ಳೆಯ ಕಾದಂಬರಿ ಓದಿದ ಅನುಭವ. ಕ್ಲಿಷ್ಟವಾದ ವಿಷಯವನ್ನ ಬಹು ಸರಳವಾಗಿ ಓದುಗನಿಗೆ ರುಚಿಸುವಂತೆ ಬರೆದಿರುವ ಸುಪ್ರೀತ್ ರಿಗೆ ಒಂದು ಮೆಚ್ಚುಗೆ ಕೊಡಲೇಬೇಕು.
Displaying 1 - 9 of 9 reviews

Can't find what you're looking for?

Get help and learn more about the design.