Yashwant Vithoba Chittal was a Kannada fiction writer born in Hanehalli, Uttara Kannada District
He completed his primary school education from his village school and his high school from the Gibbs High School, Kumta (1944).Later he did his Bachelors in science and Bachelors in technology both from Bombay University being a top ranker and gold medalist in the year 1955 and master's degree in chemical engineering from Stevens Institute of Technology, United States, and simultaneously pursued a career in science and technology along with literature. His contributions in the field of Polymer Science and synthetic resins was well recognized and he was selected as Fellow of Plastics and Rubber Institute, London.
He is well know for his short stories as well as novels earning him Karnataka Sahitya Academy Award, Sahitya Academy Award, Vardhamana Award, Adikavi Pampa Award etc
ಗೋಡೆಗೆ ಅಪ್ಪಳಿಸಿದ ಚೆಂಡು ಹಿಂದಕ್ಕೆ ಪುಟಿಯುವಾಗ ಗೋಡೆಯ ಮೇಲಿನ ಉಬ್ಬುತಗ್ಗುಗಳು ಎಸೆತಗಾರನ ಎಣಿಕೆಯನ್ನು ತಪ್ಪಿಸುತ್ತವೆ. ಈ ಆಟದಂತೆ ಪ್ರಪಂಚವು ಕೂಡ. ನಾವೊಂದು ಬಗೆದರೆ, ಅದು ತನ್ನ ಮಡಿಲಲ್ಲಿ ಬೇರೆಯದನ್ನೇ ಹುಗಿದಿಟ್ಟಿರುತ್ತದೆ."
"ಮುಂದೆ ನಿಂತವನನ್ನು ಸಹಜವಾಗಿ ಮಾತನಾಡಿಸುವುದು ಬಿಟ್ಟು ಅವನ ಆಳ ಅಳತೆಗಳನ್ನು ಶೋಧಿಸುವುದರಲ್ಲಿಯೇ ಸಮಯವನ್ನು ಕಳೆದಿರುತ್ತೇವೆ. ನಮ್ಮಲ್ಲಿರುವ ಸಂಶಯ ಭಯಗಳು ಸಹಜತೆಯನ್ನು ಮರೆಮಾಡಿ ಜೀವನವನ್ನು ಯಾಂತ್ರಿಕವಾಗಿಸುತ್ತದೆ".
"ಮನಸ್ಸಿನಲ್ಲಿ ಆಡಬೇಕೆಂದು ಕೊಂಡ ಮಾತುಗಳು ವಿಚಾರಗಳು ನೂರಾರು ಇದ್ದರೂ ಅವು ಗಂಟಲಲ್ಲಿ ಉಳಿದುಹೋಗುತ್ತವೆ. ಸಂದರ್ಭ ಸನ್ನಿವೇಶಗಳು ನಮ್ಮನ್ನು ಕಟ್ಟಿ ಹಾಕುತ್ತವೆ. ಕೆಲವೊಮ್ಮೆ ನಮ್ಮ ಆಂಗಿಕ ಭಾಷೆಗಳು ನಮ್ಮ ಮಾತುಗಳನ್ನು ನಮಗಿಂತ ಮುಂಚೆ ಆಡಿರುತ್ತವೆ".
"ಪ್ರಕೃತಿಯ ಅಗಾಧವಾದ ಘನವಾದ ಸೌಂದರ್ಯವನ್ನು ಅನುಭವಿಸುವ ಮನಸ್ಸು ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳಿಗೆ ಎಷ್ಟು ಕ್ಷುದ್ರವಾಗಿ ಬಿಡುತ್ತದೆ. ಎಷ್ಟು ಸಂಕುಚಿತ ಮನೋಭಾವವನ್ನು ತಾಳುತ್ತದೆ".
"ವಾಸ್ತವವನ್ನು ಎದುರಿಸುವ ಶಕ್ತಿ ಎಲ್ಲರಿಗೂ ನಿಸರ್ಗದತ್ತವಾಗಿ ಇದೆ. ಆದರೆ ನಮ್ಮ ಮನಸ್ಸು ಇಲ್ಲಸಲ್ಲದ ಕಲ್ಪನೆಗಳ ಗೂಡಾಗಿ ಗಾಳಿಯೊಡನೆ ಗುದ್ದಾಡಿ ಸೋತು ಹೋಗುತ್ತದೆ. ಬದುಕು ನರಕವಾಗುತ್ತದೆ".
ಚಿತ್ತಾಲರ "ಛೇದ" ಪುಸ್ತಕದಲ್ಲಿ ಈ ಮೇಲಿನ ಸಾಲಗಳುನ್ನು ಓದಿದ ಮೇಲೆ ಅನಿಸಿದ್ದು ಅವರು ಹೇಳಬೇಕಾದುದನ್ನು ಎಲ್ಲೂ ನೇರವಾಗಿ ಹೇಳುವುದಿಲ್ಲ. ಮೊದಮೊದಲು ಅರ್ಥವಾಗುವುದೂ ಇಲ್ಲ. ಆದರೆ ಒಂದು ಸಲ ಅವರು ಮನಸ್ಸಿನೊಳಗೆ ಇಳಿಯಲು ಪ್ರಾರಂಭಿಸಿದರೆ ಒಂದು ಅದ್ಭುತ ಲೋಕವನ್ನು ತೋರಿಸಿ ಬಿಡುತ್ತಾರೆ. ಒಂದು ಕೊಲೆಯ ಸುತ್ತ ತೆರೆದುಕೊಳ್ಳುವ ಕತೆಯ ಮೂಲಕ ನಮ್ಮ ಮನಸ್ಸನ್ನು ಶೋಧಿಸುವ ರೀತಿ ಅನನ್ಯ.
"ಛೇದ"ದ ಕೇಂದ್ರ ಒಂದು ಭೀಕರ ಕೊಲೆ. ಕೊಲೆ ಎಂದಮೇಲೆ ಪೊಲೀಸು ತನಿಖೆ ವಿಚಾರಣೆ ಎಲ್ಲವೂ ಇರಬಹುದು ಅಂದುಕೊಂಡರೆ ನಿಮ್ಮ ಊಹೆ ಸುಳ್ಳು. ಇಲ್ಲಿ ಅದ್ಯಾವುದೂ ಇಲ್ಲ. ಬದಲಾಗಿ ಆ ಕೊಲೆಗೆ ಸಾಕ್ಷಿಯಾದವನ ಮಾನಸಿಕ ತಳಮಳ, ಕೊಲೆಯಾದವನ ತೆಕ್ಕೆಗೆ ಬಿದ್ದು ಕ್ರಮೇಣ ಅರಿವಿಗೆ ಬರುವ ಕೆಲವು ಸಂಬಂಧಗಳು, ಉಸಿರುಗಟ್ಟುವಂತೆ ಮನುಷ್ಯ ತಾನೇ ಸೃಷ್ಟಿಸಿಕೊಳ್ಳುವ ಸನ್ನಿವೇಶಗಳು, ಇದುವರೆಗೂ ಮೊಳೆತಿರದ ವಿಚಿತ್ರ ಭಾವನೆಗಳ ತುಮುಲಕ್ಕೆ ಒಳಗಾಗುವ ರೀತಿ, ವ್ಯಕ್ತಿ ವಾಸ್ತವವನ್ನು ವಾಸ್ತವವಾಗಿ ಗ್ರಹಿಸದೆ ಅಂತರಂಗದಲ್ಲಿ ಭಯ ತುಂಬಿಕೊಳ್ಳುವ ಪರಿ. ಇನ್ನೂ ಹಲವು ಅಂಶಗಳನ್ನು ಚಿತ್ತಾಲರು ಕಾದಂಬರಿಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಕಥೆಯ ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಂಡಿದೆ. ಒಂದು ಸಾಮಾನ್ಯ ಪತ್ತೇದಾರಿ ಕಥೆಯಾಗಿರದೆ ವಿಭಿನ್ನ ಶೈಲಿಯಲ್ಲಿರುವ ಚಿತ್ತಾಲರ ಬರವಣಿಗೆ ಪುಸ್ತಕ ಕೈ ಬಿಡದಂತೆ ಮಾಡುತ್ತೆ. ತಂದೆ ಬೆಹರಾಮನ ಮನಸ್ಥಿಯನ್ನು ಬರಿ ನೋಟ ಹಾವಭಾವಗಳಿಂದಲೇ ಅರಿಯುವ ಮಗಳು ಶಿರನಾಳ ಗುಣ. ಸಹೋದರರನ್ನು ಸಾಯಲು ಕೊಡಗೂಡದೆಂಬ ಬೆಹರಾಮರ ಹವಣಿಕೆ ತುಂಬಾ ಚೆನ್ನಾಗಿ ಬರೆದಿದ್ದಾರೆ ಚಿತ್ತಾಲರು. ...
ಬೆಹರಾಮ್ ಮುಂಬಯಿಯ ಜೋಪಡಪಟ್ಟಿಯಲ್ಲಿ ತನ್ನ ಹೆಂಡತಿ ಹಾಗು ಮಗಳು ಶಿರೀನ್ ಜೊತೆ ವಾಸಿಸುತ್ತಿದ್ದನು. ಬಾಲ್ಕಾನಿಯಲ್ಲಿ ಚಹಾ ಸೇವಿಸುತ್ತಾ ಸೂರ್ಯಾಸ್ತವನ್ನು ಪ್ರತಿ ದಿನ ವೀಕ್ಷಿಸುತ್ತಾ ಆನಂದವಾಗಿ ಜೀವಿಸುತ್ತಿದ್ದನು, ಪರವಾಗಿಲ್ಲ ಮುದುಕ ಒಳ್ಳೆಯ ಕಡೆಯಲ್ಲಿ ಮನೆ ಮಾಡಿಕೊಂಡಿದ್ದಾನೆ, ಮನಸ್ಸು ನೆಮ್ಮದಿಯಿಂದಿರುವಾಗ, ಬೇಜಾರಾದಾಗ ಕಡಲನ್ನು ನೋಡಿಕೊಂಡು ಅದರಲ್ಲಿ ತಲ್ಲೀನನಾಗಿಬಿಡುತ್ತಿದ್ದನು, ಇನ್ನು ೨ ವರ್ಷದಲ್ಲಿ ಕೆಲಸದಿಂದ ನಿವೃತ್ತಿಯಾಗಬೇಕು ಅಷ್ಟರಲ್ಲಿ ತನ್ನ ಜೀವನದಲ್ಲಿ ನಡೆಯುವ ಪ್ರಸಂಗಗಳು ನೆಮ್ಮದಿಯಿಂದಿರುವ ಜೀವನದಲ್ಲಿ ಒಮ್ಮೆಲೆ ಭಯ, ಸಂಶಯ, ಸಿಟ್ಟು ಆತನ ಮೇಲೆ ಪರಿಣಾಮವಾದ ರೀತಿ ಅದಕ್ಕೆ ಕಾರಣರಾದ ಕೆಲವು ವ್ಯಕ್ತಿಗಳು, ಕೆಲವು ಸನ್ನಿವೇಶಗಳು ಇಡೀ ಕಾದಂಬರಿಯ ವಸ್ತು ಅದರ ಸುತ್ತ ಬಿಚ್ಚಿಕೊಳ್ಳುತ್ತದೆ. ಛೇದದಲ್ಲಿ ಭೀಕರ ಕೊಲೆ ನಡೆಯುತ್ತದೆ, ಈ ಕೊಲೆಗೆ ತುತ್ತಾದವನು ಯಾರೆಂಬುದು ಕೊನೆಯವರೆಗೂ ರಹಸ್ಯವಾಗಿಯೇ ಉಳಿದುಬಿಡುತ್ತದೆ.
ಕರುಣಾಕರನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿರುತ್ತಾನೆ, ಒಮ್ಮೆ ಆಕಸ್ಮಿಕವಾಗಿ ಬೆಹರಾಮ್ ಮನೆಗೆ ಬಂದು ೩ ವರ್ಷ ಹಿಂದೆ ನಡೆದ ರದ್ದೀವಾಲನ ಕೊಲೆಯ ಬಗ್ಗೆ ತಾನು ರಿಪೋರ್ಟ್ ವರದಿ ಮಾಡಬೇಕೆಂದು ಬೆಹರಾಮಿನಿಗೆ ಕೇಳಿದಾಗ ಆತನಿಗೆ ಅತ್ಯಾಶ್ಚರ್ಯವಾಗುತ್ತದೆ, ೩ ವರ್ಷದ ಹಿಂದೆ ಅದೂ ರದ್ದೀವಾಲನ ಕೊಲೆಯ ಬಗ್ಗೆ ಏಕೆ ಈತನಿಗೆ ಅಷ್ಟು ಕುತುಹಲ ಎಂದು ಕರುಣಾಕರನ ಮೇಲೆ ಸಂಶಯ ಹುಟ್ಟುತ್ತದೆ. ಈತನು ತನ್ನ ಮಿತ್ರ ಅಗರ್ವಾಲ್ ಸ್ಥಾಪಿಸಿದ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ, ಅಂದರೆ ಇದು ಅಗರವಾಲನ ಪಿತೂರಿಯೇ ಎಂಬ ಸಂಶಯವೂ ಉಂಟಾಗುತ್ತದೆ. ಆದರೆ ಕೇರಳದಿಂದ ಬಂದ ಕರುಣಾಕರನ್ ಮುಖ್ಯವಾಗಿ ಮುಂಬಯಿಯಲ್ಲಿದ್ದ ತನ್ನ ಅಣ್ಣನನ್ನು ಹುಡುಕಲು ಬಂದಿರುತ್ತಾನೆ, ಆತನಿಗೆ ಸಹಿ ಇಲ್ಲದೇ ಇರುವ ಪತ್ರ ಬಂದಿರುತ್ತದೆ, ೩ ವರ್ಷದ ಹಿಂದೆ ತನ್ನ ಅಣ್ಣ ಕೊಲೆಯಾಗಿರುವನೆಂದು ಅದೂ ಬೆಹರಾಮ್ ವಾಸಿಸುತ್ತಿದ್ದ ಜೋಪಡಪಟ್ಟಿಗಳ ಸುತ್ತಮುತ್ತಲಲ್ಲಿ ನಡೆದಿರುವುದೆಂದು ಆದ್ದರಿಂದ ಮೊದಲು ರದ್ದೀವಾಲನ ಕೊಲೆಯಂದು ನೆಪ ಹೂಡಿ ತನ್ನ ಅಣ್ಣನು ಬದುಕಿರುವನೋ ಇಲ್ಲ ಕೊಲೆಯಾಗಿರುವನೋ ಅದನ್ನು ಹುಡುಕುವುದರಲ್ಲಿ ಬೆಹರಾಮ್ ನಿಂದ ಮಾಹಿತಿ ಪಡೆಯಲು ೨ ಬಾರಿ ಭೇಟಿಯಾಗುತ್ತಾನೆ. ೨ ನೆ ಸಲ ಮನೆಗೆ ಬಂದಾಗ ನಾಲ್ಕು ಜನ ಆಗುಂತಕ ವ್ಯಕ್ತಿಗಳು ಒಮ್ಮೆಲೆ ಮನೆಗೆ ಬಂದು ಕರುಣಾಕರನನ್ನು ಹಿಡಿಯಲು ಹೋದಾಗ ಹೇಗೋ ಆತನು ಪರಾರಿಯಾಗುತ್ತಾನೆ. ಆ ವ್ಯಕ್ತಿಗಳು ಯಾರೆಂಬುದು ಯಾರಿಗೂ ತಿಳಿಯದು ಅವರ ಮನೆಗೆ ಬರಲು ಕಾರಣ ಏನು ಕರುಣಾಕರನನ್ನು ಹಿಡಿಯಲು ಕಾರಣವೇನು ಎಂಬುದು ಸಂಶಯಕ್ಕೀಡುಮಾಡುತ್ತದೆ. ಈ ಭೇಟಿ ಹಾಗು ಘಟನೆಗಳಿಂದ ಅಲ್ಲಿರುವವರಿಗೆ ಆಗುವ ಭಯ, ಮನಸ್ಸಿನಲ್ಲಾಗುವ ತಳಮಳಗಳು, ಸಮಾಜದಲ್ಲಿ ಯಾರನ್ನು ನಂಬುವುದು ಬಿಡುವುದು ಎಂದು ಆತಂಕಕ್ಕೆ ಗುರಿಯಾಗುತ್ತಾರೆ.
ಕರುಣಾಕರನ್ ಬಂದು ಹೋದ ನಂತರ ವಾಸುದೇವನ್ ಇವರ ಮನೆಗೆ ಬರುತ್ತಾನೆ, ಮೊದಲು ಕೇಳುವುದೇ ಕರುಣಾಕರನ್ ಬಗ್ಗೆ. ಬೆಹರಾಮ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವಾಸುದೇವನ್ ೩ ವರ್ಷಗಳ ಹಿಂದೆ ಭೀಕರ ಕೊಲೆಯ ಬಗೆಗೆ ತಿಳಿಸಿದವನೇ ಈತನು, ಕಣ್ಣೆದುರು ನಡೆದ ಕೊಲೆಯನ್ನು ನೋಡಿದ ವಾಸುದೇವನ್ ಹೇಗೋ ಠಕ್ಕರ ಗ್ಯಾಂಗಿನಿಂದ ಪರಾರಿಯಾಗಿ ಬಂದಾಗ ಬೆಹರಾಮ್ ಸಲಹೆಯಂತೆ ವಾಸುದೇವನ್ ಮಸ್ಕತ್ತಿಗೆ ಪರಾರಿಯಾಗಿದ್ದು,ಈಗ ಕೊಲೆಯಾದವನು ತಮ್ಮನೋ ಇನ್ನಾರೋ ಬಂದು ತನಿಖೆ ಮಾಡುತ್ತಿರುವ ಹೊತ್ತಿಗೆ ಮಸ್ಕತ್ತಿನಿಂದ ಹಿಂದುರಿಗಿ ಬಂದಿರುವ ವಾಸುದೇವನ್ ತನ್ನ ಹೆಸರು ಈ ಹುಡುಗ ಒಟ್ಟು ಮಾಡುತ್ತಿದ್ದ ಮಾಹಿತಿಯಲ್ಲಿ ಸೇರಿಕೊಳ್ಳಬಹುದೆಂಬ ಭಯವಾಗಿರಬಹುದೆ? ವಾಸುದೇವನ್ ಕೊಟ್ಟ ಮಾಹಿತಿಯನ್ನು ಯಾರಿಗೂ ತಿಳಿಸಲ್ಲಿಲ್ಲ, ಆದರೆ ಕರುಣಾಕರನ್ ತನ್ನನ್ನೇ ಬಂದು ವಿಚಾರಿಸಿದ ಬಗ್ಗೆ ತಿಳಿದು ಈ ಸಂಬಂಧಗಳೆ ಆತನಿಗೆ ಅರ್ಥವಾಗಲಿಲ್ಲ, ಜೋಪಡಪಟ್ಟಿಯ ಸುತ್ತಲಲ್ಲಿ ನಡೆದ ಕೊಲೆಯ ಬಗ್ಗೆ ರಿಪೋರ್ಟ್ ಕೊಡಲು ಅಗರ್ವಾಲ್ ಮಾಡಿದ ಹುನ್ನಾರವೇ ಅದೂ ತಿಳಿಯದು ಇದರಿಂದ ತನ್ನ ಪತ್ರಿಕೆಗೆ ಒಳ್ಳೆಯ ಹೆಸರು ತಮಗೆ ಕೆಟ್ಟಹೆಸರು ತರಲು ಹೊರಟಿರುವುದನ್ನು ನೆನೆದು ಆತಂಕಪಡುತ್ತಾನೆ. ಕರುಣಾಕರನ್ ಹೇಳಿದ ಪತ್ರ ವಾಸುದೇವನ್ ಕಳುಹಿಸಿರುವುದೆಂದು ವಾಸುದೇವನ್ ತಿಳಿಸಿದಾಗ ಒಂದು ಸಂಶಯ ನಿವಾರಣೆಯಾಯಿತು. ಕರುಣಾಕರನ್ ಹುಡುಕುತ್ತಿರುವ ಅಣ್ಣ ವಾಸುದೇ��ನ್ ಎಂದು ಆತನು ಕೊಲೆಯಾಗಿಲ್ಲವೆಂದು ಅವರಿಬ್ಬರಿಗೆ ತಿಳಿಸೋಣವೆಂದರೆ ಇಬ್ಬರೂ ಪರಾರಿ ಅವರು ಭೇಟಿಯಾದರೋ ಇಲ್ಲವೋ ದೇವರೇ ಬಲ್ಲ.
ಅಷ್ಟರಲ್ಲಿ ಎಕ್ಸಪ್ರೆಸ್ ಪತ್ರಿಕೆಯಲ್ಲಿ ೩ ವರ್ಷದ ಹಿಂದೆ ಕೊಲೆಯಾದ ಸಂಗತಿ ಪ್ರಕಟವಾದಗ ಕೆರಳಿದ ಬೆಹರಾಮ್ ಅಗರ್ವಾಲಿಗೆ ಕರೆ ಮಾಡಿ ತಾವು ನೆಲಸಿರುವ ಜೋಪಡಿಪಟ್ಟಿಯ ಜನರಿಗೆ ಕೆಟ್ಟ ಹೆಸರು ತರಲು ಹೊರಟ ಈತನನ್ನು ಫೋನಿನಲ್ಲಿ ಬೈದಾಗ ಅಗರ್ವಾಲನ ಪ್ರತಿಕ್ರಿಯೆಯೇ ಇರುವುದಿಲ್ಲ, ಅಂದಹಾಗೆ ಯಾರೀ ಅಗರ್ವಾಲ್? ತನ್ನ ಕಂಪನಿಯಲ್ಲಿ ತನ್ನ ಜೊತೆ ೧೩ ವರ್ಷ ಕೆಲಸ ಮಾಡಿದ ಈ ಪುಂಡ ಬಿಟ್ಟುಹೋಗಿ ೮ ವರ್ಷದಲ್ಲಿ ಅವನನ್ನು ಕಂಡದ್ದು ಒಂದೇ ಸತಿ ಅದೂ ೩ ವರ್ಷದ ಹಿಂದೆ, ಟೆಲಿಪೋನೆ ಮೇಲೆ ಮಾತಾಡಿದ್ದೂ ಪತ್ರಿಕೆಯಲ್ಲಿ ನ್ಯೊಸ್ ಪ್ರಕಟವಾದಾಗ ಅದೂ ಆತನ ಪ್ರತಿಕ್ರಿಯೆಯಿಲ್ಲ, ಕಂಪನಿ ಸೇರಿದಾಗ ಆತನಿಗೆ ಎಳೆಯ ಪ್ರಾಯ ಸ್ಮಾರ್ಟ್ ಹುಡುಗ, ಬಹಳ ಬುದ್ಧಿವಂತ, ಬೇಗನೆ ಬೆಳೆದು ಒಳ್ಳೆ ಹುದ್ದೆಗೆ ಬಂದು ಕಂಪನಿ ಬಿಟ್ಟು ಪತ್ರಿಕೋದ್ಯಮವನ್ನು ತೆರೆದ, ತನ್ನ ಮೇಲೆ ಹಗೆ ಯಾಕೆ ಕಾರಣ ತಿಳಿಯದು ಇದೇ ಗೊಂದಲಾಟದಲ್ಲಿರಬೇಕಾದರೆ ಒಂದು ದಿನ ಅಕಸ್ಮಾತ್ ಆಗಿ ಅಗರವಾಲ ಅಣ್ಣ ಬಂದು ಬೆಚ್ಚಿ ಬೀಳುವ ಸುದ್ಧಿ ಕೊಟ್ಟ, ೩ ವರ್ಷದ ಹಿಂದೆ ಅಗರ್ವಾಲ್ ಕೊಲೆಯಾದದ್ದೆಂದು.
೩ ವರ್ಷ ಹಿಂದೆ ಕೊಲೆಯಾದದ್ದು ಅಗರ್ವಾಲ್ ಇರಬಹುದೇ ಇಲ್ಲವೆ ಈ ಪ್ರಕರಣ ಕಡೆಯವರೆಗೂ ರಹಸ್ಯವಾಗಿಯೇ ಉಳಿಯಿತು, ಕರುಣಾಕರನ್ ಬಂದದ್ದಾದರೂ ಏಕೆ, ವಾಸುದೇವನ್ ಕರುಣಾಕರನ್ ಬಂದಮೇಲೆ ಬಂದುದು ಆಶ್ಚರ್ಯ ಸಂಗತಿಯೇ, ಇವರಿಬ್ಬರು ನಿಜವಾಗಿ ಒಂದೇ ತಾಯಿಯ ಮಕ್ಕಳೇ? ಇವರಿಬ್ಬರು ಈಗ ಸುರಕ್ಷಿತವಾಗಿರುವರೇ? ನಾಲ್ಕು ಜನ ಆಗುಂತಕರು ಕರುಣಾಕರನನ್ನು ಹಿಡಿಯಲು ಹೊರಟದ್ದು ಏಕೆ? ಅಗರ್ವಾಲ್ ಕೊಲೆಯಾದದ್ದಾದರೂ ಏಕೆ? ಮತ್ತೆ ಕೊಲೆಯ ಬಗ್ಗೆ ಪತ್ರಿಕೆಯಲ್ಲಿ ಯಾರು ಪ್ರಕಟಿಸಿದ್ದು?ಅಂದಹಾಗೆ ಯಾರು ಕೊಲೆಯಾದದ್ದು, ಈ ಘಟನೆಗಳಿಗೆಲ್ಲಾ ತನನ್ನೇ ಏಕೆ ಆಯ್ದು ಪ್ರಶ್ನೆ ಮಾಡಿ ಯಾವುದಕ್ಕೂ ಉತ್ತರ ಸಿಗದೆ ತನ್ನ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಲು ಹೊರಟವರಾದರೂ ಯಾರು ? ಕಡೆಯವರೆಗೂ ಬೆಹರಾಮ್ ಗೆ ಯಾವುದಕ್ಕೂ ಉತ್ತರ ಸಿಗದೆ ಮನಸ್ಸಿಗೆ ಬಡಿದ ಛೇದ ದಿಂದ ತನ್ನ ಮನೆಯ ಬಾಲ್ಕಾನಿಯಿಂದ ಸಮುದ್ರವನ್ನು ನೋಡುತ್ತಾ ತಲ್ಲೀನನಾಗಿಬಿಡುತ್ತಾನೆ.
“ಛೇದ-ಯಶವಂತ ಚಿತ್ತಾಲರ ೧೯೮೫ರಲ್ಲಿ ಪ್ರಕಟವಾದ ಮೂರನೇ ಕಾದಂಬರಿ.
“ಚಿತ್ತಾಲರ ಬರಹ ತುಂಬಾ ವಿಶಿಷ್ಟ ಮತ್ತು ಭಿನ್ನ. ಸುಮ್ಮನೆ ಹಿಡಿದು ಕೂತರೆ ಕೃತಿಯು ನೀರಿನ ಮೇಲ್ಮೈಯಂತೆ ತಿಳಿಯಾಗಿ ಕಂಡರೂ ಮುಳುಗಿದಾಗ ಮಾತ್ರ ಆಳ-ಅಗಲ ಅರಿವಾಗುತ್ತದೆ. ಬೇರೆ ಲೇಖಕರಿಗಿಂತ ದುಪ್ಪಟ್ಟು ಸಮಯ ಹಿಡಿದರೂ ಭಾವನೆಗಳ ನೂಕು-ನುಗ್ಗಲಿನ ಸಮತಟ್ಟಾದ ತುಳುಕಾಟ ಕೃತಿ ಮುಗಿದ ನಂತರವೂ ಪಾತ್ರಗಳು ನಮ್ಮನ್ನು ಸುತ್ತುವರಿದು ಕಾಡತೊಡಗುತ್ತವೆ. ಚಿತ್ತಾಲರ ಬರವಣಿಗೆಯು ಬೇರೆ ಲೋಕಕ್ಕೇ ಕೊಂಡೊಯ್ಯುತ್ತದೆ ಮತ್ತು ಅದರ ರುಚಿ ಓದಿಯೇ ಸವಿಯಬೇಕು.”
“ಇಡೀ ಕಾದಂಬರಿ ನಡೆಯುವುದು ಒಂದು ಕೊಲೆಯ ಸುತ್ತವಾದರೂ ಅದರಲ್ಲಿ ಅಡಗಿರುವ ವಿವಿಧ ಆಯಾಮಗಳ ವ್ಯಕ್ತಿಯ ಮನಸ್ಥೈರ್ಯ, ಸೂಕ್ಷ್ಮ ಸಂವೇದನೆ ಮತ್ತು ಬದುಕಿನ ವಿಕೃತ ಸ್ವರೂಪಗಳು ನಾಗರಿಕತೆಯ ಜಗತ್ತಿನಲ್ಲಿ ವ್ಯಾವಹಾರಿಕವಾಗಿ ರೂಪ ತಳೆದು ತನ್ನ ಮನಸ್ಸಿನ ಭಾವನೆಗಳ ವಿವಿಧ ಶವಗಳು ಜೀವ ಪಡೆಯುವಿಕೆಯ ಒದ್ದಾಟಕ್ಕೆ ಹಪಹಪಿಸುತ್ತಾ ಬದುಕುವ ಅನಿವಾರ್ಯದ ಅಸಹನೀಯ ಸ್ಥಿತಿಯ ಬೆಳಕಿನ ರೇಖೆಗೆ ತೆರೆದುಕೊಳ್ಳುತ್ತಾ ಕತ್ತಲನ್ನು ನುಂಗುವ ಬದಲು ಅದನ್ನೇ ದುಡಿಮೆಯಾಗಿ ಪರಿವರ್ತಿಸಿ ಜನಸಾಮಾನ್ಯರ ಮೇಲೆ ಅಟ್ಟಹಾಸದ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ.”
“ಮುಖ್ಯವಾಗಿ ಮನುಷ್ಯ ಸಂಬಂಧ, ಮನೋನೆಲೆಗಳ ಅಂತರಂಗದಲ್ಲಿ ನೆಲೆಸಿದ ಭಯದ ನಿಗೂಢ ಸ್ವರೂಪ, ನಾಗರಿಕತೆಯಹೆಸರಿನಲ್ಲಿ ತಾನೇ ತನಗಾಗಿ ಸೃಷ್ಟಿಸಿಕೊಂಡ ಕ್ರೂರ ಭೂಗತ ವ್ಯವಸ್ಥೆಯ ಸನ್ನಿವೇಶಗಳು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ.”
“ಮುಂಬೈನ ಭೂಗತ ಜಗತ್ತಿನ ಭೀಕರ ಕೊಲೆಯ ಸುತ್ತ ಸುತ್ತುವ ಕತೆಯ ಜೊತೆಗೆ ಮನುಷ್ಯ ಸಂಬಂಧಗಳ ಪ್ರಾಮುಖ್ಯತೆ, ಅಂತರಂಗ ಮತ್ತು ಬಹಿರಂಗದ ಭಾವನೆಗಳ ತಳಮಳ, ವಾಸ್ತವವು ಕಲ್ಪನೆಯ ಒಳಗೆ ಹುಟ್ಟಿಸುವ ಭಯ ಕೃತಿಯಲ್ಲಿ ಸೂಕ್ಷ್ಮವಾಗಿ ಬೇರುಬಿಟ್ಟಿದೆ. ಚಿತ್ತಾಲರ ಬರಹ ಬೇರೆಯೇ ಅದ್ಭುತ ಲೋಕಕ್ಕೆ ಪ್ರವೇಶ ಪಡೆದಂತೆ ಎನಿಸುತ್ತದೆ.”
ಮೊದಲ ಪುಟಗಳಲ್ಲಿ ಕಾದಂಬರಿಯ ಶೈಲಿ ಸ್ವಲ್ಪ ದಿಕ್ಕು ತಪ್ಪಿಸಿದಂತೆ ಅನ್ನಿಸಿತು. ಬೇಹರಾಮ್ ಮತ್ತು ಅವನ ಕುಟುಂಬದ ಸಾಮಾನ್ಯ ಜೀವನದ ಚಿತ್ರಣದಿಂದ ಶುರುವಾಗಿ, ಒಮ್ಮೆಲೇ ಒಂದು ಕೊಲೆಯ ಸುತ್ತ ಸುತ್ತುವ ಕಥೆ ಹೇಗೆ ಮುಂದುವರೆಯುತ್ತದೆ ಎಂಬುದು ಗೊಂದಲ ಮೂಡಿಸಿತು. ಆದರೆ ಕ್ರಮೇಣ ಚಿತ್ತಾಲರ ಬರವಣಿಗೆಯ ಮಾಟ ಹಿಡಿಯಲು ಶುರುವಾಯಿತು.
ಸಾಮಾನ್ಯವಾಗಿ ಕೊಲೆ ಮತ್ತು ರಹಸ್ಯ ಇರುವ ಕಾದಂಬರಿ ಎಂದರೆ ಪೊಲೀಸ್ ತನಿಖೆ, ಸುಳಿವುಗಳು, ಅಪರಾಧಿ ಯಾರು ಎಂಬ ಹುಡುಕಾಟ ಇರುತ್ತದೆ. ಆದರೆ ಇಲ್ಲಿ ಅದೇನೂ ಇಲ್ಲ. ಬದಲಿಗೆ ಬೇಹರಾಮ್ ಮತ್ತು ಅವನ ಸುತ್ತಲಿನ ಪಾತ್ರಗಳ ಮನಸ್ಸಿನ ಒಳಗಿನ ಭಯ, ಸಂಶಯ, ಆತಂಕಗಳ ನೈಜ ಚಿತ್ರಣ ನನ್ನನ್ನು ಆಕರ್ಷಿಸಿತು. ಕರುಣಾಕರನ್ ಮತ್ತು ವಾಸುದೇವನ್ ಎಂಬ ಪಾತ್ರಗಳ ರಹಸ್ಯಮಯ ಪ್ರವೇಶ, ಅವರ ನಡುವಿನ ಸಂಬಂಧ, ಅದರ ಸುತ್ತ ಹೆಣೆದ ಕಥೆ ಪುಸ್ತಕವನ್ನು ಕೆಳಗಿಡಲು ಬಿಡಲಿಲ್ಲ.
ಕಥೆಯಲ್ಲಿ ಆಗಾಗ ಬರುವ ಮನೋವಿಶ್ಲೇಷಣೆಗಳು, ಬದುಕಿನ ಬಗ್ಗೆ ಆಳವಾದ ಅರಿವು ಮೂಡಿಸುವ ವಾಕ್ಯಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ನಾವು ಯಾವುದನ್ನು ವಾಸ್ತವವೆಂದು ತಿಳಿದುಕೊಂಡಿರುತ್ತೇವೋ ಅದರ ಹಿಂದೆ ಇನ್ನೊಂದು ಸತ್ಯ ಅಡಗಿರಬಹುದು ಎಂಬ ಅರಿವು ಮೂಡಿಸುವ ರೀತಿ ಅದ್ಭುತವಾಗಿದೆ. ಕಾದಂಬರಿಯ ಕೊನೆಯವರೆಗೂ ನಿಗೂಢತೆ ಕಾಯ್ದುಕೊಂಡಿರುವ ರೀತಿ, ಪಾತ್ರಗಳ ಮನಸ್ಸಿನ ಸೂಕ್ಷ್ಮ ಭಾವನೆಗಳನ್ನು ಬಿಚ್ಚಿಡುವ ಚಿತ್ತಾಲರ ಶೈಲಿ ಮನಸ್ಸಿಗೆ ಮುದ ನೀಡಿತು.
It's rather difficult to explain this book as though it's short it's also complex and slowly reveals it's layers. As typical of chittal, characters take the limelight rather than the story as we see the events of a murder through a series of connected characters. While I didn't enjoy it as much as I did Shikari, this is still a good short read.