ಈಗಾಗಲೇ ಓದಿದ ,ತಿಳಿದ ಕಥೆಗಳು. ಆಸಕ್ತರು ಓದಬಹುದಾದ ಪ್ರಕಾರದ್ದು. ಪೋಲಿಸ್ ಕಂಡ ಕಥೆಗಳು,ದಾದಾಗಿರಿಯ ದಿನಗಳು,ಪೋಲಿಸ್ ಕಂಡ ಕಥೆಗಳು ಪಾಪಿಗಳ ಲೋಕದಲ್ಲಿ ಇವುಗಳಲ್ಲಿ ಬಂದ ಘಟನೆಗಳ ಇನ್ನೊಂದು ಸಲದ ನಿರೂಪಣೆ.
ಒಬ್ಬ ಪೊಲೀಸ್ ಅಧಿಕಾರಿ ಇಷ್ಟು ಸೊಗಸಾಗಿ ಬರೆಯುತ್ತಾರೆಂದರೆ ನಂಬಲು ಕೊಂಚ ಕಷ್ಟವೇ! ಅಶೋಕ್ ಕುಮಾರ್ ರು ತಮ್ಮ ಅಧಿಕಾರಾವಧಿಯಲ್ಲಿ ಎದುರಿಸಿದ, ಕೇಸುಗಳ ರೋಚಕ ನಿರೂಪಣೆ, ನವಿರಾದ ಹಾಸ್ಯ, ಅವರ ಭಾವುಕತೆಯ ಮತ್ತೊಂದು ಮುಖ (ನಮ್ಮಂತಹ ಜನಸಾಮಾನ್ಯರಿಗೆ ಪೊಲೀಸರ ಈ ಮುಖ ಕೊಂಚ ಆಶ್ಚರ್ಯವುಂಟುಮಾಡುವುದು ಸಹಜವೆ) ಎಲ್ಲವೂ ಬಹಳ ಚೆನ್ನಾಗಿವೆ. ನನಗೆ, ಬಹಳಷ್ಟು ಕೇಸುಗಳ ಬಗ್ಗೆ ಆಯಾ ಕಾಲಘಟ್ಟದಲ್ಲಿ ಪತ್ರಿಕೆಗಳಲ್ಲಿ ಈ ಬಗ್ಗೆ ಓದಿದ ನೆನಪುಗಳು ಅಚ್ಚೊತ್ತಿವೆ. ಆ ಪಾತಕಿಗಳನ್ನು ಹಿಡಿದದ್ದು, ಬಡಿದದ್ದು, ಮಾವನ ಮನೆಗೆ ತಳ್ಳಿದ್ದು (ಅವರದೇ ಪದಗಳು 😂) ಎಲ್ಲಾ ಓದಲು ಭಾರಿ ಮಜ. ಇದರ ಮುಂದಿನ ಭಾಗ, ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ಬಗ್ಗೆ ಓದಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.