ಅನುಕಂಪ, ಔದಾರ್ಯದ ಭಿಕ್ಷೆಯಲ್ಲೇ ತನ್ನ ಜೀವನ ಸಾಗಿಸಿಕೊಂಡು ಬಂದ ಅಪೂರ್ವಳಿಗೆ ಸೂರ್ಯನ ಅಂತರಂಗದ ಒಳಹೊಕ್ಕು ಅವನ ನೋವನ್ನು ಗುರುತಿಸುವುದು ಸುಲಭ ಸಾಧ್ಯವಾಗಿತ್ತು. ಕತ್ತಲು ತುಂಬಿದ್ದ ಸೂರ್ಯನ ಬದುಕಲ್ಲಿ ಅಪೂರ್ವಳ ಸಾಂಗತ್ಯ ಬೆಳಕು ಮೂಡಿಸಿತು. ಇವರಿಬ್ಬರ ನಡುವೆ ಬಂದ ಆದರ್ಶ ಅಪೂರ್ವಳನ್ನು ಇಷ್ಟಪಡ ತೊಡಗಿದ. ಇಡೀ ಸಮಾಜವೇಕೆ, ಮನೆಯವರ ತಿರಸ್ಕಾರಕ್ಕೊಳಗಾಗಿ ಮ್ರಗದಂತಾಗಿದ್ದ ಸೂರ್ಯನನ್ನು ಎಲ್ಲರೂ ಸ್ವೀಕರಿಸುವಂತೆ ಮಾಡಿದ ಅಪೂರ್ವಳ ಮುಂದೆ ಕಹಿಸತ್ಯವೊಂದು ಅನಾವರಣಗೊಂಡಿತ್ತು. ಸುಧಾ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾದಂಬರಿ ಇದು.
ಅನೇಕ ತಿರುವುಗಳನ್ನು ಹೊಂದಿರುವ ಕಾದಂಬರಿ. ಈ ತರಹದ ಕತೆಯನ್ನು ಚೆನ್ನಾಗಿ ಹೆಣೆದಿದ್ದಾರೆ ಲೇಖಕರು. ತಂದೆತಾಯಿಯನ್ನು ಕಳೆದುಕೊಂಡ ಕಥಾನಾಯಕಿ ಅಪೂರ್ವ ಉನ್ನತ ಶಿಕ್ಷಣಕ್ಕಾಗಿ ಪ್ರಯಾಸಪಡುತ್ತಿರುವಾಗ ಅವಳ ಸಂಬಂಧಿಕರು ವಿಜಯಮ್ಮ ಮತ್ತು ಪ್ರಭಾಕರರಾಯರು ಅವಳಿಗೆ ನೆರವಾಗಲು ಮುಂದಾಗುತ್ತಾರೆ. ಅವಳು ಅಲ್ಲಿ ಅವರ ಜೊತೆಗೆ ಹಾಯಾಗಿರುವಾಗ, ವಿಜಯಮ್ಮ ಮತ್ತು ರಾಯರು ಯಾವಾಗಲೂ ಏನೋ ಒಂದು ಸಂಕಟವನ್ನು ತಮ್ಮ ಮನದಲ್ಲಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆಂದು ತಿಳಿದುಬರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಅವರಿಂದ ಆ ವಿಷಯವನ್ನು ಕಕ್ಕಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಒಂದು ದಿನ ಮೂವರೂ ದೇವಸ್ಥಾನಕ್ಕೆ ಹೋದಾಗ ವಿಜಯಮ್ಮ ಮತ್ತು ರಾಯರು ಒಬ್ಬ ಭಿಕ್ಷುಕನನ್ನು ಕಂಡಾಗ ಅವರ ಮುಖಚರ್ಯೆ ಬದಲಾಗುತ್ತದೆ. ವಿಜಯಮ್ಮ ಅವನೊಂದಿಗೆ ಮಾತಾಡೋಣವೆಂದರೂ ರಾಯರು ಅವಕಾಶ ಕೊಡದೆ ಅವರನ್ನು ಕರೆದುಕೊಂಡು ಬಂದುಬಿಡುತ್ತಾರೆ. ಆ ವ್ಯಕ್ತಿಯೇ ಮುಂದಿನ ದಿನ ಬಂದಾಗ ವಿಜಯಮ್ಮ ಅವನನ್ನು ಮನೆಗೆ ಕರೆದುಕೊಂಡು ಮಾತಾಡಿದಾಗ ಅಪೂರ್ವನಿಗೆ ಗೊತ್ತಾಗುತ್ತದೆ, ಅವನು ಸೂರ್ಯ ವಿಜಯಮ್ಮ ಮತ್ತು ರಾಯರ ಮಗನೇನೆಂದು. ಅವನು ಚಿಕ್ಕವನಿದ್ದಾಗಲೇ ಮನೆ ಬಿಟ್ಟು ಹೋಗಿದ್ದೆ ಅವರಿಬ್ಬರ ದುಃಖದ ಮೂಲ. ರಾಯರ ಕಣ್ಣಲ್ಲಿ ಸೂರ್ಯನೊಬ್ಬ ಬೇಜಾಬ್ದಾರಿ ಯುವಕ. ರಾಯರು ಮಿಲಿಟರಿಯಲ್ಲಿದ್ದು ಬಂದವರು, ಸೂರ್ಯ ಅವರಿಗೆ ತದ್ವಿರುದ್ಧ. ಇನ್ನು ಸೂರ್ಯ ಮನೆಗೆ ಬಂದಾಗ ರಾಯರ ಪ್ರತಿಕ್ರಿಯೆ ಹೇಗಿರುತ್ತದೆ, ಸೂರ್ಯ ಮನೆ ಬಿಟ್ಟು ಹೋಗಲು ಕಾರಣ ನೀವು ಪುಸ್ತಕವನ್ನೇ ಓದಿ ತಿಳಿಯಬೇಕು. ಈ ನಡುವೆ ವಿಜಯಮ್ಮ ಮತ್ತು ರಾಯರ ನಡುವೆ ವಾಕ್ಸಮರದಿಂದ ರಾಯರಿಗೆ mild heart attack ಆಗುತ್ತದೆ. ಆಸ್ಪತ್ರೆಗೆ ದಾಖಲಾದಾಗ ಅಪೂರ್ವನ ಸಹಾಯಕ್ಕೆ ನಿಂತುಕೊಂಡವನು ಆದರ್ಶ, ರಾಯರ ತಂಗಿಯ ಮಗ. ಆದರ್ಶನು ಅಪೂರ್ವಳಿಗೆ ಸನೀಹವಾಗಿ ಅವಳ ಮೇಲೆ ಪ್ರೀತಿಯ ಧಾರೆಯನ್ನೆಳೆಯುತ್ತಾನೆ. ಇನ್ನು ಇತ್ತ ಅಪೂರ್ವಳು ಸೂರ್ಯನನ್ನು ಒಬ್ಬ ಸಜ್ಜನನ್ನಾಗಿ ಮಾರ್ಪಡಿಸಲು ಹವಣಿಸುತ್ತಿರುತ್ತಾಳೆ, ಅದರಲ್ಲಿ ಅವಳು ಜಯವಾಗುತ್ತಾಳೆ ಆದರೆ ಒಂದು ದಿನ ಸೂರ್ಯನಿಗೆ ಮನೆಯಲ್ಲಿ ಸಿಕ್ಕ ಒಂದು ಭಾವಚಿತ್ರ ಅವನಲ್ಲಿ ಸಂಚಲನ ಮೂಡಿಸುತ್ತದೆ, ಅವನನ್ನು ಮತ್ತೆ ಮೊದಲಿನಂತಯೇ ಮಾಡಿಸುತ್ತದೆ. ಆದರೆ ಅದರ ಬಗ್ಗೆ ನಿಜವನ್ನು ತಿಳಿದಾಗ ಮತ್ತೆ ಯಥಾವತ್ತಾಗುತ್ತದೆ. ಸೂರ್ಯ ಮತ್ತು ಅಪೂರ್ವ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ನಿಷ್ಕರ್ಷಿಸಿದಾಗ ಅಪೂರ್ವಳ ಚಿಕ್ಕಪ್ಪ ಶಂಕರನಿಂದ ತಿಳಿದ ರಹಸ್ಯ ಅಪೂರ್ವಳನ್ನು ಪಾತಾಳಕ್ಕೆ ಇಳಿಯುವಂತೆ ಮಾಡುತ್ತದೆ. ಆ ಘಟನೆ ಅವಳಿಗೆ ಸೂರ್ಯನನ್ನು ತೊರೆಯುವಂತೆ ಮಾಡುತ್ತದೆ, ಹಾಗೆಯೇ ರಾಯರು ಮತ್ತು ವಿಜಯಮ್ಮ ಯಾಕೆ ತನ್ನನ್ನು ಇಲ್ಲಿ ಸ್ವಂತಖರ್ಚಿನಲ್ಲಿ ಓದಿಸಲು ಇಟ್ಟುಕೊಂಡಿದ್ದಾರೆಂಬುದು ತಿಳಿಯುತ್ತದೆ. ಅವರನ್ನೆಲ್ಲ ತೊರೆದು ಕೊನೆಗೆ ಆದರ್ಶನಿಂದ ಸ್ವೀಕೃತವಾಗುತ್ತಾಳೆ. ಸೂರ್ಯನನ್ನು ತೊರೆಯುವ ಕಾರಣ ಮತ್ತು ಸೂರ್ಯ ತನ್ನ ಮನೆಯನ್ನು ತೊರೆಯಲು ಕಾರಣ ನೀವು ಪುಸ್ತಕವನ್ನು ಓದಿಯೇ ತಿಳಿಯಬೇಕು. ಚೆನ್ನಾಗಿ ಬರೆದಿದ್ದಾರೆ ವಿವೇಕಾನಂದ ಕಾಮತ್ ಅವರು.