ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ.
ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ, ಮುಂಬೈ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಕಥಾರಂಗಂ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ, ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ ಮುಂತಾದವು ಅವರನ್ನರಸಿವೆ. ಇವರ ಅಭಿಜಿತನ ಕತೆಗಳು (ಮಕ್ಕಳ ಸಾಹಿತ್ಯ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ.
ಸಂತಾನಹೀನ ಈಗಿನ ದಿನಗಳಲ್ಲಿ ಅತೀ ಗಂಭೀರವಾದ ಸಮಸ್ಯೆಯಾಗಿದೆ. ಇದರಿಂದ ಹೆಣ್ಣುಮಕ್ಕಳು ತಮ್ಮ ತಪ್ಪು ಇಲ್ಲದೇ ಇದ್ದರೂ ಪಡಪಾರದ ಕಷ್ಟ, ಯಾತನೆಯನ್ನನುಭವಿಸುತ್ತಾರೆ. ಒಂದು ಕಡೆ ಸುತ್ತಲಿನ ಜನ ಇವಳು ಬಂಜೆ ಎಂಬ ಪಟ್ಟ ಕೊಟ್ಟರೆ, ತನಗೆ ತಾಯಿಯಾಗುವುದು ದೇವರು ಹಣೆಯಲ್ಲಿ ಬರೆದಿಲ್ಲ ಎಂಬ ವ್ಯಥೆ ಜೀವನದುದ್ದಕ್ಕೂ ಕೊರಗಬೇಕು. ವಿಜ್ಞಾನ ಎಷ್ಟೇ ಮುಂದುವರೆದರೂ, ಈ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಬರುವ ಭಾವನೆಗಳು, ವ್ಯಥೆಗಳನ್ನು ತಿಳಿಯುವುದು ಕಷ್ಟಕರ. ಆದರೆ ಸಂತಾನಾವೃದ್ಧಿಗೆ ವಿಜ್ಞಾನ ಪರಿಹಾರ ದೊರಕಿಸಿ ಕೊಟ್ಟಿರುವುದು ಒಂದು ದೊಡ್ಡ ಕೊಡುಗೆ. ಪ್ರಸ್ತುತ ಪುಸ್ತಕದ ಕಥೆಯು ಇಂತಹದೇ ಒಬ್ಬ ಹೆಣ್ಣಿನ ಕಥೆಯಾಗಿದೆ. ಕಲಾವತಿಗೆ ತನ್ನಿಂದ ಸಂತಾನವೆಂಬ ಬೀಜ ಮೊಳಕೆಯೊಡೆವುದಿಲ್ಲವೆಂದು ತಿಳಿದಾಗ ಅವಳ ತಲೆಯಲ್ಲಿ ಬರುವ ವಿಚಾರಗಳು ಇಲ್ಲಿ ಲೇಖಕಿಯರು ಚೆನ್ನಾಗಿ ವಿವರಿಸಿದ್ದಾರೆ. ತನ್ನ ತಂಗಿಯಿಂದಲೆ ಒಂದು ಮಗುವನ್ನು ದತ್ತು ತೆಗೆಗೂಕೊಳ್ಳಬೇಕು ಅಂತ ಬಯಸಿದಾಗ, ಆಗ ತಾನೆ ಜನಿಸಿದ ಕೂಸನ್ನು ಯಾರು ತಾನೇ ತಮ್ಮ ಕೈಯಿಂದ ದೂರ ಬಿಡುತ್ತಾರೆ. ಹೆತ್ತ ಕರುಳು ತನ್ನ ಕರುಳಬಳ್ಳಿಯನ್ನು ಕೊಡಲು ನಿರಾಕರಿಸಿದಾಗ ಕಲಾವತಿಗೆ ನಿಜಅಂಶ ತಿಳಿಯಲು ಬಹಳ ಹೊತ್ತಾಗುವುದಿಲ್ಲ. ಆದರೆ ಅದರ ಬದಲು ಅವಳಿಗೆ ತಂಗಿಯ ದೊಡ್ಡ ಹುಡುಗಿಯನ್ನು ಕರೆದುಕೊಂಡು ಹೋಗಲು ಅನುಮತಿ ಸಿಗುತ್ತದೆ. ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಜ್ವಾಪಾನ ಮಾಡುತ್ತಾಳೆ. ಆದರೆ ದೊಡ್ಡವಳಾದಾಗ ಅವಳಿಂದಾದ ತಪ್ಪು ಕಲಾವತಿಗೆ ಸಿಟ್ಟಿನ ಮಹಾಪೂರವೇ ಹರೆಯುತ್ತದೆ. ಆದರೆ ತನ್ನ ಗಂಡನಿಂದ ಅದನ್ನು ಹೇಗೋ ಹೋಗಲಾಡಿಸುತ್ತಾಳೆ. ಮುಂದೆ as usual happy ending. ಕಾಕಿಹಣ್ಣು ಎಂದರೆ ಆ ನಳಿನಿ(ಹುಡುಗಿ)ಗೆ ತುಂಬಾ ಪ್ರೀತಿ. ಅಮ್ಮ ಬೈಯುತ್ತಾಳೆ ಎಂದು ಅದನ್ನು ಕದ್ದು ತಿನ್ನುತ್ತಿರುತ್ತಾಳೆ. ಆ ಕಾಕಿಗಿಡದ ಮೇಲಿನ ಪ್ರೀತಿ ಹಾಗೆಯೇ ಇರಬೇಕೆಂದು ತನ್ನ ಮನೆಯ ಮುಂದೆ ನೆಡಲು ನಿರ್ಧರಿಸುತ್ತಾಳೆ. ಅವಳಿಗೆ ಕಾಕಿಗಿಡದ ಮೇಲಿನ ಪ್ರೀತಿ ಮತ್ತು ಆ ದಿನಗಳ ಮೇಲೆ ಈ ಪುಸ್ತಕದ ಶೀರ್ಷಿಕೆ ಇಡಲಾಗಿದೆ ಎಂಬುದು ನನ್ನ ಊಹೆ.